






ವಿದ್ಯುತ್ ಕಂಬದ ಸುತ್ತಲು ಅಗೆದು ತೆಗೆದರು ಮಣ್ಣು !
ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ – ಇರ್ವತ್ತೂರು ರಸ್ತೆಯಲ್ಲಿ ಗುಡ್ಡ ಕಡಿದು ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದೆ.

ಮುರತಂಗಡಿಯಿಂದ ಇರುವತ್ತೂರಿಗೆ ಹೋಗುವ ರಸ್ತೆಯಲ್ಲಿ ಸಮದ್ ಖಾನ್ ರವರ ಮನೆಯ ಎದುರು ಭಾಸ್ಕರ ಸಮಗಾರರ ಮನೆಯ ಪಕ್ಕದಲ್ಲಿಯೇ ರಸ್ತೆ ಬದಿಯ ಗುಡ್ಡವನ್ನು ಕಳೆದ ಒಂದೆರಡು ವಾರಗಳಿಂದ ನಿರಂತರವಾಗಿ ಜೆಸಿಬಿಯಿಂದ ಅಗೆದು ಮಣ್ಣನ್ನು ತೆಗೆದುಕೊಂಡು ಹೋಗಿರುತ್ತಾರೆ.
ಪಕ್ಕದಲ್ಲಿಯೇ ಇರುವ ವಿದ್ಯುತ್ ತಂತಿ ಕಂಬದ ಬುಡ ಅಭದ್ರ ಸ್ಥಿತಿಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಅಪಾಯವಿದೆ.
ಕೂಡಲೇ ಮೆಸ್ಕಾಂ ಇಲಾಖೆ ಎಚ್ಚೆತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬವನ್ನು ಭದ್ರಪಡಿಸಿ, ಅಥವಾ ರಸ್ತೆಯ ಬದಿಯಲ್ಲಿ ಮರು ಸ್ಥಾಪಿಸಬೇಕು.
ರಸ್ತೆ ಬದಿಯ ಗುಡ್ಡವನ್ನು ಅಗೆಯುವಾಗ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸಾಣೂರು ಗ್ರಾಮ ಪಂಚಾಯತ್, ಸಂಬಂಧಪಟ್ಟ ರಸ್ತೆ ಇಲಾಖೆ ಹಾಗೂ ಮೆಸ್ಕಾಂನವರು ಎಚ್ಚರಿಕೆಯನ್ನು ನೀಡಬೇಕು.
ರಸ್ತೆ ಬದಿಯಲ್ಲಿ ಈ ರೀತಿ ಮನಬಂದಂತೆ ಗುಡ್ಡವನ್ನು ಕಡಿದು ಮಣ್ಣನ್ನು ಸಾಗಿಸುತ್ತಿದ್ದರೆ, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ, ಪ್ರಯಾಣಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ಸ್ಥಳೀಯ ಆಡಳಿತ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿರುತ್ತಾರೆ.




































