ವಿದ್ಯುತ್ ಆಘಾತ : ಸುಟ್ಟು ಕರಗಲಾದ ಮನೆಯ ಪರಿಕರ

Picture of RB NEWS

RB NEWS

Bureau Report

ಕಾರ್ಕಳ: ವಿದ್ಯುತ್ ಆಘಾತಕ್ಕೆ ಒಳಗಾಗಿ ಮನೆಯೊಂದರ ಪರಿಕರಗಳು ಸುಟ್ಟು ಕರಗಲಾದ ಘಟನೆ ಜೋಡುರಸ್ತೆ ಎಂಬಲ್ಲಿ ಬುಧವಾರ ನಸುಕಿನ ಜಾವದಲ್ಲಿ ಸಂಭವಿಸಿದೆ.


ಜೋಡುರಸ್ತೆಯ ಸಿದ್ಧಿ ವಿನಾಯಕ ಲೇಜೌಟ್‌ನ ಮನೆಯೊಂದರಲ್ಲಿ ವಾಸವಾಗಿರುವ ಕೆಎಂಸಿ ಆಸ್ಪತ್ರೆಯ ವೈದ್ಯ ಚಿದಾನಂದ ಕುಲಕರ್ಣಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ನುಸಕಿನ ಜಾವ 1.51 ವೇಳೆಗೆ ಕಾರ್ಕಳ ಅಗ್ನಿಶಾಮಕ ದಳಕ್ಕೆ ದೊರೆತ ಮಾಹಿತಿಯಂತೆ ಘಟನಾ ಸ್ಥಳಕ್ಕೆ ತೆರಳಿದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದ್ದಾರೆ.
ಬಾಗಿಲು, ಕಿಟಕಿಗಳು, ಟಿ.ವಿ, ಲ್ಯಾಪ್‌ಟಾಪ್, ಸೋಪಾಸೆಟ್, ವಿದ್ಯುತ್ ಪರಿಕರಗಳು ಹಾನಿಗೊಳಗಾಗಿದೆ.
ಕಾರ್ಕಳ ಅಗ್ನಿಶಾಮಕದಳದ ಪ್ರಭಾರ ಠಾಣಾಧಿಕಾರಿ ಚಂದ್ರಶೇಖರ್, ಅಚ್ಚುತ ಕರ್ಕೇರಾ, ಹರಿಪ್ರಸಾದ್, ಚಾಲಕರಾದ ಜಯ ಮೂಲ್ಯ, ನಿತ್ಯಾನಂದ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top