ವಾರ ಭವಿಷ್ಯ 26.05.2024 ರಿಂದ 01.06.2024ರ ವರೆಗೆ

Picture of RB NEWS

RB NEWS

Bureau Report

ವಾರ ಭವಿಷ್ಯ

26.05.2024 ರಿಂದ 01.06.2024ರ ವರೆಗೆ


ವಿಶೇಷ ದಿನಗಳು :

26.05.2024 ….ಸಂಕಷ್ಟ ಚತುರ್ಥಿ
31.05.2024……ವೃಷಭ ರಾಶಿಗೆ ಬುಧನ ಪ್ರವೇಶ
01.06.2024……ಮೇಷ ರಾಶಿಗೆ ಕುಜನ ಪ್ರವೇಶ


ಮೇಷ :ಜೂನ್ ತಿಂಗಳ ದಿನಾಂಕ ಒಂದರ ವರೆಗೆ ಬಹಳ ಎಚ್ಚರದಿಂದ ಇರಬೇಕು . ರಾಶ್ಯಾಧಿಪತಿ
ಅಷ್ಟಮಾಧಿಪತಿ ಕುಜ ರಾಹುವಿನೊಂದಿಗೆ ವ್ಯಯದಲ್ಲಿ ಇದ್ದಾನೆ . ನಿಮ್ಮ ಉದ್ಯೋಗ ವ್ಯವಹಾರಗಳಲ್ಲಿ
ದುಡುಕಿನ ನಿರ್ಧಾರಗಳು ಬೇಡ . ದೈವಾನುಗ್ರಹ ಬಂದಿದೆ .ಆದುದರಿಂದ ನೀವು ಮಾಡಬೇಕೆಂದಿರುವ
ಕೆಲಸಗಳೆಲ್ಲವೂ ನಿರಾತಂಕವಾಗಿ ನಡೆಯಲಿವೆ .ರಾಜಕೀಯದಲ್ಲಿ ಯಶಸ್ವಿಯಾಗುವಿರಿ .ವಿದ್ಯಾರ್ಥಿಗಳು
ಉತ್ತಮ ಫಲಿತಾಂಶದಿಂದ ಸಂತೋಷ ಪಡುವಿರಿ .ಉದ್ಯೋಗದಲ್ಲಿ ಒತ್ತಡವಿರುವುದು ಸ್ವಾಭಾವಿಕ .
ಅದನ್ನು ನಿಭಾಸುವ ಶಕ್ತಿ ಒದಗಿ ಬರಲಿದೆ .ಆದಾಯದಲ್ಲಿ ಏರಿಕೆ ಇರುತ್ತದೆ . ನಿಮ್ಮ ಮನೆಯನ್ನು
ಕೊಳ್ಳುವ ಕನಸಿಗೆ ಹಿರಿಯರ ಮನೆಯಲ್ಲಿ ಆರಾಧನೆ ಗೊಳ್ಳುವ ದೇವಿಗೆ ಪ್ರಾರ್ಥನೆ ಅಗತ್ಯವಿದೆ.


ವೃಷಭ : ನಿಮ್ಮ ದೈವಾನುಗ್ರಹ ಅತ್ಯುತ್ತಮವಾಗುತ್ತಲೇ ಹೋಗುತ್ತಿದೆ . ಗುರು,ರವಿ ಶುಕ್ರ ಜನ್ಮ ರಾಶಿಗೆ
ಬಂದಿದ್ದಾರೆ . ಹಿರಿಯರು ಆರಾಧನೆ ಮಾಡಿಕೊಂಡು ಬಂದಿರುವ ವಿಷ್ಣು ,ನಾಗ ದೇವರಿಗೆ ಪ್ರಾರ್ಥನೆ
ಅಗತ್ಯವಿದೆ . ಸಂಪತ್ತು ನಾಗದೇವರ ಕೈಯಲ್ಲಿ ಲಾಭ ಕ್ಷೇತ್ರದಲ್ಲಿ ಕುಜ ಮತ್ತು ರಾಹುವಿನ ಬಳಿಯಲ್ಲಿ
ಈಶಾನ್ಯ ದಿಕ್ಕಿನಲ್ಲಿ ಇದ್ದಾರೆ . ನಿಧಿ ,ಕೊಪ್ಪರಿಗೆ ಎಂದು ಕರೆಯುತ್ತಾರೆ ,ಅದನ್ನು ತೆಗೆಯುವ ಬದಲಿಗೆ
ಅಲ್ಲಿ ತಮ್ಮ ವಿಶೇಷ ಆರಾಧನೆಯನ್ನು ಮಾಡಿ ಜನ್ಮವಿಡೀ ಸುಖ ಜೀವನವನ್ನು ಪ್ರಾರ್ಥನೆ ಮಾಡಿರಿ . ಆಗ
ನಿಮ್ಮ ಪತ್ನಿ ಸಂತೋಷದಿಂದ ನಿಮ್ಮೊಂದಿಗೆ ಹೊಂದಿ ಕೊಂಡು ಬರಲಿದ್ದಾರೆ . ಗಣಪತಿ ದೇವರನ್ನು
ಪ್ರಾರ್ಥನೆ ಸಲ್ಲಿಸುತ್ತಾ ಮಕ್ಕಳಿಗೆ ಶುಭವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿರಿ.


ಮಿಥುನ : ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ ಮಹಾಸುದರ್ಶನ ಮಂತ್ರವನ್ನು ಪ್ರತಿನಿತ್ಯ
ಹೇಳುತ್ತಾ ಬನ್ನಿರಿ . [ಓಂ ಕ್ಲೀಮ್ ಕೃಷ್ಣಾಯ …. ]ಪತ್ನಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು
ಬರಲಿದೆ . ನಿಮ್ಮ ಅತಿಯಾದ ಆತಂಕದಿಂದ ಹೊರಗೆ ಬರುವಿರಿ . ನಿಮ್ಮ ತಾಳ್ಮೆ ಸಹನೆ ಸಂಸಾರದಲ್ಲಿ
ಬರಲಿರುವ ಬಿಕ್ಕಟ್ಟನ್ನು ದೂರ ಮಾಡಲಿದೆ .ಉದ್ಯೋಗದಲ್ಲಿ ನಿಮ್ಮ ಅರ್ಹತೆಗೆ ತಕ್ಕುದಾದ ಸ್ಥಾನ
ಮಾನ ಒದಗಿ ಬರಲಿದೆ . ಭೂಮಿ ವ್ಯವಹಾರ ಮಾಡುವವರಿಗೆ ಒಳ್ಳೆಯ ಅವಕಾಶ ಒದಗಿ ಬರಲಿದೆ .
ಉದ್ಯೋಗವನ್ನು ಬದಲಾಯಿಸುವ ಯೋಚನೆ ಮಾಡಲಿರುವಿರಿ . ನಿಮ್ಮ ಕುಲದೇವರ ಪ್ರಾರ್ಥನೆ ಅಗತ್ಯವಿದೆ
. ವಿದ್ಯಾರ್ಥಿಗಳು ಹಿರಿಯರ ಮಾತಿಗೆ ಬೆಲೆ ಕೊಟ್ಟಲ್ಲಿ ಯಶಸ್ವಿಯಾಗುವರು . ಹಣ ಕಾಸಿನ ವಿಷಯದಲ್ಲಿ
ಎಚ್ಚರದಿಂದಿರಿ . ಸಮಾಜದಲ್ಲಿ ನಿಮಗೆ ಬುಧನು ಉತ್ತಮ ಸ್ಥಾನ ಮಾನವನ್ನು ಒದಗಿಸಿ ಕೊಡಲಿದ್ದಾನೆ.


ಕರ್ಕಾಟಕ : ನಿಮಗೆ ಬಾಧಾ ಸ್ಥಾನದಲ್ಲಿ ಗುರು ಶುಕ್ರ ರವಿ ,ಮತ್ತು ಮಹಾ ಭಾಧಕ ಸ್ಥಾನದಲ್ಲಿ ಶನಿ
ಇದ್ದಾನೆ .ಭಾಗ್ಯ ಸ್ಥಾನದಲ್ಲಿ ಕುಜ ರಾಹು ಇದ್ದಾರೆ . ಅನಾವಶ್ಯಕ ವಾದ ವಿವಾದಗಳಿಗೆ ಅವಕಾಶವನ್ನು
ಕೊಡ ಬೇಡಿರಿ . ಸಹೋದರ ವರ್ಗದವರ ಸಹಕಾರ ನಿಮಗಿರುತ್ತದೆ . ಪ್ರಧಾನವಾಗಿ ಅನ್ನಪೂರ್ಣೇಶ್ವರಿ

ದೇವಿಯನ್ನು ಪ್ರಾರ್ಥಿಸುತ್ತಾ ಬನ್ನಿರಿ .ಹಿರಿಯರೊಂದಿಗೆ ತಗ್ಗಿ ಬಗ್ಗಿ ನಡೆದಷ್ಟೂ ಒಳ್ಳೆಯದು . “ಜುಟ್ಟಿಗೆ
ಮಲ್ಲಿಗೆ ಒಳಗೆ ಗೋಳಿಸೊಪ್ಪು “ ಹಾಸಿಗೆಯ ಉದ್ದದಷ್ಟೇ ಕಾಲು ಚಾಚು ನಮಗೆ ಸಾದ್ಯವಿದ್ದಷ್ಟು
ಮಾತ್ರ ಖರ್ಚು ಮಾಡಬೇಕು .ಶುಭ ಸಮಾರಂಭಗಳು ನಡೆಯುವ ಸಮಯ . ಪಿತ್ರಾರ್ಜಿತ ಆಸ್ತಿಯ ಬಗ್ಗೆ
ವಿವಾದಗಳು ಬರುವ ಸಾಧ್ಯತೆ ಇದೆ . ಸಾವಧಾನದಿಂದ ಮುನ್ನೆಡಿಯಿರಿ.


ಸಿಂಹ :ಮಾನಸಿಕ ನೆಮ್ಮದಿಗೆ “ಆದಿತ್ಯ ಹೃದಯ ಮಂತ್ರ”ವನ್ನು ಪಾರಾಯಣ ಮಾಡಿರಿ . ಉದ್ಯೋಗ
ಮಾಡುವಲ್ಲಿ ಕೆಲವೊಮ್ಮೆ ಗೊಂದಲಗಳು ,ಮೇಲಧಿಕಾರಿಗಳ ಕಿರಿಕಿರಿ ಇರುತ್ತದೆ . “ನಾನು “ ಎಂಬ “ಅಹಂ
“ನಿಂದ ಹೊರಗೆ ಬನ್ನಿರಿ .ಅಷ್ಟಮದ ಕುಜ ರಾಹು ನಿಮ್ಮ ತಂದೆಯೊಂದಿಗೆ ಬೇಸರವನ್ನು ತರಬಹುದು .
ಅಮ್ಮನವರ ಆರೋಗ್ಯದ ಬಗ್ಗೆ ಬೇಸರವನ್ನು ತರಬಹುದು . ನಾಗ ದೇವರ ಪ್ರಾರ್ಥನೆ ಅಗತ್ಯವಿದೆ
.ಮಾತಿನಲ್ಲಿ ,ಹಿಡಿತವಿರಲಿ .ವಿದ್ಯಾರ್ಥಿಗಳು ಎಚ್ಚರವಹಿಸಿರಿ ಮನಸ್ಸಿನ ಹಿಡಿತ ನಿಮ್ಮಲ್ಲಿರಲಿ .
ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ ಮತ್ತು ಇದರಿಂದ ನಿಮ್ಮ ಜೀವನ
ಉತ್ತಮವಾಗಲಿದೆ .ಕಷ್ಟದ ಕಾಲದಲ್ಲಿ ಆತ್ಮೀಯರ ಸಹಾಯ ಓಡಾಗ್ ಬರಲಿದೆ .,ನಿಮ್ಮ ಮಕ್ಕಳ ಬಗ್ಗೆ
ಎಚ್ಚರವಿರಲಿ.


ಕನ್ಯಾ : ಸಪ್ತಮದಲ್ಲಿರುವ ಕುಜ ಮತ್ತು ರಾಹು, ಜನ್ಮ ರಾಶಿಯಲ್ಲಿರುವ ಕೇತು ನಿಮ್ಮ ಜೀವನದಲ್ಲಿ
ಅನೇಕ ಕಹಿ ಅನುಭವಗಳನ್ನು ತರಲಿದ್ದಾರೆ . ಲಲಿತಾ ಸಹಸ್ರ ನಾಮ ಪಾರಾಯಣ ಮಾಡುವ ಅಗತ್ಯವಿದೆ .
ಬರುವ ಆದಾಯದಲ್ಲಿ ಕೊರತೆ ಇರುವುದಿಲ್ಲ. ಆದರೆ ಅಪವಾದ ಬರದಂತೆ ಎಚ್ಚರವಹಿಸಬೇಕು
.ಉದ್ಯೋಗದಲ್ಲಿ ಇರುವವರಿಗೆ /ನಿರೀಕ್ಷೆಯಲ್ಲಿರುವವರಿಗೆ ಬುಧ ಅನುಕೂಲವನ್ನು ಮಾಡಲಿದ್ದಾನೆ .
ಭಾಗ್ಯದಲ್ಲಿ ಬಂದಿರುವ ಗುರು ರವಿ ಶುಕ್ರ ನಿಮ್ಮ ಜೀವನದಲ್ಲಿ ಹೊಸ ಆಶಾ ಕಿರಣವನ್ನು
ಮೂಡಿಸಲಿದ್ದಾನೆ . ರೈತಾಪಿ ವರ್ಗದವರಿಗೆ ಒಳ್ಳೆಯ ಮಳೆ ಬೆಳೆ ಆಗಲಿದೆ .ಸಹೋದರಿಯ /ಸಹೋದರನ
ವಿವಾಹದಲ್ಲಿ ಅಪಸ್ವರ ಬರದಂತೆ ಎಚ್ಚರ ವಹಿಸಿರಿ.


ತುಲಾ :ಗುರು ಅಷ್ಟಮದಲ್ಲಿ ಇರುವುದು ಮತ್ತು ಅವನ ಜೊತೆಗೆ ಶುಕ್ರ ಮತ್ತು ರವಿ ಇರುವುದು ನೀವು
ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡುವ ಅವಶ್ಯಕತೆಯನ್ನು ತಿಳಿಸುತ್ತದೆ .ಸಹೋದರನ ಜೊತೆಗೆ ಬೇಸರ
ಆಗದಂತೆ ಎಚ್ಚರ ವಹಿಸಬೇಕು. ಸಕ್ಕರೆ ಕಾಯಿಲೆ ಇರುವವರು ಎಚ್ಚರವಾಗಿರಿ . ವಿದೇಶ ಪ್ರಯಾಣ
,ಬೆಲೆಬಾಳುವ ವಸ್ತುಗಳ ಖರೀಧಿ ಮಾಡುವಿರಿ . ವಿದ್ಯಾರ್ಥಿಗಳು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ
. ನೀವು ಯಾವುದೇ ಹೊಸ ವ್ಯವಹಾರಕ್ಕೆ ಕೈ ಹಾಕುವ ಮೊದಲು ತಿಳಿದವರ ಸಲಹೆ ಪಡೆಯಿರಿ .ಸಂಗಾತಿಯ
ಸಹಕಾರವೇ ನಿಮಗೆ ಪ್ರಸ್ತುತ ಆಧಾರಸ್ತಂಭವಾಗಿದೆ .ನೆನಪಿರಲಿ . “ಬಿಳಿಯಾಗಿರುವುದೆಲ್ಲಾ
ಹಾಲಲ್ಲ,ಹೊಳಿಯುವುದೆಲ್ಲ ಚಿನ್ನವಲ್ಲ “.


ವೃಶ್ಚಿಕ : ಈ ವಾರದಲ್ಲಿ ನಾಲ್ಕು ಗ್ರಹರ ಸಂಯೋಗ ಸಪ್ತಮದಲ್ಲಿ ಇರುವುದು ಜೂನ್ ಒಂದರಂದು ಕುಜ
ಮೇಷ ರಾಶಿಗೆ ಬರುತ್ತಿರುವುದು ಯೋಗಾನುಯೋಗ .ರಾಜಕೀಯದಲ್ಲಿರುವವರು ಗುರುವಿನ
ಅನುಗ್ರಹದಿಂದ ಮಿಂಚಲಿದ್ದಾರೆ .ನಾಗ ದೇವರ ಪ್ರಾರ್ಥನೆ ಮರೆಯದಿರಿ . ಭೂಮಿಯ ವ್ಯವಹಾರದಿಂದ
ಅಧಿಕ ಲಾಭ ಗಳಿಸಲಿದ್ದೀರಿ . ಕೇತು ಲಾಭ ಕ್ಷೇತ್ರದಲ್ಲಿ ಇರುವುದು ನೀವು ಅದೃಷ್ಟಶಾಲಿಗಳು

ಎನ್ನುವುದನ್ನು ಸೂಚಿಸುತ್ತದೆ . ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು
ಮಾಡಿಕೊಳ್ಳಲಿದ್ದೀರಿ . ನಿಮ್ಮ ಆರೋಗ್ಯ ಉತ್ತಮವಾಗಲಿದೆ . ಮಿತ್ರರಿಂದ ದೂರ ಉಳಿಯುವ ನಿಮ್ಮ
ನಿರ್ಧಾರ ಉತ್ತಮವಲ್ಲ. ಸುಧರ್ಷನ ಮಹಾ ಮಂತ್ರ ನಿತ್ಯವೂ ಪಾರಾಯಣ ಮಾಡಿರಿ.


ಧನು: ಕುಜ ಈ ವಾರದಲ್ಲಿ ಮೇಷ ರಾಶಿಗೆ ,ಬುಧ ವೃಷಭ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ . ಗುರುವಿನ
ಅನುಗ್ರಹ ಇಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಸುಧಾರಣೆಯನ್ನು ಕಾಣುವಿರಿ . ಆರೋಗ್ಯದ ಕಡೆಗೆ ಗಮನ
ಕೊಡುವಂತೆ ರಾಹು ತಿಳಿಸುತ್ತಿದ್ದಾನೆ . ಸಕ್ಕರೆ ಕಾಯಿಲೆ ಇರುವವರು ಎಚ್ಚರವಹಿಸಿರಿ .ಉದ್ಯೋಗವನ್ನು
ಬದಲಾಯಿಸುವ ಸಾಧ್ಯತೆ ಇರುತ್ತದೆ .ವಿದ್ಯಾರ್ಥಿಗಳು ಬಹಳ ಎಚ್ಚರವಹಿಸಬೇಕು . ತಂದೆಯವರ ವಿವಾದ
ಪರಿಹಾರವಾಗಲಿದೆ ಚಿನ್ನಾಭರಣ ಖರೀಧಿ ಯೋಗವಿದೆ .ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ
ಯೋಗ ಕೂಡಿ ಬಂದಿದೆ .ಶತ್ರು ಬಾಧೆ ನಿವಾರಣೆಗೆ ಮನ್ಯು ಸೂಕ್ತ ಪಾರಾಯಣ ಮಾಡಿರಿ /ಮಾಡಿಸಿರಿ.


ಮಕರ: ಕುಜ ಮೇಷ ರಾಶಿಗೆ ಪ್ರವೇಶ ಮಾಡುತ್ತಿರುವುದು ಬುಧ ವೃಷಭ ರಾಶಿಗೆ ಪ್ರವೇಶ
ಮಾಡುತ್ತಿರುವುದು ಶುಭ ಮತ್ತು ಅಶುಭ ಫಲವನ್ನು ಸೂಚಿಸುತ್ತಿದೆ ,ಸಾಡೇ ಸಾತ್ ಶನಿಯ ಪ್ರಭಾವ
ಮುಂದುವರಿದಿದೆ ,ಮಾತಿನಲ್ಲಿ ,ದುಡ್ಡಿನಲ್ಲಿ ಎಚ್ಚರವಿರಲಿ ಭಾಧಕಾಧಿಪತಿ ಕುಜ ಭಾಧಕ ಸ್ಥಾನದಲ್ಲಿ
ಇರುವಾಗ ಆರೋಗ್ಯದ ಕಡೆಗೆ ಗಮನ ಅತೀ ಅಗತ್ಯವಾಗಿದೆ . ಮನೆ ವಾಹನ ,ಭೂಮಿ ಕೊಳ್ಳುವ
ಯೋಗವಿದ್ದರೂ ದಾಖಲೆ ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯವಾಗಿದೆ .ಉದ್ಯೋಗದಲ್ಲಿ
ಸಂಯಮದಲ್ಲಿ ವರ್ತಿಸಿರಿ . ಸಂಗಾತಿಯ ಮನಸ್ಸನ್ನು ಅರಿತುಕೊಂಡು ಮುನ್ನೆಡೆಯಿರಿ . ವಿದ್ಯಾರ್ಥಿಗಳು
ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ . ಓದುವ ಕಡೆಗೆ ಗಮನಹರಿಸಿರಿ.


ಕುಂಭ :ಕುಜ ತೃತೀಯಾಕ್ಕೆ ಪ್ರವೇಶ ಮಾಡುತ್ತಿದ್ದಾನೆ ,ಬುಧ ಸುಖ ಸ್ಥಾನಕ್ಕೆ ಬರುತ್ತಿದ್ದಾನೆ . ಸುಖ
ಸ್ಥಾನದಲ್ಲಿ ಶುಕ್ರ ,ಬುಧ ಗುರು ಬಂದಿರುವುದು ಇದ್ದಕ್ಕಿದ್ದ ಹಾಗೆ ನಿಮ್ಮಲ್ಲಿ ಅನೇಕ ಸಂತೋಷದಾಯಕ
ಬದಲಾವಣೆಯನ್ನು ಕಾಣ ಬಹುದಾಗಿದೆ . ಇಷ್ಟು ಕಾಲದ ಬೇಸರ ಮಾಯವಾಗಲಿದೆ . ಸಂಗಾತಿಯ
ಮನಸ್ಸಿನ ಭಾವನೆ ಕೂಡಾ ಬದಲಾವಣೆ ಆಗಲಿದೆ .ನಾಗ ದೇವರ ಪ್ರಾರ್ಥನೆ ಅಗತ್ಯವಾಗಿದೆ ಬಂಧುಗಳ
ಜೊತೆಗೆ ನಿಷ್ಟುರವಾಗಿ ವರ್ತಿಸಬೇಡಿರಿ . ಸಹೋದರ ವರ್ಗದವರಲ್ಲಿ ಒಗ್ಗಟ್ಟನ್ನು ಕಾಣುವಿರಿ . ನಿಮ್ಮಲ್ಲಿ
ಮನಸ್ಸಿನಲ್ಲಿ ನೋವಿದ್ದರೂ ಇತರರೊಂದಿಗೆ ಸಂತೋಷದಿಂದ ಬೆರೆಯುವಿರಿ . ವಿಷ್ಣು ಸಹಸ್ರ ನಾಮ
ಪಾರಾಯಣ ಅಗತ್ಯವಾಗಿದೆ.


ಮೀನ : ಹಣ ಕಾಸಿನ ವಿವಾದವೊಂದು ನಿಮ್ಮನ್ನು ಸುತ್ತಿಕೊಳ್ಳಲಿದೆ . ಕುಜ ನಿಮ್ಮ ಜನ್ಮ ರಾಶಿಯಿಂದ
ಮೇಷ ರಾಶಿಗೆ ಬುಧ ವೃಷಭರಾಶಿಗೆ ಪ್ರವೇಶ ಮಾಡುತ್ತಾನೆ .ನೀವು ಮಾಡುತ್ತಿರುವ ಯಾವುದೇ ಉದ್ಯೋಗ
ವ್ಯವಹಾರದಲ್ಲಿ ತಾಳ್ಮೆಯಿಂದ ಸಂಯಮದಿಂದ ವರ್ತಿಸುವುದು ಅತೀ ಅಗತ್ಯವಾಗಿದೆ . ವಿದ್ಯಾರ್ಥಿಗಳು
ಉನ್ನತ ವಿದ್ಯಾಭ್ಯಾಸಕ್ಕೆ ದೂರದ ಊರಿಗೆ ಹೋಗಲಿದ್ದಾರೆ . ನರಸಿಂಹ ದೇವರ ಮಂತ್ರ ಪಾರಾಯಣ
ಅಗತ್ಯವಿದೆ ಬಂಧು ಬಳಗದವರಿಂದ ದೂರ ಉಳಿಯುವ ತೀರ್ಮಾನ ಮಾಡುವಿರಿ ಮನೆ ನವೀಕರಣ ಮಾಡುವ
ಯೋಚನೆ ಇದೆ . ಸಂಗಾತಿಯೊಂದಿಗೆ ಹೊಂದಿಕೊಂಡು ಹೋಗುವುದು ಕಷ್ಟವಾಗಲಿದೆ . ಸಾಡೇ ಸಾತ್ ಶನಿಗೆ
ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ .

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿ ಕೊಡಲಾಗುವುದು ,ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ಮಾಡುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು . ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top