[t4b-ticker]

ವಾರ ಭವಿಷ್ಯ – 10.03.2024 ರಿಂದ 16.03.2024 ರ ವರೆಗೆ – ಕೆ.ಸುಬ್ರಹ್ಮಣ್ಯ ಆಚಾರ್

Picture of RB NEWS

RB NEWS

Bureau Report

ವಾರ ಭವಿಷ್ಯ


ವಿಶೇಷ ದಿನಗಳು :

14.03.2024 :ಮೀನ ಸಂಕ್ರಮಣ
15.03.2024:ಕುಂಭ ರಾಶಿಗೆ ಕುಜನ ಪ್ರವೇಶ


ಮೇಷ: ಗುರು [12, 9] ಜನ್ಮ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು ಮಿಶ್ರ ಫಲವನ್ನು ನೀಡುತ್ತಿರುವನು . ಮೇ ಒಂದರ ನಂತರ ಒಳ್ಳೆಯ ಸಮಯ ಉದಯವಾಗಲಿದೆ . 6ನೇ ಮನೆಯಲ್ಲಿ ಕೇತು ಸಂಚಾರ ಮಾಡುತ್ತಿದ್ದು ರಾಹು ವ್ಯಯದಲ್ಲಿ ಬುಧನೊಂದಿಗೆ ಇರುವುದರಿಂದ ಕೆಲವೊಂದು ನಷ್ಟಗಳನ್ನು ಅನುಭವಿಸಬೇಕಾಗುವುದು .ಆಹಾರದಲ್ಲಿ ನಿಯಂತ್ರಣವಿರಲಿ . ದಶಮದಲ್ಲಿ ಕುಜ ಮತ್ತು ಲಾಭ ಕ್ಷೇತ್ರದಲ್ಲಿ ಶುಕ್ರ ರವಿ ಶನಿ ಇರುವುದರಿಂದ ಮತ್ತು 15 ರಂದು ಕುಜನು ಲಾಭ ಕ್ಷೇತ್ರಕ್ಕೆ ಬರುವುದರಿಂದ ಹಲವಾರು ವಿಷಯಗಳಲ್ಲಿ ಅನುಕೂಲತೆಯನ್ನು ,ಲಾಭವನ್ನು ಹೊಂದುವ ಸಮಯವಾಗಿದೆ .ಹಲವರು ಹಲವು ರೀತಿಯಲ್ಲಿ ಸಹಕಾರ ನೀಡುವರು .ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .


ವೃಷಭ : ಕೇತು ಪಂಚಮದಲ್ಲಿ ಸಂಚಾರ ಮಾಡುತ್ತಿರುವುದರಿಂದ ಮಾನಸಿಕವಾಗಿ ಖಿನ್ನತೆ ಅನುಭವಿಸುವಿರಿ .ಭಾಗ್ಯದಲ್ಲಿ [12,7] ಕುಜನು ಸಂಚಾರ ಮಾಡುತ್ತಿರುವುದು ಸಂಸಾರದಲ್ಲಿ ಹಿರಿಯರಿಂದ ,ಪತ್ನಿಯಿಂದ ಕೆಲವೊಂದು ಸಮಸ್ಯೆಯನ್ನು ಅನುಭವಿಸುವಿರಿ . ಕರ್ಮ ಕ್ಷೇತ್ರದಲ್ಲಿ ಶನಿ ,ರವಿ ಶುಕ್ರ ಇರುವುದರಿಂದ ಎಲ್ಲರೊಂದಿಗೆ ಹೊಂದಾಣಿಕೆಯನ್ನು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗುವುದು. ನಿಮ್ಮ ಹಣ ಹೂಡುವ ಲೆಕ್ಕಾಚಾರ ತಪ್ಪಾಗಿ ಹೋಗಬಹುದು . ಲಾಭ ಕ್ಷೇತ್ರದಲ್ಲಿ ಬುಧ ಮತ್ತು ರಾಹು ಇರುವುದರಿಂದ ಆಕಾಶದಲ್ಲಿ ಹೊಳೆಯುವ ನಕ್ಷತ್ರದಂತೆ ಕೆಲವೊಂದು ಮೂಲಗಳಿಂದ ಲಾಭವನ್ನು ನಿರೀಕ್ಷಿಸಬಹುದು .ಶಿವನ ಆರಾಧನೆಯನ್ನು ಮಾಡಿರಿ .


ಮಿಥುನ : ಕೇತು ಜನ್ಮರಾಶಿಯಿಂದ 4 ನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದು ,ಈ ಕಾಲ ಘಟ್ಟದಲ್ಲಿ ದೇಹದಲ್ಲಿ ಕೆಲವೊಂದು ವೃಣಗಳು ಹಾಗೂ ಗಾಯಗಳು ಗೃಹ ,ಭೂಮಿ ,ವಾಹನಗಳಿಂದ ಕೆಲವೊಂದು ನಷ್ಟಗಳನ್ನು ಅನುಭವಿಸುವಿರಿ . ಅಷ್ಟಮದಲ್ಲಿ ಕುಜನು 14ನೇ ದಿನಾಂಕದವರೆಗಿದ್ದುನಂತರ ನಿಮ್ಮ ಅನಾರೋಗ್ಯ ಸ್ಥಿತಿಯಲ್ಲಿ ಬದಲಾವಣೆ ಆಗಲಿದೆ ,ಸುಧಾರಣೆಯನ್ನು ಕಾಣುವಿರಿ . ಮನಸ್ತಾಪ ,ಭಿನ್ನಾಭಿಪ್ರಾಯಗಳು ಬರಲಿರುವುದರಿಂದ ಮಾತು ಕಡಿಮೆ ಮಾಡಿರಿ .ಎಚ್ಚರಿಕೆಯಿಂದ ಮುನ್ನೆಡಿಯಿರಿ. ನಾಗ ದೇವರನ್ನು ಪ್ರಾರ್ಥನೆ ಮಾಡಿರಿ .


ಕರ್ಕಾಟಕ : ನೀವು ಬಹಳವಾಗಿ ಎಚ್ಚರಿಕೆ ವಹಿಸಬೇಕಾದ ,ನಿಮ್ಮ ಜಾತಕವನ್ನು ಪರಿಶೀಲನೆ ಮಾಡಿಸಬೇಕಾದ ಸಮಯವಾಗಿದೆ .ಅಷ್ಟಮದಲ್ಲಿ ಶುಕ್ರ ರವಿ ಶನಿ ಪ್ರಸ್ತುತ ಇದ್ದು ದಿನಾಂಕ 15 ರಂದು ಕುಜನ [5,10] ಪ್ರವೇಶ ಆಗಲಿದೆ .ಮನಸ್ಸಿನ ನೆಮ್ಮದಿ ಕಡಿಮೆಯಾಗಲಿದೆ. ನೀವು ಮಾಡುತ್ತಿರುವ ಯಾವುದೇ ಉದ್ಯೋಗ, ವ್ಯವಹಾರದಲ್ಲಿ ತಡೆಯಾದಂತೆ ಭಾಸವಾಗಲಿದೆ .ಗಾಯಗಳು ಆಗದಂತೆ ಎಚ್ಚರ ವಹಿಸಿರಿ .ನರಸಿಂಹ ಮಂತ್ರ ,ಆದಿತ್ಯ ಹೃದಯ ಮಂತ್ರ ,ಮೃತ್ಯುಂಜಯ ಮಂತ್ರವನ್ನು ಪ್ರತಿನಿತ್ಯ ಮಾಡುತ್ತಾ ಬನ್ನಿರಿ , ರಾಹು ಭಾಗ್ಯದಲ್ಲಿ ಇರುವುದರಿಂದ ಕೆಲವೊಂದು ಪುಣ್ಯ ಕ್ಷೇತ್ರಗಳನ್ನು ಸಂಚಾರ ಮಾಡುವ ಸಮಯವಾಗಿದೆ .


ಸಿಂಹ :ಭಾಗ್ಯದಲ್ಲಿ ಗುರು ಮೇ 01 ರ ವರೆಗೆ ಇರುವುಯರಿಂದ ಉತ್ತಮ ದೈವಾನುಗ್ರಹ ಇರುವ ಸಮಯವಾಗಿದೆ . ಕುಟುಂಬದಲ್ಲಿ ಕಲಹಗಳು ಬರದಂತೆ ಎಚ್ಚರ ವಹಿಸುವುದು ಅತೀ ಅಗತ್ಯವಾಗಿದೆ . ಕುಜನು ಸಪ್ತಮಕ್ಕೆ ದಿನಾಂಕ 15 ರಂದು ಪ್ರವೇಶ ಮಾಡುವುದರಿಂದ ಕುಜ ಶನಿ ಶುಕ್ರ ಜೊತೆಯಾಗುವುದರಿಂದ ಆರೋಗ್ಯದ ಬಗ್ಗೆ ,ಹೊಂದಾಣಿಕೆಯ ಬಗ್ಗೆ , ಬಹಳ ಎಚ್ಚರ ವಹಿಸಬೇಕು. ಪ್ರಸ್ತುತ ಕುಜ 6 ನೆಮನೆಯಲ್ಲಿ ಇರುವುದರಿಂದ ನಿಮ್ಮ ಯೋಜಿತ ಅನೇಕ ಕೆಲಸಗಳು ಕೈಗೂಡಲಿವೆ.ಲಲಿತ ಸಹಸ್ರನಾಮ ಪಾರಾಯಣ ಮಾಡಿರಿ ,ನೆರೆಕರೆಯವರಲ್ಲಿ ಮಾತಾಡುವಾಗ ಎಚ್ಚರವಿರಲಿ .


ಕನ್ಯಾ : ಗುರು ಅಷ್ಟಮದಲ್ಲಿ ಸುಖಾಧಿಪತಿ ಸಪ್ತಮಾಧಿಪತಿಯಾಗಿ ಇದ್ದು ಎಲ್ಲಾ ರೀತಿಯ ಸುಖಗಳನ್ನು ಆಹುತಿ ತೆಗೆದುಕೊಳ್ಳುವವನು ಆಗಿರುತ್ತಾನೆ .ಆರೋಗ್ಯದ ತೊಂದರೆಗಳು ಆರ್ಥಿಕವಾಗಿ ಕಷ್ಟ ನಷ್ಟಗಳು ಬರಲಿವೆ. ದಾಂಪತ್ಯದಲ್ಲಿ ರಾಹು ಕೇತುಗಳು ಕಾಟ ಕೊಡಲಿದ್ದಾರೆ . ತಾಳ್ಮೆ ,ಸಹನೆ ,ಕಡಿಮೆ ಮಾತು ಅವಶ್ಯವಾಗಿದೆ . ಪಂಚಮದ ಕುಜ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಬೇಸರ ಬರುವ ಸಾಧ್ಯತೆ ಇದೆ . ನಾಗ ದೇವರ ಪ್ರಾರ್ಥನೆ ಅಗತ್ಯವಿದೆ .6ನೇ ಮನೆಯಲ್ಲಿ ಶನಿ ,ರವಿ ಶುಕ್ರ ಇರುವುದರಿಂದ ಬರುತ್ತಿರುವ ಆದಾಯದಲ್ಲಿ ಹಲವಾರು ಬದಲಾವಣೆಗಳನ್ನು ಸುಧಾರಣೆಯನ್ನು ಕಾಣುವಿರಿ . ಮನೆಯವರೆಲ್ಲರೂ ಮೃತ್ಯುಂಜಯ ಜಪವನ್ನು ಪಾರಾಯಣ ಮಾಡಿರಿ .


ತುಲಾ : ಗುರು ಸಪ್ತಮದಲ್ಲಿ ಇರುವುದರಿಂದ ದೈವಾನುಗ್ರಹದ ಕೊರತೆ ಮೇ ಒಂದರ ವರೆಗೆ ಇರುವುದಿಲ್ಲ .ಪ್ರಸ್ತುತ ಕುಜನು ಸುಖ ಸ್ಥಾನದಲ್ಲಿ ಇದ್ದು ದಿನಾಂಕ 15 ರಂದು ಪಂಚಮಕ್ಕೆ ಹೋಗುತ್ತಾನೆ ಕಲಹಕಾರಕ ಮನಸ್ತಾಪವನ್ನು ತರುವವನು ಆಗಿರುತ್ತಾನೆ .ಪಂಚಮದಲ್ಲಿ ಶನಿ ರವಿ ಶುಕ್ರ ಪ್ರಸ್ತುತ ಇದ್ದು ಮಕ್ಕಳ ವಿಷಯದಲ್ಲಿ ಅವರ ಪ್ರಾಯಕ್ಕೆ ತಕ್ಕಂತೆ ಹೊಂದಿ ಕೊಂಡು ಹೋಗುವುದನ್ನು ಕಲಿಯಿರಿ .ಗೌರವ ಕೊಟ್ಟು ಪಡೆದು ಕೊಳ್ಳುವುದನ್ನು ಕಲಿಯಿರಿ. ವ್ಯಯದಲ್ಲಿ ಕೇತು ಇರುವುದರಿಂದ ಸತ್ಕರ್ಮಗಳಲ್ಲಿ ಆಸಕ್ತಿ ಕಡಿಮೆಯಾಗಲಿದೆ . ಕುಟುಂಬದಲ್ಲಿ ಇತರರಿಗೂ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ .ರಾಹು 6 ರಲ್ಲಿ ಇರುವುದು ಧನ ಆದಾಯವನ್ನು ಕೊಡಲಿರುವನು .


ವೃಶ್ಚಿಕ :ಮೇ 01 ರ ವರೆಗೆ ಚಾತಕ ಪಕ್ಷಿ ನೀರಿಗೆ ಕಾಯುವಂತೆ ಕಾಯಬೇಕಿದೆ . ಗುರು ಆ ದಿನ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ . ಈಗ ನೀವು ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಕಾಲವಾಗಿದೆ. ಕುಜ 15 ರಂದು ಶನಿಯೊಂದಿಗೆ ಸೇರಿಕೊಳ್ಳುತ್ತಾನೆ . ಸತ್ವ ಪರೀಕ್ಷೆಯಲ್ಲಿ ಒಂದೂವರೆ ತಿಂಗಳು ಇದ್ದು ಈಜಿಕೊಂಡು ಎದ್ದು ಬರಬೇಕು. ಮುಖ್ಯವಾಗಿ ಆರೋಗ್ಯದ ಬಗ್ಗೆ ,ಹಣದ ಬಗ್ಗೆ ಭೂಮಿಯ ಬಗ್ಗೆ ,ಯಾರಿಗಾದರೂ ಜಾಮೀನು ಸಹಿ ಹಾಕುವ ಬಗ್ಗೆ ಎಚ್ಚರವಿರಬೇಕು. ಮನಸ್ಸು ಶಾಂತತೆಯಿಂದ ಕೂಡಿರಬೇಕು ,ಒತ್ತಡ ರಹಿತವಾಗಿರಬೇಕು . ವಾಹನ ಚಲಾಯಿಸುವಾಗ ಎಚ್ಚರವಿರಬೇಕು .ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .


ಧನು : ನಾಳದು ದಿನಾಂಕ 15 ರ ವರೆಗೆ ಮಾತು ,ದುಡ್ಡು , ಎಚ್ಚರದಿಂದ ಇರಬೇಕು .ಅದೆಂತಹ ಸಿಟ್ಟು ,ನಿಮ್ಮ ಮಾತು ಕಹಿ ,ಮನಸ್ಸು ಒಳ್ಳೆಯದು .ಆದರೆ ಹನುಮಂತ ಮಾತ್ರಾ ಎದೆಯನ್ನು ತೆರೆದು ರಾಮನಿರುವುದನ್ನು ತೋರಿಸಿದನು .ತೃತೀಯದಲ್ಲಿ ಶನಿ ರವಿ ಶುಕ್ರ ಇದ್ದು ಎಲ್ಲಾ ಮೂಲಗಳಿಂದ ಧನ ಆದಾಯ ಬರಲಿದೆ. ರಾಹು ಸುಖ ಸ್ಥಾನದಲ್ಲಿ ಇದ್ದು ಸುಖವನ್ನು ಸ್ವಾಹಾ ಮಾಡುತ್ತಿದ್ದಾನೆ ನಾಗ ದೇವರ ಸ್ಮರಣೆಯ ಅಗತ್ಯವಿದೆ. ಪಂಚಮದ ಗುರು ಉತ್ತಮವಾದ ದೈವಾನುಗ್ರಹವನ್ನು ಮೇ ಒಂದರ ವರೆಗೆ ಕೊಡಲಿದ್ದಾನೆ. ನೀವು ಈಗದಿಂದಲೇ ವಿಷ್ಣು ಸಹಸ್ರನಾಮ ಪಾರಾಯಣವನ್ನು ಆರಂಭಿಸಿರಿ .


ಮಕರ : ಪ್ರಸ್ತುತ ಕುಜ ಜನ್ಮ ರಾಶಿಯಲ್ಲಿ ಇದ್ದು ನಾಳದು 15 ರಂದು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ . ಪರಿಸ್ಟಿತಿ ಒಂದೇ ರೀತಿಯಾದರೂ ಸ್ವಲ್ಪ ವ್ಯತ್ಯಾಸವಾಗಿದೆ . ಸಿಟ್ಟಿನಿಂದ ,ಉದ್ವೇಗದಿಂದ ಆದಷ್ಟು ದೂರವಾಗಿರಿ .ನಿಮ್ಮ ಜನ್ಮ ರಾಶಿಯ ದ್ವಿತೀಯಾದಲ್ಲಿ ಶನಿ ಶುಕ್ರ ರವಿ ಇದ್ದಾರೆ ಗುರು ಸುಖ ಸ್ಥಾನದಲ್ಲಿ ಇದ್ದಾರೆ . ಅನಾರೋಗ್ಯ ,ವಿವಾದ ,ಕಠಿಣವಾದ ಮಾತುಗಳು ನೀವಾಗಿಯೇ ವಿವಾದವನ್ನು ಮೈ ಮೇಲೆ ಎಳೆದು ಕೊಳ್ಳುವುದು ಈ ಕಾಲದಲ್ಲಿ ಸಾಮಾನ್ಯ ವಾಗಿದೆ . ಮೌನವೇ ನಿಮಗೆ ಈ ಕಾಲದಲ್ಲಿ ಬೇಕಾದ ದಿವ್ಯ ಶಸ್ತ್ರವಾಗಿದೆ .ರಾಹು ಬುಧ ತೃತೀಯಾದಲ್ಲಿ ಇದ್ದು ಧನ ಆದಾಯವನ್ನು ತಕ್ಕ ಮಟ್ಟಿಗೆ ತರಲಿದ್ದಾರೆ .ರಾಜಕೀಯದಲ್ಲಿ ಇರುವವರು ಎಚ್ಚರವಹಿಸಬೇಕು .


ಕುಂಭ : ನಿಮ್ಮ ಜನ್ಮ ರಾಶಿಯಲ್ಲಿ ರವಿ ಶನಿ ಶುಕ್ರ ಪ್ರಸ್ತುತ ಇದ್ದು ದಿನಾಂಕ 15 ರಂದು ಕುಜ ಸೇರಿ ಕೊಳ್ಳಲಿದ್ದಾನೆ . ಪರಸ್ಪರ ವೈರಿಗಳ ಸಂಗಮ . ದೇಹಾರೋಗ್ಯದಲ್ಲಿ ಲೋಹ ಬೆಂಕಿಯಲ್ಲಿ ಜಾಗ್ರತೆ ಬೇಕು .ಪೈತ್ತಿಕವಾದ ತೊಂದರೆಗಳು ಬರಬಹುದು ,ನಿದ್ದೆಯ ಕೊರತೆ ಬರಲಿದೆ .ಹಣದ ವಿಷಯದಲ್ಲಿ ಬಹಳ ಜಾಗ್ರತೆ ,ರಾಜಕೀಯದಿಂದ ದೂರವಿದ್ದಷ್ಟೂ ಒಳ್ಳೆಯದು .ಸಿಟ್ಟು ನಿಮಗಿರುವ ಬಹಳ ದೊಡ್ಡ ನ್ಯೂನತೆಯಾಗಿದೆ. ಯಾರಲ್ಲಿಯೂ ಹೆಚ್ಚು ಮಾತಾಡಬೇಡಿರಿ . ಯಾವುದರಲ್ಲಿಯೂ ಹಣ ತೊಡಗಿಸಲು ಹೋಗಬೇಡಿರಿ ,ನಿಮ್ಮ ಸಮಯ ಪ್ರಸ್ತುತ ಉತ್ತಮವಾಗಿಲ್ಲ .


ಮೀನ : ದ್ವಿತೀಯದಲ್ಲಿ ಗುರು ನಿಮಗೆ ಮೇ ಒಂದರ ವರೆಗೆ ಇದ್ದು ನಂತರ 3 ನೇ ಮನೆಗೆ ಹೋಗಲಿದ್ದು ಗುರುವಿನ ಅನುಗ್ರಹ ಕಡಿಮೆಯಾಗಲಿದೆ .ರಾಹು ಜನ್ಮ ರಾಶಿಯಲ್ಲಿ ಇದ್ದು ಸಪ್ತಮದಲ್ಲಿ ಕೇತು ಇರುವುದರಿಂದ ಸುಖ ಸಂಸಾರದ ಕೀಲಿ ಕೈ ನಿಮ್ಮಲ್ಲಿದೆ . ವ್ಯಯದಲ್ಲಿ ಶುಕ್ರ ರವಿ ಶನಿ ಮತ್ತೆ 15 ಕ್ಕೆ ಕುಜನ ಸೇರ್ಪಡೆ ಹಣದ ವ್ಯರ್ಥ ಖರ್ಚುಗಳನ್ನು ಸೂಚಿಸುತ್ತಿದ್ದಾನೆ .ಆರೋಗ್ಯದ ಬಗ್ಗೆ ಹಿಮೋಗ್ಲೋಬಿನ್ ಕೊರತೆ ,ಹಾರ್ಮೋನ್ಸ್ ವ್ಯತ್ಯಾಸ ಉಂಟಾಗಲಿದೆ ಅಗತ್ಯವೆನಿಸಿದರೆ ವೈದ್ಯರನ್ನು ಭೇಟಿಯಾಗಿರಿ . ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .


ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ತಯಾರಿಸಿ ಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು . ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ಮಾಡಿಕೊಡಲಾಗುವುದು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top