ವಾಹನ ಸಂಚಾರಕ್ಕೆ ಯೋಗ್ಯವಾಗಿರದ ರಾ.ಹೆದ್ದಾರಿ !
ಕಾರ್ಕಳ: ವಾಹನ ಸಂಚಾರಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿ ನಡೆಯದೇ ಹೋದುದರಿಂದ ಕಾರ್ಕಳ – ಬಜಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಹಲವು ಅನಾಹುತಗಳು ಸಂಭವಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ರವಿವಾರ ರಾತ್ರಿ ಸುಮಾರು ಸುಮಾರು 8.30 ಗಂಟೆಗೆ ಬಜಗೋಳಿಯಿಂದ ಕಾರ್ಕಳಕ್ಕೆ ಮಾರುತಿ ಓಮ್ನಿ ಕಾರು ಬರುತ್ತಿತ್ತು. ಮಿಯ್ಯಾರು ಚರ್ಚ್ ಬಳಿ ಬರುತ್ತಿದ್ದಂತೆ ರಸ್ತೆಯಲ್ಲಿನ ಆಸ್ಪಷ್ಟ ಮಾಹಿತಿಯಿಂದಾಗಿ ಡಿವೈಡರ್ ಹತ್ತಿದ ಘಟನೆ ನಡೆದಿದೆ.
ಇದೇ ಪ್ರದೇಶದ ಶಾಲಾ ಬಳಿ ಕಂಬಳಕ್ಕೆ ಹೋಗುವ ರಸ್ತೆಗೆ ಡಾಮಾರಿಕರಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದರ ಎದುರು ಮಣ್ಣು ರಾಶಿ ಹಾಕಲಾಗಿದ್ದು ಅದಕ್ಕೆ ಯಾವುದೇ ಮಾಹಿತಿ ಫಲಕ ಅಳವಡಿಸಲಾಗಿಲ್ಲ.
ಹೀಗಾಗಿ ವಾಹನ ಸವಾರರು ಆ ಪ್ರದೇಶಕ್ಕೆ ಬಂದ ಕೂಡಲೇ ಗೊಂದಲಕ್ಕೆ ಒಳಗಾಗುತ್ತಾರೆ. ಈ ಹೊಸ ಓಮ್ನಿ ಕೂಡ ಈ ಪ್ರದೇಶಕೆ ಬಂದ ಕೂಡಲೇ ಮಣ್ಣಿನ ರಾಶಿಯ ಮೇಲಕ್ಕೆ ಹೋಗಿ ಅಪಘಾತ ಸಂಭವಿಸಿದೆ.
ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಭಾರೀ ಅನಾಹುತ ಆಗುವ ಮುನ್ನಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಯವರು ಇತ್ತ ಕಡೆ ಗಮನ ಹರಿಸಲಿ ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹ ಆಗಿದೆ.














