ವಾರ ಭವಿಷ್ಯ ದಿನಾಂಕ 23.02.2025 ರಿಂದ 01.03.2025 ರ ವರೆಗೆ
ವಿಶೇಷ ದಿನಗಳು : 26.02.2025……ಮಹಾ ಶಿವರಾತ್ರಿ
27.02.2025……ಮೀನ ರಾಶಿಗೆ ಬುಧನ ಪ್ರವೇಶ ,ಅಮಾವಾಸ್ಯೆ
ಮೇಷ : ಶುಕ್ರ ಬುಧ ರಾಹು ವ್ಯಯದಲ್ಲಿ ಇದ್ದು ನಿಮ್ಮ ಮನಸ್ಸುಗೊಂದಲದ ಗೂಡಾಗಲಿದೆ . ಗುರು ದ್ವಿತೀಯಾದಲ್ಲಿ ಇದ್ದರೂ,ಅದು ಶುಕ್ರನ ಮನೆಯಾಗಿದ್ದು ನಿಮ್ಮ ಮನಸ್ಸಿನಲ್ಲಿ ಕೀಳರಿಮೆಯ ಭಾವನೆ ಬರಲಿದೆ. ನನ್ನದು ಅನ್ನುವುದು ಇಲ್ಲಿ ಏನಿಲ್ಲ,ಎಲ್ಲವೂ ನನ್ನ ಸಂಗಾತಿಯಿಂದ ಬಂದದ್ದು. ಎಲ್ಲಾ ಸೌಕರ್ಯಗಳು ನಿಮ್ಮಲ್ಲಿದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲ.ನಮ್ಮವರು ಯಾರೂ ಇಲ್ಲವಾಯಿತಲ್ಲಎಂಬ ಭಾವನೆ. ಕೆಲವೊಂದು ಅಪವಾದಗಳೂ ನಿಮ್ಮನ್ನು ಆವರಿಸಲಿದೆ. ದುರ್ಗಾ ಪಾರಾಯಣವೊಂದೇ ಪರಿಹಾರವಾಗಲಿದೆ. ಮೇ 14 ರ ವರೆಗೆ ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಸಾಲ ಮಾಡುವ ಪ್ರಯತ್ನ ಮಾಡುವಿರಿ. ಮಾರ್ಚ್ 29 ರ ನಂತರ ಸಾಡೇ ಸಾತ್ ಶನಿಯ ಪ್ರಭಾವ ಆರಂಭವಾಗಲಿದೆ.ವಿಷ್ಣು ಸಹಸ್ರನಾಮ ಪಾರಾಯಣವನ್ನು ಪ್ರಾರಂಭಿಸಿರಿ.
ವೃಷಭ : ಜೀವನ ರಂಗದಲ್ಲಿ ಹಲವಾರು ವಾಸ್ತವ ಅವಕಾಶಗಳು ಪ್ರಾಪ್ತಿಯಾಗುವ ಸಮಯವಾಗಿದೆ. ಕಳೆದು ಹೋದ ದಿನಗಳ ಬಗ್ಗೆ ಚಿಂತೆ ಬೇಡ.ನಿಮ್ಮ ಮಾತಿನ ಶೈಲಿ ಬದಲಾಯಿಸಿ ಕೊಳ್ಳಿರಿ. ಗಣಪತಿ ದೇವರ ಪ್ರಾರ್ಥನೆ ಅಗತ್ಯವಾಗಿದೆ. ಶುಕ್ರ ರಾಹು ಬುಧ ಲಾಭ ಕ್ಷೇತ್ರದಲ್ಲಿ ಇರುವುದು ,ನೀವು ಸರಿಯಾದ ದಿಕ್ಕಿನಲ್ಲಿ ಪ್ರಯಾಣಿಸಿದಲ್ಲಿ ಗೆಲುವು ನಿಮ್ಮದಾಗಲಿದೆ ಎನ್ನುವುದನ್ನು ಸೂಚಿಸುತ್ತಿದೆ. ಆರ್ಥಿಕವಾಗಿ ಅಭಿವೃದ್ಧಿಯ ಸೂಚನೆ ಇದೆ. ಬಡ್ತಿಯ ಯೋಗವಿದೆ. ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತುಗಳು ಬರಲಿವೆ. ಕಿವಿಯಲ್ಲಿ ಕೇಳುವ ಮಾತಿಗಿಂತಲೂ ಪ್ರತ್ಯಕ್ಷ ನೋಡಿದ್ದೇ ಸತ್ಯವಾಗಿರುತ್ತದೆ. ಅತಿಯಾದ ಭಾವುಕತೆ ಎಲ್ಲಿಯೂ ಬೇಡ.ಇತರರು ನಿಮ್ಮ ವಿಶ್ವಾಸವನ್ನು ದುರುಪಯೋಗ ಪಡಿಸಿ ಕೊಳ್ಳದಂತೆ ಗಮನ ಹರಿಸಿರಿ.
ಮಿಥುನ : ಕುಜ ಜನ್ಮ ರಾಶಿಯಲ್ಲಿಇದ್ದಾನೆ.ನಿಮ್ಮವರಿಂದಲೇ ನಿಮಗೆ ಕಿರಿಕಿರಿ ಆಗಲಿದೆ. ದೇಹದ ಮೇಲೆ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಸಿಟ್ಟು ಬಿಟ್ಟು ತಾಳ್ಮೆಯನ್ನು ಬೆಳೆಸಿಕೊಳ್ಳಿರಿ. ವ್ಯವಹಾರ, ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆ ಇರುತ್ತದೆ. ನಿಮ್ಮ ಮಕ್ಕಳ ಸಾಧನೆಯನ್ನು ಕಂಡು ಸಂತೋಷ ಪಡುವ ಸರದಿ ನಿಮ್ಮದಾಗಲಿದೆ. ಹಿರಿಯರ ಅನಾರೋಗ್ಯವನ್ನು ನೋಡುವ ಬೇಸರ ಪಡುವ ಸಾಧ್ಯತೆಯನ್ನು ರವಿ ,ಶನಿ ತಿಳಿಸುತ್ತಿದ್ದಾರೆ. ಕಲಹ ಬರುವ ಸಾಧ್ಯತೆ ಇದ್ದರೆ ಅದರಿಂದ ದೂರವಾಗಿರಿ. ಜೀವನಗತಿಯಲ್ಲಿ ಅನಿರೀಕ್ಷಿತ ಘಟನೆಗಳು ಅನುಭವಕ್ಕೆ ಬರಲಿದೆ. ನ್ಯಾಯಾಲಯದ ವಿಷಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಒಳ್ಳೆಯ ಮತ್ತು ಕೆಟ್ಟ ಅನುಭವಗಳನ್ನು ಸಮಾನವಾಗಿ ಸ್ವೀಕರಿಸಬೇಕಾಗಿದೆ .ಮಾರ್ಚ್ 29 ರಿಂದ ಕೆಲವೊಂದು ವಿಷಯಗಳಲ್ಲಿ ಶುಭವಾಗಲಿದೆ.
ಕರ್ಕಾಟಕ : ಈಗ ಅಷ್ಟಮದಲ್ಲಿ ರವಿ ಮತ್ತು ಶನಿ ಇದ್ದಾರೆ..ಮಾರ್ಚ್ ದಿನಾಂಕ 14 ರ ವರೆಗೆ ಎಲ್ಲಾ ರೀತಿಯಿಂದಲೂ ಎಚ್ಚರ ವಹಿಸಬೇಕು. ಯಾರಲ್ಲಿಯೂ ನಿಮ್ಮ ಉತ್ತಮ ಸಂಬಂಧ ಹಾಳಾಗದಂತೆ ,ನಿಮ್ಮ ಮಾನಸಿಕ,ಶಾರೀರಿಕ ಆರೋಗ್ಯ ಹಾಳಾಗದಂತೆ ಎಚ್ಚರವಹಿಸಿರಿ. ಗಂಟು ನೋವುಗಳು, ವಾತ ಸಂಬಂಧಿ ಸಮಸ್ಯೆಗಳು, ಕಾಡಲಿವೆ. ಆರ್ಥಿಕವಾಗಿ ತುಂಬಾ ಎಚ್ಚರವಾಗಿರುವುದು ಅಗತ್ಯವಾಗಿದೆ. ದೂರದ ಊರಿಗೆ ಪ್ರಯಾಣ ಮಾಡುವ ಸೂಚನೆ ಇದೆ. ಕುಂಭ ಮೇಳಕ್ಕೆ ಹೋಗುವ ಸೂಚನೆ ಇದೆ. ಸರಕಾರಿ ಕೆಲಸಗಳಲ್ಲಿ ಲಂಚ ಸ್ವೀಕರಿಸುವ ಆಮಿಷಕ್ಕೆ ಒಳ ಪಡುವ, ಸಿಕ್ಕಿ ಬೀಳುವ ಸಾಧ್ಯತೆ ಇದೆ. ವಾಹನದಲ್ಲಿ ಎಚ್ಚರವಿರಲಿ.
ಸಿಂಹ : ದೊಡ್ಡ ಸ್ಥಾನದಲ್ಲಿ ಇದ್ದು ಸಣ್ಣ ಮನಸ್ಸು ನಿಮ್ಮದಾಗಬಾರದು. ಎಲ್ಲವನ್ನೂ ಕೊಡುವ ಭಗವಂತನಿಗೆ ಕಿತ್ತುಕೊಳ್ಳಲೂ ಗೊತ್ತಿದೆ,ಎನ್ನುವುದು ಗೊತ್ತಿರಲಿ. ಮಾರ್ಚ್ 29 ರಂದು ಶನಿ ಮೀನ ರಾಶಿಗೆ ಬರುತ್ತಿದ್ದಾನೆ. ಎರಡೂವರೆ ವರ್ಷಗಳ ಕಾಲ ವಿಷ್ಣು ಸಹಸ್ರನಾಮದಿಂದ ನೀವು ಹೊರಗೆ ಬರುವಂತಿಲ್ಲ. ಉದ್ಯೋಗ,ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ನುಡಿ ಅಗತ್ಯವಾಗಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬಂದರೂ ಕೆಲವೊಂದು ಅಡೆ ತಡೆಗಳು ಬರಲಿವೆ. ಅಲೆಗ್ಸಾಂಡರ್ ಇಡೀ ವಿಶ್ವದ ಯಜಮಾನ ಆಗಬೇಕೆಂದು ಬಯಸಿ ಸತ್ತು,ಹೋಗುವಾಗ ಹೆಣದ ಪೆಟ್ಟಿಗೆಯ ಹೊರಗೆ ತನ್ನ ಎರಡೂ ಕೈಗಳನ್ನು ಹಾಕಿಕೊಂಡು ವಿಶ್ವದ ಜನರಿಗೆ ಮಾನವತ್ವವನ್ನು ಕಲಿಸಿ ಹೋದ .
ಕನ್ಯಾ : ನಿಮ್ಮ ಉನ್ನತ ಶಿಕ್ಷಣದ ಆಸೆ ಒಬ್ಬ ವಿದ್ಯಾರ್ಥಿಯಾಗಿ ಈಡೇರಿಸಿಕೊಳ್ಳುವಿರಿ. ಸಪ್ತಮಕ್ಕೆ ಶನಿಯ ಪ್ರವೇಶ ಆಗುತ್ತಿದೆ. ಎಚ್ಚರಿಕೆಯ ಹೆಜ್ಜೆಗಳು ನಿಮ್ಮದಾಗಲಿ.ಸ್ವಾರ್ಥ ಸಂಬಂಧಗಳಿಗೆ ಮಾನ್ಯತೆ ಕೊಡಬೇಡಿರಿ. ಪ್ರೀತಿ ಪ್ರೇಮದ ಬಲೆಗೆ ಬೀಳದಂತೆ ಎಚ್ಚರವಹಿಸಿರಿ. ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಶುಕ್ರ ಅವಕಾಶ ಕೊಡುತ್ತಿದ್ದಾನೆ. ನೈತಿಕ ಮತ್ತು ಅನೈತಿಕ ಅರ್ಥ ನಿಮಗೆ ಗೊತ್ತಿರಲಿ. ಗುರು ಭಾಗ್ಯದಲ್ಲಿ ಇದ್ದು ಅನೇಕ ಒಳ್ಳೆಯ ಅವಕಾಶಗಳು ನಿಮ್ಮದಾಗಲಿವೆ. ನಯ ವಂಚಕರ ಬಗ್ಗೆ ಎಚ್ಚರವಿರಲಿ. ಭೂಮಿಯ ಬಗ್ಗೆ ವಾದ ವಿವಾದಗಳು ಬರದಂತೆ ಎಚ್ಚರವಹಿಸಿರಿ. ನಿಮ್ಮದಲ್ಲದ ವಿಚಾರಗಳಿಗೆ ಮೂಗು ತೂರಿಸಬೇಡಿರಿ.
ತುಲಾ : ಅಹಂಕಾರ ಮನಸ್ಸಿನ ಮೇಲೆ ಆವರಿಸಿ ಮಂಕು ಕವಿಯುವ ಸಾಧ್ಯತೆ.ಗುರು ಅಷ್ಟಮದಲ್ಲಿ,ಶನಿ ಪಂಚಮದಲ್ಲಿ, ಇರುವುದರಿಂದ ಎಲ್ಲರೊಳಗೆ ಒಂದಾಗಿ ಶುದ್ಧವಾದ ಮನಸ್ಸಿನಿಂದ ಇರುವುದು ಅವಶ್ಯವಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯ ತೀರ್ಮಾನ ವಾಗಿರಲಿ. ಯಾವುದೋ ಆತಂಕ ನಿಮ್ಮನ್ನು ಆವರಿಸಲಿದೆ. ಮಕ್ಕಳೂ ನಮಗೆ ಬಯ್ಯುವ ಹಂತಕ್ಕೆ ಬಂದಾಗ ಇನ್ನು ಎಷ್ಟು ದಿನ ಈ ಜಗತ್ತಿನಲ್ಲಿ ಇರಬೇಕು ಎನ್ನುವ ವ್ಯಥೆ ಆರಂಭವಾಗುತ್ತದೆ. ವಿಷ್ಣು ಸಹಸ್ರನಾಮ,ಮೃತ್ಯುಂಜಯ ಜಪ ನಿತ್ಯವೂ ಪಾರಾಯಣ ಮಾಡಬೇಕು. ಇನ್ನೊಬ್ಬರಿಗೆ ಭಾರವಾಗದೆ ತಕ್ಷಣ ಮರಣ ಬರುವ ಯೋಗವನ್ನು ವಿಷ್ಣು ಸಹಸ್ರನಾಮ ಕರುಣಿಸುತ್ತದೆ.
ವೃಶ್ಚಿಕ : ದುರ್ಯೋದನ ಒಂದು ಹಂತದಲ್ಲಿ ಭಯದಿಂದ ಓಡಿ ಹೋಗುವಾಗ ಎದುರಿಗೆ “ಆಟ್ಟ ದರಿ , ಇತ್ತ ಪುಲಿ “ಆಂದರೆ ಮುಂದೆ ಹೋಗುವ ಅಂದರೆ ದೊಡ್ಡ ಹೊಂಡ ,ತಿರುಗುವ ಅಂದರೆ ಹುಲಿ ಬರುತ್ತಿದೆ. ಅಂತಹ ಹಂತ ನಿಮ್ಮದಾಗಿದೆ. ತನ್ನವರು ಯಾರೂ ಇಲ್ಲ ಅನ್ನುವ ಭಾವನೆ ರವಿ ಮತ್ತು ಶನಿ ಶುಕ್ರ ರಾಹು ಬುಧ ತಿಳಿಸುತ್ತಿದ್ದಾರೆ. ಗುರು ಸಪ್ತಮದಲ್ಲಿ ಇದ್ದಾನೆ,ಎನ್ನುವ ಒಂದು ಸಮಾಧಾನ ಮಾತ್ರಾ ಇರುತ್ತದೆ. ಮಾರ್ಚ್ ದಿನಾಂಕ 14 ರ ವರೆಗೆ ಮೀನ ಸಂಕ್ರಾಂತಿಯ ವರೆಗೆ ಎಚ್ಚರವಾಗಿರಿ. ಮಾತಿನಲ್ಲಿ ಎಚ್ಚರವಿರಲಿ.ರಾಜಕೀಯದವರು ಮಾತಿನಲ್ಲಿ ಹಿಡಿತವನ್ನು ಇಟ್ಟುಕೊಳ್ಳಿರಿ. ಚಿಂತನೆ ಆಶಾದಾಯಕವಾಗಿರಲಿ.ಮಕ್ಕಳು ಎತ್ತರದ ದ್ವನಿಯಲ್ಲಿ ಮಾತಾಡಲಿದ್ದಾರೆ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.
ಧನು : ಸುಖ ಸ್ಥಾನದಲ್ಲಿ ಶುಕ್ರ ರಾಹು ಬುಧ ಇದ್ದಾರೆ. ಶುಭ ಸಮಯ ನಿಮ್ಮ ಪಾಲಿಗಿದೆ. ಗುರು ಆರನೆಯ ಮನೆಯಲ್ಲಿ ,ಕುಜ ಸಪ್ತಮದಲ್ಲಿ ಇರುವಾಗ ಮನೆಯಲ್ಲಿ ಎರಡು ಪಕ್ಷವಾಗುವ ಸಾಧ್ಯತೆ .ಒಂದು ಹೆಂಡತಿ ಮತ್ತು ಮಕ್ಕಳು, ನೀವು ಒಬ್ಬರು ಒಂದು ಪಕ್ಷ . ಹಾಗೆ ಆಗದ ಹಾಗೆ ದುರ್ಗಾ ಪಾರಾಯಣ ಮಾಡುತ್ತಾ ಬನ್ನಿರಿ.”ಜಯತ್ವಮ್ ದೇವಿ …..ತಾಳ್ಮೆಯೊಂದೇ ಪರಿಹಾರ. ಸಹೋದರರ ಸಹಕಾರ ನಿಮಗಿರುತ್ತದೆ. ಬರುವ ಆದಾಯಕ್ಕೆ ಮಾರ್ಚ್ 29 ರ ವರೆಗೆ ಯಾವುದೇ ಕೊರತೆ ಇರುವುದಿಲ್ಲ. ಮನಸ್ಸು ಚಂಚಲವಾಗದಂತೆ ಎಚ್ಚರವಾಗಿರಬೇಕು. ಮರ್ಕಟ ಮನಸ್ಸು “ ಆಗಬಾರದು.
ಮಕರ : ಶುಭ ಸಮಯ ನಿಮ್ಮದಾಗಿದೆ. ಗುರುವಿನ ಅನುಗ್ರಹ ಪಂಚಮದಲ್ಲಿ ಇರುವ ಗುರು ಅನುಗ್ರಹಿಸುತ್ತಿದ್ದಾನೆ. ಹಣದ ವಿಷಯದಲ್ಲಿ ಆರೋಗ್ಯದ ವಿಷಯದಲ್ಲಿ,ಮಾತಿನ ವಿಷಯದಲ್ಲಿ ಎಚ್ಚರದಲ್ಲಿ ಇದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ನಿಮ್ಮ ನಡೆ ನುಡಿ ಇತರರಿಗೆ ಮಾದರಿಯಾಗಿರಲಿ. ಇನ್ನೊಬ್ಬರ ತಪ್ಪನ್ನು ಕ್ಷಮಿಸಿ ಮುನ್ನೆಡಿಯುವುದು ಬುದ್ಧಿವಂತರ ಲಕ್ಷಣ. ಸಣ್ಣ ಸಣ್ಣ ತಪ್ಪಿಗೂ ಆಕಾಶವೇ ತಲೆಗೆ ಬಿದ್ದಂತೆ ಕಿರುಚಾಡಿದರೆ ಎಲ್ಲವೂ ಹಾಳಾಗಬಹುದು ,ಯಾಕೆಂದರೆ ಸಾಡೇ ಸಾತ್ ಶನಿಯ ಪ್ರಭಾವದಿಂದ ನೀವು ಬಿಡುಗಡೆಯಾಗುವ ಸಮಯ., ಬಿಡುಗಡೆಯ ಹೊತ್ತಿಗೆ ನಿಮ್ಮ ವಿಷ್ಣು ಸಹಸ್ರನಾಮ ಪಾರಾಯಣದ ಸಂಖ್ಯೆ ಹೆಚ್ಚಾದರೆ ಒಳ್ಳೆಯದು.
ಕುಂಭ : ಜನ್ಮ ರಾಶಿಯಲ್ಲಿ ರವಿ ಮತ್ತು ಶನಿ ಇದ್ದಾರೆ. ತನ್ನ ಸಂಗಾತಿಯೊಂದಿಗೆ ,ಪಾಲುದಾರರೊಂದಿಗೆ,ಮಿತ್ರರೊಂದಿಗೆ ಕಾದಾಡುವ ಸಮಯ. ಹಿಂದಿನಿಂದ ಮಾತಾಡುವವರಿಗೆ ಬೆಲೆ ಕೊಡಬೇಡಿರಿ ಕುಜ ನಿಮಗೆ ತಿಳಿಸುವ ವಿಷಯವೆಂದರೆ ಮಕ್ಕಳೊಂದಿಗೆ ಮಕ್ಕಳಾಗಿ ಕುಶಿಯಾಗಿರಿ. ನೀವು ಉದ್ಯೋಗಿಯಾಗಿದ್ದರೆ, ಒಂದು ವ್ಯವಹಾರ ಮಾಡುವವರಾಗಿದ್ದರೆ ,ಎಲ್ಲವನ್ನೂ ಹಣದ ದೃಷ್ಟಿಯಿಂದ ನೋಡುವುದಲ್ಲ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯ ಬರುತ್ತಿರುವುದರಿಂದ ಓದಿನ ಕಡೆಗೆ ಗಮನ ಕೊಡುವಂತೆ ಕುಜ ತಿಳಿಸುಟ್ಟಿದ್ದಾನೆ.,ಶುಕ್ರ ರಾಹು ಬುಧ ತಿಳಿಸುತ್ತಿದ್ದಾರೆ. ಕಣ್ಣು ನೋಡಿದ್ದೆಲ್ಲಾ ಬೇಕು ಎಂದು ಹೇಳುತ್ತದೆ .ಕಿವಿ ಕೇಳಿದ್ದೆಲ್ಲಾ ಚೆನ್ನಾಗಿದೆ ಇನ್ನೂ ಕೇಳು ಎನ್ನುತ್ತದೆ . ಪಂಚೇಂದ್ರಿಯಗಳು ನಮ್ಮ ಹಿಡಿತದಲ್ಲಿ ಇರುವಂತೆ ನೋಡಿ ಕೊಳ್ಳಬೇಕು.
ಮೀನ : ಕುಜ ಸುಖ ಸ್ಥಾನದಲ್ಲಿ ಇರುವುದರಿಂದ ಮನೆ ನಿರ್ಮಾಣದ ಅತ್ವಾ ದುರಸ್ತಿ ಮಾಡುವ ಮನಸ್ಸು ನೀವು ಮಾಡಬಹುದು. ಶ್ರಮ ಪಟ್ಟು ನಿಯತ್ತಿನಿಂದ ಮಾಡುವ ಕೆಲಸಗಳಿಗೆ ಮಾನ್ಯತೆ ಖಂಡಿತಾ ಸಿಗುತ್ತದೆ. ಕೆಲವೊಂದು ನಿಮ್ಮ ವಯಕ್ತಿಕ ವಿಷಯಗಳು ನಿಮ್ಮಲ್ಲೇ ಇರಬೇಕು. ನಿಮ್ಮದಲ್ಲದ ,ವಿಷಯಗಳಿಗೆ ಮೂಗು ತೂರಿಸಿ ವಿವಾದಗಳನ್ನು ನಿಮ್ಮ ಮೇಲೆ ತಂದು ಕೊಳ್ಳಬೇಬೇಡಿ ಇದು ವ್ಯಯದಲ್ಲಿ ಇರುವ ಶನಿ ಮತ್ತು ರವಿಯರ ಸಂದೇಶ. ಅವರು ಉದ್ವೇಗವನ್ನು ಸೃಷ್ಟಿ ಮಾಡುವವರು. ಆಗ ನೀವು ಆಧ್ಯಾತ್ಮದ ಕಡೆಗೆ ಮನಸ್ಸನ್ನು ಕೊಡಬೇಕು. ನಿಮಗಿಂತ ಪ್ರಭಾವಿ ವ್ಯಕ್ತಿಗಳ ಜೊತೆಗೆ ,ಮೇಲಧಿಕಾರಿಗಳ ಜೊತೆಗೆ ಕಾದಾಡುವ ಕಾಲ ಬರಲಿದೆ .ಅದಕ್ಕೆ ಅವಕಾಶ ಕೊಡಬೇಡಿರಿ
ನಿಮ್ಮ ಸಂಪೂರ್ಣ ವಿವರಗಳುಳ್ಳ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು.ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತ ತಿಳಿಸಲಾಗುವುದು .ವಾಸ್ತು ಸಲಹೆ /ವಿವಾಹ ಹೊಂದಾಣಿಕೆ ಮಾಡಿಕೊಡಲಾಗುವುದು .





































