ವಾರ ಭವಿಷ್ಯ ದಿನಾಂಕ 20.04.2025 ರಿಂದ 26.04.2025 ರ ವರೆಗೆ
ಮೇಷ : ವ್ಯಯದಲ್ಲಿ ಬುಧ, ಶುಕ್ರ ,ಶನಿ , ರಾಹು ಇದ್ದು ಜನ್ಮ ರಾಶಿಯಲ್ಲಿ ರವಿ ಇರುವುದರಿಂದ ನಿಮ್ಮಲ್ಲಿ ಐಷಾರಾಮಿ ಜೀವನ ಇರಲಿದ್ದು,ಇದು ದೈಹಿಕ, ಮಾನಸಿಕ, ಪೀಡೆಗಳಿಗೆ ಕಾರಣವಾಗಲಿದೆ. ದುಂದು ವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಾಡಬೇಕಾದೀತು. ವಿವಾಹ ಯೋಗ್ಯ ವಯಸ್ಕರ ಆಯ್ಕೆ ಕಂಕಣ ಭಾಗ್ಯಕ್ಕೆ ನಾಂದಿ ಹಾಡಲಿದೆ. ಗುರುವಿನ ಅನುಗ್ರಹ ನಿಮಗಿರಲಿದೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿಮ್ಮ ವಯಕ್ತಿಕ ಜೀವನವನ್ನು ಮರೆಯಬೇಡಿರಿ. ನಿರುದ್ಯೋಗಿಗಳಿಗೆ ನಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದು ಅವಶ್ಯವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗಿ ಬರಲಿದೆ. ರವಿ ಮತ್ತು ಕುಜರಿಗೆ ಪಾರಾಯಣದ ಅವಶ್ಯಕತೆ ಹಾಗೆಯೇ ಆರೋಗ್ಯದ ಬಗ್ಗೆ ಎಚ್ಚರ ಇರುವುದು ಅಗತ್ಯವಾಗಿದೆ.
ವೃಷಭ : ವೃತ್ತಿರಂಗದಲ್ಲಿ ನಿಮ್ಮ ಅದೃಷ್ಟ ಬಲ ಹಾಗೂ ದೈವಾನುಗ್ರಹ ನಿಮ್ಮನ್ನು ಮೇಲಕ್ಕೆತ್ತಲಿದೆ. ನೀವು ಸಮಾಜದಲ್ಲಿ ಎಲ್ಲರ ನಡುವೆ ನಕ್ಷತ್ರದಂತೆ ಮಿಂಚುವ ಕಾಲವಾಗಿದೆ.ದೊಡ್ಡ ಗಣ್ಯ ವ್ಯಕ್ತಿಗಳು ನಿಮ್ಮ ಬೆನ್ನನ್ನು ತಟ್ಟಿ ಪ್ರೋತ್ಸಾಹಿಸುವ ಕಾಲ. ನೆರೆಹೊರೆಯ ಜನ ,ಬಂಧು ಬಳಗದ ಜನ ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಯಾತ್ರೆ ಮಾಡುವ ಅವಕಾಶವಿದೆ. ತಾರುಣ್ಯದ ಮಂದಿಗೆ ಉತ್ತಮ ಬಾಳ ಸಂಗಾತಿಯೊಂದಿಗೆ ವೈವಾಹಿಕ ಭಾಗ್ಯ ಒದಗಿ ಬಂದೀತು. ವಿದ್ಯಾರ್ಥಿಗಳ ಪರಿಶ್ರಮದ ಅಭ್ಯಾಸ ಬಲಕ್ಕೆ ನಿಶ್ಚಿತವಾದ ಫಲಿತಾಂಶ ಒದಗಿ ಬರಲಿದೆ. ಸಹೋದರಿಯೊಂದಿಗೆ ಭೂಮಿ ಸಂಬಂಧವಾಗಿ ವೈಮನಸ್ಸು ಉಂಟಾಗಲಿದೆ.
ಮಿಥುನ : ಆರ್ಥಿಕ ಗಳಿಕೆ ಉತ್ತಮವಿದ್ದರೂ ಉಳಿತಾಯದ ಬಗ್ಗೆ ನಿಮ್ಮ ಲೆಕ್ಕಾಚಾರ ತಪ್ಪುವ ಸಾಧ್ಯತೆ ಇರುತ್ತದೆ. ಬಾಳಾ ಸಂಗಾತಿಯ ಹುಡುಕಾಟದ ಬಗ್ಗೆ ಆತಂಕ ಪಡುವಿರಿ. ಮೇ 14 ಬರಲಿ. ತಾಳ್ಮೆ ಇರಲಿ. ವಾಣಿಜ್ಯ ಉದ್ಯಮಿಗಳಿಗೆ, ಶಿಕ್ಷಣ ತಜ್ನರಿಗೆ ಸಾಹಿತಿ , ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಮನ್ನಣೆ ದೊರೆಯಲಿದೆ. ವಿಶೇಷವಾಗಿ ಹಿರಿಯರ ಹಳೆಯ ಕಾಲದ ನಡುವಣ ಸಂಘರ್ಷದಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯದ ತಯಾರಿ ನಡೆಯುತ್ತಿರುತ್ತದೆ. ಗುರುವಿನ ವ್ಯಯ ಸ್ಥಿತಿ ನಿಮಗೆ ಅನುಕೂಲವಾಗಿಲ್ಲ. ಸಮಾಜದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಸಹೋದರ ವರ್ಗದವರಿಗೆ ವಿದೇಶ ಯಾತ್ರೆಯ ಯೋಗ ಕೂಡಿ ಬರಲಿದೆ.
ಕರ್ಕಾಟಕ : ಭಾಗ್ಯ ಸ್ಥಾನದಲ್ಲಿ ಬುಧ, ಶನಿ, ರಾಹು, ಶುಕ್ರರು ಹಂತಹಂತವಾಗಿ ನಿಮ್ಮಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಹಿರಿಯರಿಗೆ ಸಲ್ಲಬೇಕಾದ ಗೌರವಕ್ಕೆ ಚ್ಯುತಿ ಬರ ಬಾರದು. ಆರ್ಥಿಕ ಸ್ಥಿತಿ ಯ ಉನ್ನತಿ ಕಂಡು ಬಂದರೂ ಆಕಸ್ಮಿಕ ಖರ್ಚು ವೆಚ್ಚಗಳು ಅಧಿಕ ರೂಪದಲ್ಲಿ ಕಂಡು ಬರಲಿದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ನಿಮ್ಮನ್ನು ಹಿಡುಕಿ ಕೊಂಡು ಬರಲಿದೆ. ನಿಮಗೆ ಅಚ್ಚರಿಯನ್ನು ತರಲಿದೆ.,ಸದುಪಯೋಗ ನಿಮ್ಮದಾಗಿರಲಿ. ಹಿಡಿದ ಕೆಲಸ ನಾಳೆಗೆ ಮುಂದೂಡದೆ ಇಂದೇ ಮುಗಿಸಿರಿ. ಮಾನಸಿಕ ಅಸ್ಥಿರತೆ ಮತ್ತು ಋಣಾತ್ಮಕ ಚಿಂತನೆಗಳು ಮಹಿಳೆಯರನ್ನು ಕಾಡಲಿದೆ. ಸರಕಾರಿ ಉದ್ಯೋಗ ಪ್ರಾಪ್ತಿ ಯೋಗವಿದೆ. ದೇವಿಯ ಆರಾಧನೆಯ ಅಗತ್ಯವಿದೆ.
ಸಿಂಹ : ಎಲ್ಲಾ ವಿಚಾರಗಳಲ್ಲಿ ಹಲವು ದಾರಿಗಳು,ಅವಕಾಶಗಳು ತೆರೆದು ಕೊಂಡರೂ ಆರ್ಥಿಕ ಸ್ಟಿತಿಯಲ್ಲಿ ಆಗಾಗ ಒದ್ದಾಟ ಇದ್ದೇ ಇರುತ್ತದೆ. ಅಷ್ಟಮದಲ್ಲಿ ಶನಿ , ಶುಕ್ರ, ಬುಧ ,ರಾಹು ಇರುವುದೇ ಇದಕ್ಕೆ ಕಾರಣವಾಗಿದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದನ್ನು ಮರೆಯಬೇಡಿರಿ. ಹಾಗೆಯೇ ಮಾನಸಿಕ ಭ್ರಮೆ,ಚಂಚಲ ಪ್ರವೃತ್ತಿ,ಗೋಚರಕ್ಕೆ ಬರಲಿದೆ.ಯಾವುದಕ್ಕೂ ಎಚ್ಚರಿಕೆಯ ನಡೆಯಿರಲಿ. ದೂರ ಸಂಚಾರದಲ್ಲಿ ಹೊರಡುವಾಗ ಇರುವ ಆಸಕ್ತಿ ಹಿಂತಿರುಗಿ ಬರುವಾಗ ಇರುವುದಿಲ್ಲ. ಹೋಟೆಲ್ ಉದ್ಯಮದಲ್ಲಿ ಲಾಭಾಂಶ ಹೆಚ್ಚಿದ್ದರೂ ನೌಕರ ವರ್ಗದವರ ಕೊರತೆಯಿಂದ ಕಿರಿಕಿರಿ ನೀಡಲಿದೆ. ಅಷ್ಟಮದ ಗ್ರಹರ ದೋಷದ ಪರಿಹಾರವಾಗಿ ನವಗ್ರಹ ಸ್ತೋತ್ರ ಪಾರಾಯಣವನ್ನು ಮಾಡಿರಿ.
ಕನ್ಯಾ : ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಇದ್ದಲ್ಲಿ ನಿಮ್ಮ ಮನೋಕಾಮನೆಗಳು ಪೂರೈಸಲ್ಪಡುತ್ತವೆ. ಸಪ್ತಮದಲ್ಲಿ ಇರುವ ನಾಲ್ಕು ಗ್ರಹರು ನಿಮ್ಮ ವಿಶ್ವಾಸವನ್ನು ಮನೋಬಲವನ್ನು ಪರೀಕ್ಷೆ ಮಾಡಲಿಕ್ಕಾಗಿಯೇ ಇದ್ದಾರೆ. ಅಷ್ಟಮದಲ್ಲಿ ವ್ಯಯಾಧಿಪತಿ ರವಿ ಬಂದಿರುವುದರಿಂದ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳಿರಿ. ಉಸಿರಾಟದ ತೊoದರೆ,ಎದೆ ನೋವು ಕಂಡುಬಂದರೆ ವೈದ್ಯರನ್ನು ಭೇಟಿಯಾಗಲು ಮರೆಯಬೇಡಿರಿ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ ಇದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರವಿರಲಿ. ಮದ್ಯ ಸೇವನೆ ಮಾಡುವವರು ನಿಲ್ಲಿಸುವುದು ಉತ್ತಮ. ಇದು ರವಿಯ ಅಪ್ಪಣೆಯಾಗಿದೆ. ರುದ್ರ ಪಾರಾಯಣ ಬರುವ ಸಂಕ್ರಾಂತಿಯ ವರೆಗೆ ಅತೀ ಅಗತ್ಯವಾಗಿದೆ.
ತುಲಾ : ನಿಮ್ಮ ಯಶಸ್ಸು ನಿಮ್ಮ ಧಾರ್ಮಿಕ ಭಾವನೆಯನ್ನು ಅವಲಂಭಿಸಿದೆ. ಗುರು ಅಷ್ಟಮದಲ್ಲಿ ಇದ್ದಾನೆ. ಸಂಗಾತಿಯ ಸಹಕಾರ ಒದಗಿ ಬರಲಿದೆ. ವಿವಾಹ ಆಗಲು ಬಯಸುವವರು ಮೇ 14 ರ ನಂತರ ಆಗುವುದು ಉತ್ತಮ. ವಾಹನ ಸಂಚಾರದಲ್ಲಿ ವೇಗದ ಹಿಡಿತ ,ಹೆಚ್ಚಿನ ಗಮನ ಅತೀ ಅಗತ್ಯವಾಗಿದೆ.70+ ಆಗಿರುವವರು ಊರುಗೋಲು ಮರೆಯಬೇಡಿರಿ. ರಾಜಕೀಯ ಭವಿಷ್ಯಕ್ಕೂ ಅನೇಕ ಅವಕಾಶಗಳು ಕೂಡಿಬಂದರೂ ಕಾದು ನೋಡುವ ತಂತ್ರ ಅನುಸರಿಸುವುದು ಒಳ್ಳೆಯದು. ವಿಶ್ವಾವಸು ಸಂವತ್ಸರದಲ್ಲಿ ರಾಜಕೀಯಕ್ಕೆ ಭವಿಷ್ಯವಿಲ್ಲ. ವಿದ್ಯಾರ್ಥಿಗಳಿಗೆ ಅತೀ ಪರಿಶ್ರಮ ಅಗತ್ಯವಿದೆ. ನಿಮ್ಮ ದೇಹಾರೋಗ್ಯವನ್ನು ನೀವೇ ನೋಡಿಕೊಳ್ಳುವುದು ಅಗತ್ಯವಿದೆ.
ವೃಶ್ಚಿಕ : ನಿಮ್ಮ ಮಂತ್ರ ಬಲವನ್ನುನೀವು ಹೆಚ್ಚಿಸಿ ಕೊಳ್ಳಬೇಕಿದೆ.ಮೇ 6 ರ ನಂತರ ಬುಧ ಮೇಷ ರಾಶಿಗೆ ಬಂದ ನಂತರ ಕೆಲವೊಂದು ಒಳ್ಳೆಯ ಬದಲಾವಣೆಯನ್ನು ನಿರೀಕ್ಷಿಸಬಹುದು. ಮೇ ತಿಂಗಳಲ್ಲಿಗುರು ಮತ್ತು ರಾಹು ,ಕೇತು ಗ್ರಹರ ಬದಲಾವಣೆ ಪ್ರತಿಕೂಲ ಪರಿಣಾಮವನ್ನು ನೀಡಲಿದೆ.ಗುರು ತನ್ನ ವೈರಿಯ ಮನೆಯಾದ ಬುಧನಲ್ಲಿಗೆ ಪ್ರಯಾಣ, ಅಷ್ಟಮಕ್ಕೆ ಹೋಗುವುದರಿಂದ ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.ಮಕ್ಕಳು ಅನಗತ್ಯ ವೈರತ್ವ ಸಾಧಿಸಲಿದ್ದಾರೆ.ಏಕಾಂಗಿ ಬದುಕು ಬೇಸರ ತರಲಿದೆ. ಸಂಗಾತಿಯ ಮಾತಿಗೆ ಗೌರವ ಕೊಡುವುದು ಅತೀ ಅಗತ್ಯವಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸಮಯ. ಮಾತು ತಮ್ಮ ಹಿಡಿತದಲ್ಲಿಇರಲಿ. ವಿವಾಹದ ಪ್ರಸ್ತಾಪ ಯಶಸ್ವಿಯಾಗಲಿದೆ. ಹಿತ ಶತ್ರುಗಳು ನಿಮ್ಮ ಹೆಜ್ಜೆಯ ಗುರುತನ್ನು ಗಮನಿಸುತ್ತಿರುತ್ತಾರೆ. ನಾಗ ದೇವರ ಪ್ರಾರ್ಥನೆ ಮಾಡಿರಿ .
ಧನು : ಗ್ರಹರ ಸಂಚಾರದ ಶುಭ ಅಶುಭ ಫಲಗಳ ಪೂರ್ಣ ಅನುಭವ ನಿಮಗೆ ಆಗಲಿದೆ. 4 ರಲ್ಲಿ 4 ಗ್ರಹರ ಇರುವಿಕೆಯ ಅಶುಭ ಫಲವನ್ನು ನಿಮ್ಮ ಪಾರಾಯಣದ ಬಲದಿಂದ ಬದಲಾಯಿಸಿ ಕೊಳ್ಳಬೇಕಿದೆ. ಸಂಗಾತಿಯ ಆರೋಗ್ಯದ ಕಡೆಗೆ ಗಮನವಿರಲಿ, ತಾಯಿಯವರ ಮತ್ತು ನಿಮ್ಮ ಆರೋಗ್ಯವನ್ನೂ ನೋಡಿಕೊಳ್ಳಬೇಕಿದೆ.ರವಿ ಭಾಗ್ಯಾಧಿಪತಿ ಪಂಚಮ ಸ್ಥಾನದಲ್ಲಿ,ಕುಜ ಅಷ್ಟಮದಲ್ಲಿ ,ಇರುವಾಗ ಯಾರನ್ನು ಉತ್ತಮರು ಎಂದು ಹೇಳಲಿ? ಹೊಂದಿಕೊಂಡು ಬದುಕುವುದೇ ಜೀವನದ ನಿಯಮ. ವೃತ್ತಿ ಜೀವನದಲ್ಲಿ ನಿಮ್ಮ ಕರ್ತವ್ಯಗಳನ್ನು ಮಾಡುತ್ತಾ ಸಾಗಬೇಕಿದೆ.
ಮಕರ : ಸಾಡೇ ಸಾತ್ ಶನಿಯ ಪ್ರಭಾವ ಕೊನೆಯಾಗಿದೆ. ದೇವತಾ ಅನುಗ್ರಹ ಇರುವ ನಿಮಗೆ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಹಿಡಿದ ಕೆಲಸಗಳು ಒಂದೊಂದಾಗಿ ಯಶಸ್ವಿಯಾಗಲಿದೆ. ರವಿ ಅಷ್ಟಮಾಧಿಪತಿಯಾಗಿ ಸುಖ ಸ್ಥಾನದಲ್ಲಿ ಉಚ್ಚನಾಗಿ ಇರುವಾಗ ಮನೆಕಟ್ಟುವ ,ವಾಹನ ಖರೀಧಿ ಮಾಡುವ ನಿಮ್ಮ ಕನಸು ನನಸಾಗಲಿದೆ. ಆರೋಗ್ಯದ ಕಡೆಗೆ ಗಮನವಿರಲಿ. ಮದ್ಯ ಸೇವನೆಯಿಂದ ದೂರವಿರುವುದು ಉತ್ತಮವಾಗಿದೆ. ರಾಜಕೀಯ ಗಣ್ಯರಿಗೆ ಉತ್ತಮ ಸ್ಥಾನ ಮಾನ ಒದಗಿ ಬರಲಿದೆ. ಅವಿವಾಹಿತರು ವಿವಾಹ ಭಾಗ್ಯವನ್ನು ಹೊಡಲಿದ್ದಾರೆ. ಸಂತಾನ ಭಾಗ್ಯದ ಅವಕಾಶವಿದೆ. ಸಂಗಾತಿಯೊಂದಿಗೆ ಹೊಂದಿಕೊಂಡು ಮುನ್ನೆಡಿಯಿರಿ. ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಸಮಯವಾಗಿದೆ.
ಕುಂಭ : ರಾಜಕೀಯ ಭವಿಷ್ಯ ಮುಸುಕಾದೀತು. ಸಾಡೇ ಸಾತ್ ಶನಿ ದ್ವಿತೀಯಾದಲ್ಲಿ ಬುಧ ,ಶುಕ್ರ, ರಾಹುವಿನೊಂದಿಗೆ ಇರುವುದನ್ನು ನಿಮ್ಮ ಗಮನಕ್ಕೆ ತರಲಾಗುತ್ತಿದೆ. ಆಸ್ತಿ,ಪ್ಲಾಟ್ ,ನಿವೇಶನ ಖರೀಧಿಗಾಗಿ ಧನವ್ಯಯ ಆಗಲಿದೆ.ವಿದ್ಯಾರ್ಥಿಗಳು ನಿತ್ಯವೂ ವಿಷ್ಣು ಸಹಸ್ರ ನಾಮ ಪಾರಾಯಣ ಮಾಡುವುದನ್ನು ಮರೆಯಬೇಡಿರಿ. ನಿಮ್ಮ ಮಾತಿನಲ್ಲಿ ತೂಕವಿರಲಿ. ಗೆಳೆಯರ ಬಳಗ ಉತ್ತಮವಿರಲಿ. ಕೆಲವೊಂದು ತಾಕಲಾಟ ಮುಂದುವರಿಯುತ್ತಿರುತ್ತದೆ. ವ್ಯಾಪಾರ, ವ್ಯವಹಾರಗಳಿಗೆ ವಂಚಕರ ಕೈವಾಡ ತೋರಿ ಬರಲಿದೆ. ನಿಮ್ಮ ಆರೋಗ್ಯ ಭಾಗ್ಯವನ್ನು ವರ್ಧಿಸಿಕೊಳ್ಳುವುದು ನಿಮ್ಮ ಕೈಯಲ್ಲಿರುತ್ತದೆ. ವಿಶೇಷವಾಗಿ ಬಾಳ ಸಂಗಾತಿಯೊಂದಿಗೆ ಸಹಮತವಿರಲಿ.ಕೋರ್ಟ್ ವ್ಯಾಜ್ಯದ ವಾದ-ವಿವಾದಗಳಲ್ಲಿ ಹಿನ್ನೆಡೆ ಕಾಣಲಿದೆ.
ಮೀನ : ಜನ್ಮ ರಾಶಿಯಲ್ಲಿ ಬುಧ,ಶುಕ್ರ, ಶನಿ, ರಾಹು ಇದ್ದಾರೆ. ಪಂಚಮದಲ್ಲಿ ಕುಜನಿದ್ದಾನೆ. ತೃತೀಯದಲ್ಲಿ ಗುರು ಇದ್ದಾನೆ. ಇವರ ಪ್ರತಿಕೂಲ ಪರಿಣಾಮವನ್ನು ದೂರ ಮಾಡಿಕೊಳ್ಳುವ ಜವಾಬ್ದಾರಿ ಇದೆ. ವಿವಾಹ ಅಪೇಕ್ಷಿತರಿಗೆ ಮುಂದಿನ ದಿನಗಳಲ್ಲಿ ವಿವಾಹ ನೆರವೇರಲಿದೆ. ಹಲವಾರು ಕನಸುಗಳನ್ನು ಎಡೆರಿಸಿಕೊಳ್ಳುವ ಸದವಕಾಶ ಸಿಗಲಿದೆ. ಕೋರ್ಟ್ ವಾದ-ವಿವಾದಗಳು ನಿಮ್ಮ ಪರವಾಗಿ ತೀರ್ಮಾನಗೊಳ್ಳುವ ಸಾಧ್ಯತೆಗಳಿರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯೂ ಬದಲಾವಣೆಯ ಸೂಚನೆಗಳೂ ಗೋಚರಕ್ಕೆ ಬರಲಿವೆ. ಸಪ್ತಮದಲ್ಲಿ ಕೇತು ಇರುವುದರಿಂದ ದಾಂಪತ್ಯದಲ್ಲಿ ಹೊಂದಿಕೊಂಡು ಹೋಗುವುದು ಅಗತ್ಯವಿದೆ.



























