ವಾರ ಭವಿಷ್ಯ
ದಿನಾಂಕ 21.07.2024 ರಿಂದ 27.07.2024 ರ ವರೆಗೆ
ವಿಶೇಷ ದಿನಗಳು :21.07.2024…..ಗುರು ಪೂರ್ಣಿಮಾ ,ವ್ಯಾಸ ಪೂಜಾ ,ಆಟಿ ಹುಣ್ಣಿಮೆ
,ಯತಿಚಾತುರ್ಮಾಸ್ಯಾರಂಭ :
ಮೇಷ :ರಾಶ್ಯಾಧಿಪತಿ ಕುಜ ಗುರುವಿನೊಂದಿಗೆ ದ್ವಿತೀಯಾದಲ್ಲಿ ಇದ್ದಾನೆ .”ದ್ವಿತೀಯೇ ನರೇಂದ್ರ
ಪೀಡಾಕಲಹಾದಿ ದೋಷೈ: “ಅಂದರೆ ಚೋರ ಭಯ ಪಿತ್ತೋಷ್ಣ ಪೀಡೆ ,ಮೇಲಧಿಕಾರಿಗಳಿಂದ ಕಿರುಕುಳ
ಇರುತ್ತದೆ .ಗುರುವಿನೊಂದಿಗೆ ಇರುವುದರಿಂದ ಹೊಂದಿಸಿ ಕೊಂಡು ಹೋಗಬಹುದಾಗಿದೆ .ಶುಕ್ರ ಮತ್ತು ರವಿ
ಸುಖ ಸ್ಥಾನದಲ್ಲಿ ಇರುವುದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾಗಿದೆ .ಬುಧ ಪಂಚಮದಲ್ಲಿ
ಇರುವಾಗ ಪತ್ನಿ ಮಕ್ಕಳಲ್ಲಿ ಕಲಹ ಬರದಂತೆ ಎಚ್ಚರವಹಿಸಿರಿ .ಮಾನಸಿಕ ಒತ್ತಡ ಬರದಂತೆ
ಎಚ್ಚರವಹಿಸಿರಿ .ನಿಮ್ಮ ಕೋಪದ ಮಾತುಗಳಿಂದ ದೂರವಿರುವುದು ಬಹಳ ಒಳ್ಳೆಯದು .ಬರುವ
ನಿಯಮಿತ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.
ವೃಷಭ : ಜನ್ಮ ರಾಶಿಯಲ್ಲಿ ಕುಜ ಮತ್ತು ಗುರು ಇದ್ದಾರೆ “.ಕುಜೇಭಿಘಾತ: ಪ್ರಥಮೇ “
ಹೊಡೆತ ಹಲ್ಲೆಗಳು ನಡೆಯುವ ಸಾಧ್ಯತೆ .ಗುರು ಕೂಡಾ ಧನ ನಾಶ ,ಸ್ಥಾನ ಭ್ರಂಶ ,ಬಹುಜನ ಕಲಹ ಎಂಬ
ವಿಷಯಗಳನ್ನು ಸೂಚಿಸುತ್ತಿರುವುದರಿಂದ ಎಚ್ಚರವಾಗಿರಿ .ಕುಟುಂಬದಲ್ಲಿ ಪ್ರಮುಖ ನಿರ್ಧಾರಗಳನ್ನು
ಕೈಗೊಳ್ಳುವಿರಿ .ಹಣ ಕಾಸಿನ ವಿಷಯದಲ್ಲಿ ವ್ಯವಹಾರದಲ್ಲಿ ಲೆಕ್ಕಾಚಾರ ಸರಿಯಾಗಿರಲಿ .ಅನಿರೀಕ್ಷಿತ
ಖರ್ಚು ವೆಚ್ಚಗಳು ಇರುತ್ತವೆ . ಧನ ಲಾಭವಿರುತ್ತದೆ .ನಿರ್ಧಿಷ್ಟ ಗುರಿ ನಿಮ್ಮಲ್ಲಿ ಇರುವುದಿಲ್ಲ.
ಸಂಪಾದನೆಯ ದಾರಿ ಕೂಡಾ ಗೊಂದಲವನ್ನು ಹೊಂದಿರುತ್ತದೆ .ನಿರ್ಧಿಷ್ಟ ಉದ್ದೇಶ ಇಲ್ಲದಿರುವುದರಿಂದ
ಗೊಂದಲವಿರುತ್ತದೆ ವಿದ್ಯಾರ್ಥಿಗಳು ಎಚ್ಚರವಾಗಿರಿ .ವಿಷ್ಣು ಸಹಸ್ರನಾಮ ಪಾರಾಯಣ ಮುಂದುವರಿಸಿರಿ.
ಮಿಥುನ : ಕುಜ ಮತ್ತು ಗುರು ವ್ಯಯದಲ್ಲಿ ಇದ್ದಾರೆ .”ನಾನಾ ವ್ಯಯೈ : ದ್ವಾದಶಗೇ ಮಹೀ ಸುತೇ
ಸಂತಾಪ್ಯತೆ …….ಅಂದರೆ ಅನೇಕ ವಿಧಗಳಿಂದ ಖರ್ಚು ವೆಚ್ಚಗಳು ಉಂಟಾಗಲಿದೆ .ಪಿತ್ತವಿಕಾರ ,ಕಣ್ಣುಬೇನೆ
,ಬರುವ ಸಾಧ್ಯತೆ ಇರುತ್ತದೆ .ನಾಗ ದೇವರಿಗೆ ಯಥಾ ಶಕ್ತಿ ಸೇವೆ ಸಲ್ಲಿಸಿರಿ . ಮಿತ್ರರ ಆಗಮನವನ್ನು ಬುಧ
ತಿಳಿಸುತ್ತಿದ್ದಾನೆ .ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸುವ ಯೋಗ ಕೂಡಿ ಬರಲಿದೆ
.ವಿದ್ಯಾರ್ಥಿಗಳು ಅನಾವಶ್ಯಕ ಒತ್ತಡಗಳಿಂದ ಹೊರಗೆ ಬರಬೇಕು .ಉದ್ಯೋಗದ ಬದಲಾವಣೆ ಈ ವರ್ಷ
ಬೇಡ . ಗುರು ವ್ಯಯದಲ್ಲಿ ಇರುವುದರಿಂದ ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಪ್ರತಿಕೂಲ
,ವಿಘ್ನಗಳು ಬರಲಿವೆ “ನೀವು ಹೇಳಬೇಕಾದ ಮಂತ್ರ “ಓಂ ಓಂ ನಮೋ ನಾರಾಯಣಾಯ” ಪ್ರತಿನಿತ್ಯ 108
ಬಾರಿ ಹೇಳಲೇ ಬೇಕಾಗಿದೆ.
ಕರ್ಕಾಟಕ : ಲಾಭ ಕ್ಷೇತ್ರದಲ್ಲಿ ಕುಜ ಮತ್ತು ಗುರು ಬಂದಿರುವುದು “ಜನಪದಮುಪರಿಸ್ಥಿಶ್ಚ ಭುಂಕ್ತೆ
……ಅಂದರೆ ಜನತಾ ಮುಖಂಡನಾಗಿ ಸುಖವನ್ನು ಅನುಭವಿಸುವ ಯೋಗ ಭಾಗ್ಯ ಪ್ರಸ್ತುತ ಕೂಡಿ ಬಂದಿದೆ
.ಅಷ್ಟಮದಲ್ಲಿ ಇರುವ ವಕ್ರಿ ಶನಿಯ ಪ್ರಭಾವ ಕೂಡ ಕಡಿಮೆಯಾಗಲಿದೆ ರವಿ ಮತ್ತು ಶುಕ್ರ ಜನ್ಮ
ರಾಶಿಯಲ್ಲಿ ಇರುವುದು ದೇಹಾಯಾಸ ,ವೈಭವ ನಾಶ ಒದಗಿ ಬರಲಿದೆ .ಆರೋಗ್ಯದ ಕಡೆಗೆ
ಗಮನಕೊಡುತ್ತಾ “ಓಂ ನಮ: ಶಿವಾಯ “108 ಬಾರಿ ಪ್ರತಿ ನಿತ್ಯವೂ ಹೇಳುತ್ತಾ ಬರಬೇಕು .ಕುಟುಂಬದ
ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ಜವಾಬ್ದಾರಿ ತೋರುವಿರಿ .ಉದ್ಯೋಗದಲ್ಲಿ ವ್ಯಾಪಾರದಲ್ಲಿದುಡುಕು
ತನದ ನಿರ್ಧಾರ ಬೇಡ .ವಿದ್ಯಾರ್ಥಿಗಳು ಬೈಕ್ ಸವಾರಿ ಮಾಡುವಾಗ ,ನೀರಿನ ಬಳಿಗೆ ಹೋಗುವಾಗ
ಎಚ್ಚರವಹಿಸಬೇಕು.
ಸಿಂಹ : ರಾಶ್ಯಾಧಿಪತಿ ರವಿ ,ಶುಕ್ರನೊಂದಿಗೆ ವ್ಯಯದಲ್ಲಿ ಇದ್ದಾನೆ .”ಸುವೃತ್ತಾನಾಮ್ ಚೇಷ್ಟಾ ಭವತಿ
ಸಫಲಾ ದ್ವಾದಶೇನೇತರೇಶಾಮ್ “ವಿದೇಶ ಯಾತ್ರಾ ಯೋಗ,ಕಣ್ಣಿನ ಚಿಕಿತ್ಸೆಯ ಸಾಧ್ಯತೆ ,ಅನ್ಯಾಯದ
ರೀತಿಯಲ್ಲಿ ಧನ ಸಂಪಾದನೆಯ ಯೋಗ ಇರುತ್ತದೆ .ಸಿಡುಕಿನ ಸ್ವಭಾವದ ಕಾರಣದಿಂದ ಕುಟುಂಬದಲ್ಲಿ
ನೆಮ್ಮದಿಯ ಕೊರತೆ ಇರುತ್ತದೆ .ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆಗೆ ಹೊಂದಿಕೊಂಡು
ಹೋಗುವುದು ಅವಶ್ಯಕವಾಗಿದೆ .ವಿದ್ಯಾರ್ಥಿಗಳು ,ಗುರುಗಳು ,ಶಿಲ್ಪಿಗಳು ತಮ್ಮ ತಮ್ಮ ಕೆಲಸಗಳಲ್ಲಿ
ಯಶಸ್ವಿಯಾಗುವರು .ಗಣ್ಯ ವ್ಯಕ್ತಿಗಳ ಸಹಕಾರ ಒದಗಿ ಬರಲಿದೆ .ಸಮಾಜದಲ್ಲಿ ಉನ್ನತ ಮಟ್ಟದ ಗೌರವ
ಒದಗಿ ಬರಲಿದೆ .ಕೆಲವೊಮ್ಮೆ ವೈರಾಗ್ಯದ ಭಾವನೆ ನಿಮ್ಮಲ್ಲಿ ಮೂಡಿ ಬರಲಿದೆ.
ಕನ್ಯಾ: ಜನ್ಮ ರಾಶಿಯಲ್ಲಿ ಕೇತು ಇದ್ದಾನೆ .”ಜನ್ಮ ರಾಶೌ ಯದಾ ಕೇತು: ಹಾನಿರೇವ ಪ್ರಜಾಯತೇ “ ಹಾನಿ
ಯಾಗಲಿದೆ ಅಂದರೆ ನೀವು ಮಾಡುವ ಯಾವುದೇ ವ್ಯವಹಾರ ,ಉದ್ಯೋಗದಲ್ಲಿ ಎಚ್ಚರದಿಂದ ಇರಬೇಕು
.ಭಾಗ್ಯದಲ್ಲಿ ಗುರು ಮತ್ತು ಕುಜ ಇರುವುದರಿಂದ “ಪುತ್ರ ಸುಖ, ಕರ್ಮ ಸುಖ ,ಇಷ್ಟಾರ್ಥ ಸಿದ್ಧಿ ,ಒದಗಿ
ಬರಲಿದೆ .ಬರುವ ಮೇ 2025 ದಿನಾಂಕ 15 ರ ವರೆಗೆ ಈ ಯೋಗ ನಿಮಗೆ ಸಿಗಲಿದೆ .ಉದ್ಯೋಗದ ಕಾರಣ
ಇರುವ ಸ್ಥಳದಿಂದ ಬೇರೆ ಊರಿಗೆ ಹೋಗುವ ಸಾಧ್ಯತೆ ಇರುತ್ತದೆ .ಶುಭ ಸಮಾರಂಭಗಳಲ್ಲಿ
ತುಲಾ : ಗುರು ಮತ್ತು ಕುಜ ಯುತಿಯಾಗಿ ಅಷ್ಟಮದಲ್ಲಿ ಇದ್ದಾರೆ .”ಬಂಧಮ್ ವ್ಯಾಧಿಮ್ ಚಾಷ್ಟಮೇ
ಶೋಕ ಮುಗ್ರಮ್ ಮಾರ್ಗ ಕ್ಲೇಶಂ ಮೃತ್ಯು ತುಲ್ಯಾಂಶ್ಚ ರೋಗಾನ್” ಬಂಧನ ರೋಗ ,ಉಗ್ರವಾದ
ಶೋಕ ,ಮೃತ್ಯು ಸಮಾನ ಕಷ್ಟಕಾರಿ ರೋಗಗಳು “ ಎಂದಿದ್ದಾರೆ .ಸುಲಭ ಪರಿಹಾರಹಾರವಾಗಿ ಪ್ರತಿನಿತ್ಯ
ವಿಷ್ಣು ಸಹಸ್ರನಾಮ ,ಶಿವ ಸಹಸ್ರನಾಮ ಪಾರಾಯಣ ಮಾಡುತ್ತಾ ಬರಬೇಕು .ಪುಣ್ಯ ಕ್ಷೇತ್ರ ದರ್ಶನ
ಮಾಡುತ್ತಿರಬೇಕು .ಬರುವ 2025.ಮೇ 15 ರ ವರೆಗೆ ಈ ದೋಷ ಇರುವುದರಿಂದ ನಿತ್ಯ ನೈಮಿತ್ತಿಕ ಪುಣ್ಯ
ಕೆಲಸಗಳನ್ನು ಮಾಡುತ್ತಾ ಬರಬೇಕು .ಮೂಲ ಜಾತಕ ಪರಿಶೀಲನೆ ಮಾಡಿಸಬೇಕು .ಇನ್ನೊಬ್ಬರಲ್ಲಿ
ಮಾಡಿಸುವುದಕ್ಕಿಂತ ನೀವೇ ಸ್ವತ”ಮಾಡುವುದು ಉತ್ತಮ.
ವೃಶ್ಚಿಕ : ಸಪ್ತಮದಲ್ಲಿ ಗುರು ಮತ್ತು ಕುಜ ಇದ್ದಾರೆ .”ಜನಯತಿ ಸಪ್ತಮ ರಾಶಿ ಮುಪೇತೋ ಲಲಿತ
ಪದಾಮ್ ಚ ಗಿರಮ್ ಧಿಷಣಾಮ್ ಚ “ಶಯನ ಸುಖ ಸ್ತ್ರೀ ಭೋಗ ,ಭೋಜನ ಸುಖ ಎಂದಿದ್ದಾರೆ .ಕುಜ
“ಪತ್ನೀ ಕಲಹ ,ನೇತ್ರ ರೋಗ ,ಜಠರ ರೋಗವನ್ನು ಸೂಚನೆ ಕೊಡುತ್ತಿದ್ದಾನೆ .ಇಲ್ಲಿ ಆರೋಗ್ಯದ ಕಡೆಗೂ
ಗಮನ ಕೊಡುವುದು ಅಗತ್ಯವಿದೆ .ಶನಿಯ ದೋಷಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ
.ದಿನಾಂಕ 9.08.2024 ರಂದು ನಾಗರ ಪಂಚಮಿಯದು ನಾಗ ದೇವರಿಗೆ ತಂಬಿಲ ಸೇವೆಯನ್ನು ಕೊಡಲು
ಮರೆಯಬೇಡಿರಿ . ರಾಜಕೀಯದಲ್ಲಿ ಇರುವ ಗಣ್ಯರು ಬಹಳ ಎಚ್ಚರದಿಂದ ವ್ಯವಹರಿಸಬೇಕು .ರವಿ ಮತ್ತು
ಶುಕ್ರ ಭಾಡಕ ಕ್ಷೇತ್ರದಲ್ಲಿ ಶನಿ ಸುಖ ಸ್ಥಾನದಲ್ಲಿ ಇರುವಾಗ ಕೋಲು ಕೊಟ್ಟು ಪೆಟ್ಟು ತಿನ್ನುವ ಹಾಗೆ
ಆಗಬಾರದು.
ಧನು : ರಾಹು ಚತುರ್ಥದಲ್ಲಿ ಇದ್ದಾನೆ .”ಚತುರ್ಥೇ ಚ ತಮ: ಶೋಕೋ “ ರಾಹು ಶೋಕವನ್ನು ಉಂಟು
ಮಾಡುತ್ತಾನೆ .ಕುಜ ಮತ್ತು ಗುರು ಷಷ್ಟದಲ್ಲಿಇದ್ದಾರೆ .ಕುಜ ನೀವು ಶತ್ರು ಭಯ ಕಲಹಾದಿಗಳಿಂದ
ದೂರವಿರುವಂತೆ ಮಾಡುತ್ತಾನೆ .ಗುರು ನಿಮಗೆ ಸುಖವನ್ನು ನೀಡುವುದಿಲ್ಲ. ವಿಷ್ಣು ಸಹಸ್ರನಾಮ
ಪಾರಾಯಣವನ್ನು ಖಡ್ಡಾಯವಾಗಿ ಮಾಡಿರಿ .ಅಷ್ಟಮದಲ್ಲಿ ರವಿ ಮತ್ತು ಶುಕ್ರ ಇದ್ದಾರೆ . ರವಿ , ಕೆಮ್ಮು
,ತರಿಸುತ್ತಾನೆ .ಅನ್ಯ ಸ್ತ್ರೀಯರ ಬಗ್ಗೆ ಎಚ್ಚರ ವಹಿಸಿರಿ .ಲಲಿತಾ ಸಹಸ್ರನಾಮ ಪಾರಾಯಣವನ್ನು ಮಾಡಿರಿ
. ಕುಟುಂಬದಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಕೆಲವೊಮ್ಮೆ ವಿಫಲರಾಗುವಿರಿ .ಖರ್ಚನ್ನು
ನಿಭಾಸಲು ಬೇಕಾಗುವಷ್ಟು ಆದಾಯ ಬರಲಿದೆ . ಉದ್ಯೋಗದಲ್ಲಿ ಉನ್ನತ ಗೌರವ ಆದರಗಳು ಒದಗಿ
ಬರಲಿದೆ.
ಮಕರ : ಪಂಚಮದಲ್ಲಿ ಕುಜ ಮತ್ತು ಗುರು ಇದ್ದಾರೆ “ರಿಪು ಭಯ ಕಲಹೈ ರ್ವಿವರ್ಜಿತ: ……ಅಂದರೆ
ಕುಜನು ಶತ್ರು ಪೀಡೆ ರೋಗ ಕೋಪ ಭಯಕಾರನು ,ಅವನ ಜೊತೆಗೆ ಗುರು ಇದ್ದಾನೆ .ಪುತ್ರ ಲಾಭವನ್ನು
ಕರುಣಿಸುತ್ತಾನೆ ಸಂತೋಷದ ಜೀವನವನ್ನು ಕೊಡುತ್ತಾನೆ ,ನಿಮ್ಮ ಮಕ್ಕಳ ಪ್ರಯತ್ನದಿಂದ ಕುಟುಂಬದಲ್ಲಿ
ನೆಮ್ಮದಿಯ ವಾತಾವರಣ ಇರುತ್ತದೆ .ಉದ್ಯೋಗದಲ್ಲಿ ಬಿಡುವಿಲ್ಲದ ಕೆಲಸವಿರುತ್ತದೆ ವಿದ್ಯಾರ್ಥಿಗಳಿಗೆ
ಶುಭ ವಾತಾವರಣವಿರುತ್ತದೆ .ದಾಂಪತ್ಯದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ .ಸರಿಯಾದ ಸಮಯದಲ್ಲಿ
ತಾಯಿಯವರಿಂದ ,ಪಿತ್ರಾರ್ಜಿತ ,ಆಸ್ತಿಯಿಂದ ಪ್ರಯೋಜನವಾಗಲಿದೆ .ಸ್ವಂತ ಮನೆಯನ್ನು ಕೊಳ್ಳುವ ಆಸೆ
ಈಡೇರುತ್ತದೆ .ಧಾರ್ಮಿಕ ಕೇಂದ್ರದಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬರಲಿದೆ.
ಕುಂಭ : ಶನೀ ಜನ್ಮ ರಾಶಿಯಲ್ಲಿ ಇದ್ದಾನೆ .ಪ್ರಥಮೇ ರವಿಜೇ ವಿಷ ವಹ್ನಿ ಹತ : ಸ್ವಜನೈ ರ್ವಿಯುತ
:ಕೃತಬಂಧವದ: ಅಂದರೆ ವಿಷ ಭಯ ಅಗ್ನಿ ಭಯ ಸ್ವಜನ ವಿರಹ, ವಧ ಎಂದು ಹೇಳಿದ್ದಾರೆ
.ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ವನ್ನು ಮಾಡುತ್ತಾ ಬರಬೇಕು .ಸುಖ ಸ್ಥಾನದಲ್ಲಿ
ಕುಜ ಮತ್ತು ಗುರು ಇದ್ದಾರೆ ಶಾಂತಿ ಸಹನೆಯಿಂದ ಮಾತ್ರಾ ಸಂತಸದಿಂದ ಬಾಳಲು ಸಾಧ್ಯವಾಗುತ್ತದೆ
.ಅನಾವಶ್ಯಕ ಯೋಚನೆಗಳಿಂದ ಹೊರಬರಲು ಪ್ರಯತ್ನಿಸಬೇಕು .ಒಳ್ಳೆಯ ವಿಚಾರಗಳನ್ನು ಧನಾತ್ಮಕ
ವಿಚಾರಗಳನ್ನು ಎಲ್ಲರ ಜೊತೆಗೆ ಹಂಚಿ ಕೊಳ್ಳಬೇಕು .ಶುಕ್ರ ಮತ್ತು ರವಿ 6 ನೇ ಮನೆಯಲ್ಲಿ ಇದ್ದಾರೆ
ಆರೋಗ್ಯದ ಕಡೆಗೆ ಗಮನ ಹರಿಸುವುದು ಮುಖ್ಯವಾಗಿದೆ .ದುರ್ಗಾ ಪ್ರಾರ್ಥನೆಯಿಂದ ಸಕಲ ಕಷ್ಟಗಳಿಂದ
ಪಾರಾಗಿ ಬರುವಿರಿ.
ಮೀನ :”ಜನ್ಮ ರಾಶೌ ಯದಾ ರಾಹು: ತದಾ ಹಾನಿಕರೋ ಭವೇತ್” ನಾಗ ದೇವರ ಪ್ರಾರ್ಥನೆಯಿಂದ
ರಾಹುವಿನ ದೋಷದಿಂದ ಹೊರಬರುವಿರಿ .ಸಾಡೇ ಸಾತ್ ಶನಿಯ ಪ್ರಭಾವದಿಂದ ವ್ಯರ್ಥ ಖರ್ಚುಗಳು
ಬರಲಿವೆ .ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .ತೃತೀಯಾದಲ್ಲಿ ಗುರು ಮತ್ತು ಕುಜ ಇರುವುದು
,ಸ್ಥಾನ ಚಲನೆ, ಕರ್ಮ ವಿಘ್ನ ,ಬರಲಿದೆ ,ಸಹೋದರ ವರ್ಗದವರಲ್ಲಿ ಕಲಹ ,ಹೊಂದಾಣಿಕೆಯ ಕೊರತೆ
ಕಂಡು ಬರಲಿದೆ .ಹಣ ಕಾಸಿನ ವಿಚಾರದಲ್ಲಿ ಕುಟುಂಬದ ಸದಸ್ಯರ ಸಹಕಾರ ದೊರೆಯಲಿದೆ ..ಸ್ವಂತ
ಉದ್ದಿಮೆ ನಡೆಸುವ ಯೋಚನೆ ಮಾಡುವಿರಿ .ಅಶಕ್ತರ ಜೀವನಕ್ಕೆ ಆಸರೆ ಆಗಲಿದ್ದೀರಿ. ಬೆಲೆ ಬಾಳುವ
ವಸ್ತುಗಳನ್ನು ಖರೀದಿಸುವಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆಗಳನ್ನು ತಿಳಿಸಲಾಗುವುದು



































