ವಾರ ಭವಿಷ್ಯ
08.09.2024 ರಿಂದ 14.09.2024 ರ ವರೆಗೆ
ವಿಶೇಷ ದಿನಗಳು : 08.09.2024 ………ಋಷಿ ಪಂಚಮಿ
ಮೇಷ : ಉತ್ತಮ ದೈವಾನುಗ್ರಹವಿರುವ ವಾರ .ಶನಿ ಲಾಭ ಕ್ಷೇತ್ರದಲ್ಲಿ ,ಗುರು ದ್ವಿತೀಯಾದಲ್ಲಿ
ಇದ್ದುಕೊಂಡು ಬರುವ ಧನ ಆದಾಯದಲ್ಲಿ ಯಾವುದೇ ಕೊರತೆ ಇರುವುದಿಲ್ಲ.ವಿದ್ಯಾರ್ಥಿಗಳು ತಮ್ಮ
ಅಭಿವೃದ್ಧಿಯಲ್ಲಿ ಸಂತೋಷ ಹೊಂದಲಿದ್ದಾರೆ .ನೀವು ವ್ಯವಹಾರ /ಉದ್ಯೋಗ ಮಾಡುವಲ್ಲಿ
ನಿಮ್ಮಮೇಲೆ ಇಲ್ಲದ ಸಲ್ಲದ ಅಪವಾದ ಹಾಕುವವರಿದ್ದಾರೆ .ಅದನ್ನು ಮನಸ್ಸಿಗೆ
ತೆಗೆದುಕೊಳ್ಳದಿರುವುದೇ ಪರಿಹಾರವಾಗಿದೆ .ಮೇಲಧಿಕಾರಿಗಳಿಂದ ಯಾವುದೇ ಒತ್ತಡ
ಇರುವುದಿಲ್ಲ.ಉದ್ಯೋಗಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿಆಗಲಿದೆ .ನಿಮಗೆ
ಕೊಟ್ಟಿರುವ /ಮಾಡಬೇಕಿರುವ ವ್ಯವಹಾರದಲ್ಲಿ ಒತ್ತಡ ಇರುತ್ತದೆ ,ವಿಷ್ಣು ಸಹಸ್ರನಾಮ ಪಾರಾಯಣ
ಮಾಡಿರಿ.
ವೃಷಭ : ನಿಮ್ಮ ರಾಶ್ಯಾಧಿಪತಿ ಶುಕ್ರ ಕನ್ಯಾ ರಾಶಿಯಲ್ಲಿ ಕೇತುವಿನೊಂದಿಗೆ ಇದ್ದಾನೆ .ಇವನು ಮಾನಸಿಕ
,ದೈಹಿಕ ವ್ಯಾಧಿಯನ್ನು ತರುತ್ತಾನೆ .ಮನಸ್ಸಿಗೆ ಆತಂಕವನ್ನು ವನ್ನು ಜಿಗುಪ್ಸೆಯನ್ನು ತರಲಿದ್ದಾನೆ
.ಕೆಲವೊಮ್ಮೆ ಸುಸ್ತು ,ಬರಲಿದೆ. ನಿಮ್ಮ ವ್ಯವಹಾರ ,ಉದ್ಯೋಗದಲ್ಲಿ ಸಮಸ್ಯೆ ಇರುವುದಿಲ್ಲ ಕೆಲವೊಮ್ಮೆ
ನಿಮ್ಮ ಮಾತೆ ನಿಮಗೆ ಮಾರಕವಾಗಲಿದೆ..ನಿಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ಯೋಚನೆ ಮನಸ್ಸನ್ನೇ
ಹಾಳು ಮಾಡಲಿದೆ .ಸರಕಾರಿ ಕೆಲಸ ಉತ್ತಮವಾಗಿ ನಡೆಯಲಿದೆ.ನಿಮ್ಮ ಮನೆ ವಾಹನ ,ಭೂಮಿ ಕೊಳ್ಳುವ
ಆಸೆ ನೆರವೇರಲಿದೆ .ನಿತ್ಯವೂ ಮನೆಯಲ್ಲಿ ದೇವಿಯ ಸ್ತೋತ್ರ ,ಹೇಳಲು ಮರೆಯಬೇಡಿರಿ .ಯಾರೊಂದಿಗೂ
ಕಲಹಕ್ಕೆ ಹೋಗಬೇಡಿರಿ .ನಿಮ್ಮ ಸಂಗಾತಿಯ ವರ್ತನೆ ಕೆಲವೊಮ್ಮೆ ವಿಚಿತ್ರವಾದೀತು.
ಮಿಥುನ: ನಿಮ್ಮ ರಾಶ್ಯಾಧಿಪತಿ ಬುಧ ರವಿಯೊಂದಿಗೆ ಸಿಂಹ ರಾಶಿಯಲ್ಲಿ ಇದ್ದಾನೆ..ಕುಟುಂಬದಲ್ಲಿ
ಸಹೋದರ ವರ್ಗದವರ ಜೊತೆಗೆ ಹೊಂದಾಣಿಕೆಯ ಜೀವನ ನಡೆಯಲಿದೆ .ಜನ್ಮ ರಾಶಿಯಲ್ಲಿ ಕುಜ ಇದ್ದು
ಉದ್ಯೋಗ ವ್ಯವಹಾರದಲ್ಲಿ ಯೋಚನೆ ಮಾಡಿ ಮುಂದುವರಿಯುವುದು ಒಳ್ಳೆಯದು ನಗುವೇ
ಮಾಯವಾಗಿರುವ ಹೊತ್ತಿನಲ್ಲಿ ವ್ಯವಹಾರ ಮಾಡುವುದು ತುಂಬಾ ಕಷ್ಟವಾಗಿದೆ .ನೀಚ ಶುಕ್ರ ಸುಖ
ಸ್ಥಾನದಲ್ಲಿ ಇರುವುದರಿಂದ ಅವನ ಜೊತೆಗೆ ಕೇತು ಇರುವುದರಿಂದ ಸುಖವೆನ್ನುವುದು ಮರೀಚಿಕೆಯಾಗಲಿದೆ
.ಮರ್ಕಟವೆಂಬಂತಿರುವ ನಿಮ್ಮ ಮನಸ್ಸು ನಿಮ್ಮ ಹತೋಟಿಯನ್ನು ಕಳೆದುಕೊಳ್ಳಲಿದೆ .ನಿಮ್ಮ ಮಗಳ
ಸಹಾಯ ನಿಮಗೆ ದೊರಕಿ ಬರಲಿದೆ .ಮಗಳ ವರ್ತನೆಯ ಬಗ್ಗೆ ನಿಮ್ಮ ಗಮನ ಅಗತ್ಯವಿದೆ.
ಕರ್ಕಾಟಕ : ಅಷ್ಟಮದಲ್ಲಿ ಇರುವ ಶನಿಗೆ “ವಿಷ್ಣು ಸಹಸ್ರನಾಮ ಪಾರಾಯಣ ಮಾಡಲೇ ಬೇಕು
.ವಿದ್ಯಾರ್ಥಿಗಳು ಸಂಧ್ಯಾಕಾಲದಲ್ಲಿ ಪಾರಾಯಣವನ್ನು ಇಟ್ಟುಕೊಳ್ಳಬೇಕು .ದ್ವಿತೀಯಾದಲ್ಲಿ ರವಿ
ಮತ್ತು ಬುಧ ಇರುವುದರಿಂದ ಬರಬೇಕಾದ ಹಣ ಬರಲಿದೆ .ಕುಟುಂಬದಲ್ಲಿ ,ಮನೆಯಲ್ಲಿ
,ಮಾತನಾಡುವಾಗ ಮನಸ್ತಾಪ ಬರದಂತೆ ನಿಮ್ಮ ಮಾತನ್ನು ಬಳಸಿಕೊಳ್ಳಿರಿ .ಯಾರನೂ ದೂರ
ಮಾಡಿಕೊಳ್ಳಬೇಡಿರಿ .ನೀವು ಮಾಡುವ ವ್ಯವಹಾರ ,ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗಲಿದೆ . ಮನೆಭೂಮಿ ಖರೀಧಿ ಯೋಗವಿದೆ .ಮಕ್ಕಳೊಂದಿಗೆ ಪ್ರಾಯಕ್ಕೆ ತಕ್ಕಂತೆ ಮೃಧುವಾದ ಮಾತಿರಲಿ .ನಾಗ ದೇವರ
ಪ್ರಾರ್ಥನೆ ಅಗತ್ಯವಿದೆ.
ಸಿಂಹ : ನಿಮಗೆ ಈ ವಾರ ಅತ್ಯಂತ ಶುಭ ದಾಯಕವಾದ ವಾರವಾಗಿದೆ .ಹೆಚ್ಚಿನ ಗ್ರಹರು ಅನುಕೂಲ
ಸ್ಟಿತಿಯಲ್ಲಿಯೇ ಇದ್ದಾರೆ ,ನಿಮ್ಮ ಜನ್ಮ ರಾಶಿಯಲ್ಲಿ ರವಿ ಮತ್ತು ಬುಧ ಇರುವುದರಿಂದ ವಯಕ್ತಿಕವಾಗಿ
ಮಾಡುವ ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಲಿದೆ .ಶ್ರಮಕ್ಕೆ ತಕ್ಕಂತೆ ಫಲವನ್ನು ಅನುಭವಿಸುವಿರಿ
.ಧನ ಸ್ಥಾನದಲ್ಲಿ ನೀಚ ಶುಕ್ರನಿರುವುದರಿಂದ ವ್ಯರ್ಥ ಖರ್ಚು ಬರುತ್ತಿರುತ್ತದೆ ಪರಿಹಾರ ಅಗತ್ಯವಿರುತ್ತದೆ
.ಕೆಲಸದ ಒತ್ತಡ ಇರುತ್ತದೆ.,ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಸಾಧ್ಯತೆ ಇದೆ
.ಮೇಲಧಿಕಾರಿಗಳ ಪ್ರಶಂಸೆ ಸಾಧ್ಯತೆ ,ಅದ್ಯಾಪಕ ವೃತ್ತಿ ಮಾಡುವವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಸಿಗುವ
ಸಾಧ್ಯತೆ ಇರುತ್ತದೆ.
ಕನ್ಯಾ : ದೈವಾನುಗ್ರಹದ ಬಲ ಉತ್ತಮವಾಗಿರುವ ನಿಮ್ಮ ಹೆಚ್ಚಿನ ದುಡಿಮೆ ,ಪ್ರಯತ್ನ ಬಲ ನಿಮ್ಮನ್ನು
ಮುನ್ನೆಡೆಗೆ ಕೊಂಡೊಯ್ಯಲಿದೆ .ನಿಮ್ಮ ಕೆಣ್ಣೆದುರು ಬರಲಿರುವ ಉತ್ತಮ ಅವಕಾಶಗಳನ್ನು
ಅನುಕೂಲವಾದ ರೀತಿಯಲ್ಲಿ ಉಪಯೋಗಿಸಿಕೊಡು ಬಂದಲ್ಲಿ, ಬರಲಿರುವ ಹೆಚ್ಚಿನ ಕಷ್ಟ ನಷ್ಟಗಳು
ಉಪಶಮನ ವಾಗಲಿದೆ ಅವಿವಾಹಿತರಿರಿಗೆ ಕಂಕಣ ಬಲದ ಯೋಗವಿದೆ..ಶುಕ್ರ ನೀಚನಾಗಿ ಜನ್ಮರಾಶಿಯಲ್ಲಿ
ಇರುವುದರಿಂದ ಅನ್ಯ ಮಹಿಳೆಯೊಬ್ಬರು ವಿವಾಹ ತಪ್ಪಿಸಲು ಪ್ರಯತ್ನ ಪಡುವವರು ಇದ್ದಾರೆ .ನಿಮ್ಮ
ಪ್ರಯತ್ನಬಲ ಅಗತ್ಯವಿದೆ . ಸಪ್ತಮದಲ್ಲಿ ಭಾಧಕ ಸ್ಥಾನದಲ್ಲಿ ಇರುವ ರಾಹುವಿಗೆ ಪರಿಹಾರವಾಗಿ
ನಾಗದೇವರ ಆರಾಧನೆ ಅಗತ್ಯವಿದೆ.
ತುಲಾ : ಗುರು ಅಷ್ಟಮದಲ್ಲಿ ಇದ್ದರೆ ಶುಕ್ರ ನೀಚನಾಗಿ ಅಷ್ಟಮಾಧಿಪತಿಯಾಗಿ ವ್ಯಯದಲ್ಲಿ
ಇರುವುದರಿಂದ ಪರಿಹಾರವನ್ನು ಮಾಡಿಕೊಳ್ಳಿರಿ ಆರೋಗ್ಯವನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಸಾಕಷ್ಟು
ಪ್ರಯತ್ನ ಬಲ ಹಣ ವ್ಯಯವಾಗಲಿದೆ .ಸಮಸ್ಯೆಗಳು ಮೇಲಿಂದ ಮೇಲೆ ಎದುರಾಗಲಿವೆ.ಕೆಲಸ
ಕಾರ್ಯಗಳಲ್ಲಿ ಹೆಚ್ಚಿನ ಪ್ರಯತ್ನ ವ್ಯಾಪಾರ ಉದ್ದಿಮೆಗಳಲ್ಲಿ ನಿಧಾನಗತಿ ,ಹಾಗೆಯೇ ಪ್ರತಿಸ್ಪರ್ಧಿಗಳಿಂದ
ಪೈಪೋಟಿ –ಒಳಸಂಚುಗಳಿಂದ ಮನಸ್ಸಿಗೆ ಬೇಸರ ಕಂಡು ಬರಲಿದೆ.ಪಂಚಮದ ಶನಿಯ ಕಾಟವೂ ಇರುತ್ತದೆ
.ತನ್ನವರ ಜೊತೆಗೆ ಬೇಸರವನ್ನು ಬೆಳೆಸಿಕೊಳ್ಳಬೇಡಿರಿ 70+ ಆದವರು ಬರುವ ಜನ್ಮದಲ್ಲಿ ಉತ್ತಮ
ಸಾಧನೆಗಾಗಿ ವಿಷ್ಣು ಸಹಸ್ರನಾಮವನ್ನು ನಿತ್ಯವೂ ಹೇಳಬೇಕು .ನಾರಾಯಣ ನಾರಾಯಣ ಅಥವಾ ಓಂ
ನಮೋ ನಾರಾಯಣಾಯ ಹೇಳಿರಿ.
ವೃಶ್ಚಿಕ : ಕುಜ ಅಷ್ಟಮಕ್ಕೆ ಬಂದಿದ್ದಾನೆ .ಅವನು ಜನ್ಮಾಧಿಪತಿ ಮತ್ತು 6 ನೇ ಮನೆಯವನು
.ತನ್ನವರಿಂದಲೇ ಬೇಸರ-ಅದರಿಂದ ಮಾನಸಿಕ ಒತ್ತಡ .ಬುದುಕೇ ಬೇಡವೆಸುವುದು ನಡೆಯುತ್ತದೆ .ಮಹಾ
ಸುಧರ್ಶನ ಮಂತ್ರವನ್ನು ಹೇಳುವುದು ಅಗತ್ಯವಿದೆ .ಸುಖ ಸ್ಥಾನದ ಶನಿಗೆ ವಿಷ್ಣು ಸಹಸ್ರನಾಮ ಪಾರಾಯಣ
ಮಾಡಿರಿ .ಶನಿಯ ಪ್ರತಿಕೂಲತೆಯಿಂದಾಗಿ ಮಾನಸಿಕ ದೈಹಿಕ ಆರ್ಥಿಕವಾಗಿ ತಾಪತ್ರಯಗಳ ತೋರಿಬಂದರೂ
ಸಪ್ತಮದ ಗುರು,ಲಾಭ ಕ್ಷೇತ್ರದ ಶುಕ್ರನ ಶುಭ ಫಲ ದಿಂದಾಗಿ ಅಡೆತಡೆಗಳಿಗೆ ಉಪಶಮನ ತೋರಿ ಬಂದು
ಕೆಲಸಕಾರ್ಯಗಳು ಸರ್ವ ರೀತಿಯಿಂದರೂ ಯಶಸ್ವಿಯಾಗಲಿವೆಕುಟುಂಬದಲ್ಲಿ ವಾದ-ವಿವಾದಗಳಿಂದ ಮಾನಸಿಕ ಕ್ಲೇಶ ಬರಲಿದೆ .ಆರ್ಥಿಕ ಹಾನಿ ಸತ್ಕರ್ಮ-ಅನುಷ್ಟಾನದಲ್ಲಿ ವಿಮುಖತೆ ತೋರಿ ಬಾರದಂತೆ
ದುರ್ಗೆಯ ಪ್ರಾರ್ಥನೆ ಮಾಡಿರಿ.
ಧನು : ದೈವಾನುಗ್ರಹದ ಕೊರತೆ ಇದೆ .ಸಪ್ತಮದಲ್ಲಿ ಕುಜನಿದ್ದಾನೆ .ಸುಖ ಸ್ಥಾನದಲ್ಲಿ ರಾಹು ಇದ್ದಾನೆ.
ಕುಜ ಪಂಚಮಾಧಿಪತಿ ವ್ಯಯಾಧಿಪತಿಯಾಗಿದ್ದಾನೆ .ಗ್ರಹಗಳ ಪ್ರತಿಕೂಲತೆಯಿಂದಾಗಿ ವ್ಯಾವಹಾರಿಕವಾಗಿ
,ಸಾಮಾಜಿಕವಾಗಿ ,ಉದ್ಯೋಗ ಕ್ಷೇತ್ರದಲ್ಲಿ ಆಗಾಗ ವಾದ-ವಿವಾದ ಅನಾವಶ್ಯಕ ಭಾವೋದ್ವೇಗಗಳಿಗೆ ಬಲಿ
ಬೀಳದಂತೆ ನರಸಿಂಹ ದೇವರ ಜಪವನ್ನು ಮಾಡಬೇಕು.ದೂರ ಸಂಚಾರದಲ್ಲಿ ಸದ್ಯ ಆಸಕ್ತಿ ವಹಿಸದಿರಿ
.ಅನಿರೀಕ್ಷಿತ ಆರೋಗ್ಯಹಾನಿ ತೋರಿಬರುವುದರಿಂದ ಆದಷ್ಟು ಗಮನ ಇರಲಿ.ಕಾರ್ಯ ಕ್ಷೇತ್ರದಲ್ಲಿ
ಅಸಹಕಾರ ಕಾರ್ಯ ವಿಳಂಬದಿಂದ ಕಿರಿಕಿರಿ ಇರುತ್ತದೆ . ಯಾರಿಗೂ ಉಪದೇಶ ಮಾಡಲು ಹೋಗಬೇಡಿರಿ.
ಮಕರ : ದೈವಾನುಗ್ರಹ ಉತ್ತಮವಾಗಿ ಇರುತ್ತದೆ .ವಿರೋಧಿಗಳ ಉಪಟಳ ಶನಿಯ ಕಾರಣದಿಂದಾಗಿ
ಸ್ವಾಭಾವಿಕವಾಗಿಯೇ ಇರುತ್ತದೆ .ನೀವು ಮಾಡುವ ವ್ಯವಹಾರಗಳಲ್ಲಿ ,ಉದ್ಯೋಗ ಕ್ಷೇತ್ರದಲ್ಲಿ ಆಗಾಗ
ವಾದ ವಿವಾದ ಇರುತ್ತದೆ .ವ್ಯರ್ಥ ಖರ್ಚು ಬರದಂತೆ ಎಚ್ಚರ ವಹಿಸಿರಿ .ಕುಟುಂಬ ವರ್ಗದವರು ಪ್ರೀತಿ-
ವಿಶ್ವಾಸ ಸಹಕಾರವನ್ನು ತೋರಿಸಬೇಕು ಶುಕ್ರ ಅನಾವಶ್ಯಕವಾದ ಬೆಲೆಬಾಳುವ ವಸ್ತುಗಳ ಖರೀಧಿಯನ್ನು
ಮಾಡಿಸುತ್ತಾನೆ .ಅನಿರೀಕ್ಷಿತವಾಗಿ ನಿಮ್ಮ ಮೇಲೆ ಒಂದು ಅಪವಾದ ಬರುವ ಸಾಧ್ಯತೆ ಇದೆ .ದುರ್ಗಾ
ಪೂಜೆಯನ್ನು ಮಾಡಿಸುವುದು ಅಗತ್ಯವಾಗಿದೆ .ವಾಯನ ದಾನ ಮಾಡಿಸುವುದು ಅಗತ್ಯವಾಗಿದೆ.
ಕುಂಭ : ಜನ್ಮ ರಾಶಿಯಲ್ಲಿ ಇರುವ ಶನಿ ,ಸಪ್ತಮದಲ್ಲಿ ಇರುವ ರವಿ ಮತ್ತು ಬುಧ ನಿಮ್ಮ ಸಂಸಾರದ
ನೆಮ್ಮದಿಯನ್ನು ನುಂಗಿ ಹಾಕಲಿವೆ .ಅನ್ಯ ,ಅಪರಿಚಿತ ಮಹಿಳೆಯರ ಬಗ್ಗೆಯೂ ಜಾಗ್ರಯಿರಲಿ .ನೀವು
ಮಾಡುವ ಕಾರ್ಯ ಕ್ಷೇತ್ರಗಳಲ್ಲಿ ಅಡ್ಡಿ-ಆತಂಕಗಳು ಉದ್ಯೋಗದಲ್ಲಿ ಬದಲಾವಣೆ,ಆಸ್ತಿ-ಪಾಸ್ತಿಗಳಿಗೆ
ಸಂಬಂಧಿಸಿದಂತೆ ತಾಪತ್ರಯಗಳು ಕಂಡುಬರಲಿವೆ .ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ,ದು:ಖ ಭಯಗಳು
,ವ್ಯಾಜ್ಯ ತಕರಾರುಗಳು ,ಮಾನಸಿಕ ಒತ್ತಡ ಉದ್ವೇಗ ಕೆಲವೊಂದು ಹಗರಣಗಳಿಂದ ಗೌರವಕ್ಕೆ
ಚ್ಯುತಿಯಾದರೂ ವಿವಿಧ ಮೂಲಗಳಿಂದ ಧನಾರ್ಜನೆಯು ಸಾಕಷ್ಟು ವೃದ್ಧಿಯಾಗಿ ಮುನ್ನೆಡೆ ಇರುತ್ತದೆ.
ಮೀನ : ದೈವಾನುಗ್ರಹದ ಕೊರತೆ ,ಸಪ್ತಮದಲ್ಲಿ ನೀಚ ಶುಕ್ರ,ಅವನ ಜೊತೆಗೆ ಕೇತು ,ಸುಖ ಸ್ಥಾನದಲ್ಲಿ
ಕುಜ ,ವ್ಯಯದಲ್ಲಿ ಶನಿ ಇರುವುದರಿಂದ ಆರೋಗ್ಯ ,ಆರ್ಥಿಕ –ವಿಚಾರಗಳ ಬಗ್ಗೆ ಹೆಚ್ಚಿನ ಗಮನ
ವ್ಯಯಿಸಬೇಕಾಗುತ್ತದೆ .ನೀವು ಯಾವುದೇ ಪ್ರಾಯದವರು ಇರುಬಹುದು …ಒಬ್ಬ ಅಪರಿಚಿತ –ಪರಿಚಿತ
ಮಹಿಳೆಯಿಂದ ಅಪವಾದ ಕೇಳುವ ಸಾಧ್ಯತೆ ದಟ್ಟವಾಗಿದೆ .ಕೋರ್ಟ್ –ಕಚೇರಿ ಕಾರ್ಯಗಳಲ್ಲಿ ಅನಾವಶ್ಯಕ
ಅಡ್ಡಿ ಆತಂಕಗಳು ,ಕಾರ್ಯ ಕ್ಷೇತ್ರದಲ್ಲಿ ಅಭಿಪ್ರಾಯ ಭೇಧಗಳಿಂದಾಗಿ ಮನಸ್ತಾಪ ಕುಟುಂಬದಲ್ಲಿ ನಾನಾ
ರೀತಿಯ ಖರ್ಚು ವೆಚ್ಚಗಳಿಂದಾಗಿ ಧನವ್ಯಯ ,ಸಂಬಂಧಿಕರಿಂದ ಕೆಟ್ಟ ಮಾತು ಕೇಳಿ ಬಂದೀತು .ದೇವಿ
ಚಾಮುಂಡಿಯ ಪ್ರಾರ್ಥನೆ ಅತೀ ಅಗತ್ಯವಾಗಿದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು ,ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು .ವಿವಾಹ ಹೊಂದಾಣಿಕೆ/ವಾಸ್ತು ಸಲಹೆ ತಿಳಿಸಲಾಗುವುದು.



































