ವ್ಯಾಯಾಮದ ಜೊತೆಗೆ ಮಿತವಾದ ಆಹಾರ ಸೇವನೆ ಆರೋಗ್ಯಕ್ಕೆ ಪೂರಕ

Picture of RB NEWS

RB NEWS

Bureau Report

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ “ಉಚಿತ ಹೃದ್ರೋಗ ತಪಾಸಣೆ ಶಿಬಿರ”

ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ ಸಂದೀಪ್ ಕುಡ್ವ ಕಾರ್ಯಕ್ರಮವನ್ನು ಉದ್ಘಾಟಿಸಿ “ವ್ಯಾಯಾಮದ ಜೊತೆಗೆ ಮಿತವಾದ/ಹಿತವಾದ ಆಹಾರವನ್ನು ಸೇವಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ ಭರತೇಶ್ ಆದಿರಾಜ್ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು.

ವೇದಿಕೆಯಲ್ಲಿ ಪರ್ವಾಜೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆಸ್ಮಾ, ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯ ನಿರ್ವಾಹಕ ಅಸ್ಲಾನ್, ಡಾ.ರವಿ ಮತ್ತು ಡಾ.ರಿಷಬ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಲೆ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಶಾಂತ್ ಜೈನ್ ವಂದಿಸಿದರು. ಪ್ರಶಾಂತ ಬಿಳಿರಾಯ, ಶ್ರೀವರ್ಮ ಅಜ್ರಿ, ಸುರೇಂದ್ರ ನಾಯಕ್, ಗಣೇಶ ಬರ್ಲಾಯ, ಮಾಧವಿ ಕೆ ಮತ್ತು ಪ್ರಕಾಶ್ ಪೈ ಮೊದಲಾದ ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top