ವಾರ ಭವಿಷ್ಯ ದಿನಾಂಕ 30.06.2024 ರಿಂದ ದಿನಾಂಕ 06.07.2024 ರವರೆಗೆ
ವಿಶೇಷ ದಿನಗಳು : 06.07.2024….ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶ
ಮೇಷ :ಉತ್ತಮ ದೈವಾನುಗ್ರಹ ಇರುವ ಸಮಯವಾಗಿರುವುದರಿಂದ ನೀವು ಕೈಗೊಳ್ಳುವ ಯಾವುದೇ
ವ್ಯವಹಾರ ಉದ್ಯೋಗದಲ್ಲಿ ಯಶಸ್ವಿಯನ್ನು ಕಾಣುವಿರಿ .ಭಾಗ್ಯಾಧಿಪತಿ ಗುರು ಆಗಿರುವುದರಿಂದ
ಭಡ್ತಿಯೋಗವನ್ನು ನಿರೀಕ್ಷಿಸಬಹುದು .ಸಮಾಜದಲ್ಲಿ ಗೌರವ ಸಿಗಲಿದೆ .ಮಂಗಳ ಕೆಲಸಗಳಲ್ಲಿ
ಭಾಗವಹಿಸಲಿದ್ದೀರಿ .ಉತ್ತಮ ಧನಾಗಮನವಾಗಲಿದೆ .ಬುಧ ಸುಖ ಸ್ಥಾನದಲ್ಲಿ ಇದ್ದುಕೊಂಡು ಮನೆ
ವಾಹನ ಭೂಮಿ ಖರೀದಿಸುವ ಯೋಗ ಬರುವಂತೆ ಮಾಡಲಿದ್ದಾನೆ .ಕುಜ ನಿಮ್ಮ ಆರೋಗ್ಯದ ಕಡೆಗೆ ಗಮನ
ಹರಿಸುವಂತೆ ತಿಳಿಸುತ್ತಿದ್ದಾನೆ . ನಿಮನ್ನು ಹೊಗಳಿ ಕೆಲವರು ಅವರ ಕೆಲಸವನ್ನು ಮಾಡಿಸಿಕೊಳ್ಳಲಿದ್ದಾರೆ
.ಕೆಲವೊಮ್ಮೆ ನಿಮ್ಮದಲ್ಲದ ತಪ್ಪನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬರಲಿದೆ .ಜ್ವರ ಬರದಂತೆ
ಎಚ್ಚರವಹಿಸಿರಿ .
ವೃಷಭ : ಜನ್ಮದ ಗುರು ಮತ್ತು ಲಾಭ ಕ್ಷೇತ್ರದ ರಾಹು ಈ ವಾರ ನಿಮ್ಮನ್ನು ಸರ್ವ ವಿಧದಿಂದ
ಕಾಪಾಡುತ್ತಾರೆ .ಸಂಸಾರದ ಸುಖವನ್ನು ಗಂಡಾಂತರ ಗೊಳಿಸಿದ್ದಾನೆ ಕುಜ .ನಿಮ್ಮ ತಪ್ಪಿಲ್ಲದೆ ವಿನಾ
ಕಾರಣ ಬಯ್ಯುವ ಪತಿ/ಪತ್ನಿಗೆ ಮೌನವಾಗಿರುವುದೇ ಸದ್ಯಕ್ಕೆ ಪರಿಹಾರವಾಗಿದೆ .ದುರ್ಗಾ ಸಪ್ತಶತಿ
ಪಾರಾಯಣ ಸಹಿತ ದುರ್ಗಾನಮಸ್ಕಾರ ಪೂಜೆ ಪರಿಹಾರವಾಗಲಿದೆ .ವಿವಾಹ ನಿಶ್ಚಯ ವಾಗಿದ್ದರೆ
ವಿವಾದದ ಜೊತೆಗೆ ವಿವಾಹ ಆಗಲಿದೆ . ನಿಮ್ಮ ಬಗ್ಗೆ ಚಾಡಿ ಹೇಳುವವರು ಇದ್ದಾರೆ .ಅನಾರೋಗ್ಯದ
ಕಾರಣ ವೈದ್ಯರ ಭೇಟಿ ಅಗತ್ಯವಾಗಲಿದೆ . ನಿಮ್ಮ ಜೊತೆಗೆ ಕೆಲಸ ಮಾಡುವ ವ್ಯಕ್ತಿಗಳನ್ನು ನಿಂದನೆ
ಮಾಡಲು ಹೋಗಬೇಡಿರಿ .ಕೆಲವೊಮ್ಮೆ ನಿಮ್ಮ ಮನಸ್ಸಿನಲ್ಲಿ ವೈರಾಗ್ಯ ಭಾವನೆ insecurity feeling
ಬರಲಿದೆ .ಹೀಗೆಯೇ ಮುಂದುವರಿದರೆ ಮುಂದಿನ ಗತಿಯೇನು ಎಂಬ ಪ್ರಶ್ನೆ ನಿಮ್ಮೆದುರು ಬರಲಿದೆ .
ಮಿಥುನ : ನಿಮಗೆ ವಕ್ರಿ ಶನಿ ಅಷ್ಟಮದಲ್ಲಿ ಬರುವುದರಿಂದ ರುದ್ರ ಪಾರಾಯಣ /ವಿಷ್ಣು ಸಹಸ್ರನಾಮ
ಪಾರಾಯಣ ,ಮೃತ್ಯುಂಜಯ ಜಪ ನವೆಂಬರ್ ತಿಂಗಳ ವರೆಗೆ ಮಾಡಲೇಬೇಕು ,ನಿಮ್ಮ ಆರೋಗ್ಯದ ಕಡೆಗೆ
ಗಮನ ಕೊಡಲೆ ಬೇಕು ವಾಹನ ಚಾಲಕರು ಎಚ್ಚರವಹಿಸಬೇಕು . ಜನ್ಮ ರಾಶಿಯಲ್ಲಿ ರವಿ ವ್ಯಯದ ಗುರು
,ಸುಖ ಸ್ಥಾನದ ಕೇತು ,ಇವರಿಗೆ ನವಗ್ರಹ ಜಪ ಮಾಡಿರಿ .”ನಮ: ಸೂರ್ಯಾಯ ,ಚಂದ್ರಾಯ,ಮಂಗಳಾಯ
,ಬುಧಾಯ ಚ ,ಗುರು,ಶುಕ್ರ ,ಶನಿಬ್ಯಶ್ಚ ರಾಹವೇ ಕೇತವೇ ನಮ : “ದಿನಕ್ಕೆ 108 ಬಾರಿ ಹೇಳಿರಿ .ಕುಜ
ಲಾಭ ಕ್ಷೇತ್ರದಲ್ಲಿ ಇರುವುದರಿಂದ ಬರುತ್ತಿರುವ ಆದಾಯಕ್ಕೆ ಕೊರತೆ ಇರುವುದಿಲ್ಲ .ಅಪಕೀರ್ತಿ ಬರದಂತೆ
ಎಚ್ಚರ ವಹಿಸಿರಿ .ದಾಂಪತ್ಯದಲ್ಲಿ ಎಚ್ಚರವಿರಲಿ .
ಕರ್ಕಾಟಕ : ನಿಮಗೆ ಶುಭ ಸುದ್ಧಿಯೊಂದು ಕಾಯುತ್ತಿದೆ ,ಶನಿ ವಕ್ರಿಯಾಗುತ್ತಿದ್ದಾನೆ .ಬರುವ ನವೆಂಬರ್
ತಿಂಗಳವರೆಗೆ ಶನಿಯ ಕಾಟದಲ್ಲಿ ಸುಧಾರಣೆಯಾಗಲಿದೆ .ಮನಸ್ಸಿನ ನಿಮ್ಮ ಭಾವನೆಗಳನ್ನೂ ನಿಯಂತ್ರಿಸಲು
ಸಫಲರಾಗುವಿರಿ ವ್ಯಯಾಧಿಪತಿಯಾದ ಬುಧ ಲಗ್ನದಲ್ಲಿ ಇರುವ ಕಾರಣ ಅನಗತ್ಯವಾದ ಖರ್ಚು ನಿಮ್ಮಲ್ಲಿ
ಇರುತ್ತದೆ . “ಸ್ವಯಂ ಕೃತ ಅಪರಾಧ “ ದೇವಿಯ ಆರಾಧನೆ ಅಗತ್ಯವಾಗಿದೆ .ವಿವಾದಾತ್ಮಕ ವಿಷಯಗಳಿಂದ
ನೀವಾಗಿಯೇ ದೂರವಿರಿ . ಸಹೋದರಿಯೊಂದಿಗೆ ಭಿನಾಭಿಪ್ರಾಯ ಇರುತ್ತದೆ. ಮನ ಬದಲಾವಣೆ ಮಾಡುವ
,ವಾಹನವನ್ನು ಮಾರುವ ಸಾಧ್ಯತೆ ಇದೆ .ಅಮ್ಮನವರೊಂದಿಗೆ ಬೇಸರ ಮಾಡಿಕೊಳ್ಳಬೇಡಿ .ಮೊಬೈಲ್
ನಿಂದ ಮಕ್ಕಳನ್ನು ದೂರವಿಡಿರಿ .ಗುರು ಲಾಭದಲ್ಲಿ ಇರುವ ಅದೃಷ್ಟದ ವರ್ಷವಿದು .ಅರ್ಧನಾರೀಶ್ವರ
ದೇವರ ಪಾರಾಯಣ ಮಾಡುತ್ತಾ ಬನ್ನಿರಿ.
ಸಿಂಹ : ರಾಶ್ಯಾಧಿಪತಿ ರವಿ ಲಾಭ ಕ್ಷೇತ್ರದಲ್ಲಿ ಇದ್ದಾನೆ .ಪ್ರಸ್ತುತ ಶುಕ್ರ ಅವನ ಜೊತೆಗಿದ್ದು ವಾರದ
ಕೊನೆಯಲ್ಲಿ ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡುತ್ತಾನೆ .ರಾಜಕೀಯ ವ್ಯಕ್ತಿಗಳಿಗೆ,ಸರಕಾರಿ
ಸೇವೆಯಲ್ಲಿ ಇರುವವರಿಗೆ ವಿದೇಶ ಪ್ರಯಾಣ ಮಾಡುವವರಿಗೆ ಚಿನ್ನ ಖರೀಧಿ ಮಾಡುವವರಿಗೆ
ಶುಭೋದಯದ ಕಾಲ . ಕುಟುಂಬದವರೊಂದಿಗೆ ಎಚ್ಚರಿಕೆಯೊಂದಿಗೆ ವರ್ತಿಸಿರಿ . ಪಿತ್ರಾರ್ಜಿತ ಆಸ್ತಿಯ ಬಗ್ಗೆ
,ದಾಖಲೆಗಳ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಅಗತ್ಯ ಶನಿಯ ಶುಭೋದಯ ಕಾಲ
ಆರಂಭವಾಗಿದೆ .ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ .ಆದರೆ
ಹಣದ ವ್ಯವಹಾರ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
ಕನ್ಯಾ : ಗುರುವಿನ ನವಮ ಭಾವದ ಶುಭ ಫಲ ನಿಮ್ಮ ಮೇಲಿರುತ್ತದೆ ,ರವಿ ಮತ್ತು ಶುಕ್ರ ಬುಧನ
ಮನೆಯಲ್ಲಿ ಇರುವುದರಿಂದ ನೀವು ಮಾಡುವ ವ್ಯವಹಾರಗಳೆಲ್ಲವೂ ಯಶಸ್ವಿಯಾಗಲಿವೆ. ಜನ್ಮ
ರಾಶಿಯಲ್ಲಿ ಇರುವ ಕೇತು ,ಸಪ್ತಮದ ರಾಹು ,ಅಷ್ಟಮದ ಕುಜ ,ಪಂಚಮದ ಶನಿ ನಿಮಗೆ ಹಲವು ರೀತಿಯ
ಸಮಸ್ಯೆಗಳನ್ನು ,ಆರೋಗ್ಯ ಸಮಸ್ಯೆಗಳನ್ನು ತರುತ್ತಾ ,ಮಾನಸಿಕ ,ಶಾರೀರಿಕ ಸಮಸ್ಯೆಗಳನ್ನು
ಕೊಡಲಿದ್ದಾರೆ .ನಾಗ ದೇವರು ,ದುರ್ಗೆ ,ನರಸಿಂಹ ದೇವರ ಆರಾಧನೆ ಮಾಡುತ್ತಲೇ ಬರಬೇಕು ‘.ಕೆಳಗಿನ
ಗದ್ದೆಗೆ ಅಧಿಕ ನೀರು “ಎಂಬಂತೆ ಆದಷ್ಟು ನಿಮ್ಮ ಕ್ರೋಧ ಭಾವನೆಗಳನ್ನೂ ಅದುಮಿಕೊಂಡು ಇರುವುದು
ಒಳ್ಳೆಯದು .ಅತಿರೇಕದ ತೀರ್ಮಾನ ಜುಲೈ 12 ರ ವರೆಗೆ ದಯಮಾಡಿ ತೆಗೆದುಕೊಳ್ಳಬೇಡಿರಿ.
ತುಲಾ :ಗುರು ಮತ್ತು ಇತರ ಗ್ರಹರು ಪ್ರಸ್ತುತ ಪ್ರತಿಕೂಲ ಪರಿಣಾಮಗಳನ್ನು ತೋರಿಸುತ್ತಿರುವುದರಿಂದ
ಯಥಾ ಶಕ್ತಿ ವಿಷ್ಣು ಸಹಸ್ರನಾಮ ,ಶಿವ ಸಹಸ್ರನಾಮ ,ಪಾರಾಯಣ ಮಾಡಿಕೊಂಡು ಬರುವುದು
ಒಳ್ಳೆಯದು. ಪೂಜೆಯನ್ನು ಅಥವಾ ಪಾರಾಯಣವನ್ನು ತಾನೇ ಮಾಡಿಕೊಂಡು ಬರಬೇಕು . ನಿಮ್ಮ
ಆತುರದ ನಿರ್ಧಾರ್ಗಳಿಂದ ಸಂಗಾತಿಯ ಕೋಪಕ್ಕೆ ಕಾರಣರಾಗುವಿರಿ .ಶನಿ ಚತುರ್ಥಕ್ಕೆ ಬರುತ್ತಿದ್ದಾನೆ .ನಿಮ್ಮ
ಅತಿಯಾದ ಕೋಪದಿಂದ ಹೊರಗೆ ಬನ್ನಿರಿ .ಹಣ ತೊಡಗಿಸುವ ವಿಷಯವೇ ನವೆಂಬರ್ ತಿಂಗಳ ವರೆಗೆ
ಇರುವುದಿಲ್ಲ.ಸಾಲಕ್ಕೆ ಜಾಮೀನು ಸಹಿ ಹಾಕಿದರೆ ನೀವೇ ಕಟ್ಟ ಬೇಕಾದೀತು.60 ವರ್ಷಕ್ಕಿಂತ ಮೇಲಿನವರು
ಬೀಳುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿರಿ.
ವೃಶ್ಚಿಕ :ನಿಮ್ಮ ಅದೃಷ್ಟದ ವಾರ .ಶನಿ ನಿಮಗೆ ನವೆಂಬರ್ ತಿಂಗಳವರೆಗೆ ತೊಂದರೆಯನ್ನು ಕೊಡುವುದಿಲ್ಲ
,ಗುರು ತನ್ನ ಅನುಗ್ರಹವನ್ನು ಕೊಡುತ್ತಿದ್ದಾನೆ ,ಕುಜ 6 ನೇ ಮನೆಯವನು 6 ರಲ್ಲಿ ,ಕೇತು ಲಾಭ
ಕ್ಷೇತ್ರದಲ್ಲಿಇದ್ದು ಎಲ್ಲಾ ಕಡೆಯಿಂದಲೂ ನಿಮ್ಮ ವ್ಯವಹಾರ ನೀವು ಮಾಡುವ ಉದ್ಯೋಗದಲ್ಲಿ ನಿಮ್ಮ
ಎಣಿಕೆಗಿಂತ ಹೆಚ್ಚಾಗಿ ಯಶಸ್ಸನ್ನು ಕೊಡಲಿದೆ .ಬುಧ ಭಾಧಕ ಕ್ಷೇತ್ರದಲ್ಲಿ ಇರುವುದರಿಂದ ವಿಷ್ಣು
ಸಹಸ್ರನಾಮ ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ .ಅನಿರೀಕ್ಷಿತವಾಗಿ ಕುಟುಂಬದಲ್ಲಿ ಬರುವ
ಶುಭ ಸುದ್ಧಿ ಎಲ್ಲರಿಗೂ ಸಂತೋಷವನ್ನು ತರಲಿದೆ .ನಿಮ್ಮ ಸಂಗಾತಿಯ ಜೀವನದಲ್ಲಿ ಅಚ್ಚರಿಯ
ಬೆಳವಣಿಗೆ ಕಂಡು ಬರಲಿದೆ.
ಧನು : ಸುಖ ಸ್ಥಾನದಲ್ಲಿ ರಾಹು ಇರುವುದರಿಂದ ನಾಗ ದೇವರ ನಿತ್ಯ ಪೂಜೆ ಮಾಡುವ ಅಗತ್ಯವಿದೆ .ನಿಮ್ಮ
ಮತ್ತು ನಿಮ್ಮ ಅಮ್ಮನವರ ಆರೋಗ್ಯವನ್ನು ನೋಡಿಕೊಂಡು ಹೋಗುವುದು ಅಗತ್ಯವಿದೆ .ಅಲೆರ್ಜಿ ಸಮಸ್ಯೆ
,ಉಸಿರಾಟದ ಸಮಸ್ಯೆ ಉಂಟಾಗಲಿದೆ . ಸಂಗಾತಿಯನ್ನು ಕಂಡಾಗ ಸಿಟ್ಟು ಬರುವುದೇತಕ್ಕೆ ?ಮಕ್ಕಳು
ಇದ್ದರೂ ಸಮಸ್ಯೆ ,ಇಲ್ಲದಿದ್ದರೆ ಇಲ್ಲವೆಂಬ ಸಮಸ್ಯೆ ಇರುವುದರಿಂದ ದುರ್ಗೆಯ ಆರಾಧನೆ ಅಗತ್ಯವಿದೆ
.ಸಾಡೇಸಾತ್ ಶನಿಯ ಸಮಸ್ಯೆ ದಿನಾಂಕ 29 ರಿಂದ ಆರಂಭವಾಗುತ್ತಿದೆ ,ನವೆಂಬರ್ ತಿಂಗಳವರೆಗೆ ಇರುತ್ತದೆ
.ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ನೀವೇ ಮಾಡಿರಿ ,ಶುದ್ಧವಾದ ಎಳ್ಳೆಣ್ಣೆಯನ್ನು
ಈಶ್ವರ ದೇವರಿಗೆ ಅರ್ಪಿಸಿರಿ.
ಮಕರ : ನಿಮ್ಮ ರಾಶಿಗೆ ಶನಿ ದಿನಾಂಕ 29 ರಿಂದ ಪ್ರವೇಶ ಮಾಡುತ್ತಿದ್ದಾನೆ .ನವೆಂಬರ್ ತಿಂಗಳವರೆಗೆ
ಇರುತ್ತಾನೆ .29.03.2025 ರವರೆಗೆ ಅಂದರೆ ಸಾಡೇಸಾತ್ ಶನಿಯ ಬಿಡುಗಡೆ ಆಗುವ ವರೆಗೆ ಪ್ರತಿನಿತ್ಯ
ನೀವು ಖಡ್ಡಾಯವಾಗಿ ಎಲ್ಲಾ ಪ್ರಾಯದವರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಲೇ ಬೇಕು.
ಶುದ್ಧವಾದ ಎಳ್ಳೆಣ್ಣೆಯನ್ನು ನೀವೇ ಅಂಗಡಿಯಲ್ಲಿ ಕೇಳಿ ತಂದು ಈಶ್ವರ ದೇವರಿಗೆ ನಿಮ್ಮ ಕೈಯಾರೆ
ದೀಪಕ್ಕೆ ಹಾಕಬೇಕು .ದೀಪದ ಎಣ್ಣೆ ಅದು ಪಾಮೋಯಿಲ್ ಆಗಿರುತ್ತದೆ .ನಿಮ್ಮ ಉದ್ಯೋಗ ,ಹಣದ
ವ್ಯವಹಾರ ,ನಿಮ್ಮ ಮಾತು ,ಎಲ್ಲವೂ ಎಚ್ಚರಿಕೆಯ ಹೆಜ್ಜೆಯಾಗಿರಬೇಕು .ಭೂಮಿ ತೆಗೆಯುವ ,ಮನೆ
ಕಟ್ಟುವ ಯೋಗವಿದೆ ,ದಾಖಲೆ ಪರಿಶೀಲನೆ ಅತೀ ಅಗತ್ಯವಿದೆ.
ಕುಂಭ : ಶನಿ ನಿಮ್ಮ ರಾಶಿಯಿಂದ ಮಕರ ರಾಶಿಗೆ ದಿನಾಂಕ 29 ಕ್ಕೆ ಪ್ರವೇಶ ಮಾಡುತ್ತಿದ್ದಾನೆ . ವ್ಯಯಕ್ಕೆ
ಅಂದರೆ ವ್ಯರ್ಥ ಖರ್ಚು ಬರುವ ಸಾಧ್ಯತೆ ಇದೆ ಎಂದು ಅರ್ಥ .ವಿಶೇಷ ಅನುಭವವಿರುವ ನೀವು
ಸಮಾಜದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸುವ ಸಮಯ .ಸಂಗಾತಿಯೊಂದಿಗೆ ,ಮಕ್ಕಳೊಂದಿಗೆ
ಸಂತೋಷದ ಸಮಯವನ್ನು ಕಳೆಯುವಿರಿ .ನಿಮ್ಮ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುವ ಯೋಜನೆ
ನಿಮ್ಮಲ್ಲಿರುತ್ತದೆ .ಸಹೋದರ ವರ್ಗದವರ ಸಹಾಯ ನಿಮಗೆ ಸಿಗಲಿದೆ . ಸಣ್ಣ ಪುಟ್ಟ ಕಷ್ಟ ನಷ್ಟಗಳಿಗೆ
ಹೊಂದಿಕೊಂಡು ಹೋಗಲೇ ಬೇಕಾಗಿದೆ . ಒಂದು ರೀತಿಯ ದೃಷ್ಟಿ ದೋಷ ,ಭಯ ನಿಮ್ಮಲ್ಲಿ ಕೇತು
ಅಷ್ಟಮದಲ್ಲಿ ಇದ್ದುಕೊಂಡು ಉಂಟು ಮಾಡುತ್ತಾನೆ .ಮಾರಿಯಮ್ಮನ ಪೂಜೆ +ಪ್ರಸಾದ ನಿಮಗೆ
ಅಗತ್ಯವಿದೆ.
ಮೀನ : ನೀವು ನವೆಂಬರ್ ತಿಂಗಳವರೆಗೆ ವಿಶೇಷ ಅದೃಷ್ಟವಂತರು ,ಶನಿ ಲಾಭ ಕ್ಷೇತ್ರಕ್ಕೆ ಅಂದರೆ ಮಕರ
ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ .ದ್ವಿತೀಯಾದ ಕುಜ ,ಸುಖ ಸ್ಥಾನದ ಶುಕ್ರ ,ರವಿ ,ತೃತೀಯಾದ ಗುರು
ಸಪ್ತಮದ ಕೇತು ಇವರೆಲ್ಲರಿಗೆ ನೀವು ಪ್ರತಿನಿತ್ಯ “ನಮ : ಸೂರ್ಯಾಯ ಚಂದ್ರಾಯ ಮಂಗಳಾಯ
ಬುಧಾಯ ಚ ! ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ: “! ಪ್ರತಿನಿತ್ಯ 108 ಬಾರಿ ಹೇಳಿ ಕೊಂಡು
ಬರಬೇಕು .ನೀವು ಮಾಡುವ ಉದ್ಯೋಗ ,ವ್ಯವಹಾರದಲ್ಲಿಎಚ್ಚರವಾಗಿರಬೇಕು .ಷುಗರ್ ಸಮಸ್ಯೆ ಇದ್ದರೆ
ಪರೀಕ್ಷಿಸಿ ಕೊಂಡಿರಬೇಕು. “””ನಾನು “ ಅಹಂ” ನಿಂದ ಹೊರಗೆ ಬನ್ನಿರಿ .ಅದೊಂದು ನಮ್ಮ ಕಣ್ಣಿಗೆ ಬಂದ
ಪೊರೆಯ ಹಾಗೆ . ನಮ್ಮ ಅಗತ್ಯ ಯಾರಿಗೂ ಇಲ್ಲ.ನಾವು ಯಾರಿಗೂ ಅನಿವಾರ್ಯವಲ್ಲ. ಮೊಬೈಲ್
ನೋಡಿಕೊಂಡು ಸಮಯ ವ್ಯರ್ಥ ಮಾಡುವ ಬದಲು ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು . ವಾಸ್ತು ಸಲಹೆ/ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.





































