ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಬೆಳೆಯಬೇಕು – ಉದ್ಯಮಿ ಮಹೇಂದ್ರವರ್ಮ
ಕಾರ್ಕಳ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಛಲ ಹಿಡಿದು ಕೆಲಸ ಮಾಡಬೇಕು. ಕಠಿಣ ಪರಿಶ್ರಮದಿಂದ ಏಳಿಗೆಯನ್ನು ಕಾಣುವುದಕ್ಕೆ ಸಾಧ್ಯವಿದೆ. ಯಾವುದೇ ಸಂದರ್ಭದಲ್ಲೂ ಹಿಡಿದ ಹಠವನ್ನು ಬಿಡದೆ ಮುಂದುವರಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಮೂಡಬಿದಿರೆಯ ಉದ್ಯಮಿ ಮಹೇಂದ್ರವರ್ಮ ಹೇಳಿದರು.
ಶ್ರೀ ಭುವನೇಂದ್ರ ಕಾಲೇಜಿನ ೨೦೨೪-೨೫ನೇ ಸಾಲಿನ ವಾಣಿಜ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಮಂಜುನಾಥ ಎ ಕೋಟ್ಯಾನ್ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಶಿವಶಂಕರ್ ಸ್ವಾಗತಿಸಿದರು. ವ್ಯವಹಾರ ಆಡಳಿತ ವಿಭಾಗದ ನಂದಕಿಶೋರ್ ಅತಿಥಿ ಪರಿಚಯ ಮಾಡಿದರು. ಜೈಸನ್ ನಿರೂಪಿಸಿದರು. ಎವಿಶಾ ಡಿಮೆಲ್ಲೊ ವಂದಿಸಿದರು. ವೇದಿಕೆಯಲ್ಲಿ ವಾಣಿಜ್ಯ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಜ್ಯೋತ್ಸಾö್ನ ಲೋಬೋ, ದೀಪ್ತಿ ಕೆ, ಎವಿಷಾ ಡಿಮೆಲ್ಲೊ, ಅಕ್ಷರ್ ಉಪಸ್ಥಿತರಿದ್ದರು.

































