ವಾರ ಭವಿಷ್ಯ ದಿನಾಂಕ 15.09.2024 ರಿಂದ 21.09.2024 ರವರೆಗೆ
ವಿಶೇಷ ದಿನಗಳು :
17.09.2024….ಅನಂತ ಚತುರ್ದಶೀ
18.09.2024…ತುಲಾ ರಾಶಿಗೆ ಶುಕ್ರನ ಪ್ರವೇಶ ;ಪೂರ್ಣಿಮಾ ;
ಮಹಾಲಯ ಆರಂಭ ;
ಮೇಷ :ಉತ್ತಮ ದೈವ ಬಲ ಹೊಂದಿರುವ ನಿಮಗೆ ಭಾಗ್ಯ ಸ್ಥಾನದ ಗುರು ದ್ವಿತೀಯದಲ್ಲಿ ಇರುವುದರಿಂದ ಉದ್ಯೋಗ ರಂಗದಲ್ಲಿ ಉತ್ತಮ ಅಭಿವೃದ್ಧಿಯನ್ನು ಹೊಂದಲಿರುವಿರಿ.ಸಾಂಸಾರಿಕವಾಗಿ ಶುಕ್ರ ಸಪ್ತಮದಲ್ಲಿ ಇದ್ದುಕೊಂಡು ಸ್ತ್ರೀ ಪುತ್ರ ಲಾಭಾದಿಗಳು ಮತ್ತುಶುಭ ಕಲಾಪಗಳಿಂದ ಸುಖ ಶಾಂತಿಗಳ ಅನುಭವವನ್ನು ಪಡೆಯಲಿದ್ದೀರಿ .ಯಾತ್ರಾದಿ ಪುಣ್ಯ ಕ್ಷೇತ್ರ ದರ್ಶನದಿಂದ ಮಾನಸಿಕವಾಗಿ ಶಾಂತಿ ಸಮಾಧಾನ ಲಭಿಸಲಿದೆ. ಯೋಗ್ಯ ಪ್ರೇಮ ಪ್ರಕರಣಗಳು ಕಂಕಣ ಬಲಕ್ಕೆ ಪೂರಕವಾಗಲಿದೆ .ವ್ಯಯದ ರಾಹು ಕೆಲವೊಂದು ವ್ಯರ್ಥ ಖರ್ಚುಗಳನ್ನು ತರಲಿದ್ದಾನೆ . ಭೂಮಿ ಲಾಭವನ್ನುಹೊಂದುವಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಯೋಗವಿದೆ ..ದುರ್ಗಾ ಸಪ್ತ ಶತೀ ಪಾರಾಯಣ ಮಾಡಿರಿ .
ವೃಷಭ :ಗುರುಬಲ ಅಷ್ಟೊಂದು ಉತ್ತಮ ರೀತಿಯಲ್ಲಿ ಇಲ್ಲದ ಕಾರಣ ನಿಮ್ಮ ಮನೋಕಾಮನೆಗಳನ್ನು ನಿಶ್ಚಿತ ರೂಪದಲ್ಲಿ ಹೊಂದುವಿರಿ.ವಿವಾಹಾದಿ ಶುಭ ಸಮಾರಂಭಗಳು ಕೆಲವೊಂದು ವಿಘ್ನಗಳ ಜೊತೆಗೆ ಒಮ್ಮೆ ತಡೆ ಬಂದು ಮುಂದುವರಿಯಲಿದೆ .ವಿಘ್ನ ನಿವಾರಕ ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿರಿ. ವಿದ್ಯಾರ್ಥಿಗಳು ಉತ್ತಮ ಅವಕಾಶವನ್ನು ಹೊಂದಲಿದ್ದಾರೆ .ಉದ್ಯೋಗ,ವ್ಯವಹಾರ ,ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯನ್ನುಹೊಂದುವಿರಿ .ಮಹಿಳೆಯರು ಚಿನ್ನ ಬೆಳ್ಳಿ ಬಟ್ಟೆಗಳನ್ನು ಖರೀಧಿಸಲಿದ್ದಾರೆ .ನಿಮ್ಮವರ ಅಸೂಯೆ ನಿಮ್ಮ ಇದ್ದು ಕೆಲವೊಂದು ಅವಕಾಶಗಳನ್ನು ತಪ್ಪಿಸಿಕೊಳ್ಳುವಿರಿ .ಮಾತು ,ದುಡ್ಡು ನಿಮ್ಮ ಹಿಡಿತದಲ್ಲಿ ಇರಲಿ .
ಮಿಥುನ :ವ್ಯಯದ ಗುರು ದೈವಾನುಗ್ರಹವನ್ನು ಕೊಡಲಾರನು .ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟವಾದೀತು .ಆದರೂ ರಾಶಿಸ್ತಿತ ಕುಜ ನಿಮ್ಮ ಕಾರ್ಯ ಸಾಧನೆಗಳಲ್ಲಿ ಪಡೆ ಪದೇ ಶತ್ರುಗಳ ಪೀಡೆಯನ್ನು ತಂದುಕೊಡಲಿದ್ದಾನೆ .ಗೃಹ ನಿರ್ಮಾಣದ ಕೆಲಸಗಳ ಆರಂಭದಲ್ಲಿ ದುರ್ಗಾ ಹವನವನ್ನು ಮಾಡಿಕೊಂಡು ಮುಂದುವರಿಯಿರಿ . ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಿರಲಿ .ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಲಭಿಸಲಿದೆ .ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸಿಕ್ಕಿದ ಕೆಲಸಕ್ಕೆ ಪ್ರವೇಶ ಪಡೆಯುವುದು ನಿಮ್ಮ ಬುದ್ಧಿವಂತಿಕೆಯಾಗಿದೆ .ಕುಟುಂಬದ ಸದಸ್ಯರಿಗೆ ಆಗಾಗ ಆರೋಗ್ಯದ ಸಮಸ್ಯೆ ಕಾಡಲಿದೆ .ಕೆಟ್ಟ ಜನರ ಸಂಸರ್ಗದಿಂದ ಅವಮಾನ ,ಅಪಮಾನ ಬರಲಿದೆ .ನಿಮ್ಮ ಆರೋಗ್ಯದ ಸ್ಥಿತಿ ನಿಮ್ಮ ಹತೋಟಿಯಲ್ಲಿ ಇರಲಿ .
ಕರ್ಕಾಟಕ :ಅಷ್ಟಮದ ಶನಿಗೆ ಪರಿಹಾರ ಅಗತ್ಯವಿದೆ .ಯಾವುದೇ ವ್ಯವಹಾರದಲ್ಲಿ ,ಅತಿಯಾದ ಅವಸರ ತೊಂದರೆಗೆ ಕಾರಣವಾದೀತು. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಾಗಿರಿ .ಬೈಕಿನಲ್ಲಿ ಹೋಗುತ್ತಿರುವವರು “ವೇಗ 50 ಕಿಲೋ ಮೀಟರ್ ನ ಒಳಗೆ ಇರಲಿ .ಪ್ರೀತಿ ಪ್ರೇಮ ನಿಮ್ಮ ವಿದ್ಯೆಗೆ ತೊಂದರೆಯನ್ನು ತರಲಿದೆ .ನಿಮ್ಮ ಪತ್ನಿಯ ಉತ್ತಮ ಸಲಹೆಗಳು ಅಗತ್ಯವಾಗಲಿವೆ. ಯಾವುದರಲ್ಲಿಯೂ ಹೆಚ್ಚಿನ ದುರಾಸೆ ಬೇಡ .ಹಿರಿಯರ ಅನಾರೋಗ್ಯದ ಕಾರಣದಿಂದ ಹೆಚ್ಚು ಖರ್ಚು ಬರಲಿದೆ .ಸಂಗೀತ ,ನೃತ್ಯ ಇತ್ಯಾದಿ ಕಲೆಗಳಲ್ಲಿ ಯಶಸ್ಸನ್ನು ಕಾಣುವಿರಿ .ಕೆಲವೊಂದು ವಿಷಯಗಳು ನಿಮ್ಮಎಣಿಕೆಯಂತೆ ಆಗದೆ ಮಾನಸಿಕವಾಗಿ ಕೊರಗುವಿರಿ .ವಯಕ್ತಿತಕವಾಗಿ ದೇಹಾರೋಗ್ಯದ ಬಗ್ಗೆ ಎಚ್ಚರವಿರಲಿ .
ಸಿಂಹ :ಉತ್ತಮ ದೈವಾನುಗ್ರಹ ಇರುವ ಈ ಸಮಯದಲ್ಲಿ ನಿಮ್ಮ ಪ್ರತಿಯೊಂದು ವ್ಯವಹಾರ ,ಉದ್ಯೋಗ ಯಶಸ್ವಿಯಾಗಲಿದೆ .ಕುಜ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಮನೆ ಕೊಳ್ಳುವ ,ಹೊಸತಾಗಿ ಕಟ್ಟುವ ನಿಮ್ಮ ಕನಸು ನನಸಾಗಲಿದೆ .ಅನೇಕ ಮೂಲಗಳಿಂದ ಧನ ಆದಾಯವೂ ಒದಗಿ ಬರಲಿದೆ .ಮಾತು ಹಿಡಿತದಲ್ಲಿರಲಿ .ಮಾತು ಸಂಸ್ಕಾರದಲ್ಲಿರಲಿ .ಪತಿ-ಪತ್ನಿಯರ ಹೊಂದಾಣಿಕೆ ಉತ್ತಮವಾಗಿರಲಿ .ದೇವಿ ಸ್ತೋತ್ರ ಪಾರಾಯಣ ಅಗತ್ಯವಾಗಿದೆ .ಆಗಾಗ ಆರ್ಥಿಕ ಅಡಚಣೆ ತೋರಿಬರಲಿದೆ .ಸ್ತ್ರೀಯರಿಗೆ ಬಿಡುವಿಲ್ಲದ ಕಾರ್ಯಕ್ರಮವಿರುತ್ತದೆ .ನಿಮಗೆ ಬರ ಬೇಕಾಗಿರುವ ಹಣ ಕೈ ಸೇರಲಿದೆ . ರಾಹು ಅಷ್ಟಮದಲ್ಲಿ ಇರುವುದರಿಂದ ಕೆಲಸದ ಒತ್ತಡದಿಂದ ತಲೆನೋವು ಬರಲಿದೆ .ಮಾನಸಿಕ ಒತ್ತಡ ಬರಲಿದೆ .
ಕನ್ಯಾ :ಉತ್ತಮ ದೈವಾನುಗ್ರಹ ಇರುವ ಸಮಯ ನಿಮ್ಮದು .ಎಲ್ಲಾ ದೋಷಗಳನ್ನು ಪರಿಹಾರ ಮಾಡುವ ಶಕ್ತಿ ನವಮದ ಗುರುವಿಗಿದೆ ನಿಮ್ಮ ವ್ಯವಹಾರದಲ್ಲಿ ಸಹೋದರ/ಸಹೋದರಿಯ ಹಸ್ತಕ್ಷೇಪ ಮನಸ್ಸಿಗೆ ಕಿರಿಕಿರಿ ತರಲಿದೆ . ದಾಂಪತ್ಯದಲ್ಲಿ ತುಂಬಾ ಎಚ್ಚರವಾಗಿರಬೇಕು .ನಿಮ್ಮ ಪ್ರಾಯಕ್ಕೆ ಅನುಸಾರವಾಗಿ ಇದು ವ್ಯತ್ಯಾಸವಾಗುತ್ತಾ ಹೋಗುತ್ತದೆ .ಒಬ್ಬ ಪ್ರಾಯಕ್ಕೆ ಬಂದ ವಿದ್ಯಾರ್ಥಿಯಾದರೆ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕಿ ಒದ್ದಾಡ ಬಹುದು.ಉದ್ಯೋಗದಲ್ಲಿ ಇರುವವರು ಮುಂಬಡ್ತಿಯನ್ನು ಹೊಂದುವರು .ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರವಿರಲಿ .ಶತ್ರು ಪೀಡೆಯಿಂದ ಮೀನುಗಾರಿಕೆ ವೃತ್ತಿಯವರಿಗೆ ನಷ್ಟ ಒದಗಿ ಬರಲಿದೆ .
ತುಲಾ : ಗುರು ಅಷ್ಟಮದಲ್ಲಿ ,ಅಷ್ಟಮಾಧಿಪತಿ ಶುಕ್ರ ಜನ್ಮ ರಾಶಿಯಲ್ಲಿ ಇದ್ದು ಪರಿಹಾರ ಅತೀ ಅಗತ್ಯವಾಗಿದೆ . ಅನ್ಯ ಮಹಿಳೆಯರ ಬಗ್ಗೆ ನಿಮ್ಮ ವರ್ತನೆ ಸಮಸ್ಯೆಯನ್ನು ತರಬಹುದಾಗಿದೆ .ಮಧುಮೇಹ ಹಿಡಿತದಲ್ಲಿರಲಿ .ಶನಿಯ ಸಮಸ್ಯೆ ನಾನಾ ವಿಧದ ಸಮಸ್ಯೆಯನ್ನು ತರಬಹುದಾಗಿದೆ .ವೃತ್ತಿರಂಗದಲ್ಲಿ ಜೊತೆಯಲ್ಲಿ ಇರುವವರ ಅಸಹಕಾರ ಬರಲಿದೆ .ದುಡಿಮೆಗೆ ತಕ್ಕ ಪ್ರತಿಫಲ ದೊರಕದೆ ಬೇಸರ ಪಡುವಿರಿ .ಆಹಾರ ನೀರಿನ ವ್ಯತ್ಯಾಸದಿಂದ ದೇಹಾರೋಗ್ಯದಲ್ಲಿ ಏರುಪೇರಾಗಲಿದೆ .ಮೇ 16 2025 ರ ನಂತರ ವಿವಾಹದ ನಿರೀಕ್ಷೆಯಲ್ಲಿ ಇರುವವರು ಪ್ರಯತ್ನಿಸಬಹುದು .ವಿದ್ಯಾರ್ಥಿಗಳು ಮೊಬೈಲ್ .ಲ್ಯಾಪ್ಟಾಪ್ ಗಳನ್ನು ಅನ್ಯಥಾ ಬಳಸದೆ ಎಚ್ಚರವಹಿಸಿರಿ .
ವೃಶ್ಚಿಕ :ಗುರು ಸಪ್ತಮದಲ್ಲಿ ಇದ್ದು ಒಳ್ಳೆಯ ದೈವಾನುಗ್ರಹ ದೊರಕಿ ಬರಲಿದೆ .ತಮ್ಮೆದುರು ಬರುತ್ತಿರುವ ಯಾವುದೇ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಹೊಂದುವಿರಿ .ಕುಜ ಅಷ್ಟಮದಲ್ಲಿ ನಿಮ್ಮ ಆರೋಗ್ಯವನ್ನು ಏರುಪೇರು ಮಾಡುವವನು ,ಕೋಪ ,ಬಿಪಿ ಯನ್ನು ಏರಿಸುವವನು ,ಸುದರ್ಶನ ದೇವರ ಜಪ ನಿತ್ಯವೂ ಮಾಡಿರಿ/ಮಾಡಿಸಿರಿ .ಪತಿ ಪತ್ನಿಯರ ಜೊತೆ ಶುಕ್ರ ವ್ಯಯಕ್ಕೆ ಬಂದು ಕಿರಿಕಿರಿಯನ್ನು ತರುತ್ತಲೇ ಇರುತ್ತಾನೆ .”ಒಂದೋ ನಾನಿರಬೇಕು ,ಇಲ್ಲಾ ನೀನಿರಬೇಕು “ ಹಾಗೆ ಬೇಡ ,ಇಬ್ಬರೂ ಇರಬೇಕು ಜೊತೆಗೆ ಪಾರ್ವತಿ ಸ್ವಯಂವರ ಮಂತ್ರ ಜಪ ಪಾರಾಯಣ ಮಾಡಿರಿ . ಶನಿಗೆ ಪರಿಹಾರವಾಗಿ ಶಂ ಶನೈಶ್ಚರಾಯನಮ: 108 ಬಾರಿ ಮಂತ್ರವನ್ನು ಹೇಳಬೇಕು .
ಧನು :ಗುರು ವಿನ ಅನುಗ್ರಹವಿಲ್ಲದ ಕಾರಣ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .ಸುಖ ಸ್ತಾನದಲ್ಲಿರುವ ರಾಹು ,6 ನೇ ಮನೆಯಲ್ಲಿರುವ ಗುರು ,ಸಪ್ತಮದಲ್ಲಿ ಇರುವ ಕುಜ ಇವರಿಗೆ ಪರಿಹಾರ ಅಗತ್ಯವಾಗಿದೆ .ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯಗಳಿಂದ ಕಲಹಕ್ಕೆ ಕಾರಣವಾದೀತು ಸಾಮಾಜಿಕ ರಂಗದಲ್ಲಿ ಸಣ್ಣ ವಿಷಯವೊಂದು ರಾದ್ಧಾಂತಕ್ಕೆಕಾರಣವಾಗಿ ಅಪವಾದ ಅವಮಾನಕ್ಕೆ ಕಾರಣವಾದೀತು .ಆರ್ಥಿಕವಾಗಿ ಶೂನ್ಯ ಸಂಪಾದನೆ -ಇದರಿಂದಾಗಿ ಆತಂಕ ,ವಾಯು ಪ್ರಕೋಪದಿಂದ ಆರೋಗ್ಯಕ್ಕೆ ಸಮಸ್ಯೆ ತರಬಹುದು ನಿಮ್ಮ ನಿತ್ಯ ವ್ಯವಹಾರದಲ್ಲಿ ನೀವು ಆಸಕ್ತಿಯನ್ನೂ ಕಳೆರ್ದು ಕೊಳ್ಳುವ ಸಾಧ್ಯತೆ ಇದೆ .ಪತ್ನಿ-ಮಕ್ಕಳಲ್ಲಿ ಅನಾಸಕ್ತಿ ಮನಸ್ಸಿನಲ್ಲಿ ಬರದಂತೆ ಎಚ್ಚರವಿರಲಿ .ಬೇಸಾಯಗಾರರು ಉತ್ತಮ ಬೆಳೆಯನ್ನು ಪಡೆಯಲಿದ್ದಾರೆ .
ಮಕರ : ಪಂಚಮದ ಗುರು ಉತ್ತಮ ದೈವಾನುಗ್ರಹವನ್ನು ನೀಡುತ್ತಿದ್ದಾನೆ .ಸಾಡೇ ಸಾತ್ ಶನಿಯ ಪ್ರಭಾವ ಮುಂದುವರಿಯುತ್ತಿದೆ .ಕುಜ 6 ನೇ ಮನೆಯಲ್ಲಿ ಇರುವುದರಿಂದ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ .ಹಣದ ಹೂಡಿಕೆಯ ವಿಷಯದಲ್ಲಿ ಎಚ್ಚರವಿರಬೇಕು .ಹಣದ ವಿಚಾರದಲ್ಲಿ ಮನಸ್ತಾಪ ,ಅಪವಾದ ಬರದಂತೆ ಎಚ್ಚರವಿರಲಿ .ಕೃಷಿ ತೋಟಗಾರಿಕೆ ಬೆಳೆಗೆ ಹಾನಿ ಸಂಭವ .ಆದರೂ ರಾಹು ತೃತೀಯಾದಲ್ಲಿ ಇದ್ದುಕೊಂಡು ನಷ್ಟವಾಗದಂತೆ ನೋಡಿಕೊಳ್ಳಲಿದ್ದಾನೆ .ಸರಕಾರಿ ಕೆಲಸಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಮುಂದುವರಿಯಲಿದೆ .ರವಿ ಮತ್ತು ಬುಧ ಅಷ್ಟಮದಲ್ಲಿ ಇರುವುದರಿಂದ ಈಗಾಗಲೇ ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ಎಚ್ಚರವಿರಬೇಕು .ಮದ್ಯ ಸೇವನೆ ಮಾಡುತ್ತಿರುವವರು ಕಡಿಮೆ ಮಾಡುತ್ತಾ ಬರಬೇಕು .
ಕುಂಭ : ಗುರು ನಿಮಗೆ ಶುಭಾಶುಭ ಫಲವನ್ನು ನೀಡುತ್ತಿದ್ದಾನೆ .ಸಾಡೇ ಸಾತ್ ಶನಿ ಜನ್ಮದಲ್ಲಿ ಇದ್ದಾನೆ ನಿಮ್ಮ ರಾಶಿಯಿಂದ ರವಿ ಮತ್ತು ಬುಧ ಸಪ್ತಮದಲ್ಲಿ ಇರುವುದರಿಂದ ವಿವಾಹವಾದವರು ,ಆಗಲಿಕ್ಕೆ ತಯಾರಾದವರು ಎಚ್ಚರವಿರಬೇಕು .ಹನೀ ಟ್ರಾಪ್ನಲ್ಲಿ ಬೀಳುವ ಸಾಧ್ಯತೆ ಇದೆ . ಅಷ್ಟಮದಲ್ಲಿ ಶುಕ್ರ ಮತ್ತು ಕೇತು ಇರುವುದೇ ಇದಕ್ಕೆ ಕಾರಣವಾಗಿದೆ .ದೇವಿಯ ಸಪ್ತಶತೀ ಪಾರಾಯಣ ಮಾಡಿರಿ/ಮಾಡಿಸಿರಿ .ದೇಹಾರೋಗ್ಯದಲ್ಲಿ ಸಮಸ್ಯೆ ತರುವ ಗ್ರಹರು ಪಂಚಮದ ಕುಜ ಮತ್ತು ದ್ವಿತೀಯಾದ ರಾಹು ,ನಾಗ ದೇವರ ಪ್ರಾರ್ಥನೆ ಅಗತ್ಯವಿದೆ .ಅವಿವಾಹಿತರಿಗೆ ವಿವಾಹದ ಪ್ರಸ್ತಾವ ಬರಲಿದೆ .ನಿಮ್ಮ ದುಡುಕು ವರ್ತನೆಯಿಂದ ಸತಿ ಸುತರ ನಿಷ್ಟುರತೆಯನ್ನು ಪಡೆಯುವಿರಿ .ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .
ಮೀನ : ಗುರುವಿನ ಅನುಗ್ರಹದ ಕೊರತೆ ,ಸಾಡೇ ಸಾತ್ ಶನಿಯ ಪ್ರಭಾವ ಜನ್ಮ ರಾಶಿಯಲ್ಲಿ ರಾಹು ,ಸುಖ ಸ್ಥಾನದಲ್ಲಿ ಕುಜ ,ಸಪ್ತಮದಲ್ಲಿ ಶುಕ್ರ ಮತ್ತು ಕೇತು ಇರುವುದರಿಂದ ಪ್ರತಿನಿತ್ಯ ನವಗ್ರಹ ಜಪ ಮಾಡುವುದು ಉತ್ತಮ .ಕುಲ ದೇವರ ದರ್ಶನ ಮಾಡುವುದು ಒಳ್ಳೆಯದು .ಶ್ರೀ ಸತ್ಯನಾರಾಯಣ ದೇವರ ನಾಮಾವಳಿಯನ್ನು ಪ್ರತಿನಿತ್ಯ ಓದುವುದು ಒಳ್ಳೆಯದು . ದೇವರ ಪ್ರಾರ್ಥನೆಯೊಂದಿಗೆ ವಿಶ್ವಾಸದಿಂದ ಕೆಲಸ ಮಾಡಿದಲ್ಲಿ ನೀವು ಯಶಸ್ವಿಯಾಗುವಿರಿ .ನಿಮ್ಮ ಸ್ಥಾನಮಾನ, ಔನ್ನತ್ಯವನ್ನು ಹೊಂದಲಿದೆ ರವಿ ಮತ್ತು ಬುಧ ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ,ರಾಜಕೀಯದಲ್ಲಿ ಇರುವವರಿಗೆ ಉತ್ತಮ ಏಳ್ಗೆಯನ್ನು ನೀಡಲಿದ್ದಾರೆ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು .ವಾಸ್ತು ಸಲಹೆ/ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು .



































