ವಾರ ಭವಿಷ್ಯ ದಿನಾಂಕ 15.06.2025 ರಿಂದ 21.06.2025 ರ ವರೆಗೆ
ವಿಶೇಷ ದಿನಗಳು :15.06.2025….ಮಿಥುನ ಸಂಕ್ರಮಣ
21.06.2025….ದಕ್ಷಿಣಾಯನ ಆರಂಭ
ಗುರು ಮೌಢ್ಯ : ದಿನಾಂಕ 15.06.2025 ರಿಂದ 08.07.2025
ಮೇಷ : ಉತ್ತಮ ಉತ್ಸಾಹ ಪೂರ್ಣವಾದ ದಿನಗಳಿವು. ವಿಲಾಸೀ ಜೀವನದ ಖುಷಿಯನ್ನು ಅನುಭವಿಸಲಿದ್ದೀರಿ.ಆರ್ಥಿಕವಾಗಿ ಸಮಸ್ಯೆ ಇಲ್ಲವಾದರೂ ಖರ್ಚು…ವೆಚ್ಚಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಅಗತ್ಯವಿದೆ. ಸ್ವಪ್ರಯತ್ನ,ಆತ್ಮವಿಶ್ವಾಸ, ಕಠಿಣ ಪರಿಶ್ರಮದಿಂದ ಎಲ್ಲವನ್ನೂ ನಿಮ್ಮದಾಗಿಸಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದೆ.ನಿಮ್ಮ ಗ್ರಹ ಸ್ಟಿತಿಗಳು ಹಾಗೂ ದೈವಾನುಗ್ರಹ ಉತ್ತಮವಾಗಿರುವುದೇ ಇದಕ್ಕೆ ಕಾರಣವೆನ್ನ ಬಹುದು. ಮನೆ ಬದಲಾವಣೆ,ಯಾ ಖರೀದಿಗೆ ಇದು ಸಕಾಲವೆನ್ನ ಬಹುದು. ಮಕ್ಕಳ ವಿಷಯದಲ್ಲಿ ಎಚ್ಚರವಿರುವುದು ಒಳ್ಳೆಯದು.
ವೃಷಭ : ವೃತ್ತಿರಂಗದಲ್ಲಿ ನಿಮ್ಮ ಕಾರ್ಯ ಸಾಧನೆಗೆ ಸಾಮಾಜಿಕವಾಗಿ ಪ್ರಶಂಸೆ ಕೇಳಿಬರಲಿದೆ. ಅವಿವಾಹಿತರಿಗೆ ವಿವಾಹಯೋಗ ಕೂಡಿಬಂದಿದೆ. ಸರಕಾರಿ ಕೆಲಸಕಾರ್ಯಗಳು ಅಡೆತಡೆಗಳಿಂದಲೇ ಮುಕ್ತಾಯವಾಗಲಿದೆ. ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಸೂಚನೆಯಿಂದ ಸಂತಸ. ಈ ಮಧ್ಯೆ ಹಿತ ಶತ್ರುಗಳಿಂದ ನಿಮ್ಮ ಮೇಲೆ ಕೆಸರೆರಚುವ ಪ್ರಯತ್ನ ನಡೆಯಬಹುದು. ಜಾಗ್ರತೆ ವಹಿಸಿರಿ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗದ ಲಾಭವಿದೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿ ಕಿರಿ ತಪ್ಪಿದ್ದಲ್ಲ.ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.
ಮಿಥುನ : ಜನ್ಮ ರಾಶಿಯಲ್ಲಿ ರವಿ ,ಬುಧ ಗುರು ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಿರಿ. ಕುಟುಂಬ ಸಂಬಂಧವನ್ನು ಗಟ್ಟಿಯಾಗಿಸಲು ನೀವು ಮನಸ್ಸು ಮಾಡಬೇಕಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೆ ದಿನಾಂಕ 22 ರಿಂದ ಉತ್ತಮವಾದ ಸಮಯವಾಗಿದೆ. ಕುಟುಂಬದ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡುವುದನ್ನು ಮರೆಯಬೇಡಿರಿ. ಅವಿವಾಹಿತರು ಆಸ್ಪಷ್ಟ ನಿಲುವನ್ನು ಹೋಗಲಾಡಿಸಿದಲ್ಲಿಕಂಕಣ ಬಲದ ಸಾಧ್ಯತೆ ಇದೆ. ಹಣಕಾಸಿನ ಮಟ್ಟಿಗೆ ಏನೂ ಸಮಸ್ಯೆ ಇರಲಾರದು. ಕೃಷಿಕರಿಗೆ,ಚಲನ ಚಿತ್ರ ನಟರಿಗೆ, ಹೊಟೇಲ್ ಉದ್ಯಮ ಮಾಡುವವರಿಗೆ ಒಳ್ಳೆಯ ಸಮಯವಾಗಿದೆ.
ಕರ್ಕಾಟಕ : ರವಿ, ಗುರು ವ್ಯಯದಲ್ಲಿ ಇದ್ದಾರೆ. ದ್ವಿತೀಯಾದಲ್ಲಿ ಕುಜ ಮತ್ತು ಕೇತು ಇದ್ದಾರೆ. ಕೆಲವೊಮ್ಮೆ ನಿಮ್ಮ ಆತ್ಮ ವಿಶ್ವಾಸದ ಬಗ್ಗೆ ನಿಮಗೆ ಅಚ್ಚರಿ ಮೂಡಲಿದೆ. ನಿಮ್ಮಸಂಗಾತಿಯ ಸಹಕಾರ ನಿಮಗೆ ಒದಗಿಬರಲಿದೆ. ಅಷ್ಟಮದ ರಾಹು ನಿಮಗೆ ಮಾನಸಿಕ ದೌರ್ಬಲ್ಯತೆಯನ್ನು ತರಲಿದೆ. ನಾಗ ದೇವರನ್ನು ಪ್ರಾರ್ಥಿಸುತ್ತಾ ಬನ್ನಿರಿ. ಸಂಬಂಧಿಕರ ಜೊತೆಗೆ ಘರ್ಷಣೆ ಬರದಂತೆ ಎಚ್ಚರವಹಿಸಿರಿ. ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಆರ್ಥಿಕ ಸಹಕಾರ ದೊರೆತು ಉನ್ನತ ವ್ಯಾಸಂಗ ಮಾಡಲಿದ್ದಾರೆ. ಆಗಾಗ ಮಾನಸಿಕ ಅಸ್ಥಿರತೆ ಕಂಡುಬಂದರೂ ದೈವಾನುಗ್ರಹ ಪ್ರಾಪ್ತಿಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಮನೆಯಲ್ಲಿ ಮಂಗಲಮಯ ವಾತಾವರಣ ಉಂಟಾಗಲಿದೆ.
ಸಿಂಹ : ದಾಂಪತ್ಯದಲ್ಲಿ ಅಷ್ಟಮದ ಶನಿ ಆಗಾಗ ಕಿರಿಕಿರಿಯನ್ನು ತಂದರೂ ಸಂತಸದ ದಿನಗಳು ಆರಂಭವಾಗಿ ಮಾನಸಿಕ ನೆಮ್ಮದಿ ಕಂಡುಬರಲಿದೆ. ನೆನೆಗುದಿಗೆ ಬಿದ್ದಿರುವ ನ್ಯಾಯಾಲಯದ ಕೆಲಸ ಕಾರ್ಯಗಳು ಮುನ್ನೆಡೆ ಸಾಧಿಸಲಿಕ್ಕಿದೆ. ವೃತ್ತಿರಂಗದಲ್ಲಿ ಹಿತ ಶತ್ರುಗಳ ಕಾಟ ಇರುವ ವಿಷಯ ನಿಮಗೆ ತಿಳಿದಿರುತ್ತದೆ. ಉಗ್ರ ನರಸಿಂಹನ ಸ್ತೋತ್ರ ಪಾರಾಯಣದಿಂದ ಎಲ್ಲರೂ ದೂರವಾಗಲಿದ್ದಾರೆ. ಗೃಹ ನಿರ್ಮಾಣ, ವಾಹನ ಖರೀಧಿಗಿದು ಉತ್ತಮ ಸಮಯವಾಗಿದೆ. ನಾನಾ ರೀತಿಯ ಧನ ಸಂಪಾದನೆಯಿಂದ ಹಿಂದಿನ ಋಣ ಮುಕ್ತಾಯವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ.
ಕನ್ಯಾ : ಸಪ್ತಮದಲ್ಲಿ ಶನಿ ,ಅಷ್ಟಮದಲ್ಲಿ ಶುಕ್ರ ಇದ್ದಾನೆ. ಆರ್ಥಿಕವಾಗಿ ಸ್ಥಿರತೆಯನ್ನುಕಾಪಾಡಿಕೊಳ್ಳಿರಿ. ಮಾನಸಿಕ ಚಂಚಲತೆಯಿಂದ ದೂರವಾಗಿರಿ. ಉದ್ಯೋಗದ ಅನ್ವೇಷಣೆಯಲ್ಲಿ ಇರುವವರಿಗೆ ಒಳ್ಳೆಯ ಸಮಯವಾಗಿದೆ. ಮೇಲಧಿಕಾರಿಗಳಿಂದ ಕಿರಿಕಿರಿ ಇದ್ದರೂ ಹೊಂದಾಣಿಕೆ ಹಾಗೂ ಉತ್ತಮ ಚಿಂತನೆಗಳು ಫಲಕಾರಿ ಆಗಲಿದೆ. ಅವಿವಾಹಿತರಿಗೆ ಅನಿರೀಕ್ಷಿತ ಬೆಳವಣಿಗೆ ನಡೆದು ಹೋಗಲಿದೆ. ಪ್ರೀತಿ ಪ್ರೇಮಕ್ಕೆ ಬಲಿಯಾಗಬೇಡಿರಿ. ದೇವಿಯ ಕ್ಷೇತ್ರಕ್ಕೆ ಬಾಗಿನ ಅರ್ಪಣೆ ಮಾಡುವುದು ಪರಿಹಾರವಾಗಿದೆ. ಸಾಮಾಜಿಕ ರಂಗದಲ್ಲಿ ನಯವಂಚಕರ ಬಗ್ಗೆ ಎಚ್ಚರದಿಂದಿರಿ. ಕೆಲವೊಮ್ಮೆನಿಮ್ಮ ಆಕಾಂಕ್ಷೆಗಳನ್ನು ಸಾಧ್ಯವಿದ್ದಷ್ಟೂ ಮಟ್ಟಿಗೆ ಹತೋಟಿಯಲ್ಲಿ ಇಟ್ಟುಕೊಂಡರೆ ಒಳ್ಳೆಯದು .
ತುಲಾ : ನೀವು ಬಯಸದೆ ಇದ್ದರೂ ,ದೈವಾನುಗ್ರಹ ಇರುವ ಸಮಯವಾಗಿರುವುದರಿಂದ ಹಲವಾರು ವಿಷಯಗಳು ಜೀವನದಲ್ಲಿ ನಡೆದು ಹೋಗಲಿದೆ.ಕಾರ್ಯ ರಂಗದ ಅನೇಕ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ. ಯಶಸ್ಸು,ಅದೃಷ್ಟ,ನಿಮ್ಮದಾಗಲಿದೆ. ಹಿರಿಯರ ಆಶೀರ್ವಾದ ,ಧರ್ಮ ಪತ್ನಿಯ ಸಹಕಾರದಿಂದಲೇ ಮನೆಯಲ್ಲಿ ಶುಭ ಮಂಗಳ ಕಾರ್ಯಗಳು ನೆರವೇರಿ ನೆಮ್ಮದಿಯ ವಾತಾವರಣ ಅನುಭವಕ್ಕೆ ಬರಲಿದೆ.ಇತರರ ಚಾಡಿ ಮಾತುಗಳಿಗೆ ಕಿವಿಗೊಡದಿರಿ. ಆಧ್ಯಾತ್ಮ ಚಿಂತನೆಗೆ ಇದು ಸಕಾಲವಾಗಿದೆ. ಪಂಚಮ ದಲ್ಲಿ ಇರುವ ರಾಹು ಮಕ್ಕಳ ಬಗ್ಗೆ ಕೆಲವೊಂದು ಚಿಂತೆಗಳನ್ನು ತರಲಿದ್ದಾನೆ. ಶುಕ್ರ ಸತಿ ಪತಿಯರ ನಡುವೆ ಅಪಸ್ವರ ಮೂಡಿಸಲಿದ್ದಾನೆ.ಹೊಂದಾಣಿಕೆ ಅಗತ್ಯವಾಗಿದೆ.
ವೃಶ್ಚಿಕ : ನವಗ್ರಹರೂ ಒಟ್ಟಾಗಿ ವಿರುದ್ಧವಾಗಿ ನಿಂತಾಗ ದುರ್ಗೆಯ ಆರಾಧನೆಯೊಂದೇ ನಿಮಗೆ ಪರಿಹಾರವಾಗಲಿದೆ. ಮಕ್ಕಳೂ ನಿಮ್ಮ ಜೊತೆ ಒರಟಾಗಿ ವರ್ತಿಸುವಾಗ ಅವರು ಹೇಳಿದಂತೆ ವರ್ತಿಸುವುದೇ ಮಾರ್ಗವಾಗಿದೆ.ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ವಿರೋಧ,ಹಿರಿಯರ ಅಪಸ್ವರ ,ಪತಿಯ /ಪತ್ನಿಯ ಅಸಹಕಾರ, ಮಾನಸಿಕ ನೆಮ್ಮದಿಯನ್ನು ಕೆಡಿಸಲಿದೆ. ಸ್ವತಂತ್ರ ವ್ಯವಹಾರಗಳಿಗೆ ಎಚ್ಚರಿಕೆಯಿಂದ ಮುನ್ನೆಡೆಯಬೇಕಾದ ಕಾಲವಾಗಿದೆ. ನೀವು ಮಾಡುವ ಆರಾಧನೆಯ ಫಲವಾಗಿ ಚಿಂತಿತ ಕೆಲಸಗಳೆಲ್ಲವೂ ನಿರ್ವಿಘ್ನವಾಗಿ ನಡೆಯಲಿವೆ. ಸಂತೋಷದ ಮಂಗಳಮಯ ವಾತಾವರಣ ನಿಮ್ಮದಾಗಲಿದೆ.
ಧನು : ಅವಿವಾಹಿತರಿಗೆ ವೈವಾಹಿಕ ಭಾಗ್ಯ ಕೂಡಿ ಬಂದಿದೆ. ಸುಖ ಸ್ಥಾನದ ಶನಿ ಕೆಲವೊಮ್ಮೆ ಕಲಹಗಳನ್ನುಈ ಮಧ್ಯೆ ತರುವ ಸೂಚನೆ ಇದೆ. ನಿಮ್ಮಕರ್ತವ್ಯದ ಕಡೆಗೆ ಗಮನ ಕೊಡುವುದನ್ನು ನೆನಪಿಡಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ದೇವತಾ ಕಾರ್ಯಗಳಿಗಾಗಿ ದೂರ ಸಂಚಾರ ಒದಗಿ ಬರಲಿದೆ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಒಪ್ಪಿಕೊಳ್ಳುವುದು ಸಧ್ಯದ ಮಟ್ಟಿಗೆ ಉತ್ತಮ. ಒತ್ತಡಗಳನ್ನು ನಿವಾರಿಸಿಕೊಳ್ಳಲು ವಿಶ್ರಾಂತಿ ಪಡೆಯಿರಿ.ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆ ತೋರಿಬಂದು ಆರ್ಥಿಕವಾಗಿ ಅನೇಕ ಮೂಲಗಳಿಂದ ಲಾಭ ಒದಗಿ ಬರಲಿದೆ.
ಮಕರ : ಸಾಧ್ಯ ಸ್ವಪ್ರಯತ್ನಕ್ಕೆ ನಿರೀಕ್ಷಿತ ರೀತಿಯಲ್ಲಿ ಫಲ ದೊರೆಯದು. ಏಕೆಂದರೆ ದೈವಾನುಗ್ರಹದ ಕೊರತೆ ಇದೆ. ಶ್ರೀ ಗಣಪತಿ ದೇವರ ಅಥರ್ವ ಶೀರ್ಷ ಪಾರಾಯಣ ಅಗತ್ಯವಿದೆ. ಆಗಾಗ ಶನಿ ರವಿ ಧನಲಾಭವನ್ನು ಅನೇಕ ಮೂಲಗಳಿಂದ ಧನಲಾಭವನ್ನು ಒದಗಿಸಲಿದ್ದಾರೆ. ರಾಹುವಿನ ಕಾರಣದಿಂದ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಹಲವು ವಿರೋಧಗಳನ್ನು ತಾವಾಗಿಯೇ ತಂದುಕೊಳ್ಳುವಿರಿ.ಆದರೂ ಭಯ ಪಡುವ ಅಗತ್ಯವಿಲ್ಲ.ರಾಜಕೀಯದಲ್ಲಿರುವವರಿಗೆ ಉತ್ತಮ ಸ್ಥಾನ ಮಾನ ದೊರೆಯಲಿದೆ. ಕೌಟುಂಬಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ಸಹೋದರ ವರ್ಗದವರ ಜೊತೆಗೆ ಮೃಧು ಧೋರಣೆ ಇರಲಿ. ವಿದ್ಯಾರ್ಥಿಗಳು ಬಹಳ ಪ್ರಯತ್ನ ಪಡಬೇಕಾಗುತ್ತದೆ.
ಕುಂಭ : ಸಾಡೇ ಸಾತ್ ಶನಿಯ ಕಾರಣದಿಂದ ಆರ್ಥಿಕವಾಗಿ ಋಣಭಾರ ನಿಮ್ಮ ಮೇಲೆ ಉಂಟಾಗಲಿದೆ. ಶ್ರೀ ದೇವರ ದೇವತಾ ಕಾರ್ಯ,ತೀರ್ಥ ಯಾತ್ರೆ, ಮಾಡಬೇಕಾಗುತ್ತದೆ. ಅವಿರತ ಕಾರ್ಯದೊತ್ತಡ ಆಗಾಗ ದೇಹಾಯಾಸ ತರಲಿದೆ. ನೂತನ ಮಿತ್ರನ ಆಗಮನ ಕಾರ್ಯ ಸಾಧನೆಗೆ ಸಾಧ್ಯವಾಗುತ್ತದೆ. ಉದ್ಯೋಗಿಗಳಿಗೆ ಅವಿರತ ದುಡಿಮೆಯ ಬಿಸಿ ತಟ್ಟಲಿದೆ.ದೇವರ ಅನುಗ್ರಹ ಇರುವುದರಿಂದ ನೀವು ಮಾತಾಡುವ ಕ್ರಮವನ್ನು ಬದಲಾಯಿಸಿಕೊಂಡಲ್ಲಿ,ಉತ್ತಮ ಲಾಭವನ್ನು ಹೊಂದುವಿರಿ.ಮೂಗಿನ ತುದಿಯಲ್ಲಿ ಇರುವ ದುಡುಕುತನವನ್ನುಬಿಡಬೇಕಾಗುತ್ತದೆ. ನಿಮ್ಮ ಯೋಗ್ಯತೆಗೆ ಮೀರಿದ ಕೆಲಸ ಕಾರ್ಯಗಳಿಗೆ ಕೈ ಹಾಕದಿರುವುದೇ ಒಳ್ಳೆಯದು.
ಮೀನ : ಸಾಡೇ ಸಾತ್ ಶನಿಯ ಪ್ರಭಾವ ನಿಮ್ಮ ಮೇಲಿರುವುದನ್ನು ಮರೆಯಬೇಡಿರಿ. ಸಾಂಸಾರಿಕವಾಗಿ,ಹಾಗೂ ಕೌಟುಂಬಿಕವಾಗಿ ಎಲ್ಲಾ ಜಂಜಾಟಗಳಿಂದ ಮುಕ್ತರಾಗಬೇಕೆಂದು ಬಯಸುವಿರಿ. ಅವಿವಾಹಿತರು ಕಷ್ಟದಿಂದಲೇ ತಮ್ಮ ಬದುಕಿನ ಸಂಗಾತಿಯನ್ನು ಪಡೆಯಲಿದ್ದಾರೆ. ಹೊಂದಾಣಿಕೆ ಅತೀ ಅಗತ್ಯವಾಗಿದೆ. ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ಮನಸ್ತಾಪ,ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗದಂತೆ ಹೆಚ್ಚಿನ ಜಾಗ್ರತೆ ವಹಿಸಬೇಕು. ವೈರಾಗ್ಯ ಮೂರ್ತಿಯಾಗುವಿರಿ. ಹಣ ಎಷ್ಟು ಬಂದರೇನು?ಮನಸ್ಸಿಗೆ ನೆಮ್ಮದಿ ಇಲ್ಲದಾಗ ಎಲ್ಲವೂ ಶೂನ್ಯವಾಗಿಬಿಡುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮರೆಯಬೇಡಿರಿ.



























