ವಾರ ಭವಿಷ್ಯ ದಿನಾಂಕ 17.08.2025 ರಿಂದ 23.08.2025 ರ ವರೆಗೆ
ವಿಶೇಷ ದಿನಗಳು : ದಿನಾಂಕ …20.08.2025…ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶ
ದಿನಾಂಕ …23.08.2025…ಅಮಾವಾಸ್ಯೆ
ಮೇಷ : ಈ ವಾರ ಕೆಲವೊಂದು ಗ್ರಹಗಳ ಪ್ರತಿಕೂಲತೆ ಮತ್ತು ದೈವಾನುಗ್ರಹದ ಕೊರತೆ ಇರುವುದರಿಂದ
ನೀವು ಮಾಡುವ ಉದ್ಯೋಗ/ವ್ಯವಹಾರದಲ್ಲಿ ಲಾಭಾಂಶದ ಕೊರತೆ ಕಾಣಲಿದೆ. ಇದರಿಂದ ಕುಟುಂಬದಲ್ಲಿ
ಮನಸ್ತಾಪ ಬರುವ ಸಾಧ್ಯತೆ ಇರುತ್ತದೆ. ತಾಳ್ಮೆ –ಸಹನೆ ಇದ್ದರೆ ಒಳ್ಳೆಯದು.ಸಾಮಾಜಿಕ ಚಟುವಟಿಕೆಗಳು
ನಿಮ್ಮ ಮನಸ್ಸಿಗೆ ಸಂತಸ ನೀಡಿದರೂ ಮಿಥ್ಯಾರೋಪ ಕಾಡಲಿದ್ದು ಜಾಗರೂಕರಾಗಿರಿ. ತಂದೆ
ತಾಯಿಯನ್ನೂ ದೂರವಿಡುವುದು ಸರಿಯಲ್ಲ.
ವೃಷಭ : ಈ ವಾರ ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ತೋರಿಬರಲಿದೆ. ವಾಹನ ಖರೀಧಿ,ಗೃಹ
ನಿರ್ಮಾಣ,ಭೂಮಿ ಖರೀಧಿ ದಾರರಿಗೆ ಅಧಿಕ ಧನ ವ್ಯಯವಾದರೂ ಸಮಾಧಾನವೆನಿಸಲಿದೆ.
ವ್ಯಾಪಾರ,ವ್ಯವಹಾರಗಳಲ್ಲಿ ಚೇತರಿಕೆ ಕಂಡು ಆರ್ಥಿಕ ಅಭಿವೃದ್ಧಿ ಕಂಡು ಬರಲಿದೆ. ಉದ್ಯೋಗಾಪೇಕ್ಷಿಗಳಿಗೆ
ಆಕಸ್ಮಿಕ ಉದ್ಯೋಗ ಲಾಭ ಒದಗಿ ಬರಲಿದೆ. ಹಿಂದಿನ ಕೆಲಸ ಕಾರ್ಯಗಳ ಬಗ್ಗೆ ಸಿಂಹಾವಲೋಕನ
ಅಗತ್ಯವಿದೆ. ಹಿರಿಯರ ಬಗ್ಗೆ ಗಮನವಿರಲಿ.
ಮಿಥುನ : ಈ ವಾರ ಮಹಿಳೆಯರಿಗೆ ಅನಾವಶ್ಯಕ ಋಣಾತ್ಮಕ ಚಿಂತನೆಗಳು ಕಾಡುವ ಸಂಭವ ಇರುತ್ತದೆ ಕುಜ
ಮತ್ತು ಮಾಂದಿ ಸುಖ ಸ್ಥಾನದಲ್ಲಿ ಇದ್ದಾರೆ. ಪುರುಷರಿಗೆ ವ್ಯಾಪಾರ ವ್ಯವಹಾರಗಳಲ್ಲಿ ವಂಚನೆ ಕಂಡು
ಬರಲಿದ್ದು ವಿಶ್ವಾಸದ ದುರುಪಯೋಗವಾಗಲಿದೆ. ಆದುದರಿಂದ ತಕ್ಕಮಟ್ಟಿಗೆ ಮಾತಿಗೆ ಮಾತು ಬೆಳೆಸದೆ
ಮೌನದಿಂದ ಕಾರ್ಯ ಸಾಧಿಸಬೇಕು. ನಿಷ್ಟುರತೆ ಒಳ್ಳೆಯದಲ್ಲ. ಹಿತ ಶತ್ರುಗಳ ಉಪಟಳವಿರುತ್ತದೆ.
ಕರ್ಕಾಟಕ : ಈ ವಾರ ನಿಮಗೆ ಆಪ್ತ ಸ್ನೇಹಿತರ ನೆರವಿನಿಂದ ಕಾರ್ಯಾನುಕೂಲವಾಗಲಿದೆ. ಕೃಷಿಕರಿಗೆ
ಮಳೆಯಿಂದ ತುಸು ನೆಮ್ಮದಿ ಕಂಡು ಬರಲಿದೆ .ಧಾರ್ಮಿಕ ವ್ಯಕ್ತಿಗಳಿಗೆ ಪುಣ್ಯ ಕ್ಷೇತ್ರ ದರ್ಶನ ಮಾಡುವ
ಯೋಗ ಕಂಡು ಬರುತ್ತಿದೆ. ಕೂಡಿಟ್ಟ ಹಣದ ವ್ಯಯದಿಂದ ಸದುಪಯೋಗವಾಗಿ ಬಂಧು ಮಿತ್ರರಿಂದ
ಪ್ರಶಂಸೆಗೆ ಒಳಗಾಗುವಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಒದಗಿ ಬರಲಿದೆ.
ಸಿಂಹ : ಈ ವಾರ ಉದ್ಯೋಗಿಗಳಿಗೆ ಕಚೇರಿ ಕೆಲಸಗಳು ಉತ್ತಮವಾಗಿ ಸಾಗಲಿದೆ.ವಿದ್ಯಾರ್ಥಿಗಳಿಗೆ ನಿರೀಕ್ಷಿತ
ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ನಿರುದ್ಯೋಗಿಗಳಿಗೆ ಅವರ ಇಚ್ಚೆಗೆ ಅನುಗುಣವಾಗಿಯೇ
ಉದ್ಯೋಗ ಲಭಿಸಲಿದೆ. ಆರೋಗ್ಯ ಭಾಗ್ಯ ಸಾವಕಾಶವಾಗಿ ಸುಧಾರಿಸಿ ತೃಪ್ತಿ ಎನಿಸಲಿದೆ. ವ್ಯಾಪಾರಿಗಳಿಗೆ
ತಕ್ಕ ಮಟ್ಟಿಗೆ ಲಾಭ ಸಿಗಲಿದೆ. ಆಕಸ್ಮಿಕ ವಿದೇಶ ಯೋಗದಿಂದ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣ
ಇರಲಿದೆ.
ಕನ್ಯಾ : ಈ ವಾರ ಅತೀ ಮಹತ್ವದ ವಿಚಾರದಲ್ಲಿ ದುಡುಕದೆ ವಿವೇಚನಾವಂತರಾಗಿ ಹೆಜ್ಜೆ ಇಡಬೇಕು.
ಹಾಗಾದಾಗ ಮಾತ್ರ ನಿಮಗೆ ಜಯವೆನಿಸುವುದು. ಬಹುದಿನಗಳಿಂದ ಕಾದು ವಿವಾಹಕ್ಕೆಸಿದ್ಧತೆಯಲ್ಲಿರುವವರಿಗೆ ಕಂಕಣಬಲ ಕೂಡಿ ಬರಲಿದೆ. ಸಾಂಸಾರಿಕವಾಗಿ ಸ್ವಲ್ಪ ಕಿರಿಕಿರಿ ಎನಿಸಿದರೂ ಸಮಾಧಾನದಿಂದ ಸುಧಾರಿಸಿಕೊಂಡು ಹೋಗುವುದು ಒಳ್ಳೆಯದು. ಮುಖ್ಯವಾಗಿ ಆತ್ಮವಿಶ್ವಾಸ, ಸ್ವಪ್ರಯತ್ನ ಬಲದಲ್ಲಿ ನಂಬಿಕೆ ಅಗತ್ಯವಿದೆ.
ತುಲಾ : ದೈವಾನುಗ್ರಹ ಇರುವ ಈ ವಾರ ಆಗಾಗ ನಿಮಗೆ ಆಕಸ್ಮಿಕ ಧನಾಗಮನದಿಂದ ಕಾರ್ಯ ಸಿದ್
ಆಗುತ್ತಾ ಮನೆಯಲ್ಲಿ ಧಾರ್ಮಿಕ ,ಶುಭ ಮಂಗಲ ಕಾರ್ಯಗಳಿಂದ ಮನಸ್ಸು
ಉಲ್ಲಸಿತಗೊಳ್ಳಲಿದೆ.ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಶೀಘ್ರ ವಿವಾಹ ನೆರವೇರಲಿದೆ.
ಎಲ್ಲದಕ್ಕೂಹಿರಿಯರ ಮಾರ್ಗದರ್ಶನದತ್ತ ಒಲವು ಇರಲಿ. ಮಕ್ಕಳ ಆರೋಗ್ಯದತ್ತ ಗಮನ ಹರಿಸಿರಿ.
ಪಂಚಮದಲ್ಲಿ ರಾಹು ಇದ್ದಾನೆ. ದುಡುಕಿನ ಪರಿಣಾಮಗಳಿಗೆ ಕಾರಣರಾಗದಿರಿ.
ವೃಶ್ಚಿಕ : ಈ ವಾರ ಆಗಾಗ ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಲಿದ್ದು ಸಂಗಾತಿಯ ಸಲಹೆಗಳಿಂದ
ಶಮನವಾಗಲಿದೆ. ಹಿತಶತ್ರುಗಳ ಕುಚೋದ್ಯದಿಂದ ನ್ಯಾಯಾಲಯದ ದರ್ಶನ ಆಗಲಿದೆ. ಸರಕಾರಿ ಕಚೇರಿ
ಕಾರ್ಯಗಳಿಂದ ಹಿನ್ನೆಡೆ ಉಂಟಾಗಿ ಬೇಸರವೆನಿಸುವುದು. ತಾಳ್ಮೆಯೇ ಇದಕ್ಕೆ ಪರಿಹಾರವಾಗಿರುತ್ತದೆ.
ವಿದ್ಯಾರ್ಥಿಗಳಿಗೆ ಯಶೋ ಲಾಭವಿರುತ್ತದೆ. ನಿರುದ್ಯೋಗಿಗಳಿಗೆ ಅನೇಕ ಅವಕಾಶಗಳು ಒದಗಿ ಬಂದು
ಉತ್ತಮ ಉದ್ಯೋಗ ಪ್ರಾಪ್ತಿಯಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ವಾರವಾಗಿದೆ.
ಧನು : ಈ ವಾರ ನಿಮಗೆ ದೂರ ಸಂಚಾರದ ಸಾಧ್ಯತೆ ಇದ್ದು ಸಾಧಕ ಭಾಧಕಗಳ ಬಗ್ಗೆ ಯೋಚಿಸಿ,
ಮುನ್ನೆಡೆಯಿರಿ. ಧಾರ್ಮಿಕ ಆಚಾರವಂತರಿಗೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಲಿವೆ. ಉದ್ಯೋಗಸ್ಥರಿಗೆ
ಹಿರಿಯ ಅಧಿಕಾರಿ ವರ್ಗದವರ ಪ್ರಚೋದನೆಯಿಂದ ಅಪವಾದ ಕಾಡಲಿದೆ. ದೇವತಾರಾಧನೆಯಿಂದ
ಪರಿಹಾರಗೊಳ್ಳಲಿದೆ. ವಿಲಾಸೀ ಜೀವನಕ್ಕಾಗಿ ಹೆಚ್ಚಿನ ಧನವ್ಯಯವಾದೀತು. ವಾಹನ ಚಾಲನೆಯಲ್ಲಿ
ಎಚ್ಚರವಿರುವಂತೆ ಶನಿ ಸೂಚನೆ ಕೊಡುತ್ತಿದ್ದಾನೆ.
ಮಕರ : ಈ ವಾರ ನೀವು ಅನಿರೀಕ್ಷಿತ ಅಚ್ಚರಿಯ ಕಾರ್ಯಸಾಧನೆ ಮಾಡಲಿದ್ದು ಮನೆಯಲ್ಲಿ ಹರ್ಷದ
ವಾತಾವರಣ ಉಂಟಾಗಲಿದೆ. ಏಜೆಂಟರು ಗುತ್ತಿಗೆದಾರರಿಗೆ ಸಕಾಲದಲ್ಲಿ ಅವರ ಪ್ರಯತ್ನಕ್ಕೆ ತಕ್ಕಂತೆ ಲಾಭ
ಒದಗಿ ಬರಲಿದೆ. ಬರಹಗಾರರು ಕಲಾವಿದರಿಗೆ ಸೂಕ್ತ ಗೌರವ ಸಂಭಾವನೆಯೊಂದಿಗೆ ಸ್ಥಾನ ಮಾನ ಕೂಡಾ
ಲಭ್ಯವಿದೆ. ಉದ್ಯೋಗಸ್ಥರಿಗೆ ಮುಂಭಡ್ತಿಯಾಗಿ ಸಂತಸವೆನಿಸಲಿದೆ. ವೈವಾಹಿಕ ಪ್ರಸ್ತಾವಗಳು
ಕಂಕಣಬಲವನ್ನು ತಂದುಕೊಡಲಿದೆ.
ಕುಂಭ : ಈ ವಾರ ನಿಮಗೆ ನಾನಾ ರೀತಿಯಿಂದ ,ನಾನಾ ಕಡೆಗಳಿಂದ ಅಧಿಕ ಖರ್ಚುಗಳು ಹುಡುಕಿಕೊಂಡು
ಬರಲಿದ್ದು,ಜಾಗ್ರತೆ ಇರಲಿ. ನಿತ್ಯದ ಕೆಲಸದಲ್ಲಿ ತುಸು ಶ್ರಮ ಎನಿಸಲಿದ್ದು ಆಗಾಗ ವೈದ್ಯರ ಸಲಹೆ
ಪಡೆದುಕೊಳ್ಳುವುದು ಉತ್ತಮ. ಆಧಾರ್ಮಿಕ ಹೆಜ್ಜೆಯಿಂದ ಪಶ್ಚಾತ್ತಾಪ ಪಡುವ ಸಂಭವವಿದ್ದು, ತುರ್ತು
ಗುರುದೇವತಾ ದರ್ಶನ ಭಾಗ್ಯ ಉತ್ತಮವೆನಿಸಲಿದೆ. ಕೆಲವೊಂದು ದುಡುಕಿನ ಕೆಲಸಗಳು ನಿಮ್ಮ
ನೆಮ್ಮದಿಯನ್ನು ಕೆಡಿಸಲಿದೆ.
ಮೀನ : ಈ ವಾರ ನಿಮಗೆ ಧನ ಆದಾಯ ಚೆನ್ನಾಗಿದ್ದು,ಹುಡುಕಿಕೊಂಡು ಬರುವ ಖರ್ಚು-ವೆಚ್ಚಗಳು
ಕೊಂಚ ಆತಂಕಕ್ಕೆ ಗುರಿಮಾಡಲಿವೆ. ಇನ್ನು ಪ್ರಭಾವದಿಂದ, ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನೆಡೆ
ತೋರಿಬಂದರೂ ವಯಕ್ತಿಕ ಸ್ಥಾನಮಾನ ಕಾಪಾಡಿಕೊಳ್ಳಲು ಯತ್ನಿಸಿರಿ. ನೂತನ ಗೃಹ ನಿರ್ಮಾಣಕ್ಕೆ,
ವಾಹನ ಖರೀದಿಗೆ ಸಕಾಲವಲ್ಲ.ರಾಜಕೀಯದವರಿಗೆ ಸ್ಥಾನ ಬಲಪಡಿಸುವ ಅವಕಾಶವಿದೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು.ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ಗಳನ್ನು
ತಿಳಿಸಲಾಗುವುದು.






































