ವಾರ ಭವಿಷ್ಯ
ದಿನಾಂಕ 13.10.2024 ರಿಂದ 19.10.2024 ರ ವರೆಗೆ
ವಿಶೇಷ ದಿನಗಳು :
17. 10.2024 ತುಲಾ ಸಂಕ್ರಮಣ ,ತಲಕಾವೇರಿ ತೀರ್ಥೋದ್ಭವ, ವಾಲ್ಮೀಕಿ ಜಯಂತಿ ,ಪೂರ್ಣಿಮಾ
ಮೇಷ : ಗುರು ವಕ್ರಿಯಾಗಿದ್ದಾನೆ .ಕುಜ ಶನಿಯ ಪ್ರಭಾವದಿಂದ ಕೋರ್ಟ್ ಕಚೇರಿಯ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವಿರಿ .ಕಳೆದು ಹೋದ ವಿಷಯಗಳ ಬಗ್ಗೆ ಯೋಚಿಸುವುದರ ಬದಲು ಬರುವ ದಿನಗಳನ್ನು ಉತ್ತಮ ಪಡಿಸುವುದರ ಬಗ್ಗೆ ಯೋಚಿಸಿರಿ .ಸಂಗಾತಿಯ ಬಗ್ಗೆ ಹೊಂದಿ ಕೊಂಡು ಹೋಗುವುದರ ಬಗ್ಗೆ ಎಚ್ಚರವಿರಲಿ .ಶುಕ್ರ ಅಷ್ಟಮದಲ್ಲಿ ಇದ್ದಾನೆ .ನಂಬಿಕೆ ,ಆತ್ಮವಿಶ್ವಾಸ ಅತೀ ಮುಖ್ಯವಾಗಿದೆ .ವಿವಾಹ ಹೊಂದಾಣಿಕೆಗೆ ಕಷ್ಟವಾಗಲಿದೆ .ವ್ಯರ್ಥ ಖರ್ಚುಗಳ ಬಗ್ಗೆ ಚಿಂತನೆ ಇರಲಿ ರಾಹು ವ್ಯಯದಲ್ಲಿ ಇದ್ದಾನೆ .ಸರಕಾರಿ ನೌಕರರು ಭಡ್ತಿ ಹೊಂದುವ ಅವಕಾಶ ಇರುತ್ತದೆ .ಅನ್ಯ ಮಹಿಳೆಯರ ಬಗ್ಗೆ ನಿಮ್ಮ ಮನಸ್ಸು ಚಂಚಲವಾಗದಿರಲಿ .
ವೃಷಭ : ಗುರು ವಕ್ರಿಯಾಗಿ ಗುರುವಿನ ಅನುಗ್ರಹದ ಕೊರತೆ ಇರುತ್ತದೆ .ರಾಹುವಿನ ಅನುಗ್ರಹದಿಂದ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ವಿಯಾಗುವ ಸಮಯ .ಶೇರ್ ಗಳಲ್ಲಿ ಒಳ್ಳೆಯ ಲಾಭ ಗಳಿಸಲಿದ್ದೀರಿ .ಕುಜ ದ್ವಿತೀಯದಲ್ಲಿ ಇರುವುದರಿಂದ ರವಿ ಪಂಚಮದಲ್ಲಿ ಇರುವುದರಿಂದ ರಾಜಕೀಯ ವಿಷಯಗಳಿಂದ ನೀವು ದೂರವಿದ್ದಷ್ಟೂ ಒಳ್ಳೆಯದು .ಹೊಸ ಸಂಗಾತಿಯ ಪರಿಚಯವಾದೀತು ,ಆದರೆ ಜೀವನದಲ್ಲಿ ಎಚ್ಚರವಿರಲಿ .ಗುರು ಅನಾರೋಗ್ಯವನ್ನು ತರಬಹುದು ,ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ .ಉದ್ಯೋಗದಲ್ಲಿ ಸ್ಥಿರತೆ ಇರುವುದಿಲ್ಲ.ಬದಲಾವಣೆ ಮಾಡಿದರೂ ಆಶ್ಚರ್ಯವಿಲ್ಲ. ಇತರರು ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರವಾಗಿರಿ .
ಮಿಥುನ :ಗುರುವಿನ ವಕ್ರ ಸ್ಥಿತಿ ನಿಮಗೆ ಶುಭೋದಯದ ಸಮಯವಾಗಿದೆ .ಗ್ರಹಣ ಬಿಟ್ಟ ಚಂದ್ರನಂತೆ ಸಂತೋಷವನ್ನು ಅನುಭವಿಸುವ ಸಮಯವಾಗಿದೆ .ವಯಕ್ತಿಕ ಆರೋಗ್ಯದ ಬಗ್ಗೆ ಎಚ್ಚರವಿರಲಿ .ಕುಜ ದಿನಾಂಕ 20 ರಂದು ಜನ್ಮ ರಾಶಿಯಿಂದ ಮುಂದಕ್ಕೆ ಹೋಗಲಿದ್ದಾನೆ . ಸುಖ ಸ್ಥಾನದಲ್ಲಿ ರವಿ ಮತ್ತು ಕೇತು ಇರುವುದರಿಂದ ವೈದ್ಯರ ದರ್ಶನ ಅಗತ್ಯವಿದ್ದರೆ ಅಗತ್ಯವಾಗಿ ಮಾಡಿಸಿಕೊಳ್ಳಿರಿ .17 ರಂದು ರವಿ ತುಲಾ ರಾಶಿಗೆ ಸಂಚಾರ ಮಾಡುತ್ತಾನೆ ನಂತರ ತೊಂದರೆ ಇರುವುದಿಲ್ಲ ಪಾಲುಗಾರಿಕೆ ವ್ಯವಹಾರದಲ್ಲಿ ಉನ್ನತಿಯನ್ನು ಸಾಧಿಸಲಿದ್ದೀರಿ .ಪುಣ್ಯ ಕ್ಷೇತ್ರಗಳ ದರ್ಶನ ಮಾಡಿದರೆ ಒಳ್ಳೆಯದು .ನರ ,ಎಲುಬು ಬಗ್ಗೆ ಎಚ್ಚರವಿರಲಿ .ಹತ್ತಿರದ ಸಂಬಂಧಗಳಲ್ಲಿ ಒಡಕು ಬಾರದಂತೆ ನೋಡಿಕೊಳ್ಳಿರಿ .
ಕರ್ಕಾಟಕ :ಅಷ್ಟಮದ ಶನಿಯ ಕಾರಣದಿಂದ ಖರ್ಚು ವಿಪರೀತವಾಗಿ ಬರುವ ಸಾಧ್ಯತೆ ಇರುವುದರಿಂದ ನೀವು ಹಾಕಿಕೊಳ್ಳುವ ಯೋಜನೆಗಳು ಬರುವ ಆದಾಯವನ್ನು ಮೀರದಂತೆ ನೋಡಿಕೊಳ್ಳಬೇಕಾಗಿದೆ .ಗುರು ವಕ್ರ ಗತಿಯಲ್ಲಿ ಇದ್ದಾನೆ ಮನೆ ,ಭೂಮಿ ವಾಹನ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯನ್ನು ಚತುರ್ಥದಲ್ಲಿ ಇರುವ ಬುಧ ಸೂಚಿಸುತ್ತಿದ್ದಾನೆ .ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬಂದಹಾಗೆ ದೋಷದ ಪ್ರಮಾಣ ಕಡಿಮೆ ಆಗುತ್ತಾ ಹೋಗಲಿದೆ .ಪಿತ್ರಾರ್ಜಿತ ಆಸ್ತಿ ಕೈ ತಪ್ಪದಂತೆ ನೋಡಿಕೊಳ್ಳುವ ,ಜಗಳ ಬರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ .ನಿಮ್ಮ ಮಿತ್ರರನ್ನು ದೂರ ಮಾಡಿಕೊಳ್ಳಬೇಡಿರಿ .ಯಾರನ್ನೂ ನಂಬದಂತಹ ಮನೋಸ್ಥಿತಿ ನಿಮ್ಮದಾಗಲಿದೆ .
ಸಿಂಹ : ನಿಮಗೆ ಉತ್ತಮವಾದ ದೈವಾನುಗ್ರಹವಿರುವ ಸಮಯ .ನಗುಮುಖ ನಿಮಗೆ ಹಲವಾರು ಸಮಸ್ಯೆಗಳನ್ನು ದೂರಮಾಡಲಿದೆ .ಭೂಮಿ ವ್ಯವಹಾರ ಮಾಡುವವರಿಗೆ ದಿನಾಂಕ 20 ರ ವರೆಗೆ ಬಹಳ ಒಳ್ಳೆಯ ಸಮಯ .ಉದ್ಯೋಗ ಹುಡುಕುವವರು ಸಿಕ್ಕಿದ ಉದ್ಯೋಗಕ್ಕೆ ಸೇರಿಕೊಳ್ಳುವುದು ಉತ್ತಮವಾದ ಮಾರ್ಗವಾಗಿದೆ . ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಸಮಯ .ಸಂಗೀತ ,ನೃತ್ಯ ಕಲೆಯಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ . ಮಾತಿನಲ್ಲಿ ಹಿಡಿತವಿರಲಿ .ರಾಜಕೀಯ ವ್ಯಕ್ತಿಗಳು ಮಾತಾಡುವಾಗ ಎಚ್ಚರವಹಿಸಿರಿ .ಸಂಗಾತಿಯೊಂದಿಗೆ ಹೊಂದಿಕೊಂಡು ಮುನ್ನೆಡೆಯಿರಿ .ಆದಿತ್ಯ ಹೃದಯ ಪಾರಾಯಣ ಮಾಡುವುದು ಅಗತ್ಯವಾಗಿದೆ .
ಕನ್ಯಾ : ಗುರು 04. 02.2024 ರ ವರೆಗೆ ವಕ್ರಗತಿಯಲ್ಲಿ ಇರುವುದರಿಂದ ದೈವಾನುಗ್ರಹದ ಕೊರತೆಯಲ್ಲಿ ಇರುತ್ತೀರಿ .ಅತಿಯಾದ ಕಾರ್ಯದ ಒತ್ತಡದಿಂದ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಬೇಕಾದ ಅವಶ್ಯಕತೆ ಇದೆ .ನೀವು ಯಾವುದೇ ಉನ್ನತ ಸ್ಥಾನ ಮಾನ ಹೊಂದಿದವರಿದ್ದರೂ ನಿಮ್ಮಲ್ಲಿ ಭಯವೊಂದು ಆವರಿಸಲಿದೆ .ಪತ್ನಿಯ ಸಹಕಾರದಲ್ಲಿಯೂ ಕೊರತೆ ಕಂಡು ಬರಲಿದೆ .ಸಮುದ್ರಕ್ಕೆ ಹೋದರೂ ಮೊಣಕಾಲು ನೀರು ಎಂಬಂತಾಗಲಿದೆ .ಮಕ್ಕಳ ವಿದ್ಯಾಭ್ಯಾಸ ಯಶಸ್ವಿಯಾಗಿ ನಡೆಯಲಿದೆ . ಬಂಧುಗಳ ನೆರವು ನಿಮ್ಮ ನಿರೀಕ್ಷೆಯಂತೆ ಸಿಗಲಾರದು .ಮಾತು ಕೊಡುವ ಮೊದಲು ಉಳಿಸಿಕೊಳ್ಳಲು ಸಾಧ್ಯವೇ ಎಂಬುವುದನ್ನು ನೋಡಿಕೊಳ್ಳಿರಿ .
ತುಲಾ : ಗುರುವಿನ ಅನುಗ್ರಹ ನಿಮಗೆ 04.02.2025 ರ ವರೆಗೆ ಮತ್ತೊಮ್ಮೆ ಪ್ರಾಪ್ತಿಯಾಗಿದೆ . ನಿಮ್ಮ ನ್ಯಾಯಯುತವಾದ ನಿರೀಕ್ಷೆಗಳು ಕೈಸೇರಲಿವೆ. ಹಲವಾರು ಜವಾಬ್ದಾರಿಗಳು ನಿಮ್ಮನ್ನು ಆವರಿಸಲಿವೆ .ನೀವಾಡುವ ಸುಸಂಸ್ಕೃತ ಮಾತೇ ನಿಮಗೆ ಸಹಾಯವಾಗಿ ಬರಲಿದೆ .ಮಕ್ಕಳೊಂದಿಗೆ ಮಕ್ಕಳಾಗಿ ವರ್ತಿಸುವ ಕಲೆಯನ್ನು ಬೆಳೆಸಿಕೊಳ್ಳಿರಿ .ವಿದ್ಯಾಭ್ಯಾಸದಲ್ಲಿ ಪ್ರಯತ್ನ ಅಗತ್ಯವಿದೆ .ಬರುವ ಆದಾಯದಲ್ಲಿ ಹೆಚ್ಚಳವಾಗಲಿದೆ . ತೆಂಗಿನ ಬೆಳೆಗಾರರು ಉತ್ತಮ ಆದಾಯವನ್ನು ಪಡೆಯಲಿದ್ದಾರೆ . ಹಿರಿಯರ ಆರೋಗ್ಯದ ಕಡೆಗೆ ನಿಮ್ಮ ಗಮನವಿರಲಿ .
ವೃಶ್ಚಿಕ : ಗುರುವಿನ ಅನುಗ್ರಹದ ಕೊರತೆ ಕಂಡು ಬರಲಿದೆ .ಜನ್ಮ ರಾಶಿಯಲ್ಲಿ ಶುಕ್ರ ಬಂದಿರುವುದು ಶುಭ ಫಲವಾಗಿದೆ . 17.10.2024 ರ ವರೆಗೆ ರವಿ ನಿಮಗೆ ಲಾಭ ಕ್ಷೇತ್ರದಲ್ಲಿ ಇರುವುದರಿಂದ ರಾಜಕೀಯ ವ್ಯಕ್ತಿಗಳು ಉನ್ನತ ಸ್ಥಾನ ಮಾನ ಹೊಂದಲಿದ್ದಾರೆ .ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲೇ ಬೇಕು .ಬರುವ ಸಂವತ್ಸರದಲ್ಲಿ ಗುರು ಅಷ್ಟಮಕ್ಕೆ ಬರುತ್ತಿರುವುದರಿಂದ ಈಗಲೇ ಧಾರ್ಮಿಕವಾಗಿ ನಿಮ್ಮ ಕಾರ್ಯಕ್ರಮಗಳು ಹೆಚ್ಚುತ್ತಾ ಹೋಗಬೇಕಾಗಿದೆ .ಧನ್ವಂತರಿ ಮಂತ್ರ ನಿತ್ಯವೂ ಪಾರಾಯಣ ಮಾಡಿರಿ . ನಿಮ್ಮ ಹಿತ ಶತ್ರುಗಳಿಂದಲೇ ಸಮಸ್ಯೆ ಬರಲಿದೆ . ತಿಳಿದವರ ,ಹಿರಿಯರ ಮಾತುಗಳನ್ನು ಆಲಿಸುವ ತಾಳ್ಮೆ ನಿಮಗಿರಲಿ .ಹಣಕಾಸಿನ ವ್ಯವಹಾರ ನ್ಯಾಯಾಲಯದ ಮೆಟ್ಟಲಿನ ವರೆಗೆ ಹೋದರೂ ಆಶ್ಚರ್ಯವಿಲ್ಲ .
ಧನು : ದಿನಾಂಕ 04.02.2025 ರ ವರೆಗೆ ಗುರು ನಿಮಗೆ ವಕ್ರಿಯಾಗಿ ಶುಭ ಫಲವನ್ನು ನೀಡುತ್ತಿದ್ದಾನೆ .ಶುಕ್ರ ವ್ಯಯದಲ್ಲಿ ಇರುವುದರಿಂದ ಮಹಿಳೆಯರು ವಯಕ್ತಿಕ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ . ಪುರುಷರು ಮಹಿಳೆಯರ ವಿಷಯದಲ್ಲಿ ಹನಿ ಟ್ರಾಪ್ಗೆ ಬೀಳದಂತೆ ಎಚ್ಚರವಹಿಸಿರಿ .ಸಪ್ತಮದಲ್ಲಿ ಇರುವ ಕುಜ ಕೆಲವೊಮ್ಮೆ ಸಂಗಾತಿಯೊಂದಿಗೆ ಬಿಸಿ ಬಿಸಿ ಮಾತುಗಳಿಗೆ ಕಾರಣವಾಗುವ ಸಾಧ್ಯತೆ ಇದೆ .ಕೆಲವೊಂದು ಅಸಾಧ್ಯವಾದ ವಿಷಯಗಳು ನಿಮ್ಮಿಂದ ಸಾಧ್ಯವಾಗಲಿದೆ . ನಾಗ ದೇವರಿಗೆ ನಿಮ್ಮಿಂದ ಸಾಧ್ಯವಿರುವ ಸೇವೆ ನಡೆಯುತ್ತಿರಲಿ .ರಾಜಕೀಯ ವ್ಯಕ್ತಿಗಳು ಎಚ್ಚರವಾಗಿರಿ . ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ .
ಮಕರ : ಸುಖ ಸ್ಥಾನದ ಗುರು ಅಷ್ಟೊಂದು ಪೂರ್ಣ ಫಲವನ್ನು ನೀಡುವುದಿಲ್ಲ. ಸಾಡೇ ಸಾತ್ ಶನಿಯ ಪ್ರಭಾವ 29.03.2025 ರ ವರೆಗೆ ಇರುತ್ತದೆ “ಓಂ ಶಂ ಶನೈಶ್ಚರಾಯ ನಮ: ‘” ಪ್ರತಿನಿತ್ಯ 108 ಬಾರಿ ಹೇಳುತ್ತಾ ಬನ್ನಿರಿ .ನಿಮ್ಮ ಒಳ್ಳೆಯ ಆರೋಗ್ಯಕ್ಕಾಗಿ ಧನ್ವಂತರಿ ಮಂತ್ರವನ್ನು ಹೇಳಬೇಕು .ಹಣ ಹೂಡುವಾಗ ಬಹಳ ಎಚ್ಚರವಹಿಸಬೇಕು . ಮೋಸ ಹೋಗುವವರು ಇರುವಾಗ ಮೋಸ ಮಾಡುವವರು ಇದ್ದಾರೆ .ಭೂಮಿಯ ವಿಚಾರದಲ್ಲಿ ನ್ಯಾಯಾಂಗ ಹೋರಾಟ ಈಗ ಬೇಡ .ಅಕ್ಟೋಬರ್ 20 ರ ನಂತರವೇ ಮಾಡಿರಿ .ಪ್ರಾಣಾಯಾಮ ,ಯೋಗ ನಿಮಗೆ ಅಗತ್ಯವಿದೆ .ಯಾವುದೇ ಮಹತ್ತರ ತೀರ್ಮಾನ ತೆಗೆದುಕೊಳ್ಳುವಾಗ ಇನ್ನೊಬ್ಬರ ಸಲಹೆ ತೆಗೆದುಕೊಳ್ಳಲು ಮರೆಯಬೇಡಿರಿ .
ಕುಂಭ : ಗುರು ವಕ್ರಿಗತಿ ಹೊಂದಿ ಅನುಗ್ರಹವನ್ನು ಹಿಂದಕ್ಕೆ ಪಡೆದು ಕೊಂಡಿದ್ದಾನೆ .ರಾಹು ನಿಮಗೆ ಸಂದರ್ಭಕ್ಕೆ ತಕ್ಕಂತೆ ಸುಳ್ಳು ಮಾತನ್ನು ಮಾತಾಡಿಸುತ್ತಾನೆ .ಆದರೆ ಮುಂದಿನ ದಿನಗಳಲ್ಲಿ ತೊಂದರೆ ಆಗುವ ಸಾಧ್ಯತೆ ಇರುತ್ತದೆ .ಬರುವ ಆದಾಯಕ್ಕೆ ಯಾವುದೇ ತೊಂದರೆ ಬರದಂತೆ ಕುಜ ನೋಡಿಕೊಳ್ಳಲಿದ್ದಾನೆ .ಭೂಮಿ ವ್ಯವಹಾರ ಮಾಡುವವರಿಗೆ ಒಳ್ಳೆಯ ಸಮಯವಾಗಿದೆ .ದಾಖಲೆ ಪತ್ರ ಸರಿಯಾಗಿದೆಯೇ ಎಂಬುವುದನ್ನು ನೋಡಿಕೊಳ್ಳುವುದು ಅಗತ್ಯವಾಗಿದೆ .ಮಕ್ಕಳ ಬಗ್ಗೆ ಎಚ್ಚರವಾಗಿರಿ .ಜನ್ಮ ರಾಶಿಯಲ್ಲಿರುವ ಶನಿ ಪಂಚಮದ ಕುಜನನ್ನು ನೋಡುತ್ತಿದ್ದಾನೆ . ಉದ್ಯೋಗವನ್ನು ಪಡೆಯುವ ನಿರೀಕ್ಷೆಯಲ್ಲಿ ಇರುವವರು ಸಿಕ್ಕಿದ ಉದ್ಯೋಗಕ್ಕೆ ಸೇರಿಕೊಳ್ಳುವುದು ಅಗತ್ಯವಾಗಿದೆ .
ಮೀನ : ಗುರುವಿನ ಅನುಗ್ರಹ 04.02.2025 ರ ವರೆಗೆ ಗುರು ವಕ್ರಿಯಾಗಿ ಶುಭ ಫಲವನ್ನು ನೀಡುತ್ತಿದ್ದಾನೆ .ಅನಿರೀಕ್ಷಿತ ಧನ ಲಾಭ .ಕುಜ ನೀವು ತಪ್ಪು ಮಾಡದಿದ್ದರೂ ಅಪವಾದ ಬರುವಂತೆ ಮಾಡುತ್ತಾನೆ .ಜವಾಬ್ದಾರಿ ನಿಮ್ಮ ಮೇಲೆ ಇರುವಾಗ ಎಲ್ಲರೂ ನಿಮ್ಮ ಮೇಲೆ ಒಂದು ದೃಷ್ಟಿ ಇಟ್ಟಿರುತ್ತಾರೆ . ತಾಯಿಯವರ ಆರಿಗ್ಯದ ಬಗ್ಗೆ ಗಮನ ಇರಲಿ .ಒಬ್ಬ ಮಹಿಳೆ ನಿಮ್ಮ ಅಧಿಕಾರವನ್ನು ಕಸಿದು ಕೊಂಡರೂ ಆಶ್ಚರ್ಯವಿಲ್ಲ.ನಿಮ್ಮ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ .ನಿಮ್ಮ ಮನೆ ನಿರ್ಮಾಣದ ಕನಸು ವಿವಾಹವಾಗದವರಿಗೆ ಕಂಕಣ ಭಾಗ್ಯದ ಕನಸು ,ವಾಹನ ಖರೀಧಿ ಮಾಡುವ ಕನಸು ನನಸಾಗಲಿದೆ .ಹಣ ಒಂದೇ ಬಾರಿ ಬಂದಾಗ ಅದರ ನಿರ್ವಹಣೆ ಬಹಳ ಜಾಗ್ರತೆಯಿಂದ ಕೂಡಿರಲಿ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು .ವಾಸ್ತು ಸಲಹೆ /ವಿವಾಹ ಹೊಂದಾಣಿಕೆ ಮಾಡಿಕೊಡಲಾಗುವುದು .


























