ವಾರ ಭವಿಷ್ಯ

ದಿನಾಂಕ 24.11.2024 ರಿಂದ 30.11.2024 ರ ವರೆಗೆ
ವಿಶೇಷ ದಿನಗಳು : 30.11.2024……ಶ್ರೀ ಧರ್ಮಸ್ಥಳ ಲಕ್ಷ ದೀಪೋತ್ಸವ
ಮೇಷ : ನೀವು ಪ್ರಧಾನವಾಗಿ ಗಮನ ಕೊಡಬೇಕಾದ ಗ್ರಹರೆಂದರೆ ಕುಜ,ರವಿ,ಬುಧ.
ಪ್ರತಿನಿತ್ಯವೂ 108 ಬಾರಿ “ದೇಹಿ ಸೌಭಾಗ್ಯಮಾರೋಗ್ಯಂ ದೇಹಿ ದೇವಿ ಪರಂ ಸುಖಮ್ l ರೂಪಂ ದೇಹಿ
ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿll ನಿಮ್ಮ ಯಾವುದೇ ವ್ಯವಹಾರ, ಹಣದ ಆಗಮನ,
ಯಶಸ್ಸು, ಸಂತೋಷ, ಜೀವನದಲ್ಲಿ ದೇವೀ ಚಾಮುಂಡಿ ಅನುಗ್ರಹಿಸುತ್ತಾಳೆ. ನಿಮ್ಮ ಉತ್ತಮ ಮನೋ
ಬಲದಿಂದ ಕಾರ್ಯ ಸಿದ್ಧಿ,ಸಂಗಾತಿಯೊಂದಿಗೆ ಬರಬಹುದಾದ ವಿರಸ ದೂರವಾಗಲಿದೆ. ಹಣ ಕಾಸಿನ
ಚಿಂತೆಯಿದ್ದರೂ ಕೆಲವು ಅವಶ್ಯ ವಸ್ತುಗಳ ಖರೀಧಿ ಮಾಡುವಿರಿ. ಕಾರಣಾಂತರದಿಂದ ದೂರವಾಗಿದ್ದ
ಬಂಧುಗಳು ತಾವಾಗಿಯೇ ಹತ್ತಿರವಾಗಲಿದ್ದಾರೆ .ಗುರುವಿನ ಅನುಗ್ರಹದಿಂದ ವಿದ್ಯಾರ್ಥಿಗಳು
ಯಶಸ್ವಿಯಾಗಲಿದ್ದಾರೆ.
ವೃಷಭ : ಹೊಸ ಯೋಜನೆಯೊಂದರ ಅನುಷ್ಟಾನದಿಂದ ಹೆಚ್ಚಿನ ಧನ ಲಾಭವನ್ನು ಹೊಂದುವ ಶುಭ
ಸಮಯದಲ್ಲಿ ಇದ್ದೀರಿ. ಇನ್ನೂ ಹೆಚ್ಚಿನ ಧನ ಲಾಭಕ್ಕಾಗಿ ಪ್ರತಿದಿನ 108 ಬಾರಿ “ವಿಧೇಹಿ ದೇವಿ
ಕಲ್ಯಾಣಂ ವಿದೇಹಿ ವಿಪುಲಾಂ ಶ್ರಿಯಮ್l ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ ll
ಕೆಲಸ ಕಾರ್ಯಗಳಲ್ಲಿ ಯಶಸ್ಸು ಬಂಧು ಮಿತ್ರರಿಂದ ಸಹಕಾರ, ಉದ್ಯೋಗದಲ್ಲಿ ಯಶಸ್ಸು,
ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ, ಉದ್ಯೋಗದಲ್ಲಿ ಕಿರಿ ಕಿರಿ ಇದ್ದರೂ ಹೊಂದಾಣಿಕೆ
ಮಾಡಿಕೊಂಡು ಮುಂದುವರಿಯುವಿರಿ .ಉತ್ತಮ ಸಹಕಾರ ನೀಡುವ ಪಾಲುಗಾರ ಸಿಗಲಿದ್ದಾರೆ. ಅಧಿಕಾರ
ಪ್ರಾಪ್ತಿಯಿಂದ ಆರ್ಥಿಕ ಸ್ಥಿತಿ ಸ್ಥಿರ ಆಗಲಿದೆ.
ಮಿಥುನ : ಗುರುವಿನ ಅನುಗ್ರಹದ ಕೊರತೆಯನ್ನು ನೀಗಿಸಲು ವಿದ್ಯಾರ್ಥಿಗಳು ಪ್ರತಿನಿತ್ಯ 108 ಬಾರಿ
“ವಿದ್ಯಾವಂತಂ ಯಶಸ್ವಂತಮ್ ಲಕ್ಷ್ಮೀ ವಂತಮ್ ಚ ಮಾಂ ಕುರು l ರೂಪಂ ದೇಹಿ ಜಯಂ ದೇಹಿ ಯಶೋ
ದೇಹಿ ದ್ವಿಷೋ ಜಹಿ llಮಾತಿನಲ್ಲಿ ಬರುವ ಸಿಟ್ಟು, ಭಯ, ಮಹಿಳೆಯಿಂದ ಬರುವ ಅಪವಾದ, ಎಲ್ಲವೂ
ದೂರವಾಗಿ ನೀವು ಕೈಗೊಳ್ಳುವ ಯಾವುದೇ ವ್ಯವಹಾರ ಹೂವನ್ನು ಎತ್ತುವ ರೀತಿ ಅತೀ ಸುಲಭವಾಗಿ
ನಡೆಯಲಿದೆ. ಕೌಟುಂಬಿಕವಾಗಿ ಹಲವಾರು ಸಂತಸಗಳು ನಿಮ್ಮದಾಗಲಿದೆ. ಪ್ರತಿಯೊಂದು ಸಮಸ್ಯೆಗೆ ದೇವೀ
ಅಮ್ಮನಾಗಿ ಪರಿಹಾರವನ್ನು ನೀಡಿದ್ದಾಳೆ. ನಂಬಿಕೆ,ಶ್ರದ್ಧೆ ಮುಖವಾಗಿದೆ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದ
ಬಲೆಗೆ ಬೀಳದಿರಿ.
ಕರ್ಕಾಟಕ : ಕುಜ ಶನಿಯರು ಕೊಡುವ ಅತಿಯಾದ ತೊಂದರೆಗೆ ಪರಿಹಾರವಾಗಿ ಪ್ರತಿನಿತ್ಯ 108 ಬಾರಿ
“ಐಶ್ವರ್ಯಂ ಯತ್ಪ್ರಸಾದೇನ ಸೌಭಾಗ್ಯಾರೋಗ್ಯ ಸಂಪದ: l
ಶತ್ರುಹಾನಿ: ಪರೋ ಮೋಕ್ಷ: ಸ್ತೂಯತೇ ಸಾ ನ ಕಿಂ ಜನೈ:ll ಓಂ ಹ್ರೀಂ ದುಂ ದುರ್ಗಾಯೈ ನಮ: ll ಶನಿ
ಕುಜರು ಪರಸ್ಪರ ವ್ಯರ್ಥ ಖರ್ಚು, ಕಲಹ , ಅನಾರೋಗ್ಯವನ್ನುತರುತ್ತಾರೆ. ಈ ಶ್ಲೋಕ ಈ ಎಲ್ಲಾ
ಸಮಸ್ಯೆಗೆ ಸಂಜೀವಿನಿಯಂತೆ ಕೆಲಸ ಮಾಡಲಿದೆ. ಅನಾವಶ್ಯಕವಾದ ವಾದ-ವಿವಾದಗಳಿಂದ ಮಾನಸಿಕ ಚಿಂತೆ ವ್ಯಾಪಾರದಲ್ಲಿ ಕಿರಿಕಿರಿ ,ಸಾಲಗಾರರ ಒತ್ತಡ ಬರುವ ಸಾಧ್ಯತೆ ಇದೆ . ಅನಾರೋಗ್ಯ ನಿಮಿತ್ತ ಆಸ್ಪತ್ರೆ
ದರ್ಶನ, ಕುಟುಂಬದಲ್ಲಿಯೂ ಅನಾವಶ್ಯಕ ಕಿರಿಕಿರಿ .ಸಂತಾನ ಭಾಗ್ಯ ಉಂಟಾಗುವ ಸಾಧ್ಯತೆ ಇದೆ.
ಎಲ್ಲದಕ್ಕೂ ಒನೆ ಪರಿಹಾರ ಮೇಲಿನ ಶ್ಲೋಕದ ಪಾರಾಯಣವಾಗಿದೆ.
ಸಿಂಹ : ನಿಮಗೆ ವ್ಯಯದಲ್ಲಿ ಕುಜನಿದ್ದಾನೆ. ಅಷ್ಟಮದಲ್ಲಿ ರಾಹು ಇದ್ದಾನೆ. ಎಲ್ಲವನ್ನೂ ಕಳೆದು
ಕೊಂಡ ಭಯ. ನೀವು ಈ ಎಲ್ಲ ದೋಷಗಳ ಪರಿಹಾರಕ್ಕಾಗಿ ಪ್ರತಿನಿತ್ಯ ಹೇಳಬೇಕಾದ ದೇವಿಯ
ಶ್ಲೋಕವೆಂದರೆ “ಮಹಾಬಲೇ ಮಹಾಮಾಯೇ ಮಹಾ ಭಯವಿನಾಶಿನಿl ತ್ರಾಹಿ ಮಾಂ ದೇವಿ ದುಷ್ಪ್ರೇಕ್ಷೆ
ಶತ್ರೂಣಾಮ್ ಭಯ ವರ್ಧಿನಿll ಕೆಲಸದ ಒತ್ತಡದಿಂದ ಹೈರಾಣಲಾಗಲಿದ್ದೀರಿ.ಸ್ತ್ರೀ ಮೂಲಕ ಸಮಸ್ಯೆ
ಸೃಷ್ಟಿ ನಿಮ್ಮ ಪ್ರತಿಷ್ಟೆಗೆ ಭಂಗ ತರುವಂತಹ ಸನ್ನಿವೇಶ. ಕುಟುಂಬದ ವಿಚಾರದಲ್ಲಿಯೂ, ಉದ್ಯೋಗ
ಮಾಡುವಲ್ಲಿಯೂ ನೆಮ್ಮದಿಯಿರುವುದಿಲ್ಲ. ನೀವು ಮಾನಸಿಕ ಚಿಂತೆಗೆ ದೂಡಲ್ಪಡುತ್ತೀರಿ. ಆಗ ನಿಮ್ಮನ್ನು
ರಕ್ಷಿಸುವ ಶ್ಲೋಕವೇ ಇದಾಗಿದೆ .ಶತ್ರುಭಾಧೆಗೆ ಪರಿಹಾರವಾಗಿದೆ. 108 ಬಾರಿ ಹೇಳಿರಿ.
ಕನ್ಯಾ : ಗುರುವಿನ ಅನುಗ್ರಹ ನಿಮ್ಮ ಮೇಲಿರುತ್ತದೆ. ಉದ್ಯೋಗ ನಿಮಿತ್ತ ಪ್ರಯಾಣದ ಸೂಚನೆ ಇರುತ್ತದೆ.
ಜನ್ಮದಲ್ಲಿ ಕೇತು, ಸಪ್ತಮದಲ್ಲಿ ರಾಹು, ಇರುವುದರಿಂದ ಇದರ ದೋಷ ನಿವಾರಣೆಗಾಗಿ “ಸರ್ವ
ಬಾಧಾಪ್ರಶಮನಮ್ ತ್ರೈಲೋಕ್ಯಸ್ಯಾಖಿಲೇಶ್ವರಿ l ಏವಮೇವ ತ್ವಯಾ ಕಾರ್ಯಮಸ್ಮದ್ವೈರಿವಿನಾಶನಮ್ll
108 ಬಾರಿ ನಿತ್ಯವೂ ಹೇಳುತ್ತಾ ಬನ್ನಿರಿ .ಪಾಲುಗಾರಿಕೆಯಲ್ಲಿ ಭಿನ್ನಾಭಿಪ್ರಾಯ ಬರಲಿದೆ. ರವಿ,ಬುಧ
ತೃತೀಯಾದಲ್ಲಿ ಇದ್ದುಕೊಂಡು ನಿಮಗೆ ಸಹೋದರ ವರ್ಗದವರಿಂದ ಸಹಾಯ ದೊರೆಯಲಿದೆ.
ಉದ್ಯೋಗದ ಅನ್ವೇಶನೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ .ಕಂಕಣ ಬಲ
ಕೂಡಿಬಂದಿರುವ ಕಾಲವಾಗಿದೆ.
ತುಲಾ : ಪಂಚಮದಲ್ಲಿ ಶನಿ ,ಅಷ್ಟಮದಲ್ಲಿ ಗುರು ಇರುವುದರಿಂದ ವಿಷ್ಣು ಸಹಸ್ರ ನಾಮ ಪಾರಾಯಣ
ಮಾಡುವ ಅತೀ ಅಗತ್ಯವಿದೆ. ದೊಡ್ಡ ಯೋಜನೆಯೊಂದಕ್ಕೆ ಸಹಿ ಮಾಡುವ ಸಾಧ್ಯತೆ ಇದೆ. ದಾಖಲೆ
ಪತ್ರಗಳಿಗೆ ಸಹಿ ಮಾಡುವಾಗ ಎಚ್ಚರವಿರಲಿ. ಮಕ್ಕಳ ವಿಷಯದಲ್ಲಿ ಎಚ್ಚರವಿರಲಿ. ಆರ್ಥಿಕವಾಗಿ ಚೇತರಿಕೆ
,ನಿಮ್ಮ ಜಾಣ್ಮೆಯಿಂದ ಕಂಡುಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ ಕಂಡುಬಂದರೂ
ನಿಮ್ಮಲ್ಲಿ ಧಾರ್ಮಿಕ ಭಾವನೆ ಹೆಚ್ಚಿದಾಗ ಪರಿಹಾರವನ್ನು ಕಂಡುಕೊಳ್ಳುವಿರಿ. ನೀವು ಇಚ್ಛಿಸುವ ಸ್ಥಳಕ್ಕೆ
ವರ್ಗಾವಣೆ ದೊರೆಯಲಿದೆ. ವ್ಯಾಪಾರಿಗಳು ಎಚ್ಚರದಿಂದ ಹಣ ತೊಡಗಿಸಿರಿ.
ವೃಶ್ಚಿಕ : ನಿಮಗೆ ಬಾಧಕ ಸ್ಥಾನದಲ್ಲಿ ನೀಚ ಕುಜನಿದ್ದಾನೆ. 4 ನೆಯ ಮನೆಯ ಶನಿಯ ದೋಷವಿದೆ. ನೀವು
ನಿತ್ಯವೂ 108 ಬಾರಿ “ಸರ್ವ ಸ್ವರೂಪೇ ಸರ್ವೇಶೇ ಸರ್ವ ಶಕ್ತಿಶಾಮನ್ವಿತೇ l ಭಯೇಭ್ಯಸ್ತ್ರಾಹಿನೋ ದೇವಿ
ದುರ್ಗೇ ದೇವಿ ನಮೋಸ್ತುತೇ ll ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಕುಟುಂಬದಲ್ಲಿ
ಸಂಗಾತಿಯೊಂದಿಗೆ ಇದ್ದ ಭಿನ್ನಾಭಿಪ್ರಾಯ ಶಮನವಾಗುವ ಹಂತಕ್ಕೆ ಬರಲಿದೆ. ಕುಟುಂಬದ ಹಿರಿಯ
ಸದಸ್ಯರ ಅನಾರೋಗ್ಯ ನಿಮಿತ್ತ ಖರ್ಚು ಬರಲಿದೆ . ಭಾವನಾತ್ಮಕವಾಗಿ ನೀವು ತೆಗೆದುಕೊಳ್ಳುವ ಕೆಲವು
ತೀರ್ಮಾನಗಳು ಮುಂದಿನ ದಿನಗಳಲ್ಲಿ ತೊಂದರೆಯನ್ನು ಕೊಡಲಿದೆ. ಹೊಸ ವಸ್ತುಗಳ ಖರೀಧಿ
ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ.
ಧನು : ಪಂಚಮಾಧಿಪತಿ ಕುಜ ವ್ಯಯಾಧಿಪತಿಯಾಗಿ ನೀಚನಾಗಿ ಅಷ್ಟಮದಲ್ಲಿ ಇದ್ದಾನೆ. ಈ ಮಹಾ
ದೋಷಕ್ಕೆ ಪರಿಹಾರವಾಗಿ ನೀವು ಪ್ರತಿನಿತ್ಯ 108 ಬಾರಿ ಹೇಳಬೇಕಾದ ಮಂತ್ರ “ಜಯ ತ್ವಂ ದೇವಿ
ಚಾಮುಂಡೇ ಜಯ ಭೂತಾಪಹಾರಿಣಿ lಜಯ ಸರ್ವಗತೇ ದೇವಿ ಕಾಲ ರಾತ್ರಿ ನಮೋ sಸ್ತುತೇ ll ಗುರುವಿನ
ಅನುಗ್ರಹವೂ ಪ್ರಸ್ತುತ ಇರುವುದಿಲ್ಲ. ಕೆಲಸದ ನಿಮಿತ್ತ ಅನಿರೀಕ್ಷಿತ ಪ್ರಯಾಣ ಮಾಡುವ ಸಂದರ್ಭ
ಬರಲಿದೆ. ಅನಾರೋಗ್ಯ ನಿಮಿತ್ತ ವೈದ್ಯರನ್ನುಕಾಣುವ ಸಾಧ್ಯತೆ ಕಂಡು ಬರುತ್ತಿದೆ. ಮಕ್ಕಳಲ್ಲಿ
ವೈಮನಸ್ಸು ಬರಲಿದೆ. ಬಿಪಿ ಷುಗರ್ ಸಮಸ್ಯೆ ಇರುವವರು ಎಚ್ಚರವಿರಬೇಕು. ಸಂಗಾತಿಯೊಂದಿಗೆ
ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುತ್ತದೆ.
ಮಕರ : ನಿಮಗೆ ದೈವಾನುಗ್ರಹ ಇರುತ್ತದೆ. ಸಾಡೇ ಸಾತ್ ಶನಿಯ ಕಾಟ ನಿಮ್ಮ ಸುಖ ಸಂಸಾರದ ಮೇಲೆ
ತನ್ನ ದೃಷ್ಟಿಯನ್ನುಇಟ್ಟಿದೆ. ನೀವು ಪ್ರತಿನಿತ್ಯ ಹೇಳ ಬೇಕಾದ ಮಂತ್ರ “ಓಂ ಶಂ ಶನೈಶ್ಚರಾಯನಮ: l
108 ಬಾರಿ ಹಾಗೆಯೇ ಓಂ ಶ್ರೀಮ್ ನಮ: ಶಿವಾಯ l ಯಾರಲ್ಲಿಯೂ ವಾದ ವಿವಾದ ಬೇಡ. ಹಣದ
ವ್ಯವಹಾರ ಕೊಡುವುದು –ಕೊಡಿಸುವುದು ಬೇಡ. ಮಾನಸಿಕ ಒತ್ತಡ ಕಾಡಲಿದೆ. ಎಲ್ಲಾ ಮನೆಗಳಲ್ಲಿ
ನೂರಕ್ಕೆ ತೊಂಬತ್ತು ಭಾಗ ತಂದೆ –ತಾಯಿ- ಮಕ್ಕಳು- ಸೊಸೆ- ಅತ್ತೆ ಇಂದಿನ ದಿನಗಳಲ್ಲಿ ವಿರಸದಲ್ಲಿಯೇ
ಇರುತ್ತಾರೆ. ಎಲ್ಲರ ಮಾತನ್ನು ಎಲ್ಲರೂ ಗೌರವಿಸುದೊಂದೇ ಇದಕ್ಕೆ ಪರಿಹಾರವಾಗಿದೆ .
ರಾಜಕೀಯದಲ್ಲಿ ಯಶಸ್ಸು ಕಾಣಲಿದ್ದೀರಿ.
ಕುಂಭ : ಜನ್ಮದ ಶನಿಯ ಪ್ರಭಾವ ನಿಮ್ಮ ರಾಜಕೀಯ ಜೀವನದ ಮೇಲೆ ,ಸಂಸಾರದ ಮೇಲೆ
ಕಾಡುತ್ತಿರುತ್ತದೆ. ನೀವು ಹೇಳ ಬೇಕಾದ ಶ್ಲೋಕವೆಂದರೆ “ಪುತ್ರಾನ್ ದೇಹಿ ಧನಂ ದೇಹಿ ಸರ್ವ ಕಾಮಾಂಶ್ಚ
ದೇಹಿ ಮೇ l ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ,ದ್ವಿಷೋ ಜಾಹಿ ll ಪ್ರತಿನಿತ್ಯ 108 ಬಾರಿ
ಹೇಳಿರಿ. ಈ ಸಮಯದಲ್ಲಿ ಕುಜನ ನೀಚ ಸ್ಥಿತಿಯಿಂದ ,ಶನಿಯ ಪ್ರಭಾವದಿಂದ ನೀವು ಮಾಡಬೇಕೆಂದಿರುವ
ಕೆಲಸಗಳಲ್ಲಿ ಹಿನ್ನೆಡೆ ಇರುತ್ತದೆ. ಕಾನೂನಿನ ತೊಡಕು ಉಂಟಾಗಲಿದೆ. ಸರಕಾರಿ ಅಧಿಕಾರಿಗಳಿಂದ ತೊಂದರೆ
ಬರುವ ಸಾಧ್ಯತೆ ಇದೆ. ತಾಳ್ಮೆ ಅತೀ ಅಗತ್ಯವಿದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ ಉದ್ಯೋಗದಲ್ಲಿ
ಮೇಲಧಿಕಾರಿಗಳ ಕಿರುಕುಳ ಬರಲಿದೆ.
ಮೀನ : ರಾಹು ಜನ್ಮದಲ್ಲಿ, ಕೇತು ಸಪ್ತಮದಲ್ಲಿ,ಶನಿ ವ್ಯಯದಲ್ಲಿ,ಗುರು ತೃತೀಯಾದಲ್ಲಿ, ಕುಜ
ಪಂಚಮದಲ್ಲಿ ನೀಚನಾಗಿರುವುದು.ನೀವು ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ,ದೇವಿ ಸ್ತೋತ್ರ
ಪಾರಾಯಣ ಮಾಡುವುದು ಅತೀ ಆಗತ್ಯವಾಗಿದೆ. ವ್ಯಾಪಾರದಲ್ಲಿ ಅನ್ಯರ ಪಿತೂರಿ ಕಂಡು ಬರಲಿದೆ.
ಮಕ್ಕಳಿಂದ ಬೇಸರ ಬರಲಿದೆ. ಮಕ್ಕಳಿದ್ದರೂ /ಮಕ್ಕಳಿಲ್ಲದಿದ್ದರೂ ಬೇಸರ ಇದ್ದೇ ಇರುತ್ತದೆ.
ಅನುಗಾಲವೂ ಚಿಂತೆ ತಪ್ಪಿದ್ದಲ್ಲ. ನೌಕರಿಯ ಹುಡುಕಾಟದಲ್ಲಿ ಇರುವವರಿಗೆ ನೌಕರಿ ಪ್ರಾಪ್ತಿಯಾಗಲಿದೆ
.ಕೃಷಿಕರಿಗೆ, ಆಧಿಕ ಲಾಭ ದೊರೆಯಲಿದೆ. ಹೋಟೆಲ್ ನಡೆಸುವವರಿಗೆ ಉತ್ತಮ ಲಾಭ ಬರಲಿದೆ. ಹಣ
ತೊಡಗಿಸುವುದರ ಬಗ್ಗೆ, ಎಚ್ಚರವಿರಲಿ. ಮೋಸಹೋಗುವವರು ಇರುವಾಗ ಮೋಸ ಮಾಡುವವರಿಗೆ
ಕೊರತೆ ಇರುವುದಿಲ್ಲ.
ಅಗತ್ಯವಿರುವವರಿಗೆ ಕಂಪ್ಯೂಟರ್ ಜಾತಕವನ್ನುಮಾಡಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ
ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು
ತಿಳಿಸಲಾಗುವುದು. ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ಮಾಡಿ ಕೊಡಲಾಗುವುದು.






































