ವಾರ ಭವಿಷ್ಯ ದಿನಾಂಕ 22.12.2024 ರಿಂದ 28.12.2024 ರ ವರೆಗೆ
ವಿಶೇಷ ದಿನಗಳು : ಕುಂಭ ರಾಶಿಗೆ ಶುಕ್ರನ ಪ್ರವೇಶ
ಮೇಷ : ಗುರುವಿನ ಅನುಗ್ರಹ ಇದೆ. ಹಿರಿಯರಿಗೂ ಅನುಕೂಲ ಆಗಲಿದೆ. ಅವರ ಆರೋಗ್ಯದ ಬಗ್ಗೆ ನಿಮ್ಮ ಗಮನ ಇರಲಿ. ಪ್ರಯಾಣ ಯೋಗ,.ತೀರ್ಥಕ್ಷೇತ್ರ ದರ್ಶನ ಯೋಗವಿದೆ.ಧನ ಆದಾಯ ಹೆಚ್ಚಲಿದ್ದು,ಮಂಗಳಕರ ಸಮಯವಾಗಿದೆ.ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.ಶತ್ರುಗಳಿದ್ದಾರೆ ,ಎಚ್ಚರಿಕೆಯಿಂದ ವ್ಯವಹಾರ ಮಾಡಿರಿ. ಮಾತೃಶ್ರೀಯವರ ಆರೋಗ್ಯದ ಬಗ್ಗೆ ಗಮನವಿರಲಿ, ಇದು ಕುಜನ ಸಂದೇಶವಾಗಿದೆ..ಹಲವಾರು ಭಿನ್ನಾಭಿಪ್ರಾಯಗಳು ಪರಿಹಾರದ ಹಂತಕ್ಕೆ ಬರಲಿದೆ. ಬರಲಿರುವ ಜೀವನದ ಸ್ಪರ್ಧೆಗಳನ್ನು ಎದುರಿಸುವಿರಿ. ಸಂಗಾತಿಯ ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗದಂತೆ ಸಲಹೆ ನೀಡುವುದನ್ನು ಮರೆಯಬೇಡಿರಿ.
ವೃಷಭ : ಗಣ್ಯ ವ್ಯಕ್ತಿಗಳ ಸಂಪರ್ಕ ನಿಮಗೆ ನಿರಂತರ ದೊರೆಯಲಿದೆ. ಹಲವಾರು ಹೊಸ ಅವಕಾಶಗಳು ನಿಮ್ಮ ವ್ಯವಹಾರದಲ್ಲಿ ದೊರೆಯಲಿದ್ದು ಬಾಕಿ ಉಳಿದ ಕೆಲಸಗಳಿಗೆ ಚಾಲನೆ ದೊರೆಯಲಿದೆ. ವಿದೇಶ ಪ್ರವಾಸ ಯೋಚನೆ ಇದೆ. ವಿವಾಹ ಆಗಲು ಕಾಯುತ್ತಿರುವವರಿಗೆ ಅಡೆ ತಡೆಗಳು ನಿರೀಕ್ಷಿತವಾಗಿದೆ. ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಸಹೋದರನ ಜೊತೆಗೆ ಬೇಸರವಾಗುವ ಸಾಧ್ಯತೆ ಇದೆ. ಚಾಡಿಯ ಒಂದು ಮಾತು ನಿಮ್ಮ ಬೇಸರಕ್ಕೆ ಕಾರಣವಾಗಲಿದೆ. ಅತಿಥಿಗಳ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ. ಕುಟುಂಬಕ್ಕಾಗಿ ಸಮಯವನ್ನು ಕೋಡುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿಸಲಿದ್ದಾರೆ.ಬೆಲೆ ಬಾಳುವ ವಸ್ತುಗಳನ್ನು ಖರೀಧಿ ಮಾಡಲಿದ್ದೀರಿ. ಹೊಸ, ಆದಾಯದ ಮೂಲ ಗೋಚಾರಕ್ಕೆ ಬರಲಿದೆ. ನಿಮ್ಮ ಕೆಲಸಕ್ಕೆ ಸರಿಯಾದ ಪ್ರತಿಫಲ ದೊರೆಯಲಿದೆ .
ಮಿಥುನ : ಗುರುವಿನ ಅನುಗ್ರಹಕ್ಕಾಗಿ ಮೇ 14 ರವರೆಗೆ ಕಾಯುವುದು ಅನಿವಾರ್ಯವಾಗಿದೆ. ನಿಮ್ಮ ಯಶಸ್ಸು ನಿಮ್ಮ ಮಾತಿನಲ್ಲಿ ಇದೆ. ಆತ್ಮವಿಶ್ವಾಸ ಅತೀ ಮುಖ್ಯವಾಗಿದೆ. ಗಣಪತಿ ದೇವರ ಪ್ರಾರ್ಥನೆ ಅಗತ್ಯವಾಗಿದೆ. ಸಂಗಾತಿಯೊಂದಿಗೆ ಅನ್ಯೋನ್ಯತೆಯನ್ನು ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಬೇಡದ ವಿಚಾರಗಳಿಗೆ ಕುಟುಂಬದಲ್ಲಿಕಲಹ ಇರುತ್ತದೆ. ವಾರದ ಕೊನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸಬಹುದು. ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಅವಕಾಶ ಒದಗಿ ಬರಲಿದೆ. ತಾಳ್ಮೆ ಅತೀ ಮುಖ್ಯವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಹೊಸ ವ್ಯವಹಾರ ಮಾಡುವ ಯೋಜನೆ ಹಾಕಿಕೊಳ್ಳುವಿರಿ.
ಕರ್ಕಾಟಕ :ಮಾರ್ಚ .2025 ರವರೆಗೆ ಬಹಳ ಎಚ್ಚರವಾಗಿರಬೇಕು. ನಿಮ್ಮ ಪ್ರಾಯಕ್ಕೆ ತಕ್ಕಂತೆ, ವರ್ತನೆ ಅಗತ್ಯ. ವಾಹನ ಚಾಲಕರಾಗಿದ್ದಲ್ಲಿ ವಾಹನದ ವೇಗ ನಿಮ್ಮ ಹಿಡಿತದಲ್ಲಿ ಇರಲಿ. ಕೆಲವೊಮ್ಮೆ ಬಂಧುಗಳಿಂದ ಕಠಿಣ ಮಾತುಗಳನ್ನು ಕೇಳುವ ಸಂದರ್ಭ ಬರಲಿದೆ. ಆದಾಯದ ಮೂಲಗಳು ಉತ್ತಮವಾಗಿರುವುದರಿಂದ ಅನೇಕ ಸಮಸ್ಯೆಗಳು ಪರಿಹಾರ ಆಗಲಿವೆ. ಶಿವನ ಆರಾಧನೆಯಿಂದ ಶುಭ ಫಲವನ್ನು ಹೊಂದುವಿರಿ. ನಿಮ್ಮ ವ್ಯವಹಾರ ಉದ್ಯೋಗ ಉತ್ತಮವಾಗಲಿದ್ದು ಇತರರಿಂದ ಪ್ರಶಂಸೆ ಪಡೆಯಲಿದ್ದಾರೆ. ಶುಕ್ರ ,ಶನಿ ,ನಿಮಗೆ ಮಿಶ್ರ ಫಲಗಳನ್ನು ನೀಡಲಿದ್ದು ಆರೋಗ್ಯದ ಕಡೆಗೆ ನಿಮ್ಮ ಗಮನ ಅಗತ್ಯವಾಗಲಿದೆ.ಗಂಟು ನೋವು ,ನಿಶ್ಯಕ್ತಿ ಭಾಧೆ ,ಬಿಳಿಮುಟ್ಟಿನ ಸಮಸ್ಯೆ ಕಾಡಲಿದೆ. ವೈದ್ಯರ ದರ್ಶನ ಮಾಡಲಿದ್ದೀರಿ.
ಸಿಂಹ : ನೀವು ಗಮನ ಕೊಡಬೇಕಾದ ಗ್ರಹರೆಂದರೆ ಕುಜ .ಶನಿ ,ಮತ್ತು ರಾಹು .ನವಗ್ರಹ ಜಪ ಮಾಡಿದರೆ ಒಳ್ಳೆಯದು. ಮನಸ್ಸಿಗೆ ಒತ್ತಡ ಬರದಂತೆ ಎಚ್ಚರವಹಿಸಿರಿ. ಹೊಸ ಮನೆಯನ್ನು ಹೊಂದುವ ನಿಮ್ಮ ಕನಸು ನನಸಾಗಲಿದೆ. ವಿಷ್ಣು ದೇವರು ಮನೆಯಲ್ಲಿ ಬಂದು ಆಸೀನರಾಗಿದ್ದಾರೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಸಂತಾನದ ನಿರೀಕ್ಷೆಯಲ್ಲಿ ಇದ್ದರೆ, ನಿಮ್ಮ ಆಸೆ ಈಡೇರಲಿದೆ. ಸಂಗಾತಿಯೊಂದಿಗೆ /ವ್ಯವಹಾರದಲ್ಲಿ ಪಾಲುದಾರರೊಂದಿಗೆ ಅನುಮಾನ ಪಡದೇ ಹೊಂದಾಣಿಕೆಯಿಂದ ಮುಂದುವರಿಯಿರಿ. ನಾಗದೇವರ ಸೇವೆ ಬಹಳ ಅಗತ್ಯವಿದೆ. Maigrane ತಲೆನೋವು ಬಾಧೆ, ವೋಮೀಟ್ಟಿಂಗ್ ಸಮಸ್ಯೆ ಬರಲಿದೆ. ಆಹಾರ ಸೇವನೆಯಲ್ಲಿ ತಂಪಾದ ಆಹಾರ ಸೇವನೆ ಬೇಡ.
ಕನ್ಯಾ :ನೀವು ಗಮನಿಸಬೇಕಾದ ಗ್ರಹರೆಂದರೆ ಕೇತು ,ರವಿ ,ರಾಹು ಆಗಿರುತ್ತದೆ. ಇವರಿಗೆ ಸಂಬಂಧಿಸಿದ ಜಪವನ್ನು ಮಾಡಿರಿ .ಶಿವ ಸಹಸ್ರನಾಮವನ್ನು ಪಾರಾಯಣ ಮಾಡಿರಿ . ಹೊಸ ಯೋಜನೆಗಳಿಗೆ ಕೈ ಹಾಕುವಾಗ ಎಚ್ಚರಿಕೆ ಇರಲಿ. ಭಾಗ್ಯದಲ್ಲಿ ಗುರು ಇರುವ ಕಾರಣ ನಿಮ್ಮ ವಯಕ್ತಿಕ ಹಾಗೂ ಔದ್ಯೋಗಿಕ ವಿಷಯಗಳಲ್ಲಿ ಯಶಸ್ವಿಯಾಗುವಿರಿ. ಕುಟುಂಬದೊಂದಿಗೆ ಸಂತೋಷದ ದಿನಗಳನ್ನು ಕಳೆಯುವಿರಿ. ಅಪ್ರಯೋಜಕ ಕೆಲಸಗಳಿಗೆ ಸಮಯ ವ್ಯರ್ಥ ಮಾಡಬೇಡಿರಿ. ವಿಶ್ರಾಂತಿಯ ಅಗತ್ಯವಿದ್ದಾಗ ಅದರ ಬಗ್ಗೆ ಅಸಡ್ಡೆ ಮಾಡಬೇಡಿರಿ. ಸಹೋದ್ಯೋಗಿಗಳ ಜೊತೆಗೆ ನಗು ನಗುತ್ತಾ ಕಾಲಕಳೆಯುವುದನ್ನು ಕಲಿತು ಕೊಳ್ಳಿರಿ. ಕೋರ್ಟಿನಲ್ಲಿ ನಿಮ್ಮ ವಿವಾದಗಳು ಇದ್ದಲ್ಲಿ ಅದು ನಿಮ್ಮ ಪರವಾಗಿರುತ್ತದೆ .ನಾಗದೇವರಿಗೆ ಪ್ರದಕ್ಷಿಣೆ ನಮಸ್ಕಾರ ಮಾಡುತ್ತಾ ಬನ್ನಿರಿ.
ತುಲಾ : ಗುರು ಅಷ್ಟಮದಲ್ಲಿ ಇದ್ದಾನೆ ಕೇತು, ಶುಕ್ರ, ಶನಿ ಇವರ ಬಗ್ಗೆ ನಿಮ್ಮ ಗಮನವಿರಲಿ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ. ಮಾಟ ಕೃತ್ರಿಮ ,ದೃಷ್ಟಿ ದೋಷ ನಿಮ್ಮನ್ನು ಕಾಡಲಿದೆ. ದುರ್ಗೆಯ ಆರಾಧನೆ ಪ್ರಮುಖ ಪಾತ್ರ ವಹಿಸಲಿದೆ.ಅಪರಿಚಿತ ಮಹಿಳೆಯರ ಬಗ್ಗೆ ಎಚ್ಚರವಿರಲಿ.ಬಿಪಿ ಷುಗರ್ ಬೆನ್ನು ನೋವು ಇರುವವರು ಎಚ್ಚರವಿರಿ. 60+ ಆಗಿರುವವರು ಆಹಾರದ ಬಗ್ಗೆ ಗಮನ ಕೊಡಬೇಕು. ತಲೆ ತಿರುಗುವ ಸಮಸ್ಯೆ ಇರುವವರು ಜೊತೆಗೆ ಯಾರನ್ನಾದರೂ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಖರ್ಚು ಬರಲಿದೆ .ಸಾಲ ಮಾಡಬೇಕಾದ ಅವಶ್ಯಕತೆ ಬರಲಿದೆ.
ವೃಶ್ಚಿಕ : ಶನಿ ರಾಹುವಿನ ಬಗ್ಗೆ ಗಮನವಿರಲಿ. ಕುಜನ ಬಗ್ಗೆ ಕೂಡಾ ಗಮನ ಅಗತ್ಯವಿದೆ. ಗುರು ತನ್ನ ಶತ್ರು ಶುಕ್ರನ ಮನೆಯಲ್ಲಿ ಇದ್ದಾನೆ. ಆದರೂ ಗುರುವಿನ ಅನುಗ್ರಹ ಇರುವುದನ್ನುತಳ್ಳಿ ಹಾಕುವಂತಿಲ್ಲ. ಶನಿಯ ಸೂಚನೆಯೆಂದರೆ ಎಂದಿಗೂ ಅಪಾಯಕಾರಿ ಕೆಲಸಗಳಿಗೆ ಕೈ ಹಾಕಬೇಡಿರಿ. ಖರ್ಚು ವೆಚ್ಚಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಿರಿ. ನಿಮ್ಮಿಂದ ಒಂದು ತಪ್ಪು ಕೆಲಸ ನಡೆಯುವ ಸಾಧ್ಯತೆ ಇದೆ. ವಿಷ್ಣು ಸಹಸ್ರನಾಮ ಪಾರಾಯಣ ತಪ್ಪು ನಡೆಯದಂತೆ ನೋಡಿಕೊಳ್ಳಲಿದೆ. ಓಂ ಶಂ ಶನೈಶ್ಚರಾಯನಮ : llದಿನಕ್ಕೆ 108 ಬಾರಿ ಹೇಳಿರಿ. ರಾಜಕೀಯದವರ ಮಾತುಗಳೇ ಆಯುಧದಂತೆ ಕೆಲಸ ಮಾಡಲಿದೆ. ರವಿ ವಾಕ್ ಸ್ಥಾನದಲ್ಲಿ ಇದ್ದಾನೆ .
ಧನು : ನೀವು ಈ ವಾರದಲ್ಲಿ ರವಿ ,ರಾಹು ,ಗುರು ಕುಜ ಬುಧ ಇವರ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯವಿದೆ. ಸಂಗಾತಿಯೊಂದಿಗೆ ವಿರಸ ,ಕಲಹ ,ಅನಾರೋಗ್ಯ ,ಬಿಪಿ ಷುಗರ್ ಸಮಸ್ಯೆ ಮಾನಸಿಕ,ಶಾರೀರಿಕ ನೋವುಗಳ ಸಮಸ್ಯೆ ಇರುತ್ತದೆ..ನಮ: ಸೂರ್ಯಾಯ ,ಚಂದ್ರಾಯ, ಮಂಗಳಾಯ, ಬುಧಾಯ ಚ l ಗುರು ಶುಕ್ರ ಶನಿಬ್ಯಶ್ಚ ರಾಹವೇ ಕೇತವೇ ನಮ: ll ಈ ಶ್ಲೋಕವನ್ನು ನಿತ್ಯವೂ 12 ಬಾರಿ ಹೇಳಿರಿ. ಜವಾಬ್ದಾರಿ ಹೆಚ್ಚಲಿದೆ. ಕೆಲಸದ ಅಧಿಕ ಒತ್ತಡದಿಂದ ಪ್ರಗತಿಯಲ್ಲಿ ವಿಳಂಬ ಆಗಲಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿರಿ. ಆಸ್ತಿ ಖರೀಧಿ ಯೋಗವಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣ್ ಗೊಳಿಸುವಿರಿ. ದುರ್ಗೆಯ ಆರಾಧನೆ ಬಹಳ ಪ್ರಧಾನವಾಗಲಿದೆ.
ಮಕರ : ಸಾಡೇ ಸಾತ್ ಶನಿಯ ಪ್ರಭಾವ ಕಡಿಮೆಯಾಗುತ್ತಾ ಬಂದಿದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಈ ಸಮಯದಲ್ಲಿ ನಿಮ್ಮ ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಡೆಯಬೇಡಿರಿ. ದುರ್ಬಲರಿಗೆ ವೃದ್ಧರಿಗೆ ಸಹಾಯ ಮಾಡಿರಿ. ಕುಜ ,ರವಿ ಗೆ ಪರಿಹಾರವಾಗಿ ಶ್ರೀ ಉಮಾ ಮಹೇಶ್ವರ ದೇವರ ಪ್ರಾರ್ಥನೆ ಮಾಡಿರಿ.ವ್ಯಾಪಾರ,ವ್ಯವಹಾರ ಮಾಡುವಾಗ ಪ್ರಸ್ತುತ ಸನ್ನಿವೇಶಗಳನ್ನು ಅರಿತುಕೊಂಡು ಮಾಡಿರಿ. ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕಂತೆ ಫಲವನ್ನು ಪಡೆಯುವಿರಿ. ವಿದೇಶ ಪ್ರವೇಶದ ಯೋಗ ನಿಮಗಿದೆ . ದೇವರ ಪೂರ್ಣ ಅನುಗ್ರಹವಿದೆ. ನಿತ್ಯವೂ ಪ್ರಾಮಾಣಿಕೆ ಪ್ರಯತ್ನ ನಿಮ್ಮ ವ್ಯವಹಾರದಲ್ಲಿ ಇರಲಿ .
ಕುಂಭ : ನೀವು ಗಮನಿಸಬೇಕಾದ ಅಂಶವೆಂದರೆ ಶುಕ್ರ ಸುಖಾಧಿಪತಿ ,ಭಾಗ್ಯಾಧಿಪತಿ ,ಭಾಧಕಾಧಿಪತಿ ವ್ಯಯದಲ್ಲಿ ಇದ್ದಾನೆ .ಶನಿ ಜನ್ಮ ರಾಶಿಯಲ್ಲಿ ಇದ್ದಾನೆ.ರಾಹು ದ್ವಿತೀಯಾದಲ್ಲಿ ಇದ್ದಾನೆ. ಹೀಗಿರುವಾಗ ಮಾನಸಿಕ ,ಶಾರೀರಿಕ ಸುಖ ನಿಮಗೆ ಹೇಗೆ ಸಿಗಬೇಕು. ವಿಕ್ರಮಾದಿತ್ಯ ರಾಜನಿಗೆ ಶನಿ ನೀಡಿರುವ ಕಷ್ಟಗಳ ನೆನಪು ಬರುತ್ತಿದೆ. ವೈರಾಗ್ಯ ಭಾವನೆ ನಿಮ್ಮ ಮನಸ್ಸನ್ನು ಆವರಿಸಲಿದೆ. ಆತ್ಮವಿಶ್ವಾಸದಿಂದ ನಿಮ್ಮ ಯಾವುದೇ ವ್ಯವಹಾರಗಳನ್ನು ಮಾಡುತ್ತಾ” ಕರ್ಮಣ್ಯೇವ ಅಧಿಕಾರ :,ತೇ ಮಾ ಫಲೇಶು ಕದಾಚನ.” ಈ ಮಾತು ನಿಮ್ಮ ಗಮನದಲ್ಲಿರಲಿ. ವೇದಾಂತದ ಕಡೆಗೆ ನಿಮ್ಮ ಮನಸ್ಸು ಹೋಗಲಿದೆ. ರಾಜಕೀಯದಲ್ಲಿ ಇರುವ ವ್ಯಕ್ತಿಗಳಿಗೆ ಗೌರವ ಸಿಗಲಿದೆ. ಉನ್ನತ ಸ್ಥಾನಮಾನ ಲಭಿಸಲಿದೆ .
ಮೀನ : ನೀವು ರಾಹು,ಗುರು ,ಕುಜ ಕೇತು ಶನಿ ಇವರನ್ನು ಶುಭ ಫಲವನ್ನು ನೀಡುವಂತೆ ಪ್ರಾರ್ಥನೆ ಸಲ್ಲಿಸಿರಿ. ಸತ್ಯನಾರಾಯಣ ದೇವರ ನಾಮಾವಳಿಗಳನ್ನು ಪಾರಾಯಣ ಮಾಡಿರಿ. ಮಾನಸಿಕ ಶಾಂತಿ ,ಆಕಸ್ಮಿಕ ಧನಲಾಭ ,ವ್ಯಾಪಾರದಲ್ಲಿ ವೃದ್ಧಿ ಉಂಟಾಗಲಿದೆ. ಶತ್ರುಗಳ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿರಿ. ವಸ್ತ್ರ ವ್ಯಾಪಾರಿಗಳಿಗೆ ಭರ್ಜರಿ ಲಾಭ ದೊರೆಯಲಿದೆ. ಹೋಟೆಲ್ ಮಾಲಕರಿಗೆ ಉತ್ತಮ ಧನಲಾಭ ದೊರೆತು ವ್ಯವಹಾರ ವಿಸ್ತರಣೆ ಮಾಡುವ ಕುರಿತು ಯೋಚನೆ ಮಾಡಲಿದ್ದಾರೆ. ಸಂಗಾತಿಯೊಂದಿಗೆ ಕಲಹ ಬೇಡ .ದೊಡ್ಡ ಮಟ್ಟದ ಹಣ ಹೂಡಿಕೆ ಸದ್ಯಕ್ಕೆ ಬೇಡ. ಗೌರವವನ್ನು ಇನ್ನೊಬ್ಬರಿಗೆ ಕೊಟ್ಟಾಗ ಪ್ರತಿಯಾಗಿ ನಮಗೆ ಸಹಜವಾಗಿಯೇ ಸಿಗುತ್ತದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಪ್ರಸ್ತುತ ವಿಷಯಗಳನ್ನು ಕವಡೆ ಮೂಲಕ ತಿಳಿಸಲಾಗುವುದು.ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆಯನ್ನು ತಿಳಿಸಲಾಗುವುದು.


























