ವಿದ್ಯುತ್ ಪ್ರವಹಿಸಿ ಯುವಕ ಸಾವು : ಶಾಸಕ ಕೋಟ್ಯಾನ್ ಭೇಟಿ, ಸಾಂತ್ವನ
ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಎಂಬಲ್ಲಿ ತೆಂಗಿನಮರದಿಂದ ಸೀಯಾಳ ಕೊಯ್ಯುವಾಗ ವಿದ್ಯುತ್ ಪ್ರವಹಿಸಿ ಮೃತರಾದ ಆಟೋ ಚಾಲಕ ಸಂತೋಷ್ ಕುಟುಂಬಸ್ಥರನ್ನು ಭೇಟಿ ಮಾಡಿ ಶಾಸಕ ಉಮಾನಾಥ ಕೋಟ್ಯಾನ್ ಸಾಂತ್ವನ ಹೇಳಿದರು.
ಮೃತ ಸಂತೋಷವರ ಮನೆಯ ಬಳಿ ಹೈಟೆನ್ಸನ್ ವಿದ್ಯುತ್ ತಂತಿ ಹಾದು ಹೋಗುತ್ತಿದ್ದು ರಕ್ಷಣಾತ್ಮಕ ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಮನೆಯವರು ಮೆಸ್ಕಾಂ ಇಲಾಖೆಗೆ ಆಗ್ರಹಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕೂಡಲೇ ಶಾಸಕರು ಮೆಸ್ಕಾಂ ಇಲಾಖೆಯ ಅಧಿಕಾರಿಗೆ ದೂರವಾಣಿ
ಮೂಲಕ ಸಂಪರ್ಕಿಸಿ ರಕ್ಷಣಾತ್ಮಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಬಿಜೆಪಿ ನಾಯಕರಾದ ರಂಗನಾಥ ಶೆಟ್ಟಿ. ದೇವಪ್ರಸಾದ್ ಕೆಂಪುಗುಡ್ಡೆ ಕೇಶವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಮೃತ ಸಂತೋಷ್ ತಮ್ಮ ಮನೆಯ ಬಳಿಯ ತೆಂಗಿನ ಮರದಿಂದ ಬಿದಿರು ಕೋಲು ಮೂಲಕ ಸೀಯಾಳ ತೆಗೆಯುತ್ತಿದ್ದಾಗ ಮರದ ಮೇಲ್ಬಾಗದ ಹೈ ಟೆನ್ಸನ್ ತಂತಿಗೆ ಬಿದಿರು ಕೋಲು ತಗಲಿ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿದ್ದರು.



































