
ವಾರ ಭವಿಷ್ಯ ದಿನಾಂಕ 16.03.2025 ರಿಂದ 22.03.2025 ರ ವರೆಗೆ
ಮೇಷ : ವ್ಯಯದಲ್ಲಿ ಶುಕ್ರ ರವಿ ರಾಹು ಬುಧ ಇರುವುದು ಸಂಸಾರದಲ್ಲಿ ಸಂಗಾತಿಯೊಂದಿಗೆ ವೈಮನಸ್ಸು ಉಂಟುಮಾಡಲಿದೆ ಸಹೋದರ ವರ್ಗದವರೊಂದಿಗೆ ಬೇಸರವನ್ನು ತರಲಿದೆ. ಮಕ್ಕಳಿಗೆ ಆರೋಗ್ಯ ಸಮಸ್ಯೆಯನ್ನು ತರಲಿದೆ. ಗುರು ದ್ವಿತೀಯಾದಲ್ಲಿ ಇರುವುದರಿಂದ ಯಾವುದೇ ತೊಂದರೆಗಳು, ನಿಮ್ಮ ಇತಿಮಿತಿಯೊಳಗೆ ಇರುತ್ತದೆ. ಭೂಮಿ ವ್ಯವಹಾರ ಮಾಡುವವರಿಗೆ ಒಳ್ಳೆಯ ಸಮಯವಾಗಿದೆ. ನಿಮ್ಮ ಕುಲ ದೇವರ ಪ್ರಾರ್ಥನೆಯನ್ನು ಮಾಡಲು ಮರೆಯ ಬೇಡಿರಿ. ಮನಸ್ಸಿನ ಬೇಸರವನ್ನು ಕಳೆಯಲು ಕಿರು ಪ್ರವಾಸವನ್ನು ಕೈಗೊಳ್ಳಿರಿ. ನೀವು ಮಾಡುವ ಯಾವುದೇ ಉದ್ಯೋಗದಲ್ಲಿ ಉತ್ಸಾಹ ಇರಲಿ. ಸಮಯದ ಹೊಂದಾಣಿಕೆ ಅಗತ್ಯವಿದೆ. ಸಾಡೇಸಾತ್ ಶನಿಯ ಪ್ರಭಾವ ದಿನಾಂಕ 29 ರಿಂದ ಆರಂಭವಾಗಲಿದೆ .
ವೃಷಭ : ಲಾಭ ಕ್ಷೇತ್ರದಲ್ಲಿ ಶುಕ್ರ,ರವಿ,ರಾಹು,ಬುಧ ಇರುವುದರಿಂದ ನೂತನ ಧನಾಗಮನದ ಅವಕಾಶಗಳು ಅನೇಕ ರೀತಿಯಲ್ಲಿ ಒದಗಿ ಬರಲಿವೆ. ಗುರು ಜನ್ಮ ರಾಶಿಯಲ್ಲಿ ಇರುವುದರಿಂದ ಅನುಕೂಲವಾಗಲಿದೆ. ಕೆಲವೊಮ್ಮೆ ಪರರಿಗೆ ಉಪಕಾರ ಮಾಡಲು ಹೋಗಿ ತೊಂದರೆಗೆ ಸಿಲುಕಿ ಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಭಡ್ತಿ ಯೋಗವಿದೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಪದವಿ ಸಿಗುವ ಅವಕಾಶವಿದೆ. ಭೂಮಿ ಅಥವಾ ಕಬ್ಬಿಣಕ್ಕೆ ಸಂಬಂಧಿಸಿದ ವ್ಯಾಪಾರವನ್ನು ನಡೆಸಿದರೆ ಲಾಭ ಬರಲಿದೆ. ವ್ಯಾಪಾರದಲ್ಲಿ ಮೋಸ ಹೋಗದಂತೆ ಎಚ್ಚರವಹಿಸಿರಿ.ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಕೇತು ಆರೋಗ್ಯಕರ ಚರ್ಚೆಯನ್ನು ನಡೆಸಲಿದ್ದಾನೆ.
ಮಿಥುನ : ರುದ್ರ ಪಾರಾಯಣ ಮಾಡಲು ಸಾಧ್ಯವಿದ್ದರೆ ವ್ಯಯದ ಗುರುವಿಗೆ ಸರಿಯಾದ ಪರಿಹಾರ ಆಗುತ್ತಿತ್ತು. ಕ್ಮೇಶ ಆಯಾಸಗಳು ಆಗಾಗ ತೋರಿಬಂದು ಅಧಿಕ ಖರ್ಚು ವೆಚ್ಚಗಳು ಕಾಣಿಸಿ ಕೊಂಡರೂ ಸಮಾನ ವೇಗದಲ್ಲಿ ಆದಾಯವೂ ಬರುವುದರಿಂದ ಸಮಸ್ಯೆ ಇರುವುದಿಲ್ಲ. ಭೂಮಿ ವ್ಯವಹಾರ ಮಾಡುವವರಿಗೆ ಉತ್ತಮ ಸಮಯವಾಗಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಂದೇ ಬಾರಿ ಹಲವು ಕಡೆಯಿಂದ ಕರೆಗಳು ಬಂದಾಗ ಗೊಂದಲ ಉಂಟಾಗಲಿದೆ. ಆಪ್ತರ ಕಾಲೋಚಿತ ಸಲಹೆಯಿಂದ ಗೊಂದಲ ನಿವಾರಣೆ ಆಗಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿದ್ಯಾರ್ಥಿಗಳು ಯಶಸ್ವಿಯಾಗುವರು. ಹಾಳು ವ್ಯಸನದ ಹಿಂದೆ ಹೋಗಬೇಡಿರಿ .
ಕರ್ಕಾಟಕ : ಮಾರ್ಚ್ 29 ರಂದು ಅಷ್ಟಮದ ಶನಿಯ ತೊಂದರೆಯಿಂದ ಮುಕ್ತಿ ಪಡೆಯುವಿರಿ. ನಿತ್ಯವೂ ವಿಷ್ಣು ಸಹಸ್ರನಾಮ ಮಂತ್ರ ಪಾರಾಯಣ ಮಾಡಿರಿ.ನಿಮ್ಮ ಬಹುದಿನದ ಆಸೆಗಳು ನೆರವೇರುವ ಸಮಯ ಹತ್ತಿರ ಬರುತ್ತಿದೆ. ಯಾವುದೇ ಧಾಖಲೆಗಳಿಗೆ ಸಹಿ ಹಾಕುವಾಗ ಎಚ್ಚರವಿರಲಿ. ಕೌಟುಂಬಿಕ ಭಿನ್ನಾಭಿಪ್ರಾಯಗಳಿದ್ದರೆ ಸರಿಪಡಿಸಿಕೊಳ್ಳಿರಿ. ನೀವು ಮಾಡುವ ಯಾವುದೇ ಉದ್ಯೋಗ /ವ್ಯವಹಾರಗಳಲ್ಲಿ ಅವಸರ ಬೇಡ. ಹತ್ತು ಹಲವು ಚಿಂತೆಗಳು ಮಾನಸಿಕ ಆರೋಗ್ಯವನ್ನು ಕೆಡಿಸುವ ಸಾಧ್ಯತೆ ಇದೆ. ಹಿರಿಯರ ಮಾತಿಗೆ ಮಾನ್ಯತೆ ಕೊಡುವುದನ್ನು ಕಲಿಯಿರಿ.ಚರ್ಮ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಸ್ಕಂದ ಪ್ರಾರ್ಥನೆಯಿಂದ ಪರಿಹಾರವಾಗಲಿದೆ.
ಸಿಂಹ : ಮಾರ್ಚ್ 29 ರಿಂದ ಎರಡೂವರೆ ವರ್ಷ ಅಷ್ಟಮದ ಶನಿಯ ಪ್ರಭಾವ ನಿಮ್ಮ ಮೇಲೆ ಇರುವುದರಿಂದ ಹನೂಮಾನ್ ಚಾಲೀಸ/ವಿಷ್ಣು ಸಹಸ್ರನಾಮ ಮಂತ್ರ ಪಾರಾಯಣ ,/ಶಿವ ಸಹಸ್ರನಾಮ ಪಾರಾಯಣ ಪಾರಾಯಣ ಮಾಡುವುದು ಅಗತ್ಯವಾಗಿದೆ. ದೇಹಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ.ಅಷ್ಟಮದಲ್ಲಿ ಶುಕ್ರ ರವಿ ರಾಹು ಬುಧ ಇರುವುದರಿಂದ ಮಾನಸಿಕ ಒತ್ತಡವಿರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಸ್ಪಷ್ಟತೆ ಇರಲಿ. ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದಾಗಿ ಬಿಂಬಿಸದಿರಿ. ಮುಂದಿನ ದಿನಗಳಲ್ಲಿ ಶನಿಯೂ ಅಷ್ಟಮಕ್ಕೆ ಬರುವುದರಿಂದ ನವಗ್ರಹರ ಜಪ ಅತೀ ಅಗತ್ಯವಾಗಿದೆ.
ಕನ್ಯಾ : ಆರೋಗ್ಯ ವೃದ್ಧಿ;ಗುರುವಿನ ಪೂರ್ಣ ಅನುಗ್ರಹ ಪ್ರಾಪ್ತಿ; ಆಸ್ತಿ ವಾಹನಾದಿ ವಿಚಾರದಲ್ಲಿ ಧನವ್ಯಯ.ಬೇರೆಯವರ ವಿಚಾರದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆಯ ನಡೆ ಅಗತ್ಯವಾಗಿದೆ.ಸಪ್ತಮದಲ್ಲಿ ಪಂಚ ಗ್ರಹ ಯೋಗ ನಡೆಯಲಿದೆ. “”ಯತ್ ಭಾವಮ್ ತತ್ ಭವತಿ “ ನೀವು ಯೋಚಿಸಿದಂತೆ ದಾಂಪತ್ಯ ಸುಖವಿರುತ್ತದೆ. ಸ್ವಲ್ಪ ಸಮಯ ವಿದ್ಯಾರ್ಥಿಗಳು ಪ್ರೀತಿ ಪ್ರೇಮಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು. ವೈವಾಹಿತರು ಸಂಯಮದಿಂದ ಇರಬೇಕು. ಪಂಚೇಂದ್ರಿಯಗಳ ಹಿಡಿತ ನಿಮ್ಮ ಕೈಯಲ್ಲಿ ಇರಬೇಕು. ದಾಂಪತ್ಯ ಸುಖ ಮಧ್ಯಮದಲ್ಲಿ ಇರುತ್ತದೆ. ದಾಯಾದಿಗಳ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆವಹಿಸುವುದು ಉತ್ತಮ.
ತುಲಾ : ಧನಾಗಮನಕ್ಕೆ ವಿಪುಲ ಅವಕಾಶವಿದ್ದರೂ ನಿಮ್ಮ ಕಠಿಣ ಪ್ರಯತ್ನಬಲ ,ಆತ್ಮ ವಿಶ್ವಾಸ ಕೂಡಾ ಅಷ್ಟೇ ಅಗತ್ಯವಿದೆ.ಗುರುವಿನ ಅನುಗ್ರಹದ ಕೊರತೆ ಇರುವುದರಿಂದ ಮಂಗಳ ಕಾರ್ಯದ ಮಾತುಕತೆ ಫಲ ನೀಡುವುದು ಸಂಶಯವಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ನಿರ್ಲಕ್ಷ್ಯ ತೋರದಿರಿ. ಪಂಚಮದ ಶನಿಗೆ ಶನಿ ಜಪ ಅಗತ್ಯವಿದೆ. ದಶರಥ ಕೃತ ಜಪವನ್ನುಮಾಡುತ್ತಾ ಬನ್ನಿರಿ. ಆದಷ್ಟು ಮಾತು ಕಡಿಮೆ ಮಾಡಿ ಕೆಲಸ ಅಧಿಕಗೊಳಿಸಿ. ಹಿತ ಶತ್ರುಗಳ ಸಮಯ ಸಾಧಕತನ ಆಗಾಗ ನಿಮಗೆ ಘಾಸಿಗೊಳಿಸಲಿದೆ. ತಾಳ್ಮೆ,ಸಹನೆಯಿಂದ ಮುಂದುವರಿದಲ್ಲಿ ಮುನ್ನೆಡೆಗೆ ಸಾಧಕವಾಗುತ್ತದೆ.
ವೃಶ್ಚಿಕ : “ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲು ನೀರು “ ಎಂಬಂತೆ ಎಲ್ಲದಕ್ಕೂ ಶನಿಯೇ ಕಾರಣ ಎಂಬ ಭಾವನೆ ನಮ್ಮಲ್ಲಿ ಮೂಡಿ ಬರಲಿದೆ. ನಾಲ್ಕನೆಯ ಮನೆಯಲ್ಲಿ ಇರುವ ಶನಿ ,ಐದನೆಯ ಮನೆಯಲ್ಲಿ ಶುಕ್ರ ರವಿ ರಾಹು ಬುಧ ಇರುವಾಗ ಎಲ್ಲ ರೀತಿಯಿಂದಲೂ ಹಿನ್ನೆಡೆಯನ್ನು ಅನುಭವಿಸಬೇಕಾಗುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಿದೆ. ಮಕ್ಕಳ ಜೊತೆ ದೊಡ್ಡವರಾದ ನಾವು ಮಕ್ಕಳ ರೀತಿಯಲ್ಲಿ ವರ್ತಿಸಬೇಕಾಗುತ್ತದೆ.ಋಣ ಭಾಧೆ ಕಾಡಲಿದೆ. ಕೆಲವೊಂದು ಸಮಸ್ಯೆಗಳು ಬಹಿರಂಗಗೊಂಡು ರಾದ್ಧಾಂತವಾಗಬಹುದು.” ಪ್ರತ್ಯಂಗಿರಾ “ ದೇವಿಯ ಜಪ ಪ್ರತಿನಿತ್ಯ ಮಾಡುತ್ತಾ ಬರಬೇಕು. ಆರನೆಯ ಕುಜ ಅಷ್ಟಮದಲ್ಲಿ ಇದ್ದುಕೊಂಡು ಕೊಡುವ ತೊಂದರೆಗೆ ಇದುವೇ ಪರಿಹಾರವಾಗಿದೆ.
ಧನು : ಚತುರ್ಥದಲ್ಲಿ ಆರು ಗ್ರಹರು ಜೊತೆಯಾಗುವ ಕಾಲವಿದೆ. ನಿಮ್ಮಲ್ಲಿ ಎಷ್ಟು ದೈವಿಕ ಬಲ ,ಮಾನಸಿಕ ತಾಳ್ಮೆ ಇದೆ ಎಂದು ಪರೀಕ್ಷೆಗೆ ಒಳಗಾಗುವ ಕಾಲ. ದೈಹಿಕ, ಮಾನಸಿಕ ವ್ಯಾಕುಲತೆಗೆ ಒಳಗಾಗುವ ಕಾಲ ,ಉದ್ವೇಗಕ್ಕೆ ಒಳಗಾಗುವ ಕಾಲ, ತಾಳ್ಮೆ ಇರಲಿ, ನವಗ್ರಹರ ಜಪವನ್ನು ಪ್ರತಿನಿತ್ಯ ಮಾಡಬೇಕು.”ನಮ: ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ , ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ: “ ದಿನದಲ್ಲಿ 108 ಬಾರಿ ಹೇಳುತ್ತಾ ಬನ್ನಿರಿ. ನೂತನ ಕಾರ್ಯಾರಂಭ, ವ್ಯಾಪಾರ,ವ್ಯವಹಾರಗಳ ಚಿಂತನೆಯನ್ನು ಮೇ 14 ರ ನಂತರ ಮಾಡಿರಿ. ಸಪ್ತಮದಲ್ಲಿ ಕುಜನಿದ್ದಾನೆ.ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆ ನಿಮಗೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರಯತ್ನ ಪಟ್ಟಲ್ಲಿ ಯಶಸ್ಸು ಖಂಡಿತವಾಗಿ ಬರಲಿದೆ.
ಮಕರ : ಅನಿರೀಕ್ಷಿತ ಕಾರ್ಯ ಸಾಧನೆ ನಿಮಗೆ ಅಚ್ಚರಿ ತರಲಿದೆ.ಅವಿವಾಹಿತರ ವೈವಾಹಿಕ ಸಂಘಟನೆಗೆ ಪೂರಕವಾದ ಪ್ರಚೋದನೆ ಲಭಿಸಲಿದೆ. ಆಕಸ್ಮಿಕ ಧನಲಾಭ ಲಭಿಸಲಿದೆ. ಕೊಟ್ಟ ಸಾಲ ಸಮಯಕ್ಕೆ ಸರಿಯಾಗಿ ಹಿಂತಿರುಗಿ ಬಂದು ನಿಮ್ಮ ವೃತ್ತಿರಂಗ ಪೂರ್ಣ ಬದಲಾವಣೆ ಆಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳು ನಿರೀಕ್ಷಿತ ಅವಕಾಶಗಳನ್ನು ಪಡೆದು ಮುನ್ನೆಡೆಗೆ ಸಾಗಲಿದ್ದಾರೆ. “ಮುಟ್ಟಿದ್ದೆಲ್ಲಾ ಚಿನ್ನ “ ಎಂಬ ಅದೃಷ್ಟದ ಕಾಲ ನಿಮ್ಮದಾಗಿದೆ .ಆರು ಗ್ರಹರು ಮೂರನೆಯ ಮನೆಯಲ್ಲಿ ,ಗುರು ಐದರಲ್ಲಿ. ನೀವು ಪುಣ್ಯವಂತರು.
ಕುಂಭ : ಕಾಲಿಗೆ ಚಕ್ರ ಕಟ್ಟಿಕೊಂಡವರ ಹಾಗೆ ಸದಾ ಕಾರ್ಯ ಪ್ರವೃತ್ತರಾಗಿ ಇರುವ ಸದಾ ದುಡಿಯುತ್ತಿರುವ ನಿಮಗೆ ದೇವಿಯ ಅನುಗ್ರಹ ಪ್ರಾಪ್ತಿಯಾಗಿದೆ. ಉತ್ತಮ ಫಲಗಳು ಗೋಚರಕ್ಕೆ ಬರಲಿವೆ. ಆದರೂ ಜನ್ಮದ ಶನಿ ,ದ್ವಿತೀಯದಲ್ಲಿ ಇರುವ ರವಿ,ಬುಧ ರಾಹು ಶುಕ್ರ ಹಣದ ವಿಷಯದಲ್ಲಿ, ದೈಹಿಕ ,ಮಾನಸಿಕ ಆರೋಗ್ಯದ ವಿಷಯದಲ್ಲಿ ಎಚ್ಚರದಲ್ಲಿ ಇರುವಂತೆ ಸೂಚನೆ ಕೊಡುತ್ತಿದ್ದಾರೆ. ಉದ್ಯೋಗದಲ್ಲಿ ಪದೇ ಪದೇ ಅನೇಕ ವಿಧದ ಎಡರು ತೊಡರು ಕಿರಿಕಿರಿ ಉಂಟಾದರೂ ಒಳ್ಳೆಯ ಮಿತ್ರರ ಸಹಕಾರದಿಂದ ಯಶಸ್ವಿಯಾಗುವಿರಿ. ಸಾಂಸಾರಿಕವಾಗಿ ಆಂತರಿಕ ಸ್ಥಿತಿ-ಗತಿಗಳು ನಿರೀಕ್ಷಿತ ರೀತಿಯಲ್ಲಿ ನಡೆದು ಸಮಾಧಾನ ತಂದುಕೊಡುತ್ತದೆ. ನೀವು ಹೋಗುತ್ತಿರುವ ದೇವಿ ಕ್ಷೇತ್ರದಲ್ಲಿ ದೇವಿಗೆ ಪೂಜೆಯನ್ನು ಸಲ್ಲಿಸಿ ಪ್ರಾರ್ಥನೆಯನ್ನು ಮಾಡಿಕೊಳ್ಳಿರಿ .
ಮೀನ : ಜನ್ಮ ರಾಶಿಯಲ್ಲಿ ಆರು ಗ್ರಹರ ಯೋಗ ; ಆಗಾಗ ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಟಿತಿಯನ್ನು ಕೆಡಿಸಲಿದೆ. ಪ್ರತ್ಯಂಗಿರಾ ಜಪ ನಮಗೆ ಸಾಧ್ಯವಿದ್ದರೆ ಮಾಡಿದರೆ ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿ ಅತಂತ್ರ ಸ್ಟಿತಿಯಲ್ಲಿ ಇರುತ್ತದೆ. ದಾಂಪತ್ಯ ಜೀವನ ಒಳ್ಳೆಯ ಸ್ಟಿತಿಯಲ್ಲಿ ನಡೆಸುವ ಜವಾಬ್ದಾರಿ ನಿಮ್ಮದಾಗಿದೆ. ಕುಟುಂಬಿಕರ ವಿಶ್ವಾಸ ಘಾತಕ ಕೆಲಸಗಳು ನಡೆದು ಬೇಸರ ಎನಿಸುವುದು. ತಾಳ್ಮೆ ಸಂಯಮ ಇರಲಿ.ಅವಿವಾಹಿತರ ಮನೋ ಕಾಮನೆಗಳು ಕೆಲವೊಂದು ತೊಂದರೆಗಳಿಂದ ನಿಂತು ಹೋಗಲಿದೆ.ನಿತ್ಯದ ಕೆಲಸದಲ್ಲಿ ತುಸು ಶ್ರಮ ಎನಿಸಲಿದ್ದು ಆಗಾಗ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ತಯಾರಿಸಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆಯನ್ನು ತಿಳಿಸಲಾಗುವುದು.














