ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ
ಕೊಕ್ಕರ್ಣೆ : ಹೊರ್ಲಾಳಿ ಪಡಿತರ ವಿತರಣಾ ಕೇಂದ್ರಕ್ಕೆ ಜಾಗ ನೀಡದೆ ಅತಿಕ್ರಮಣ ಮಾಡಿ ತನ್ನ ಜಾಗ ಎಂದು ಹೇಳಿ ಕೊಳ್ಳುತ್ತಿರುವ ಭೂ ಮಾಲೀಕರ ವಿರುದ್ಧ ಹಾಗೂ ಪಡಿತರ ವಿತರಣಾ ಕೇಂದ್ರ,ಪಶು ವೈದ್ಯಕೀಯ ಆಸ್ಪತ್ರೆ, ಸಮುದಾಯ ಭವನ,ಹಾಗೂ ಸ್ಮಶಾನಕ್ಕೆ ಸರ್ಕಾರಿ ಜಾಗ ಕಾಯ್ದಿರಿಸುವಂತೆ ಬ್ರಹ್ಮಾವರ ತಹಶಿಲ್ದಾರರ ಜೊತೆ ಭೀಮಘರ್ಜನೆ ರಾಜ್ಯಾಧ್ಯಕ್ಷ ಡಾ.ಉದಯ್ ಕುಮಾರ್ ತಲ್ಲೂರ್ ಆಗ್ರಹಿಸಿದರು.
ತಹಶೀಲ್ದಾರರು ಕೂಡ 2 ಎಕರೆ ಜಾಗ ಕಾಯ್ದಿರಿಸುವ ಬಗ್ಗೆ ಭರವಸೆ ನೀಡಿದರು,ಭೀಮಘರ್ಜನೆ ಜಿಲ್ಲಾ ಸಂಘಟನಾ ಸಂಚಾಲಕರಾದ ಸುಧಾಕರ್ ಸೂರ್ಗೋಳಿಯವರ ಹಾಗೂ ಅಲ್ಲಿನ ಗ್ರಾಮಸ್ಥರ ಬಹುದಿನಗಳ ಹೋರಾಟಕ್ಕೆ ಇಂದು ಬಲ ತಂದಿದೆ ಭೀಮಘರ್ಜನೆ ಸಂಘಟನೆ, ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ಗ್ರಾಮಪಂಚಾಯತಿನ ಅಧ್ಯಕ್ಷ ಜಯಂತ್ ಪೂಜಾರಿ ,ದಿನಕರ ಹೇರೂರು ,ಡಾ:ಸುನೀತಾ ಡಿ ಶೆಟ್ಟಿ , ನರಸಿಂಹ ಪೂಜಾರಿ ಹೊರ್ಲಾಳಿ,ಮಾದವ ನಾಯ್ಕ ಹೊರ್ಲಾಳಿ ಜಿಲ್ಲಾ ಸಂಘಟನಾ ಸಂಚಾಲಕರಾದ ರಾಘು ಶೀರೂರು,ಶಶಿ ಬಳ್ಕೂರು,ಕುಂದಾಪುರ ತಾಲೂಕು ಸಂಚಾಲಕ ಮಂಜುನಾಥ್ ಗುಡ್ಡೆಯಂಗಡಿ,ಬ್ರಹ್ಮಾವರ ತಾಲೂಕು ಸಂ.ಸಂಚಾಲಕರಾದ ಗೋಪಾಲ ಮಿಯ್ಯಾರು,ಶ್ರೀನಿವಾಸ ತೊನ್ನಾಸೆ,ಸಂದೀಪ ಸೂರ್ಗೋಳಿ ಮತ್ತು ಹೊರ್ಲಾಳಿ ಹಾಗೂ ಬಿಯಾಳಿ ಗ್ರಾಮಸ್ಥರು ಮತ್ತಿತರು ಉಪಸ್ಥಿತರಿದ್ದರು


























