ವಾಲಿಬಾಲ್ ಮತ್ತು ತ್ರೊಬಾಲ್ ಪಂದ್ಯಾಟವಳಿ ಶಿಕ್ಷಕ ಹಾಗೂ ಸಾಧಕರಿಗೆ ಸನ್ಮಾನ

Picture of RB NEWS

RB NEWS

Bureau Report

ಕಾರ್ಕಳ : ವಾಲಿಬಾಲ್ ಮತ್ತು ತ್ರೊಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ಕಾರ್ಕಳ ತಾಲೂಕಿನ ಇರ್ವತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕ ಆನಂದ ಪೂಜಾರಿ ಇವರಿಗೆ ಇರ್ವತ್ತೂರು ಕೊಳಕೆ ಗ್ರಾಮದ ಬಿಲ್ಲವ ಬಾಂದವೆರ್ ಕೊಳಕ್ಕೆ ಇರ್ವತ್ತೂರು ಇವರ ವತಿಯಿಂದ ಅಭಿನಂದಿಸಲಾಯಿತು.

ಇರ್ವತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರುಗಳು ಹಾಗೂ ಶಾಲಾ ಶಿಕ್ಷಕರುಗಳ, ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷರು ಗೋಪಾಲ ಕೆ ಪೂಜಾರಿಯ ಕಾರ್ಯಕ್ರಮದ ಮಹತ್ವದ ಕುರಿತು ಪ್ರಾಸ್ತವಿಕ ನುಡಿದರು.

ವಿಧ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಅಭಿನಂಧನಾ ಕಾರ್ಯಕ್ರಮ ನೆರೆವೇರಿಸಲಾಯಿತು.

ಗ್ರಾ.ಪಂ ಸದಸ್ಯರು ಶೇಖರ ಅಂಚನ್, ಶಾಲಾ ಪ್ರಭಾರ ಮುಖ್ಯೋಪಾಧ್ಯಯಿನಿ ಶಕುಂತಲಾ ಟಿ,ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಮಧ್ವರಾಜ ಪೂಜಾರಿ, ಸಮಿತಿಯ ಹಿರಿಯರು ರಮೇಶ ಅಂಚನ್ ಉಪಸ್ಥಿತರಿದ್ದರು.

ಮಿಥುನ್ ಪೂಜಾರಿ ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top