ವಿದ್ಯಾಮಾತಾ ಅಕಾಡಮಿ ಕಾರ್ಕಳದಲ್ಲಿ ಸೇನೆ ಮತ್ತು ಅಗ್ನಿಪಥ್ ಸೇರುವ ಆಸಕ್ತ ಮಕ್ಕಳಿಗೆ ಉಚಿತ ಶಿಬಿರ

ಕಾರ್ಕಳ: ಅಗ್ನಿಪಥ್ ಸೇರಿದಂತೆ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಕರಾವಳಿಯ ಪ್ರತಿಷ್ಟಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಆಕಾಡೆಮಿ ಕಾರ್ಕಳ ಶಾಖೆ ಕಡೆಯಿಂದ ಉಚಿತ ತರಬೇತಿ (ಮಾಹಿತಿ ಕಾರ್ಯಾಗಾರ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಡುಪಿ, ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲೆಯಿಂದ ಸುಮಾರು ಐವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಇದರ ಜೊತೆಗೆ ಇತರ ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯನ್ನೂ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಕಳ ಶಾಖೆಯ ನಿರ್ದೇಶಕಿ ರಮಿತಾ ಶೈಲೇಂದ್ರ, ವಿದ್ಯಾಮಾತಾ ಫೌಂಡೇಶನ್ ನ ಫೌಂಡರ್ ಭಾಗ್ಯೇಶ್ ರೈ ಹಾಗೂ ಅಕಾಡೆಮಿಯ ಸುಳ್ಯ ಶಾಖೆ ಮತ್ತು ಕಾರ್ಕಳ ಶಾಖೆಯ ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.





















