





ವಾರ ಭವಿಷ್ಯ ದಿನಾಂಕ 19.01.2025 ರಿಂದ 25.01.2025 ರ ವರೆಗೆ
ವಿಶೇಷ ದಿನಗಳು
21.01.2025 ಕುಜ ವಕ್ರಿಯಾಗಿ ಮಿಥುನ ರಾಶಿಗೆ ಪ್ರವೇಶ
24.01.2025 ಮಕರ ರಾಶಿಗೆ ಬುಧನ ಪ್ರವೇಶ
25.01.2025….ಸರ್ವೈಕಾದಶೀ
ಮೇಷ : ಪೂರ್ಣ ಗುರು ಅನುಗ್ರಗ್ರಹ ನಿಮಗೆ ಇರುವುದರಿಂದ ನೀವು ಮಾಡುವ ಉದ್ಯೋಗ ವ್ಯವಹಾರದಲ್ಲಿ
ನಿಮ್ಮ ಸ್ಥಾನ ಮಾನ ಆದಾಯ ಹೆಚ್ಚುವುದು . ವಾಹನಗಳ ಚಾಲನೆ ಮಾಡುವಾಗ ಎಚ್ಚರ
ವಹಿಸಬೇಕು. ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ವಿಶೇಷ ಆಸಕ್ತಿಯನ್ನೂ ಹೊಂದಿ ಯಶಸ್ವಿಯಾಗುವರು.
ನೀವು ಯಾವುದೇ ಗುರಿಯನ್ನು ಇಟ್ಟುಕೊಂಡು ವ್ಯವಹಾರ ಮಾಡಿದಾಗ ತಮ್ಮ ಗುರಿಯನ್ನು ಸಾಧಿಸುವಿರಿ.
ನಿಮ್ಮ ಆರೋಗ್ಯದಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳು ಹತೋಟಿಗೆ ಬರಲಿದೆ. ಬುಧ ಮಕರ ರಾಶಿಗೆ,
ಕುಜ ಮಿಥುನ ರಾಶಿಗೆ ಶುಕ್ರ ಮೀನ ರಾಶಿಗೆ ಬರುತ್ತಿರುವುದನ್ನು ನೀವು ಕಾಣಬಹುದು .ಉದ್ಯೋಗದಲ್ಲಿ
ಬಡ್ತಿ ಸಿಗುವ ಸಾಧ್ಯತೆ ಇದೆ.ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿರಿ.
ವೃಷಭ : ಬುಧ ಮಕರ ರಾಶಿಯಲ್ಲಿ ಬುಧನೊಂದಿಗೆ ಸೇರುತ್ತಿದ್ದಾನೆ. ಶುಕ್ರ ರಾಹುವಿನ ಜೊತೆಗೆ ಮೀನ
ರಾಶಿಗೆ ಬರುತ್ತಿದ್ದಾನೆ. ಕುಜ ಮಿಥುನ ರಾಶಿಗೆ ಬರುತ್ತಿದ್ದಾನೆ. ಅನೇಕ ಮೂಲಗಳಿಂದ ಧನ ಆದಾಯ
ಹರಿದು ಬರಲಿದೆ. ಎಲ್ಲರೊಂದಿಗೆ ಸಮಾಜದಲ್ಲಿ ಸೇರುವ ಅವಕಾಶ ನಿಮ್ಮದಾಗಲಿದೆ. ಎಲ್ಲಿಯೂ
ಕಲಹಕ್ಕೆ ಅವಕಾಶ ಮಾಡಿಕೊಳ್ಳಬೇಡಿರಿ. Ok, yes ,please ಈ ಶಬ್ದಗಳೇ ಈ ವಾರ ನಿಮಗೆ
ಪ್ರಯೋಜನವಾಗಲಿದೆ. ಅಹಂ ‘ನಿಂದ ಹೊರಗೆ ಬನ್ನಿರಿ. ಮಾಧ್ಯಮ ದವರಿಗೆ ,ಬಟ್ಟೆ ವ್ಯಾಪಾರಿಗಳಿಗೆ,
ಕೃಷಿಕರಿಗೆ,ಹೋಟೆಲ್ ಉದ್ಯಮದವರಿಗೆ ಭರ್ಜರಿ ಲಾಭ ಬರುವ ವಾರವಾಗಲಿದೆ. ನಿಮ್ಮ ಹಿರಿಯರ
ಆರೋಗ್ಯದ ಕಡೆಗೆ ಗಮನ ಹರಿಸುವಂತೆ ಶನಿ ತಿಳಿಸುತ್ತಿದ್ದಾನೆ.
ಮಿಥುನ : ಕುಜ ನಿಮ್ಮ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಬುಧ 8ನೇ ಮನೆಗೆ ಪ್ರವೇಶ ಮಾಡುತ್ತಾ ರವಿಯ
ಜೊತೆಗೆ ಸೇರಿಕೊಳ್ಳುತ್ತಿದ್ದಾನೆ. ಶುಕ್ರ ಮೀನ ರಾಶಿಯಲ್ಲಿ ರಾಹುವಿನ ಜೊತೆಗೆ ಸೇರಿಕೊಳ್ಳುತ್ತಿದ್ದಾನೆ.
ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯವಿದೆ. ಸೌತೆಕಾಯಿ ಸೇವನೆ ಬಹಳ ಪ್ರಯೋಜನವಾಗಲಿದೆ.
ಬೆಂಕಿ ,ಕಬ್ಬಿಣದ ಕೆಲಸದವರು ಎಚ್ಚರವಹಿಸಬೇಕು.ನಿಮ್ಮ ಕಾರ್ಯ ವೈಖರಿಯನ್ನು ನಿಮ್ಮ
ಮೇಲಧಿಕಾರಿಗಳು ಪ್ರಶಂಸೆ ಮಾಡಲಿದ್ದಾರೆ. ನೀವೊಬ್ಬ ಸಹನಾ ಮೂರ್ತಿಯಾಗಲಿದ್ದೀರಿ. ಬಹುದಿನಗಳಿಂದ
ಕೈಗೂಡದ ಕೆಲಸಗಳು ಬಹಳ ಸುಲಭದಿಂದ ಕೈಗೂಡಲಿವೆ. ರಾಜಕೀಯದಲ್ಲಿ ಇರುವವರಿಗೆ ರವಿ ಅತಿಯಾದ
ಪ್ರಯೋಜನವನ್ನು ಉಂಟು ಮಾಡಲಿದ್ದಾನೆ.
ಕರ್ಕಾಟಕ : ಶನಿಯ ಜೊತೆಗಿದ್ದ ಶುಕ್ರ ಮೀನ ರಾಶಿಗೆ ಹೋಗುತ್ತಿದ್ದಾನೆ. ವಾಹನದ ಬಳಕೆಯಲ್ಲಿ
ಎಚ್ಚರವಾಗಿರಿ. ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ಮಾರ್ಚ್ 29,2025 ರ ವರೆಗೆ
ಮುಂದುವರಿಯಲಿ. ವ್ಯಾಪಾರ ಕ್ಷೇತ್ರದಲ್ಲಿ,ವಯಕ್ತಿಕವಾಗಿ ಯಾರಿಗೂ ಸಾಲವನ್ನು ಕೊಡಬೇಡಿರಿ. ನಿಮ್ಮಉತ್ತಮವಾದ ಸಾಮಾಜಿಕ ಸೇವಾ ಭಾವನೆಯಿಂದ ಇತರ ಅನೇಕರು ಪ್ರೇರಣೆಗೆ ಒಳಗಾಗಲಿದ್ದಾರೆ. ನಿಮ್ಮ
ಹಗಲು ಕನಸು ಕಾಣುವ ಪ್ರವೃತ್ತಿಯಿಂದ ಹೊರಗೆ ಬನ್ನಿರಿ .ಶ್ರಮ ವಹಿಸಿ ಕೆಲಸ ಮಾಡಿರಿ. ಪ್ರತಿಫಲ
ಖಂಡಿತವಾಗಿಯೂ ಲಭಿಸಲಿದೆ .ಸರಕಾರಿ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ.
ಸಿಂಹ : ಶನಿಯ ಜೊತೆಗಿದ್ದ ಶುಕ್ರ ಮೀನ ರಾಶಿಗೆ ಸಂಚಾರ ಮಾಡುತ್ತಿದ್ದಾನೆ .ಪಾಲುಗಾರಿಕೆಯ
ವ್ಯವಹಾರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದರೆ ಉತ್ತಮ ಫಲ ದೊರೆಯಲಿದೆ. ಶುಕ್ರ ಅಷ್ಟಮಕ್ಕೆ
ಹೋಗುತ್ತಿರುವ ಕಾರಣ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಗಮನಕೊಡುವುದು ಅಗತ್ಯವಿದೆ.
ವಿದ್ಯಾರ್ಥಿಗಳು ಪ್ರೀತಿ ಪ್ರೇಮದ ಕಡೆಗೆ ಗಮನ ಕೊಡದಿರುವುದು ಅತೀ ಅಗತ್ಯವಾಗಿದೆ. ಆಹಾರ ಸೇವನೆಯ
ಇತಿಮಿತಿ ,ಸರಿಯಾದ ಸಮಯ ಪಾಲನೆ ಅತೀ ಅಗತ್ಯವಾಗಿದೆ. ಕಳೆದುಹೋದ ದಿನಗಳನ್ನು ಮನಸ್ಸಿಗೆ
ತಂದುಕೊಳ್ಳಬೇಡಿರಿ. ಹಳೆಯ ಚಿಂತೆಯನ್ನು ಮರೆತು ಬಾಳುವುದು ಅತೀ ಅಗತ್ಯವಿದೆ. ಲಲಿತಾ
ಸಹಸ್ರನಾಮ ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ.
ಕನ್ಯಾ : ಕುಜ ಕರ್ಮ ಸ್ಥಾನಕ್ಕೆ ಹೋಗುತ್ತಿದ್ದಾನೆ.ಸಪ್ತಮಕ್ಕೆ ಶುಕ್ರ ರಾಹುವಿನೊಂದಿಗೆ
ಸಂಯೋಗವಾಗುತ್ತಿದ್ದಾನೆ. ಬುಧ ಪಂಚಮಕ್ಕೆ ಹೋಗುತ್ತಿದ್ದಾನೆ. ಗುರು ಭಾಗದಲ್ಲಿ ಇರುವುದು ಪೂರ್ಣ
ದೈವಾನುಗ್ರಹ ಪ್ರಾಪ್ತಿಗೆ ಸಾಕ್ಷಿಯಾಗಿದೆ. ಯಾವುದೇ ಕಾರ್ಯಗಳನ್ನು ಯೋಚಿಸಿ ಮಾಡಿರಿ. ಕೌಟುಂಬಿಕವಾಗಿ
ಹೆಚ್ಚು ಜವಾಬ್ದಾರಿ ಬರಲಿದೆ. ಇತರರಿಗೆ ನೆರವು ನೀಡುವುದರಲ್ಲಿ ನೆಮ್ಮದಿ ನಿರಾಳತೆ ಹೊಂದುವಿರಿ.
ಯಾವುದೇ ಪರಿಸ್ಥಿತಿಯನ್ನುಎದುರಿಸಲು ತಯಾರಾಗಿರಿ. ನಿಮ್ಮ ವರ್ತನೆ ಸಕಾರಾತ್ಮಕವಾಗಿರಲಿ.
ಸಂಗಾತಿಯೊಂದಿಗೆ ಹೊಂದಿಕೊಂಡು ಮುನ್ನೆಡೆಯಿರಿ. ಒಂದು ಫೋನ್ ಕಾಲ್ ನಿಮ್ಮ ಜೀವನವನ್ನೇ ಏನು
ಬೇಕಾದರೂ ಬದಲಾಯಿಸಬಹುದು.
ತುಲಾ : ಸುಖ ಸ್ಥಾನಕ್ಕೆ ಬುಧ ಬರುತ್ತಿದ್ದಾನೆ. ನಿಮ್ಮ ಮನೆ ,ವಾಹನ ಭೂಮಿ ಕೊಳ್ಳುವ ಕನಸು
ನನಸಾಗಲಿದೆ. ಕೆಲವೊಂದು ವಿಷಯಗಳಲ್ಲಿ ಮನಸ್ಸನ್ನು ಹೊಂದಿಸಿಕೊಳ್ಳಲು ತಯಾರಾಗಿರಿ. ಅದು
ಸಂತೋಷವನ್ನು ಅಥವಾ ಬೇಸರವನ್ನು ಕೊಡಬಹುದು. ಗುರು ಅಷ್ಟಮದಲ್ಲಿ ಇದ್ದಾನೆ. ಶುಕ್ರ ರಾಹುವಿನ
ಜೊತೆ ಸೇರಿದಾಗ ಮೌಢ್ಯತೆಯನ್ನು ಪಡೆಯುತ್ತಾನೆ. ಗ್ರಹಣವನ್ನು ಹೊಂದುತ್ತಾನೆ. 6 ನೇ ಮನೆಯ ಗುರು
ಅಷ್ಟಮದಲ್ಲಿ ಇರುವುದರಿಂದ ಆರೋಗ್ಯದ ಕಡೆಗೆ ಗಮನವಿರಲಿ. ತಾಳ್ಮೆ ಕೆಡುವ ಸಂದರ್ಭಗಳು ಬರಲಿವೆ.
ಆಪ್ತ ಹಿತೈಷಿಗಳ ನಡುವೆ ನಿಷ್ಠುರ ಆಗುವ ಸಾಧ್ಯತೆ ಇದೆ. ಭೂಮಿಯ ವ್ಯವಹಾರ ಮಾಡುವವರು ದಾಖಲೆ
ಪತ್ರವನ್ನುನೋಡಿಕೊಳ್ಳಿರಿ.
ವೃಶ್ಚಿಕ : ಬುಧ ತೃತೀಯದಲ್ಲಿ ರವಿಯೊಂದಿಗೆ ಸೇರಿಕೊಳ್ಳಲಿದ್ದಾನೆ. ಶುಕ್ರ ರಾಹುವಿನೊಂದಿಗೆ ಮೀನ
ರಾಶಿಗೆ ಸಂಚಾರ ಮಾಡಲಿದ್ದಾನೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಸಹೋದರ ವರ್ಗದವರ
ಬಗ್ಗೆಯೂ ಗಮನವಿರಲಿ. ಕುಜ 6ನೆಯವನು 8 ಕ್ಕೆ ಬರುತ್ತಿದ್ದಾನೆ. ಲಕ್ಷ್ಮೀ ನರಸಿಂಹ ದೇವರ ಪಾರಾಯಣ
ಮಾಡುತ್ತಾ ಬರಬೇಕು. ಕೌಟುಂಬಿಕವಾಗಿಯೂ ,ದೇಹದ ಆರೋಗ್ಯದ ಬಗ್ಗೆಯೂ ಎಚ್ಚರದಲ್ಲಿರಬೇಕು.
ಹಿತ ಶತ್ರುಗಳ ಬಗ್ಗೆ ಎಚ್ಚರ ಇರಬೇಕು. ವೃತ್ತಿ, ಅಥವಾ ವ್ಯವಹಾರ ಕ್ಷೇತ್ರಗಳಲ್ಲಿ ಒಮ್ಮಿದೊಮ್ಮೆಲೇ
ತಿರುವುಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ವಿಶಾಖ ಜ್ಯೇಷ್ಟಾ ಅನುರಾಧಾ ನಕ್ಷತ್ರದವರು ಇನ್ನೂಮುಂದಿನ ದಿನಗಳ ಸಲುವಾಗಿ ಕಡ್ಡಾಯವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಈಗದಿಂದಲೇ
ಆರಂಭಿಸಿರಿ.
ಧನು : ಮೇ 14, 2025 ರ ವರೆಗೆ ನಿಮ್ಮ ಗ್ರಹಗಳ ಚಲನೆ ನಿಮಗೆ ಅನುಕೂಲಕರವಾಗಿಲ್ಲ. ನೀವು ಶಿವ
ಸಹಸ್ರನಾಮ, ರುದ್ರ ಪಾರಾಯಣದ ಮೂಲಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಿರಿ. ಇತರರ
ಸಮಸ್ಯೆಗಳನ್ನು ಬಹಳ ಸುಲಭವಾಗಿ ಪರಿಹರಿಸುವ ನೀವು,ನಿಮ್ಮ ಬಗ್ಗೆಯೂ ಚಿಂತನೆ ನಡೆಸಿರಿ. ಕೆಲವೊಮ್ಮೆ
ನಿಮ್ಮ ಉದ್ದೇಶಗಳು ಈಡೇರದಿದ್ದರೂ ನಿರಾಶೆ ಬೇಡ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು
ನಿಮಗಾಗಿ ಕಾಯುತ್ತಿರುತ್ತದೆ. ಕೌಟುಂಬಿಕವಾಗಿ ಕೆಲವೊಂದು ಒತ್ತಡಗಳು ಬರಲಿವೆ. ಉದಾರ ಸಂಬಂಧಿ
ಸಮಸ್ಯೆಗಳು ಕಾಡಲಿವೆ. ಪಪ್ಪಾಯಿ ಹಣ್ಣು ಸೇವನೆ ನಿಮಗೆ ಅನುಕೂಲವಾಗಲಿದೆ. ಒಣ ದ್ರಾಕ್ಷಿ,ಅಂಜೂರ
ಹಣ್ಣಿನ ಸೇವನೆಯೂ [ಸಕ್ಕರೆ ಕಾಯಿಲೆ ಇರುವವರು ಬೇಡ ] ಅನುಕೂಲವಾಗಲಿದೆ.
ಮಕರ : ದ್ವಿತೀಯಾದಲ್ಲಿ ಇದ್ದ ಶುಕ್ರ ಮೀನ ರಾಶಿಗೆ ಹೋಗುತ್ತಿದ್ದಾನೆ. ಶನಿಯ ಸಾಡೇ ಸಾತ್ ಪ್ರಭಾವ
ಮತ್ತೆ ಬರಲಿದೆ. ಕುಜ 6 ನೇ ಮನೆಗೆ ಬರುತ್ತಾ ಆರೋಗ್ಯದ ಕಡೆಗೆ ಗಮನ ಕೊಡುವಂತೆ ಸೂಚನೆ
ಕೊಡುತ್ತಿದ್ದಾನೆ. ಕುಟುಂಬ ಮತ್ತು ವೃತ್ತಿಯ ನಡುವೆ ಸಮತೋಲನವಿರಲಿ. ಯಾವುದೇ ಪರಿಸ್ಟಿತಿಯ
ಅನುಕೂಲನ –ಅನಾನುಕೂಲವನ್ನು ಗಮನಿಸಿಕೊಂಡು ಮುಂದಿನ ಹೆಜ್ಜೆಯನ್ನು ಇಡುತ್ತಾ ಹೋಗಿರಿ.
ವ್ಯರ್ಥ ಖರ್ಚುಗಳು ನಡೆದು ಹೋಗಲಿವೆ. ನೀವು ನಿಮ್ಮ ಅಮೂಲ್ಯವಾದ ನಿವೃತ್ತಿಯ ನಂತರ ಬಂದ
ಹಣವನ್ನು ಬಡ್ಡಿಯ ಆಸೆಯಿಂದ ಯಾವುದೋ ವ್ಯಕ್ತಿಗಳ ಮಾತಿಗೆ ಮರುಳಾಗಿ ಕಳೆದುಕೊಳ್ಳಬೇಡಿರಿ.
ಮನೋಧೈರ್ಯ ಕಳೆದುಕೊಳ್ಳಬೇಡಿರಿ.
ಕುಂಭ : ಜನ್ಮದಲ್ಲಿ ಶನಿ ಇದ್ದಾನೆ ದ್ವಿತೀಯಾದಲ್ಲಿ ಶುಕ್ರ ರಾಹು ಇದ್ದಾರೆ. ಮಾತು ಕಡಿಮೆ ಇರಲಿ.
ಅಪವಾದ ಕೇಳುವ ಸಾಧ್ಯತೆ ಇದೆ. ಪಂಚಮಕ್ಕೆ ಕುಜನ ಪ್ರವೇಶ ವಾಗುತ್ತಿದೆ. ವ್ಯಯದಲ್ಲಿ ರವಿ ಮತ್ತು
ಬುಧ ಇರುತ್ತಾರೆ. ಕುಟುಂಬಕ್ಕೆ ಮಕ್ಕಳಿಗೆ ಮಾನ್ಯತೆ ಕೊಡುವುದನ್ನು ಮರೆಯಬೇಡಿರಿ. ಹೊರಗಿನ ಜನರಿಗೆ
ನೀವು ಒಳ್ಳೆಯವರಾಗಿರುತ್ತೀರಿ. ಮನೆಯವರಿಗೆ ಬೇಸರವನ್ನು ತರುವವರಾಗಬೇಡಿರಿ. ಯಶಸ್ಸು ಹಣ ಕೀರ್ತಿ
ಎಲ್ಲವೂ ನಿಮ್ಮ ಕಡೆಗೆ ತಮ್ಮ ದೃಷ್ಟಿಯನ್ನು ಹಾಯಿಸುತ್ತಿವೆ. ವಿಷ್ಣು ಸಹಸ್ರನಾಮ ಪಾರಾಯಣ ಇಂದು
ಅನೇಕ ಮನೆಗಳಲ್ಲಿ ಆರಂಭವಾಗಿದೆ. ಅವರಿಗೆ ಶುಭವಾಗಿದೆ.ನೀವೂ ಆರಂಭಿಸಿ. ಸುಖವಾಗಿರಿ.
ಮೀನ : ಜನ್ಮ ರಾಶಿಗೆ ಶುಕ್ರ ರಾಹುವಿನೊಂದಿಗೆ ಸೇರಲು ಬರುತ್ತಿದ್ದಾನೆ. ಅವನು ಅಷ್ಟಮಾಧಿಪತಿ. ನಿಮಗೆ
ಷುಗರ್ ಇದ್ದರೆ ಅದನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಿರಿ. ಬುಧ ಮತ್ತು ರವಿ ಲಾಭ
ಕ್ಷೇತ್ರದಲ್ಲಿ ಜೊತೆಯಾಗಲಿದ್ದಾರೆ. ಹಣದ ಗಂಟೊಂದು ನಿಮ್ಮ ಬಳಿಗೆ ಬರುವ ಸೂಚನೆ ಇದೆ. ವ್ಯಯದಲ್ಲಿ
ಶನಿ ಇದ್ದು ಅದನ್ನು ಕಸಿದು ಕೊಳ್ಳಲು ಹಿತ ಶತ್ರುಗಳು ಕಾಯುತ್ತಿರುತ್ತಾರೆ. ಶಿವ ಸಹಸ್ರನಾಮ
ಪಾರಾಯಣ ನಿತ್ಯವೂ ಮಾಡುತ್ತಾ ಬನ್ನಿರಿ. ಉದ್ಯೋಗವನ್ನು ಬದಲಾಯಿಸುವ ,ಬಿಡುವ ಸೂಚನೆ ಇದೆ.
ಎರಡು ದೋಣಿಯಲ್ಲಿ ಕಾಲು ಇಡಲು ಹೋಗಬೇಡಿರಿ. ಪ್ರಮುಖ ವಿಷಯಗಳಲ್ಲಿ ಆತುರವನ್ನು
ತೋರಿಸಿದರೆ ತೊಂದರೆ ಆಗಬಹುದು .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕ ಇಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ/ವಿವಾಹ ಹೊಂದಾಣಿಕೆಯನ್ನು
ಮಾಡಿಕೊಡಲಾಗುವುದು .







































