ವಾರ ಭವಿಷ್ಯ ದಿನಾಂಕ 14.07.2024 ರಿಂದ 20.07.2024 ರವರೆಗೆ
ಮೇಷ : ನಿಮ್ಮ ಜೀವನದಲ್ಲಿ ಅನೇಕ ಶುಭ ಬದಲಾವಣೆಗಳನ್ನು ಕಾಣಲಿರುವಿರಿ ,.ಕುಜ ಗುರುವಿನೊಂದಿಗೆ
ದ್ವಿತೀಯಕ್ಕೆ ಪ್ರವೇಶ ಮಾಡಿದ್ದಾನೆ .ಹಿರಿಯರ ಜವಾಬ್ದಾರಿ ನಿಮ್ಮ ಮೇಲೆಯೂ ಬರಲಿದೆ .ನಿಮ್ಮ
ಹತ್ತಿರದ ಸಂಬಧಿಕರಲ್ಲಿ ಶುಭ ಮಂಗಳ ಕೆಲಸಗಳು ನಡೆಯಲಿವೆ .ಬರಲಿವ ಆದಾಯ ಹೆಚ್ಚಾಗಲಿದೆ
.ಉದ್ಯೋಗದಲ್ಲಿ ಬದಲಾವಣೆ ,ಮಾಡುವ ಕೆಲಸಗಳಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಲಕ್ಷ್ಮೀ ನಾರಾಯಣ
ಯೋಗದಿಂದ ಮನೆ ಖರೀದಿಸುವ ವಾಹನ ಖರೀದಿಸುವ ಸಾಧ್ಯತೆ ಕಂಡು ಬರುತ್ತಿದೆ .ಜೀವನದಲ್ಲಿ
ಸಂತೋಷದ ದಿನಗಳು ,ಅನಾರೋಗ್ಯ ಇದ್ದವರಿಗೆ ಚೇತರಿಕೆ ಕಂಡು ಬರಲಿದೆ .ಉತ್ತಮ ದಾಂಪತ್ಯ ಜೀವನ
ನಡೆಸುವಿರಿ .
ವೃಷಭ :ಕುಜ ಗುರುವಿನ ಜೊತೆಗೆ ಜನ್ಮ ರಾಶಿಗೆ ಬಂದಿದ್ದಾನೆ .ದಾಂಪತ್ಯದಲ್ಲಿ ಚೇತರಿಕೆ ಕಂಡು ಬರಲಿದೆ
.ಸಹೋದರ ವರ್ಗದವರಲ್ಲಿ ಹೊಂದಿಕೊಂಡು ಮುಂದುವರಿಯಿರಿ .ಬರುವ ಆದಾಯದಲ್ಲಿ
ಹೆಚ್ಚಳವಾಗಲಿದೆ .ಜ್ಣಾನೋದಯ ಜೀವನದಲ್ಲಿ ಬರುವ ಸಮಯ .ಬಿಳಿಯಿರುವುದೆಲ್ಲಾ ಹಾಲು ಆಗಲು
ಸಾಧ್ಯವಿಲ್ಲ.ದುರ್ಗೆಯ ಪ್ರಾರ್ಥನೆ ನಿಮಗೆ ಸದಾ ಅವಶ್ಯಕವಾಗಿದೆ ,.ಅಜ್ಜನ ಕೊಡುಗೆ ನಿಮಗೆ ದೊರೆಯಲಿದೆ
.ವಿದ್ಯಾರ್ಥಿಗಳು ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ .ನಿಮ್ಮ ಹಿರಿಯರು ಮೃತರಾಗಿದ್ದಲ್ಲಿ ಅವರಿಗೆ
ವಾಯಸ ಬಲಿ ಕೊಡುವುದನ್ನು ಮರೆಯಬೇಡಿರಿ . ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ಮಿಥುನ : ಸಪ್ತಮಾಧಿಪತಿ ಲಾಭಾಧಿಪತಿ ಗುರು ಕುಜನೊಂದಿಗೆ ವ್ಯಯದಲ್ಲಿ ಇರುವುದು ಸುಖಕರ
ದಾಂಪತ್ಯಕ್ಕೆ ಶುಭ ಸೂಚಕವಲ್ಲ. ಆಷಾಢ ಮಾಸದ 4 ಶುಕ್ರವಾರಗಳಲ್ಲಿ ದುರ್ಗೆಗೆ ಕನಕದಾರಾ ಸ್ತೋತ್ರ
,ಲಕ್ಷ್ಮೀ ಅಷ್ಟೋತ್ತರ ಪಾರಾಯಣ ,ಮುತ್ತೈದೆಯರಿಗೆ ಬಾಗಿನ ಅರ್ಪಣೆ ಮಾಡಿರಿ . ಮಾನಸಿಕ
ಒತ್ತಡವಿರುತ್ತದೆ .ಬುಧ ಶುಕ್ರ ಲಕ್ಷ್ಮೀ ನಾರಾಯಣ ಯೋಗವನ್ನು ಕೊಡುವ ಮೂಲಕ ಬರುವ
ಆದಾಯವನ್ನು ಹೆಚ್ಚಿಸಲಿದ್ದಾರೆ .ಪತ್ನಿಯ ಆರೋಗ್ಯದ ಕಡೆಗೆ ಗಮನವಿರಲಿ .ನಿಮ್ಮ ಹಿರಿಯಣ್ಣ
,ತಂದೆಯವರ ಅನಾರೋಗ್ಯವೂ ನಿಮ್ಮ ಮನಸ್ಸಿಗೆ ಬೇಸರ ತರಲಿದೆ .ಅನ್ಯಥಾ ಶರಣಂ ನಾಸ್ತಿ ತ್ವಮೇವ
ಶರಣಂ ಮಮ “ಈ ಭಾವನೆ ನಿಮ್ಮಲ್ಲಿರಲಿ .
ಕರ್ಕಾಟಕ : ಉತ್ತಮ ದೈವಾನುಗ್ರಹ ವಿರುವ ಸಮಯ .ಜೊತೆಗೆ ಬುಧ ಶುಕ್ರ ನಿಮ್ಮ ಜನ್ಮ ರಾಶಿಯಲ್ಲಿ
ಜೊತೆಯಾಗಿರುವುದು .ಲಕ್ಷ್ಮೀ ನಾರಾಯಣನ ಯಥಾ ಶಕ್ತಿ ಸೇವೆಯನ್ನು ಮಾಡುತ್ತಾ ಬನ್ನಿರಿ . ವಿಷ್ಣು
ಕ್ಷೇತ್ರಕ್ಕೆ ತುಲಸೀ ಅರ್ಪಣೆ ಮಾಡಿರಿ ಗೋ ಸೇವೆ ನಿರಂತರವಾಗಿರಲಿ .ಎಚ್ಚರಿಕೆಯ ಹೆಜ್ಜೆ ನೀವು ಮಾಡುವ
ಯಾವುದೇ ಉದ್ಯೋಗ ವ್ಯವಹಾರದಲ್ಲಿ ಇರಲಿ ಎಂದು ವಕ್ರಿ ಶನಿ ಎಚ್ಚರಿಸುತ್ತಿದ್ದಾನೆ .ಇಟ್ಟು
ಕೊಂಡವಳು /ಕಟ್ಟಿ ಕೊಂಡವಳು ವ್ಯತ್ಯಾಸ ನಿಮಗೆ ತಿಳಿದಿರಲಿ .ಉದ್ಯೋಗದಲ್ಲಿ ಬಡ್ತಿ ,ಒಳ್ಳೆಯ
ಬದಲಾವಣೆ ಬರಲೇ ಬೇಕು .ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗ
ಸಿಗಲೇ ಬೇಕು .ದುಡುಕುತನ ,ಹಗಲು ಕನಸು ಕಾಣುವುದು ನಿಮ್ಮ ಹುಟ್ಟು ಗುಣ ,ಆದಷ್ಟು ಕಡಿಮೆ
ಮಾಡಿರಿ.
ಸಿಂಹ : ದೈವಾನುಗ್ರಹವಿರುವ ವಾರವಾಗಿದೆ .ಕೆಲವೊಂದು ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವಿರಿ .ವಕ್ರಿ ಶನಿ
ನಿಮಗೆ ಹಣ ಕಾಸಿನ ವಿಷಯದಲ್ಲಿ ವಿಶೇಷ ಅನುಕೂಲವನ್ನು ಒದಗಿಸಿ ಕೊಡಲಿದ್ದಾನೆ .ದೇವರನ್ನು
ಪೂಜಿಸುವ ವಿಷಯದಲ್ಲಿ ಉದಾಸೀನ ತೋರಿಸುವಿರಿ . ವಾದ ವಿವಾದ ಎಲ್ಲಿಯೂ ಮಾಡುವುದು
ಒಳ್ಳೆಯದಲ್ಲ .ಉದ್ಯೋಗದಲ್ಲಿ ನಿಮ್ಮ ಮಾತೇ ಅಂತಿಮವಾಗಲಿದೆ .ಉದ್ಯೋಗದ ನಿರೀಕ್ಷೆಯಲ್ಲಿ
ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ ಸರಕಾರಿ ಮಟ್ಟದಲ್ಲಿ ಉದ್ಯೋಗ ಮಾಡುವವರಿಗೆ
,ರಾಜಕೀಯದಲ್ಲಿ ಇರುವವರಿಗೆ ರವಿ ಸರ್ವ ರೀತಿಯ ಸೌಲಭ್ಯಗಳನ್ನು ಒದಗಿಸಿ ಕೊಡಲಿದ್ದಾನೆ . ಬಹಳ
ಸಮಯದಿಂದ ನೆನೆಗುದಿಗೆ ಬಿದ್ದಿರುವ ಭೂ ವಿವಾದವೊಂದು ಪರಿಹಾರವಾಗಲಿದೆ . ಸಹನೆ ,ತಾಳ್ಮೆ
ಮೈಗೂಡಿಸಿಕೊಳ್ಳಿರಿ.
ಕನ್ಯಾ : ಬಹಳ ಸಂತೋಷದ ವಾರವಿದು.ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಅನೇಕ
ತೊಂದರೆಗಳನ್ನು ಅನುಭವಿಸುತ್ತಾ ಬಂದಿರುವ ನಿಮಗೆ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು
ನೋಡುವ ಕಾಲ .ಕುಜಗ್ರಹ .ಗುರುವಿನ ಜೊತೆಗೆ ಕರ್ಮ ಕ್ಷೇತ್ರಕ್ಕೆ ಬಂದಿದ್ದಾನೆ . ನಿಮ್ಮ ಜವಾಬ್ದಾರಿ
ಹೆಚ್ಚಾಗಲಿದೆ .ರವಿ ಕರ್ಮ ಕ್ಷೇತ್ರದಲ್ಲಿ ಇದ್ದು ನೀವು ಮಾಡುವ ಕೆಲಸಗಳಳ್ಳಿ ಧಾರ್ಮಿಕ ಕೆಲಸಗಳಿಗೆ
ಪ್ರಾಧಾನ್ಯತೆ ಇರುತ್ತದೆ .ರಾಜಕೀಯವಾಗಿ ನಿಮ್ಮ ಹೆಗಲ ಮೇಲೆ ಜವಾಬ್ದಾರಿ ಹೆಚ್ಚಾಗಲಿದೆ . ಅಮ್ಮನಿಗೆ
ಮನಸ್ಸಿಗೆ ನೋವು ಕೊಡಬೇಡಿರಿ .ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಇರುತ್ತದೆ .”ಅಹಂ “ನಿಂದ
ಹೊರಗೆ ಬನ್ನಿರಿ . ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.
ತುಲಾ : ಗುರು ಮತ್ತು ಕುಜ ಅಷ್ಟಮದಲ್ಲಿ ಇದ್ದಾರೆ .ನರಸಿಂಹ ದೇವರ ಜಪ ನಿಮಗೆ ಪ್ರಯೋಜನವನ್ನು
ಕೊಡಲಿದೆ .ಸಹೋದರ ವರ್ಗ ಮತ್ತು ನಿಮ್ಮ ಪತ್ನಿಗೆ ಆರೋಗ್ಯದಲ್ಲಿ ಸಮಸ್ಯೆ ಬರುವ ಸಾಧ್ಯತೆ ,ಅವರಲ್ಲಿ
ಕಲಹವಾಗುವ ಸಾಧ್ಯತೆ ಇರುತ್ತದೆ .ನೀವೊಬ್ಬರೇ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿರಿ .ನೀವು
60+ ಆಗಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ . ನಿಮ್ಮ ವೃತ್ತಿ ಜೀವನದಲ್ಲಿ ಮಹಿಳೆಯರು
ಸಹೋದ್ಯೋಗಿಗಳು ಇದ್ದಲ್ಲಿ ಅವರೊಂದಿಗೆ ಇತಿಮಿತಿಯಲ್ಲಿ ವರ್ತಿಸಿರಿ . ನೀವು ಬಾಸ್ ಆಗಿರುವ
ಉದ್ಯೋಗವಿದ್ದಲ್ಲಿ ಸಹೋದ್ಯೋಗಿಗಳ ಜೊತೆಗೆ ಹೊಂದಿ ಕೊಂಡು ಮುನ್ನೆಡೆಯಿರಿ . ವೆರ್ಟಿಗೊ,ತಲೆ
ಸುತ್ತು ಬರುವ ,ಬೀಳುವ ಸಮಸ್ಯೆ ಬರಬಹುದು ,ತಕ್ಷಣ ವೈದ್ಯರನ್ನು ಭೇಟಿಯಾಗಿರಿ.
ವೃಶ್ಚಿಕ : ಉತ್ತಮ ದೈವಾನುಗ್ರಹ ಹೊಂದಿರುವ ನೀವು ನಿಮ್ಮ ಪತ್ನಿಯ ಸಾರ್ವ ಭೌಮತೆಯಿಂದ ಕಿರಿಕಿರಿ
ಅನುಭವಿಸುವಿರಿ .ನಾಗರ ಪಂಚಮಿಗೆ ನಾಗದೇವರಿಗೆ ಸೇವೆ ಮಾಡಲು ಮರೆಯಬೇಡಿರಿ .ಪತ್ನಿಯ ಸಹಕಾರ
ನಿಮಗೆ ಅಗತ್ಯವಿರುತ್ತದೆ .ವಿವಾಹದ ತಯಾರಿಯಲ್ಲಿ ಇರುವ ಯುವಕ ಯುವತಿಯರೇ ಇದು ನಿಮಗೆ
ವಿವಾಹವಾಗಲು ಸಕಾಲವಾಗಿದೆ . ಮುಂದುವರಿಯಿರಿ .ವಿವಾಹದ ನಂತರ ಶ್ರೀ ಸತ್ಯನಾರಾಯಣ
ಪೂಜೆಯನ್ನು ವಾಯನ ದಾನ ಕೊಡುವ ಮೂಲಕ ಮಾಡಲು ಮರೆಯಬೇಡಿರಿ .ವಿಷ್ಣು ಸಹಸ್ರನಾಮ
ಪಾರಾಯಣ ನಿಮಗೆ ಅಗತ್ಯವಾಗಿದೆ .ಯಾವುದೇ ವಿಷಯದಲ್ಲಿ ನೀವೇ ಗೆಲ್ಲಬೇಕೆಂಬ ಆಸೆ ಒಳ್ಳೆಯದು
,ಆದರೆ ಹಟ ಬೇಡ .ಭೂ ಸಂಬಂಧಿತ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುವಿರಿ .
ಧನು : ಯಾವುದೇ ವ್ಯವಹಾರ ,ಉದ್ಯೋಗದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುವಂತೆ ನವಗ್ರಹರು
ಸೂಚನೆ ಕೊಡುತ್ತಿದ್ದಾರೆ .ನವಗ್ರಹರ ಜಪವನ್ನು ಮಾಡಿರಿ .ಶಿವ ಸಹಸ್ರನಾಮ ಪಾರಾಯಣವನ್ನು ಮಾಡಿರಿ.
ಪತಿ ಪತ್ನಿಯರ ನಡುವೆ ಹೊಂದಾಣಿಕೆ ಇರಲಿ .ಮತಿ ಬ್ರಾಂತಿ ಕೆಟ್ಟವರಂತೆ ನಡೆಯಬೇಡಿರಿ . ಮಧು ಮೇಹ
ಕಾಯಿಲೆ ಇರುವವರು ಎಚ್ಚರದಿಂದಿರಿ .ಉದ್ಯೋಗ ಕಳೆದು ಕೊಳ್ಳುವ ಸಾಧ್ಯತೆ ಇದೆ .ಎಲ್ಲಾದಕ್ಕೂ
ಒಂದು ಮಹಿಳೆ ಕಾರಣಳಾಗುತ್ತಾಳೆ .ದುರ್ಗಾ ಪಾರಾಯಣ ನಿತ್ಯವೂ ಮಾಡಿರಿ . ಸಾಲ ಯಾರಿಗೂ ಕೊಡ
ಬೇಡಿರಿ . ಕೊಟ್ಟವರಿಗೆ ಅನೇಕರಿಗೆ ಹಿಂದೆ ಬಂದಿಲ್ಲ .”ಕಾಲ ನಿಮಗೆ ಸರಿಯಿಲ್ಲ “.
ಮಕರ : ದೈವಾನುಗ್ರಹವಿರುವ ಸಮಯವಿದು .ಕುಜ ಮತ್ತು ಗುರು ಪಂಚಮದಲ್ಲಿ ಇದ್ದಾರೆ . ಉಮಾ
ಮಹೇಶ್ವರ ದೇವರನ್ನು ನಿತ್ಯವೂ ಪ್ರಾರ್ಥಿಸಿಕೊಂಡು ಬನ್ನಿರಿ .ಉತ್ತಮವಾದ ದಾಂಪತ್ಯ ಜೀವನವನ್ನು
ನಡೆಸುವಿರಿ .ಮಂಗಳ ಕೆಲಸಗಳನ್ನು ನಡೆಸುವ ಕಾಲ .ಲಕ್ಷ್ಮೀ ನಾರಾಯಣ ದೇವರ ಅನುಗ್ರಹವಿರುವ ಸಮಯ
.ಆಷಾಢ ಮಾಸದ 4 ಶುಕ್ರವಾರಗಳಂದು ಲಕ್ಷ್ಮೀ ಅಷ್ಟೋತ್ತರ ಹೇಳುತ್ತಾ ಮುತ್ತೈದೆಯರಿಗೆ ಬಾಗಿನ
ಅರ್ಪಣೆ ಮಾಡುತ್ತಾ ಪುಣ್ಯ ಸಂಪಾದನೆಯನ್ನು ಮಾಡಿರಿ . ಬರುವ ಆದಾಯದಲ್ಲಿ ಯಾವುದೇ ಕೊರತೆ
ಇರುವುದಿಲ್ಲ ,.ಮೃತ ಪಟ್ಟಿರುವ ಹಿರಿಯರಿಗೆ ವಾಯಸ ಬಲಿ ಇಡಲು ಮರೆಯಬೇಡಿರಿ.
ಕುಂಭ :ಹಿಮ್ಮುಖವಾಗಿ ಚಲಿಸುವ ವಕ್ರಿಶನಿ ಜನ್ಮದಲ್ಲಿ ಇದ್ದುಕೊಂಡು ಸುಖಸ್ಟಾ ನದಲ್ಲಿ ಇರುವ ಕುಜ
ಗುರುವನ್ನು ವೀಕ್ಷಣೆ ಮಾಡುತ್ತಾನೆ .ಇನ್ನುಒಂದೂವರೆ ತಿಂಗಳು ನೀವು ಬಹಳ ಎಚ್ಚರದಿಂದ ಇರಬೇಕು .
ಭೂಮಿಯ ವಿಷಯ ,ಮನೆಯ ವಿಷಯ ,ವಾಹನದ ವಿಷಯದಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ ಇದೆ
.ಮೃತ್ಯುಂಜಯ ಜಪ ಮಾಡಿರಿ /ಮಾಡಿಸಿರಿ .ಶುದ್ಧವಾದ ಎಳ್ಳೆಣ್ಣೆಗೆ ನಿತ್ಯವೂ ಒಂದು ನಾಣ್ಯವನ್ನು
ನಿಮ್ಮ ತಲೆ ನಿವಾಳಿಸಿ 108 ಬಾರಿ ಜಪವನ್ನು ಹೇಳಿ ಎಣ್ಣೆಗೆ ಹಾಕುತ್ತಾ ಬನ್ನಿರಿ . ಅಮ್ಮನವರ ಆರೋಗ್ಯದ
ಬಗ್ಗೆ ಗಮನವಿರಲಿ. ಮಾತು ಹಿಡಿತದಲ್ಲಿರಲಿ ನಾಗರ ಪಂಚಮಿ ಆಚರಣೆಯಲ್ಲಿ ಭಾಗವಹಿಸಿರಿ ಮಕ್ಕಳ
ವಿಷಯದಲ್ಲಿ ಸಮಯ ಮೀಸಲು ಅಗತ್ಯವಾಗಿದೆ.
ಮೀನ : ನವಗ್ರಹರು ಪ್ರತಿಕೂಲ ಸ್ಟಿತಿಯಲ್ಲಿ ಇರುವುದರಿಂದ ನವಗ್ರಹ ಜಪ ನಿತ್ಯವೂ ಮಾಡುತ್ತಾ ಬನ್ನಿರಿ
.ಕಳೆದು ಕೊಳ್ಳುವುದು ಅಧಿಕವಾಗಿರುತ್ತದೆ .ಬರುವುದು ಕಡಿಮೆಯಾಗಿರುತ್ತದೆ. ಯಾರಿಗೂ ಹಣ ಕೊಡುವ
ಸಾಹಸಕ್ಕೆ ಕೈ ಹಾಕ ಬೇಡಿರಿ .ಹೃದಯ ಸಂಬಂಧಿ ಆರೋಗ್ಯದ ಕಡೆಗೆ 60+ವಯಸ್ಸಿನವರು ಗಮನಹರಿಸಿರಿ
.ಒಮ್ಮೆ ಈಸಿಜಿ ,ಎಕೋ .ಟ್ರೆಡ್ಮಿಲ್ ಪರೀಕ್ಷೆ ಮಾಡಿಸಲು ಮರೆಯಬೇಡಿರಿ .ಗಣಪತಿ ದೇವರ ಅಥರ್ವಶೀರ್ಷ
ಪಾರಾಯಣ ಮಾಡುತ್ತಾ ಬನ್ನಿರಿ .ದಾಂಪತ್ಯದ ಸುಖ ನಿಮ್ಮ ಕೈಯಲ್ಲಿ ಇರುತ್ತದೆ .ನಿಮ್ಮ ಮಾತಿನಲ್ಲಿ
ವಿಷಾದದ ಛಾಯೆ ತುಂಬಿರುತ್ತದೆ .ಕುಟುಬದಲ್ಲಿ ಬರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತಿನ ಮೂಲಕ
ಪರಿಹರಿಸಿಕೊಳ್ಳಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆಮೂಲಕ ಪರಿಹಾರ ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು
ನಿಶ್ಚಯಿಸಿ ತಿಳಿಸಲಾಗುವುದು .ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ವಿಮರ್ಶಿಸಿ ತಿಳಿಸಲಾಗುವುದು .
ಕೆ .ಸುಬ್ರಹ್ಮಣ್ಯ ಆಚಾರ್ಯ ಕಾರಿಂಜೇಶ್ವರ ಜ್ಯೋತಿಶ್ಯಾಲಯ ಹಿರಿಯಂಗಡಿ ಕಾರ್ಕಳ
ಮೊಬೈಲ್ :9741489529





































