ವಾರ ಭವಿಷ್ಯ ದಿನಾಂಕ 27.04.25 ರಿಂದ 03.0.025 ರ ವರೆಗೆ
ವಿಶೇಷ ದಿನಗಳು
30.04.2025……..ಅಕ್ಷಯ ತೃತೀಯ
02.05.2025……..ಶಂಕರ ಜಯಂತಿ ,ರಾಮಾನುಜ ಜಯಂತಿ
03.05.2025……..ಗಂಗೋತ್ಪತ್ತಿ [ಮಳೆ ಆರಂಭ ]
ಮೇಷ : ವ್ಯಯದಲ್ಲಿ ಶುಕ್ರ ಶನಿ ರಾಹು ಇದ್ದು ಜನ್ಮ ರಾಶಿಯಲ್ಲಿ ರವಿ ಬುಧ ,ತೃತೀಯಾದಲ್ಲಿ ಗುರು
ಇದ್ದು ಸುಖ ಸ್ಥಾನದಲ್ಲಿ ಕುಜನಿದ್ದಾನೆ. ವರ್ಷವಿಡೀ ಸಾಡೇ ಸಾತ್ ಶನಿಯ ಪ್ರಭಾವದಿಂದ ನರ ದೌರ್ಬಲ್ಯ
ಅಪವಾದ ಉದ್ಯೋಗದಲ್ಲಿ ತೊಂದರೆ,ಇರುವುದರಿಂದ ಪರಿಹಾರವಾಗಿ ಸುಬ್ರಹ್ಮಣ್ಯ ದೇವರ ಸ್ತೋತ್ರ
,ವಿಷ್ಣು ಸಹಸ್ರನಾಮ ಪಾರಾಯಣ, ನಿತ್ಯವೂ ಮಾಡುತ್ತಾ ಬರಬೇಕು. ಹೆಚ್ಚು ತಿರುಗಾಟ,ಸಂಚಾರ
ಇಟ್ಟುಕೊಳ್ಳುವುದು ಬೇಡ. ನಿಮ್ಮ ದೈನಂದಿನ ವ್ಯವಹಾರ,ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಿದರೂ
ಸರಾಗವಾಗಿ ನಡೆದು ಹೋಗಲಿದೆ. ಆಕಸ್ಮಿಕ ಅವಘಡಗಳು ನಿಮ್ಮ ಪಾರಾಯಣದ ಬಲದಿಂದ
ಸ್ವಲ್ಪದರಲ್ಲಿಯೇ ತಪ್ಪಿ ಹೋಗಲಿದೆ.ಕುಟುಂಬದ ಹಿರಿಯರಿಗೆ ಶುಶ್ರೂಷೆ ನಡೆದೀತು.ಅನೇಕ ವಿಘ್ನಗಳ
ಜೊತೆಗೆ ಆದಾಯದ ಅನೇಕ ಮೂಲಗಳು ಗೋಚರಕ್ಕೆ ಬರಲಿವೆ. ಸಹನೆ ತಾಳ್ಮೆಗೆ ಪರೀಕ್ಷಾ ಸಮಯವಾಗಿದೆ.
ವೃಷಭ : ಮಂಗಳಕರವಾದ ಸಮಯ ಬರುತ್ತಿದೆ. ನೀವು ಮಾಡುತ್ತಿರುವ ,ಉದ್ಯೋಗ ,ವ್ಯವಹಾರಗಳಲ್ಲಿ
ಕಾಣದ ಕೈಗಳಿಂದ ಕಿರಿಕಿರಿ ಬರಲಿದೆ.ಮಾತಿನ ಕೌಶಲ್ಯ ನಿಮ್ಮಲ್ಲಿ ಹೆಚ್ಚಲಿದೆ. ರಾಜಕಾರಣಿಗಳಿಗೆ ಅತ್ಯಂತ
ಶುಭಕರವಾದ ಸಮಯವಾಗಿದೆ. ಸಹೋದರ ಬಾಂಧವ್ಯತೆ ಹೆಚ್ಚಾಗಲಿದೆ. ಹೊಸ ಅಧಿಕಾರ
ಪ್ರಾಪ್ತಿಯಾಗಲಿದೆ. ಕೆಲಸದಲ್ಲಿಒತ್ತಡ ಉಂಟಾಗಲಿದೆ.ಪೂರ್ವ ದಿಕ್ಕಿನಿಂದ ಶುಭ ವಾರ್ತೆಯನ್ನು ಕೇಳುವಿರಿ.
ಬಿಳಿ ವಸ್ತ್ರ ಧರಿಸಿರಿ. ಭೂಮಿಯ ವ್ಯವಹಾರದಲ್ಲಿ ನಷ್ಟ ಬರುವ ಸೂಚನೆ ಇರುತ್ತದೆ. ಗಣಪತಿ
ಆರಾಧನೆಯನ್ನು ಮಾಡುತ್ತಾ ಬನ್ನಿರಿ. ಬರುತ್ತಿರುವ ಆದಾಯದಿಂದ ಮನಸ್ಸಿಗೆ ತೃಪ್ತಿ ಉಂಟಾಗಲಿದೆ.
ದಿನದ ಹೆಚ್ಚಿನ ಸಮಯ ಮೌನವಾಗಿದ್ದಷ್ಟೂ ಸುಖಿಯಿಗಿರುವಿರಿ. ವಿದ್ಯಾರ್ಥಿಗಳಿಗೆ ಶುಭ
ಸಮಯವಾಗಲಿದೆ.
ಮಿಥುನ : ಶುಭ ಸಮಯ ನಿಮ್ಮ ಜೀವನದಲ್ಲಿ ವೇಗವಾಗಿ ಬರುತ್ತಿದೆ. [ಮೇ,14] ಮಾತಿನಲ್ಲಿ,
ಧನವ್ಯಯದಲ್ಲಿನಿಮ್ಮ ತೀವ್ರವಾದ ಹಿಡಿತವಿರಲಿ. ರಾಜಕೀಯ ವ್ಯಕ್ತಿಗಳಿಗೆ ಅತ್ಯಂತ ಶುಭಕರವಾದ
ಸಮಯವಾಗಿದೆ. ಬರುವ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಲಿದ್ದು,ಕೊಟ್ಟಿರುವ ಹಣ ಹಿಂದಕ್ಕೆ
ಬರಲಿದೆ. ವೃತ್ತಿರಂಗದಲ್ಲಿ ಅನಿರೀಕ್ಷಿತ ಸ್ಥಾನ ಪಲ್ಲಟ ಯೋಗ ಬರಲಿದೆ. ಪತ್ನಿ –ಮಕ್ಕಳ ಖರ್ಚು
–ವೆಚ್ಚಗಳಿಗಾಗಿ ಧನ ವ್ಯಯ ಆಗಲಿದೆ ವಿದ್ಯಾರ್ಥಿಗಳಿಗೆ ತಮ್ಮ ಅಬ್ಯಾಸ ಬಲದಲ್ಲಿ ನಿರೀಕ್ಷಿತ ಅಭಿವೃದ್ಧಿ
ಇರಲಾರದು. ಕೆಲಸ ಕಾರ್ಯಗಳು ಗುರುವಿನ ಅನುಗ್ರಹದಿಂದ ಸುಲಭವಾಗಿ ಪೂರ್ಣಗೊಳ್ಳಲಿವೆ.
ವ್ಯಾಪಾರ,ವ್ಯವಹಾರ, ಉದ್ದಿಮೆಗಳು ಲಾಭಕರವಾಗಿ ಮುನ್ನೆಡೆಯಲಿದೆ. ಆರೋಗ್ಯದಲ್ಲಿಎಚ್ಚರವಿರಲಿ.
ಭಯವೊಂದು ಕಾಡಲಿದೆ. ಪಂಚ ಲೋಹದ ಬಳೆ ನಿಮ್ಮಲ್ಲಿರಲಿ.
ಕರ್ಕಾಟಕ : ಜನ್ಮ ರಾಶಿಯಲ್ಲಿ ನೀಚ ಕುಜ ,ವ್ಯಯದಲ್ಲಿ ಗುರು, ಭಾಗ್ಯದಲ್ಲಿ ಶುಕ್ರ ಶನಿ ರಾಹು,
ಇರುವುದರಿಂದ ನಿತ್ಯವೂ ಲಲಿತಾ ಸಹಸ್ರ ನಾಮ ಪಾರಾಯಣ ಮಾಡಬೇಕಾಗಿದೆ. ಹಿರಿಯರೊಂದಿಗೆ
ತಾಳ್ಮೆಯಿಂದ ಹೊಂದಿ ಕೊಂಡು ಸಾಗಬೇಕಾಗಿದೆ. ಯಾಕೆಂದರೆ ಅವರು ಬಹಳ ಮಾನಸಿಕ ಶಾರೀರಿಕ ನೋವಿನಿಂದ ಬಳಲುತ್ತಿರುತ್ತಾರೆ. ಕೃಷಿಕರಿಗೆ ತಮ್ಮ ಪರಿಶ್ರಮಕ್ಕೆ ತಕ್ಕಂತೆ ಬೆಲೆ ಸಿಗಲಿದೆ, ವಿದ್ಯಾರ್ಥಿಗಳು
ಉತ್ತಮ ಸಾಧನೆಯನ್ನು ತೋರಿಸಲಿದ್ದು ರವಿ,ಬುಧ ವಿದೇಶಕ್ಕೆ ಹೋಗುವವರಿಗೆ ಉತ್ತಮ ಅವಕಾಶವನ್ನು
ತೋರಿಸಲಿದ್ದಾನೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಏಕ ಕಾಲದಲ್ಲಿ ಎರಡು ಕಡೆ ಉತ್ತಮ
ಅವಕಾಶಗಳು ಕಂಡು ಬರಲಿದ್ದು ಗೊಂದಲ ಕಂಡು ಬರಲಿದೆ. ದುರ್ಗೆಯನ್ನು ಪ್ರಾರ್ಥಿಸುತ್ತಾ
ಮುನ್ನೆಡಿಯಿರಿ.
ಸಿಂಹ : ‘ಕಾಲಾಯ ತಸ್ಮೈ ನಮ:’ ನಿಮಗಾಗಿಯೇ ಇರುವ ಶ್ಲೋಕವಾಗಿದೆ. ಅಷ್ಟಮದಲ್ಲಿ ಶುಕ್ರ + ರಾಹು
+ಶನಿ ,ಭಾಗ್ಯದಲ್ಲಿ ರವಿ +ಬುಧ , ವ್ಯಯದಲ್ಲಿ ಕುಜ ಇದ್ದಾರೆ. ನಿಮ್ಮ ಮನೋ ವಿಕಾರತೆಯಿಂದ
ಎಲ್ಲರನ್ನೂ ದ್ವೇಷಿಸುತ್ತೀರಿ. ಬಹಳ ಎಚ್ಚರದಿಂದ ಇರಬೇಕಾದ ಸಮಯ. ಮೇ 14 ರ ನಂತರ ಗುರು
ಮಿಥುನ ರಾಶಿಗೆ ಬರುತ್ತಿದ್ದು ದೇವರ ಅನುಗ್ರಹ ಬರುತ್ತಿದೆ.ಶುಭ ಮಂಗಳ ಕಾರ್ಯಗಳಿಗೆ ವಿಘ್ನ ಭಯ
ತೋರಿಬಂದರೂ ದೈವಾನುಗ್ರಹ ಪ್ರಾಪ್ತಿ ಆಗುತ್ತಿರುವುದರಿಂದ ಕೆಲಸಗಳು ನೆರವೇರವೆರಲಿವೆ.
ಸಾಂಸಾರಿಕವಾಗಿ ನಿಮ್ಮನ್ನು ನೀವು ಮಾನಸಿಕವಾಗಿ ,ಶಾರೀರಿಕವಾಗಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ.
ವಿಷ್ಣು ಸಹಸ್ರನಾಮ ,ಹನೂಮಾನ್ ಚಾಲೀಸ ಮಂತ್ರ ಪಾರಾಯಣ ಮಾಡದಿದ್ದರೆ ಅನರ್ಥಗಳು
ಸಂಭವಿಸುವ ಸಾಧ್ಯತೆ ಇರುತ್ತದೆ. ಎಚ್ಚರವಿರಲಿ.
ಕನ್ಯಾ : ಸಪ್ತಮದಲ್ಲಿ ಶನಿ, ರಾಹು , ಶುಕ್ರ ,ಅಷ್ಟಮದಲ್ಲಿ ರವಿ,ಬುಧ ನಿದ್ದರೂ ,ಭಾಗ್ಯದಲ್ಲಿ ಗುರು
,ಲಾಭ ಕ್ಷೇತ್ರದಲ್ಲಿ ಕುಜ ಇರುವುದರಿಂದ ಯಾವುದೇ ಗಾಬರಿಯಾಗುವ ಅಗತ್ಯವಿಲ್ಲ. ಸಾಂಸಾರಿಕಾಗಿ
ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಬೇಕು. ಆರೋಗ್ಯದ ಕಡೆಗೆ ಗಮನವಿರಲಿ. ಉಸಿರಾಟದ
ಸಮಸ್ಯೆ ಇದ್ದಲ್ಲಿ ವೈದ್ಯರನ್ನು ತಕ್ಷಣ ಭೇಟಿಯಾಗಿರಿ.ಮದ್ಯ ಸೇವನೆಯಿಂದ ದೂರವಿರುವುದು ಅತೀ
ಅಗತ್ಯವಾಗಿದೆ. ಅಪವಾದಗಳು ನಿಮ್ಮ ಬೆನ್ನು ಹಿಡಿದು ಬರಲಿವೆ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದ ಕಡೆಗೆ
ವಾಲುವ ಸಾಧ್ಯತೆ ಇರುತ್ತದೆ. ಹಿರಿಯರನ್ನು ಪೇಚಾಟಕ್ಕೆ ತಳ್ಳುವ ಸಾಧ್ಯತೆ ಇರುತ್ತದೆ. ದುರ್ಗಾ ನಮಸ್ಕಾರ
ಪೂಜೆಯನ್ನು ಮಾಡಿರಿ. ಗೃಹದಲ್ಲಿ ಕಲಹ,ಹೆಂಡತಿಗೆ ಅನಾರೋಗ್ಯ,ಕ್ಲೇಶ ತರಲಿದೆ.ನಿರುದ್ಯೋಗಿಗಳು
ಇರುವ ಉದ್ಯೋಗದಲ್ಲಿ ತೃಪ್ತರಾಗಬೇಕು.
ತುಲಾ : ಇನ್ನೂ ಕೆಲವೇ ದಿನಗಳಲ್ಲಿ ಇಷ್ಟು ಸಮಯದ ನಿಮ್ಮ ಕಷ್ಟಗಳೆಲ್ಲವೂ
ನಿವಾರಣೆಗೊಳ್ಳಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಉದ್ಯೋಗದಲ್ಲಿ
ಇರುವವರಿಗೆ ಸ್ಥಾನ ಪಲ್ಲಟ ಯೋಗವಿದೆ. ದೂರ ಸಂಚಾರದ ಯೋಗವಿದೆ. ಧನ ಆದಾಯದ
ಕೊರತೆಯೇ ಉದ್ಭವಿಸದು. ಆದರೂ ಬಳಕೆಯಲ್ಲಿ ಇತಿಮಿತಿಯಿರಲಿ. ಇತರರಿಗೆ ನಿಮ್ಮಿಂದ ಧನ
ಸಹಾಯ ಆಗಲಿದೆ. ಮನೆಯಲ್ಲಿ ನೀವು ನಿರ್ಣಯ ಮಾಡಿರುವ ಶುಭ ಕಾರ್ಯಗಳು ಬಹಳ
ಉತ್ತಮವಾದ ರೀತಿಯಲ್ಲಿ ನೆರವೇರಲಿದೆ. ಒಮ್ಮೊಮ್ಮೆ ಉದ್ವೇಗ ,ದೇಹಪೀಡೆ ಆಗಲಿದೆ .ಕೆಲವೇ
ದಿನಗಳಲ್ಲಿ ಕೇತು ಲಾಭ ಕ್ಷೇತ್ರಕ್ಕೆ ಸಂಚಾರ ಮಾಡಲಿದ್ದಾನೆ. ಪಂಚಮಕ್ಕೆ ರಾಹು ಬರಲಿದ್ದಾನೆ
ನಾಗ ದೇವರ ಪ್ರಾರ್ಥನೆ ಮಾಡಲು ಮರೆಯಬೇಡಿರಿ.
ವೃಶ್ಚಿಕ : ಪಂಚಮದಲ್ಲಿ ಶುಕ್ರ .ಶನಿ ,ರಾಹು ಭಾಗ್ಯದಲ್ಲಿ ನೀಚ ಕುಜ ಇದ್ದು ಇನ್ನೂ ಕೆಲವೇ ದಿನಗಳಲ್ಲಿ
ಗುರು ಅಷ್ಟಮಕ್ಕೆ ಬರಲಿದ್ದಾನೆ. ರಾಹು ಕೇತುಗಳು ಸ್ಥಾನ ಪಲ್ಲಟ ಗೊಳ್ಳಲಿವೆ. ಗುರುವಿನ ದೋಷ
ಪರಿಹಾರಕ್ಕಾಗಿ ಒಂದು ವರ್ಷಗಳ ಕಾಲ ,ಗಣಪತಿ,ಮುಖ್ಯಪ್ರಾಣ ದೇವರಿಗೆ ಯಥಾ ಶಕ್ತಿ ಸೇವೆ , ರಾಹುವಿನ
ದೋಷ ಪರಿಹಾರಕ್ಕಾಗಿ ನಾಗ ದೇವರ ಪ್ರಾರ್ಥನೆ ಒಂದೂವರೆ ವರ್ಷಗಳ ಕಾಲ ಮಾಡುತ್ತಾ ಬನ್ನಿರಿ. ಶನಿ
ದೋಷಾ ಪರಿಹಾರಕ್ಕಾಗಿ ಎರಡೂವರೆ ವರ್ಷಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಯಾವುದೇ ಹೋಮ ಹವನ ಪ್ರಯೋಜನಕ್ಕೆ ಬರುವುದಿಲ್ಲ. ಕುಟುಂಬವರ್ಗದಲ್ಲಿ ಆಗಾಗ ಅನಾರೋಗ್ಯದ
ಭೀತಿ ಬರಲಿದೆ. ಮಕ್ಕಳ ವಿಷಯದಲ್ಲಿ ಕಿರಿಕಿರಿ ಇರುತ್ತದೆ. ಹಿರಿಯರ ಬಗ್ಗೆ ಕಾಳಜಿ ,ಪ್ರೀತಿ ಇರಲಿ.
ಧನು : ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟವೇ ಬದಲಾವಣೆ ಆಗಲಿದೆ ಗುರು ಮತ್ತು ರಾಹು
ಕೇತುವಿನ ಸ್ಥಾನ ಬದಲಾವಣೆ ನಿಮ್ಮಲ್ಲಿ ಹೊಸ ಚೇತನವನ್ನು ಮೂಡಿಸಲಿದೆ. ಹೊಸ ವ್ಯಾಪಾರ,
ವ್ಯವಹಾರಗಳ ಆದಾಯವು ಉತ್ತಮ ಆದಾಯವನ್ನು ತರಲಿದೆ. ಕುಟುಂಬದಲ್ಲಿ ಇರುವ ಕೆಲವೊಂದು
ಸಮಸ್ಯೆಗಳು ಪರಿಹಾರವಾಗಲಿದೆ. ನಿಮ್ಮ ನರ ಎಲುಬು ನೋವಿನ ಸಮಸ್ಯೆ ,ತಾಯಿಯವರ ಅನಾರೋಗ್ಯ
ಸಮಸ್ಯೆ ಮುಂದುವರಿಯಲಿದೆ. ವಾಹನ ಸಂಚಾರದಲ್ಲಿ ಎಚ್ಚರವಿರಲಿ. ಹಣದ ವ್ಯವಹಾರದಲ್ಲಿ
ಎಚ್ಚರವಿರಲಿ. ಮಗನ ಗಮನಕ್ಕೆ ತಾರದೆ ಯಾವುದೇ ದಾಖಲೆಗಳಿಗೆ ಸಹಿ ಹಾಕಲು ಹೋಗಬೇಡಿರಿ.ಮನೆಗೆ
ಬೇಕಾದ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಮುನ್ನ ಯೋಚಿಸಿ ಮುಂದುವರಿಯಿರಿ.
ಮಕರ : ಇನ್ನು ಕೆಲವೇ ದಿನಗಳಲ್ಲಿ ದೈವಾನುಗ್ರಹವನ್ನು ಕಳೆದುಕೊಳ್ಳುವಿರಿ. ಹನೂಮಾನ್ ಚಾಲೀಸ
ಮಂತ್ರ ,ಗಣಪತಿಯ ಅಷ್ಟೋತ್ತರ ಮಂತ್ರವನ್ನು ಪ್ರತಿನಿತ್ಯ ಈಗದಿಂದಲೇ ಆರಂಭಿಸಿರಿ. ಮನೆಯಲ್ಲಿಯೇ
ಒಂದು ಕಾಣಿಕೆ ಡಬ್ಬಿ ಇಟ್ಟುಪ್ರತಿನಿತ್ಯ ಯಥಾಶಕ್ತಿ ಕಾಣಿಕೆ ಹಾಕುತ್ತಾ ಬಂದು ಅಶಕ್ತರಿಗೆ ,ವಿದ್ಯಾರ್ಥಿಗಳಿಗೆ
,ಬಡ ಕುಟುಂಬಕ್ಕೆ ದಾನ ಮಾಡುತ್ತಾ ಬನ್ನಿರಿ. ಕಷ್ಟ ಪಟ್ಟಾಗ ಯಶಸ್ಸು ನಿಮ್ಮದಾಗಲಿದೆ.
ರಾಜಕೀಯದವರಿಗೆ ತಟಸ್ಥ ನಿಲುವು ಅವಶ್ಯವಾಗಿದೆ. ಕಫ ದೋಷ ಬರಲಿರುವುದರಿಂದ ಎಚ್ಚರವಾಗಿರಿ.
ಮಕ್ಕಳ ವಿದ್ಯಾಭ್ಯಾಸದಲ್ಲಿ ಕಿರಿಕಿರಿ ಉಂಟಾಗಲಿದೆ.
ಕುಂಭ : ಇನ್ನುಕೆಲವೇ ದಿನಗಳಲ್ಲಿ ಉತ್ತಮ ದೈವಾನುಗ್ರಹ ಪಡೆಯಲಿರುವ ನೀವು ಸಂಪೂರ್ಣ
ಚೈತನ್ಯವನ್ನು ಹೊಂದುವಿರಿ. ರಾಹು ನಿಮ್ಮ ಜನ್ಮ ರಾಶಿಗೆ ಬರಲಿದ್ದಾನೆ.ಸಾಡೇ ಸಾತ್
ಮುಂದುವರಿಯಲಿದೆ. ರಾಜಕೀಯದಲ್ಲಿ ಮೌನವೇ ನಿಮಗೆ ಉತ್ತಮ ಸಾಧನವಾಗಲಿದೆ. ಶನಿ
ದ್ವಿತೀಯಾದಲ್ಲಿ ಇರುವುದರಿಂದ ಹಣದ ವಿಷಯದಲ್ಲಿ, ಯಾರಿಗಾದರೂ ಮಾತು ಕೊಡುವಾಗ
ಎಚ್ಚರವಿರಲಿ. ಮನೆಯಲ್ಲಿ,ಕುಟುಂಬದಲ್ಲಿ ಮನಸ್ತಾಪ , ಅಸಮಾಧಾನ,ವಾತಾವರಣ ಉಂಟಾಗಲಿದೆ.
ನಾಗದೇವರ ಯಥಾ ಶಕ್ತಿ ಆರಾಧನೆ ಅಗತ್ಯವಾಗಿದೆ.
ಮೀನ : ಇನ್ನು ಕೆಲವೇ ದಿನಗಳಲ್ಲಿ ಗುರು ನಿಮ್ಮ ನಾಲ್ಕನೆಯ ಮನೆಗೆ ಬರಲಿದ್ದಾನೆ. ರಾಹು ವ್ಯಯಕ್ಕೆ
ಬರಲಿದ್ದಾನೆ. ಜನ್ಮ ರಾಶಿಯಲ್ಲಿ ಶನಿ ಸಂಚಾರ ಮಾಡಲಿದ್ದಾನೆ. ವಿಷ್ಣು ಸಹಸ್ರನಾಮ ಪಾರಾಯಣ ನಿಮಗೆ
ಬಹಳಷ್ಟು ಪ್ರಯೋಜನಕ್ಕೆ ಬರಲಿದೆ. ನೊಂದವರ ಬಾಳಿನಲ್ಲಿ ಸಹಾಯ ಹಸ್ತ ನೀಡುವವರಾಗಿರಿ.
ಬಹುಪಾಲು ನೀವು ಸುಖಿಗಳು ಎಂದು ಹೇಳಬಹುದು. ಮಿತ್ರರ ಪ್ರೇರಣೆಯಿಂದ ಹೊಸ ಯೋಜನೆ ಚಾಲನೆಗೆ
ಬರಲಿದೆ.ಸರಕಾರಿ ವೃತ್ತಿಯವರಿಗೆ ಗಿಂಬಳದಿಂದ ಧನಾನುಕೂಲ ಹೆಚ್ಚಾಗಲಿದೆ. ಸಾಮಾಜಿಕವಾಗಿ ಕೈಗೊಂಡ
ಕಾರ್ಯ ಸುಗಮವಾಗಿ ನಿಮ್ಮ ಸ್ತಾನಮಾನಕ್ಕೆ ಗೌರವ ಸಲ್ಲಲಿದೆ.ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ
ಅನಗತ್ಯವಾದೀತು.ಚಿನ್ನ ಖರೀಧಿ ಮಾಡುವ ಸಾಧ್ಯತೆ ಇದೆ.



































