
ವಾರ ಭವಿಷ್ಯ
27.09.2026 ರಿಂದ 03.10.2026ರ ವರೆಗೆ
ವಿಶೇಷ ದಿನ: 27.09.2026 — ಮಹಾಲಯ ಆರಂಭ
ಮೇಷ
ಈ ವಾರ ಕೆಲವರಿಗೆ ಉಪಕಾರ ಮಾಡಲು ಹೋಗಿ ನೀವೇ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಹಣ ಗಳಿಕೆ, ಸ್ಥಾನಮಾನ ಮತ್ತು ಗೌರವಕ್ಕಾಗಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಂದ ಅಸಮಾಧಾನದ ವಾತಾವರಣ ಉಂಟಾಗಬಹುದು. ಅನಾವಶ್ಯಕ ಖರ್ಚುಗಳು ಹೆಚ್ಚಾಗಿ ಮಾನಸಿಕ ನೆಮ್ಮದಿಗೆ ಭಂಗ ತರಬಹುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ಮಕ್ಕಳ ಆರೋಗ್ಯದ ಕಡೆ ವಿಶೇಷ ಗಮನ ನೀಡಿ. ಅನಗತ್ಯ ವಿಚಾರಗಳಿಗೆ ಹೆಚ್ಚು ಮಹತ್ವ ನೀಡದೆ, ನಿಮ್ಮ ಕೆಲಸದ ಕಡೆ ಗಮನ ಹರಿಸುವುದು ಒಳಿತು.
ವೃಷಭ
ಸಂಗಾತಿಯ ಕಡೆಯಿಂದ ಅಚ್ಚರಿಯ ಉಡುಗೊರೆ ಅಥವಾ ಸಂತಸದ ಸುದ್ದಿ ದೊರೆಯುವ ಸಾಧ್ಯತೆ ಇದೆ. ದೈವಾನುಗ್ರಹದ ಕೊರತೆ ಕಂಡುಬಂದರೂ ಕುಜನ ಪ್ರಭಾವದಿಂದ ದೊಡ್ಡ ಖಾಸಗಿ ಕಂಪನಿಯಲ್ಲಿ ಜವಾಬ್ದಾರಿಯುತ ಸ್ಥಾನ ದೊರೆಯುವ ಅವಕಾಶವಿದೆ. ಭೂಮಿ ಖರೀದಿಗೆ ಪ್ರಯತ್ನಿಸುವವರಿಗೆ ಅನುಕೂಲಕರ ಬೆಳವಣಿಗೆಗಳು ಕಂಡುಬರಬಹುದು. ಕೆಟ್ಟ ಹವ್ಯಾಸಗಳಿಂದ ದೂರವಿರುವುದು ಉತ್ತಮ. ಆತ್ಮವಿಶ್ವಾಸದ ಕೊರತೆ ಕಾಡಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸ್ಥಾನಮಾನ ಮತ್ತು ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿದ್ರಾಹೀನತೆಯಿಂದ ದೇಹದಲ್ಲಿ ಆಯಾಸ ಉಂಟಾಗಬಹುದು.
ಮಿಥುನ
ಭೂಮಿ ಮಾರಾಟ ಮಾಡುವವರಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಕಾಲಕ್ಕೆ ತಕ್ಕಂತೆ ನಿಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳುವುದು ಅಗತ್ಯ. ನಿಮ್ಮವರೇ ಕೆಲವೊಮ್ಮೆ ನಿಮಗೆ ವಿರೋಧಿಗಳಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ವ್ಯವಹರಿಸಿ. ಅತಿಯಾದ ಕೋಪದಿಂದ ಪ್ರೀತಿಪಾತ್ರರು ದೂರವಾಗದಂತೆ ಮಾತಿನ ಮೇಲೆ ಹಿಡಿತವಿರಲಿ. ಕ್ರೀಡೆ, ನೃತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಬಹುದು. ಕೆಲಸದ ಒತ್ತಡ ಮಾನಸಿಕ ನೆಮ್ಮದಿಗೆ ತೊಂದರೆ ತರಬಹುದು. ಕಿರು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
ಕರ್ಕಾಟಕ
ಆರ್ಥಿಕವಾಗಿ ದೊಡ್ಡ ಹೂಡಿಕೆ ಮಾಡುವಾಗ ಅಥವಾ ಸಾಲ ಪಡೆಯುವಾಗ ಸಾಕಷ್ಟು ಮುಂದಾಲೋಚನೆ ಅಗತ್ಯ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಆರೋಗ್ಯದ ಸಮಸ್ಯೆಗಳಿಂದ ದೂರವಿರಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಜೀವನದ ಭಾಗವಾಗಿಸಿಕೊಳ್ಳುವುದು ಉತ್ತಮ. ನಾಗದೇವರು ಮತ್ತು ದುರ್ಗಾದೇವಿಯ ಆರಾಧನೆ ಮನಸ್ಸಿಗೆ ನೆಮ್ಮದಿ ನೀಡಬಹುದು. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಈ ವಾರ ಅನುಕೂಲಕರ ಬೆಳವಣಿಗೆಗಳು ಕಂಡುಬರುವ ಸಾಧ್ಯತೆ ಇದೆ.
ಸಿಂಹ
ವಿರೋಧಿಗಳಿಂದ ಆಗಾಗ್ಗೆ ತೊಂದರೆ ಎದುರಾಗಬಹುದು. ಮನೆ, ವಾಹನ ಅಥವಾ ಭೂಮಿ ಖರೀದಿಸುವಾಗ ದಾಖಲೆಗಳನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಮುಂದುವರಿಯಿರಿ. ವ್ಯವಹಾರಗಳಲ್ಲಿ ಮೋಸ ಹೋಗದಂತೆ ಎಚ್ಚರವಹಿಸುವುದು ಅಗತ್ಯ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಮತ್ತು ಅವರ ಮನೆಯಲ್ಲಿ ಆಹಾರ ಸೇವಿಸುವಾಗ ಎಚ್ಚರಿಕೆ ವಹಿಸಿ. ಮಾತಿನಲ್ಲಿ ಹಿಡಿತವಿರಲಿ. ಸಹೋದರಿಯ ಸಹಕಾರ ದೊರೆಯಬಹುದು. ಆಧ್ಯಾತ್ಮಿಕ ಚಿಂತನೆಗಳು ಮನಸ್ಸಿಗೆ ನೆಮ್ಮದಿ ನೀಡಲಿವೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಡಿಸೆಂಬರ್ವರೆಗೆ ತಾಳ್ಮೆ ಮತ್ತು ಸಂಯಮದಿಂದ ಮುನ್ನಡೆಯುವುದು ಒಳಿತು.
ಕನ್ಯಾ
ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ಅನಿರೀಕ್ಷಿತ ಲಾಭ ದೊರೆಯಬಹುದು. ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ. ತಾಯಿಯವರ ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳು ಆರ್ಥಿಕ ಒತ್ತಡವನ್ನು ಉಂಟುಮಾಡಬಹುದು. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಹಿಂದಿನ ಸಾಲದ ಹೊರೆ ಕಾಡಬಹುದು. ನಿಮ್ಮವರೇ ಕೆಲವೊಮ್ಮೆ ಹಿತಶತ್ರುಗಳಂತೆ ವರ್ತಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಶನಿಯ ಪ್ರಭಾವದಿಂದ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗದಂತೆ ನೋಡಿಕೊಳ್ಳಿ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ.
ತುಲಾ
ಗುರುಹಿರಿಯರನ್ನು ಗೌರವಿಸುವುದು ನಿಮ್ಮ ಕರ್ತವ್ಯ. ನಿಮಗೆ ತಿಳಿಯದ ರೀತಿಯಲ್ಲಿಯೇ ಕೆಲವು ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ. ಪರಿಚಿತರ ಸಹಕಾರದಿಂದ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಅವಕಾಶ ದೊರೆಯಬಹುದು. ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮ ಪಾಲು ದೊರೆಯುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ರಕ್ತದೊತ್ತಡ ಅಥವಾ ಮಧುಮೇಹದ ಸಮಸ್ಯೆ ಇರುವವರು ಆಹಾರ ಪದ್ಧತಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ತಂಪು ಪಾನೀಯಗಳ ಸೇವನೆಯನ್ನು ಮಿತಿಗೊಳಿಸುವುದು ಉತ್ತಮ.
ವೃಶ್ಚಿಕ
ಭಾಗ್ಯಸ್ಥಾನದಲ್ಲಿರುವ ಗುರು ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರದ ದಾರಿ ತೋರಿಸಲಿದ್ದಾನೆ. ಆದರೆ ಗುರುನೊಂದಿಗೆ ಇರುವ ನೀಚ ಕುಜನ ಪ್ರಭಾವದಿಂದ ಕೆಲವು ಅಡೆತಡೆಗಳು ಎದುರಾಗಬಹುದು. ಕೌಟುಂಬಿಕವಾಗಿ ವೈಮನಸ್ಸು ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಎಲ್ಲರೊಂದಿಗೆ ಹೊಂದಾಣಿಕೆಯಿಂದ ಮುನ್ನಡೆಯಿರಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಶುಕ್ರ ಮತ್ತು ಬುಧನ ಪ್ರಭಾವದಿಂದ ಸಂಗಾತಿಯೊಂದಿಗೆ ಸಣ್ಣಪುಟ್ಟ ಕಿರಿಕಿರಿಗಳು ಉಂಟಾಗಬಹುದು. ದುರ್ಗಾದೇವಿ ಮತ್ತು ವಿಷ್ಣುವಿನ ಆರಾಧನೆ ಮನಸ್ಸಿಗೆ ಶಾಂತಿ ನೀಡಬಹುದು.
ಧನು
ಬೇರೆಯವರ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಸಾಹಸ ಮಾಡಬೇಡಿ. ಇದರಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಗುರು ಮತ್ತು ಕುಜ ಅಷ್ಟಮಸ್ಥಾನದಲ್ಲಿರುವುದರಿಂದ ಪ್ರತಿಯೊಂದು ವಿಚಾರದಲ್ಲೂ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಉತ್ತಮ. ಹಣಕಾಸಿನ ವ್ಯವಹಾರಗಳಲ್ಲಿ ನಷ್ಟವಾಗದಂತೆ ಜಾಗ್ರತೆ ವಹಿಸಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹಿತಶತ್ರುಗಳಿಂದ ತೊಂದರೆ ಉಂಟಾಗದಂತೆ ಎಚ್ಚರಿಕೆ ಇರಲಿ. ತಾಯಿಯವರ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಮೃತ್ಯುಂಜಯ ಮಂತ್ರದ ಪಾರಾಯಣ ಮಾಡುವುದು ಉತ್ತಮ.
ಮಕರ
ಹೊಸ ಮನೆ ಕಟ್ಟುವ ಅಥವಾ ವಾಹನ ಖರೀದಿಸುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಇದೆ. ಕುಜನ ಪ್ರಭಾವದಿಂದ ಸಂಗಾತಿಯೊಂದಿಗೆ ಶೀತಲ ಸಮರದಂತಹ ಪರಿಸ್ಥಿತಿ ಉಂಟಾಗಬಹುದು. ಮಕ್ಕಳ ವರ್ತನೆ ಕೆಲವೊಮ್ಮೆ ನಿಮ್ಮ ಅಸಮಾಧಾನಕ್ಕೆ ಕಾರಣವಾಗಬಹುದು. ಉನ್ನತ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಪ್ರಯತ್ನಿಸಿದರೆ ಯಶಸ್ಸು ದೊರೆಯುವ ಸಾಧ್ಯತೆ ಇದೆ. ನೃತ್ಯ, ಸಂಗೀತ ಮತ್ತು ಸಿನಿಮಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಪ್ರಗತಿ ಕಂಡುಬರಬಹುದು. ಅಪ್ರಯೋಜಕ ಮಾತುಗಳು ವಿವಾದಕ್ಕೆ ಕಾರಣವಾಗದಂತೆ ಎಚ್ಚರಿಕೆ ವಹಿಸಿ. ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು.
ಕುಂಭ
ಆರ್ಥಿಕ ವ್ಯವಹಾರಗಳಲ್ಲಿ ಏರಿಳಿತ ಕಂಡುಬರಬಹುದು. ಯಾರಿಗೂ ಜಾಮೀನು ಸಹಿ ಹಾಕದಿರುವುದು ಉತ್ತಮ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಉಂಟಾಗಬಹುದು. ಕುಟುಂಬದಲ್ಲಿ ಭೂಮಿ ಅಥವಾ ಆಸ್ತಿ ವಿಚಾರವಾಗಿ ಕಲಹ ಉಂಟಾಗುವ ಸಾಧ್ಯತೆ ಇದೆ. ವಿವಾದಗಳು ನ್ಯಾಯಾಲಯ ಅಥವಾ ಕಚೇರಿ ಅಲೆದಾಟಕ್ಕೆ ಕಾರಣವಾಗಬಹುದು. ಹೃದಯ ಸಂಬಂಧಿತ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಸಂಗಾತಿಯೊಂದಿಗೆ ಬೇಸರ ಉಂಟಾಗದಂತೆ ಪರಸ್ಪರ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಮೃತ್ಯುಂಜಯ ಮಂತ್ರದ ಜಪ ಮತ್ತು ಪಾರಾಯಣ ಮನಸ್ಸಿಗೆ ನೆಮ್ಮದಿ ನೀಡಬಹುದು.
ಮೀನ
ಸಂಗಾತಿಯ ಸಹಕಾರ ಸದಾ ನಿಮ್ಮೊಂದಿಗೆ ಇರಲಿದೆ. ಅವರೊಂದಿಗೆ ಉತ್ತಮ ಹೊಂದಾಣಿಕೆಯಿಂದ ಮುಂದುವರಿಯಿರಿ. ಕೆಲವು ಅನಿರೀಕ್ಷಿತ ಘಟನೆಗಳಿಂದ ಧನ ಆದಾಯದಲ್ಲಿ ತೊಂದರೆ ಉಂಟಾಗಬಹುದು. ನಾಗದೇವರ ಪ್ರಾರ್ಥನೆ ಮಾಡುವುದು ಶುಭಕರ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶುಕ್ರ ಮತ್ತು ಬುಧ ಅಷ್ಟಮದಲ್ಲಿರುವುದರಿಂದ ಮಧುಮೇಹ ಸೇರಿದಂತೆ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಗುರು ಪಂಚಮದಲ್ಲಿದ್ದರೂ ಕುಜನ ಪ್ರಭಾವ ಇರುವುದರಿಂದ ಮಕ್ಕಳ ವಿಚಾರದಲ್ಲಿ ಹೆಚ್ಚಿನ ಗಮನ ನೀಡಿ. ಸಹೋದರಿಯೊಂದಿಗೆ ಉತ್ತಮ ಸಂಪರ್ಕ ಮತ್ತು ಬಾಂಧವ್ಯವನ್ನು ಕಾಪಾಡಿಕೊಳ್ಳಿ.






































