ವಾರ ಭವಿಷ್ಯ ದಿನಾಂಕ 13.04.2025 ರಿಂದ 19.04.2025 ರ ವರೆಗೆ
ವಿಶೇಷ ದಿನಗಳು :13.04.2025…ಮೇಷ ಸಂಕ್ರಮಣ ; ಮೇಷ ರಾಶಿಗೆ ರವಿಗ್ರಹ ಪ್ರವೇಶ :
14.04.2025…ಸೌರ ಯುಗಾದಿ: [ವಿಷು]
ಮೇಷ : ಆರ್ಥಿಕವಾಗಿ ಹಣಕಾಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಿರಿ.ಹಿರಿಯರ ಆರೋಗ್ಯದ ಬಗ್ಗೆ ಆಗಾಗ ತಪಾಸಣೆ ಅಗತ್ಯವಿದೆ. ವೃತ್ತಿರಂಗದಲ್ಲಿ ಹೊಂದಾಣಿಕೆ ಹಾಗೂ ಉತ್ತಮ ಚಿಂತನೆಗಳು ಫಲಕಾರಿ ಆಗಬಲ್ಲವು. ಅವಿವಾಹಿತರಿಗೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ವಿವಾಹ ನಡೆದುಹೋಗಲಿದೆ. ಸಾಮಾಜಿಕ ರಂಗದಲ್ಲಿ ನಯವಂಚಕರ ಬಗ್ಗೆ ಎಚ್ಚರಿಕೆಯಿಂದಿರಿ. ಕೆಲವೊಮ್ಮೆನಿಮ್ಮ ಆಕಾಂಕ್ಷೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಿಕೊಳ್ಳಿರಿ. ಆರೋಗ್ಯದ ಕಡೆಗೂ ಗಮನ ಕೊಡುವುದನ್ನು ಮರೆಯಬೇಡಿರಿ. ವ್ಯಯದಲ್ಲಿ4 ಗ್ರಹರಾದ ಶುಕ್ರ ,ರಾಹು,ಬುಧ ,ಶುಕ್ರ ಇದ್ದಾರೆ. ಕುಜ ಸುಖ ಸ್ಥಾನದಲ್ಲಿ ಅಷ್ಟಮಾಧಿಪತಿಯಾಗಿ ಇದ್ದಾನೆ. ದುರ್ಗಾ ಪ್ರಾರ್ಥನೆ ಅಗತ್ಯವಾಗಿದೆ.
ವೃಷಭ : ವೃತ್ತಿರಂಗದಲ್ಲಿ,ನಿತ್ಯ ವ್ಯವಹಾರದಲ್ಲಿ ಎಲ್ಲರ ಸಹಕಾರ ಪ್ರತ್ಸಾಹ ಸಿಗುವ ಸಮಯ. ಮನೆ, ವ್ಯವಹಾರ ಸ್ಥಳ ಬದಲಾವಣೆ ಆಗುವ ಸಾಧ್ಯತೆ ಇದೆ. ತಾಯಿಯವರ ಬಗ್ಗೆ ಕಾಳಜಿ ವಹಿಸಿರಿ. ಸಹೋದರ ವರ್ಗದವರೊಂದಿಗೆ ಹೊಂದಾಣಿಕೆಯೊಂದಿಗೆ ನಡೆಯಿರಿ. ಮಕ್ಕಳ ಬಗ್ಗೆ ಎಚ್ಚರವಾಗಿರಿ.ಮಡದಿಯ ಸಹಕಾರ ದೊರೆಯಲಿದೆ. ಸ್ವತಂತ್ರ ವ್ಯವಹಾರಗಳಿಗೆ ಸಕಾಲ. ನಿಮ್ಮಿಷ್ಟದಂತೆ ಚಿಂತಿತ ವಿಚಾರಗಳು ಯಶಸ್ವಿಯಾಗಿ ಕಾರ್ಯಗತವಾಗಲಿದೆ.ಮನೆಯಲ್ಲಿ ಶುಭ ಮಂಗಳ ಕಾರ್ಯಗಳ ಸಂಭ್ರಮ.ಕೋರ್ಟ್ ಕಚೇರಿ ಕಾರ್ಯಭಾಗದಲ್ಲಿ ನಿಮದೇ ಮೇಲುಗೈ ಆಗಲಿದೆ. ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇರುತ್ತದೆ. ರುದ್ರ ಪಾರಾಯಣ ಮಾಡುವ ಅಗತ್ಯವಿದೆ.
ಮಿಥುನ : ಅವಿವಾಹಿತರಿಗೆ ವಿವಾಹ ಯೋಗ ಭಾಗ್ಯವಿದ್ದರೂ ಸಮಯ ಕೂಡಿಬರಬೇಕು,ಅದು ಬರುವುದು,ಮೇ 14 ರ ನಂತರವೇ ಆಗಿರುತ್ತದೆ. ನಿಮ್ಮ ಕರ್ತವ್ಯದ ಕಡೆಗೆ ಗಮನವಿಟ್ಟು ಮುಂದುವರಿಯಿರಿ.ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೆಚ್ಚು ಗಮನಹರಿಸುವುದು ಅಗತ್ಯವಿದೆ. ದೇವತಾ ಕಾರ್ಯಗಳಿಗೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ 108 ಶ್ಲೋಕಗಳು ನಿಮ್ಮ ಜೀವನದ ದಾರಿಯನ್ನೇ ಬದಲಾಯಿಸಲಿವೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ತಮ್ಮ ಗಮನ ಹರಿಸುವುದುಅಗತ್ಯವಿದೆ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಒಪ್ಪಿಕೊಳ್ಳುವುದು,ಅಪ್ಪಿಕೊಳ್ಳುವುದು ಅತೀ ಅಗತ್ಯವಾಗಿದೆ. ಒತ್ತಡಗಳನ್ನು ತಾವಾಗಿಯೇ ಕಡಿಮೆ ಮಾಡಿಕೊಳ್ಳುವ ಅಗತ್ಯವಿದೆ.
ಕರ್ಕಾಟಕ : ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿ ಬಂದರೂ ಸಂತಸದ ದಿನಗಳು ಕೂಡಾ ಆರಂಭವಾಗಿ ಮಾನಸಿಕ ನೆಮ್ಮದಿ ಕಂಡು ಬಂದೀತು. ನೆನೆಗುದಿಗೆ ಬಿದ್ದ ನ್ಯಾಯಾಲಯದ ಕೆಲಸಗಳು ಮುನ್ನೆಡೆ ಸಾಧಿಸಲಿವೆ. ವೃತ್ತಿರಂಗದಲ್ಲಿಹಿತ ಶತ್ರುಗಳ ಕಾಟವಿದ್ದರೂ ವಿರೋಧಗಳು ದೂರವಾಗಲಿದೆ. ಗೃಹ ನಿರ್ಮಾಣ,ವಾಹನ ಖರೀಧಿಗಳಿಗೆ ಸಕಾಲ. ನಾನಾ ರೀತಿಯ ಧನ ಸಂಪಾದನೆಯಿಂದ, ಹಿಂದಿನ ಋಣ ಭಾಧೆಯಿಂದ ಮುಕ್ತವಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಯಶಸ್ಸು ದೊರಕಲಿದೆ.ಜನ್ಮ ರಾಶಿಯಲ್ಲಿ ಕುಜನಿದ್ದಾನೆ. ಭಾಗ್ಯ ಸ್ಥಾನದಲ್ಲಿ 4 ಮಂದಿ ಗ್ರಹರಿದ್ದಾರೆ. ಹಿರಿಯರ ಭಾವನೆಗಳಿಗೆ ಗೌರವ ಕೊಡುವುದು ನಿಮ್ಮ ಕರ್ತವ್ಯವಾಗಿದೆ. ಗುರು ಲಾಭಕ್ಷೇತ್ರದಲ್ಲಿ ಇರುವ ಕಾರಣ ನಿಮ್ಮ ಎಲ್ಲ ವ್ಯವಹಾರಗಳು ಯಶಸ್ವಿಯಾಗಲಿವೆ.
ಸಿಂಹ : ಇಂದಿನಿಂದ ಕೆಲವೊಂದು ಬದಲಾವಣೆಗಳನ್ನು ನೀವು ಗಮನಿಸುವಿರಿ. ರವಿ ಉಚ್ಚ ಗ್ರಹನಾಗಿ ಮೇಷ ರಾಶಿಗೆ ಬಂದಿದ್ದಾನೆ. ಆದರೂ ಅಷ್ಟಮದಲ್ಲಿ ಶುಕ್ರ ,ರಾಹು,ಬುಧ ,ಶನಿ ಇದ್ದಾರೆ. ಸ್ವಪ್ರಯತ್ನವಿದ್ದರೂ ನಿರೀಕ್ಷಿತ ಫಲ ದೊರೆಯಲಾರದು.ಆರ್ಥಿಕವಾಗಿ ಯಾವುದೇ ತೊಂದರೆ ಇರಲಾರದು. ಆದರೆ ಆರೋಗ್ಯದ ಸಮಸ್ಯೆ,ಮಾನಸಿಕ ಒತ್ತಡ ನಿಮ್ಮನ್ನು ಪದೇ ಪದೇ ಕಾಡಲಿದೆ. ಕಾರ್ಯ ಕ್ಷೇತ್ರದಲ್ಲಿರುವ ಹಲವು ವೈರುಧ್ಯಗಳು, ಗಂಭೀರ ಸ್ವಭಾವದವರಾದ ,ಸ್ವಾಭಿಮಾನಿಗಳಾದ ನಿಮಗೆ ಅಚ್ಚರಿ ತರಲಿದೆ. ರವಿ ಬದಲಾವಣೆಯಿಂದ ಅನುಕೂಲಗಳೇ ಅಧಿಕವಾಗಲಿದೆ. ರಾಜಕೀಯದಲ್ಲಿರುವವರಿಗೆ ಉತ್ತಮ ಸ್ಥಾನ ಮಾನ ದೊರೆಯಲಿದೆ.
ಕನ್ಯಾ : ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮತೋಲನವನ್ನುಕಾಯ್ದುಕೊಳ್ಳಿರಿ.ರವಿ ಅಷ್ಟಮಕ್ಕೆ ಬಂದಿರುವುದರಿಂದ ಆರೋಗ್ಯದ ಕಡೆಗೆ ಗಮನವಿರಲಿ. ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆಯಿರಿ. ಕುಟುಂಬದ ಸಂಬಂಧಗಳನ್ನು ಗಟ್ಟಿಯಾಗಿಸಲು ಮನಸ್ಸು ಮಾಡಿರಿ. ಕುಟುಂಬದ ಸದಸ್ಯರ ಅಭಿಪ್ರಾಯಗಳನ್ನು ಗೌರವಿಸುವುದು ಅಗತ್ಯವಾಗಿದೆ. ಸಪ್ತಮದಲ್ಲಿರುವ 4 ಗ್ರಹರು ಈ ಸೂಚನೆಯನ್ನು ನೀಡುತ್ತಿದ್ದಾರೆ. ಅವಿವಾಹಿತರು ಗಡಿಬಿಡಿ ಮಾಡಬಾರದು. ಹನಿಟ್ರಾಪ್ ಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಬರುತ್ತಿರುವ ಹಣಕಾಸಿಗೆ ತೊಂದರೆ ಇರದಿದ್ದರೂ ಎಚ್ಚರಿಕೆ ಅತೀ ಅಗತ್ಯವಿದೆ. ಸಂಗಾತಿಯ ಮಾತಿಗೆ ಮನ್ನಣೆ ನೀಡುವುದು ಅಗತ್ಯವಿದೆ.ಪ್ರಸ್ತುತ ದೈವಾನುಗ್ರವಿದೆ.
ತುಲಾ : ಕೌಟುಂಬಿಕ ಸಮಸ್ಯೆಗಳಿಂದ ದೂರವಾಗಲು ಬಯಸುತ್ತಿರುವ ನಿಮಗೆ ಮೇ 14 ರಿಂದ ಮುಕ್ತಿ ದೊರಕಲಿದೆ. ಅವಿವಾಹಿತರು ಅನೇಕ ತಡೆಗಳ ಮೂಲಕ ಕಂಕಣ ಭಾಗ್ಯವನ್ನು ಪಡೆಯಲಿದ್ದಾರೆ.ಅನೇಕ ವಿಧಗಳಿಂದ ಧನಲಾಭವನ್ನು ಹೊಂದಲಿದ್ದೀರಿ. ಸಂಸಾರದಲ್ಲಿ ಹೊಂದಾಣಿಕೆ ಅತೀ ಅಗತ್ಯವಿದೆ.ಕೃಷಿಕರು ಉತ್ತಮ ಲಾಭವನ್ನು ಪಡೆಯಲಿದ್ದೀರಿ. ನೃತ್ಯ,ಸಂಗೀತ ,ಕ್ರೀಡಾಳುಗಳು ಉತ್ತಮ ಪ್ರೋತ್ಸಾಹವನ್ನು ಹೊಂದಲಿದ್ದೀರಿ. ನಿಮ್ಮ ವ್ಯವಹಾರ,ಔದ್ಯೋಗಿಕ ಕ್ಷೇತ್ರದಲ್ಲಿ ಪರಸ್ಪರ ಮನಸ್ತಾಪ ಮಾಡಿಕೊಳ್ಳದೆ ಮೃಧು ಧೋರಣೆ ಹೊಂದುವುದು ಅಗತ್ಯವಿದೆ. ಶಿವ ಸಹಸ್ರನಾಮವನ್ನು ಪಾರಾಯಣವನ್ನು ಮಾಡಿರಿ.
ವೃಶ್ಚಿಕ : ಮಕ್ಕಳಿಲ್ಲದವರಿಗೆ ಮಕ್ಕಳಿಲ್ಲವೆಂಬ ಚಿಂತೆಯಾದರೆ ,ಮಕ್ಕಳಿದ್ದವರಿಗೆ ಅವರ ಅತಿರೇಖ ವರ್ತನೆಯ ಚಿಂತೆ ,ಪಂಚಮದ ಶನಿಯ ಜೊತೆಗೆ ರಾಹು ಶುಕ್ರ ಬುಧ ನಿರುವುದು ಕಾರಣವಾಗಲಿದೆ. ಸಾಂಸಾರಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ಅಲ್ಲಿ ಗುರುವಿದ್ದಾನೆ. ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಕಾಲಿಕವಾಗಿ ದೊರೆತು ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸುವಿರಿ. ಪಂಚಮದ ಗ್ರಹರ ಪ್ರತಿಕೂಲ ಸ್ಥಿತಿಯ ಕಾರಣ ಮಾನಸಿಕ ನೆಮ್ಮದಿಯ ಕೊರತೆ ಇರುತ್ತದೆ. ಬರುತ್ತಿರುವ ಹಣಕ್ಕೆ ಕೊರತೆ ಇರುವುದಿಲ್ಲ.ರವಿ ಮೇಷ ರಾಶಿಯ ಸಂಚಾರ ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಮಾನ ಸಿಗಲಿದೆ. ಮನೆಯಲ್ಲಿ ಮಂಗಲಮಯ ವಾತಾವರಣ ಇರಲಿದೆ.ಮೇ 14 ರಿಂದ ಗುರು ಅಷ್ಟಮಕ್ಕೆ ಹೋಗಲಿದ್ದು ಪರಿಹಾರ ಆಗಲೇ ಬೇಕಾಗಿದ್ದು[ 2……5 ನೆಯವನು 8 ಕ್ಕೆ ಹೋಗುವುದು ]ರುದ್ರ ಪಾರಾಯಣ ಅಗತ್ಯವಾಗಿದೆ.
ಧನು : ಪ್ರಸ್ತುತ ನಿಮ್ಮ ಸುಖ ಸ್ಥಾನದಲ್ಲಿ 4 ಗ್ರಹರಿದ್ದು ಮನೆಯಲ್ಲಿ ಅಶಾಂತಿಯ ವಾತಾವರಣವಿದ್ದರೂ,ಮೇ 14 ರ ನಂತರ ಅದು ಸರಿಯಾಗಲಿದೆ.ಉತ್ತಮ ಸಂತೋಷದ ದಿನಗಳ ಆಗಮನ ವಾಗಲಿದೆ. ವಿಲಾಸೀ ಜೀವನದ ಖುಷಿಯನ್ನು ಅನುಭವಿಸಲಿದ್ದೀರಿ. ಆರ್ಥಿಕವಾಗಿ ಸಮಸ್ಯೆಗಳು ಅಷ್ಟೊಂದು ಇಲ್ಲದಿದ್ದರೂ ಮನಸ್ಸಿಗೆ ಕಿರಿಕಿರಿ ಇರುತ್ತದೆ. ಖರ್ಚು ವೆಚ್ಚಗಳನ್ನು ಹತೋಟಿಯಲ್ಲಿ ಇಟ್ಟು ಕೊಳ್ಳುವುದು ಅಗತ್ಯವಿದೆ.’ಧನು’ ವೆಂದರೆ ಬಿಲ್ಲು ಬಾಣ ಅಂದರೆ ಯುದ್ಧ .ಸದಾ ಯುದ್ಧಕ್ಕೆ ಹೊರಟವರ ರೀತಿಯಲ್ಲಿ ಇರುತ್ತೀರಿ. ಶಿವ ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ವೃತ್ತಿರಂಗದಲ್ಲಿ ನಿಮ್ಮ ಸಾಮರ್ಥ್ಯಹೆಚ್ಚಾಗಲಿದೆ. ಗಂಟು ನೋವು ,ಕಾಲು ನೋವು ಇರಲಿದೆ. ಹೃದಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯಿರಿ.
ಮಕರ : ಅದೃಷ್ಟವಂತರು ನೀವು. ರಾಜಕೀಯದಲ್ಲಿ ಇರುವವರಿಗೆ ಉನ್ನತ ಸ್ಥಾನ ಮಾನ ಸಿಗಲೇಬೇಕು.ಮಕ್ಕಳಿಂದ ಸಂತೋಷವನ್ನು ಅನುಭವಿಸುವಿರಿ. ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ. ನಿಮ್ಮ ಆರೋಗ್ಯ ದ ಕಡೆಗೆ ಗಮನವಿರಲಿ.ಹೊಸ ವಾಹನ ಮನೆ ಭೂಮಿ ಖರೀದಿಸುವ ಯೋಗ ನಿಮ್ಮದಾಗಲಿದೆ. ಹೃದಯ ಸಮಸ್ಯೆ ಇರುವವರು ಮದ್ಯ ಸೇವನೆಯಿಂದ ಪೂರ್ಣವಾಗಿ ಹೊರಗೆ ಬನ್ನಿರಿ. ನೀವು ಬಯಸದಿದ್ದರೂ ರವಿ ಸುಖ ಸ್ಥಾನದಲ್ಲಿ ಬಂದು ಕೆಲವೊಂದು ಬದಲಾವಣೆಗಳನ್ನು ತರಲಿದ್ದಾನೆ.ಅವನು ಉಚ್ಚ ಸ್ಥಾನದಲ್ಲಿ ಇರುತ್ತಾನೆ . ನಿಮ್ಮ ಸಂಗಾತಿಯ ಆರೋಗ್ಯದ ಕಡೆಗೆ ಗಮನವಿರಲಿ.
ಕುಂಭ : ದ್ವಿತೀಯಾದಲ್ಲಿ 4 ಗ್ರಹರಿದ್ದಾರೆ. ಸುಖ ಸ್ಥಾನದಲ್ಲಿ ಗುರು ಇದ್ದಾನೆ. ದೇವರ ಅನುಗ್ರಹಕ್ಕಾಗಿ ಪ್ರಾರ್ಥನೆಯನ್ನು ಮಾಡುವಿರಿ. ಸಾಡೇ ಸಾತ್ ಶನಿಯ ಪ್ರಭಾವ ಮುಂದುವರಿಯಲಿದೆ. ಹಣ ಮತ್ತು ಮಾತು ನಿಮ್ಮ ಹಿಡಿತದಲ್ಲಿ ಇರಲಿ. ಸಂಸಾರವೆಂದರೆ ಹೆಂಡತಿ ಮಕ್ಕಳು ,ಅವರು ಖುಷಿಯಲ್ಲಿ ಇದ್ದರೆ ನಾವೂ ಖುಷಿಯಲ್ಲಿ ಇರುತ್ತೇವೆ.ಆದರೆ ನಿಮ್ಮ ಒಮ್ಮೆಲೇ ಬರುವ ಒಂದು ನಿಮಿಷದ ಸಿಟ್ಟು ಎಲ್ಲವನ್ನೂ ನುಂಗಿ ಹಾಕಲಿದೆ. ಅದರ ಹಿಡಿತವೇ ಜೀವನವಾಗಿದೆ. ಅವಿರತ ಕಾರ್ಯದೊತ್ತಡದಿಂದ ಆಗಾಗ ದೇಹಾಯಾಸ ಆಗಲಿದೆ.ರಾಜಕೀಯ ಕ್ಷೇತ್ರದಲ್ಲಿ ಮಿಂಚಲಿದ್ದೀರಿ. ಹಣ ಮಾಡುವವರಿಗೆ ಉತ್ತಮ ಅವಕಾಶವಿದೆ.ಭೂಮಿ ವ್ಯವಹಾರ ಉತ್ತಮವಾಗಲಿದೆ.
ಮೀನ : ಜನ್ಮ ರಾಶಿಯಲ್ಲಿ 4 ಗ್ರಹರು,ನಿಮ್ಮ ಜೀವನವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವವರು. ಇವರನ್ನು ನೀವು ಸರಿಯಾಗಿ ನೋಡಿಕೊಂಡರೆ ,ಅವರು ನಿಮ್ಮನ್ನು ಉತ್ತಮವಾಗಿ ನೋಡಿಕೊಳ್ಳಲಿದ್ದಾರೆ. l”ನಮ : ಸೂರ್ಯಾಯ ,ಚಂ ದ್ರಾಯ,ಮಂಗಳಾಯ ,ಬುಧಾಯ ಚ , ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ :, ಓಂ ಶಂ ಶನೈಶ್ಚರಾಯ ನಮ: ll 108 ಬಾರಿ ಹೇಳುತ್ತಾ ಬನ್ನಿರಿ. ಮಾತು ಹಣ ,ಕೋಪ ಎಲ್ಲವೂ ನಿಮ್ಮ ಹಿಡಿತದಲ್ಲಿ ಇರಲಿ.ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ. ಅವಿವಾಹಿತರಿಗೆ ವಿವಾಹ ಯೋಗ ಕಷ್ಟ ಸಾಧ್ಯವಾಗಿದೆ. ಸರಕಾರಿ ಕೆಲಸ ಕಾರ್ಯಗಳು ಅಡೆ ತಡೆಗಳಿಂದಲೇ ಮುಕ್ತಾಯವಾಗಲಿದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುತ್ತದೆ. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಿವಾಹ ಹೊಂದಾಣಿಕೆ/ವಾಸ್ತು ಸಲಹೆ ತಿಳಿಸಲಾಗುವುದು.





































