ವಾರ ಭವಿಷ್ಯ ದಿನಾಂಕ 20.10.2024 ರಿಂದ 26.10.2024 ರ ವರೆಗೆ
ವಿಶೇಷ ದಿನಗಳು : ಕರ್ಕಾಟಕ ರಾಶಿಗೆ ಕುಜನ ಪ್ರವೇಶ ; ಸಂಕಷ್ಟಹರ ಚತುರ್ಥಿ
ಮೇಷ : ಗುರುವಿನ ಅನುಗ್ರಹ ಇರುವ ಸಮಯವಾಗಿದೆ. ನಿಮ್ಮ ಮನಸ್ಸಿಗೆ ಒಪ್ಪುವ ಕೆಲಸವನ್ನು ಮಾತ್ರಾ ಮಾಡಿರಿ. ಶುಕ್ರ ಮತ್ತು ಕುಜ ನಿಮ್ಮ ಆರೋಗ್ಯಕ್ಕೆ ಸಮಸ್ಯೆಯನ್ನು ತರುವವರು. ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ .ಮಾತಿನ ಮೇಲೆ ನಿಗಾ ಇರಲಿ. ವಿದ್ಯಾರ್ಥಿಗಳು ಪ್ರೀತಿ –ಪ್ರೇಮ ಹುಚ್ಚಾಟದಿಂದ ದೂರವಿದ್ದಷ್ಟೂ ಒಳ್ಳೆಯದು. ಸಂತಾನ ಲಾಭದ ಯೋಗವಿದೆ. ವೈದ್ಯರ ಸಲಹೆ ಅಗತ್ಯವಿದೆ. ಅತಿಯಾದ ಆತ್ಮವಿಶ್ವಾಸವೇ ನಿಮಗೆ ಶತ್ರುವಾಗಿ ಕಾಡಲಿದೆ. ನಿಮ್ಮ ಸಂಬಂಧದ ಒಳಗೆಯೇ ನಿಮಗೆ ಮದುವೆ ಯಾಗುವ ಹುಡುಗಿ ಸಿಗಲಿದೆ. ರಾಜಕಾರಣಿಗಳಿಗೆ ಉತ್ತಮ ಸಮಯ.
ವೃಷಭ : ಗುರುವಿನ ಅನುಗ್ರಹ ನಿಮಗಿರುವುದಿಲ್ಲ. ನಿಮ್ಮಲ್ಲಿರುವ ಧೈರ್ಯದ ಗುಣ ನಿಮ್ಮನ್ನು ಯಶಸ್ವಿಯಾಗಿಸುತ್ತದೆ. ಬುದ್ಧಿವಂತಿಕೆಯಿಂದ ಮಾತನಾಡುವ ಕಾರಣ ವಾದ-ವಿವಾದದ ವಿಷಯವೇ ಇರುವುದಿಲ್ಲ.ವಿದ್ಯಾರ್ಥಿಗಳಿಗೆ ಶುಭ ಸಮಯ. ಭೂಮಿ ವ್ಯವಹಾರ ಮಾಡುವವರಿಗೆ ಒಳ್ಳೆಯ ಸಮಯ ಆರಂಭವಾಗಿದೆ. ಮಕ್ಕಳಲ್ಲಿ “ಬೆಚ್ಚಿಬೀಳುವ ಸಮಸ್ಯೆಯೊಂದು “ ನಿಮಗೆ ಸಮಸ್ಯೆಯಾಗಿ ಕಾಡಲಿದೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ಮಾನ ಲಭಿಸಲಿದೆ. ಮನಸ್ಸು ದಾಂಪತ್ಯದಲ್ಲಿ ಚಂಚಲವಾಗಲಿದೆ. ಲಲಿತಾ ಸಹಸ್ರನಾಮ ಪಾರಾಯಣದಿಂದ ಬರಲಿರುವ ಅಪವಾದ ತಪ್ಪಲಿದೆ.
ಮಿಥುನ : ಗುರುವಿನ ಅನುಗ್ರಹ ಇರದಿರುವ ಸಮಯ. ಪುಣ್ಯ ಕ್ಷೇತ್ರಗಳ ದರ್ಶನ ನಿಮಗೆ ಸಹಾಯವಾಗಲಿದೆ. ಯಾರಲ್ಲಿಯೂ ದ್ವೇಷ ಭಾವನೆ ಬೇಡ. ಸಂಬಂಧಿಕರೊಡನೆ ಹಣದ ವ್ಯವಹಾರ ಬೇಡ. ನಿಮ್ಮ ಸೌಮ್ಯ ನುಡಿ –ಮಾತು ಎಲ್ಲರ ಮೆಚ್ಚುಗೆ ಗಳಿಸುತ್ತದೆ. ನಿಮ್ಮ ಬುದ್ಧಿಶಕ್ತಿಯನ್ನು ಅವಲಂಭಿಸಿ ಕೆಲಸ ಮಾಡಿರಿ. ತಿನ್ನುವ ,ಕುಡಿಯುವ ವಿಚಾರದಲ್ಲಿ ಇತಿಮಿತಿ ಇರಲಿ. ಸರಕಾರಿ ನೌಕರಿಯಲ್ಲಿರುವ ಮಂದಿ ಮೇಲಾಧಿಕಾರಿಗಳೊಂದಿಗೆ ತಗ್ಗಿಬಗ್ಗಿ ನಡೆಯಬೇಕು .ಕಲಾವಿದರಿಗೆ ವಿಶೇಷ ಸ್ಥಾನ ಮಾನ ದೊರೆಯಲಿದೆ. ನಿಮ್ಮ ಕಾಲಿಗೆ ಸಂಬಂಧಿಸಿದ ತೊಂದರೆ ಹಾಗೆಯೇ ಮುಂದುವರಿಯಲಿದೆ .ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ .
ಕರ್ಕಾಟಕ : ಗುರು ಲಾಭ ಕ್ಷೇತ್ರದಲ್ಲಿ ಇರುವುದರಿಂದ ಈ ಸಮಯ ನಿಮ್ಮ ಅದೃಷ್ಟದ ಸಮಯವಾಗಿದೆ ಬಹು ದಿನಗಳಿಂದ ಬಾಕಿ ಇದ್ದ ಕೆಲಸ –ಕಾರ್ಯಗಳು ಈಗ ಸುಲಭವಾಗಿ ನಡೆಯಲಿದೆ. ಬರುವ ಆದಾಯಕ್ಕೆ ಯಾವುದೇ ತೊಂದರೆ ಇರಲಾರದು ಶನಿ ಅಷ್ಟಮದಲ್ಲಿ ಇರುವುದರಿಂದ ಪರಿಹಾರ ಅಗತ್ಯವಿದೆ. ಕುಜ ಜನ್ಮ ರಾಶಿಯಲ್ಲಿದ್ದು ಅಷ್ಟಮದಲ್ಲಿ ಶನಿ ಇರುವುದು ನಿಮ್ಮನ್ನು ಬಹಳ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಿದೆ. ಮೃತ್ಯುಂಜಯ ಜಪ ಮಾಡಲೇ ಬೇಕಾಗಿದೆ. ದಾಂಪತ್ಯದ ಜೀವನದಲ್ಲಿ ಸಾಮರಸ್ಯವನ್ನು ನೀವು ತಂದು ಕೊಳ್ಳಬೇಕು. ಉದ್ಯೋಗದಲ್ಲಿ ಬದಲಾವಣೆ ಇರುತ್ತದೆ .
ಸಿಂಹ : ಕುಜ ವ್ಯಯಕ್ಕೆ ಬಂದಿದ್ದಾನೆ .ಶುಕ್ರ ಸುಖ ಸ್ಥಾನದಲ್ಲಿ ಇದ್ದಾನೆ. ಅಷ್ಟಮದಲ್ಲಿ ರಾಹು ಇದ್ದಾನೆ ಶನಿ ಸಪ್ತಮದಲ್ಲಿ ಇದ್ದಾನೆ. ಮನೆಯ ಬದಲಾವಣೆಯಾಗುವ ಸಾಧ್ಯತೆ ಇದೆ. ವಾಹನ ಖರೀಧಿ ಮಾಡುವ ಯೋಚನೆಯಲ್ಲಿ ಇದ್ದರೆ, ಬಹಳ ಎಚ್ಚರವಹಿಸಬೇಕು .ಎಲ್ಲಿಯೂ ವಾಗ್ವಾದ ಬೇಡ. ಚಿಕ್ಕ ಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಲಲಿತಾ ಸಹಸ್ರನಾಮ ಪಾರಾಯಣ ನಿತ್ಯವೂ ಮಾಡುವ ಅಗತ್ಯವಿದೆ. ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ಉದ್ಯೋಗ ಕ್ಷೇತ್ರದಲ್ಲಿ ಕಾರಣವೇ ಇಲ್ಲದೆ ವಿವಾಡವೊಂದು ಸೃಷ್ಟಿಯಾಗಬಹುದು. ಬಹಳ ನಾಜೂಕಿನಿಂದ ಇದನ್ನು ಪರಿಹರಿಸಿಕೊಳ್ಳಿರಿ.
ಕನ್ಯಾ : ಗುರು ಭಾಗ್ಯದಲ್ಲಿ ಇದ್ದು ದೈವಾನುಗ್ರಹವನ್ನು ಕೊಡುತ್ತಿದ್ದಾನೆ. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನಗಳನ್ನು ಗಳಿಸುವಿರಿ. ಆದಾಯಕ್ಕೆ ತಕ್ಕ ಖರ್ಚು-ವೆಚ್ಚಗಳಿರುತ್ತದೆ. ಕುಜ ಲಾಭ ಕ್ಷೇತ್ರದಲ್ಲಿ ಇದ್ದಾನೆ. ಭೂಮಿಯ ವ್ಯವಹಾರ ಮಾಡುವವರಿಗೆ ಬಿಂದಾಸ್ ಯೋಗ. ರಾಜಕೀಯದಲ್ಲಿ ಇರುವವರಿಗೆ ಉನ್ನತ ಸ್ಥಾನ ಮಾನ ಗೌರವ ಸಿಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಇರುವಂತೆ ರಾಹು-ಕೇತು ತಿಳಿಸುತ್ತಿದ್ದಾರೆ. ಆದಾಯದ ಕಾಲ. ಶುಭ ಕೆಲಸಗಳು ಕುಟುಂಬದಲ್ಲಿ ನಡೆಯಲಿವೆ .ವಿವಾಹದ ಯೋಚನೆಯಲ್ಲಿ ಇರುವವರಿಗೆ ಇದು ಸಕಾಲವಾಗಿದೆ. ಶಿಕ್ಷಕರಿಗೆ ಶುಭ ಫಲವಾಗಲಿದೆ .ನಾಗ ದೇವರನ್ನು ಪ್ರಾರ್ಥನೆ ಮಾಡಿರಿ.
ತುಲಾ : ನಿಮ್ಮ ಜನ್ಮ ರಾಶಿಯಲ್ಲಿ ರವಿ ಬುಧ ,ಅಷ್ಟಮದಲ್ಲಿ ಗುರು ಪಂಚಮದಲ್ಲಿ ಶನಿ ಇರುವುದರಿಂದ ವಿಷ್ಣು ಸಹಸ್ರನಾಮ ಪಾರಾಯಣ ದೈವಾನುಗ್ರಹ ಪ್ರಾಪ್ತಿಗಾಗಿ ಮಾಡಿಕೊಂಡು ಬನ್ನಿರಿ. ಜೀವನ ಎಂದರೆ ಹೂವಿನ ಹಾಸಿಗೆಯಲ್ಲ ಎಂಬ ಸಂದೇಶವನ್ನು ಗುರು ತಿಳಿಸುತ್ತಿದ್ದಾನೆ. 3/6 ಸಹೋದರ ವರ್ಗದವರ ಜೊತೆಗೆ ಹೊಂದಿಕೊಂಡು ಮುಂದುವರಿಯಿರಿ. ಕೆಲವೊಮ್ಮೆ ನಿಮ್ಮ ಮಾತು ಸಂದೇಹಕ್ಕೆ ಎಡೆಮಾಡಿಕೊಡುತ್ತದೆ .ಆಸ್ತಿಯ ವಿವಾದ ಬರದಂತೆ ನೋಡಿ ಕೊಳ್ಳುವುದು ನಿಮ್ಮ ಕರ್ತವ್ಯ ಆಗಿರುತ್ತದೆ .ವಿದ್ಯಾರ್ಥಿಗಳು ತಮ್ಮ ಸಾಧನೆಗೆ ಅನುಗುಣವಾಗಿ ಯಶಸ್ವಿಯಾಗುತ್ತಾರೆ.
ವೃಶ್ಚಿಕ : ಗುರು 2/5 ನೆಯವನು 7 ರಲ್ಲಿ ಕೇಂದ್ರದಲ್ಲಿ ಇರುವುದು ಶುಭ ಫಲವಾಗಿದೆ .ಆಹಾರ ತೆಗೆದುಕೊಳ್ಳುವಾಗ ಎಚ್ಚರವಿರಲಿ. ಕೋಪವನ್ನು ನಿಗ್ರಹಿಸಿ ಕೊಳ್ಳುವ ಅಗತ್ಯವಿದೆ. ಶುಕ್ರ ಜನ್ಮರಾಶಿಗೆ ಬಂದಿದ್ದಾನೆ. ಮಹಿಳೆಯರ ವಿಷಯದಲ್ಲಿ ಎಚ್ಚರವಿರಬೇಕು. ರಾಜಕೀಯ ಗಣ್ಯರು ಮಾತಿನಲ್ಲಿ ಹಿಡಿತವನ್ನು ಹಿಡಿದು ಕೊಳ್ಳಬೇಕು. ಒಂದು ತಿಂಗಳ ಕಾಲ ಯಾವುದೇ ಸಂದೇಶಗಳನ್ನು ನೀಡದಿರುವುದು ಒಳ್ಳೆಯದು. ರವಿ ಮತ್ತು ಬುಧ ವ್ಯಯದಲ್ಲಿ ಇದ್ದಾರೆ .ಮಕ್ಕಳ ಬಗ್ಗೆ ಚಿಂತೆಯೊಂದು ಮನಸ್ಸಿನಲ್ಲಿ ಇರುತ್ತದೆ. ನೀವು ಸಂಗೀತ ,ನೃತ್ಯ ಕ್ರೀಡೆಯಲ್ಲಿ ತೊಡಗಿಸಿ ಕೊಂಡವರಾಗಿದ್ದಲ್ಲಿ ಪ್ರಶಸ್ತಿ ನಿಮ್ಮದಾಗಲಿದೆ .
ಧನು : ಗುರು ¼ ನೆಯವನು ವಕ್ರಿಯಾಗಿ ಪಂಚಮಕ್ಕೆ ದೃಷ್ಟಿ ಕೊಡುತ್ತಿರುವುದು ಪೂರ್ವ ಪುಣ್ಯ ಸ್ಥಾನದ ಫಲವನ್ನು ಕೊಡುತ್ತಿದ್ದಾನೆ. ಬೇಡದ ವಿಚಾರಗಳಿಗೆ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಪ್ರಯತ್ನವಿರಲಿ. ಆತುರದ ನಿರ್ಧಾರ ಬೇಡ. ಎಲ್ಲರನ್ನು ಸುಲಭವಾಗಿ ನಂಬುವ ನೀವು ಎಚ್ಚರವಾಗಿ ಇರುವುದು ಒಳ್ಳೆಯದು. ಬರುವ ಆದಾಯದಲ್ಲಿ ಕೊರತೆ ಇರುವುದಿಲ್ಲ. ಕುಟುಂಬದಲ್ಲಿ ಪರಸ್ಪರೆ ಸಹಾಯ –ಸಹಕಾರ ಸದಾ ನಿಮಗಿರುತ್ತದೆ. ಕುಜ ಅಷ್ಟಮಕ್ಕೆ ಬಂದಿದ್ದಾನೆ. ಮಕ್ಕಳ ಅನಾರೋಗ್ಯಕ್ಕೆ ಚಿಂತೆ ಇರುತ್ತದೆ. ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.
ಮಕರ : ಗುರು 12/03 ನೆಯವನು 5ನೆಯ ಮನೆಯಲ್ಲಿ ಇದ್ದಾನೆ .ಸುಖಕ್ಕೆ ಹಾನಿ ಎನ್ನಲಾಗಿದೆ . 4 ನೇ ಮನೆಗೆ ದೃಷ್ಟಿಯನ್ನು ಕೊಟ್ಟಾಗ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಶುಭವಾಗಲಿದೆ . ಕುಜ 7ನೆಯ ಮನೆಯಲ್ಲಿ ಇದ್ದಾನೆ ..ಸತಿ ಪತಿಯರ ನಡುವೆ ಹೊಂದಾಣಿಕೆ ಇರಲಿ .ಬರುತ್ತಿರುವ ಹಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮಾತಿನಲ್ಲಿ ಸತ್ಯವಿರಲಿ. ಮಾನಸಿಕ ಒತ್ತಡವಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ.
ಕುಂಭ : ಗುರು 2/11 ನೆಯವನಾಗಿದ್ದು 4 ನೇ ಮನೆಯಲ್ಲಿ ಪ್ರಸ್ತುತ ಇದ್ದು ವಕ್ರಿ ಸ್ಟಿತಿಯಲ್ಲಿ 3ನೆಯ ಮನೆಗೆ ದೃಷ್ಟಿಯನ್ನು ಕೊಟ್ಟಾಗ ಅನಿರೀಕ್ಷಿತ ಧನಾಗಮನವಾಗಲಿದೆ. ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಸಾಡೇ ಸಾತ್ ಶನಿಯ ಕಾಲವಾಗಿರುವುದರಿಂದ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತಿರುತ್ತದೆ. ಹಣ ಕಾಸಿನ ಹೊಂದಾಣಿಕೆ ನಿಮ್ಮ ಬುದ್ಧಿವಂತಿಕೆಯಲ್ಲಿ ಇರುತ್ತದೆ .ಸತಿ ಪತಿಯರ ನಡುವಿನ ವೈರುಧ್ಯತೆ ಬಗೆ ಹರಿದಿರುತ್ತದೆ. ಮಾನಸಿಕ ನೆಮ್ಮದಿ ಕಳೆದುಕೊಳ್ಳದಿರಿ. ನಿಮ್ಮ ಸಿಟ್ಟಿನ ಮನಸ್ಸು ಎಲ್ಲವನ್ನೂ ಕೆಡಿಸುತ್ತದೆ .ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಮೀನ : ಗುರು 1/10 ನೆಯವನು 3 ರಲ್ಲಿ ಇದ್ದಾನೆ 2 ನೆಯ ಮನೆಗೆ ತನ್ನ ವಕ್ರಿ ದೃಷ್ಟಿಯನ್ನು ಕೊಡುತ್ತಿದ್ದಾನೆ. ಇದು 4.02.2025 ರ ವರೆಗೆ ಇರುತ್ತದೆ .ಉದ್ಯೋಗ ಪ್ರಾಪ್ತಿ. ಆ ಮೂಲಕ ಹೇರಳ ಧನ ಪ್ರಾಪ್ತಿ ಯೋಗವಿದೆ. ಕಡಲೆ ಮತ್ತು ಹಳದಿ ಬಟ್ಟೆ ದಾನ ಮಾಡುವುದು ಪರಿಹಾರವಾಗಿರುತ್ತದೆ. ನಿಮ್ಮ ಆರೋಗ್ಯವನ್ನು ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿರಿ. ಹೊಂದಾಣಿಕೆ ಇದ್ದಲ್ಲಿ ಸಂತೋಷ ಇರುತ್ತದೆ .ಸೋತು ಗೆಲ್ಲುವುದನ್ನು ರೂಢಿಸಿಕೊಳ್ಳಿರಿ. ನಿಮ್ಮಲ್ಲಿರುವ ಅನುಮಾನದ ಪ್ರವೃತ್ತಿಯನ್ನು ನಿಲ್ಲಿಸಿರಿ. ನಾಗದೇವರ ಸೇವೆಯನ್ನು ಯಥಾ ಶಕ್ತಿ ಮಾಡಿಕೊಂಡು ಬನ್ನಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು .ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.





































