ವಾರ ಭವಿಷ್ಯ
ದಿನಾಂಕ 23.06.2024 ರಿಂದ 29.06.2024 ರ ವರೆಗೆ
ವಿಶೇಷ ದಿನಗಳು :29.06.2024: ಕರ್ಕಾಟಕ ರಾಶಿಗೆ ಬುಧನ ಪ್ರವೇಶ
ಶನಿಯ ವಕ್ರ ಗತಿ ಆರಂಭ
ಮೇಷ : ಅನೇಕ ಶುಭ ಫಲಗಳನ್ನು ಕಾಣುವ ವಾರವಾಗಿದೆ .ಬದಲಾವಣೆಗಳನ್ನು ಕಾಣುವಿರಿ .ದೇವರ
ಅನುಗ್ರಹದಿಂದ ನಿಮ್ಮ ವ್ಯವಹಾರ ,ನೀವು ಮಾಡುವ ಉದ್ಯೋಗ ,ಆದಾಯದಲ್ಲಿ ಹೆಚ್ಚಳ ಆಗಲಿದೆ
.ರಾಶ್ಯಾಧಿಪತಿ ಕುಜನಿಗೆ ಪರಿಹಾರ ಅಗತ್ಯವಿದೆ .ನರಸಿಂಹ ದೇವರ ಮಂತ್ರ ಪಾರಾಯಣ ಅಗತ್ಯವಿದೆ .ಮನ:
ಏವ ಮನುಷ್ಯಾನಾಮ್ ……ಎನ್ನುವಂತೆ ಮನಸ್ಸಿಗೆ ಉದ್ವೇಗವನ್ನು ತಂದುಕೊಳ್ಳದೆ ಯೋಗ
ಪ್ರಾಣಾಯಾಮ ಮಾಡಿರಿ .ಈ ಲೋಕದಲ್ಲಿ ಉಚಿತ ಸಲಹೆ ಕೊಡುವವರಿಗೆ ಕೊರತೆ ಇಲ್ಲ.ದೈಹಿಕ
ಅನಾರೋಗ್ಯ ಮಾನಸಿಕ ಒತ್ತಡವಿರುತ್ತದೆ .ಭೂಮಿಗೆ ಸಂಬಂಧಿಸಿದ ಕಲಹಗಳು ವಿವಾದಗಳು ಇರುತ್ತವೆ
.ನಿಮ್ಮ ವಿರೋಧಿಗಳನ್ನು ಎದುರಿಸುವ ಬದಲು ಸಮಾಧಾನದಿಂದ ಹೋಗಿ ಅವರ ಮನಸ್ಸನ್ನು
ಬದಲಾಯಿಸಿರಿ .
ವೃಷಭ : ಉತ್ತಮ ದೈವಾನುಗ್ರಹದ ಸಮಯ .ಮೂರು ಕಡೆಯಿಂದ ಅಥವಾ ರೀತಿಯಿಂದ ಧನ ಆದಾಯ
ಬರಲಿದೆ .ನಿಮ್ಮದೇ ಆದ ಮನೆ ಕಟ್ಟಿಕೊಳ್ಳುವ ಅವಕಾಶ ಒದಗಿ ಬರಲಿದೆ .ರಾಜಕೀಯದಲ್ಲಿ ಇರುವವರಿಗೆ
ಲಕ್ಷ್ಮೀ ನಾರಾಯಣ ಯೋಗ ಬುಧಾದಿತ್ಯ ಯೋಗ ಕೂಡಿ ಬರಲಿದೆ .ವಿದ್ಯಾರ್ಥಿಗಳು ಯಶಸ್ವಿಯಾಗುವರು
.ಒಳ್ಳೆಯ ಕಡೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸುವಿರಿ .ಕುಟುಂಬದ ವಿಚಾರದಲ್ಲಿ ಶೀತಲ ಸಮರ
ಮುಂದುವರಿದೇ ಇರುತ್ತದೆ .ಮಹಿಳೆಯರ /ಪುರುಷರ ವಿಷಯದಲ್ಲಿ ಎಚ್ಚರವಿರಲಿ .ಸ್ವತಂತ್ರ ಉದ್ಯೋಗ
ಮಾಡುವವರಿಗೆ ಒಳ್ಳೆಯ ಭವಿಷ್ಯ ಕೂಡಿ ಬರಲಿದೆ .ನಿಮ್ಮ ಇಷ್ಟದಂತೆ ನಿಮ್ಮ ಜೀವನ ನಡೆಯಲಿದೆ .ನಿಮ್ಮ
ಸಹೋದರಿಯ ಜೀವನದಲ್ಲಿ ಅಪಸ್ವರವೊಂದು ಬರುವ ಸಾಧ್ಯತೆ ಇರುತ್ತದೆ .ದುರ್ಗೆಯ ಆರಾಧನೆ ಮಾಡಿರಿ
.
ಮಿಥುನ ;ನಿಮ್ಮ ಜನ್ಮ ರಾಶಿಯಲ್ಲಿ ಇರುವ ಶುಕ್ರ ರವಿ ಬುಧ ಮಿಶ್ರ ಫಲವನ್ನು ನೀಡಲಿದ್ದಾರೆ
.ವಿಶ್ರಾಂತಿಯ ಕೊರತೆ ನಿಮ್ಮಲ್ಲಿ ಕಾಣುತ್ತಿದೆ .ನರಸಿಂಹ ದೇವರ ಮೂಲ ಮಂತ್ರವನ್ನು ಪ್ರತಿನಿತ್ಯ 108
ಬಾರಿ ಪಾರಾಯಣ ಮಾಡಿರಿ .ಅನ್ಯರ ಸಹಕಾರ ನಿರೀಕ್ಷೆ ಮಾಡುವ ಅಗತ್ಯವಿಲ್ಲ.ಮನೆಯಲ್ಲಿಯೂ
ನೆಮ್ಮದಿಯ ಕೊರತೆ ಇರುತ್ತದೆ .ಅನಿರೀಕ್ಷಿತವಾಗಿ ಭೂಮಿಯ ಲಭ್ಯತೆಯ ಯೋಗವಿದೆ .ಉದ್ಯೋಗ
ಮಾಡುವವರು ಮಾತಿನ ಹಿಡಿತದಲ್ಲಿ ಮುಂದುವರಿಯಿರಿ .ಸಮಾಜದಲ್ಲಿ ನಿಮಗೆ ಸಿಗುವ ಗೌರವ ನಿಮ್ಮ
ಕೈಯಲ್ಲಿ ಇರುತ್ತದೆ .ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ನಿಮಗಿರಬೇಕು .ಗುರು ವ್ಯಯದಲ್ಲಿ ಇದ್ದಾನೆ
.ಪತಿ ಪತ್ನಿಯರ ನಡುವೆ ಹೊಂದಾಣಿಕೆಯ ಬದುಕು ಅತೀ ಅಗತ್ಯವಿದೆ .
ಕರ್ಕಾಟಕ : ನಿಮ್ಮ ಅತೀ ಕಷ್ಟದ ಕಾಲ 29ನೇ ದಿನಾಂಕದಿಂದ ದೂರವಾಗಲಿದೆ .ಅದರ ಪರಿಣಾಮ
ಈಗದಿಂದಲೇ ನಿಮ್ಮ ಅರಿವಿಗೆ ಬರಲಿದೆ . ಶುಕ್ರ ರವಿ ಬುಧ ವ್ಯಯದಲ್ಲಿ ಇರುವುದರಿಂದ ಮನೆ ಬದಲಾವಣೆ
ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ .ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಒಂದು
ಹೆಜ್ಜೆ ಮುಂದೆ ಇಡಲು ಹತ್ತು ಬಾರಿ ಯೋಚಿಸಬೇಕು .ದೇವರ ಅನುಗ್ರಹ ಅತ್ಯುತ್ತಮವಾಗಿ ಇರುವ ಕಾರಣ
ಭಯ ಪಡುವ ಅಗತ್ಯವಿರುವುದಿಲ್ಲ.ನರ,ಎಲುಬು ,ಸ್ನಾಯು ನೋವಿನ ಸಮಸ್ಯೆಯಿಂದ ನರಳುವಿರಿ .ಅನ್ಯ
ಮಹಿಳೆಯಿಂದ ಅಪಮಾನ ವೊಂದು ಬರುವ ಸಾಧ್ಯತೆ [ಪುರುಷ /ಮಹಿಳ] ಕಂಡು ಬರುತ್ತಿದೆ .ಪ್ರೀತಿ
ಪ್ರೇಮದಿಂದ ದೂರವಿದ್ದಷ್ಟೂ ಒಳ್ಳೆಯದು .ದಾನ ಮಾಡುವ ಮೊದಲು ನಿಮ್ಮ ಸಾಮರ್ಥ್ಯ
ನೋಡಿಕೊಂಡು ಮಾಡಿರಿ .
ಸಿಂಹ : ಲಾಭ ಕ್ಷೇತ್ರದಲ್ಲಿ ಶುಕ್ರ ,ರವಿ,ಬುಧ ಹಾಗೆಯೇ ಕರ್ಮ ಕ್ಷೇತ್ರದಲ್ಲಿ ಇರುವ ಗುರು ಅತ್ಯಂತ
ಶುಭದಾಯಕ ದಿನಗಳನ್ನು ನಿಮಗೆ ನೀಡುತ್ತಿದ್ದಾರೆ . ಅಮ್ಮನವರ ಅನಾರೋಗ್ಯ ಭಾಧೆ ನಿಮಗೆ ಮನಸ್ಸಿಗೆ
ಕಿರಿಕಿರಿಯನ್ನು ತರಲಿದೆ .ನೀವು ದೇವೀ ಶಕ್ತಿಗೆ ಪೂಜೆ ಮಾಡುತ್ತಿದ್ದು ಅದನ್ನು ನಿಲ್ಲಿಸಿದ ಕಾರಣವೇನು
?ನಿಮ್ಮ ಮಗಳ ಉತ್ತಮ ಭವಿಷ್ಯಕ್ಕಾಗಿ ಪೂಜೆಯನ್ನು ಮುಂದುವರಿಸಿರಿ .ಒಬ್ಬ ವ್ಯಕ್ತಿಯ ಪ್ರತಿಯೊಂದು
ಮಾತಿನ ಶೈಲಿ ಅವರ ಗುಣವನ್ನು ನಿರ್ಧರಿಸುತ್ತದೆ .ಅನಾವಶ್ಯಕ ಚಿಂತೆ ನಿಮಗೆ ತಲೆನೋವನ್ನು ತರುತ್ತಿದ್ದು
ತಲೆ ಸುತ್ತು ಬರುವ ಸಾಧ್ಯತೆ ಇರುತ್ತದೆ .ನಾಗ ದೇವರ ಪ್ರಾರ್ಥನೆ ಮಾಡಿರಿ .ಪತಿಯೊಂದಿಗೆ ಹೊಂದಿಕೊಂಡು
ಹೋಗುವುದನ್ನು ರೂಢಿಸಿ ಕೊಳ್ಳಿರಿ .
ಕನ್ಯಾ : ಭಾಗ್ಯದಲ್ಲಿ ಗುರುವಿರುವುದರಿಂದ ಉದ್ಯೋಗದಲ್ಲಿ ಬಡ್ತಿ ಯೋಗವಿದೆ .ಹೊಸ ಉದ್ಯೋಗ
ಪ್ರಾಪ್ತಿಯೋಗವಿದೆ .ಮಂಗಳ ಕಾರ್ಯಗಳು ನಡೆಯುವ ಕಾಲ .ಕುಜ ಅಷ್ಟಮದಲ್ಲಿ ಇರುವುದರಿಂದ
ಸಹೋದರನಿಗೆ ಆರೋಗ್ಯದ ಸಮಸ್ಯೆ ಬರಲಿದೆ .ಪಿತ್ರಾರ್ಜಿತ ಆಸ್ತಿಯ ಬಗ್ಗೆ ವಾದ ವಿವಾದ ಉಂಟಾಗುವ
ಸಾಧ್ಯತೆ ಇದೆ .ಕೋಪ ,ಉದ್ವೇಗದಿಂದ ಹೊರಗೆ ಬನ್ನಿರಿ .ನಿಮ್ಮ ಉದ್ಯೋಗದಲ್ಲಿ ವಿಶ್ರಾಂತಿ ಇರುವಂತೆ
ನೋಡಿಕೊಳ್ಳಿರಿ .ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ದೊರೆಯಲಿದೆ .ಕಮಿಶನ್ ಆಧಾರಿತ
ವ್ಯವಹಾರದಲ್ಲಿ ಉತ್ತಮ ಲಾಭಾಂಶ ದೊರೆಯಲಿದೆ .ದಾಂಪತ್ಯದಲ್ಲಿ ಕೇತು ,ರಾಹು ,ಕುಜ ತೊಂದರೆ
ಮಾಡುವ ಸಾಧ್ಯತೆ ಇರುವುದರಿಂದ ಕಲಹ ,ವಿರಸ ಬರದಂತೆ ಎಚ್ಚರವಹಿಸಿರಿ .
ತುಲಾ : ಭಾಗ್ಯದಲ್ಲಿ ಶುಕ್ರ ,ರವಿ,ಬುಧ ಇರುವುದರಿಂದ ಉದ್ಯೋಗದಲ್ಲಿ ಜವಾಬ್ದಾರಿಯುತ ಸ್ಥಾನ
ಮಾನ ಲಭಿಸಲಿದೆ .ರಾಜಕೀಯದಲ್ಲಿ ಇರುವ ವ್ಯಕ್ತಿಗಳಿಗೆ ಉನ್ನತ ಮಟ್ಟದ ಹುದ್ದೆ ಲಭಿಸಲಿದೆ .ಗುರು
ಅಷ್ಟಮದಲ್ಲಿ ಇರುವುದನ್ನು ಗಮನಿಸಿರಿ .ಆತುರದಿಂದ ತಪ್ಪು ದಾರಿಗೆ ಹೋಗುವ ಸಾಧ್ಯತೆ ಇದೆ .ಯಾರು
ಏನು ಹೇಳಿದರೂ ಬೆಲೆಕೊಡದ ಒರಟುತನ ಬೆಳೆಸಿಕೊಳ್ಳುವಿರಿ .ನಿಮ್ಮ ಕ್ರಿಯಾ ಶೀಲ ವ್ಯಕ್ತಿತ್ವ ಎಲ್ಲರ
ಗಮನ ಸೆಳೆಯಲಿದೆ .ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳಲಿದ್ದಾರೆ .ಕುಜ ಸಪ್ತಮದಲ್ಲಿ ಇರುವ ಸಮಯ
,ಪತ್ನಿಯೊಂದಿಗೆ ವಿರಸ ಬರದಂತೆ ಹೊಂದಿ ಕೊಂಡು ಹೋಗುವುದನ್ನು ಕಲಿಯಿರಿ .ನಿಮ್ಮ ಮಕ್ಕಳೊಂದಿಗೆ
ಮೃಧು ಧೋರಣೆ ಇರಲಿ .
ವೃಶ್ಚಿಕ : ಈ ವಾರ ನಿಮಗೆ ಶುಭ ವಾರವಾಗಿದೆ .ಕುಜ ಗುರು ಶುಕ್ರ ಬುಧ ಎಲ್ಲರೂ ನಿಮಗೆ ಶುಭ
ಫಲವನ್ನು ನೀಡುವವರೆ ಆಗಿರುತ್ತಾರೆ .ಸಂಗಾತಿಯ ಸಹಾಯದಿಂದ ಹಣದ ಮುಗ್ಗಟ್ಟು ಕಡಿಮೆ ಆಗಲಿದೆ
.ಈ ವಾರದಲ್ಲಿ ನೀವು ಆರಂಭಿಸುವ ಕೆಲಸಗಳೆಲ್ಲವೂ ಪೂರ್ಣಗೊಳ್ಳಲಿದೆ .ರಾಜಕೀಯದಲ್ಲಿ ಇರುವ
ವ್ಯಕ್ತಿಗಳು ಎಲ್ಲರ ಗಮನ ಸೆಳೆಯುವವರು ಆಗಿರುತ್ತಾರೆ . ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವಿದೆ
.ಉದ್ಯೋಗ ನಿಮಿತ್ತವಾಗಿ ತೆರಳುವ ಯೋಗವಿದೆ .ಶುಭ ಮಂಗಳಕೆಲಸಗಳಲ್ಲಿ ಭಾಗವಹಿಸುವ ಯೋಗ
ನಿಮಗೆ ಬರಲಿದೆ .ನೀವು ಪ್ರೀತಿಸುತ್ತಿರುವ ಹುಡುಗಿ ಕೈ ಕೊಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಭೂ ವ್ಯವಹಾರ ನಿಮಗೆ ಲಾಭ ತರಲಿದೆ .29 ರಿಂದ ನಂತರ ಶನಿ ನಿಮಗೆ ಅನುಕೂಲ ಸ್ಥಿತಿಗೆ ಬರುತ್ತಿದ್ದಾನೆ .
ಧನು : ದಿನಾಂಕ 29 ರಿಂದ ಶನಿ ವಕ್ರಗತಿಯನ್ನು ಹೊಂದಿ ಸಾಡೇ ಸಾತ್ ಕಾಟ ಆರಂಭ ಆಗಲಿದೆ .ಯಾವುದೇ
ಗ್ರಹರು ಅನುಕೂಲ ಸ್ಟಿತಿಯನ್ನು ಹೊಂದಿಲ್ಲ .ಶುಕ್ರ ,ರವಿ ಬುಧ ಇವರಿಗೆ ದೇವಿ ,ಈಶ್ವರ ,ವಿಷ್ಣು ದೇವರ
ಯಥಾ ಶಕ್ತಿ ಸೇವೆಯನ್ನು ಮಾಡುತ್ತಾ ಬರಬೇಕು .ಹಣಕಾಸಿನ ವಿಷಯದಲ್ಲಿ ಮನಸ್ತಾಪಗಳು ,ಆರೋಗ್ಯ
ಸಂಬಂಧಿ ಸಮಸ್ಯೆಗಳು ,ನೀವು ನಡೆಸುವ ವ್ಯವಹಾರದಲ್ಲಿ ಸಾಧಾರಣ ಪ್ರಗತಿ .ಉದ್ಯೋಗದಲ್ಲಿ
ಮಹಿಳೆಯರಿಂದ ಅಪವಾದ ಬರಲಿದೆ .ಅಲೆರ್ಜಿ ಸಮಸ್ಯೆ ಬರಲಿದೆ .ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ
ಅನಿವಾರ್ಯತೆ ಇದೆ . ಮಕ್ಕಳು ನಿಮ್ಮ ಮಾತಿಗೆ ಮಾನ್ಯತೆ ಕೊಡುವುದಿಲ್ಲ.ಕುಜ ಪಂಚಮದಲ್ಲಿ
ವ್ಯಯಾಧಿಪತಿಯಾಗಿ ಇದ್ದಾನೆ .ನೀವು ಮಾಡುವ ದೇವರ ಆರಾಧನೆಯಲ್ಲಿ ಕೆಲವೊಮ್ಮೆ ಆಸಕ್ತಿಯನ್ನೂ
ಕಳೆದುಕೊಳ್ಳುವಿರಿ .
ಮಕರ : ಪಂಚಮದಲ್ಲಿ ಗುರು ಇರುವ ಶುಭ ಯೋಗ ಹೊಂದಿರುವ ಕಾಲ .ರಾಜಕೀಯದಲ್ಲಿ ಇರುವವರಿಗೆ
ಉನ್ನತಿ ಪದವಿ ಪ್ರಾಪ್ತಿ ಯೋಗ ಬರಲಿದೆ .ಮನೆ ಕಟ್ಟುವ .ವಾಹನ ಖರೀಧಿ ಮಾಡುವ ಯೋಗ ನಿಮಗೆ
ಬರಲಿದೆ ತಾಯಿಯವರ ,ಮತ್ತು ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ ,ಜೊತೆಗೆ ನಾಗ ದೇವರ
ಆರಾಧನೆಯನ್ನು ಮಾಡಿರಿ .ಶನಿ ದಿನಾಂಕ 29 ರಿಂದ ನಿಮ್ಮ ಜನ್ಮ ರಾಶಿಗೆ ಬರಲಿದ್ದಾನೆ .ವಿಷ್ಣು
ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿ ಮಾಡ ಬೇಕಾಗಿದೆ .ಆರೋಗ್ಯದ ಕಡೆಗೆ ಅದರಲ್ಲಿಯೂ
ವಿಶೇಷವಾಗಿ ಹೃದಯದ ಕಾಯಿಲೆ ಸಮಸ್ಯೆ ಈಗಾಗಲೇ ಇರುವವರು ಎಚ್ಚರದಿಂದ ಇರಬೇಕು 8 ನೇ ರವಿ 6
ರಲ್ಲಿ ಇರುವುದನ್ನು ಗಮನಿಸಿರಿ .
ಕುಂಭ : ನೀವು ಮಾಡುತ್ತಿರುವ ಯಾವುದೇ ವ್ಯವಹಾರ ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ .ಶನಿ
ದಿನಾಂಕ 29 ರಿಂದ ವ್ಯಯಕ್ಕೆ ಬರಲಿದ್ದಾನೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .ಮಾನಸಿಕ
ನೆಮ್ಮದಿಗಾಗಿ ಏಕಾಂಗಿಯಾಗಿರಲು ಬಯಸುವಿರಿ .ಮದ್ಯ ಸೇವನೆ ಮಾಡುವವರು ಸ್ವಲ್ಪ ಸಮಯ ಸೇವನೆ
ಮಾಡದಿದ್ದರೆ ಒಳ್ಳೆಯದು . ಆಯ-ವ್ಯಯ ಸಮನಾಗಲಿದೆ .ಯಾವುದೇ ಹಣ ಹೂಡಿಕೆಯ ವಿಷಯದಲ್ಲಿ
ಎಚ್ಚರವಹಿಸಿದರೆ ಒಳ್ಳೆಯದು .ವಿದೇಶ ಪ್ರಯಾಣ ಯೋಗವಿದೆ . ನಾಗ ದೇವರ ಪ್ರಾರ್ಥನೆ ಮಾಡುವುದು
ಅಗತ್ಯವಾಗಿದೆ .ಯಾರಿಗೂ ಮಾತು ಕೊಡುವ ಮೊದಲು ಯೋಚನೆ ಮಾಡಿರಿ .ಕುಟುಂಬದಲ್ಲಿ ನಿಮ್ಮ
ಮಾತಿಗೆ ಮಾನ್ಯತೆ ಇರುವುದಿಲ್ಲ .ಮಕ್ಕಳ ಜೊತೆಗೆ ಹೊಂದಾಣಿಕೆಯಿಂದ ಮುಂದುವರಿಯಿರಿ .
ಮೀನ : ಶನಿ ದಿನಾಂಕ 29 ರಿಂದ ಲಾಭ ಕ್ಷೇತ್ರಕ್ಕೆ ಪ್ರವೇಶ ಮಾಡಲಿದ್ದಾನೆ .ನಿಮ್ಮ ಬರುತ್ತಿರುವ
ಆದಾಯದಲ್ಲಿ ಗಣನೀಯವಾಗಿ ಹೆಚ್ಚಳ ಕಂಡುಬರಲಿದೆ .ಜನ್ಮ ರಾಶಿಯಲ್ಲಿ ರಾಹು ಇರುವುದರಿಂದ
,ದ್ವಿತೀಯಾದಲ್ಲಿ ಕುಜನಿರುವುದರಿಂದ ನಾಗ ದೇವರ ಆರಾಧನೆ ಅಗತ್ಯವಿದೆ ಷುಗರ್ ಸಮಸ್ಯೆ ಇರುವವರು
,ಬಿಳಿಮುಟ್ಟು ಸಮಸ್ಯೆ ಇರುವ ಮಹಿಳೆಯರು ಎಚ್ಚರವಿರಬೇಕು ಕತ್ತಲೆಯಲ್ಲಿ ಟಾರ್ಚ್ ಇಲ್ಲದೆ
ಹೋಗಬೇಡಿ ,ವಿಷ ಜಂತುಗಳ ಬಗ್ಗೆ ಎಚ್ಚರವಿರಲಿ . ಸಾಲ ಕೊಡುವುದು ,ತೆಗೆದುಕೊಳ್ಳುವುದು ಈ
ವಾರದಲ್ಲಿ ಬೇಡ .ಅನ್ಯ ಮಹಿಳೆಯರ ವಿಷಯದಲ್ಲಿ ಎಚ್ಚರವಿರಲಿ .ವಿದ್ಯಾರ್ಥಿಗಳು ತಮ್ಮ ಗಮನವನ್ನು
ಓದಿನ ಕಡೆಗೆ ಕೊಡುವುದು ಅಗತ್ಯವಿದೆ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಯಾವುದೇ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು .ವಿವಾಹ ಹೊಂದಾಣೀಕೆ /ವಾಸ್ತು ಸಲಹೆ ತಿಳಿಸಲಾಗುವುದು .






































