ವಾರ ಭವಿಷ್ಯ ದಿನಾಂಕ 28.07.2024 ರಿಂದ 03.08.2024 ರ ವರೆಗೆ
ಮೇಷ : ಗುರು ದ್ವಿತೀಯಾದಲ್ಲಿ ಕುಜನೊಂದಿಗೆ ಇದ್ದಾನೆ .ಶತ್ರು ರಹಿತನಾಗಿ ,ಅರ್ಥ ಲಾಭವನ್ನು
ಹೊಂದುತ್ತಾ ಉತ್ತಮ ದಾಂಪತ್ಯ ಜೀವನವನ್ನು ನಡೆಸುವಿರಿ .ಕುಜ ಅಷ್ಟಮಾಧಿಪತಿಯಾಗಿ
ಗುರುವಿನೊಂದಿಗೆ ಇರುವಾಗ ಆರೋಗ್ಯದ ಬಗ್ಗೆ ಎಚ್ಚರವಹಿಸುವುದು ಅಗತ್ಯವಾಗಿದೆ .ಮಾತು ,ಹಣ
,ನಿಮ್ಮ ಹಿಡಿತದಲ್ಲಿರಲಿ .ಪರಸ್ಪರ ವೈರಿಗಳಾದ ಶುಕ್ರ ,ರವಿ ಸುಖ ಸ್ಥಾನದಲ್ಲಿ ಇದ್ದಾರೆ .ತಾಯಿಯವರ
ಜೊತೆಗೆ ಹೊಂದಾಣಿಕೆಯಿಂದ ಇರುವುದು ಅಗತ್ಯವಿದೆ .ಬುಧ ಪಂಚಮದಲ್ಲಿ ಇದ್ದಾನೆ .ಪತ್ನಿ ,ಮಕ್ಕಳಲ್ಲಿ
ಕಲಹ ಬರದಂತೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ .ರಾಹು
ವ್ಯಯದಲ್ಲಿ ಇರುವುದು ಉತ್ತಮ ಫಲದಾಯಕ ಅಲ್ಲವಾಗಿರುವುದರಿಂದ ನಾಗದೇವರ ಆರಾಧನೆ
ಅಗತ್ಯವಾಗಿದೆ . ನಿಮ್ಮ ವಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು
ಮರೆಯದಿರಿ.
ವೃಷಭ :ಜನ್ಮರಾಶಿಯಲ್ಲಿ ಕುಜ,ಗುರು ಇರುವುದು “ಬಹು ಕಲಹಯುತ :”ನಿಮ್ಮ ವರ್ತನೆ ,ಮಾತಿನ ಶೈಲಿ
ನಿಮ್ಮ ಮನೆಯಲ್ಲಿ ,ದಾಂಪತ್ಯ ಜೀವನದಲ್ಲಿ ಪ್ರಧಾನ ಪಾತ್ರ ವಹಿಸಲಿದೆ .ಸಹೋದರ ವರ್ಗದವರ ಜೊತೆಗೆ
ಹೊಂದಾಣಿಕೆ ಅಗತ್ಯವಾಗಿದೆ .ಬುಧ ಸುಖ ಸ್ಥಾನದಲ್ಲಿ ಇರುವುದು ,ನಿಮ್ಮಲ್ಲಿ ಹೊಸ ಮನೆ ಕಟ್ಟುವ
,ವಾಹನ ಖರೀಧಿ ಮಾಡುವ ,ಜಾಗ ಖರೀಧಿ ಮಾಡುವ ಯೋಗವನ್ನು ಬುಧ ಕೊಡಲಿದ್ದಾನೆ .ಗಣಪತಿ
ದೇವರನ್ನು ಪ್ರಾರ್ಥನೆ ಮಾಡುತ್ತಾ ಬರಬೇಕು..ಹೊಸ ಕೆಲಸಗಳನ್ನು ಆರಂಭ ಮಾಡುವಿರಿ .ಧನಾತ್ಕಕ
ಚಿಂತನೆಯನ್ನು ಮಾಡಿರಿ .ಹೊಸ ಬದಲಾವಣೆಗಳನ್ನು ಸ್ವೀಕರಿಸಲು ತಯಾರಾಗಿರಿ . ಸಗಾತಿಯ ಬಗ್ಗೆ
ವಿಶೇಷ ಕಾಳಜಿ ನಿಮ್ಮಲ್ಲಿರಲಿ.
ಮಿಥುನ :ಕುಜ ಮತ್ತು ಗುರು ವ್ಯಯದಲ್ಲಿ ಇರುವುದರಿಂದ ನಿತ್ಯವೂ ನೀವು ಮಾಡುವ ದೇವರ ಪಾರಾಯಣ
,ನಿಯಮ ಪರಿಪಾಲನೆ ,ಉತ್ತಮ ಜೀವನಕ್ಕೆ ಸಹಕಾರಿಯಾಗಿರುತ್ತದೆ .ಕೇತು ಸುಖ ಸ್ಥಾನದಲ್ಲಿ ಇದ್ದಾನೆ
ಚಿತೆ ಮತ್ತು ಚಿಂತೆ ಒಂದು ಸೊನ್ನೆಯ ವ್ಯತ್ಯಾಸ ಮಾತ್ರಾ ಇರುತ್ತದೆ ,ನಿಮ್ಮ ಅಂತಪ್ರಜ್ಣೆಯನ್ನು ನಂಬಿರಿ
..ನಿಮ್ಮ ದಾರಿಯಲ್ಲಿ ಬರುವ ಸುಖ ಕಷ್ಟಗಳನ್ನು ಸಮಾನರೀತಿಯಲ್ಲಿ ಸ್ವೀಕರಿಸುತ್ತಾ ಮುನ್ನೆಡೆಯಿರಿ
.ದಾಂಪತ್ಯ ಜೀವನದಲ್ಲಿ ಪತಿ ಪತ್ನಿ ಒಂದು ರಥದ ಎರಡು ಚಕ್ರಗಳಂತೆ ಎಂದು ಬಲ್ಲವರು ಹೇಳುವ
ಮಾತು .ಹಿರಿಯರ ಆರೋಗ್ಯದ ಬಗ್ಗೆ ಕಾಲು ನೋವಿನ ಬಗ್ಗೆ ಕಾಳಜಿವಹಿಸಿರಿ.
ಕರ್ಕಾಟಕ : ಶುಕ್ರ ಮತ್ತು ರವಿ ಜನ್ಮ ರಾಶಿಯಲ್ಲಿ ಇದ್ದಾರೆ .ದೇಹಾಯಾಸ ,ಕೋಪ,ರೋಗ ಧನ ನಾಶ
ಉಂಟಾಗಲಿದೆ .ಗುರು ಮತ್ತು ಗುರು ಲಾಭ ಕ್ಷೇತ್ರದಲ್ಲಿ ಇರುವುದರಿಂದ ಹೆಚ್ಚಿನ ತೊಂದರೆಗಳು
ನಿವಾರಣೆಯಾಗಲಿದೆ . ಅಷ್ಟಮದ ಶನಿಗೆ ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣದ ಅಗತ್ಯವಿದೆ
.ಹೊಸ ವ್ಯವಹಾರ ಮಾಡುವಾಗ ಎಚ್ಚರ ವಹಿಸಬೇಕು .ಅನೇಕ ಧನಾತ್ಮಕ ಬದಲಾವಣೆಗಳು ಕಂಡು
ಬರಲಿವೆ ಭಾವನಾತ್ಮಕವಾಗಿ ಸದೃಢರಾಗುವಿರಿ .ಬುಧ ನಿಮ್ಮ ಬಂಧು ಬಾಂಧವರ ಜೊತೆಗೆ ಪ್ರೀತಿ ವಿಶ್ವಾಸ
ಹೆಚ್ಚುವಂತೆ ಮಾಡಲಿದ್ದಾನೆ . ಉದ್ಯೋಗಿಗಳಿಗೆ ಸಣ್ಣ ಪುಟ್ಟ ಕಿರಿಕಿರಿ ಇರುತ್ತದೆ .ಉದ್ಯೋಗ
ಬದಲಾವಣೆಗೆ ಇದು ಸರಿಯಾದ ಸಮಯವಲ್ಲ. ಭೂಮಿ ವ್ಯವಹಾರ ಮಾಡುವವರಿಗೆ ಒಳ್ಳೆಯ
ಸಮಯವಾಗಿದೆ.
ಸಿಂಹ : ಕರ್ಮಾಧಿಪತಿ ಶುಕ್ರ ರವಿಯೊಂದಿಗೆ ವ್ಯಯದಲ್ಲಿ ಇದ್ದಾನೆ .ಉದ್ಯೋಗದಲ್ಲಿರುವವರು
ಎಚ್ಚರವಹಿಸಿರಿ .ಒಂದು ಕೈಯಿಂದ ಹಣವನ್ನು ಸ್ವೀಕರಿಸುತ್ತಾ ಇನ್ನೊಂದು ಕೈಯಿಂದ ವ್ಯರ್ಥ ಖರ್ಚು
ಮಾಡುವ ಕಾಲವಿದು .ಗುರುವಿನ ಅನುಗ್ರಹವಿದೆ .ಜೊತೆಗೆ ಕುಜನಿದ್ದಾನೆ .ಒತ್ತಡದ ಕೆಲಸಗಳ ಮಧ್ಯೆ
ದೇವರ ಪ್ರಾರ್ಥನೆಗೂ ಒಂದಿಷ್ಟು ಸಮಯವನ್ನು ಮೀಸಲಿಡುವುದು ಒಳ್ಳೆಯದು .ಯಾವುದೇ
ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ.ಮನೆಯೇ ಮಂತ್ರಾಲಯ ,ದೇಹವೇ ದೇವಾಲಯ . ಶುದ್ಧವಾದ
ಮನಸ್ಸಿನಿಂದ ಗೋ ಸೇವೆ ಮಾಡಿರಿ . ಬಡವರಿಗೆ ಅನ್ನ ದಾನ ಮಾಡಿರಿ .ತಲೆ ನೋವು ನಿತ್ಯವೂ ಕಾಡುತ್ತಿದೆ
.ನಾಗದೇವರ ಪ್ರಾರ್ಥನೆ ಮಾಡಿರಿ.
ಕನ್ಯಾ : ಕುಜ ಮತ್ತು ಗುರು ಭಾಗ್ಯದಲ್ಲಿ ಇರುವುದರಿಂದ ಮನೆಯಲ್ಲಿ ಅಥವಾ ಸಂಬಂಧಿಕರಲ್ಲಿ ಶುಭ
ಸಮಾರಂಭಗಳು ನಡೆಯಲಿವೆ. ಕೇತು ನಿಮ್ಮ ಜನ್ಮರಾಶಿಯಲ್ಲಿ ಮತ್ತು ರಾಹು ಸಪ್ತಮದಲ್ಲಿ ಇರುವುದು
ನಿಮ್ಮ ನಿದ್ರೆಯನ್ನು ಹಾಲು ಮಾಡಲಿದೆ .ದುಸ್ವಪ್ನ ಬೀಳುವ ಸಾಧ್ಯತೆ ಇರುವುದರಿಂದ ನೀವು ಮಲಗುವ
ಮುಂಚೆ “ರಾಮಮ್ ಸ್ಕಂದಾಮ್ ಹನೂಮಂತಂ ವೈನತೇಯಮ್ ವೃಕೋದರಂ! ಶಯನೇಯ:
ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ !!ಮಂತ್ರವನ್ನು ಹೇಳಿರಿ .ಗಣಪತಿ ಅಷ್ಟೋತ್ತರ ಮಂತ್ರ
ಕೇತುವಿನ ಪರಿಹಾರಕ್ಕಾಗಿ ಹೇಳಬೇಕು .ಹಣ ಕಾಸಿನ ಮುಗ್ಗಟ್ಟು ಈ ವಾರ ಇರುವುದಿಲ್ಲ .ವೈರಾಗ್ಯವನ್ನು
ತಂದು ಕೊಳ್ಳಬೇಡಿರಿ.
ತುಲಾ :ಅಷ್ಟಮದಲ್ಲಿ ಗುರು ಮತ್ತು ಕುಜ ಇರುವುದರಿಂದ ಗಾಣಗಾಪುರ ಕ್ಷೇತ್ರ ದರ್ಶನ ,ಗುರು
ದತ್ತಾತ್ರೇಯ ಚರಿತ್ರೆಯನ್ನು ಓದುವುದು ಅತೀ ಅವಶ್ಯವಾಗಿದೆ .ರಾಶ್ಯಾಧಿಪತಿ ,ಅಷ್ಟಮಾಧಿಪತಿ ಶುಕ್ರ
ರವಿಯೊಂದಿಗೆ ಕರ್ಮ ಕ್ಷೇತ್ರದಲ್ಲಿ ಇರುವುದು ನೀವು ಮಾಡುವ ಯಾವುದೇ ವ್ಯವಹಾರ ,ಉದ್ಯೋಗದಲ್ಲಿ
ನಿರೀಕ್ಷಿತ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.ಕುಜನ ಮಾರಕ ಸ್ಥಿತಿಯೂ ಕಾರಣವಾಗಿದೆ
.ಆರೋಗ್ಯದ ಸಮಸ್ಯೆ ಇರುತ್ತದೆ . ಗುರು 3-6-8 ನೆಯವನಾಗಿದ್ದು ನಿಮಗೆ ಕೊಟ್ಟಿರುವ ಉದ್ಯೋಗ
ಕಷ್ಟವೆನಿಸಲಿದೆ .ಲಾಭ ಕ್ಷೇತ್ರದಲ್ಲಿ ಇರುವ ಬುಧ ನಿಮ್ಮ ಹಣ ಕಾಸಿನ ಪರಿಸ್ಥಿತಿಯನ್ನು ಉತ್ತಮ
ಗೊಳಿಸಲಿದ್ದಾನೆ .ನೀವು ಭೂಮಿ ವಾಹನ ,ಮನೆ ಖರೀಧಿ ಮಾಡುವಿರಿ . ಭಾಗ್ಯಾಧಿಪತಿ ಬುಧ ಲಾಭದಲ್ಲಿ
ಇರುವುದರಿಂದ ಇದು ಸಾಧ್ಯವಾಗಲಿದೆ.
ವೃಶ್ಚಿಕ : ನಿಮ್ಮ ರಾಶ್ಯಾಧಿಪತಿ ಕುಜನು ಗುರುವಿನೊಂದಿಗೆ ಸಪ್ತಮದಲ್ಲಿ ಸ್ತಿತನಾಗಿದ್ದಾನೆ .ಬಹಳ
ಒಳ್ಳೆಯ ಸಮಯ .ನಿಮ್ಮ ಉದ್ಯೋಗ ವ್ಯವಹಾರದಲ್ಲಿ ಲಾಭ ಗಳಿಸುವ ಸಮಯವಾಗಿದೆ .ಕರ್ಮಾಧಿಪತಿ
ಪತಿ ರವಿ ಭಾಗ್ಯದಲ್ಲಿ ,ಹಾಗೆಯೇ ಬುಧ ಲಾಭಾಧಿಪತಿಯಾಗಿ ಕರ್ಮ ಕ್ಷೇತ್ರದಲ್ಲಿ ಇರುವುದು ಸರಕಾರಿ
ಉದ್ಯೋಗದಲ್ಲಿ ಇರುವವರಿಗೆ ,ರಾಜಕೀಯ ಗಣ್ಯರಿಗೆ ಒಳ್ಳೆಯ ಅವಕಾಶ ಒದಗಿ ಬರಲಿದೆ .ವಿದ್ಯಾರ್ಥಿಗಳಿಗೆ
ಪಂಚಮದಲ್ಲಿ ರಾಹು ,ಪಂಚಮಾಧಿಪತಿ ಗುರು ಕುಜನೊಂದಿಗೆ ಸಪ್ತಮದಲ್ಲಿ ಇರುವುದರಿಂದ
ಓದುವುದರಿಂದ ವಿಮುಖರಾಗಿ ಪ್ರೀತಿ ಪ್ರೇಮದ ಬಗ್ಗೆ ಚಿಂತನೆ ಮಾಡುವ ಸಾದ್ಯತೆ ಇದೆ .ಹಿರಿಯರು ತಮ್ಮ
ಮಕ್ಕಳಿಗೆ ಮೊಬೈಲ್ ಕೊಡುವಾಗ ಎಚ್ಚರ ವಹಿಸಿರಿ . ನಿತ್ಯವೂ ನೀವು “ನಮಸ್ತುಳಸಿ ಕಲ್ಯಾಣಿ ನಮೋ
ವಿಷ್ಣುಪ್ರಿಯೇ ಶುಭೇ !ನಮೋ ಮೋಕ್ಷಪ್ರದೇ ದೇವಿ ನಮ ಸಂಪತ್ ಪ್ರದಾಯಿನಿ !! ಈ ಮಂತ್ರವನ್ನು
ತುಳಸಿಗೆ ದೀಪ ಬೆಳಗಿಸಿ ಹೇಳಿರಿ.
ಧನು : ನಿಮ್ಮ ರಾಶ್ಯಾಧಿಪತಿ ಗುರು ,ಮಂಗಳನೊಂದಿಗೆ ಆರನೆಯ ಮನೆಯಲ್ಲಿ ಇರುವುದರಿಂದ ಆರೋಗ್ಯ
ಮತ್ತು ಹಣ ಕಾಸಿನ ವಿಷಯದಲ್ಲಿ ಎಚ್ಚರವಹಿಸಿರಿ .ಯಾರಿಗೂ ಇಡೀ ವರ್ಷ ಶಾಲಾ ಕೊಡಲು
ಹೋಗಬೇಡಿ .ವಿಷ್ಣು ಸಹಸ್ರನಾಮ ಪಾರಾಯಣ ಮಾಡಲೇ ಬೇಕು .ಬಿಪಿ ಇರುವವರು ಎಚ್ಚರವಹಿಸಿರಿ
.ಅಷ್ಟಮದಲ್ಲಿ ಶುಕ್ರ ಮತ್ತು ರವಿ ಇದ್ದಾರೆ .ಆದಿತ್ಯ ಹೃದಯ ಮಂತ್ರ ಪ್ರತಿ ನಿತ್ಯ ಹೇಳಲು
ಮರೆಯಬೇಡಿರಿ ,ಷುಗರ್ ಸಮಸ್ಯೆ ಇರುವವರು ಎಚ್ಚರ ವಹಿಸಿರಿ .ಉದ್ಯೋಗದಲ್ಲಿ ಇರುವವರಿಗೆ
,ರಾಜಕೀಯ ವ್ಯಕ್ತಿಗಳಿಗೆ ಒತ್ತಡ ವಿರುತ್ತದೆ ..ನೀವು ಮಾಡುವ ಯಾವುದೇ ಧಾರ್ಮಿಕ ವಿಷಯಗಳಲ್ಲಿ ಅಡೆ
ತಡೆ ಇರುತ್ತದೆ .ಕನಕ ಪುಷ್ಯರಾಗ ಉಂಗುರದಲ್ಲಿ ಅಥವಾ ಹಾರದಲ್ಲಿ ಧರಿಸಬಹುದು.
ಮಕರ : ನಿಮಗೆ 29.03.2025 ರಂದು ಸಾಡೇ ಸಾತ್ ಶನಿಯ ತೊಂದರೆ ಮುಕ್ತಾಯವಾಗಲಿದೆ .ಶನಿ
ದ್ವಿತೀಯಾದಲ್ಲಿ ಇದ್ದಾನೆ ,ನಿಮ್ಮ ಕುಟುಂಬದೊಳಗಿನ ವಿವಾದ ,ಹಣ ಕಾಸಿನ ವಿಷಯದಲ್ಲಿ ಈ ವರೆಗೆ
ಇದ್ದ ಸಮಸ್ಯೆಗಳು ಪರಿಹಾರವಾಗುತ್ತಾ ಬರುತ್ತಿವೆ .ಹಿತ ಶತ್ರುಗಳೂ ನಿಮ್ಮ ಆಪ ಪ್ರಚಾರ ಮಾಡುವ
ಸಮಯ . ಸಪ್ತಮದಲ್ಲಿ ರವಿ ಮತ್ತು ಶುಕ್ರ ಇದ್ದಾರೆ . ರವಿ ಅಷ್ಟಮದವನು .ಪತಿ ಪತ್ನಿ ಭಿನ್ನಾಭಿಪ್ರಾಯ
ಹೊಂದುವ ಸಮಯವೂ ಹೌದು .ಕುಜ ಮತ್ತು ಗುರು ಪಂಚಮದಲ್ಲಿ ಇದ್ದಾರೆ .ಕುಜ ಸುಖಾಧಿಪತಿ
ಆಗಿರುವುದರಿಂದ ,ಭೂಮಿ ಮನೆ ವಾಹನ ಖರೀಧಿ ಮಾಡುವ ಸಾಧ್ಯತೆ ಕಂಡು ಬರುತ್ತಿದೆ .ನೀವು ಮಾಡುವ
ಉದ್ಯೋಗದಲ್ಲಿ ,ವ್ಯವಹಾರದಲ್ಲಿ ಒತ್ತಡಗಳು ಇರುತ್ತದೆ .ಆದಿತ್ಯ ಹೃದಯ ಮಂತ್ರವನ್ನು ಹೇಳುತ್ತಾ
ಬನ್ನಿರಿ .ಕೆಲಸ ಬಿಡುವ ,ಬದಲಾಯಿಸುವ ತೀರ್ಮಾನ ಸದ್ಯಕ್ಕೆ ಬೇಡ.
ಕುಂಭ : ನಿಮ್ಮ ರಾಶ್ಯಾಧಿಪತಿ ಶನಿ ಜನ್ಮ ರಾಶಿಯಲ್ಲಿ ಇದ್ದು ಸಾಡೇ ಸಾತ್ ಶನಿಯ ಪ್ರಭಾವದಲ್ಲಿ
ಇದ್ದೀರಿ .ಎಳ್ಳೆಣ್ಣೆಯ ದೀಪವನ್ನು ಬೆಳಗಿಸಿ .ವಿಷ್ಣು ಸಹಸ್ರನಾಮ ಮಂತ್ರ ಪಾರಾಯಣ ಮಾಡಿರಿ
.ಸಪ್ತಮದಲ್ಲಿ ಪಂಚಮಾಧಿಪತಿ ಬುಧನಿರುವುದರಿಂದ ,ಕುಜ ಮತ್ತು ಗುರು ಸುಖ ಸ್ಥಾನದಲ್ಲಿ
ಇರುವುದರಿಂದ ಬಹಳ ಒಳ್ಳೆಯ ಸಮಯ ,ಅಭಿವೃದ್ಧಿ ಹೊಂದುತ್ತಿರುವ ಶುಭ ಸಮಯದಲ್ಲಿ ಇದ್ದೀರಿ
.ವಿದ್ಯಾರ್ಥಿಗಳು ಉತ್ತಮ ಪ್ರಗತಿಯನ್ನು ತೋರಿಸಲಿದ್ದಾರೆ .ನಿಧಾನವಾಗಿ ಸಾಗುವ ,ಉತ್ತಮವಾದ
ರೀತಿಯಲ್ಲಿ ಸಾಗುವ ನಿಮ್ಮ ಉದ್ಯೋಗ,ವ್ಯವಹಾರಗಳು .ರಾಹು ದ್ವಿತೀಯಾದಲ್ಲಿ ಇದ್ದು ವಾದ
ವಿವಾದಗಳಿಂದ ದೂರವಿರುವಂತೆ ಸೂಚನೆ ಕೊಡುತ್ತಿದ್ದಾನೆ .ನಿಮ್ಮ ತಾಯಿಯವರ ಆರೋಗ್ಯದ
ಆರೋಗ್ಯದ ಬಗ್ಗೆ ನಿಮ್ಮ ಗಮನ ಅಗತ್ಯವಿದೆ .ಶುಕ್ರ ಮತ್ತು ಚಂದ್ರನಿಗೆ ದುರ್ಗಾ ಸಪ್ತ ಶತೀ ಪಾರಾಯಣ
,ಅಷ್ಟೋತ್ತರೆ ಪಾರಾಯಣ ಮಾಡಿರಿ.
ಮೀನ : ನಿಮ್ಮ ರಾಶ್ಯಾಧಿಪತಿ ಗುರು ,ಕುಜನೊಂದಿಗೆ ತೃತೀಯಾದಲ್ಲಿ ಇದ್ದಾನೆ .ಕುಜ
ದ್ವಿತೀಯಾಧಿಪತಿಯಾಗಿದ್ದಾನೆ .ನಿಮ್ಮ ಮನಸ್ಸಿನಲ್ಲಿ ಹಣ ಕಾಸಿನ ಬಗ್ಗೆ ಭಯ ,ಗೊಂದಲವಿರುತ್ತದೆ
.ವ್ಯಯದಲ್ಲಿಇರುವ ಶನಿ ಸಾಡೇ ಸಾತ್ ಶನಿಯ ದೋಷವನ್ನು ಕೊಡುತ್ತಿದ್ದಾನೆ .ನಿಮ್ಮ ಮೂಲ
ಜಾತಕದಲ್ಲಿ ಶನಿ ಲಗ್ನದಿಂದ ಎಲ್ಲಿ ಇದ್ದಾನೆ ಎಂದು ಗಮನಿಸಬೇಕು .ಹಿತ ಶತ್ರುಗಳೂ ನಿಮ್ಮ
ವಿರುದ್ಧವಾಗಿ ಮಾತನಾಡಲಿದ್ದಾರೆ .ಭಗವಂತನಿಗೆ ಶರಣಾಗತಿ ಆಗುವುದನ್ನು ನೀವು ಕಲಿತು ಕೊಳ್ಳುವುದು
ಅಗತ್ಯವಿದೆ .”ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ “ ಜನ್ಮ ರಾಶಿಯಲ್ಲಿ ರಾಹು ಇದ್ದಾನೆ .6
ನೇ ಮನೆಯಲ್ಲಿ ಸುಖಾಧಿಪತಿ ಬುಧ ಇರುವುದರಿಂದ ಸೆಪ್ಟೆಂಬರ್ 23 ರ ವರೆಗೆ ಮನೆ ಭೂಮಿ ವಾಹನ
ಖರೀಧಿ ಮಾಡುವ ಯೋಚನೆ ಮಾಡುವುದು ಬೇಡ .ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ
ಮಾಡಿಕೊಳ್ಳುವ ಸಾಧ್ಯತೆ ಇದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು .ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು .




































