
ವಿದ್ಯುತ್ ಕಂಬದಿಂದ ಬಿದ್ದು ಯುವಕ ಮೃತ್ಯು
ಕಾರ್ಕಳ : ಬೃಹತ್ ಗಾತ್ರದ ವಿದ್ಯುತ್ ಕಂಬ ಅಳವಡಿಸುವ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಅಕಸ್ಮಿಕವಾಗಿ ನೆಲಕ್ಕೆ ಬಿದ್ದು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಬಜಗೋಳಿಯ ಮುಡ್ರಾಲು ಕ್ರಾಸ್ ನಲ್ಲಿ ನಡೆದಿದೆ.
ಬುಧವಾರ ಸಂಜೆ ವೇಳೆಗೆ ಈ ಘಟನೆ ಸಂಭವಿಸಿದೆ. ಸುರಿದ ಮಳೆ, ಬಡಿದ ಸಿಡಿಲಿನ ಅಘಾತದ ನಡುವೆ ಯುವಕ 11 ಮೀಟರ್ ಎತ್ತರದ ಬೃಹತ್ ವಿದ್ಯುತ್ ಕಂಬದಿಂದ ಕ್ಷಣ ಮಾತ್ರದಲ್ಲಿ ಕೆಳಕ್ಕೆ ಬಿದ್ದ ಯುವಕ ಪ್ರಾಣಕಳೆದುಕೊಂಡಿದ್ದಾನೆ.
ಕಂಟ್ರಾಕ್ಟರ್ ದಾರರೊಂದಿಗೆ ಆ ಯುವಕ ದುಡಿಯುತ್ತಿದ್ದನು. ಅಸ್ಸಾಂ ಮೂಲದವನೆಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
















