ವ್ಯವಹಾರ ಕೇಂದ್ರದ ಉದ್ಘಾಟನೆಗೂ ಮುನ್ನ ಕೈಚಳಕ ತೋರಿಸಿದ ಕಳ್ಳರು

Picture of RB NEWS

RB NEWS

Bureau Report

ವ್ಯವಹಾರ ಕೇಂದ್ರದ ಉದ್ಘಾಟನೆಗೂ ಮುನ್ನ ಕೈಚಳಕ ತೋರಿಸಿದ ಕಳ್ಳರು

ಕಾರ್ಕಳ : ಹೊಸ್ಮಾರು ಈದು ಸ್ಮಶಾನ ಬಳಿಯಲ್ಲಿ ತಳ್ಳುಗಾಡಿಯ ಗೂಡು ಅಂಗಡಿಗಳ ಬೀಗ ತುಂಡರಿಸಿ ನಗದು, ಗ್ಯಾಸ್ ಸಿಲಿಂಡರ್, ಇತರ ಪರಿಕರಗಳು ಹಾಗೂ ನಗದು ಕಳವುಗೈದಿರುವ ಮಾಹಿತಿ ಬೆಳಕಿಗೆ ಬಂದಿದೆ.

ದಿನೇಶ್ ಎಂಬವರ ಅಮ್ಮ ಕ್ಯಾಂಟೀನ್ ನ ಬೀಗ ಮುರಿದು ಗ್ಯಾಸ್ ಸಿಲಿಂಡರ್ ಹಾಗೂ ರೂ. 1000 ನಗದು ಕಳವು ಗೈಯಲಾಗಿದೆ.

ಮಹಾಬಲ ಪೂಜಾರಿ ಎಂಬವರ ಗೂಡುಅಂಗಡಿಯ ಬೀಗ ಮುರಿದು ಸುವಾಸನೆ ದ್ರವ್ಯದ ಬಾಟಲ್ ಹಾಗೂ ರೂ. 500 ನಗದು

ಕಳವುಗೈಯಲಾಗಿದೆ.

ವ್ಯವಹಾರ ಕೇಂದ್ರದ ಉದ್ಘಾಟನೆಗೂ ಮುನ್ನ…
ವಸಂತ ಕುಲಾಲ್ ಎಂಬವರು ಮಣ್ಣಿನಿಂದ ಸಿದ್ದ ಪಡಿಸಿದ ಮಡಿಕೆ ಇತರ ಪರಿಕರಗಳ ಮಾರಾಟ ಮಾಡುವ ಸಲುವಾಗಿ ತಳ್ಳುಗಾಡಿಯ ಗೂಡು ಅಂಗಡಿ ವ್ಯಾಪಾರ ಕೇಂದ್ರ ಆರಂಭಿಸಲು ಸಕಲ ಸಿದ್ಧತೆ ನಡೆಸಿದರು.
ಅದರ ಉದ್ಘಾಟನೆಯ ಕಾರ್ಯವನ್ನು ಶುಕ್ರವಾರ ನಿಗದಿ ಪಡಿಸಿದರು. ಉದ್ಘಾಟನೆಗೂ ಮುನ್ನ ಕಳ್ಳರು ಕೈ ಚಳಕ ಪ್ರದರ್ಶಿಸಿ, ಡ್ರಾಯರ್ ಬಾಕ್ಸ್ ಕಿತ್ತು ಅದರಲ್ಲಿ ಇಟ್ಟಿದ ನಗದು ಎಗರಿಸಿಹೋಗಿದ್ದಾರೆ.

ಈ ಎಲ್ಲಾ ಕೃತ್ಯಗಳು ಒಂದೇ ತಂಡದಿಂದ ನಡೆದಿರುವುದು ಖಚಿತಗೊಂಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top