ವಾರ ಭವಿಷ್ಯ ದಿನಾಂಕ 19.05.2024 ರಿಂದ 25.05.2024 ರ ವರೆಗೆ

Picture of RB NEWS

RB NEWS

Bureau Report

          ವಾರ ಭವಿಷ್ಯ ದಿನಾಂಕ 19.05.2024 ರಿಂದ 25.05.2024 ರ ವರೆಗೆ

ವಿಶೇಷ ದಿನಗಳು :19.05.2024: ವೃಷಭ ರಾಶಿಗೆ ಶುಕ್ರನ ಪ್ರವೇಶ

                       21.05.2024….ಶ್ರೀ ನರಸಿಂಹ ಜಯಂತಿ

                       24.05.2024…..ಪತ್ತನಾಜೆ

ಮೇಷ : ದ್ವಿತೀಯಾದಲ್ಲಿ ಶುಕ್ರ ರವಿ ಗುರು ಇದ್ದು ಇದೊಂದು ಶುಭ ಯೋಗವಾಗಿದೆ . ಗುರು ಆದಿತ್ಯ ಯೋಗ . ವ್ಯಯದಲ್ಲಿ ಕುಜ ಮತ್ತು ರಾಹು ಇರುವುದು ಮಾರಕವಾಗಿದ್ದು ನಾಗ ದೇವರನ್ನು ನಿತ್ಯ ಪ್ರಾರ್ಥನೆ ಮಾಡುವುದು ಅತೀ ಅವಶ್ಯವಾಗಿದೆ. ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ .ತಂದೆಯೊಂದಿಗೆ ಕಲಹ ಮಾಡುವುದು ಶ್ರೇಯಸ್ಕರವಲ್ಲ. ಕುಟುಂಬದ ಹಿರಿಯರ ಸಲಹೆ ಸೂಚನೆಯನ್ನು ಪಾಲಿಸಿದಲ್ಲಿ ತೊಂದರೆಯಿಂದ ಪಾರಾಗುವಿರಿ . ಸಮುದ್ರ ಸ್ನಾನದ ಯೋಗವಿದೆ . ಕುಟುಂಬದಲ್ಲಿ ನಡೆಯಬೇಕಿದ್ದ ಶುಭ ಕಾರ್ಯವೊಂದು ಮುಂದಕ್ಕೆ ಹೋಗಲಿದೆ . ಮಕ್ಕಳು ವಿದ್ಯಾಭ್ಯಾಸದಲ್ಲಿ ಒಳ್ಳೆಯ ಫಲಿತಾಂಶವನ್ನು ತರಲಿದ್ದು ನಿಮ್ಮ ಮನಸ್ಸಿಗೆ ಸಂತೋಷವನ್ನು ತರಲಿದ್ದಾರೆ  .ತಂಪಾದ ವಸ್ತುಗಳ ಸೇವನೆ ಬೇಡ .

ವೃಷಭ : ಜನ್ಮ ರಾಶಿಯಲ್ಲಿ ಶುಕ್ರ ರವಿ ಗುರು ಇರುವುದು ,ಲಾಭ ಕ್ಷೇತ್ರದಲ್ಲಿ ಕುಜ ರಾಹು ಇರುವುದರಿಂದ ,ಯೋಚಿಸಿ ,ಹಿರಿಯರ ಮಾತಿಗೆ ಮನ್ನಣೆಯನ್ನು ನೀಡಿದಲ್ಲಿ ಸರ್ವ ವಿಷಯದಲ್ಲಿ ವ್ಯವಹಾರದಲ್ಲಿ ಯಶಸ್ಸು ನಿಶ್ಚಿತವಾಗಿದೆ . ಮಾಡುತ್ತಿರುವ ಉದ್ಯೋಗದಲ್ಲಿ ಉತ್ತಮ ಲಾಭವನ್ನು ಪಡೆಯುವಿರಿ .ಭೂ ವ್ಯವಹಾರ ನಿಮಗೆ ಪ್ರಸ್ತುತ ಹೇಳಿ ಮಾಡಿಸಿದ ,ಲಾಭ ತರುವ ಉದ್ಯೋಗವಾಗಿದೆ . ವೈರಿಗಳೂ ತಾವಾಗಿಯೇ ನಿಮ್ಮ ಬಳಿ ಬಂದು ಶರಣಾಗುವ ಕಾಲ .ವಿದ್ಯಾರ್ಥಿಗಳ ಆಸೆ ಆಕಾಂಕ್ಷೆಗಳು ಕೈಗೂಡಲಿವೆ.ಸಂಗಾತಿಯಿಂದ ಉತ್ತಮ ಸಹಕಾರವನ್ನು ಪಡೆಯುವ ಸಮಯವಾಗಿದೆ . ಎಲ್ಲರನ್ನು ಅನುಮಾನ ದೃಷ್ಟಿಯಿಂದ ನೋಡುವ ನಿಮ್ಮ ಮನಸ್ಥಿತಿ ಅದು ಸರಿಯಲ್ಲ .

ಮಿಥುನ :ಬುಧ ಲಾಭ ಕ್ಷೇತ್ರದಲ್ಲಿ ಇದ್ದು ವಿದ್ಯಾರ್ಥಿಗಳು ನಿರೀಕ್ಷಿಸಿದ ಯಶಸ್ಸನ್ನು ಗಳಿಸುತ್ತಾರೆ . ಧಾರ್ಮಿಕ ಆಚರಣೆಗಳಿಗೆ ಹಣ ಖರ್ಚು ಮಾಡುವಿರಿ . ವ್ಯಯದಲ್ಲಿ ಗುರು ,ರವಿ, ಶುಕ್ರ ಇರುವುದು ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯನ್ನೂ ಕಳೆದು ಕೊಳ್ಳುವಿರಿ . ಹಣ ಕಾಸಿನ ವಿಷಯದಲ್ಲಿ ದೃಢ ನಿರ್ಧಾರ ನಿಮ್ಮಲ್ಲಿ ಇರಲಿ . ಸಹೋದರ/ಸಹೋದರಿಗೆ ನಿಮ್ಮಲ್ಲಿ ಬೇಸರ ಬರಲಿದೆ .ಮಾನಸಿಕ ಒತ್ತಡಕ್ಕೆ ,ಬೇಕಿದ್ದಲ್ಲಿ ವೈದ್ಯರ ಸಲಹೆ ಪಡೆಯಬೇಕು. ಹಿರಿಯರಿಗೆ ಎಲುಬು ,ನರ ಸಂಬಂಧಿ ಸಮಸ್ಯೆ ಕಾಡಲಿದ್ದು ಆವರ ಆರೈಕೆಯ ಜವಾಬ್ದಾರಿಯೂ ನಿಮ್ಮ ಮೇಲೆ ಬರಲಿದೆ . ನೀವು ಮಾಡುತ್ತಿರುವ ಉದ್ಯೋಗ ವ್ಯವಹಾರದಲ್ಲಿ ಅನಿಶ್ಚಿತತೆ ಕಾಡಲಿದೆ . ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದ ಬಗ್ಗೆ ಗೊಂದಲ ತಂದು ಕೊಳ್ಳಲಿದ್ದಾರೆ .

ಕರ್ಕಾಟಕ :ಲಾಭ ಕ್ಷೇತ್ರದಲ್ಲಿ ಗುರು ,ರವಿ, ಶುಕ್ರ ಬಂದಿರುವುದು ,ನಿಮ್ಮ ಜೀವನದಲ್ಲಿಯೇ ಸುವರ್ಣ ಯುಗ ಎಂದು ಹೇಳಲಾಗುತ್ತದೆ . ನೀವು ಮಾಡುತ್ತಿರುವ ಉದ್ಯೋಗದಲ್ಲಿ ಬುಧ ಬಡ್ತಿಯನ್ನು ತರಲಿದ್ದು ಎಲ್ಲೆಲ್ಲಿಯೂ ಸಂತೋಷ ಮನೆ ಮಾಡಲಿದೆ . ಅಷ್ಟಮದ ಶನಿ ,ನವಮದ ಕುಜ ರಾಹು ಸಂಸಾರದಲ್ಲಿ ಕಲಹ ಬರುವಂತೆ ಮಾಡಲಿದ್ದಾರೆ ಸತಿ ಪತಿ ,ತಂದೆ ತಾಯಿ ಇವರ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು . ಕುಟುಂಬದಲ್ಲಿ ಅಶಾಂತಿಯ ವಾತಾವರಣ ಬರದಂತೆ ಎಚ್ಚರವಹಿಸಬೇಕು ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಹೊಸ ಆಶಾಕಿರಣ ಮೂಡಿ ಬರಲಿದೆ .ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಶಿಕ್ಷಣಕ್ಕೆ ಮುನ್ನುಗ್ಗುವಿರಿ . ವಾಹನ ಚಾಲಕರು ಎಚ್ಚರದಿಂದಿರಬೇಕು .

ಸಿಂಹ :ಕರ್ಮ ಕ್ಷೇತ್ರದಲ್ಲಿ ರವಿ ,ಗುರು ,ಶುಕ್ರ ಇರುವುದು ರಾಜಕೀಯದಲ್ಲಿ ಇರುವ ಗಣ್ಯರು ಗೆಲುವು ಸಾಧಿಸಲಿದ್ದಾರೆ . ಮಾತಿನಲ್ಲಿ ಹಿಡಿತವಿರಲಿ .ಮಹಿಳೆಯರೇ ,ಎಚ್ಚರವಾಗಿರಿ .ಅಷ್ಟಮದಲ್ಲಿ ಕುಜ ರಾಹು ಇರುವುದು ಗರ್ಭಕೋಶದ ಸಮಸ್ಯೆಯನ್ನು ,ರಕ್ತಸ್ರಾವವನ್ನು ಸೂಚಿಸುತ್ತದೆ .ಹೊಟ್ಟೆನೋವನ್ನು ಸೂಚಿಸುತ್ತದೆ,ಎಚ್ಚರವಾಗಿರಿ .ಬುಧ ಭಾಗ್ಯದಲ್ಲಿ ಲಾಭಾಧಿಪತಿಯಾಗಿ ಇರುವುದರಿಂದ ತಂದೆಯವರಿಂದ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ . ಉದ್ಯೋಗದಲ್ಲಿ ,ಬದಲಾವಣೆ ,ಬಡ್ತಿ ಸಂತೋಷ ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗಲಿದೆ .ಪಿತ್ರಾರ್ಜಿತ ಆಸ್ತಿಯ ಸಮಪಾಲು ನಿಮಗೆ ಸಿಗಲಿದೆ ವಿದ್ಯಾರ್ಥಿಗಳು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುವರು .

ಕನ್ಯಾ : ಭಾಗ್ಯದಲ್ಲಿ ಗುರು ಶುಕ್ರ ರವಿ ಜೊತೆಯಾಗಿ ಇರುವುದು ನಿಮಗೆ ಶುಭ ಫಲವನ್ನು ಸೂಚಿಸುತ್ತಿದೆ.ಬೇರೆಯವರನ್ನು ಟೀಕಿಸುವ ಗೋಜಿಗೆ ಹೋಗಬೇಡಿರಿ .ಬುಧ ಅಷ್ಟಮದಲ್ಲಿರುವುದು ಶುಭ ಫಲವನ್ನು ನೀಡುತ್ತಿದ್ದಾನೆ ,ನಿರ್ಧಿಷ್ಟವಾದ ದಾರಿಯಲ್ಲಿ ಸಾಗುವ ಕಾರಣ ಯಶಸ್ವೀ ಜೀವನ ನಡೆಸುವಿರಿ .ಉತ್ತಮವಾದ ಉದ್ಯೋಗ ಪ್ರಾಪ್ತಿಯಾಗಿದೆ /ಆಗಲಿದೆ . ಶಿಕ್ಷಕರಾಗಿರುವವರು ಎಲ್ಲರ ಪ್ರಶಂಸೆಗೆ ಗುರಿಯಾಗುವರು .ರಾಜಕೀಯದಲ್ಲಿ ಪ್ರಭಾವಿವ್ಯಕ್ತಿಯಾಗಿ ಮೆರೆಯುವಿರಿ .ವಾಹನ ,ಮನೆ ಖರೀದಿ ಮಾಡುವಿರಿ .ಬರುವ  ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ .ಪತಿ ಪತ್ನಿಯರ ನಡುವೆ ವಿರಸ ಬರದಂತೆ ಬಹಳ ಎಚ್ಚರ ವಹಿಸಬೇಕು . ಸಹೋದರನ ಹೆಂಡತಿಯ ಬಗ್ಗೆ ಒಳ್ಳೆಯ ಭಾವನೆ ನಿಮ್ಮಲ್ಲಿರಲಿ .

ತುಲಾ : ಗುರು ರವಿ ಶುಕ್ರ ಅಷ್ಟಮದಲ್ಲಿ ಇದ್ದಾರೆ . ಅನಾರೋಗ್ಯವನ್ನು ,ಅಪವಾದವನ್ನು ಎದುರಿಸಲೇ ಬೇಕಾದ ಸಮಯವಾಗಿದೆ . ಗುರುವಿನ ಮಂತ್ರವನ್ನು ಪಾರಾಯಣ ಮಾಡಬೇಕು . ಆದಿತ್ಯ ಹೃದಯ ಮಂತ್ರವನ್ನು ಪಾರಾಯಣ ಮಾಡಬೇಕು .ಅನ್ಯ ಮಹಿಳೆಯರ ಬಗ್ಗೆ ಎಚ್ಚರವಾಗಿರಬೇಕು .ಬರುವ ಆದಾಯಕ್ಕೆ ತೊಂದರೆ ಇರುವುದಿಲ್ಲ. ಶನಿ ಪಂಚಮದಲ್ಲಿ ಇದ್ದಾನೆ . ಗುರು ಮೌಢ್ಯದಲ್ಲಿ ಇದ್ದಾನೆ . [2.06.2024 ರ ವರೆಗೆ ]ಶುಕ್ರನೂ ಮೌಢ್ಯದಲ್ಲಿ ಇರುವ ಸಮಯ . ಭೂಮಿಯ ವ್ಯವಹಾರಕ್ಕೆ ಹೇಳಿ ಮಾಡಿಸಿದ ಸಮಯವಾಗಿದೆ . ಪತ್ನಿಯ /ಸಂಗತಿಯ ಕಡೆಯಿಂದಲೂ ಲಾಭ ಹರಿದು ಬರಲಿದೆ .

ವೃಶ್ಚಿಕ : ಸಪ್ತಮದಲ್ಲಿ ಶುಕ್ರ ರವಿ ಗುರು ಬಂದಿದ್ದಾರೆ . ವೃಷಭ ರಾಶಿ ಶುಕ್ರನ ಮನೆ . ದೇವಿಯ ಪಾರಾಯಣ ಅಗತ್ಯವಿದೆ . ದೈವಾನುಗ್ರಹವಿದ್ದರೂ ಗುರುವಿಗೆ ಮೌಢ್ಯ ಸ್ಥಿತಿ ಇದೆ . ಗುರುವಿನ ಪಾರಾಯಣ ಅಗತ್ಯವಿದೆ .ಬುಧ 6 ನೇ ಮನೆಯಲ್ಲಿ ಲಾಭಾಧಿಪತಿಯಾಗಿ ಇರುವುದು ಆದಾಯದ ದೃಷ್ಟಿಯಲ್ಲಿ ಉತ್ತಮವಾಗಿದೆ .ಸಂಗಾತಿಯ ಹಟದ ಗುಣ ಕುಟುಂಬದಲ್ಲಿ ಅಶಾಂತಿಯನ್ನು ತರಲಿದೆ .ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ಇರುವುದೇ ಇದಕ್ಕೆ ಪರಿಹಾರವಾಗಿದೆ . ಗುರು ಮತ್ತು ಇತರ ಶುಭ ಗ್ರಹರು ವಿಧ್ಯಾರ್ಥಿಗಳು ಯಶಸ್ವಿಯಾಗುವಂತೆ ಮಾಡಲಿದ್ದಾರೆ .ಪ್ರೀತಿ ಪ್ರೇಮಕ್ಕೆ ಬಲಿಯಾಗದಿರಿ . ಬೇರೊಬ್ಬರ ಹಣಕಾಸಿನ ವಿಷಯದಲ್ಲಿ ಮಧ್ಯವರ್ತಿಯಾಗುವುದು ತೊಂದರೆಗೆ ಕಾರಣವಾಗಲಿದೆ .

ಧನು :ನಿಮಗೆ ಗುರು ಶುಕ್ರ ರವಿ ರೋಗ ಸ್ಥಾನದಲ್ಲಿ ,ವೈರಿಗಳ ಸ್ಥಾನದಲ್ಲಿ ಇದ್ದಾರೆ . ನೀವು ಉದ್ಯೋಗ ಮಾಡುವಲ್ಲಿ ಬಹಳ ಹೊಂದಾಣಿಕೆಯಿಂದ ತಾಳ್ಮೆಯಿಂದ ವರ್ತಿಸಿರಿ .ಕುಜ ಮತ್ತು ರಾಹು ಸುಖ ಸ್ಥಾನದಲ್ಲಿ ಇದ್ದಾರೆ ನಿಮ್ಮ ಆರೋಗ್ಯದ ಬಗ್ಗೆ ,ಆಹಾರದ ಬಗ್ಗೆ ಬಹಳ ಎಚ್ಚರವಹಿಸಿರಿ ಮಾಸ್ಕ್ ಧರಿಸುವುದನ್ನು ಮರೆಯಬೇಡಿರಿ . ತಂಪಾದ ,ಯಾವುದೇ ವಸ್ತುಗಳನ್ನು ಸೇವಿಸಲೇ ಬೇಡಿರಿ . ಕೇರಳದಲ್ಲಿ ಕೋರೋನ ಆರಂಭವಾಗಿದೆ . ನಿಮ್ಮ ಹಿರಿಯರ ಬಗ್ಗೆ ಮನಸ್ಸಿಗೆ ಬೇಸರವನ್ನು ತಂದು ಕೊಳ್ಳಬೇಡಿರಿ . ವಿದ್ಯಾರ್ಥಿಗಳು ಬಹಳ ಪ್ರಯತ್ನ ಪಡಬೇಕಾಗುತ್ತದೆ . ಅಮ್ಮನವರ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು . ಯಾರಿಗೂ ಕೈ ಸಾಲ ನೀಡಲು ಹೋಗಬೇಡಿರಿ .

ಮಕರ : ಸಾಡೇ ಸಾತ್ ಶನಿಗೆ [29.3.2025 ರವರೆಗೆ ] ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ . ಬರುವ  ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.ವಿದ್ಯಾರ್ಥಿಗಳು ಉದಾಸೀನ ಮಾಡದೆ ಓದುವುದರ ಕಡೆಗೆ ಗಮನ ಕೊಡುವುದು ಅತೀ ಅಗತ್ಯವಿದೆ . ಸಹೋದರ ವರ್ಗದವರ ಒಳ್ಳೆಯ ಸಹಕಾರ ಸಿಗಲಿದೆ .ರಾಜಕೀಯದಲ್ಲಿ ಇರುವವರು ಬಹಳ ಒಳ್ಳೆಯ ಅಂತರದಿಂದ ಜಯಭೇರಿ ಗಳಿಸುವರು .ಗುರು ರವಿ ಶುಕ್ರ ಜೊತೆಯಾಗಿ ಇದ್ದುಕೊಂಡು ನೀವು ಮಾಡುವ ಯಾವುದೇ ,ಉದ್ಯೋಗ ವ್ಯವಹಾರದಲ್ಲಿ ಜನ ಮೆಚ್ಚುಗೆಯನ್ನು ಗಳಿಸುವಿರಿ . ನಿಮ್ಮ ಪತ್ನಿಯ ಮಾನಸಿಕ ಒತ್ತಡದ ಸಮಸ್ಯೆ ನಿಮಗೊಂದು ಸಮಸ್ಯೆಯಾಗಿಯೇ ಕಾಡಲಿದೆ . ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ .

ಕುಂಭ :ಜನ್ಮದ ಶನಿಯ ಪ್ರಭಾವದ ಜೊತೆಗೆ ದ್ವಿತೀಯದ ಕುಜ ರಾಹು, ನಿಮ್ಮ ದುಡುಕಿನ ಮಾತಿನಿಂದ ಕುಟುಂಬದ ನೆಮ್ಮದಿ ನುಚ್ಚು ನೂರಾಗುವಂತೆ ಮಾಡಲಿದ್ದಾರೆ . ಎಲ್ಲರ ಜೊತೆಗೆ ತಾಳ್ಮೆಯಿಂದ ನಗು ಮುಖದಿಂದ ವರ್ತಿಸಿದಲ್ಲಿ ಎಲ್ಲರೂ ಸಂತೋಷ ಪಡುವರು .ಬೇರೆಯವರ ಚಾಡಿ ಮಾತುಗಳಿಗೆ ಮನ್ನಣೆಯನ್ನು ಕೊಡಬೇಡಿರಿ . ಹಣದ ಅತಿಯಾದ ಖರ್ಚು ಮನಸ್ಸಿನ ಮೇಲೆ ಒತ್ತಡವನ್ನು ತರಲಿದೆ . ಗುರು ಶುಕ್ರ ರವಿ ಸುಖ ಸ್ಥಾನದಲ್ಲಿ ಇದ್ದು ನೆಮ್ಮದಿಯೆನ್ನುವುದು ನೀವು ಮಾಡುವ ದುರ್ಗಾ ಪಾರಾಯಣದ ಮೇಲೆ ಅವಲಂಬಿತವಾಗಿದೆ . ಅಮ್ಮನವರ ಮಧು ಮೇಹ ಸಮಸ್ಯೆ ಉಲ್ಬಣ ಗೊಳ್ಳದಂತೆ ಎಚ್ಚರ ವಹಿಸಿರಿ .

ಮೀನ : ಸಾಡೇ ಸಾತ್ ಶನಿಯ ಪ್ರಭಾವದ ಜೊತೆಗೆ ಜನ್ಮ ರಾಶಿಯಲ್ಲಿ ಕುಜ ರಾಹು ಬಂದಿರುವುದು ,ಎಲ್ಲಾ ರೀತಿಯಿಂದಲೂ ಜಾಗ್ರತೆಯಿಂದ ಇರುವಂತೆ ಸೂಚನೆ ಕೊಡಲಾಗುತ್ತದೆ . ವಿಷ್ಣು ಸಹಸ್ರನಾಮ ಪಾರಾಯಣ ,ಲಲಿತಾ ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ ,ಬಿಪಿ ಇದೆಯಾ ಎಂದು ನಿಮ್ಮ ಪ್ರಾಯಕ್ಕೆ ಅನುಗುಣವಾಗಿ ಪರೀಕ್ಷಿಸಿ ಕೊಳ್ಳಿರಿ .ವಿದ್ಯಾರ್ಥಿಗಳು ಓದುವುದನ್ನೇ ಮರೆತ ಹಾಗಿದೆ . ಮುಂದಿನ ಕೋರ್ಸ್ ಆಯ್ಕೆ ಮಾಡುವಾಗ ತಿಳಿದವರ ಅನುಭವ ಪಡೆಯಿರಿ .ಹಣದ ವ್ಯವಸ್ಥೆ ಹದಗೆಡದಂತೆ ಎಚ್ಚರವಹಿಸಿರಿ .ಒಮ್ಮೆಲೇ ಬರುವ ಸಿಟ್ಟು ನಿಮ್ಮ ಒಳ್ಳೆಯತನವನ್ನು ಮರೆಯಾಗುವಂತೆ ಮಾಡಲಿದೆ . ನಾಗದೇವರ ಪ್ರಾರ್ಥನೆ ಮಾಡುತ್ತಾ ಬನ್ನಿರಿ .

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು . ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top