


ವಾರ ಭವಿಷ್ಯ ದಿನಾಂಕ 27. 10.2024 ರಿಂದ 02.11.2024 ರವರೆಗೆ
ವಿಶೇಷ ದಿನಗಳು :
29.10.2024……ವೃಶ್ಚಿಕ ರಾಶಿಗೆ ಬುಧನ ಪ್ರವೇಶ
30.10.2024……ದೀಪಾವಳೀ ಪ್ರಯುಕ್ತ ಸಾಯಂಕಾಲ ಜಲ ಪೂರಣ
31.10.2024……ಘಂಟೆ 5.17 ಕ್ಕೆ ಬೆಳಿಗ್ಗೆ ತೈಲಾಭ್ಯಂಗ;ನರಕ ಚತುರ್ದಶಿ ;ಯಮ ತರ್ಪಣಮ್
;ದೀಪಾವಳೀ ಲಕ್ಷ್ಮೀ ಪೂಜಾ
01.11.2024…..ದೀಪಾವಳೀ ಅಮಾವಾಸ್ಯಾ ,ಆಕಾಶ ದೀಪ
02.11.2024….ಗೋ ಪೂಜಾ ,ಬಲೀಂದ್ರ ಪೂಜಾ ;ತುಲಸೀ ಪೂಜಾರಂಭ
ಮೇಷ : ಅದೃಷ್ಟ ನಿಮ್ಮ ಜೊತೆಯಲ್ಲಿದೆ .ಬೇರೆಯವರಿಗೆ ಕಷ್ಟವಾಗುವ ಕೆಲಸ ನಿಮಗೆ ಸುಲಭವಾಗಲಿದೆ.
ಕುಜ ನೀಚನಾಗಿ ಸುಖ ಸ್ಥಾನದಲ್ಲಿ ಇರುವಾಗ ಸ್ವಂತ ಭೂಮಿ/ಮನೆ ಕೊಳ್ಳುವ ವಿಚಾರ ಸಧ್ಯಕ್ಕೆ ಬೇಡ.
ವಿದ್ಯಾರ್ಥಿಗಳು ಮನಸ್ಸಿಟ್ಟು ಓದಿದಾಗ ನಿಮ್ಮಲ್ಲಿರುವ ಪ್ರತಿಭೆಗೆ ಸರಿಯಾದ ಪುರಸ್ಕಾರ ದೊರೆಯಲಿದೆ.
ರವಿ ನೀಚನಾಗಿ ಸಪ್ತಮದಲ್ಲಿ ಇರುವುದರಿಂದ ಸಂಗಾತಿಯೊಂದಿಗೆ ಹೊಂದಿಕೊಂಡು ಹೋಗುವುದು
ಅಗತ್ಯವಾಗಿದೆ . ಶುಕ್ರ ಅಷ್ಟಮದಲ್ಲಿ ಇದ್ದಾನೆ. ಪರಸ್ಪರ ನಂಬಿಕೆ ,ವಿಶ್ವಾಸ ದಾಂಪತ್ಯದಲ್ಲಿ ಬಹಳ
ಮುಖ್ಯವಾಗಿದೆ. ಲಿಲತಾ ಸಹಸ್ರ ನಾಮ ಪಾರಾಯಣ ಮಾಡುವುದು ಅಗತ್ಯವಾಗಿದೆ.
ವೃಷಭ :ಇಷ್ಟಪಟ್ಟ ಕೆಲಸಗಳನ್ನು ಸುಲಭವಾಗಿ ಮಾಡುವಿರಿ. ಪ್ರತಿಷ್ಠಿತ ಸ್ಥಾನ ಮಾನ ಗಳಿಸುವಿರಿ.
ಬರುವ ಹಣ ಆಗುತ್ತಿರುವ ಖರ್ಚಿಗೆ ಸಮಾನವಾಗಿರುತ್ತದೆ. ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು
ಮಾಡಲಿದ್ದಾರೆ. ದುಡುಕು ತನದ ವರ್ತನೆ ತೊದರೆಗೆ ಕಾರಣವಾದೀತು.ಸಪ್ತಮದಲ್ಲಿ ಶುಕ್ರ ಇರುವುದರಿಂದ
ದಂಪತಿಗಳ ನಡುವೆ ಅನ್ಯೋನ್ಯತೆ ಇರಲಿ. ಸರಕಾರಿ ಅಧಿಕಾರಿಗಳು ಸಹೋದ್ಯೋಗಿಗಳ ವಿರೋಧ
ಎದುರಿಸಬೇಕಾಗುತ್ತದೆ. ಧಾರ್ಮಿಕ ಭಾವನೆಗಳ ಕಡೆಗೆ ನಿಮ್ಮ ಮನಸ್ಸು ವಾಲುತ್ತಿದೆ. ರಾಜಕೀಯ ಗಣ್ಯರಿಗೆ
ಜವಾಬ್ದಾರಿ ಹೆಚ್ಚಾಗಲಿದೆ. ಮೂತ್ರಾಶಯದ ಸೋಂಕು ಬರುವ ಸಾಧ್ಯತೆ ಇರುವುದರಿಂದ ನೀರು ಹೆಚ್ಚು
ಕುಡಿಯಿರಿ.
ಮಿಥುನ : ವ್ಯಯದಲ್ಲಿರುವ ಗುರು ಸ್ಥಿರ ಬುದ್ಧಿಯನ್ನು ಕೊಡಲಾರನು. ಪದೇ ಪದೇ ತಮ್ಮ
ನಿರ್ಧಾರಗಳನ್ನು ಬದಲಾಯಿಸುತ್ತಾ ಹೋಗುವಿರಿ. ಉತ್ತಮ ಅವಕಾಶಗಳು ಕೈತಪ್ಪಿ ಹೋಗುವ ಸಾಧ್ಯತೆ
ಇರುತ್ತದೆ. ವಿದ್ಯಾರ್ಥಿಗಳು ಉತ್ತಮ ಶ್ರಮ ಪಾಡಬೇಕು. ಕುಟುಂಬದಲ್ಲಿ ಅನ್ಯೋನ್ಯತೆ ಇರುತ್ತದೆ .ಹೆಚ್ಚಿನ
ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ವಕೀಲ ವೃತ್ತಿಯವರು ವಿಶೇಷ ಸ್ಥಾನ ಮಾನ
ಗಳಿಸುವರು. ಸರಕಾರಿ ಉದ್ಯೋಗಸ್ಥರು ವರ್ಗಾವಣೆಯಾಗುವ ಸಾಧ್ಯತೆ ಇದೆ. ಬಡ್ತಿಗೆ ಮೇ 14 ರ ವರೆಗೆ
ಕಾಯ ಬೇಕಾಗುತ್ತದೆ. ರಾಜ ಕಾರಣಿಗಳಿಗೆ ಉತ್ಥಮ ಸಮಯವಾಗಿದೆ. ತಾಂತ್ರಿಕ ಪರಿಣತಿ ಇರುವವರು
ಉತ್ತಮ ಉದ್ಯೋಗ ಪಡೆದು ಕೊಳ್ಳಲಿದ್ದಾರೆ.
ಕರ್ಕಾಟಕ : ನಿಮಗಿರುವ ಒಂದೇ ಸಮಸ್ಯೆ ಎಂದರೆ ಗುರು ಲಾಭ ಕ್ಷೇತ್ರದಲ್ಲಿ ಇದ್ದರೂ ಯಾವುದೇ ಆರ್ಥಿಕ
ಅಭಿವೃದ್ಧಿ ಆಗುತ್ತಿಲ್ಲ. ಯಾಕೆಂದರೆ ಜನ್ಮ ರಾಶಿಯಲ್ಲಿ ಇರುವ ಕುಜ, ಅಷ್ಟಮದಲ್ಲಿ ಶನಿ
ಇರುವುದು ಇದಕ್ಕೆ ದುರ್ಗೆ ಮತ್ತು ನಾಗ ದೇವರ ಪ್ರಾರ್ಥನೆಯನ್ನು ಮಾಡಿಕೊಂಡು ಬರಲೇ ಬೇಕು.
ಆತ್ಮವಿಶ್ವಾಸ –ಆರೋಗ್ಯವನ್ನು ವೃದ್ಧಿಸುತ್ತದೆ ಆಗ ತಾನಾಗಿಯೇ ಕುಟುಂಬದಲ್ಲಿ –ನೆಮ್ಮದಿ ಇರುತ್ತದೆ.
ಕುಜ ಶನಿಯ ಕಾರಣದಿಂದ ಆರೋಗ್ಯದ ಸಮಸ್ಯೆ ,ಸಿಟ್ಟು ಉದ್ವೇಗದ ಸಮಸ್ಯೆ, ಸಾಲದ ಸುಳಿಯಲ್ಲಿ
ಬೇಳುವುದು ನಿಷ್ಟುರದ ಮಾತಿನಿಂದಾಗಿ ಉದ್ಯೋಗ ಮಾಡುವಲ್ಲಿ ಏಳು ಬೀಳುಗಳು ಇರುವುದು. ಮೂಳೆ
ತಜ್ನರು ಆದಾಯದ ಜೊತೆಗೆ ಕೀರ್ತಿ ಪ್ರತಿಷ್ಠೆ ಪಡೆಯಲಿದ್ದಾರೆ. ಮನ: ಶಾಸ್ತ್ರಜ್ನರಿಗೆ ಉತ್ತಮ ಅವಕಾಶ
ದೊರೆಯಲಿದೆ.
ಸಿಂಹ : ಕುಜ ಸುಖಾಧಿಪತಿ ,ಭಾಗ್ಯಾಧಿಪತಿ ಹಾಗೆಯೇ ನೀಚನಾಗಿ ವ್ಯಯದಲ್ಲಿ ಇರುವುದು. ಏಕಾಂಗಿತನ
ಕಾಡಬಹುದು. ಲಲಿತಾ ಸಹಸ್ರನಾಮ ಪಾರಾಯಣ ಮಾಡುತ್ತಾ ಬರಬೇಕು. ಹಿರಿಯರ ಮಾತಿಗೆ ಗೌರವ
ಕೊಡಬೇಕು ವಾಹನ ಚಾಲನೆಯಲ್ಲಿ ಎಚ್ಚರವಿರಬೇಕು. ಅತೀ ಕ್ಲಿಷ್ಟಕರ ಸಮಸ್ಯೆಗಳನ್ನು
ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳುವಿರಿ. ಸ್ವಂತ ಮನೆ ಮಾಡಿಕೊಳ್ಳುವ ನಿಮ್ಮ ಕನಸು ನನಸಾಗಲು
ಒಂದೂವರೆ ತಿಂಗಳು ಇನ್ನೂ ಬೇಕಾಗುತ್ತದೆ. ವಿದ್ಯಾರ್ಥಿಗಳು ನೀರಿನ ಬದಿಗೆ ಹೋಗಿ,ಈಜಲು ಬಾರದೇ
ಇದ್ದಲ್ಲಿ ನೀರಿಗೆ ಇಳಿಯಬಾರದು. ಉದ್ಯೋಗ ಮಾಡುವಲ್ಲಿ ತಾಳ್ಮೆ ಕಳೆದುಕೊಳ್ಳಬಾರದು.
ಕನ್ಯಾ : ಭಾಗ್ಯದಲ್ಲಿ ಇರುವ ಗುರು ನಿಮ್ಮ ಅಭಿಲಾಷೆಗಳನ್ನು ಈಡೇರಿಸಲಿದ್ದಾನೆ. ಸದಾ ಅಭಿವೃದ್ಧಿಯತ್ತ
ಸಾಗುವಿರಿ. ದ್ವಿತೀಯಾದಲ್ಲಿ ವ್ಯಾಯಾಧಿಪತಿ ರವಿ ನೀಚನಾಗಿ ಬುಧನೊಂದಿಗೆ ಇರುವುದು ನಿಮ್ಮ
ಸಂಪಾದನೆಯ ರೀತಿ ಧಾರ್ಮಿಕ ರೀತಿಯಲ್ಲಿ ಇರಲಿ, ನ್ಯಾಯಯುತವಾಗಿರಲಿ. ಮಾತಿನಲ್ಲಿ ಹಿಡಿತವಿರಲಿ.
ಹಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ ದಾಂಪತ್ಯದಲ್ಲಿ ರಾಹು –ಕೇತು ನೆಮ್ಮದಿಯನ್ನು ಹಾಳು
ಮಾಡಲು ನೋಡಿದರೂ ನಿಮ್ಮ ಹಿಡಿತವಿದ್ದರೆ ಸಮಸ್ಯೆ ಬರಲು ಸಾಧ್ಯವಿಲ್ಲ. ಕುಜ ಭೂಮಿ
ವ್ಯವಹಾರದವರಿಗೆ ಉತ್ತಮ ಲಾಭ ಬರುವ ಸಮಯವನ್ನು ಸೂಚಿಸುತ್ತಿದೆ. ಶನಿಯಿಂದ ಸಮಸ್ಯೆ ಇಲ್ಲ .
ಶುಕ್ರನಿಂದಾಗಿ ಆಡಂಭರದ ಜೀವನವನ್ನು ನಡೆಸುವಿರಿ.
ತುಲಾ : ಗುರುವಿನ ಅನುಗ್ರಹವಿರುವುದಿಲ್ಲ. ಜನ್ಮದಲ್ಲಿ ನೀಚ ರವಿಯೊಂದಿಗೆ ಬುಧ
ವ್ಯಾಯಾಧಿಪತಿಯಾಗಿರುವುದು. ತಂದೆಯವರ ,ಹಿರಿಯರ ಆರೋಗ್ಯದ ಕಡೆ ,ನಿಮ್ಮ ಆರೋಗ್ಯದ ಕಡೆಗೆ
ವಿಶೇಷ ಎಚ್ಚರವಹಿಸುವುದು. ಈ ಸಮಯದಲ್ಲಿ ಕೆಲವೊಂದು ಕೆಲವೊಂದು ಚಿಂತೆಗಳು ಭಾಡಿಸಲಿವೆ. ನಿಮಗೆ
60+ ಪ್ರಾಯವಾಗಿದ್ದರೆ ಮನಸ್ಸಿಗೆ ಋಣಾತ್ಮಕ ಭಾವನೆ ಬರಲಿದೆ. ಕೆಲವೊಂದು ವ್ಯಾಜ್ಯಗಳಲ್ಲಿ
ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಬೇಡದ ಕಲಹಗಳನ್ನು ಪಂಚಮದ ಶನಿ ತರುವುದರಿಂದ ತಾಳ್ಮೆಯಿಂದ
ವರ್ತಿಸಿರಿ. ನಿಮ್ಮ ಸಂಗಾತಿಯ ಬಾಂಧವ್ಯ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಯಶಸ್ಸು,-ಪ್ರಶಂಸೆ,
ನೀವು ಇಚ್ಛಿಸುವ ಸ್ಥಳಕ್ಕೆ ವರ್ಗಾವಣೆ ನಡೆಯಲಿದೆ. ಮೃತ್ಯುಂಜಯ ಜಪ ಕಡ್ಡಾಯವಾಗಿ ಮಾಡಿರಿ.
ವೃಶ್ಚಿಕ : ಉತ್ತಮ ದೈವಾನುಗ್ರಹವಿದೆ. ಸುಖ ಸ್ಥಾನದ ಶನಿಯಿಂದಾಗಿ ಕುಜ ನೀಚನಾಗಿ ಭಾಗ್ಯದಲ್ಲಿ
ಇರುವುದರಿಂದ ಹಿರಿಯರ ಅನಾರೋಗ್ಯ ಸ್ಥಿತಿ ನಿಮ್ಮ ಆರ್ಥಿಕ ಸ್ಟಿತಿಯನ್ನು ಅಡಿಮೇಲು ಮಾಡಲಿದೆ. ಅಪರಿಚಿತ ಮಹಿಳೆಯರ ವಿಷಯದಲ್ಲಿ ಎಚ್ಚರವಿರಲಿ. ಮಾನಸಿಕ ಚಿಂತೆ ,ಇರುತ್ತದೆ, ಭೂಮಿ ಖರೀಧಿ
,ವಾಹನ ಖರೀಧಿ ಸಧ್ಯಕ್ಕೆ ಬೇಡ ,.ದುರ್ಗಾಸಪ್ತಶತೀ ಪಾರಾಯಣ ಮಾಡಿರಿ /ಮಾಡಿಸಿರಿ .ನಿಮ್ಮ ಯಾವುದೇ
ವ್ಯವಹಾರದಲ್ಲಿ ಗೊಂದಲ ಬೇಡ .ಗುಪ್ತ ವ್ಯವಹಾರಗಳ ಕಡೆಗೆ ನಿಮ್ಮ ಗಮನ ಹೋಗುವ ಸಾಧ್ಯತೆ ಇದೆ.
ಧನು : ಶುಕ್ರ ವ್ಯಯದಲ್ಲಿ ಇದ್ದಾನೆ . ದೈವಾನುಗ್ರಹವಿಲ್ಲ ಕುಜ ನೀಚನಾಗಿ ಅಷ್ಟಮದಲ್ಲಿ ಇದ್ದಾನೆ.
ಬಿಪಿ ಷುಗರ್ ನಿಮ್ಮ ಪ್ರಾಯಕ್ಕೆ ಅನುಸಾರವಾಗಿ ಹಿಡಿತದಲ್ಲಿರಲಿ ರಾಹು ಸುಖ ಸ್ಥಾನದಲ್ಲಿ ಇದ್ದಾನೆ.
ನಿಮ್ಮ ಪ್ರಾಯ 60+ ಆಗಿದ್ದರೆ ವಾರ್ಷಿಕ ದೈಹಿಕ ಪರೀಕ್ಷೆಯನ್ನು ಮಾಡಿಸಲು ಮರೆಯಬೇಡಿರಿ.
ರಾಜಕೀಯ ವ್ಯಕ್ತಿಗಳಿಗೆ ಸಕಾಲವಾಗಿದೆ .ಆದರೂ ರವಿ ನೀಚನಾಗಿ ಇರುವುದರಿಂದ ನೀವು ನಡೆಯುವ ದಾರಿ
ನ್ಯಾಯ –ಧರ್ಮ –ಸತ್ಯದಿಂದ ಕೂಡಿರಲಿ .ದೂರ ಪ್ರಯಾಣ ಸಾಧ್ಯತೆ ಇರುತ್ತದೆ. ಪತ್ನಿಯ ಕಡೆಯಿಂದ
ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಆಭರಣಗಳ ಖರೀಧಿ ಮಾಡುವಿರಿ. ರುದ್ರ ಪಾರಾಯಣ ಮಾಡಿರಿ
/ಮಾಡಿಸಿರಿ.
ಮಕರ : ಸಾಡೇ ಸಾತ್ ಶನಿಯ ಪ್ರಭಾವ 2025, ಮಾರ್ಚ 29 ತಾರೀಕಿನವರೆಗೆ ಮುಂದುವರಿಯಲಿದೆ.
ಸಪ್ತಮದಲ್ಲಿ ನೀಚ ಕುಜನಿದ್ದಾನೆ. ದಾಂಪತ್ಯದಲ್ಲಿ ಕಿರಿ ಕಿರಿ ನೀವು ಮಾಡಿಕೊಳ್ಳುವ ಸಾಧ್ಯತೆ ಇದೆ.
ಗುರುವಿನ ಅನುಗ್ರಹ ಇರುವುದರಿಂದ ನೀವು ಎಚ್ಚರವಿದ್ದರೆ ಸಮಸ್ಯೆ ಆಗಲಿಕ್ಕಿಲ್ಲ. ಕಾನೂನು
ವ್ಯಾಜ್ಯಗಳಲ್ಲಿ ನೀವು ಒಳಗೊಂಡಿದ್ದರೆ ನಿಮಗೆ ಜಯವಾಗಲಿದೆ. ಹಣದ ವಿಷಯದಲ್ಲಿ ಎಚ್ಚರವಿರಬೇಕು.
ವಾದ –ವಿವಾದಗಳಿಗೆ ಅವಕಾಶ ಕೊಡಬಾರದು. ಉದ್ಯೋಗದ ನಿರೀಕ್ಷೆಯಲ್ಲಿರುವ ವರಿಗೆ ಒಳ್ಳೆಯ
ಅವಕಾಶ ಸಿಗಲಿದೆ. ಸಿಕ್ಕಿದ ಉದ್ಯೋಗಕ್ಕೆ ಹೋಗಬೇಕು. ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ
ಬರಬೇಕು. ಯೋಗ ಪ್ರಾಣಾಯಾಮ ಮಾಡಿಕೊಂಡು ಬನ್ನಿರಿ.
ಕುಂಭ : ನಿಮ್ಮ ಜನ್ಮ ರಾಶಿಯಲ್ಲಿ ಶನಿ ಇದ್ದಾನೆ. 2025,ಮಾರ್ಚ್ 29 ಕ್ಕೆ ಮೀನ ರಾಶಿಯನ್ನು ಪ್ರವೇಶ
ಮಾಡಲಿದ್ದಾನೆ. ಸಹೋದರನಿಗೆ ಆರೋಗ್ಯದ ಸಮಸ್ಯೆ ,ಭೂಮಿಗಾಗಿ ವಾದ ವಿವಾದ ಬರುವ ಸಾಧ್ಯತೆ ಇದೆ.
ನೀವು ನಡೆಸುತ್ತಿರುವ ಉದ್ಯಮದಲ್ಲಿ ಪತ್ನಿಯ ಉತ್ತಮ ಸಹಕಾರ ದೊರೆಯಲಿದೆ .ಆದಾಯ
ಹೆಚ್ಚಾಗಲಿದೆ .ಬಟ್ಟೆಯ ಉದ್ಯಮ ,ಹೊಟೇಲ್ ,ಸಿನೆಮಾ ರಂಗದಲ್ಲಿ ಇರುವವರಿಗೆ ಒಳ್ಳೆಯ ಸಮಯ
.ವ್ಯರ್ಥ ಖರ್ಚು ಬರದಂತೆ ನೋಡಿಕೊಳ್ಳಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು
ತೊಡಗಿಸಿಕೊಳ್ಳುವಿರಿ. ಗುರುವಿನ ಅನುಗ್ರಹಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಮೀನ : ಗುರುವಿನ ಅನುಗ್ರಹದ ಕೊರತೆ ,ಮಕ್ಕಳ ವಿಷಯದಲ್ಲಿ ಚಿಂತೆ ಬರುವ ಸಾಧ್ಯತೆ. ದಾಂಪತ್ಯದಲ್ಲಿ
ಕಿರಿಕಿರಿ ಬರುವ ಸಾಧ್ಯತೆ ಇರುತ್ತದೆ. ನೀಚನಾಗಿ ರವಿ ಬುಧನೊಂದಿಗೆ ಅಷ್ಟಮದಲ್ಲಿ 6ನೆಯವನಾಗಿ
ಇರುವುದರಿಂದ ಒಮ್ಮೆ ವೈದ್ಯಕೀಯ ತಪಾಸಣೆ ಈಸಿಜಿ ಎಕೋ ,ಟ್ರೆಡ್ಮಿಲ್ ಮಾಡಿಸಿ ಕೊಳ್ಳಿರಿ. 60 ರ
ಆಸುಪಾಸಿನಲ್ಲಿ ಇರುವವರು ಅಗತ್ಯವಾಗಿ ಮಾಡಿಸಿರಿ. ಮದ್ಯ ಸೇವನೆ ಮಾಡುವವರು ನಿಲ್ಲಿಸಲೇ ಬೇಕು.
ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ನೀವು ವ್ಯಾಯಾಮ ಮಾಡುತ್ತಿದ್ದರೆ ಹೆಚ್ಚು
ಒತ್ತಡ ಹಾಕುವ ,ವೇಗವಾಗಿ ಉಸಿರಾಡುವ ವಿಷಯದಲ್ಲಿ ಆಯಾಸ ಮಾಡಿಕೊಂಡು ಮುಂದುವರಿಸುವುದು
ಬೇಡ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯ ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು
ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.





























