ಕಾರ್ಕಳ : ಬ್ರಾಹ್ಮಣ ಸಖಾ ಬಳಗವು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ ಇದರ ಸಹಯೋಗದೊಂದಿಗೆ ಶ್ರೀಗುರುರಾಘವೇಂದ್ರ ಮಠದಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ 18 ಬ್ರಾಹ್ಮಣ ವಿದ್ಯಾರ್ಥಿಗಳಿಗೆ ದಾನಿಗಳಿಂದ ಸಂಗ್ರಹಿಸದ 1 ಲಕ್ಷ 20 ಸಾವಿರ ಮೊತ್ತದ ವಿದ್ಯಾರ್ಥಿವೇತನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದಂತ ಬ್ರಾಹ್ಮಣ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೌರವ ಧನ ನೀಡಿ ಪುರಸ್ಕರಿಸಲಾಯಿತು.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಸದಸ್ಯ ಡಾ. ಗುರುಚರಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ರೀರಾಮ ಮುಗೇರಾಯ ಟ್ರಸ್ಟ್ ನ ಕಾರ್ಯಚಟುವಟಿಕೆ ಮತ್ತು ಈಗಿನ ವಿದ್ಯಾರ್ಥಿಗಳು ಪಾಲಿಸಬೇಕಾದ ಕರ್ತವ್ಯಗಳನ್ನು ಮತ್ತು ಮುಂದಿನ ಪೀಳಿಗೆಗೆ ನೀಡಬೇಕಾದ ಕೊಡುಗೆಗಳನ್ನು ವಿವರಿಸಿದರು.
ಪೆರ್ವಾಜೆಯ ವೆಂಕಟರಾಜ್ ಭಟ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಯೋಜನೆಗಳಲ್ಲೊಂದಾದ ಗೋಗ್ರಾಸ ಗೋನಿಧಿ ಯೋಜನೆಯ ಬಗ್ಗೆ ವಿವರಿಸಿದರು.
ಕಾರ್ಕಳದ ಶ್ರೀ ಗುರುರಾಘವೇಂದ್ರ ಮಠದಲ್ಲಿ ಸುಮಾರು 30 ವರ್ಷಗಳಿಂದ ಚಾಕರಿ ಮಾಡಿಕೊಂಡು ಬರುತ್ತಿರುವ ಸುಮತಿ ದೇವಾಡಿಗರವರನ್ನು ಗುರುತಿಸಿ, ಸಹಾಯಧನ ನೀಡಿ ಗೌರವಿಸಲಾಯಿತು.
ಅನಘಾ ಮತ್ತು ಅನ್ನಿಕಾ ಪ್ರಾರ್ಥನೆಗೈದರು.
ವಿಘ್ನೇಶ್ ಜೆಪಿ ಪೆರ್ವಾಜೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
ಅತಿಥಿಗಳಾದ ನೆಕ್ಲಾಜೆಗುತ್ತು ಶ್ರೀರಾಘವೇಂದ್ರ ಉಪಾಧ್ಯಾಯ, ಕಾಮಕ್ಷಿ ಅಮ್ಮ ಮತ್ತು ಶ್ರೀ ಗುರುರಾಘವೇಂದ್ರ ಮಠದ ಅರ್ಚಕ ಶ್ರೀಕರ ಆಚಾರ್ಯ , ಟ್ರಸ್ಟ್ ನ ದಾನಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.




































