ವಾರ ಭವಿಷ್ಯ ದಿನಾಂಕ 18.05.2025 ರಿಂದ 24.05.2025 ರ ವರೆಗೆ
ವಿಶೇಷ ದಿನಗಳು :18.05.2025 :ಕುಂಭ ರಾಶಿಗೆ ರಾಹು ,ಸಿಂಹ ರಾಶಿಗೆ ಕೇತುವಿನ ಪ್ರವೇಶ. 23.05.2025: ವೃಷಭ ರಾಶಿಗೆ ಬುಧನ ಪ್ರವೇಶ
24.05.2025: ಪತ್ತನಾಜೆ
ಮೇಷ : ದೈವಾನುಗ್ರಹದ ಕೊರತೆಯಲ್ಲಿರುವ ,ಸಾಡೇ ಸಾತ್ ಶನಿಯ ಪ್ರಭಾವದಲ್ಲಿ ಇರುವ ನೀವು ಮಾಡುತ್ತಿರುವ ಉದ್ಯೋಗ, ವ್ಯವಹಾರದಲ್ಲಿ ಅಡ್ಡಿ,ಆತಂಕಗಳು, ಉದ್ಯೋಗದಲ್ಲಿ ಬದಲಾವಣೆಗಳು, ಆಸ್ತಿ ಪಾಸ್ತಿಗಳಿಗೆ ಸಂಬಂಧಿಸಿದಂತೆ ತಾಪತ್ರಯಗಳು ಕಂಡುಬರಲಿವೆ. ಕುಟುಂಬದ ನೆಮ್ಮದಿ ನಿಮ್ಮ ಹಿಡಿತದಲ್ಲಿರುತ್ತದೆ.ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ,ಸದಾ ಮನಸ್ಸಿನಲ್ಲಿ ದುಗುಡ,ಮಾನಸಿಕ ಒತ್ತಡ,ಉದ್ವೇಗ ,ಕೆಲವೊಂದು ಹಗರಣಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಸದಾ ವಿಷ್ಣು ಸಹಸ್ರನಾಮ ಪಾರಾಯಣ ನಿಮ್ಮನ್ನು ಕಾಪಾಡಲಿದೆ. ಪತಿ ಪತ್ನಿಯರ ನಡುವೆ ‘ಅಹಂ ‘ ಇರುವುದರಿಂದ ಹಿರಿಯರಿಂದ ಕಾರಣವಿಲ್ಲದೆ ದೂರವಾಗುವಿರಿ. ನಿಮ್ಮ ಮನ ಸ್ಥಿತಿ ಒಂದೇ ರೀತಿ ಇರುವುದಿಲ್ಲ.
ವೃಷಭ : ಉದ್ಯೋಗ ,ವ್ಯವಹಾರಗಳು ಪ್ರಗತಿಪಥದಲ್ಲಿ ಸಾಗಲಿವೆ.ಮನೆ ಹೊಂದುವ ನಿಮ್ಮ ಕನಸು ನನಸಾಗಲಿದೆ.ವಾಹನ ಖರೀಧಿ ಮಾಡುವಿರಿ. ಉತ್ತಮ ದೈವಾನುಗ್ರಹಕ್ಕೆ ಪಾತ್ರರಾಗಿದ್ದೀರಿ. ಭೂಮಿ ವ್ಯವಹಾರ ಮಾಡುವವರು ಎಚ್ಚರವಹಿಸಿರಿ. ಕೃಷಿಕರಿಗೆ ಉತ್ತಮ ಸಮಯ. ಕೇತುವಿನ ಪ್ರತಿಕೂಲತೆಯಿಂದ ಆಗಾಗ ಅನಾರೋಗ್ಯದ ಬಗ್ಗೆ ಹೆಚ್ಚಿನ ಗಮನ ತೋರಿಸಬೇಕಾಗಿದೆ. ಹಣದ ಹರಿವು ಮೂರು ರೀತಿಯಿಂದ ಬರಲಿದೆ. ಅದು ನ್ಯಾಯಯುತವಾಗಿರುವಂತೆ ಎಚ್ಚರವಹಿಸಿರಿ. ನಿಮ್ಮ ವ್ಯವಹಾರದ ದಾಖಲೆ ಸರಿಯಾಗಿರಲಿ. ಕಾನೂನಿಗೆ ಒಪ್ಪಿಗೆ ಯಾಗುವಂತಿರಲಿ ಸಂಬಂಧಿಕರಿಂದ,ಅನ್ಯ ಮಹಿಳೆಯರಿಂದ ಬೈಗುಳ ಕೇಳುವ ಸಾಧ್ಯತೆ ಇರುತ್ತದೆ.
ಮಿಥುನ : ಕಾಲ ಚಕ್ರ ಉರುಳುತ್ತಿದೆ. ನವಗ್ರಹರ ಮನೆ ಬದಲಾಗುತ್ತಿದೆ. ಗುರು ನಿಮ್ಮ ಜನ್ಮ ರಾಶಿಗೆ ಬಂದೇ ಬಿಟ್ಟನಲ್ಲ.ನಿಮ್ಮ ಕಷ್ಟಗಳ ಪ್ರಮಾಣದಲ್ಲಿ ಗಣನೀಯ ರೀತಿಯಲ್ಲಿ ಇಳಿಕೆ ಕಾಣಲಿದೆ.ಮುಖದಲ್ಲಿ ನಗು ಕಾಣಲು ಆರಂಭವಾಗಿದೆ. ಸಹೋದರ ವರ್ಗದವರಲ್ಲಿ ಕಿರಿಕಿರಿ ಇರುತ್ತದೆ. ಉದ್ಯೋಗದಲ್ಲಿ ಮನಸ್ಸಿಗೆ ಬೇಸರ ಒತ್ತಡ ಇರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುತ್ತಾ ಸಿಕ್ಕಿದ ಕೆಲಸಕ್ಕೆ ಸೇರಿಕೊಳ್ಳುವುದು ಉತ್ತಮವಾಗಿದೆ. ಬುದ್ಧಿ ನಾಶ ,ಧನ ನಾಶ ,ಸ್ಥಾನ ಭ್ರಂಶ ,ಬಹುಜನ ಕಲಹ ಬರುವ ಸಾಧ್ಯತೆ ಇರುವುದರಿಂದ ಎಚ್ಚರವಿರಲಿ. ಶತ್ರು ಪೀಡೆ, ಇರುತ್ತದೆ.
ಕರ್ಕಾಟಕ : ಗುರು ವ್ಯಯಕ್ಕೆ ಬಂದಿದ್ದಾನೆ. ಪ್ರವಾಸ ಮಾಡುವಾಗ ಎಚ್ಚರವಿರಲಿ. ಕುಜ ನೀಚನಾಗಿ ಜನ್ಮ ರಾಶಿಯಲ್ಲಿ ಬಂದಾಗ ಹೊಡೆತ ಗಾಯ ಬರುವ ಸಾಧ್ಯತೆ ಇದೆ . ಆರೋಗ್ಯವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಕಷ್ಟು ಪ್ರಯತ್ನ ಪಡಬೇಕಾಗಿದೆ. ಅಷ್ಟಮದಲ್ಲಿ ರಾಹು ಬಂದಾಗ ರೋಗದ ಸಾಧ್ಯತೆ ಎನ್ನಲಾಗಿದೆ.ಮಾನಸಿಕ ಒತ್ತಡ ,ನಿದ್ದೆಯ ಅಭಾವ ಇರಲಿದೆ. ವಿದ್ಯಾರ್ಥಿಗಳು ಪ್ರೀತಿ ಪ್ರೇಮಕ್ಕೆ ಒಳಗಾಗಿ ಮೊಬೈಲ್ ಚಟಕ್ಕೆ ಬೀಳುವ ಸಾಧ್ಯತೆ ಇರುತ್ತದೆ. ಸಮಸ್ಯೆಗಳು ಮೆಲಿಂದ ಮೇಲೆ ಬರುತ್ತಿರುತ್ತದೆ. ನೀವು ಮಾಡುತ್ತಿರುವ ಉದ್ಯೋಗ ,ವ್ಯವಹಾರದಲ್ಲಿ ನಿಧಾನ ಗತಿ ಇರುತ್ತದೆ. ಪ್ರತಿ ಸ್ಪರ್ಧಿಗಳು ಇದ್ದಾರೆ. ಇವರಿಂದ ಮನಸ್ಸಿಗೆ ಬೇಸರ ಬರಲಿದೆ.
ಸಿಂಹ : ಒಂದು ವರ್ಷಗಳ ಕಾಲ ಪೂರ್ಣ ದೈವಾನುಗ್ರಹ ಇರುವ ಕಾಲವಾಗಿದೆ.ಸ್ಥಾನ ಲಾಭ,ಸರ್ವ ಶುಭ ,ಧನ ಲಾಭಾಧಿ ಶುಭ ಫಲವನ್ನು ಅನುಭವಿಸುವಿರಿ. ಶನಿ ಶುಕ್ರ ಅಷ್ಟಮದಲ್ಲಿ ಶನಿಯು ಸಪ್ತಮಾಧಿಪತಿಯೂ ಆಗಿರುವುದರಿಂದ ನಿಮ್ಮ ಸಿಟ್ಟನ್ನು ಮೂಗಿನ ತುದಿಯಿಂದ ಕೆಳಗೆ ಇಳಿಸಿ ,ಪತಿ ಪತ್ನಿ ಪರಸ್ಪರ ಗೌರವಿಸಿಕೊಳ್ಳಿರಿ. ತಂದೆಯವರೊಂದಿಗೆ ಹೊಂದಿಕೊಂಡು ಮುನ್ನೆಡಿಯಿರಿ. ಉದ್ಯೋಗದಲ್ಲಿ ಭಡ್ತಿ ಯೋಗವಿದೆ. ವರ್ಗಾವಣೆಯ ಯೋಗವಿದೆ.ಎಲ್ಲಾ ದೋಷಗಳಿಗೆ ಪರಿಹಾರ ಗುರುವಿನಿಂದ ಸಿಗಲಿದೆ. ತಾಳ್ಮೆ ,ಸಹನೆ ,ಹೊಂದಾಣಿಕೆ ಈ ಮೂರು ಮಂತ್ರಗಳು ನಿಮಗೆ ಅಗತ್ಯವಾಗಿದೆ. ವಾಹನ ಚಾಲಕರು ಎಚ್ಚರವಹಿಸಿರಿ. ಹೊಟ್ಟೆನೋವಿನ ಸಮಸ್ಯೆ ಬರಲಿದೆ.
ಕನ್ಯಾ : ಗುರು ಕರ್ಮ ಸ್ಥಾನಕ್ಕೆ ಬಂದಿದ್ದಾನೆ. ಸ್ಥಾನ ಲಾಭ,ಸರ್ವ ಶುಭ ,ಧನ ಲಾಭಾದಿ ಸುಖ ಫಲವನ್ನು ಅನುಭವಿಸುವಿರಿ.ಉದ್ಯೋಗದ ಅನ್ವೇಷಣೆಯಲ್ಲಿ ಇರುವವರಿಗೆ ಒಳ್ಳೆಯ ಅವಕಾಶ. ದಾಂಪತ್ಯದಲ್ಲಿ ಕಲಹ ಬರುವ ಸಾಧ್ಯತೆ,ಯುವ ಪ್ರೇಮಿಗಳು ಎಚ್ಚರವಹಿಸಬೇಕು. ನಿಮ್ಮ ಕಲಹದಲ್ಲಿ ಇಬ್ಬರು ಸೇರಿಕೊಳ್ಳಲಿದ್ದಾರೆ. ಸಹೋದರನೊಂದಿಗೆ ಕಲಹ ಬರದಂತೆ ಎಚ್ಚರವಹಿಸಿರಿ. ನಿಮ್ಮ ಪ್ರಯತ್ನ ಬಲ,ಆತ್ಮ ವಿಶ್ವಾಸ,ಸಾಧನೆಗಳಿಂದ ಹಿತ ಶತ್ರುಗಳನ್ನೂ ಹಿಮ್ಮೆಟ್ಟುವರು. ಕುಟುಂಬದಲ್ಲಿ ಒಮ್ಮತದ ತೀರ್ಮಾನ ಅಗತ್ಯವಿದೆ. ಆರ್ಥಿಕ ಹಾನಿ ,ಸತ್ಕರ್ಮ ಅನುಷ್ಠಾನದಲ್ಲಿ ವಿಮುಖತೆ ಬಾರದಂತೆ ಎಚ್ಚರವಹಿಸಿರಿ ,ಕುಲದೇವರ ಪ್ರಾರ್ಥನೆಯನ್ನು ಮಾಡಿರಿ.
ತುಲಾ : ಗುರು ಭಾಗ್ಯಕ್ಕೆ ಬಂದು ಉತ್ತಮ ದೈವ ಬಲವನ್ನು ನೀಡುತ್ತಿದ್ದಾನೆ. ‘ಮುಟ್ಟಿದ್ದೆಲ್ಲಾ ಚಿನ್ನ’ ನೀವು ಮಾಡುವ ವ್ಯವಹಾರದಲ್ಲಿ ಪೂರ್ಣ ಯಶಸ್ಸನ್ನು ಕಾಣುವಿರಿ. ಗೃಹಕೃತ್ಯ , ಸಾಂಸಾರಿಕ ವಿಚಾರದಲ್ಲಿ ಅವಶ್ಯ ಕಾರ್ಯಗಳು ಸಕಾಲದಲ್ಲಿ ಅನಿರೀಕ್ಷಿತವೆಂಬಂತೆ ಕೈಗೂಡಲಿದೆ.ನಿಮ್ಮ ಯಾವುದೇ ಕಾರ್ಯಕ್ಷೇತ್ರದಲ್ಲಿ ಉದ್ವೇಗ ಹಸ್ತಕ್ಷೇಪಕ್ಕೆ ಎಡೆಯಾಗದಂತೆ ನೋಡಿಕೊಳ್ಳಿರಿ. ನೀಚಜನರ ಒಡನಾಟಕ್ಕೆ ಸಾಧ್ಯತೆ ಇರುವುದರಿಂದ ಆದಷ್ಟು ಜಾಗ್ರತೆ ವಹಿಸಿರಿ. ನಿಮ್ಮವರೇ ನಿಮಗೆ ಶತ್ರುಗಳಾಗದಂತೆ ನೋಡುಕೊಳ್ಳುವುದು ಅಗತ್ಯವಿದೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಿ ಬರಲಿದೆ.
ವೃಶ್ಚಿಕ : ಹೆಚ್ಚಿನ ದುಡಿಮೆ,ಪ್ರಯತ್ನ ಬಲ, ನವಗ್ರಹರ ಕಟ್ಟುನಿಟ್ಟಿನ ಜಪ ಪಾರಾಯಣ ನಿಮ್ಮನ್ನು ಮುನ್ನೆಡೆಗೆ ಕೊಂಡೊಯ್ಯಲಿದೆ. ಬಂದ ಉತ್ತಮ ಅವಕಾಶಗಳನ್ನು ಅನುಕೂಲ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಬಂದ ಹೆಚ್ಚಿನ ಕಷ್ಟ-ನಷ್ಟಗಳು ಉಪಶಮನವಾಗಲಿದೆ. ಅವಿವಾಹಿತರಿಗೆ ಕಂಕಣ ಬಲದ ಯೋಗವಿದ್ದರೂ ಅಷ್ಟಮದ ಗುರು ಅಷ್ಟೊಂದು ಸಹಕಾರ ಕೊಡುವುದಿಲ್ಲ.ಆರ್ಥಿಕ ವಿಚಾರದಲ್ಲಿ,ಆರೋಗ್ಯದ ವಿಚಾರದಲ್ಲಿ ಬಹಳ ಜಾಗ್ರತೆ ಬೇಕಾಗುತ್ತದೆ.ಸುಖ ಸ್ಥಾನದಲ್ಲಿ ಇರುವ ರಾಹು ಹಾಗೆಯೇ ಕರ್ಮ ಕ್ಷೇತ್ರದಲ್ಲಿ ಇರುವ ಕೇತು ಉದ್ಯೋಗದಲ್ಲಿ ಬದಲಾವಣೆ ಮಾಡಲು ಹೋಗುವುದು ಸರಿಯಲ್ಲ. ಅಧಿಕ ಪ್ರಸಂಗ ಮಾತಾಡುವುದನ್ನುಆದಷ್ಟು ನಿಲ್ಲಸಬೇಕು.
ಧನು : ಉತ್ತಮವಾದ ದೈವಾನುಗ್ರಹ ಪ್ರಾಪ್ತಿಯಾಗಿದೆ. ಧನ ಆಗಮನ ಉತ್ತಮವಾಗಲಿದೆ. ಸುಖ ಸ್ಥಾನದಲ್ಲಿ ಇರುವ ಶನಿ ಶುಕ್ರ ಆರೋಗ್ಯದ ಕಡೆಗೆ ಎಚ್ಚರವಾಗಿರುವಂತೆ ತಿಳಿಸುತ್ತಿದ್ದಾರೆ. ಅಷ್ಟಮದ ನೀಚ ಕುಜ ಮಕ್ಕಳ ಆರೋಗ್ಯದ ಬಗ್ಗೆ , ಅವರ ಸಿಟ್ಟಿನ ಬಗ್ಗೆ ನೀವು ಎಚ್ಚರವಾಗಿರಬೇಕು.ಬಿಪಿ ಷುಗರ್ ಇರುವವರು ಮೂಲವ್ಯಾಧಿ ಇರುವವರು ವೈದ್ಯರನ್ನು ಭೇಟಿ ಮಾಡುವ ಅವಶ್ಯಕತೆ ಇದ್ದಲ್ಲಿ ನೋಡಿಕೊಳ್ಳಿರಿ. ವಿದೇಶ ಪ್ರಯಾಣ ಯೋಗವಿದೆ. ರಾಜಕೀಯದಲ್ಲಿ ಇರುವವರಿಗೆ ಇರುವವರಿಗೆ ಉನ್ನತ ಹುದ್ದೆಗಳು ಪ್ರಾಪ್ತಿಯಾಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿಯೋಗವಿದೆ.ಕಂಕಣ ಭಾಗ್ಯ ಯೋಗ ಕೂಡಿ ಬರಲಿದೆ.
ಮಕರ : ದೈವಾನುಗ್ರಹ ಯೋಗ ಕಡಿಮೆಯಾಗಿದೆ.ಸಹೋದರನ ಅನಾರೋಗ್ಯದ ಚಿಂತೆ ಕಾಡಲಿದೆ.ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನವಿರಲಿ.ಹಿಂದಿನ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸಿರಿ. ನೀವು ಮಾಡುವ ಯಾವುದೇ ವ್ಯವಹಾರದಲ್ಲಿ,ಉದ್ಯೋಗದಲ್ಲಿ ಜವಾಬ್ದಾರಿಯಿಂದ ವರ್ತಿಸಿರಿ. ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ತೋರಿಸಿದಲ್ಲಿ ಉತ್ತಮ ಭವಿಷ್ಯವಿದೆ. ಮನಸ್ಸಿಗೆ ಶಾಂತಿ ನೆಮ್ಮದಿ ಕಂಡುಬರಲಿದೆ.ಕುಲ ದೇವರನ್ನು ಸ್ಮರಣೆ ಮಾಡುತ್ತಾ ಮುಂದುವರಿದಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಸಹೋದರ ವರ್ಗದವರಿಗೆ ಮಾನ್ಯತೆ ನೀಡಬೇಕಾಗಿದೆ.
ಕುಂಭ : ನಮ್ಮ ಜೀವನದಲ್ಲಿ ಪ್ರತಿಯೊಂದು ಶುಭ ಅಶುಭ ಕೆಲಸಗಳಿಗೆ ನಾವಾಡುವ ಮಾತೇ ಕಾರಣವಾಗಿದೆ. ದ್ವಿತೀಯಾದಲ್ಲಿ ಇರುವ ಶನಿ ಮತ್ತು ಶುಕ್ರ ಮಾತಿನಲ್ಲಿ ಕ್ರೂರತ್ವವನ್ನು ಮೂಡಿಸುತ್ತದೆ. ದೈವಾನುಗ್ರಹ ಪೂರ್ಣವಾಗಿ ಪ್ರಾಪ್ತಿಯಾಗಿದೆ.ಭೂಮಿ ವ್ಯವಹಾರದಲ್ಲಿ ಉತ್ತಮ ಆದಾಯ ಉಂಟಾಗಲಿದೆ. ಯಾರದೇ ಭೀತಿಯಿಲ್ಲದೆ ಮುಂದುವರಿಯುವಿರಿ. ಉತ್ತಮ ದಾಂಪತ್ಯ ಸುಖವನ್ನು ಅನುಭವಿಸುವಿರಿ. ಸಂಚರಿಸಲು ಉತ್ತಮವಾದ ವಾಹನ ,ವಾಸಿಸಲು ಉತ್ತಮವಾದ ಮನೆ ,ಸಂತೋಷದಿಂದ ಮಾತನಾಡುವ ಪತ್ನಿಯಿರಲು ಇನ್ನೇನು ಬೇಕು?ಅನುಮಾನಮ್ ಪೆದ್ದ ಲಕ್ಷಣಂ “ಅನುಮಾನವನ್ನು ಬಿಟ್ಟು ಮುನ್ನೆಡೆಯಿರಿ.
ಮೀನ : ಸುಖ ಸ್ಥಾನಕ್ಕೆ ಗುರು ಬಂದಾಗ ಎಲ್ಲಿಯೂ ಸುಖ ಸಿಗುವುದಿಲ್ಲ ಎಂದು ಅರ್ಥ. ಬಂಧು ಜನರಿಂದಲೂ ನೆಮ್ಮದಿ ಸಿಗಲಾರದು. ಜನ್ಮ ರಾಶಿಯಲ್ಲಿ ಶನಿ ಶುಕ್ರನಿರಲು ,ಸಾಡೇ ಸಾತ್ ಶನಿಯ ಕಾಟವಿರಲು ಪರಿಹಾರವೆಂದರೆ ಅದು ವಿಷ್ಣು ಸಹಸ್ರನಾಮ ಪಾರಾಯಣ ಮಾತ್ರವಾಗಿದೆ. ಕುಜ ಪಂಚಮದಲ್ಲಿ ಇರುವುದರಿಂದ ಮಕ್ಕಳಿಂದ ಬೇಸರವಾಗದಂತೆ ನೋಡುಕೊಳ್ಳುವುದು ಅಗತ್ಯವಾಗಿದೆ. ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ.ಮಕ್ಕಳ ಜೊತೆಗೆ ನಾವೂ ಮಕ್ಕಳಂತೆ ವರ್ತಿಸುವುದು ಕೆಲವೊಮ್ಮೆ ಅಗತ್ಯವಾಗಿದೆ. ಉತ್ತಮವಾದ ದಾಂಪತ್ಯ ಜೀವನ ಸಿಗಲಿದೆ. ರಾಹುವಿನ ದೋಷ ಪರಿಹಾರವಾಗಿ ನಾಗದೇವರ ಪ್ರಾರ್ಥನೆ ಮಾಡಿರಿ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಯಾವುದೇ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ತಿಳಿಸಲಾಗುವುದು.





































