ವಾರ ಭವಿಷ್ಯ ದಿನಾಂಕ 25.05.2025 ರಿಂದ 31.05.2025 ರ ವರೆಗೆ
ವಿಶೇಷ ದಿನಗಳು :31.05.2025…ಮೇಷ ರಾಶಿಗೆ ಶುಕ್ರನ ಪ್ರವೇಶ
ಮೇಷ : ಶುಕ್ರನ ಮೇಷ ರಾಶಿಗೆ ಅಂದರೆ ನಿಮ್ಮ ಜನ್ಮ ರಾಶಿಗೆ ಸಂಚಾರ ಮಾಡುವುದರಿಂದ ಸ್ವಲ್ಪ ಮಟ್ಟಿನ ಸುಧಾರಣೆ ಕಂಡು ಬರಲಿದೆ. ರಾಹು ಲಾಭ ಕ್ಷೇತ್ರದಲ್ಲಿ ಬಂದಿರುವುದರಿಂದ ವೃತ್ತಿ ರಂಗದಲ್ಲಿ ಪ್ರಶಂಸೆ ಕೇಳಿ ಬರಲಿದೆ. ಉತ್ತಮ ಸ್ಥಾನಮಾನ ಲಭಿಸಲಿದೆ. ಕೇತು ಪಂಚಮದಲ್ಲಿ ಬಂದಿರುವುದು ವಿದ್ಯಾರ್ಥಿಗಳಿಗೆ ಶುಭವಲ್ಲ.ಗಣಪತಿ ಅಥರ್ವ ಶೀರ್ಷ ಪಾರಾಯಣ ಮಾಡುತ್ತಾ ಬನ್ನಿರಿ. ದಾಂಪತ್ಯದಲ್ಲಿ ಈ ವರೆಗೆ ಇದ್ದ ಕಿರಿಕಿರಿ ದೂರವಾಗಲಿದೆ. ಗುರುವಿನ ಅನುಗ್ರಹಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ. ಅಮ್ಮನವರ ಆರೋಗ್ಯ ,ಮನಸ್ಸಿನ ಬೇಸರ ನೀವೇ ಸರಿಮಾಡಿಕೊಳ್ಳಿರಿ. ದುರ್ಗಾ ಪಾರಾಯಣ ಮಾಡಿರಿ.
ವೃಷಭ : ಪೂರ್ಣ ದೈವಾನುಗ್ರಹದಲ್ಲಿದ್ದೀರಿ.ನೀವು ನಡೆಸುತ್ತಿರುವ ಉದ್ಯೋಗ,ವ್ಯವಹಾರಗಳೆಲ್ಲವೂ ಯಶಸ್ವಿಯಾಗಿ ಸುಗಮವಾಗಿ ನಡೆಯಲಿದೆ ಗೃಹ ನಿರ್ಮಾಣ , ಕಟ್ಟಡ ನಿರ್ಮಾಣಗಳ ವಸ್ತುಗಳ ಖರೀಧಿ, ಸ್ಥಿರ ವಸ್ತುಗಳ ಕ್ರಯ ವಿಕ್ರಯಗಳಿಗೆ ಸಕಾಲವಾಗಿದೆ.ಬಂಧಿ ಮಿತ್ರರ ಸಹಕಾರದಿಂದ ಯಶಸ್ಸು ಗಳಿಸುವಿರಿ.ಕಲಹವೊಂದು ರಾಜಿಯಲ್ಲಿ ಮುಕ್ತಾಯವಾಗಲಿದೆ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ.ಪ್ರವಾಸ ಯಾತ್ರೆಗಳು ಮಾನಸಿಕ ಶಾಂತಿಯನ್ನು ನೀಡಲಿದೆ ನಿರುದ್ಯೋಗಿಗಳು ಉತ್ತಮ ಭವಿಷ್ಯವನ್ನು ಹೊಂದಲಿದ್ದಾರೆ,ಕೇತುವಿಗೆ ಪರಿಹಾರವಾಗಿ ಗಣಪತಿ ದೇವರನ್ನು ಪ್ರಾರ್ಥನೆ ಮಾಡಿರಿ. ರಾಹುವಿಗೆ ನಾಗ ದೇವರ ಪ್ರಾರ್ಥನೆ ಮಾಡಿರಿ.
ಮಿಥುನ : ಗುರು ನಿಮ್ಮ ಜನ್ಮ ರಾಶಿಗೆ ಪ್ರವೇಶ ಮಾಡಿರುವುದರಿಂದ ಹೊಸ ಬೆಳಕೊಂದು ಜೀವನದಲ್ಲಿ ಪ್ರವೇಶ ಆಗಿದೆ.ಕೇತು ರಾಹು ಸ್ಥಳ ಬದಲಾವಣೆ ಕೂಡಾ ಜೀವನದಲ್ಲಿ ಭರವಸೆ ಮೂಡುವಂತೆ ಮಾಡಲಿದೆ. ಶುಕ್ರ ಲಾಭ ಕ್ಷೇತ್ರಕ್ಕೆ ಬಂದಿರುವುದು ಅನೇಕ ರೀತಿಯಲ್ಲಿ ಸಮಾಜದಲ್ಲಿ ನಿಮ್ಮನ್ನು ಗುರುತಿಸುವಂತೆ ಮಾಡಲಿದೆ . ರವಿ ಬುಧ ವ್ಯಯದಲ್ಲಿ ಇರುವುದನ್ನು ಗಮನಿಸಿರಿ. ವಿದೇಶ ಯಾತ್ರೆಯ ಸೂಚನೆ ಇರುತ್ತದೆ.ಆತ್ಮೀಯರ ಜೊತೆಗೆ ಕಲಹ ಬರಲಿದೆ ಬೆಲೆಬಾಳುವ ವಸ್ತುಗಳ ಖರೀಧಿ ಮಾಡುವಿರಿ. ಉದ್ಯೋಗದಲ್ಲಿ ಶತ್ರುಗಳ ಕಾಟ ಉಂಟಾಗಲಿದೆ. ಖರ್ಚು ಅಧಿಕ ಉಂಟಾಗಲಿದೆ. ಹತ್ತಿರದ ಸಂಬಂಧಿಗಳು ವಿಯೋಗವಾಗುವುದನ್ನು ಕಾಣಲಿದ್ದೀರಿ.
ಕರ್ಕಾಟಕ : ಗುರು ವ್ಯಯಕ್ಕೆ ಬಂದು ದೈವಾನುಗ್ರಹದ ಕೊರತೆಯನ್ನು ಅನುಭವಿಸಲಿದ್ದೀರಿ. ಕುಜ ಜನ್ಮ ರಾಶಿಯಲ್ಲಿ ಬಂದಿರುವುದರಿಂದ,ರಾಹು ಅಷ್ಟಮಕ್ಕೆ ಬಂದಿರುವುದರಿಂದ,ಕೇತು ದ್ವಿತೀಯಾಕ್ಕೆ ಬಂದಿರುವುದರಿಂದ ಚಿಂತೆಗಳು ಕಾಡಲಿದೆ. ವ್ಯರ್ಥ ಖರ್ಚುಗಳು ಬರಲಿವೆ.ಎಲ್ಲಾ ವಿಚಾರಗಳಲ್ಲಿಯೂ ಎಚ್ಚರವಾಗಿರುವಂತೆ ಗ್ರಹರು ಸೂಚಿಸುತ್ತಿದ್ದಾರೆ.ನಾಗ ದೇವರ ಪ್ರಾರ್ಥನೆ ಮಾಡುವುದು ಅಗತ್ಯವಿದೆ. ತಲೆಗೆ ಸಂಬಂಧಿಸಿದಂತೆ,ನಿದ್ದೆಗೆ ಕೊರತೆಯಾಗುವಂತೆ ರಾಹು ಸಮಸ್ಯೆ ಮಾಡಲಿದ್ದಾನೆ.. ತಾಳ್ಮೆ ಅಗತ್ಯವಿದೆ. ತಮ್ಮವರ ಜೊತೆಗೆ ಜಾಗ್ರತೆಯಿಂದ ವ್ಯವಹಾರ ಮಾಡಿರಿ. ಒಂದೂವರೆ ವರ್ಷಗಳ ಕಾಲ ನಾಗ ದೇವರ ವೃತ ಮಾಡಿದರೆ ಒಳ್ಳೆಯದು.
ಸಿಂಹ : ಗುರು ಲಾಭ ಕ್ಷೇತ್ರಕ್ಕೆ ಬಂದಿರುವುದರಿಂದ ನೀವು ನಡೆಸುವ ಯಾವುದೇ ವ್ಯವಹಾರದಲ್ಲಿ ಯಶಸ್ವಿಯಾಗುವಿರಿ. ಹಣದ ಒಳ ಹರಿವು ಹೆಚ್ಚಾಗಲಿದೆ. ಶನಿ ಅಷ್ಟಮದಲ್ಲಿ ಇರುವುದನ್ನು ನೀವು ಗಮನಿಸಬೇಕು.ಪತಿ ಪತ್ನಿ ಒಂದಾಗಿ ಬಾಳುವುದನ್ನು ಮರೆಯಬಾರದು.ವಾಹನ ಚಾಲನೆಯಲ್ಲಿ ಜಾಗ್ರತೆವಹಿಸಬೇಕು. ಆಹಾರ ವ್ಯವಹಾರದಲ್ಲಿ ಎಚ್ಚರವಿರಲಿ.ಆದಾಯ ಉತ್ತಮವಿದ್ದರೂ ವ್ಯಯದ ವಿಷಯಗಳೂ ಹೆಚ್ಚಾಗಲಿದೆ. ಅಧಿಕಾರಿ ವರ್ಗದವರ ಜೊತೆಗೆ ಕಲಹ ಬರದಂತೆ ಎಚ್ಚರವಹಿಸಬೇಕು. ಸಿಟ್ಟಿನ ಹಿಡಿತ ನಿಮ್ಮಲ್ಲಿರಬೇಕು. ಶನಿ ಎರಡೂವರೆ ವರ್ಷ ಇಲ್ಲಿರುತ್ತಾನೆ. ಶನಿಯ ಜಪ ಅಗತ್ಯವಿದೆ. ಆರೋಗ್ಯದ ಕಡೆಗೆ ಎಚ್ಚರ ವಹಿಸಿರಿ.
ಕನ್ಯಾ : ಸಪ್ತಮದಲ್ಲಿ ಭಾಧಕ ಕ್ಷೇತ್ರದಲ್ಲಿ ಶನಿ ಇದ್ದಾನೆ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ವಿದ್ಯೆಯನ್ನು ಕಳೆದುಕೊಳ್ಳಬೇಡಿರಿ.ಶುಕ್ರನು ಅಷ್ಟಮದಲ್ಲಿ ಬಂದಿರುವುದರಿಂದ ಷುಗರ್ ಇರುವವರು ಎಚ್ಚರ.ಕುಜ ಲಾಭ ಕ್ಷೇತ್ರದಲ್ಲಿ ನೀಚನಾಗಿ ಇರುವುದರಿಂದ ನಿಮ್ಮ ಸಂಪಾದನೆ ಒಳ್ಳೆಯ ರೀತಿಯಲ್ಲಿ ಇರಲಿ.ಭೂಮಿಯ ವ್ಯಾಪಾರದವರಿಗೆ ಒಳ್ಳೆಯ ಕಾಲವಾಗಿದೆ. ಆರೋಗ್ಯದಲ್ಲಿ ಪಿತ್ತ .ಉಷ್ಣ ವಾಯು ಪ್ರಕೋಪಗಳು ತೋರಿಬರಲಿದೆ. ಮಕ್ಕಳೊಂದಿಗೆ ವಿರಸ ಬರಲಿದೆ ಮನೆ ವಾಹನ ಭೂಮಿ ಖರೀಧಿ ಯೋಗವಿದೆ. ನಿಮ್ಮ ಸಹೋದರಿಗೆ ಆರೋಗ್ಯದ ಬಗ್ಗೆ ಎಚ್ಚರವಿರುವಂತೆ ತಿಳಿಸಿ.
ತುಲಾ : ಗುರು ಭಾಗ್ಯದಲ್ಲಿ ಬಂದಿದ್ದಾನೆ. ಅದೃಷ್ಟದ ಒಂದು ವರ್ಷದ ಕಾಲ ನಿಮ್ಮದು. ಸಹೋದರ ವರ್ಗದವರಿಗೆ ಬೇಸರವೂ ಬರುವ ಕಾಲ. ನಿಮಗೆ ಎಲ್ಲಾ ವಿಷಯಗಳಲ್ಲಿ ಧೈರ್ಯ ಸ್ಥೈರ್ಯ ಬರಲಿದೆ. ರಾಜಕೀಯದಲ್ಲಿ ಇರುವವರಿಗೆ ಸ್ಥಾನ ಮಾನ ಗೌರವ ಬೆಳೆಯಲಿದೆ.ಪಂಚಮದಲ್ಲಿ ರಾಹು ಬಂದಿದ್ದಾನೆ.ಮಕ್ಕಳ ವಿಷಯದಲ್ಲಿ ಬಹಳ ಎಚ್ಚರವಹಿಸಬೇಕಾಗಿದೆ. ನಾಗ ದೇವರನ್ನು ಪ್ರಾರ್ಥನೆ ಮಾಡಿರಿ .ಬರುವ ಆದಾಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಪತ್ನಿಯ ಅನಾರೋಗ್ಯದ ಬಗ್ಗೆ ಗಮನಕೊಡುವುದು ಅಗತ್ಯವಾಗಿದೆ. ನಿಮಗೆ ಅನಾರೋಗ್ಯದ ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿರಿ. ಮದ್ಯ ಸೇವನೆ ಮಾಡುವವರು ಅದನ್ನು ನಿಲ್ಲಿಸುವುದು ಅಗತ್ಯವಾಗಿದೆ.
ವೃಶ್ಚಿಕ : ಒಂದು ದಿನದಲ್ಲಿ ಹೆಚ್ಚಿನ ಹೊತ್ತು ದೇವರ ಪ್ರಾರ್ಥನೆಯಲ್ಲಿ ತೊಡಗಿಸಿ ಕೊಳ್ಳುವುದು ಅಗತ್ಯವಾಗಿದೆ. ಗುರು ಅಷ್ಟಮದಲ್ಲಿ,ರಾಹು ಸುಖ ಸ್ಥಾನದಲ್ಲಿ, ಶನಿ ಪಂಚಮದಲ್ಲಿ, ಕರ್ಮ ಕ್ಷೇತ್ರದಲ್ಲಿ ಕೇತು ,ಭಾಗ್ಯದಲ್ಲಿ ನೀಚ ಕುಜ ಇವರೆಲ್ಲರನ್ನೂ ಸಮಾಧಾನ ಪಡಿಸಬೇಕಾಗಿದೆ. ಎಚ್ಚರ ,ಎಚ್ಚರ .ಒಮ್ಮೆಲೇ ಎಲ್ಲಾ ವ್ಯವಹಾರಗಳು ನಿಂತು ಹೋದ ಅನುಭವ,ಏಕಾಂಗಿಯಾದ ಅನುಭವ.ಕುಟುಂಬದಲ್ಲಿ ಮಕ್ಕಳು ಸಂಬಂಧಿಕರು ಬಾಂಧವರು ಎಲ್ಲರೂ ಸ್ತಬ್ಧತೆಯನ್ನು ನೋಡಿಕೊಳ್ಳುವರು. ಎಲ್ಲರೂ ಅವರವರು ಮಾಡುವ ವ್ಯವಹಾರ,ಉದ್ಯೋಗ, ಅದು ಯಾವುದೇ ಇರಲಿ ಅದರಲ್ಲಿ ಎಚ್ಚರ ಇರುವಂತೆ ಕೇತು ತಿಳಿಸುತ್ತಿದ್ದಾರೆ. ಆರೋಗ್ಯ ನೋಡಿಕೊಳ್ಳುವಂತೆ ರಾಹು ,ಗುರು ತಿಳಿಸುತ್ತಿದ್ದಾರೆ. ಮಕ್ಕಳನ್ನು ಅವರ ಇಚ್ಚೆಗೆ ಅನುಸಾರವಾಗಿ ಬಿಟ್ಟು ಬಿಡುವುದು ಒಳ್ಳೆಯದು.
ಧನು : ಶನಿಯ ಸುಖ ಸ್ಥಾನದ ಸಂಚಾರದಿಂದ ಭೀತಿಯಿಂದಲೇ ಕಾಲ ತಳ್ಳಬೇಕಾಗಿದೆ. ಬಂಧುಗಳಿಗೆ ಉಪಚರಿಸಲು ಹೋಗಿ ತಮಗೆ ತೊಂದರೆ ಮಾಡಿಕೊಳ್ಳುವಿರಿ. ಗುರು ಸಪ್ತಮಕ್ಕೆ ಬಂದರೂ ನಿಮಗೆ ಅದು ಭಾಧಕ ಸ್ಥಾನ. ಅಷ್ಟಮದಲ್ಲಿ ಕುಜ ಇದ್ದಾನೆ. ಕಾಲಾಯ ತಸ್ಮೈ ನಮ: llಎಚ್ಚರವಾಗಿದ್ದು ಕೊಂಡು ಯಾವುದೇ ವ್ಯವಹಾರ ಉದ್ಯೋಗ ಮಾಡಬೇಕು. ಆರೋಗ್ಯದ ಕಡೆಗೆ ,ಮಕ್ಕಳ ಕಡೆಗೆ ,ತಾಯಿಯವರ ಕಡೆಗೆ ಗಮನ ಕೊಡಬೇಕು.ನರ ಎಲುಬು ನೋವು ಬರುವ ಸಾಧ್ಯತೆ ಇರುತ್ತದೆ. ಹಿರಿಯರೊಂದಿಗೆ ಹೊಂದಿಕೊಂಡು ಹೋಗುವುದು ಅತೀ ಅಗತ್ಯವಾಗಿದೆ.ದೈವಾನುಗ್ರಹ ಇರುತ್ತದೆ. ಆದರೆ ಅದೇ ಗುರುವಿನ ಮನೆಯಲ್ಲಿ ಶನಿ ಇರುವುದನ್ನು ಗಮನಿಸಿರಿ.
ಮಕರ : ವೃತ್ತಿ ರಂಗದಲ್ಲಿ ಉತ್ತಮ ಧನಾಗಮನ ಇದ್ದರೂ ಸಹಾಯಕರ ಸಮಸ್ಯೆಯಿಂದ ನಷ್ಟ ಅನುಭವಿಸುವಿರಿ. ಗುರು 6ನೆಯ ಮನೆಗೆ ಹೋಗಿದ್ದಾನೆ .ಸಹೋದರ ವರ್ಗದವರಲ್ಲಿ ವೈರತ್ವ ಬೆಳೆಯುವ ಸಾಧ್ಯತೆ ಇರುತ್ತದೆ. ತಂದೆ ಮಕ್ಕಳೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ. ರಾಹು ದ್ವಿತೀಯಾದಲ್ಲಿ ಬಂದಿರುವುದರಿಂದ ವಿದ್ಯಾರ್ಥಿಗಳು ಎಚ್ಚರವಹಿಸಬೇಕು. ಗೃಹ ಉಪಕರಣಗಳ ವ್ಯವಹಾರದಲ್ಲಿ ಲಾಭ ಗಳಿಸಲಿದ್ದೀರಿ. ಅಕ್ರಮ ವ್ಯವಹಾರವೊಂದು ಬೆಳಕಿಗೆ ಬರುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಪ್ರಾಪ್ತಿ ಯೋಗವಿದೆ.
ಕುಂಭ : ಜನ್ಮ ರಾಶಿಯಲ್ಲಿ ರಾಹು ಇದ್ದಾನೆ. ದ್ವಿತೀಯಾದಲ್ಲಿ ಮೀನ ರಾಶಿಯಲ್ಲಿ ಶನಿ ಇದ್ದಾನೆ ಸಪ್ತಮದಲ್ಲಿ ಕೇತು ಬಂದಿದ್ದಾನೆ .ಇವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗಬೇಕಿದೆ. ಹುಟ್ಟು ಅನಿರೀಕ್ಷಿತ ;ಸಾವು ನಿರೀಕ್ಷಿತ.ಪಾತ್ ಪತ್ನಿಯರು ಹೊಂದಾಣಿಕೆಯಿಂದ ,ಒಳ್ಳೆಯ ಮಾತುಗಳನ್ನುಮಾತಾಡುತ್ತಾ ತಾಳ್ಮೆಯಿಂದ ಮಕ್ಕಳೊಂದಿಗೆ ಮಕ್ಕಳಾಗಿ ಬಾಳಬೇಕಿದೆ. ಸಾಡೇ ಸಾತ್ ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕಿದೆ.ವಿದ್ಯಾರ್ಥಿಗಳು ಪ್ರೀತಿ ಪ್ರೇಮಕ್ಕೆ ಬಲಿಯಾಗದೆ ವಿದ್ಯೆಗೆ ಮಹತ್ವ ಕೊಡುವಂತೆ ಶನಿ ಬುದ್ಧಿ ಮಾತು ಹೇಳುತ್ತಿದ್ದಾನೆ.
ಮೀನ : ನಿಮ್ಮ ಜನ್ಮ ರಾಶಿಯಲ್ಲಿ ಶನಿ ಬಂದಿದ್ದಾನೆ. ರಾಹು ವ್ಯಯದಲ್ಲಿ ಇದ್ದಾನೆ. ಇಬ್ಬರೂ ವ್ಯರ್ಥ ಖರ್ಚು ಮಾಡಿಸುವವರೇ ಆಗಿದ್ದಾರೆ. ಸುಖ ಸ್ಥಾನದಲ್ಲಿ ಗುರು ತನ್ನ ವೈರಿಯಾದ ಬುಧನೊಂದಿಗೆ ಇದ್ದಾನೆ. ಆದುದರಿಂದ ಎಲ್ಲರೊಂದಿಗೆ ಬಹಳ ಎಚ್ಚರದಿಂದ ಇರಬೇಕಾಗಿದೆ.ತಾಯಿಯೊಂದಿಗೆ ಜಗಳ ಮಾಡದೆ ಪ್ರೀತಿಯಿಂದ ಇರಬೇಕಾಗಿದೆ. ಕುಜ ಪಂಚಮದಲ್ಲಿ ಇರುವುದರಿಂದ ಮಕ್ಕಳೊಂದಿಗೆ ಹೊಂದಿಕೊಂಡು ಹೋಗುವುದೇ ಒಂದು ಸಮಸ್ಯೆಯಾಗಲಿದೆ. ವಿಲಾಸಿ ಸಾಮಗ್ರಿಗಳು ಯಥೇಚ್ಛವಾಗಿ ಮನೆಯನ್ನು ಅಲಂಕರಿಸಲಿದೆ. ಧನ ಆದಾಯ ಅನೇಕ ಮೂಲಗಳಿಂದ ಬಂದು ಕೂಡಿಕೊಳ್ಳಲಿದೆ. ಅದು ನ್ಯಾಯದ ದಾರಿಯಲ್ಲಿರಲಿ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ಮಾಡಿ ಕೊಡಲಾಗುವುದು.



































