ಮೇಷ : ನಿಮಗೆ ಈ ವಾರದಲ್ಲಿ ರವಿ ಶುಕ್ರ ಶನಿ ಲಾಭ ಕ್ಷೇತ್ರದಲ್ಲಿ ಇರುವುದರಿಂದ ನೀವು ಯಾವುದೇ ವ್ಯವಹಾರ ,ಉದ್ಯೋಗ ಮಾಡುತ್ತಿದ್ದರೂ ಅದರಲ್ಲಿ ಉನ್ನತಿಯನ್ನು ಸಾಧಿಸಲಿದ್ದೀರಿ . ಪ್ರಶಂಸೆಯನ್ನು ಗೌರವವನ್ನು ಪಡೆಯುವ ಕಾಲ .ಜನ್ಮದ ಗುರು ಮಿಶ್ರ ಫಲವನ್ನು ಕೊಡುವವನು .ಮಾತಿನಲ್ಲಿ ಮೃಧುತ್ವವಿರಲಿ . ಒಂದು ಒಳ್ಳೆಯ ಮಾತಿಗೂ ನಮ್ಮಲ್ಲಿ ದರಿದ್ರವೇ ? ನಾಗ ದೇವರ ಆರಾಧನೆ ನಿಮಗೆ ಅಗತ್ಯವಿದೆ “ .ಓಂ ನಮೋ ಭಗವತೇ ಕಾಮರೂಪಿಣೆ ಮಹಾ ಬಲಾಯ ನಾಗಾದಿ ಪತಯೇ ನಮ: “’108 ಬಾರಿ ಹೇಳುತ್ತಾ ಬನ್ನಿರಿ . ಬೆಳಿಗ್ಗೆ ಸ್ನಾನ ಮಾಡಿ ಬಂದ ಕೂಡಲೇ ಹೇಳಬಹುದಾದ ಒಳ್ಳೆಯ ಸಮಯವಾಗಿದೆ . ಕೇತು ಜಾಗ್ರತೆಯಲ್ಲಿ ಇರುವಂತೆ ಸೂಚನೆ ಕೊಡುತ್ತಿದ್ದಾನೆ .
ವೃಷಭ : ಯಾವುದೇ ಶುಭ ಫಲಗಳಿಗೆ ಮೇ ಒಂದರ ವರೆಗೆ ಕಾಯಲೇ ಬೇಕಾದ ಅನಿವಾರ್ಯತೆ ನಿಮಗಿದೆ . ದೈವ ಬಲ ಕಡಿಮೆಯಿರುವ ನೀವು ಪ್ರತಿನಿತ್ಯ 108 ಬಾರಿ “ಓಂ ನಮ: ಶಿವಾಯ “ ಹೇಳುವುದು ಅವಶ್ಯವಾಗಿದೆ . ಹೊಸ ವ್ಯವಹಾರಕ್ಕೆ ಕೈ ಹಾಕುವ ಮೊದಲು ಯೋಚಿಸಿ ಮುನ್ನೆಡೆಯಿರಿ. ಅನಾಥಾಲಯದಲ್ಲಿ ಅನ್ನ ದಾನ ಸೇವೆ ನಿಮ್ಮಿಂದ ನಡೆಯಲಿ. ಕೇತು ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಖಿನ್ನತೆಯನ್ನು ತರಲಿದ್ದಾನೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯೇ ನಿಮಗೆ ಅತೀ ಅಗತ್ಯವಾಗಿದೆ, ಸರಿಯಾದ ಸಮಯಕ್ಕೆ, ಸರಿಯಾದ ,ಒಳ್ಳೆಯ ಊಟ ನಿಮಗೆ ಅವಶ್ಯವಾಗಿದೆ . ಶುಕ್ರ ಮತ್ತು ಬುಧ ಕೆಲವೇ ದಿನಗಳಲ್ಲಿ ಕುಂಭ ರಾಶಿಗೆ ಬರಲಿದ್ದಾರೆ
ಮಿಥುನ : ದೇವರ ಅನುಗ್ರಹವಿರುವುದರಿಂದ ಉಳಿದ ಗ್ರಹರು ಮಾಡುವ ಅಶುಭ ಫಲವನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿರಲಿದೆ. ದಿನಾಕ 07 ರಂದು ಬುಧ ಮತ್ತು ಶುಕ್ರ ಕುಂಭ ರಾಶಿಗೆ ಸಂಚಾರ ಮಾಡಲಿದ್ದಾರೆ .ಅಲ್ಲಿಯ ವರೆಗೆ ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಮನೆಯ ಸದಸ್ಯರೊಂದಿಗೆ ಇರಲಿದೆ. ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ. ಮಗುವಿನ ನಡಿಗೆಯಂತಿರಲಿ ನಿಮ್ಮ ನಡಿಗೆ . ಹಿರಿಯರಿಗೆ ಕೊಡಬೇಕಾದ ಗೌರವ ನೀವು ಕೊಡಲೆ ಬೇಕು .ರಾಜಕೀಯದಲ್ಲಿ ಬಹಳ ವೇಗವಾಗಿ ಬದಲಾವಣೆಗಳು ನಡೆಯುತ್ತಿವೆ. ನಿಮ್ಮ ಮನಸ್ಸು ಕೂಡಾ ತೂಗುಯ್ಯಾಲೆಯಲ್ಲಿದೆ . ಮಕ್ಕಳ ಅನಾರೋಗ್ಯ ಸ್ಥಿತಿ ಕೂಡಾ ನಿಮಗೆ ಬೇಸರವನ್ನು ತರಲಿದೆ .ವಿಷ್ಣು ಸಹಸ್ರ ನಾಮ ಪಾರಾಯಣವೊಂದೇ ನಿಮಗೆ ಪರಿಹಾರವಾಗಲಿದೆ .
ಕರ್ಕಾಟಕ : ಈ ವಾರ ನಿಮಗೆ 8 ನೇ ಮನೆಯಲ್ಲಿ ರವಿ ಬುಧ ಶನಿ ಇರುವುದನ್ನು ನೀವು ಗಮನಿಸಲೇ ಬೇಕು .ಯಾವುದೇ ವ್ಯವಹಾರ ಅಥವಾ ನೀವು ಮಾಡುತ್ತಿರುವ ಉದ್ಯೋಗ ,ನಿಮ್ಮ ಆರೋಗ್ಯ ಯಾವುದೇ ಖರೀಧಿ ಮಾಡುವಾಗ ಅನೇಕ ಬಾರಿ ಯೋಚನೆ ಮಾಡಿ ಮುಂದುವರಿಯಬೇಕು . ಮಾತು ಕೊಡುವಾಗ ,ಹಣ ಕೊಡುವಾಗ ಎಚ್ಚರವಿರಲಿ . ದಾಂಪತ್ಯದಲ್ಲಿ ವಿರಸ ಬರದಂತೆ ಎಚ್ಚರವಿರಲಿ .ಅನ್ಯ ಮಹಿಳೆಯರಲ್ಲಿ ವ್ಯವಹಾರವನ್ನು ಮಾಡುವಾಗ ಎಚ್ಚರವಿರಲಿ . ಒಮ್ಮೆ ವೈದ್ಯರ ದರ್ಶನ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಿರಿ .ವಿದ್ಯಾರ್ಥಿಗಳು ಎಚ್ಚರವಹಿಸಿರಿ. ಪ್ರೀತಿ ಪ್ರೇಮದ ಹಿಂದೆ ತಿರುಗುವವರು ದುರ್ಗೆಯ ಪೂಜೆಯನ್ನು ಮಾಡುತ್ತಾ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿರಿ .
ಸಿಂಹ: ಸಪ್ತಮದಲ್ಲಿ ರವಿ ಶನಿ ಬುಧ ರಿದ್ದಾರೆ ,ದಾಂಪತ್ಯದ ಸಂತೋಷ ನಿಮ್ಮ ಕೈಯಲ್ಲಿದೆ . ಗುರು ಭಾಗ್ಯದಲ್ಲಿ ಇರುವುದರಿಂದ ದೈವಾನುಗ್ರಹ ಉತ್ತಮವಾಗಿದೆ .ತಂದೆಯವರಿಂದ ಕೊಡುಗೆಯೊಂದು ,ಹಿರಿಯರ ಆಸ್ತಿಯಲ್ಲಿ ಪಾಲೊಂದು ನಿಮಗೆ ಸಿಗಲಿದೆ. ಮಾತು ಹಿಡಿತದಲ್ಲಿರಲಿ . “ ಮಾತು ಆಡಿದರೆ ಆಯ್ತು ,ಮುತ್ತು ಒಡೆದರೆ ಹೋಯ್ತು. “ಹಿಂದಿನ ದಿನದ ಆಹಾರವನ್ನು ಸ್ವೀಕರಿಸಬೇಡಿರಿ . ದೇವರನ್ನುಕಾಣಲು ಊರು ಊರು ಸುತ್ತುವ ಅಗತ್ಯವಿಲ್ಲ.ಭಕ್ತಿಎನ್ನುವುದು ಪ್ರದರ್ಶನದ ಸರಕಲ್ಲ. ನಮ್ಮಶುದ್ಧವಾದ ಮನಸ್ಸೇ ದೇವಾಲಯ ಇದು ರಾಹು ನಿಮಗೆ ತಿಳಿಸುವ ವಿಷಯವಾಗಿದೆ . ಹಿರಿಯರ ಅನಾರೋಗ್ಯದ ಕಡೆಗೆ ನಿಮ್ಮ ಗಮನವಿರಲಿ.
ಕನ್ಯಾ : ಕೇತು ಒಬ್ಬ ಪಾಪ ಗ್ರಹನಾಗಿ ಜನ್ಮ ರಾಶಿಯಲ್ಲಿ ಬಂದಾಗ ಮನಸ್ಸಿಗೆ ಅಸಮಾಧಾನ ಬರಲಿದೆ . ಇದರಿಂದಾಗಿ ಅನಗತ್ಯವಾದ ವಿವಾದಗಳು ಬರಲಿವೆ .”ಓಂ ಕ್ಷಿಪ್ರ ಪ್ರಸಾದಾಯನಮ: ‘ ಈ ಮಂತ್ರವನ್ನು 108 ಬಾರಿ ಹೇಳಿರಿ . ಇದು ಗಣಪತಿಯ ಮಂತ್ರವಾಗಿದೆ .ಪಂಚಮದಲ್ಲಿ ಕುಜ ಶುಕ್ರರಿದ್ದಾರೆ .ಮಕ್ಕಳ ವಿಚಾರವಾಗಿ ನಿಮ್ಮ ಮಾತು ನಿಮ್ಮ ಸಹೋದರ ವರ್ಗದವರ ಮಾತು ಬೇಸರವನ್ನು ತರಲಿದೆ .ರವಿ ಬುಧ ಶನಿ 6 ನೇ ಮನೆಯಲ್ಲಿ ಇರುವುದು ಈ ವಾರ ಅನೇಕ ವಿಚಾರಗಳಲ್ಲಿ ಸಮಾಧಾನವನ್ನು ಹೊಂದುವಿರಿ .ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಸಿಗಲಿದೆ .ಪತ್ನಿಯ ,ತಾಯಿಯವರ ವೈಮನಸ್ಸು ,ಅನಾರೋಗ್ಯ ಮುಂದುವರಿಯಲಿದೆ “ಓಂ ನಮ: ಶಿವಾಯ “ 108 ಬಾರಿ ಮೇ ಒಂದರ ವರೆಗೆ ಹೇಳಿರಿ .
ತುಲಾ : ಸಪ್ತಮದಲ್ಲಿ ಇರುವ ಗುರು ಮೇ ಒಂದರ ವರೆಗೆ ನಿಮಗೆ ಉತ್ತಮ ದೈವಾನುಗ್ರಹವನ್ನು ನೀಡುತ್ತಾ ಮದುವೆಯ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಅವಕಾಶ ಇದೆ .ಮುಂದುವರಿಸಬೇಡಿರಿ. ಕುಜ ಮತ್ತು ಶುಕ್ರ ಮದುವೆ ಆಗುವವರಿಗೆ ,ಆದವರಿಗೆ ಬಹಳ ಪ್ರಧಾನವಾದ ಗ್ರಹರು ಮನಸ್ಸಿಗೆ ನೆಮ್ಮದಿಯನ್ನು ಕೊಡುವವರು ,ಆರೋಗ್ಯವನ್ನು ಕೊಡುವವರು, ಕೇವಲ ನಿಮ್ಮ ವರ್ತನೆಯಿಂದ ಹಾಳು ಮಾಡಿ ಕೊಳ್ಳಬೇಡಿರಿ.ಯಾರನ್ನೋ ಪ್ರೀತಿಸುತ್ತಾ ಯಾರನ್ನೋ ಮದುವೆಯಾಗಿ ನಿಮ್ಮ ಜೀವನ ,ಅವರ ಜೀವನವನ್ನು ಹಾಳು ಮಾಡಬೇಡಿರಿ . ದುರ್ಗೆಯ ಲಲಿತಾ ಸಹಸ್ರನಾಮವನ್ನು ನಿತ್ಯವೂ ಪಾರಾಯಣ ಮಾಡಿರಿ .
ವೃಶ್ಚಿಕ : ಸುಖ ಸ್ಥಾನದಲ್ಲಿ ರವಿ [10] ಬುಧ [8,11] ಶನಿ [3,4] ಜೊತೆಯಲ್ಲಿ ನಿಮ್ಮ ಉದ್ಯೋಗ ,ಸಂಪಾದನೆ ಆರೋಗ್ಯ ,ಮನೋ ಸ್ಥಿತಿಯ ಪರಿಣಾಮವನ್ನು ಏರುಪೇರು ಮಾಡುವವರಾಗಿದ್ದಾರೆ . ಒಂದೇ ಪರಿಹಾರ ಆದಿತ್ಯ ಹೃದಯ ,ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು . ವಾಹನ ಏರುವಾಗಲೇ ಎಚ್ಚರವಿರಲಿ . ನಿಮ್ಮ ಉದ್ಯೋಗ ಕಬ್ಬಿಣದಲ್ಲಿ ಇದ್ದಾಗ ಬೆಂಕಿಯ ಸಮೀಪ ಇದ್ದಾಗ ಎಚ್ಚರವಿರಲಿ .ಅಮ್ಮನವರಲ್ಲಿ ಗೌರವದಿಂದ ಮಾತನಾಡಿರಿ .ಅವರೇ ಕಣ್ಣಿಗೆ ಕಾಣುವ ದೇವರು .ಶಾಲಾ ಮಾಡುವ ,ಯಾರಿಗೂ ಜಾಮೀನು ನಿಲ್ಲುವ , ಸಮಯವಿದಲ್ಲ. ಪುರಾತನ ಕರ್ಮವನ್ನು ಸೂಚಿಸುವ ರಾಹು ಪಂಚಮದಲ್ಲಿ ಇರುವುದರಿಂದ ನಾಗದೇವರೇ ನಿಮ್ಮನ್ನು ಎಲ್ಲಾ ಆಪತ್ತುಗಳಿಂದ ಪಾರು ಮಾಡಬೇಕಿದೆ .
ಧನು: ಕುಜ ಶುಕ್ರ ದ್ವಿತೀಯಾದಲ್ಲಿರುವುದು ಕುಟುಂಬಸ್ತರಲ್ಲಿ ವಿನಾಕಾರಣ ಸಿಟ್ಟನ್ನು ತರಿಸುವವರಾಗಿದ್ದಾರೆ. ಪಂಚಮದಲ್ಲಿ ಗುರು ಇರುವುದರಿಂದ ಸರ್ವೇಶ್ವರನಾದ ಈಶ್ವರ ದೇವರ ದ್ವಾದಶ ನಾಮಾವಳಿಯನ್ನು ನಿತ್ಯವೂ ಪಾರಾಯಣ ಮಾಡಿರಿ . ಮನೆಯ ನಾಗದೇವರ ಸ್ಮರಣೆ ಅಗತ್ಯವಿದೆ .ರವಿ ಬುಧ ಶನಿ ತೃತೀಯಾದಲ್ಲಿದ್ದು ನಿಮಗೆ ರಾಜ ಯೋಗವನ್ನು ಕರುಣಿಸುತ್ತಿದ್ದಾರೆ ,ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ.ಸಹೋದರ ವರ್ಗದವರಲ್ಲಿ ಹೊಂದಿಕೊಂಡು ಮುಂದುವರಿಯಿರಿ . ಕೇತು ದಶಮದಲ್ಲಿ ಇದ್ದುಕೊಂಡು ನಿಮ್ಮ ಸ್ಥಾನ ಮಾನಗಳನ್ನು ವೃದ್ಧಿ ಮಾಡಲಿದ್ದಾನೆ. ಮನೆಯಲ್ಲಿ ಮಂಗಳ ಕೆಲಸಗಳು ನಡೆಯಲಿವೆ.
.
ಮಕರ : ನಿಮ್ಮ ಜನ್ಮ ರಾಶಿಯಲ್ಲಿ ಕುಜ ಮತ್ತು ಶುಕ್ರ ಇದ್ದಾರೆ [4,11][5,10]ವಿದ್ಯಾರ್ಥಿಗಳಿಗೆ ಶುಭವಾದ ಸಮಯವಾಗಿದೆ . ಕುಜ ನಿಮಗೆ ಮನೆ ,ಆಸ್ತಿ ,ವಾಹನ ಕೊಳ್ಳುವ ಅವಕಾಶವನ್ನು ಕಲ್ಪಿಸಿ ಕೊಡುತ್ತಿದ್ದಾನೆ .ಆದರೆ ನೀವು ನಿಮ್ಮನ್ನು ಯಾವುದೇ ವಿಷಯದಲ್ಲಿ ತೊಂದರೆಯಾಗದಂತೆ ರಕ್ಷಿಸಿ ಕೊಳ್ಳಬೇಕಾಗುತ್ತದೆ .ನಾಗ ದೇವರ ಮೂಲ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಾರಾಯಣ ಮಾಡಿರಿ. ದ್ವಿತೀಯಾದಲ್ಲಿ ರವಿ,ಬುಧ ಶನಿ ಇರುವಾಗ ನೀವು ಹೆಚ್ಚು ಮಾತಾಡುತ್ತೀರಿ . ಕೆಲವೊಮ್ಮೆ ಅದು ಅತೀ ಹೆಚ್ಚಾಗಿ ವಿವಾದಗಳಿಗೆ ಕಾರಣವಾಗಲಿದೆ . ಭೂಮಿ ಪ್ರಾಪ್ತಿಯೋಗವಿದೆ. ನಿಮ್ಮಲ್ಲಿ ಹಿರಿಯರೊಬ್ಬರಿಗೆ ಆರೋಗ್ಯ ಸಮಸ್ಯೆ ಬರಲಿರುವುದನ್ನು ಕೇತು ಸೂಚನೆ ಕೊಡುತ್ತಿದ್ದಾನೆ .
ಕುಂಭ :ನಿಮ್ಮ ಜನ್ಮ ರಾಶಿಯಲ್ಲಿ ರವಿ [7]ಬುಧ [5,8] ಶನಿ[1,12] ಯುತಿಯಾಗಿರುತ್ತಾರೆ ಪತ್ನಿಯೊಂದಿಗೆ ವಿರಸ ಬರುವ ಸೂಚನೆ ಯಿದೆ ,ವಿದ್ಯಾರ್ಥಿಗಳು ಮನಸ್ಸನ್ನು ಚಂಚಲ ಮಾಡಿಕೊಳ್ಳಬಾರದು .ಮಕ್ಕಳ ಆರೋಗ್ಯದ ಕಡೆಗೆ ನಿಮ್ಮ ಗಮನ ಅಗತ್ಯವಿದೆ . ನಿಮಗೆ ನಿಮ್ಮ ಮೇಲೆಯೇ ಗಮನವಿಲ್ಲದಿರುವ ಲಕ್ಷಣವನ್ನು ಸಾಡೇ ಸಾತ್ ಶನಿಯು ನೀಡುತ್ತಿದ್ದಾನೆ .”ಫಿಶ್ ಔಟ್ ಆಫ್ ದಿ ವಾಟರ್ “ನೀರಿನಿಂದ ಹೊರಗೆ ತೆಗೆದ ಮೀನಿನಂತೆ ಎಂಬಂತಾಗಲಿದ್ದೀರಿ . ಕಾಯಾ-ವಾಚಾ-ಮನಸಾ ಒಂದೇ ರೀತಿಯಲ್ಲಿ ಇರಲು ಸಾಧ್ಯವಾಗುವುದಿಲ್ಲ ಎಂದು ರಾಹು ತಿಳಿಸುತ್ತಿದ್ದಾನೆ ಸಹೋದರ ವರ್ಗದವರ ಜೊತೆಗೆ ಕಲಹ ಬರದಂತೆ ಜಾಗ್ರತೆಯಿಂದಿರಿ .
ಮೀನ : ಜನ್ಮದಲ್ಲಿ ರಾಹು ದೇಹಕ್ಕೆ ಆಪತ್ತು ,ಬೀಳುವ ಸಾಧ್ಯತೆ ಇದೆ .ಈವರೆಗೆ ಗುಟ್ಟಾಗಿ ಇತ್ತು ಕೊಂಡಿದ್ದ ವಿಷಯಗಳನ್ನು ಹೊರಗೆ ಪ್ರಕಟಣೆ ಮಾಡಲಿದ್ದೀರಿ . ಭೂ ಸಂಬಂಧವಾದ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. .ದ್ವಿತೀಯಾದಲ್ಲಿ ಗುರು [1,10] ಇದ್ದು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಯೋಗವಿದೆ . ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ನಿರೀಕ್ಷಿಸಬಹುದು. ಲಾಭ ಕ್ಷೇತ್ರದಲ್ಲಿ ಕುಜ [2,9]ಮತ್ತು ಶುಕ್ರ [3,8] ಯುತಿಯಾಗಿ ಇದ್ದಾರೆ ನಿಮ್ಮ ಸಹೋದರಿಯೊಬ್ಬರಿಗೆ ಅನಾರೋಗ್ಯ ನಿಮಿತ್ತ ಸಹಾಯ ಮಾಡುವ ಸಾಧ್ಯತೆ ಇದೆ .ಹಿರಿಯರ ಭೂಮಿ ಪ್ರಾಪ್ತಿ ಯೋಗವಿದೆ . ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು . ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .
ನೀವು ನಡೆಸಲಿರುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು ,ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ಮಾಡಿ ತಿಳಿಸಲಾಗುವುದು .





































