


ವಾರ ಭವಿಷ್ಯ ದಿನಾಂಕ 29.12.2024 ರಿಂದ ದಿನಾಂಕ 04.01.2025ರ ವರೆಗೆ
ವಿಶೇಷ ದಿನಗಳು : 30.12.2024………ಸೋಮಾವತೀ ಅಮಾವಾಸ್ಯೆ ,ಎಳ್ಳಮಾವಾಸ್ಯೆ
01.01.2025……..ಕೃಸ್ತಾಬ್ದ :2025 ಆರಂಭ :
04.01.2025……..ಧನು ರಾಶಿಗೆ ಬುಧನ ಪ್ರವೇಶ
ಮೇಷ : ಗುರು ,ಬುಧನ ಕಾರಣದಿಂದ ವಿದ್ಯಾರ್ಥಿಗಳಿಗೆ ,ಅಧ್ಯಯನ ಶೀಲರಿಗೆ ಉತ್ತಮ ಫಲದಾಯಕ ವಾರವಾಗಿದೆ. ನೀವು ಮಾಡುವ ಉದ್ಯೋಗ,ವ್ಯವಹಾರದಲ್ಲಿ ಸಮಯ ,ಸಂದರ್ಭಕ್ಕೆ ಅನುಗುಣವಾಗಿ ಎಲ್ಲಾ ರೀತಿಯ ಸಹಕಾರ ಸಹಾಯ ದೊರಕಿ ಯಶಸ್ಸು ಲಭಿಸಿದ ತೃಪ್ತಿ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ,ಗಣ್ಯರ ಭೇಟಿ ಮಾಡಲಿದ್ದೀರಿ. ಸಂಗಾರಿಯ ಜೊತೆಗೆ ಜವಾಬ್ದಾರಿಯುತ ನಡೆ ನಿಮ್ಮದಾಗಲಿದೆ. ಧನು ರಾಶಿಯಲ್ಲಿ ರವಿ ಮತ್ತು ಬುಧ ಜೊತೆಯಾಗಿ ಇರುವುದು ಹಿರಿಯರ ಸಹಕಾರ ನಿಮಗೆ ಪೂರ್ಣ ಪ್ರಮಾಣದಲ್ಲಿ ದೊರೆಯಲಿದೆ. ಸಂಗಾತಿಯ ಕಡೆಯಿಂದ ನಿಮಗೆ ಹಲವು ರೀತಿಯ ಸಹಕಾರ ದೊರೆಯಲಿದೆ. ಈ ವಾರದಲ್ಲಿ ಗುರು ,ರವಿ,ಬುಧ , ಶುಕ್ರ ಶನಿ ಇವರ ಪೂರ್ಣ ಅನುಗ್ರಹ ದೊರೆತು ಶುಭ ವಾರ ಎನಿಸಲಿದೆ .
ವೃಷಭ : ನೂತನ ಮಿತ್ರರ ಸಹಕಾರದಿಂದ ಹಕ್ಲವು ರೀತಿಯಲ್ಲಿ ಧನಾಗಮನ ಆಗುವ ಸಮಯವಾಗಿದೆ. ನೂತನ ಮಿತ್ರರ ಸಹಕಾರದಿಂದ ಹೆಚ್ಚಿನ ಸಂತೋಷ ಪ್ರಾಪ್ತಿಯಾಗಲಿದೆ. ಪಾಲುಗಾರಿಕೆ ಕ್ಷೇತ್ರದಲ್ಲಿ ಪ್ರಗತಿ ಆಗಲಿದೆ.ಕೈ ತುಂಬಾ ಎಡೆಬಿಡದ ಕೆಲಸದ ವಾರವಾಗಲಿದೆ. ರವಿ,ಬುಧರ ಸಮಾಗಮ ಅಷ್ಟಮದಲ್ಲಿ ಇರುವುದು ಆರೋಗ್ಯದ ದೃಷ್ಟಿಯಿಂದ ಅಶುಭ ಎನಿಸಿದರೂ, ಮನೆ ,ಭೂಮಿ ,ವಾಹನ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ. ಸಾಂಸಾರಿಕ ಸುಖ –ಸಂತಸ ವೃದ್ಧಿ,,ವಿದ್ಯಾರ್ಥಿಗಳಿಗೆಹೆಚ್ಚಿನ ಪುರಸ್ಕಾರ, ಉನ್ನತ ಸ್ಥಾನ ಮಾನ ಲಭ್ಯ, ದೇವತಾ ಪಾದಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಗುರುಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ.
ಮಿಥುನ : ನವಗ್ರಹ ಜಪ ,ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವೆನಿಸಲಿದೆ. ಗುರುವಿನ ಅನುಗ್ರಹಕ್ಕಾಗಿ ಗುರು ಚರಿತ್ರೆ ಪಾರಾಯಣ ಅಗತ್ಯವಾಗಲಿದೆ. ಸಪ್ತಮದಲ್ಲಿ ರವಿ ಮತ್ತು ಬುಧರಿರುವುದು ಸಂಸಾರದಲ್ಲಿ ನೆಮ್ಮದಿಯನ್ನು ಕಾಣಲು ಕಾರಣವಾಗಲಿದೆ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿಪರ ಬದಲಾವಣೆ ,ಇದರಿಂದ ಹೆಚ್ಚಿನ ವರಮಾನ ಪಡೆಯಲಿದ್ದೀರಿ. ಸಹೋದರ ವರ್ಗದವರಿಂದ ಸಹಕಾರವನ್ನು ಪಡೆಯಲಿದ್ದೀರಿ. ನಿಮ್ಮ ಹಿರಿಯರ ಆರೋಗ್ಯ ವ್ಯತ್ಯಯ ಆಗುವ ಸೂಚನೆ ಇರುತ್ತದೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಕರ್ಕಾಟಕ : ಶನಿ ಮತ್ತು ಶುಕ್ರ ಮಿತ್ರರಾದರೂ ಅಷ್ಟಮದಲ್ಲಿ ಇರುವುದರಿಂದ ನಿಮ್ಮ ಆರೋಗ್ಯದ ಕಡೆಗೆ ,ತಾಯಿಯವರ ಆರೋಗ್ಯದ ಕಡೆಗೆ ಗಮನ ಅತೀ ಅಗತ್ಯವಿದೆ,. ವಾಹನ ಸಂಚಾರದಲ್ಲಿ, ಹೆಚ್ಚಿನ ಹಣ ತೊಡಗಿಸುವಾಗ, ಬೆಂಕಿಯ ಬದಿಯಲ್ಲಿ ಕೆಲಸಮಾಡುವವರು ವಿದ್ಯುತ್ ಕಾಮಗಾರಿಯಲ್ಲಿ ಕೆಲಸ ಮಾಡುವವವರು ಎಚ್ಚರ ಇರಬೇಕು. ಬಿಪಿ ಷುಗರ್ ಕಾಯಿಲೆ ಇರುವವರು ವೈದ್ಯರನ್ನು ಭೇಟಿಯಾಗಿರಿ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದಲ್ಲಿ ಒಳಗಾಗುವ ಸಾಧ್ಯತೆ ಇದೆ. ದೇವಿಯ ಪ್ರಾರ್ಥನೆ ಅಗತ್ಯವಾಗಿ ಮಾಡಿರಿ. ನಿರೀಕ್ಷಿತ ಸ್ಥಾನ ಮಾನಗಳಿಗೆ ಹೋರಾಟ ಮಾಡ ಬೇಕಾದ ಅನಿವಾರ್ಯತೆ ಕಾಣುತ್ತಿದೆ. ಧಾರ್ಮಿಕ ವಿಷಯಗಳಲ್ಲಿ ಬೇಸರವನ್ನು ವ್ಯಕ್ತಪಡಿಸುವಿರಿ.
ಸಿಂಹ : ಶುಕ್ರ ಮತ್ತು ಶನಿ ಸಪ್ತಮದಲ್ಲಿ ಜೊತೆಯಾಗಿರುವುದರಿಂದ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಪೂರ್ವಿಕರ ಆಸ್ತಿ ವಿಚಾರ ಚರ್ಚೆಗೆ ಬರಲಿದೆ. ಪಾಲುಗಾರಿಕೆ ವ್ಯವಹಾರ ಕಲಹಕ್ಕೆ ಕಾರಣವಾಗಲಿದೆ. ನಿರೀಕ್ಷಿತ ವರಮಾನ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ದೂರ್ ಪ್ರಯಾಣ ಯೋಗವಿದೆ. ದಾರ್ಮಿಕ ಚಟುವಟಿಕೆಯಲ್ಲಿ ಒತ್ತಾಯಪೂರ್ವಕವಾಗಿ ಭಾಗಿಯಾಗುವಿರಿ. ಕುಜ ವ್ಯಯದಲ್ಲಿ ನೀಚನಾಗಿರುವುದನ್ನು ಗಮನಿಸಿರಿ. ರುದ್ರ ಪಾರಾಯಣ ಮಾಡುವ ಅವಶ್ಯಕತೆ ಇರುತ್ತದೆ. ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ಧಿ ಇರುತ್ತದೆ.”ಓಂ ನಮ: ಶಿವಾಯ” ಮಂತ್ರವನ್ನು108 ಬಾರಿ ಪ್ರತಿ ನಿತ್ಯ ಮಾಡಿರಿ.
ಕನ್ಯಾ : ಗುರು ಭಾಗ್ಯದಲ್ಲಿ ಇದ್ದರೂ ಉಳಿದ ಗ್ರಹರ ಪ್ರತಿಕೂಲ ಪರಿಣಾಮ ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಭೀರಲಿದೆ. ನವಗ್ರಹರ ಜಪ ಅಗತ್ಯವಾಗಿದೆ. ಶಿವ ,ನಾಗ ದೇವರ ಪಾರಾಯಣ ಅಗತ್ಯವಿದೆ.ಆರೋಗ್ಯದ ಕಡೆಗೆ ವಿಶೇಷ ಕಾಳಜಿ ಅಗತ್ಯವಿದೆ. ಈ ರೀತಿಯಲ್ಲಿ ನೀವು ಮುಂದುವರಿದಾಗ ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿದೆ. ಪಾಲುಗಾರಿಕೆ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಮಕ್ಕಳಿಂದ ವಿಶೇಷ ಸುಖವನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳು ವಿಶೇಷ ಪರಿಶ್ರಮ ಪಡುವ ಅವಶ್ಯಕತೆ ಇರುತ್ತದೆ. ಶುಕ್ರ ಶನಿಯ ಜೊತೆ ಇರುವುದರಿಂದ ಮನಸ್ಸು ಚಂಚಲಗೊಳ್ಳದಂತೆ ನೋಡಿಕೊಳ್ಳಬೇಕು. ಭೂಮಿಯ ವ್ಯವಹಾರ ಮಾಡುವವರು ದಾಖಲೆ ಪರಿಶೀಲನೆ ಮಾಡಿಕೊಳ್ಳಬೇಕು .
ತುಲಾ : ಗುರು ಅಷ್ಟಮದಲ್ಲಿ ಇರುವುದರಿಂದ ನಿತ್ಯವೂ ರುದ್ರ ಪಾರಾಯಣ ಮಾಡುವುದು ಅತೀ ಅವಶ್ಯವಾಗಿದೆ. ಸಹೋದರ ವರ್ಗದವರ ಸಹಕಾರ ಸಿಗಲಿದೆ. ಮಕ್ಕಳ ಜೊತೆಗೆ ಮಕ್ಕಳ ಹಾಗೆ ವರ್ತಿಸುವುದು ಅಗತ್ಯವಿದೆ. ಮಕ್ಕಳಿಗೆ ಹೊಡೆಯುವ ಕಾಲ ಹೋಗಿದೆ. ಆರೋಗ್ಯದಲ್ಲಿ ನಿರ್ಲಕ್ಷ್ಯ ಮಾಡಬೇಡಿರಿ. ಉದ್ಯೋಗ ವ್ಯವಹಾರದಲ್ಲಿ ಮೋಸ ಹೋಗದಂತೆ ಜಾಗ್ರತೆ ವಹಿಸಿರಿ. ವಾಹನ ಸಂಚಾರ ಮಾಡುವಾಗ ಎಚ್ಚರವಿರಲಿ. ಸಂಸಾರದಲ್ಲಿ ಒತ್ತಡವಿರುತ್ತದೆ. ಅದನ್ನು ಸರಿದೂಗಿಸಿಕೊಂಡು ಹೋಗುವುದು ನಿಮ್ಮ ಕೈಯಲ್ಲಿ ಇರುತ್ತದೆ. ಬಿಸಿ ಬಿಸಿ ವಾದ ವಿವಾದ ಬರದಂತೆ ಎಚ್ಚರವಹಿಸಿರಿ.
ವೃಶ್ಚಿಕ : ಮೇ 14 ರ ನಂತರ ಗುರು ಅಷ್ಟಮಕ್ಕೆ ಹೋಗುತ್ತಾನೆ .ಅದು ಅವನ ಶತ್ರುವಿನ ಮನೆಯೂ ಹೌದು. ಶನಿ ಪಂಚಮಕ್ಕೆ ಮೀನ ರಾಶಿಗೆ ಹೋಗುತ್ತಾನೆ. ಇದಕ್ಕೆ ಈಗದಿಂದಲೇ ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಪ್ರತಿ ನಿತ್ಯ ಮಾಡುತ್ತಾ ಬಾಟೆರಿ ರೀ ಚಾರ್ಜ್ ಮಾಡಿಕೊಳ್ಳಬೇಕು. ಪ್ರಸ್ತುತ ದೇವರ ಅನುಗ್ರಹ ಇರುವುದರಿಂದ ನೂತನ ಮಿತ್ರರ ಸಮಾಗಮವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಶುಭ ವಾರವಾಗಲಿದೆ. ಶನಿ ಸುಖ ಸ್ಥಾನದಲ್ಲಿ ಮಾರ್ಚ್ 29,2025 ರ ವರೆಗೆ ಇರುವುದನ್ನುಮರೆಯಬೇಡಿರಿ. ಶುಕ್ರ ಜೊತೆಯಲ್ಲಿ ಇರುವುದರಿಂದ ತಂದೆ ತಾಯಿ ಇವರ ಬಗ್ಗೆ ನಿತ್ಯವೂ ಎಚ್ಚರವಾಗಿರಬೇಕು [ಜನವರಿ 28 ರ ವರೆಗೆ ] ಮನೆ ಬದಲಾವಣೆಯ ಸಾಧ್ಯತೆ ಇದೆ ,ವೈರಾಗ್ಯದ ಭಾವನೆ ನಿಮ್ಮಲ್ಲಿ ಬರಲಿದೆ.
ಧನು : ನಿತ್ಯವೂ ದೇವಿ ಚಾಮುಂಡಿಯ ಪಾರಾಯಣ ಅಗತ್ಯವಾಗಿದೆ. ನೀಚ ಕುಜ ಅಷ್ಟಮದಲ್ಲಿ ಇದ್ದಾನೆ.ಧನ ಆದಾಯ ಎಷ್ಟೇ ಇದ್ದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಗುರುವಿನ ಅನುಗ್ರಹಕ್ಕಾಗಿ ರುದ್ರ ಪಾರಾಯಣ /ಓಂ ಶ್ರೀಮ್ ನಮ: ಶಿವಾಯ ll 108 ಬಾರಿ ಹೇಳುವುದು ಅಗತ್ಯವಾಗಿದೆ. ನಾಗದೇವರ ವೃತ ಮಾಡಿದರೆ ಒಳ್ಳೆಯದು ಶತ್ರುಗಳು ಇರುತ್ತಾರೆ.ನಿಮ್ಮ ವಯಕ್ತಿಕ ವಿಷಯಗಳನ್ನು ಯಾರಲ್ಲಿಯೂ ಹೇಳಲು ಹೋಗಬೇಡಿರಿ. ಬರುವ ನಿರ್ಧಿಷ್ಟ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಉತ್ತಮ ವ್ಯಕ್ತಿಗಳ ಒಡನಾಟದಿಂದ ಆತ್ಮ ಸ್ಥೈರ್ಯ ವೃದ್ಧಿ,ಗೃಹ ಉಪಯೋಗಿ ವಸ್ತುಗಳ ಸಂಗ್ರಹ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಆಗುವಿರಿ .
ಮಕರ : ಸಾಡೇ ಸಾತ್ ಶನಿಯ ಪ್ರಭಾವದಿಂದ ಮಾರ್ಚ್ 29,2025 ರಂದು ಹೊರ ಬರಲಿದ್ದೀರಿ. ಪ್ರಸ್ತುತ ದೈವಾನುಗ್ರಹವಿರುತ್ತದೆ. ಸಪ್ತಮದಲ್ಲಿ ನೀಚ ಕುಜನಿರುವುದರಿಂದ ದಾಂಪತ್ಯ ಜೀವನದಲ್ಲಿ ಕಲಹ ,ವಿರಸ ಬರುವ ಸಾಧ್ಯತೆ ಇರುತ್ತದೆ. ಉದ್ಯೋಗದಲ್ಲಿ,ವ್ಯವಹಾರದಲ್ಲಿ ಕಿರಿ ಕಿರಿ ಅನುಭವಿಸಲಿದ್ದೀರಿ. ರಾಜಕೀಯದಲ್ಲಿ ಇರುವವರು ಬರುವ ಸಂಕ್ರಾಂತಿಯ ವರೆಗೆ ಮೌನಾಚರಣೆಯಲ್ಲಿ ಇದ್ದರೆ ಒಳ್ಳೆಯದು. ನಿಮ್ಮ ಆರೋಗ್ಯದ ಕಡೆಗೆ ಜಾಗ್ರತೆ ವಹಿಸಿರಿ. ಪರರಿಗೆ ಸಹಾಯ ಮಾಡುವಾಗ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಿರಿ. ತಾಳ್ಮೆ ವಿವೇಚನೆಯಿಂದ ಕಾರ್ಯ ಸಾಧಿಸಿಕೊಳ್ಳಿರಿ.
ಕುಂಭ : ಸಾಡೇಸಾತ್ ಸಾತ್ ಶನಿಯ ಪ್ರಭಾವ ನಿಮಗೆ ಈಗಾಗಲೇ ತಿಳಿದೇ ಇದೆ. ಮಾರ್ಚ್ 29,2025 ರಂದು ಶನಿ ಮೀನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ. ಅನ್ಯರ ಸಹಾಯವನ್ನು ಅಪೇಕ್ಷಿಸುವ ಬದಲಿಗೆ ಸಾಧ್ಯವಾದಷ್ಟು ಸ್ವಂತ ಪ್ರಯತ್ನ ಮಾಡಿಕೊಳ್ಳುವುದು ಅಗತ್ಯವಾಗಿದೆ. ಉತ್ತಮ ರೀತಿಯ ಧನಾರ್ಜನೆ, ಭೂಮಿ ಕಟ್ಟಡ ,ಸಂಬಂಧಿ ವ್ಯವಹಾರಗಳಲ್ಲಿ ಪ್ರಗತಿ .ಬಂಧು ಮಿತ್ರರ ಮಿಲನ ಸಾಂಸಾರಿಕ ಸುಖ ಸಂತಸ ವೃದ್ಧಿ ಆಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಮಾತಾಡುವಾಗ ಎಚ್ಚರವಿರಲಿ. ದಾನ ಧರ್ಮ ಅಗತ್ಯವಾದರೂ ಅರ್ಹರಿಗೆ ಮಾತ್ರ ಕೊಡುವುದನ್ನು ಮರೆಯಬೇಡಿರಿ.
ಮೀನ : ರಾಹು ಜನ್ಮ ರಾಶಿಯಲ್ಲಿ ಇರುವುದು ,ವ್ಯಯದಲ್ಲಿ ಶುಕ್ರ ಶನಿ ಇರುವುದು ,ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಬೇಕಾದ ಅನಿವಾರ್ಯತೆಯನ್ನು ತಿಳಿಸುತ್ತದೆ. ನೀವು ಎಷ್ಟೇ ಯೋಗ ಪ್ರಾಣಾಯಾಮವನ್ನು ಮಾಡಿದರು ಷುಗರ್ ಕಾಯಿಲೆ ನಿಮ್ಮನ್ನು ಬಿಡಲಿಲ್ಲ.ಉದ್ಯೋಗ ಮಾಡುವಲ್ಲಿ ನಿಮಗೆ ಶತ್ರುಗಳ ಬಾಧೆ ಸಮಸ್ಯೆ ಆಗಲಿದೆ. ಹಣಕ್ಕಾಗಿ ,ಸಾಲಕ್ಕಾಗಿ ನಿಮ್ಮನ್ನು ಪೀಡಿಸಲಿದ್ದಾರೆ. ದಾಂಪತ್ಯದಲ್ಲಿ ಬೇಸರ ಬರದಂತೆ ದುರ್ಗಾ ಪಾರಾಯಣ ಮಾಡಿಕೊಂಡು ಮುಂದುವರಿಯಬೇಕು.ಪಾಲುಗಾರಿಕೆ ವ್ಯವಹಾರದಲ್ಲಿ ತಾಳ್ಮೆ ಸಹನೆ ಅಗತ್ಯವಾಗಿದೆ .ಸಂದರ್ಭಕ್ಕೆ ಸರಿಯಾಗಿ ಆಲೋಚಿಸಿ ನಿರ್ಣಯ ತೆಗೆದುಕೊಳ್ಳುವುದರಿಂದ ಯಶಸ್ಸು ಬರಲಿದೆ .ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು..ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು .ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.






































