ವಾರ ಭವಿಷ್ಯ ದಿನಾಂಕ 18.08.2024 ರಿಂದ 24.08.2024 ರ ವರೆಗೆ
ವಿಶೇಷ ದಿನಗಳು :
19.08.2024………ಪೂರ್ಣಿಮಾ .ರುಗುಪಾಕರ್ಮ ,ಯಜುರುಪಾಕರ್ಮ ;ರಕ್ಷಾಬಂಧ
21.08.2024……….ಶ್ರೀ ರಾಘವೇಂದ್ರ ಪುಣ್ಯ ತಿಥಿ :
22.08.2024……….ಕರ್ಕಾಟಕ ರಾಶಿಗೆ ವಕ್ರಿ ಬುಧ ಗ್ರಹ ನ ಪ್ರವೇಶ.
ಸಂಕಷ್ಟಹರ ಚತುರ್ಥಿ
24.08.2024………..ಕನ್ಯಾ ರಾಶಿಗೆ ಶುಕ್ರ ಗ್ರಹನ ಪ್ರವೇಶ .
ಮೇಷ : ಈ ವಾರ ಸಂತೋಷ ,ಸಮೃದ್ಧಿಯನ್ನು ಕಾಣುವ ವಾರವಾಗಿದೆ .ರಾಶ್ಯಾಧಿಪತಿ ಕುಜ
ಗುರುವಿನೊಂದಿಗೆ ದ್ವಿತೀಯಾದಲ್ಲಿ ಇದ್ದಾನೆ .ಧನ ಸ್ಥಾನದಲ್ಲಿ ವಾಕ್ ಸ್ಥಾನದಲ್ಲಿ ಗುರು
ಇರುವುದರಿಂದ ನೀವು ನಡೆಸುವ ಯಾವುದೇ ವ್ಯವಹಾರ ಉದ್ಯೋಗ, ವ್ಯಾಪಾರ ಪ್ರಗತಿಯ ಹಾದಿಯಲ್ಲಿ
ಇರುತ್ತದೆ .ಕೆಲವೊಮ್ಮೆ ಬಂದು ತಕ್ಷಣ ಮಾಯವಾಗುವ ಸಿಟ್ಟು ಕುಜನಿಂದ ಬರಲಿದೆ .ಪರಿಹಾರವಾಗಿ “ಓಂ
ಶ್ರೀಮ್ ನಮ: ಶಿವಾಯ “ ಈ ಮಂತ್ರವನ್ನು 108 ಬಾರಿ ಪ್ರತಿನಿತ್ಯ ಹೇಳಿರಿ .ಸಕಾರಾತ್ಮಕ ಭಾವನೆಯನ್ನು
ಬೆಳೆಸಿ ಕೊಳ್ಳಿರಿ . ಧಾರ್ಮಿಕ ವಿಷಯಗಳಿಗೆ ಹಣ ಖರ್ಚು ಮಾಡುವಿರಿ .ಬುಧ ಶುಕ್ರ ,ರವಿ ನಿಮಗೆ ಶುಭ
ಫಲಫಲಗಳನ್ನೇ ನೀಡುತ್ತಾರೆ .ವಿದ್ಯಾರ್ಥಿಗಳಿಗೆ ಗುರು ಶುಭ ಫಲವನ್ನು ನೀಡಲಿದ್ದಾನೆ. ಸಂಗಾತಿಯ
ಜೊತೆಗೆ ಸಂತೋಷದ ಜೀವನ ನಡೆಸುವಿರಿ . ಲಾಭ ಕ್ಷೇತ್ರದಲ್ಲಿ ಇರುವ ಶನಿ ನಿಮ್ಮ ಪ್ರತಿಯೊಂದು
ವ್ಯವಹಾರದಲ್ಲಿ ಉತ್ತಮ ಧನ ಲಾಭವನ್ನು ನೀಡಲಿದ್ದಾನೆ.
ವೃಷಭ :ನಿಮ್ಮ ರಾಶ್ಯಾಧಿಪತಿ ಶುಕ್ರ ಸಿಂಹ ಮತ್ತು ಕನ್ಯಾ ರಾಶಿಗಳಲ್ಲಿ ಸಂಚಾರ ಮಾಡುತ್ತಿದ್ಧು ಮನಸ್ಸಿಗೆ
ನೆಮ್ಮದಿ ಬರಲಿದೆ ಬುಧ 4 ಮತ್ತು 3 ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು ನಿಮ್ಮ ಬಹಳ ಸಮಯದ
ಕನಸಾದ ಮನೆ, ವಾಹನ ,ಆಸ್ತಿ ಖರೀಧಿ ಆಸೆ ನೆರವೇರುವ ಸಮಯ ಬಂದಿದೆ .ರವಿ ಸ್ವಕ್ಷೇತ್ರದಲ್ಲಿ 4 ನೇ
ಮನೆಯಲ್ಲಿ ಇರುವುದರಿಂದ ಆರೋಗ್ಯದ ಕಡೆಗೆ ಗಮನವಿರಲಿ .ವಿದ್ಯಾರ್ಥಿಗಳು ಯಶಸ್ವಿಯಾಗುವರು. ಸ್ವಂತ ಉದ್ಯೋಗ/ಸರಕಾರಿ ಉದ್ಯೋಗ ಬಹಳ ಉತ್ತಮವಾಗಿ ನಡೆಯಲಿದೆ .ಜನ್ಮ
ರಾಶಿಯಲ್ಲಿ ಇರುವ ಕುಜ ಮತ್ತು ಗುರು ನಿಮ್ಮಲ್ಲಿ ತಾಳ್ಮೆಯ ಕೊರತೆಯನ್ನು ತೋರಿಸುತ್ತಿದ್ದಾರೆ
.ದಾಂಪತ್ಯದ ಸುಖದ ಕೊರತೆ ಸದಾ ಕಾಡುತ್ತಿರುತ್ತದೆ .ಪ್ರತಿ ನಿತ್ಯ “ಓಂ ನಮ: ಶಿವಾಯ 108 ಬಾರಿ
ಹೇಳುತ್ತಾ ಬನ್ನಿರಿ.
ಮಿಥುನ : ದಿನಾಂಕ 22 ರಂದು ಬುಧ ಕರ್ಕಾಟಕ ರಾಶಿಗೆ ,24 ರಂದು ಶುಕ್ರ ಕನ್ಯಾ ರಾಶಿಗೆ ಬರುತ್ತಿದ್ದಾನೆ
.ಜೀವನದಲ್ಲಿ ಉತ್ತಮ ಪರಿವರ್ತನೆಯ ದಿನಗಳು ಬರುತ್ತಿವೆ .ಹಣ ಅಧಿಕ ಖರ್ಚು ಆಗುವ ಲಕ್ಷಣ ಇದ್ದರೂ
ಅದು ನಿಮ್ಮ ಮನಸ್ಸನ್ನೇ ಅವಲಂಭಿಸಿರುತ್ತದೆ .ಶುಕ್ರ ನಿಮಗೆ ಪ್ರೀತಿ ಪಾತ್ರರ ಆಗಮನವನ್ನು
ಮಾಡಲಿದ್ದಾನೆ.ಕುಜ ಮತ್ತು ಗುರು ವ್ಯಯದಲ್ಲಿ ಇರುವುದರಿಂದ ಕಾಲಿಗೆ ಗಾಯವಾಗದಂತೆ ಗಮನ ಕೊಡಿರಿ
.ಗುರು ರಾಘವೇಂದ್ರ ಸ್ವಾಮೀಜಿಯವರ ಚರಿತ್ರೆ ,ಸ್ತೋತ್ರ ಓದಿರಿ. ದತ್ತಾತ್ರೇಯ ಸ್ವಾಮಿಯವರ ಚರಿತ್ರೆ ಓದಿರಿ .ವಿದ್ಯಾರ್ಥಿಗಳ ಶ್ರಮ ಸಾಕಾಗುವುದಿಲ್ಲ. ವೈರಾಗ್ಯದ ಮಾತುಗಳು ,ಭಾವನೆ ಮನಸ್ಸಿಗೆ ಬರಲಿದೆ
.”ಜಯತ್ವಮ್ ದೇವಿ ಚಾಮುಂಡೆ ಜಯ ಭೂತೋಪಹಾರಿಣಿ ,ಜಯ ಸರ್ವ ಗತೆ ದೇವಿ ಕಾಲ ರಾತ್ರಿ
ನಮೋಸ್ತುತೇ !! ಈ ಮಂತ್ರವನ್ನು 108 ಬಾರಿ ಹೇಳಿರಿ.
ಕರ್ಕಾಟಕ : ಪ್ರಸ್ತುತ ದ್ವಿತೀಯಾದಲ್ಲಿ ಶುಕ್ರ ,ರವಿ ,ಬುಧ ದಿನಾಂಕ 22 ರಂದು ಬುಧ ನಿಮ್ಮ ಜನ್ಮ ರಾಶಿಗೆ
ವಕ್ರಿಯಾಗಿ ಬರಲಿದ್ದಾನೆ .ಹಾಗೆಯೇ ದಿನಾಂಕ 24 ರಂದು ಶುಕ್ರ ತೃತೀಯಾಕ್ಕೆ ಬರಲಿದ್ದಾನೆ ಹಣ ಕಾಸಿನ
ನಿರ್ವಹಣೆ ಉತ್ತಮ ರೀತಿಯಲ್ಲಿ ಸಾಗಲಿದೆ .ಆದಾಯದಷ್ಟೇ ಖರ್ಚು ಇರಲಿದೆ ಎಂದು ಬುಧ
ತಿಳಿಸುತ್ತಿದ್ದಾನೆ .ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ .ಸಹೋದರ ವರ್ಗದವರಲ್ಲಿ ಭಿನ್ನಾಭಿಪ್ರಾಯ
ಬರದಂತೆ ಎಚ್ಚರವಹಿಸಿರಿ .ನಿಮಗೆ ಅನೇಕ ಹೊಸ ಅವಕಾಶಗಳು ಬರಲಿವೆ .ಗುರು ಮತ್ತು ಕುಜ ನಿಮ್ಮ
ಗೌರವ ಸ್ವಾಭಿಮಾನವನ್ನು ಹೆಚ್ಚಾಗುವಂತೆ ಮಾಡಲಿದ್ದಾರೆ .ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ
ಪಾರಾಯಣ ಅತ್ಯಂತ ಒಳ್ಳೆಯ ಪರಿಹಾರವಾಗಿದೆ .ಲ್ಯಾಂಡ್ ಲಿಂಕ್ಸ್ ಉತ್ತಮ ಲಾಭವನ್ನು ಕೊಡಲಿದೆ
ವಾಹನ ಚಾಲಕರೇ ಎಚ್ಚರವಾಗಿರಿ.
ಸಿಂಹ : ನೀವು ಸಿಂಹದ ಹಾಗೆ ಇರುವವರು ಅಂದರೆ ಧೈರ್ಯವಂತರು .ವಿದ್ಯಾರ್ಥಿಗಳು ಶ್ರಮ ಪಾಡಬೇಕಾಗಿದೆ
.ಉದ್ಯೋಗ ಪ್ರಾಪ್ತಿ ಯೋಗವಿದೆ .ಪ್ರಯತ್ನ ,ಅದರ ಜೊತೆಗೆ ಸಿಕ್ಕಿದ ಉದ್ಯೋಗಕ್ಕೆ ಒಮ್ಮೆ ಸೇರುವುದು
ಅತೀ ಅನಿವಾರ್ಯವಾಗಿದೆ .ಆದಿತ್ಯ ಹೃದಯ ಮಂತ್ರ ಪಾರಾಯಣ ಪ್ರಸ್ತುತ ನಿಮಗೆ ಅತ್ಯಂತ ಅಗತ್ಯವಾದ
ಪರಿಹಾರವಾಗಿದೆ .ಶನಿಗೆ ಪರಿಹಾರ ಮಾಡಿಕೊಳ್ಳಿರಿ .ಅಶ್ವತ್ಥ ವೃಕ್ಷಕ್ಕೆ ಬೆಳಗ್ಗಿನ ಜಾವದಲ್ಲಿ ಮಣ್ಣಿನ
ಹಣತೆಯಲ್ಲಿ ಎಳ್ಳೆಣ್ಣೆ ಹಾಕಿ ಉರಿಸುವುದು ಅಗತ್ಯವಾಗಿದೆ .ಮನೆಗೆ ಬೆಲೆಬಾಳುವ ವಸ್ತುಗಳು
ಬರಲಿವೆ..ನ್ಯಾಯ –ನೀತಿ -ಧರ್ಮ ದಿಂದ ಸಾಗಿರಿ .ಸಹೋದರಿಯ ಸಹಕಾರ ಸಿಗಲಿದೆ .ಕುಜ ಗುರು ನಿಮಗೆ
ಉದ್ಯೋಗವನ್ನು ನ್ಯಾಯವಾದ ರೀತಿಯಲ್ಲಿ ಒದಗಿಸುವವರು .ಮೇಲಧಿಕಾರಿಗಳ ಕಿರಿಕಿರಿ ಇದ್ದರೂ ಸ್ವಲ್ಪ
ಸಮಯ ಸಹಿಸಿಕೊಂಡು ಮುಂದುವರಿಯಿರಿ.
ಕನ್ಯಾ : ರಾಶ್ಯಾಧಿಪತಿ ಬುಧ ಲಾಭ ಕ್ಷೇತ್ರಕ್ಕೆ ದಿನಾಂಕ 22 ರಂದು ವಕ್ರಿಯಾಗಿ ಬರುತ್ತಿದ್ದಾನೆ .ಶುಭ
ಫಲವನ್ನು ಅನುಭವಿಸಲಿದ್ದೀರಿ .ಶುಕ್ರನೂ 24 ರಂದು ನಿಮ್ಮ ರಾಶಿಗೆ ಬಂದು ಶುಭ ಫಲವನ್ನು
ನೀಡಲಿದ್ದಾನೆ .ಉದ್ಯೋಗ ತಪ್ಪುವ ಸಾಧ್ಯತೆ ಇದ್ದರೂ ತಕ್ಷಣ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗಲಿದೆ
.ಧನವಂತರಾಗುವಿರಿ .ತನ್ನಲ್ಲಿ ತನಗೆ ನಂಬಿಕೆ ಅಗತ್ಯವಿದೆ .ವಿಷ್ಣು ಸಹಸ್ರನಾಮ ಪಾರಾಯಣ ಅತೀ
ಅಗತ್ಯವಾಗಿದೆ . ವಿದ್ಯಾರ್ಥಿಗಳು ಉನ್ನತ ವಿದ್ಯಾಬ್ಯಾಸ ಮಾಡುವವರು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ
.ಕುಜ ಗುರು ಭಾಗ್ಯದಲ್ಲಿ ಇದ್ದು ಇದು ನಿಮ್ಮ ಭಾಗ್ಯೋದಯದ ಕಾಲ .ಪತಿ ಪತ್ನಿ ಒಂದು ರಥದ ಎರಡು
ಚಕ್ರಗಳು ಇದ್ದಂತೆ .ಸಮಾನ ಮನಸ್ಕರಾಗಿ ಹೊಂದಿಕೊಂಡು ಮುಂದುವರಿಯಿರಿ.
ತುಲಾ : ಕುಜ ಗುರು ಅಷ್ಟಮದಲ್ಲಿ ಇದ್ದು ದೈವಾನುಗ್ರಹದ ಕೊರತೆ ಇದ್ದರೂ ಉಳಿದ ಗ್ರಹರು ಶುಭ
ಫಲವನ್ನು ಕೊಡುತ್ತಿದ್ದಾರೆ .ಲಕ್ಷ್ಮೀ ನರಸಿಂಹ ದೇವರ ಪಾರಾಯಣ ,ನಾರಾಯಣ ಹೃದಯ ಮಂತ್ರವನ್ನು
ಪಾರಾಯಣ ಮಾಡುವುದು ಒಳ್ಳೆಯ ಪರಿಹಾರವಾಗುವುದು .ದಿನಾಂಕ 24ರ ನಂತರ ವ್ಯಯಕ್ಕೆ ಬರುವ
ಶುಕ್ರನಿಗೆ ಪರಿಹಾರ ಅಗತ್ಯವಿದೆ .ಬಿಪಿ ಷುಗರ್ ಇರುವವರು ಪರೀಕ್ಷಿಸಿಕೊಳ್ಳಿರಿ .ವಿದ್ಯಾರ್ಥಿಗಳಿಗೆ ಶನಿ ಶುಭ ಫಲವನ್ನು ನೀಡಲಿದ್ದಾನೆ .ಯಾವುದೇ ಕೆಲಸ ಕೂಡಲೇ ಆಗಬೇಕು ,ಎಂಬ ನಿಮ್ಮ ಭಾವನೆ ಈ ವಾರ
ನಡೆಯುವುದಿಲ್ಲ,ನಿಧಾನವಾಗಿ ನಡೆಯಲಿದೆ ನಿಮ್ಮ ಆರೋಗ್ಯದ ಸಮಸ್ಯೆ ನಿವಾರಣೆ ಆಗಲಿದೆ .ಶತ್ರುಗಳ
ಕಾಟ ಇರುತ್ತದೆ . ಗುರುವಿನ ಅನುಗ್ರಹದ ಕೊರತೆ ಇರುವಾಗ ಹೀಗೆ ಆಗುತ್ತದೆ .ಭೂಮಿ ಖರೀಧಿ
ಮಾಡುವಾಗ ಧಾಖಲೆ ಪತ್ರವನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿರಿ.
ವೃಶ್ಚಿಕ : ನಿಮ್ಮ ಅದೃಷ್ಟದ ಸಮಯ ಈಗ ನಡೆಯುತ್ತಿದೆ .ಹೆಚ್ಚಿನ ಗ್ರಹರು ನಿಮಗೆ ಅನುಗ್ರಹ
ನೀಡುತ್ತಿದ್ದಾರೆ .ನೀವು ಮಾಡುತ್ತಿರುವ ಉದ್ಯೋಗದಲ್ಲಿ ಬಡ್ತಿ ,ಸಂಬಳ ಹೆಚ್ಚಾಗುವಿಕೆ ನಡೆಯಲಿದೆ
.ಸ್ವಂತ ಉದ್ಯೋಗ ಮಾಡುವವರಿಗೆ ,ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯಲಿದೆ .ನಿಮಗೆ
ಹಿತವೆನಿಸುಸುವ ಜೊತೆಗಾರನೊಂದಿಗೆ ವ್ಯವಹಾರ ಮಾಡಬಹುದು .ಷೇರ್ ಬಗ್ಗೆ ವ್ಯವಹಾರ ಎಚ್ಚರವಿರಲಿ
.ವಿದ್ಯಾರ್ಥಿಗಳಿಗೆ ಯಾವುದೇ ದೃಷ್ಟಿಯಿಂದ ನೋಡಿದರೂ ಶುಭ ಸಮಯವಾಗಿದೆ .ಶನಿಯೂ ದೋಷವನ್ನು
ಕೊಡುತ್ತಿಲ್ಲ. ಶುಕ್ರ ಮತ್ತು ಬುಧನ ದೃಷ್ಟಿ ಅವನಿಗಿದೆ . ನಿತ್ಯ ವಿಷ್ಣು ಸಹಸ್ರನಾಮ ಮಾಡುವ
ಕ್ರಮವನ್ನು ಆರಂಭ ಮಾಡುವುದು ಮುಂದಿನ ವರ್ಷದ ಗುರುವಿನ ಅನುಗ್ರಹಕ್ಕೆ ಅನುಕೂಲಕರವಾಗಲಿದೆ.
ಧನು : ನಿಮ್ಮ ರಾಶ್ಯಾಧಿಪತಿ ಗುರು ಸುಖಾಧಿಪತಿಯಾಗಿ 6 ನೇ ಮನೆಯಲ್ಲಿ ಇರುವುದರಿಂದ ಆರೋಗ್ಯದ
ದೃಷ್ಟಿಯಿಂದ ,ಮಾನಸಿಕ ನೆಮ್ಮದಿಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .ಕುಜ ಮತ್ತು ಗುರು
ಮಿತ್ರರಾಗಿರುವುದರಿಂದ ಹೆಚ್ಚು ಸಮಸ್ಯೆ ಆಗುವುದಿಲ್ಲ.ಬುಧ ವಕ್ರಿಯಾಗಿ ಅಷ್ಟಮಕ್ಕೆ ಬರುವುದರಿಂದ
,ಸಪ್ತಮಾಧಿಪತಿಯಾಗಿ ಇರುವುದರಿಂದ ಪತಿ ಪತ್ನಿಯರ ನಡುವೆ ಹೊಂದಾಣಿಕೆ ಇರಲಿ .ರವಿ ಭಾಗ್ಯದಲ್ಲಿ
ಇರುವುದರಿಂದ ಸ್ವಕ್ಷೇತ್ರದಲ್ಲಿ ಇರುವುದರಿಂದ ತಂದೆ ಯವರ ಬಗ್ಗೆ ತಾತ್ಸಾರ ಭಾವನೆ ಬೇಡ .ಅಹಂ ನಿಂದ
ಹೊರಗೆ ಬನ್ನಿರಿ .ಅವರ ಆರೋಗ್ಯದ ಬಗ್ಗೆ ಗಮನ ಅಗತ್ಯ. ಮೇಲಧಿಕಾರಿಗಳೊಂದಿಗೆ ನೌಕರರು
ತಾಳ್ಮೆಯಿಂದ ವರ್ತಿಸುವುದು ಅಗತ್ಯವಾಗಿದೆ . ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕಂತೆ ಫಲ ದೊರಕಲಿದೆ.
ಮಕರ : ನಿಮಗೆ 29.03.2025 ರ ವರೆಗೆ ಸಾಡೇ ಸಾತ್ ಮುಂದುವರಿಯಲಿದೆ .ಕೊನೆಯ ಹಂತ . ಶನಿಗೆ
ರವಿಯ ದೃಷ್ಟಿಇರುತ್ತದೆ .ಪತ್ನಿಯೊಂದಿಗೆ ಹೊಂದಾಣಿಕೆಯ ಜೀವನವಿರಲಿ .ಹಣದ ವ್ಯವಹಾರದ ಬಗ್ಗೆ
ಎಚ್ಚರವಿರಲಿ . ದಿನಾಂಕ 24 ರ ನಂತರ ಶುಕ್ರನ ಅನುಗ್ರಹ ದೊರೆಯಲಿದೆ .ಬುಧನಿಗೆ ಪರಿಹಾರವಾಗಿ
ನಾರಾಯಣ ಹೃದಯ ಮಂತ್ರವನ್ನು ಪಾರಾಯಣ ಮಾಡಿರಿ .ಸಾಲ ಮಾಡುವುದಾಗಲಿ ,ಕೊಡುವುದಾಗಲಿ
,ಷೇರ್ ವ್ಯವಹಾರವಾಗಲಿ ಸದ್ಯಕ್ಕೆ ಬೇಡ . ಪಂಚಮದಲ್ಲಿ ಕುಜ ಗುರು ಜೊತೆಯಾಗಿ ಮಿತ್ರರಾಗಿ
ಇರುವುದರಿಂದ ಶುಕ್ರನ ಸಂಬಂಧ ಇರುವುದರಿಂದ ಉದ್ಯೋಗ ಪ್ರಾಪ್ತಿಯಾಗಲಿದೆ . ತಾಳ್ಮೆಯಿಂದ
ವ್ಯವಹಾರ ನಡೆಸಿರಿ.
ಕುಂಭ : ಶನಿ ಜನ್ಮ ರಾಶಿಯಲ್ಲಿ ಇದ್ದರೂ ಉಳಿದ ಗ್ರಹರ ಶುಭ ಫಲದಿಂದ ಎಲ್ಲವೂ ಶುಭವಾಗಲಿದೆ
.ಸ್ವಕ್ಷೇತ್ರದಲ್ಲಿ ಶನಿ ಇದ್ದಾಗ ರಾಜ ಸಮಾನನು.ಶಶ ಯೋಗ ಕಾರಕ ನಾಗುತ್ತಾನೆ .ಅದೃಷ್ಟ
ಕೊಡುವವನಾಗುತ್ತಾನೆ .ಸಪ್ತಮದಲ್ಲಿ ರವಿ ಇದ್ದಾನೆ .ಸಂಗಾತಿಯೊಂದಿಗೆ ವೈರತ್ವ ಸಾಧನೆ ಬೇಡ .ಅಹಂ
‘ನಿಮ್ಮನ್ನು ಕಾಡಲಿದೆ .ಮನೆ,ಭೂಮಿ ,ವಾಹನ ಕೊಳ್ಳುವ ಸಮಯ .ಕೆಲವೊಂದು ಕೋರ್ಟ್ ಕೇಸ್ ಇದ್ದರೆ ಜಯ ನಿಮ್ಮದಾಗಲಿದೆ .ಶುಕ್ರ ದಿನಾಂಕ 28 ರ ನಂತರ ಶುಭ ಫಲವನ್ನು ನಿಮಗೆ ನೀಡಲಿದ್ದಾನೆ .ಅನ್ಯ
ಅಪರಿಚಿತ ಮಹಿಳೆಯರ ಬಗ್ಗೆ ಎಚ್ಚರವಾಗಿರಿ . ಮೇ 16 ,2025 ರ ನಂತರ ನಿಮ್ಮ ಅದೃಷ್ಟ ಬದಲಾವಣೆ
ಆಗಲಿದೆ .ಓಂ ಶ್ರೀಮ್ ನಮ: ಶಿವಾಯ ಈ ಮಂತ್ರವನ್ನು 108 ಬಾರಿ ನಿತ್ಯವೂ ಹೇಳುತ್ತಾ ಬನ್ನಿರಿ
.ವಿದ್ಯಾರ್ಥಿಗಳು ಯಶಸ್ವಿಯಾಗುವರು.
ಮೀನ : ನಿಮ್ಮ ರಾಶ್ಯಾಧಿಪತಿ ಗುರು ಮತ್ತು ದ್ವಿತೀಯಾಧಿಪತಿ ಕುಜ ತೃತೀಯಾದಲ್ಲಿ ಇದ್ದಾರೆ
.ಸಹೋದರ ವರ್ಗದಲ್ಲಿ ಕಲಹ ಬರದಂತೆ ಎಚ್ಚರ ವಹಿಸಿರಿ .ಸಾಲಕ್ಕೆ ಆರ್ಜಿ ಹಾಕಿದವರಿಗೆ ಸಾಲ ಸಿಗಲಿದೆ
.ಈ ವಾರದಲ್ಲಿ ನಿಮ್ಮ ಆದಾಯವೂ ತಕ್ಕ ಮಟ್ಟಿಗೆ ಸಾಧಾರಣವಾಗಿ ಇರಲಿದೆ .ಸಾಡೇ ಸಾತ್ ಶನಿಯ
ಪ್ರಭಾವ ಇರುವುದರಿಂದ ಆದಾಯ –ಖರ್ಚು ಇದು ಸಮಾನವಾಗಿ ಸಾಗುವಂತೆ ನೋಡಿಕೊಳ್ಳಬೇಕಾಗಿದೆ
.ರವಿ 6 ನೇ ಮನೆಯಲ್ಲಿ ಇದ್ದುಕೊಂಡು ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ವಾತಾವರಣ ಇರುತ್ತದೆ
.ರಾಜಕೀಯದಲ್ಲಿ ಇರುವವರಿಗೆ ಮಾನ ಸನ್ಮಾನ ದೊರೆಯಲಿದೆ .ನಮ್ಮ ಪೂರ್ವ ಜನ್ಮದ ಪುಣ್ಯವೇ ಈ
ಜೀವನವಾಗಿರುತ್ತದೆ .ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುತ್ತದೆ .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು .ವಿವಾಹ ಹೊಂದಾಣಿಕೆ/ವಾಸ್ತು ಸಲಹೆ ತಿಳಿಸಲಾಗುವುದು.



























