ವಾರ ಭವಿಷ್ಯ ದಿನಾಂಕ 23.03.2025 ರಿಂದ 29.03.2025 ರವರೆಗೆ
ವಿಶೇಷ ದಿನಗಳು : ದಿನಾಂಕ 29.03.2025 ಮೀನ ರಾಶಿಗೆ ಶನಿಯ ಪ್ರವೇಶ
ಮೇಷ : ದ್ವಿತೀಯಾದ ಗುರು ಪೂರ್ಣ ದೇವತಾ ಅನುಗ್ರಹವನ್ನುನೀಡುತ್ತಿದ್ದಾನೆ.ಇನ್ನು ಮುಂದಿನ ಏಳೂವರೆ ವರ್ಷಗಳ ಕಾಲ ಸಾಡೇ ಸಾತ್ ಶನಿಯ ಪ್ರಭಾವ ಇರುವುದರಿಂದ ನಿಮ್ಮ ಮೂಲ ಜಾತಕದಲ್ಲಿ ಶನಿಯ ಸ್ಟಿತಿಯನ್ನು ಅವಶ್ಯವಾಗಿ ನೋಡಿಕೊಳ್ಳಬೇಕಾಗಿದೆ. ಶುಕ್ರ ರವಿ ಬುಧ ರಾಹು ಶನಿ ವ್ಯಯದಲ್ಲಿ ಇರುತ್ತಾರೆ. ನೀವು ಸಮಯವನ್ನು ನಿಗಡಿ ಪಡಿಸಿಕೊಂಡು ಪ್ರತಿನಿತ್ಯ ವಿಷ್ಣು ಸಹಸ್ರ ನಾಮ ಮಂತ್ರವನ್ನುಹೇಳಲೇ ಬೇಕಾಗಿದೆ. ಈ ವಾರ ನಿಮಗೆ ಆಕಸ್ಮಿಕ ಧನ ಲಾಭದಿಂದ ನಿಮ್ಮ ಮನೋಭಿಲಾಷೆ ಈಡೇರಲಿದೆ. ಮಾತು ಮತ್ತು ಹಣದ ವಿಷಯದಲ್ಲಿ ಬಹಳ ಹಿಡಿತ ಅಗತ್ಯ.ಸಹೋದರ ಸಮಾನರಲ್ಲಿ ಅನಾರೋಗ್ಯವನ್ನು ನೋಡುವ ಸಾಧ್ಯತೆ ಇದೆ. ಸತಿ ಪತಿಯರ ನಡುವೆ ಅನ್ಯೋನ್ಯತೆ ಇರಲಿ.
ವೃಷಭ : ಈ ವಾರ ಪ್ರೀತಿ ಪಾತ್ರರ ಸಮಾಗಮದಿಂದ ಉತ್ಸಾಹ ನಿಮ್ಮಲ್ಲಿ ಕಂಡುಬರಲಿದೆ. ಹಣದ ಗಂಟು ನಿಮ್ಮ ಬಳಿಗೆ ಬರಲಿದೆ. ಯೋಚಿಸಿ ಮಾಡುವ ಕೆಲಸ ಸಫಲತೆಯನ್ನು ಕಾಣಲಿದೆ. ಕುಜ ಅನಿರೀಕ್ಷಿತ ಖರ್ಚುಗಳನ್ನು ತರಲಿದ್ದಾನೆ. ನೀವು ಮಾಡುತ್ತಿರುವ ಯಾವುದೇ ಕಾರ್ಯ ಸಾಧನೆಯಲ್ಲಿ ಸಾಧಕ ಭಾಧಕಗಳ ಚಿಂತನೆ ಅತೀ ಅಗತ್ಯವಿದೆ. ವಾಹನ ಖರೀಧಿ,ಭೂಮಿ ಖರೀಧಿ, ಅಥವಾ ಗೃಹ ನಿರ್ಮಾಣ ಮಾಡುವ ಯೋಚನೆ ಬರಲಿದೆ. ದಾಖಲೆ ಪತ್ರಗಳನ್ನು ಪರಿಶೀಲಿಸುವುದು ಅತೀ ಅಗತ್ಯ. ವಿದ್ಯಾರ್ಥಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ಮಕ್ಕಳ ಜೊತೆಗೆ ಅನ್ಯೋನ್ಯತೆ ಬೆಳೆಸಿಕೊಳ್ಳಿರಿ.ಸಂಗಾತಿಯ ಹಣದ ಸಹಕಾರ ನಿಮಗೆ ಸಿಗಲಿದೆ. ಉದ್ಯೋಗ ಅಪೇಕ್ಷಿತರಿಗೆ ಉದ್ಯೋಗ ಪ್ರಾಪ್ತಿಯೋಗವಿದೆ.
ಮಿಥುನ : ಗುರುವಿನ ಅನುಗ್ರಹ ಇಲ್ಲದಿರುವುದರಿಂದ ಕುಲ ದೇವರ ಪ್ರಾರ್ಥನೆಯನ್ನು ಮಾಡಿಕೊಂಡು ಮುಂದುವರಿಯಿರಿ. ಉದ್ಯೋಗಿಗಗಳಿಗೆ,ಆಪ್ತ ಸ್ನೇಹಿತರ ನೆರವಿನಿಂದ ಕಾರ್ಯಾನುಕೂಲವಾಗಲಿದೆ. ಕೃಷಿಕರಿಗೆ ಮಳೆಯ ಅಭಾವ ಕಾಡಲಿದೆ. ನಾಗದೇವರ ಅಷ್ಟೋತ್ತರ ,ದ್ವಾದಶ ನಾಮಾವಳಿಗಳ ಪಾರಾಯಣ ನಿಮ್ಮಅನಾರೋಗ್ಯ ಸಮಸ್ಯೆಗೆ ಪರಿಹಾರವಾಗಿದೆ. ಚರ್ಮ ಕಾಯಿಲೆ ,ಗಾಯದ ಸಮಸ್ಯೆ ಇರುತ್ತದೆ.ಬಿಸಿಲಿಗೆ ಹೊರಗೆ ಹೋಗುವುದನ್ನು ಕಡಿಮೆ ಮಾಡಿರಿ. ಮಹತ್ವದ ಕಾರ್ಯವೊಂದರ ಹೊಣೆಗಾರಿಕೆ ನಿಮ್ಮ ಹೆಗಲೇರಲಿದೆ. ಸಣ್ಣ ಪುಟ್ಟ ವಾದ ವಿವಾದ ಜಗಳಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಹೊಸ ಹೂಡಿಕೆಗಳು ಮೇ 14 ರ ವರೆಗೆ ಬೇಡ.
ಕರ್ಕಾಟಕ :ಉದೋಗಿಗಳಿಗೆ ಆಪ್ತ ಸ್ನೇಹಿತರ ನೆರವಿನಿಂದ ಕಾರ್ಯಾನುಕೂಲವಾಗಲಿದೆ.ಜೀವನದ ಪರಿವರ್ತನೆ ಶನಿಯ ಮೀನ ರಾಶಿಯ ಪ್ರವೇಶದಿಂದ ನಡೆದುಹೋಗಲಿದೆ.ಎರಡೂವರೆ ವರ್ಷಗಳ ಕಷ್ಟ ನಷ್ಟಗಳಿಗೆ ಅಂತ್ಯವೊಂದು ಕಾಣಲಿದೆ. ಇತರರ ಮಾತು ಕೇಳಿ ತಪ್ಪು ನಿರ್ಧಾರ ತೆಗೆದು ಕೊಳ್ಳುವುದು ಬೇಡ.ನಿಮ್ಮ ಮೃಧು ಧೋರಣೆ ನಿಮಗೆ ತೊಂದರೆ ಆಗಬಾರದು. ಹಿರಿಯರನ್ನು ಕಡೆಗಣಿಸುವ ತಪ್ಪು ಕೆಲಸವೊಂದು ನಿಮ್ಮಿಂದ ನಡೆದುಹೋಗಲಿದೆ. ಕಿವಿಯಲ್ಲಿ ಕೇಳಿದ್ದೆಲ್ಲಾ ಸತ್ಯವಾಗಿರುವುದಿಲ್ಲ.ನೆನಪಿರಲಿ. 5 ಗ್ರಹರು ಸೇರಿ ನಿಮ್ಮನ್ನು ಈ ರೀತಿ ಮಾಡಲಿದ್ದಾರೆ.ನವಗ್ರಹರ ಜಪ ಮಾಡುವುದು ಒಳ್ಳೆಯದು.
ಸಿಂಹ : ನಿಮಗೆ ನಿಮ್ಮ ಜಾತಕವನ್ನು ಒಮ್ಮೆ ಪರಿಣತ ಜ್ಯೋತಿಷ್ಯರಲ್ಲಿ ತೋರಿಸಿ ಶನಿಯ ಸ್ಟಿತಿಯನ್ನು ತಿಳಿದುಕೊಳ್ಳಿರಿ. ಶನಿ 8 ನೇ ಮನೆಗೆ ಬರಲಿದ್ದಾನೆ.4 ಮಂದಿ ಗ್ರಹರ ಜೊತೆಗೆ ಸೇರಿಕೊಳ್ಳಲಿದ್ದಾನೆ.ಸಂಗಾತಿಯ ಮನಸ್ಸು,ಆರೋಗ್ಯ,ಎಲ್ಲವೂ ನಿಮ್ಮ ಜವಾಬ್ದಾರಿಯಲ್ಲಿದೆ. ನಿಮ್ಮ ಜವಾಬ್ದಾರಿಯೂ ನಿಮಗಿರಬೇಕು. ಹೊಡಿದಾಟ –ಬಡಿದಾಟ ಕೋರ್ಟ್ ಪೋಲೀಸು ಇದೆಲ್ಲ ಎರಡೂವರೆ ವರ್ಷಗಳ ಕಾಲ ಇರುತ್ತದೆ.ವಿಷ್ಣು ಸಹಸ್ರನಾಮಪಾರಾಯಣ ಅತೀ ಅಗತ್ಯವಾಗಿದೆ. ಗರ್ಭಿಣಿಯರು ಎಚ್ಚರವಹಿಸ ಬೇಕು. ಅತೀ ಮಹತ್ವದ ವಿಷಯದಲ್ಲಿ ದುಡುಕಿ ಸಂಸಾರವನ್ನು ಹಾಳು ಮಾಡಬೇಡಿರಿ.
ಕನ್ಯಾ : ಮಹಿಳೆಯರಿಗೆ ಅನಾವಶ್ಯಕ ಋಣಾತ್ಮಕ ಚಿಂತನೆಗಳು ಕಾಡುವ ಸಾಧ್ಯತೆ.ನಿಮಗೆ ಭಾಧಕ ಕ್ಷೇತ್ರದಲ್ಲಿ ಪಂಚಗ್ರಹರು ಜೊತೆಯಾಗುತ್ತಾರೆ.ಪರಸ್ಪರ ವೈರಿಗಳು. ರವಿ –ಶನಿ ;ರವಿ-ಶುಕ್ರ ,ನೀವು ಜಾಗ್ರತೆವಹಿಸಬೇಕು. ಹನಿ ಟ್ರಾಪ್ಗೆ ಬೀಳುವ ಸಾಧ್ಯತೆ ಇದೆ. ಈಗ ರಾಜಕಾರಣಿಗಳ ಅವಸ್ಥೆ ನೋಡಿ. ಇಬ್ಬರು ಗೊಂದಲಕ್ಕೆ ಬೀಳುವ ಸಾಧ್ಯತೆ ಇದೆ. ಹೆಣ್ಣು-ಹೊನ್ನು- ಮಣ್ಣೂ ಇವುಗಳ ಮೇಲೆ ಅತ್ಯಾಸೆ ಹೊಂದಿದಾಗ ಮಧು-ಮಾಂಸ –ಮಾನಿನಿ ಜೊತೆಯಾಗುತ್ತದೆ.ಉದ್ಯೋಗ ಮಾಡುವಲ್ಲಿ ಎಚ್ಚರ ವಹಿಸಬೇಕು. ಪುರುಷರು ವ್ಯಾಪಾರ ವ್ಯವಹಾರದಲ್ಲಿ ವಂಚನೆಗೆ ಒಳಗಾಗಿ ಮಾನಸಿಕ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ. ಪ್ರತಿಷ್ಟೆಯ ಕಾರಣಕ್ಕಾಗಿ ಹಣ ವ್ಯಯ ಮಾಡಲಿದ್ದೀರಿ.
ತುಲಾ : ಕಾರ್ಯ ಕ್ಷೇತ್ರದ ಒತ್ತಡ ,ಸ್ವಲ್ಪ ಮಟ್ಟಿಗೆ ನಿಮ್ಮ ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಗುರು 8 ರಲ್ಲಿ 6 ನೆಯ ಮನೆಯಲ್ಲಿ 5 ಗ್ರಹರು ಇರುವಾಗ ಮೃತ್ಯುಂಜಯ ಮಂತ್ರ ದಿನ ನಿತ್ಯ 108 ಬಾರಿ ಹೇಳಬೇಕು. ಮನಸ್ಸು ಚಂಚಲವಾಗಿರುವಾಗ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಾಹಸ ಬೇಡ. ವಿದ್ಯಾರ್ಥಿಗಳು ಶ್ರಮವಹಿಸಿದಾಗ ಉತ್ತಮ ಫಲಿತಾಂಶ ಹೊಂದಲಿದ್ದಾರೆ. ನಿಮ್ಮ ಪರಿಶ್ರಮದ ಲಾಭ ಇನ್ನೊಬ್ಬರಿಗೆ ಹೋಗಲಿದೆ. ಉನ್ನತ ಹುದ್ದೆಯಲ್ಲಿ ಇರುವವರು ಹಿರಿಯ ಅಧಿಕಾರಿಗಳ ಕೋಪಕ್ಕೆ ತುತ್ತಾಗಲಿದ್ದಾರೆ. ವಿಲಾಸಿ ಜೀವನ ಅದಕ್ಕಾಗಿ ಹಣವ್ಯಯ ಮೇ 14 ರ ವರೆಗೆ ನಡೆಯಲಿದೆ.
ವೃಶ್ಚಿಕ : ಶನಿಯ ಸ್ಥಾನ ಬದಲಾವಣೆ ಕಷ್ಟದ ರೂಪದ ಬದಲಾವಣೆಯನ್ನು ತೋರಿಸಲಿದೆ. ಪಂಚಮದಲ್ಲಿ5 ಮಂದಿ ಗ್ರಹರು ಸೇರಿದಾಗ ಅದೂ ವೈರಿಗಳಾಗಿ ಸೇರಿದಾಗ ಮಕ್ಕಳೂ ನಮ್ಮಿಂದ ವೈರಿಗಳಾಗಿ ದೂರವಾಗುವ ಕಾಲವಾಗಲಿದೆ. ಹೀಗೂ ಉಂಟೆ ? ನಮಗೆ ಆಶ್ಚರ್ಯವಾಗಲಿದೆ. ಎರಡೂವರೆ ವರ್ಷ ಹೀಗೆಯೇ ಇರುತ್ತದೆ. ವಿಷ್ಣು ಸಹಸ್ರನಾಮ.ಆದಿತ್ಯ ಹೃದಯ ಮಂತ್ರ ಪಾರಾಯಣ ಮಾಡುತ್ತಾ ಹೋಗಬೇಕು. ಕುಜ 8 ರಲ್ಲಿ ಇರುವುದರಿಂದ ಆರೋಗ್ಯದ ಸಮಸ್ಯೆಯೂ ಇರುತ್ತದೆ. ಲಾಭಾಂಶ ಕಡಿಮೆ ಆಗಲಿದೆ. ಭಗವತ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವ ಮಾತು “ನಮ್ಮವರು ಎನ್ನುವ ಮಾತು ಸುಳ್ಳು,ಯಾರೂ ಯಾರ ಸಂಬಂಧಿಕರಲ್ಲ.ಅವರವರ ಪೂರ್ವ ಕರ್ಮಾನುಸಾರವಾಗಿ ಈ ಭೂಮಿಯಲ್ಲಿ ಜನ್ಮ ಪಡೆದು ಬಂದಿರುತ್ತಾರೆ.
ಧನು : ಕುಜ ಪಂಚಮದ ಅಧಿಪತಿ ಸಪ್ತಮದಲ್ಲಿ, ಸುಖ ಸ್ಥಾನದಲ್ಲಿ ಶನಿ ರಾಹು ರವಿ ಬುಧ ಶುಕ್ರ 5 ಗ್ರಹರು ಜೊತೆಯಾಗಲಿದ್ದಾರೆ. ಇನ್ನುಶನಿ ಎರಡೂವರೆ ವರ್ಷ ಮೀನರಾಶಿಯಲ್ಲಿಇರುತ್ತಾನೆ, ಕಷ್ಟ –ನಷ್ಟಗಳು ನಮ್ಮ ಧಾರ್ಮಿಕ ಆಚರಣೆಯನ್ನು ಅವಲಂಭಿಸಿಕೊಂಡಿರುತ್ತದೆ. ದೇವರಿದ್ದಾರೆ,ನವಗ್ರಹರಿದ್ದಾರೆ. ಎಲ್ಲವೂ ಸತ್ಯ. ದೇವಸ್ಥಾನ ಸುತ್ತುವ ಅಗತ್ಯವಿಲ್ಲ.ಹೋಮ ಹವನಗಳ ಅಗತ್ಯವಿಲ್ಲ.ತಾಳ್ಮೆ ಸಮಾಧಾನ,ಎಲ್ಲವನ್ನೂ ಸರಿಮಾಡಲಿದೆ.,ವಾಹನದಲ್ಲಿ,ಬೆಂಕಿಯಲ್ಲಿ,ಕಬ್ಬಿಣದ ಆಯುಧದಲ್ಲಿ ಎಚ್ಚರವಿರಲಿ. ಧ್ಯಾನ ಪ್ರಾಣಾಯಾಮ,ಯೋಗ ,ಮಾಡುವುದು ಅಗತ್ಯವಿದೆ. ಕಾಲು ಗಂಟು ನೋವು ಬರುವ ಸಾಧ್ಯತೆ ಇರುತ್ತದೆ.
ಮಕರ : ಸಾಡೇ ಸಾತ್ ಶನಿಯ ಕಾಟದಿಂದ ಯಶಸ್ವಿಯಾಗಿ ಹೊರಬಂದಿರುವ ಸಂತೋಷದಲ್ಲಿ ಇರುವ ಸಮಯ. ಗುರುವಿನ ಅನುಗ್ರಹ ಇರುವ ಸಮಯ.ನೀವು ಮಾಡುತ್ತಿರುವ ಯಾವುದೇ ಉದ್ಯೋಗ ವ್ಯವಹಾರದಲ್ಲಿ ಲಾಭ ಪಡೆಯುವ,ಬಡ್ತಿಹೊಂದುವ ಸಮಯ. ಶನಿ ನಿಮ್ಮನ್ನು ರಾಜನನ್ನಾಗಿ ಮಾಡುವ ಶುಭ ಸಮಯ. ಕೆಲಸ ಕಾರ್ಯಗಳು ಆದ್ಭುತವಾದ ರೀತಿಯಲ್ಲಿ ನೆರವೇರಲಿದೆ. ಪ್ರಯತ್ನ ಅದೃಷ್ಟ ಜೊತೆ ಸೇರಿದಾಗ ತಮ್ಮವರ ಸಹಕಾರ ಒಟ್ಟು ಸೇರಿದಾಗ ,ಆರ್ಥಿಕವಾಗಿಯೂ ಲಾಭದಾಯಕ ವಾತಾವರಣ ಉಂಟಾದಾಗ” ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ನ “ ಸ್ವಲ್ಪ ಸಮಯ ಮೃತ್ಯುಂಜಯ ಜಪ ಹೇಳುವುದನ್ನು ಮರೆಯಬೇಡಿರಿ.
ಕುಂಭ : ನಿಮ್ಮ ಜನ್ಮ ರಾಶಿಯಿಂದ ಶನಿಯ ಬಿಡುಗಡೆ ಆಗುತ್ತಿದೆ. ಈ ಸಮಯದಲ್ಲಿ ನಿಮಗೆ ನಾನಾ ರೀತಿಯಲ್ಲಿ ನಾನಾ ಕಡೆಗಳಿಂದ ಖರ್ಚು –ವೆಚ್ಚಗಳು ಎದುರಾಗಲಿದೆ. ಜಾಗರೂಕತೆ ಇರಲಿ. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಲು ಮರೆಯಬೇಡಿರಿ. ವೃತ್ತಿ ಕ್ಷೇತ್ರದಲ್ಲಿ ಅನಪೇಕ್ಷಿತ ಘಟನೆ ನಡೆದರೂ ನಿಮಗೆ ಅನುಕೂಲವಾಗಿಯೇ ಇರುತ್ತದೆ 2 ನೆಯ ಮನೆಯಲ್ಲಿ 5 ಗ್ರಹರು ವೈರಿಗಳ ರೀತಿಯಲ್ಲಿ ಜೊತೆಯಾಗುವಾಗ ನಿಮ್ಮ ಮಾತು ಮೌನದ ರೀತಿಯಲ್ಲಿ ಇರಬೇಕು. ನಿಮ್ಮವರು ನಿಮಗೆ ವೈರಿಗಳ ರೀತಿಯಲ್ಲಿ ವರ್ತಿಸುತ್ತಿರುತ್ತಾರೆ. ನಿಮಗೆ ಆಶ್ಚರ್ಯವಾಗುವ ರೀತಿಯಲ್ಲಿ ಇರುತ್ತದೆ. ಶನಿಯ ಜಪ ಮಾಡಿರಿ. ದೇವಸ್ಥಾನ ಸುತ್ತುವ ಅಗತ್ಯವಿಲ್ಲ. ಹೋಮ ಹವನ ಮಾಡಿಸುವ ಅಗತ್ಯವಿಲ್ಲ.
ಮೀನ : ಜನ್ಮ ರಾಶಿಗೆ ಶನಿ ಬಂದಿದ್ದಾನೆ. ಅವನ ಜೊತೆಗೆ 4 ಮಂದಿ ಇತರ ಗ್ರಹರಿದ್ದಾರೆ. ದೈವಾನುಗ್ರಹದ ಕೊರತೆ ಇರುತ್ತದೆ. ಪಾಲುಗಾರಿಕೆ ವ್ಯವಹಾರ ತುಂಬಾ ಎಚ್ಚರಿಕೆಯಲ್ಲಿ ಇರಲಿ. ಖರ್ಚಿನ ಬಗ್ಗೆ ನಿಯಂತ್ರಣವಿರಲಿ.ಕುಜ ನಾಲ್ಕನೆಯ ಮನೆಯಲ್ಲಿ ಇದ್ದಾನೆ. ಯಾರಲ್ಲಿಯೂ ವಾದ ವಿವಾದ ಬೇಡ. ಸಿಟ್ಟು ಬರದಂತೆ ಎಚ್ಚರವಹಿಸಿರಿ. ನೀವು ಮಾಡುತ್ತಿರುವ ಯಾವುದೇ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯವಿದೆ. ಯಾವುದೇ ಊಹಾ ಪೋಹಗಳಿಗೆ ಕಿವಿ ಗೊಡಬೇಡಿರಿ. ಆರ್ಥಿಕವಾಗಿ ಋಣ ಭಾಧೆ ನಿಮ್ಮನ್ನು ಕಾಡಲಿದೆ. ಯಾವುದೇ ಖರೀಧಿಗಳನ್ನು ಮಾಡುವಾಗ ನಷ್ಟವಾಗದಂತೆ ಎಚ್ಚರ ವಹಿಸಬೇಕು.ಬಿಪಿ ಸಮಸ್ಯೆ,ಷುಗರ್ ಸಮಸ್ಯೆ ಇರುವವರು ಎಚ್ಚರ ವಹಿಸಬೇಕು.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆಮೂಲಕ ಪ್ರಸ್ತುತ ವಿಷಯ ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.


























