ವೃಶ್ಚಿಕ ,ಸಿಂಹ ,ಮೀನ ರಾಶಿಯವರಿಗೆ ಬರಲಿದೆ ಅದೃಷ್ಟದ ದಿನಗಳು
ಶನಿಯು ದಿನಾಂಕ 29. 06.2024 ನೇ ಶನಿವಾರ ಮಧ್ಯ ರಾತ್ರಿ ಘಂಟೆ 12.36 ಕ್ಕೆ ವಕ್ರಗತಿಯನ್ನು ಹೊಂದಿ ಕಾರ್ತಿಕ ಶುಕ್ಲ 15 ಯುಕ್ತ ದಿನಾಂಕ 15.11.2024 ನೇ ಶುಕ್ರವಾರ ರಾತ್ರಿ ಘಂಟೆ 07.51 ಕ್ಕೆ ಪುನ : ಸಮಗತಿಯನ್ನು ಹೊಂದುವನು .
ವೃಶ್ಚಿಕ ರಾಶಿಯವರಿಗೆ 3 ನೇ ಮನೆಯ ಶನಿ , ಸಿಂಹ ರಾಶಿಯವರಿಗೆ 6 ನೇ ಮನೆಯ ಶನಿ ,ಮೀನ ರಾಶಿಯವರಿಗೆ 11 ನೇ ಮನೆಯ ಶನಿಯಾಗಿ ಅದೃಷ್ಟದ ದಿನಗಳಾಗಿರುತ್ತದೆ 137 ದಿನಗಳು ಈ ದಿನಗಳಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದೆ . ಇದ್ದಕ್ಕಿದ್ದ ಹಾಗೆ ಹಣ ಬರುವ ಸೂಚನೆ ಇರುತ್ತದೆ .ಪತಿ ಪತ್ನಿಯರ ನಡುವೆ ಒಳ್ಳೆಯ ಬಾಂಧವ್ಯತೆ ಮೂಡಿ ನಿಮ್ಮ ಆರೋಗ್ಯ ಸುಧಾರಣೆ ಆಗಲಿದೆ . ಸಹೋದರ ವರ್ಗದವರಿಂದ ಸಹಕಾರ ಸಿಗಲಿದೆ .ನಿಮ್ಮ ಉದ್ಯೋಗದಲ್ಲಿ ಭಡ್ತಿ ಸಿಗಲಿದೆ ಉದ್ಯೋಗ ಸಿಗದವರಿಗೆ ಹೊಸ ಅವಕಾಶಗಳು ಗೋಚರಕ್ಕೆ ಬರಲಿವೆ .ಅಂತೂ ಸಂತೋಷದ 137 ದಿನಗಳು ಗ್ರಹಣ ಬಿಟ್ಟ ಚಂದ್ರನಂತೆ ಜೀವನದಲ್ಲಿ ಬರಲಿದೆ




































