ವೀರಪ್ಪ ಮೈೂಲಿ ಬಳುವಳಿ

Picture of RB NEWS

RB NEWS

Bureau Report

ಸತತ ಆರು ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೈೂಲಿಯವರು ಕಾರ್ಕಳಕ್ಕೆ ಅನೇಕ ಮೂಲಭೂತ ಸವಲತ್ತುಗಳನ್ನು,ಶಾಲೆ,ಆಸ್ಪತ್ರೆ,ರಸ್ತೆ,ಸೇತುವೆಗಳನ್ನು ಸರಕಾರದ ವತಿಯಿಂದ ಒದಗಿಸಿಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಸಂಪರ್ಕ ರಸ್ತೆಗಳನ್ನು ನಿರ್ಮಿಸಿಕೊಟ್ಟ ಹೆಗ್ಗಳಿಕೆಗೆ ಮೈೂಲಿ ಪಾತ್ರರಾಗುತ್ತಾರೆ. ಪ್ರತಿ ಐದು ಕಿಲೋಮೀಟರ್ ದೂರದ ಅಂತರಕ್ಕೊಂದು ಶಾಲೆ,ಹೈಸ್ಕೂಲ್ ನಿರ್ಮಿಸಿ ಒಬ್ಬ ಶಿಕ್ಷಣ ತಜ್ಞನಂತೆ ಕೆಲಸ ಮಾಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಎಲ್ಲ ಕ್ಷೇತ್ರಗಳ ಮುಖ್ಯವಾಹಿನಿಯಲ್ಲಿ ತಂದು ನಿಲ್ಲಿಸುವಲ್ಲಿ ಯೋಚಿಸಿದ ಒಬ್ಬ ದಾರ್ಶನಿಕ ಕೂಡಾ ಆಗಿದ್ದಾರೆ.

ವೀರಪ್ಪ ಮೈೂಲಿಯವರಲ್ಲಿರುವ ಆಡಳಿತಾತ್ಮಕ ಸಂಬಂಧಿ ವಿಚಾರಗಳು, ಖರ್ಚುವೆಚ್ಚ ನಿಯಂತ್ರಣಗಳ ಯೋಜನೆಗಳನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮೆಚ್ಚಿಕೊಂಡಿರುವುದು ಮೈೂಲಿಯವರಿಗೆ ಅದಕ್ಕಿಂತ ಬೇರೊಬ್ಬನ ಮೆಚ್ಚುಗೆ,ಶಿಫಾರಸ್ಸು ಅಗತ್ಯವಿರುವುದಿಲ್ಲ.

ಆಗಿನ ಸರಕಾರಗಳಲ್ಲಿದ್ದ ಅಭಿವೃದ್ದಿ ನಿಧಿಯಲ್ಲಿ ಕಾರ್ಕಳಕ್ಕೆ ಸಾಕಷ್ಟು ಅನುದಾನ ತರಿಸಿ ಕಾಮಗಾರಿಗಳನ್ನು ಪೂರೈಸಿರುವುದು ಹೆಗ್ಗಳಿಕೆಯ ಸಂಗತಿಯೇ ಹೌದು. ರಾಜಕೀಯದಲ್ಲಿ ಬೆಳೆಯಬೇಕಾದವರನ್ನು ಪ್ರಮುಖರನ್ನಾಗಿಸಿ ಗುರುತಿಸಿಕೊಂಡೇ ಮೈೂಲಿಯವರು ರಾಜಕೀಯ ಮಾಡಿದ್ದು ವಿಶೇಷ. ಎಲ್ಲ ಜಾತಿ ಮತ್ತು ವರ್ಗದವರನ್ನೂ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರನ್ನಾಗಿಸಿದ್ದಾರೆ, ತಾನು ಬೆಂಗಳೂರಿನಿಂದ ಕಾರ್ಕಳಕ್ಕೆ ಬಂದಷ್ಟು ಬಾರಿ ಆ ಎಲ್ಲ ಮುಖಂಡರಲ್ಲೂ ಪಕ್ಷ, ಊರಿನ ಅಭಿವೃದ್ಧಿ, ಮಂಜೂರಾತಿ ಮುಂತಾದ ವಿಷಯಗಳಿಗೆ ಸ್ಪಂದಿಸಿುವುದು ಮೈೂಲಿಯವರ ಕಾರ್ಯಕ್ರಮದಲ್ಲಿ ಕಡ್ಡಾಯವಿರುತ್ತಿತ್ತು. ಐ. ಬಿ. ಯಿಂದ ಹೊರಡುವಾಗ ಹಿರಿಯರನ್ನು ಕಂಡು, ‘ಏನಾದರೂ ಮಾತನ್ನಾಡಿವುದಕ್ಕೆ ಇತ್ತ?’ಎನ್ನುವ ಅವರ ಸ್ಪಂದನ ತುಂಬಾ ಶ್ಲಾಘನೀಯವಾಗಿತ್ತು.

ಸುಮಾರು ಮೂವತ್ತಮೂರು ವರ್ಷಗಳ ಹಿಂದೆ ಕಾರ್ಕಳದಲ್ಲಿ ಮಹಾತ್ಮಾ ಗಾಂಧಿ ವಸತಿ ಪ್ರೌಢ ಶಾಲೆ ನಿರ್ಮಾಣವಾಗುತ್ತದೆ. ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ಸ್ಥಾಪನೆಗೊಂಡ ಆ ವಸತಿ ಶಾಲೆ ಕಡು ಬಡವರ ಮತ್ಕಳಿಗಾಗಿ ಉಚಿತ ವಸತಿ ಶಿಕ್ಷಣ ಶಾಲೆಯಾಗಿ ಪರಿಚಯವಾಗುತ್ತದೆ. ಅವರಿವರ ನೆರವು,ಸಂಸ್ಥೆಗಳ ಕೊಡುಗೆಯಿಂದಲೇ ಶಾಲೆಯ ಖರ್ಚು ವೆಚ್ಚಗಳನ್ನು ಭರಿಸುತ್ತ ನಡೆಸಿಕೊಂಡು ಬರಲಾಗಿದೆ,ಈಗಲೂ.

ಸಾವಿರಾರು ಮಂದಿ ಬಡ ಮಕ್ಕಳು ಆ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರದಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿ ಯೋಗ್ಯ ಸ್ಥಾನಮಾನ ಪಡೆದುಕೊಂಡಿದ್ದಾರೆ.
ಶಿಕ್ಷಣ,ಉನ್ನತ ಶಿಕ್ಷಣ ಪಡೆಯುವಲ್ಲಿ ಬಡವರು,ಹಿಂದುಳಿದ ವರ್ಗದವರು ವಂಚಿತರಾಗಬಾರದು ಎನ್ನುವ ಕಾಳಜಿಯನ್ನು ಹೊತ್ತುಕೊಂಡು ಮೈೂಲಿಯವರು ಕಾರ್ಕಳದಲ್ಲಿ ಮಹಾತ್ಮಾ ಗಾಂಧಿ ವಸತಿ ಪ್ರೌಢ ಶಾಲೆಯನ್ನು ನಿರ್ಮಾಣ ಮಾಡಿರುವುದು ಮತ್ತು ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಸಿ. ಇ .ಟಿ ಯಂಥ ಅಮೋಘ ಪದ್ಧತಿಯನ್ನು ಅನುಷ್ಠಾನಗೊಳಿಸಿದರು. ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಿದವರು.ಆ ನಿಟ್ಚಿನಲ್ಲಿ ಎಂ. ವೀರಪ್ಪ ಮೈೂಲಿಯವರು ಭಾರತದ ಇನ್ನೊಬ್ಬ ಅಂಬೇಡ್ಕರ್ ಆಗಿದ್ದಾರೆ ಎನ್ನಬಹುದಾದರೆ ಅದು ಅತಿಶಯೋಕ್ತಿಯಲ್ಲ. ಖಂಡಿತ ಸರಿಯಾದ ಪ್ರಶಂಸೆಯಾಗುವುದು.

ಹಿಂದುಳಿದ ವರ್ಗದ ನಾಯಕನು ತನ್ನಂತೆಯೇ ಹಿಂದುಳಿದ ವರ್ಗದ ಮತ್ತೊಬ್ಬ ಜನನಾಯಕ ,ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕಾರ್ಕಳಕ್ಕೆ ಆಹ್ವಾನಿಸಿ ಮಹಾತ್ಮಾಗಾಂಧಿ ವಸತಿ ಪ್ರೌಢ ಶಾಲೆ ಮತ್ತು ಕಿಸಾನ್ ಸಭಾ ಕಟ್ಟಡದ ಪರಿಚಯ ಮಾಡಿಸುತ್ತಿರುವುದು ಅದೊಂದು ಅಪೂರ್ವ ಸಂಗಮ, ಯೋಗಾಯೋಗ ಕೂಡ.
ಸ್ವಾಗತ ಮತ್ತು ಅಭಿನಂದನೆಗಳು.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top