ವಾರ ಭವಿಷ್ಯ ದಿನಾಂಕ 30.03.2025 ರಿಂದ 05.04.2025 ರ ವರೆಗೆ
ವಿಶೇಷ ದಿನಗಳು : ದಿನಾಂಕ 30.03.2025…ಚಾಂದ್ರ ಯುಗಾದಿ
ದಿನಾಂಕ 03.04.2025…ಸ್ಕಂದ ಷಷ್ಟೀ
ಮೇಷ : ಆರೋಗ್ಯ, ಉದ್ಯೋಗ,ಮಕ್ಕಳ ವಿಷಯದಲ್ಲಿ ಚಿಂತೆ ,ಅಪವಾದ, ಉದಾರ ವ್ಯಾಧಿ ಅಲರ್ಜಿ,ಮನಸ್ಸಿಗೆ ನೋವು ಕಾಡಲಿರುವ ಸಮಯ.ಸಾಡೇ ಸಾತ್ ಶನಿ ವ್ಯಯದಲ್ಲಿ ಬುಧ ಶುಕ್ರ ರವಿ ರಾಹು ಚಂದ್ರ ಇವರೊಂದಿಗೆ ಇರುವುದು. ಉದ್ಯೋಗವನ್ನು ಉಳಿಸಿಕೊಳ್ಳುವುದೇ ಸಾಹಸದ ವಿಷಯವಾಗಿರುತ್ತದೆ. ಎಷ್ಟೇ ಸುಂದರವಾದ ಅರಮನೆಯಲ್ಲಿ ಇದ್ದರೂ ಸುಖವಿಲ್ಲದಿದ್ದರೆ ಏನು ಪ್ರಯೋಜನ?ದೈವಾನುಗ್ರಹ ಪ್ರಸ್ತುತ ಇರುವುದರಿಂದ ಮೇ 14 ರ ವರೆಗೆ ಹೆಚ್ಚಿನ ತೊಂದರೆ ಇರುವುದಿಲ್ಲ. ಮುಖ್ಯ ಪ್ರಾಣ ದೇವರ ಸ್ತುತಿ ಪಾರಾಯಣ ಬಹಳ ಉತ್ತಮವಾದ ಪರಿಹಾರವಾಗಿದೆ.ನವರತ್ನ ಉಂಗುರ ಧಾರಣೆ ಉತ್ತಮವಾಗಿದೆ. ಯಾವುದೇ ವ್ಯವಹಾರದಲ್ಲಿ ದೊಡ್ಡ ಮೊತ್ತದ ಹಣ ತೊಡಗಿಸುವಿಕೆ ಒಳ್ಳೆಯದಲ್ಲ.ಕುಜ ,ಶನಿ ಗ್ರಹರ ಜಪ ಅಗತ್ಯವಾಗಿದೆ. ಕುಜ ನೀಚನಾಗಿದ್ದಾನೆ .
ವೃಷಭ : ಅದೃಷ್ಟ ನಿಮ್ಮ ಸುತ್ತಲೂ ಸುತ್ತುವ ಕಾಲ. ಗುರುವಿನ ಅನುಗ್ರಹ,ಶನಿಯ ಕೃಪಾ ದೃಷ್ಟಿ,ಇರುವುದರಿಂದ ನೀವು ಏನೇ ವ್ಯವಹಾರ,ಉದ್ಯೋಗ ಮಾಡಿದರೂ ಲಾಭಕ್ಕೆ ಕೊರತೆ ಇರುವುದಿಲ್ಲ.ಭೂಮಿಯ ವಿಷಯದಲ್ಲಿ ಈ ವರೆಗೆ ಇದ್ದ ವಾದ-ವಿವಾದಗಳು ಪರಿಹಾರಗೊಂಡು ನೀವು ಯಶಸ್ವಿಯಾಗುವಿರಿ. ವೈರಿಗಾಗಿದ್ದವರು ಇನ್ನೂ ಮಿತ್ರರಾಗಿ ನಿಮ್ಮ ಬಳಿ ಬರುವರು. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲಿರುವವರು ಹಲವಾರು ಮಂದಿ. ನಿಮ್ಮ ನೇತೃತ್ವದಲ್ಲಿ ಧಾರ್ಮಿಕ ಕ್ಷೇತ್ರದ ಜೀರ್ಣೋದ್ಧಾರ ನಡೆಯಲಿದೆ. ಬೆಲೆ ಬಾಳುವ ವಸ್ತುಗಳನ್ನು ಖರೀಧಿಸುವಿರಿ. ನೌಕರರು ಭಡ್ತಿಯನ್ನು ಹೊಂದಿ ಹೆಚ್ಚಿನ ವೇತನ ಪಡೆಯಲಿದ್ದೀರಿ. ಸಾಂಕ್ರಾಮಿಕ ವ್ಯಾಧಿಯೊಂದು ಬರುವ ಸೂಚನೆ ಇರುವುದರಿಂದ ನಾಗದೇವರ ಅಷ್ಟೋತ್ತರ ಪಾರಾಯಣ ಮಾಡಿಕೊಂಡು ಬರುವುದು ಒಳ್ಳೆಯದು.
ಮಿಥುನ : ಅವಿವಾಹಿತರಿಗೆ ವಿವಾಹ ಯೋಗಕ್ಕೆ ಮೇ 14 ದಾಟಬೇಕು. ನಿಮ್ಮ ಕರ್ತವ್ಯದ ಕಡೆಗೆ ಗಮನ ಕೊಡುವುದು ಅತೀ ಅಗತ್ಯವಾಗಿದೆ ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಕಡೆಗೆ ಗಮನ ಹರಿಸುವುದು ಅತೀ ಅಗತ್ಯವಾಗಿದೆ. ಕಾಲ ಬದಲಾಗಿದೆ.ದೇವಸ್ಥಾನವನ್ನು ನೀವು ಸುತ್ತುವ ಬದಲು ನಿಮ್ಮ ಮನೆಯನ್ನೇ ದೇವಾಲಯವನ್ನುಮಾಡಿ ನಿತ್ಯವೂ ನರಸಿಂಹ ದೇವರ ಪಾರಾಯಣ ಮಾಡಿರಿ. ಅಶಕ್ತರಿಗೆ ನಿಮ್ಮ ಕೈಲಾದಷ್ಟೂ ಸಹಾಯ ಮಾಡಿರಿ.ನಿರುದ್ಯೋಗಿಗಳು ನಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯವಿದೆ. ಕೆಲವೊಮ್ಮೆ ನೀವಾಡುವ ಮಾತು ಬೇಸರಕ್ಕೆ ಕಾರಣವಾಗಬಹುದು. ಪತ್ನಿ- ಮಕ್ಕಳಲ್ಲಿ ಅನಾವಶ್ಯಕ ಕಲಹ ಬರಬಹುದು. ಲಲಿತ ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಾಗಿದೆ.
ಕರ್ಕಾಟಕ : ಅನಾರೋಗ್ಯ , ಆರ್ಥಿಕ ಬಿಕ್ಕಟ್ಟು ,ಮಾಡುವ ವ್ಯವಹಾರದಲ್ಲಿ ಕಷ್ಟ ನಷ್ಟಗಳು, ಅಪವಾದ ,ಅವಮಾನ ,ಎಲಾ ಕಡೆಯಿಂದ ಸಮಸ್ಯೆಗಳ ಸರಮಾಲೆ ಬರಲಿದೆ. ಹಿರಿಯರಿಗೆ ಅನಾರೋಗ್ಯ ಬರುವುದನ್ನುನೋಡುವ ಯೋಗವಿದೆ. ಯಾವುದೇ ವ್ಯವಹಾರದಲ್ಲಿ ಅಧಿಕ ಮೊತ್ತದ ಹಣ ತೊಡಗಿಸುವ ಮೊದಲು ತಜ್ನರ ಸಲಹೆ ಪಡೆಯುವುದು ಅವಶ್ಯವಾಗಿದೆ. ಗುರುವಿನ ಅನುಗ್ರಹ ಇಲ್ಲದಿರುವಾಗ, ಶನಿಯ ದೋಷವಿರುವಾಗ ಮಂಗಳ ಕಾರ್ಯಗಳನ್ನು ನಡೆಸಲು ಹೋಗಬೇಡಿರಿ ರಾಜಕೀಯದಲ್ಲಿ ಇರುವವರಿಗೆ ಪ್ರತಿಸ್ಪರ್ಧಿಗಳ ಕಾಟವಿರುತ್ತದೆ. ವಾತ ಅಲರ್ಜಿ ಉಬ್ಬಸ ,ರಕ್ತದೊತ್ತಡ ಬರುವ ಸೂಚನೆಯನ್ನು,ಗುರು ,ಶನಿ ,ಕುಜ ರಾಹು ತಿಳಿಸುತ್ತಿದ್ದಾರೆ. ವಿಷ್ಣು ಸಹಸ್ರನಾಮ ,ವಾಯು ಸ್ತುತಿ ಪಾರಾಯಣ ಅಗತ್ಯವಾಗಿದೆ. ನೀವು ಮಾಡುವ ಯಾವುದೇ ಕೆಲಸಕ್ಕೆ ಅಡ್ಡಗಾಲು ಹಾಕುವ ಹಿತ ಶತ್ರುಗಳು ಇರುತ್ತಾರೆ .ಎಚ್ಚರವಿರಲಿ.
ಸಿಂಹ : ನಿಮ್ಮ ರಾಶ್ಯಾಧಿಪತಿ ರವಿ ಅಷ್ಟಮದಲ್ಲಿ ಇದ್ದಾನೆ. ಅವನ ಜೊತೆಗೆ ಅವನ ಶತ್ರುಗಳಾದ ಶನಿ, ರವಿ, ಶುಕ್ರ, ಬುಧ ,ರಾಹು ಇದ್ದಾರೆ. ನಿಮ್ಮ ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ. ಸಂಗಾತಿಯ ಜೊತೆಗೆ ಬೇಸರ ಬರಲಿದೆ. ಅಹಂ ‘ ನಿಂದ ದೂರವಿರಿ. ನೀವು ಮಾಡುವ ಯಾವುದೇ ಉದ್ಯೋಗ ,ವ್ಯವಹಾರದಲ್ಲಿ ನಷ್ಟದ ವಾಸನೆ ಹೊಡೆಯಲಿದೆ. ಸಣ್ಣ ಮಗುವಿಗೆ ಹೇಳುವ ಹಾಗೆ ನಿಮಗೂ ಹೇಳಬೇಕಾಗಿದೆ “ಎಚ್ಚರ ,ಎಚ್ಚರ ,ಎಚ್ಚರ “ ಗರ್ಭಿಣಿಯರು ಎಚ್ಚರ ಇರಬೇಕು. ಉದ್ಯೋಗವನ್ನು ಬಿಡುವ ಯೋಚನೆ ಮಾಡುವಿರಿ.ಎಲುಬು ನರ ಸೊಂಟ ನೋವು ಬರುವ ಸೂಚನೆ ಇದೆ. ಹಣದ ವ್ಯವಹಾರದಲ್ಲಿ ಎರಡೂವರೆ ವರ್ಷ ಎಚ್ಚರ ಇರಬೇಕು. ಶಿವ ನಾಮ ಸ್ಮರಣೆ ,ಮೃತ್ಯುಂಜಯ ಜಪ ಅತೀ ಅವಶ್ಯವಾಗಿದೆ. ವಿದೇಶ ಯಾತ್ರೆಯ ಸೂಚನೆ ಇದೆ.
ಕನ್ಯಾ : ಸಪ್ತಮದಲ್ಲಿ ಶನಿ ,ಶುಕ್ರ ,ರವಿ ರಾಹು ಬುಧರಿದ್ದಾಗ ಹನಿ ಟ್ರಾಪ್ ಗೆ ಒಳಗಾಗುವ ಸೂಚನೆ ಇದೆ. ಅನ್ಯ ಮಹಿಳೆಯರಿಂದ ದೂರವಿರಿ. ನಿದ್ದೆಯ ಸಮಸ್ಯೆ ಬರಲಿದೆ. ದಾಂಪತ್ಯದಲ್ಲಿಕಿರಿ ಕಿರಿಯನ್ನು ಶನಿ ರಾಹು ತರುತ್ತಾರೆ. ಮಕ್ಕಳು ಪ್ರೀತಿ ಪ್ರೇಮಕ್ಕೆ ಬಲಿಯಾಗದಂತೆ ಪ್ರೀತಿಯಿಂದ ತಿಳಿಸಬೇಕಾಗಿದೆ. ಅಪವಾದ ಬರದಂತೆ ಎಚ್ಚರವಾಗಿರಬೇಕು. ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಓದಬೇಕು.ಆದರೆ ಓದುವುದಕ್ಕೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ.ವಿವಾಹಕ್ಕೆ ಅಡೆ ತಡೆಗಳು ಬರುವುದು ನಿಶ್ಚಿತ. ಅಧ್ಯಾಪಕರು ,ಅರ್ಚಕರು, ಸಾರ್ವಜನಿಕರ ಜೊತೆಯಲ್ಲಿ ಇರುವವರು ಉತ್ತಮ ಸ್ಥಾನ ಮಾನವನ್ನು ಪಡೆಯಲಿದ್ದಾರೆ. ದುರ್ಗಾ ನಮಸ್ಕಾರ ಪೂಜೆ ,ಸುವಾಸಿನಿ ಆರಾಧನೆ ಮಾಡುವುದು ಒಳ್ಳೆಯದು.
ತುಲಾ : ಹೆಚ್ಚಿನ ಗ್ರಹರು ನಿಮಗೆ ಅನುಕೂಲವಾಗಿಯೇ ಇದ್ದಾರೆ. ಗುರು ಅಷ್ಟಮದಲ್ಲಿ ಇರುವುದರಿಂದ ಅವನಿಗೆ ಪರಿಹಾರ ಮಾಡಿಕೊಳ್ಳಬೇಕು. ಮೇ 14 ರ ವರೆಗೆ ಎಚ್ಚರವಾಗಿರಬೇಕು. ಶುಕ್ರ ಮತ್ತು ಗುರು ಪರಿವರ್ತನೆಯ ಸ್ಟಿತಿಯಲ್ಲಿ 6, 8 ರಲ್ಲಿ ಇರುವುದರಿಂದ ಆರೋಗ್ಯದ ಕಡೆಗೆ ಗಮನ ಕೊಡಲೇ ಬೇಕು.ಷುಗರ್ ಸಂಸ್ಯೆ ಇರುವವರು ವಾರುಣೀ ಮಂತ್ರವನ್ನು ಹೇಳಬೇಕು. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಉದರವ್ಯಾಧಿ,ಹೊಕ್ಕಳಿನ ಕೆಳಭಾಗದಲ್ಲಿ ನೋವು ಕಂಡು ಬರಲಿದೆ. ಸುಂದರ ಕಾಂಡ ಪಾರಾಯಣ ,ವಿಷ್ಣು ಸಹಸ್ರನಾಮ ಪಾರಾಯಣ ದೇವಿಯ ಸ್ತೋತ್ರ ಪಾರಾಯಣ ಉತ್ತಮ ಪರಿಹಾರ ಆಗಲಿದೆ. ಮನೆಯಿಂದ ಹೊರಬರುವಾಗ 60+ ಆದವರು ತಲೆ ತಿರುಗುವ ಸಮಸ್ಯೆ ಇರುವವರು ಎಚ್ಚರವಾಗಿರಬೇಕು ,ಎಂದು ಗುರು ಸೂಚನೆ ಕೊಡುತ್ತಿದ್ದಾನೆ.
ವೃಶ್ಚಿಕ : ಪ್ರಸ್ತುತ ಗುರು ಅನುಕೂಲ ಸ್ಟಿತಿಯಲ್ಲಿ ಇದ್ದು ಮೇ 14 ರಂದು ಬುಧವಾರ ರಾತ್ರಿ 10.36 ಕ್ಕೆ ಅಷ್ಟಮಕ್ಕೆ ಪ್ರವೇಶ ಮಾಡುತ್ತಾನೆ. ಶನಿ ,ರಾಹು ಗುರು ಪ್ರತಿಕೂಲರಾಗುವ ಸಮಯದಲ್ಲಿ ಕಷ್ಟನಷ್ಟಗಳನ್ನು ಸವಾಲುಗಳನ್ನು ಎದುರಿಸಬೇಕಾಗಿದೆ.ಈಗದಿಂದಲೇ ವಾಯು ಸ್ತುತಿ,ವಿಷ್ಣು ಸಹಸ್ರನಾಮ ಪಾರಾಯಣ, ನರಸಿಂಹ ಮಂತ್ರ ಹೇಳುತ್ತಾ ಬಂದರೆ ದೋಷಗಳು ನಿಮ್ಮ ಹತ್ತಿರವೂ ಬರಲಾರದು. ರಾಜಕೀಯದಲ್ಲಿ ಇರುವವರು ವಿವಾದಗಳ ಸರಮಾಲೆಯಲ್ಲಿ ಬೀಳದ ಹಾಗೆ ಎಚ್ಚರವಾಗಿರಬೇಕು. ಕೆಲವರ ಉಚ್ಚಾಟಣೆ ನಡೆಯಲಿದೆ. ಬಂಧು ಬಾಂಧವರ ಜೊತೆಗೆ ಸಂಬಂಧ ಕೆಡದಂತೆ ತಾವರೆ ಎಲೆಗೆ ಬಿದ್ದ ನೀರಿನ ಹಾಗೆ ಇರಬೇಕು. ಹಣ ಕೇಳಲು ಬರುವವರಿದ್ದಾರೆ. ಅಥವಾ ಹಣ ಹೂಡಿಕೆ ಮಾಡುವಾಗ ಮೋಸ ಹೋಗದಂತೆ ಎಚ್ಚರವಾಗಿರಬೇಕು.
ಧನು : ಬಹಳ ಅಪರೂಪವಾಗಿ ನಿಮಗೆ ಸುಖ ಸ್ಥಾನದಲ್ಲಿ 5 ಗ್ರಹರು ಜೊತೆಯಾಗಿ ಬಂದಿದ್ದಾರೆ. ದೊಡ್ಡ ಸವಾಲು “.ಈಸಬೇಕು ಇದ್ದು ಜೈಸಬೇಕು “ ದೈವಾನುಗ್ರಹ ಪ್ರಸ್ತುತ ಇರುವುದಿಲ್ಲ.ಮೇ 14 ರ ನಂತರ ಗುರು ಸಪ್ತಮಕ್ಕೆ ಹೋಗುವಾಗ ಗುರು ಬಲ ಬರಲಿದೆ.ಅನಾರೋಗ್ಯ ಬಂಧು ಮಿತ್ರರ ಅಸಹಕಾರ,ಇರಲಿದೆ .ಮೈತ್ರಿಯಲ್ಲಿ ಬಿರುಕು ಬರುವ ಕಾಲ.ಕುಜ ಪತ್ನಿಗೆ ಅನಾರೋಗ್ಯ,ಅನಗತ್ಯ ಕಲಹ ,ವಾಯು ಪ್ರಕೋಪ ಬರುವಂತೆ ,ರಕ್ತ ಸಂಬಂಧಿ ಸಮಸ್ಯೆ ಬರುವಂತೆ ಮಾಡಲಿದ್ದಾನೆ. ನಿಮ್ಮ ವೃತ್ತಿ ರಂಗದಲ್ಲಿ ಉತ್ತಮ ಧನಾಗಮವಿದ್ದರೂ ಸಹಾಯಕರ ತೊಂದರೆಯಿಂದ ಅಥವಾ ಅಧಿಕಾರಿವರ್ಗದ ಕಿರಿಕಿರಿಯಿಂದ ಸಮಸ್ಯೆಗಳು ಬರಲಿವೆ. ಆದರೆ ತಾಳೆಯಿರಲಿ,ಉತ್ತಮ ಸಮಯ ಬರುತ್ತಲಿದೆ. ವಿವಾಹ ಆಗಲಿರುವ ಮಂದಿಗೆ ಶುಭ ಸಮಯ ಬರಲಿದೆ.
ಮಕರ : ಏಳೂವರೆ ಶನಿಯ ಕಾಟದಿಂದ ಹೊರಬಂದಿರುವ ನಿಮಗೆ ಪ್ರಸ್ತುತ ಉತ್ತಮ ಗುರುಬಲ ಇರುವ ಕಾಲ ಯಾವುದೇ ವ್ಯವಹಾರದಲ್ಲಿ ಉದ್ಯೋಗದಲ್ಲಿ ಉತ್ತಮ ಲಾಭ ಗಳಿಸುವ ಕಾಲ. ಗುರು ಮೇ 14 ಕ್ಕೆ ರೋಗ ಸ್ಥಾನಕ್ಕೆ ಹೋಗುತ್ತಿದ್ದಾನೆ ಈಗದಿಂದಲೇ ಗುರುವಿಗೆ ಪರಿಹಾರ ಮಾಡಿಕೊಳ್ಳಲು ಆರಂಭಿಸಿರಿ.ಶಿವ ಸಹಸ್ರನಾಮ, ವಿಷ್ಣು ಸಹಸ್ರನಾಮ ಪಾರಾಯಣ ಆರಂಭ ಮಾಡಿರಿ.ಕುಜ ಸಹೋದರರ ಜೊತೆಗೆ ವೈಮನಸ್ಸು ತರಲಿದ್ದಾನೆ. ಮನೆ ಮನಸ್ಸು ವಿಭಾಗವಾಗದಂತೆ ಎಚ್ಚರವಹಿಸಿರಿ.ತಾಯಿಯವರ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಿರಿ .ಏಸಿ ರೂಮಿನಲ್ಲಿ ಕುಳಿತು ಬೆವರುವ ಸನ್ನಿವೇಶ ನಿಮ್ಮದಾಗಬಹುದು.
ಕುಂಭ : ಗುರು ಶನಿಯ ಕಾರಣದಿಂದ ಕಫ ದೋಷ ,ಬಂಧು ಮಿತ್ರರ ಅಸಹಕಾರ ,ಕೆಲಸದ ಒತ್ತಡದಿಂದ ಆಯಾಸ ಕಂಡುಬರಲಿದೆ. ಮೇ 14 ರಂದು ಗುರು ಪಂಚಮಕ್ಕೆ ಹೋಗುವುದರಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ನಿಮ್ಮ ಸಮಸ್ಯೆಗಳೆಲ್ಲವೂ ಒಂದೊಂದೇ ಪರಿವಾಗುತ್ತಾ ಹೋಗಲಿದೆ. ವಿದ್ಯಾರ್ಥಿಗಳಿಗೆ ಶುಭೋದಯದ ಕಾಲ ಬರುತ್ತಿದೆ.ಉನ್ನತ ವಿದ್ಯಾಭ್ಯಾಸದ ಕನಸು ಕಾಣುವವರು ಒಳ್ಳೆಯ ಅವಕಾಶ ಹೊಂದಲಿದ್ದಾರೆ. ರಾಹುವಿನ ದೋಷಕ್ಕೆ ನಾಗದೇವರ ಪ್ರಾರ್ಥನೆ ಅಗತ್ಯವಿದೆ. ಕುಟುಂಬದಲ್ಲಿಅನೇಕ ಮಂಗಳ ಕಾರ್ಯಗಳು ನಡೆಯಲಿವೆ. ಯಾರಿಗೂ ಸಾಲಕೊಡಬೇಡಿರಿ.ಜಾಮೀನು ಸಹಿ ಮಾಡಬೇಡಿರಿ. ಇದು ಶನಿಯ ಸಲಹೆ ಆಗಿರುತ್ತದೆ. ರಾಜಕೀಯ ಪ್ರಸ್ತುತ ನಿಮಗೆ ಹಿಡಿಸುವುದಿಲ್ಲ. ಅನಾವಶ್ಯಕ ಖರ್ಚಿಗೆ ,ನಿಷ್ಟುರಕ್ಕೆ ಕಾರಣವಾಗುತ್ತದೆ.
ಮೀನ : ಜನ್ಮ ರಾಶಿಯಲ್ಲಿ 5 ಗ್ರಹರು ತೃತೀಯಾದ ಗುರು ನಂತರ ಮೇ 14 ರ ನಂತರ ಸುಖ ಸ್ತಾನಕ್ಕೆ ಹೋಗುವ ಗುರು ,ನಿಮಗೆ ಅನುಕೂಲಕರವಾಗಿರುವುದಿಲ್ಲ.ನೀವು ಯಾವುದೇ ಉದ್ಯೋಗ,ವ್ಯವಹಾರ ಮಾಡುವಲ್ಲಿ ಬಹಳ ಎಚ್ಚರ ವಹಿಸಬೇಕು,.ಅನಗತ್ಯವಾದ ಮಾನಸಿಕ ಒತ್ತಡ ಹಲವಾರು ಸಮಸ್ಯೆಗೆ ಕಾರಣವಾಗುವುದು.ಸ್ವಪ್ರಯತ್ನ ಪ್ರಾಮಾಣಿಕವಾಗಿದ್ದರೂ ಸಫಲತೆ ಕಂಡು ಬರುವುದಿಲ್ಲ.ಕಾರ್ಯ ಕ್ಷೇತ್ರದಲ್ಲಿ ಹಲವು ವೈರುಧ್ಯಗಳು ಕಂಡು ಗಂಭೀರ ಸ್ವಭಾವದ ನಿಮಗೆ ಅಚ್ಚರಿ ಕಂಡು ಬರಲಿದೆ ಅನಾವಶ್ಯಕ ಖರ್ಚು ವೆಚ್ಚಗಳು ,ನಿಷ್ಠುರ ಸ್ವಭಾವದಿಂದಾಗಿ ಮನಸ್ಸು ವೈರಾಗ್ಯದ ಕಡೆಗೆ ಜಾರಲಿದೆ. ಸಾಲದ ಚಿಂತೆ ತೆರಿಗೆಯ ಚಿಂತೆ ಬರಲಿದೆ. ವಿದ್ಯಾರ್ಥಿಗಳು ಬಹಳ ಎಚ್ಚರವಹಿಸಬೇಕು.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯ ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತ ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ಮಾಡಿ ತಿಳಿಸಲಾಗುವುದು.






































