ವಾರ ಭವಿಷ್ಯ ದಿನಾಂಕ 11.08.2024 ರಿಂದ 17.08.2024 ರ ವರೆಗೆ
ವಿಶೇಷ ದಿನಗಳು
:16.08.2024…..ಸಿಂಹ ಸಂಕ್ರಮಣ ;ಏಕಾದಶಿ ;ವರ ಮಹಾ ಲಕ್ಷ್ಮೀ ವೃತಮ್
ಮೇಷ : ಈ ವಾರದಲ್ಲಿ ಶುಭ ಫಲ ಕೊಡುವ ಗ್ರಹಗಳ ಸಂಖ್ಯೆ :7 ; ಅದೃಷ್ಟ ಸಂಖ್ಯೆ :1 ಮತ್ತು 9 ; ಅದೃಷ್ಟ ಬಣ್ಣ :ಕೆಂಪು ಮತ್ತು ಕೇಸರಿ ; ಅದೃಷ್ಟ ತರುವ ದಿಕ್ಕು :ಉತ್ತರ ಮತ್ತು ಪಶ್ಚಿಮ ; ಗುರುವಿನ ಅನುಗ್ರಹ ಪ್ರಸ್ತುತ ಇರುವ ನೀವು ಯಾವುದೇ ವಿಷಯದಲ್ಲಿ ಹೆದರುವ ಅಗತ್ಯವಿಲ್ಲ.”ಧೈರ್ಯಮ್ ಸರ್ವತ್ರ ಸಾಧನಮ್ “ “ಭಯಮ್ ಏವ ಶತ್ರು: “ ಆರೋಗ್ಯದಲ್ಲಿ ಸಮಸ್ಯೆ ಗಂಟಲು ನೋವು ಇರುತ್ತದೆ .ಮನೆ ಭೂಮಿ ,ವಾಹನ ಖರೀಧಿ ಮಾಡಲು ಸೂಕ್ತ ಸಮಯವಾಗಿದೆ ನೀವು ಮಾಡುವ ಯಾವುದೇ ವ್ಯಾಪಾರ
,ವ್ಯವಹಾರದಲ್ಲಿ ಮಾಡುವ ಯಾವುದೇ ಉದ್ಯೋಗದಲ್ಲಿ ಯಶಸ್ಸನ್ನು ಕಾಣುವಿರಿ .ಮಾತಿನಲ್ಲಿ ನಿಷ್ಟುರತೆ ,ಉದ್ವೇಗ ಇರುತ್ತದೆ .ವಿದ್ಯಾರ್ಥಿಗಳಿಗೆ ಶುಭವಾಗಲಿದೆ .29.03.2025 ರ ವರೆಗೆ ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.
ವೃಷಭ :ಈ ವಾರದಲ್ಲಿ ಶುಭ ಫಲ ಕೊಡುವ ಗ್ರಹರ ಸಂಖ್ಯೆ :6; ನಿಮ್ಮ ಅದೃಷ್ಟ ಸಂಖ್ಯೆ 6 ಮತ್ತು 2, ಅದೃಷ್ಟ ತರುವ ದಿಕ್ಕು ಪೂರ್ವ ಮತ್ತು ದಕ್ಷಿಣ ; ಅದೃಷ್ಟ ಬಣ್ಣ ಕೇಸರಿ ಮತ್ತು ಬಿಳಿ ದೇವರ ಅನುಗ್ರಹವಿರುವ ವಾರವಾಗಿದೆ .ನೀವು ಕೈಗೊಳ್ಳುವ ಯಾವುದೇ ಕೆಲಸಗಳು ವ್ಯವಹಾರಗಳು ಕೈಗೂಡಳಿವೆ ಮನೆಯಲ್ಲಿ ನೆಮ್ಮದಿ ನೆಲೆಸಲಿದೆ .ಮನೆ ವಾಹನ ,ಭೂಮಿ ಖರೀಧಿ ಮಾಡಲು ಅನುಕೂಲವಾದ ಸಮಯವಾಗಿದೆ. ತಾಯಿಯವರಿಂದ ಸಹಕಾರ ,ಸಲಹೆ ಸಿಗಲಿದೆ .ನಿಮ್ಮ ಮನಸ್ಸಿಗೆ ದಿನಾಂಕ 16 ರ ವರೆಗೆ
ನೆಮ್ಮದಿ ಇರುತ್ತದೆ .ಕೃಷಿಕರು ಸರಕಾರಿ ನೌಕರರು ,ಸ್ವಂತ ಉದ್ಯೋಗ ಮಾಡುವವರು ಉತ್ತಮ ಲಾಭವನ್ನು ಪಡೆಯಲಿದ್ದಾರೆ .ರುಚಕ ಯೋಗದಲ್ಲಿದ್ದೀರಿ .ಗುರು ,ಮಂಗಳನಿಗೆ ಪರಿಹಾರ ಅಗತ್ಯವಿದೆ.
ಮಿಥುನ : ನಿಮಗೆ ಶುಭ ತರುವ ಗ್ರಹರ ಸಂಖ್ಯೆ :7 ;ನಿಮ್ಮ ಅದೃಷ್ಟ ಸಂಖ್ಯೆ :5ಮತ್ತು 2 ;ನಿಮ್ಮ ಅದೃಷ್ಟ ಬಣ್ಣ : ಹಸಿರು ಮತ್ತು ಕೇಸರಿ ;ಅದೃಷ್ಟ ತರುವ ದಿಕ್ಕು ಪಶ್ಚಿಮ ಮತ್ತು ದಕ್ಷಿಣ ; ಇತರರ ದೃಷ್ಟಿ ನಿಮ್ಮ ವ್ಯವಹಾರದ ಮೇಲೆ ಬಿದ್ದಾಗ ಅದು ಕೃತ್ರಿಮ ದೋಷವಾಗಿ ಪರಿವರ್ತನೆ ಆಗುತ್ತದೆ .ದೈವಾನುಗ್ರಹದ ಕೊರತೆಯೂ ಇರುವುದರಿಂದ ಕೆಲವರಿಂದ ಅನಾವಶ್ಯಕ ಬೇಸರದ ಮಾತುಗಳನ್ನು ಕೇಳುವಿರಿ .ನಿಮ್ಮ ಮಕ್ಕಳ
ವಿಷಯದಲ್ಲಿ ಆತಂಕವಿರುತ್ತದೆ .ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಲಕ್ಷ್ಮೀ ನಾರಾಯಣ ಹೃದಯ ಮಂತ್ರ ಪಾರಾಯಣ ಅಗತ್ಯವಿದೆ .ಮಾತಿನಲ್ಲಿ ಹಿಡಿತವಿರಲಿ .ಮಾತು ಬೆಳ್ಳಿ ,ಮೌನ ಬಂಗಾರ ವಾಗಿದೆ .ರವಿ ದ್ವಿತೀಯಾದಲ್ಲಿ ,ವಾಕ್ ಸ್ಥಾನದಲ್ಲಿ ಇರುವಾಗ ನೀವು ಏನು ಮಾತಾಡಿದರೂ ತಪ್ಪಾಗಿ ಪರಿಣಮಿಸುತ್ತದೆ.
.
ಕರ್ಕಾಟಕ :ಈ ವಾರ ನಿಮ ಶುಭ ಫಲ ಕೊಡುವ ಗ್ರಹರ ಸಂಖ್ಯೆ :8 ; ಅದೃಷ್ಟ ತರುವ ದಿಕ್ಕು ಪಶ್ಚಿಮ ಮತ್ತು ಉತ್ತರ ವಾಗಿದೆ .ಅದೃಷ್ಟ ಸಂಖ್ಯೆ 2 ಮತ್ತು 6 ಅದೃಷ್ಟ ಬಣ್ಣ ಬಿಳಿ ಮತ್ತು ಗೋಧಿ ಬಣ್ಣವಾಗಿದೆ ದೈವಾನುಗ್ರಹ ಉತ್ತಮವಾಗಿರುವುದರಿಂದ ,ಶನಿ ಅಷ್ಟಮದಲ್ಲಿ ಇದ್ದರೂ ಇತರ ಗ್ರಹರ ಶುಭ ಫಲದಿಂದ ಯಶಸ್ವಿಯಾಗುವಿರಿ .ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ .ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಯೋಗವಿದೆ .ನೀವು ಮಾಡುವ ಉದ್ಯೋಗದಲ್ಲಿ ಧರ್ಮ ,ಸತ್ಯ ,ನ್ಯಾಯ ಇದ್ದರೆ ಹೆದರುವ ಅಗತ್ಯವಿರುವುದಿಲ್ಲ.ನಿಮ್ಮ ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸೆ ಮಾಡುವ ಕಾಲವಾಗಿದೆ . ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಸಿಂಹ :ನಿಮಗೆ ಈ ವಾರದಲ್ಲಿ ಶುಭವನ್ನು ಕೊಡುವ ಗ್ರಹರ ಸಂಖ್ಯೆ :7 ನಿಮ್ಮ ಅದೃಷ್ಟ ಸಂಖ್ಯೆ :1 ಮತ್ತು 9 ;ಅದೃಷ್ಟ ಬಣ್ಣ :ಕೆಂಪು ಮತ್ತು ಕೇಸರಿ ;ಅದೃಷ್ಟ ತರುವ ದಿಕ್ಕು :ಉತ್ತರ ಮತ್ತು ಪಶ್ಚಿಮ ; ರವಿ ವ್ಯಯದಲ್ಲಿ ಇರುವುದರಿಂದ ದಿನಾಂಕ 16 ರ ವರೆಗೆ ಆರೋಗ್ಯದಲ್ಲಿ ಸಮಸ್ಯೆ ಮಾಡುವ ಯಾವುದೇ ವ್ಯವಹಾರದಲ್ಲಿ ತಡೆಗಳು ಬರಲಿವೆ .ದೈವಾನುಗ್ರಹವಿರುವುದರಿಂದ ಹೆದರುವ ಅಗತ್ಯವಿಲ್ಲ.ವಿಶ್ವಾಸವನ್ನು ಕಳೆದು ಕೊಳ್ಳುವ ಸಾಧ್ಯತೆ ಇರುತ್ತದೆ .ಆದರೆ ನಿಮ್ಮ ಪ್ರಯತ್ನಮುಂದುವರಿಯುವುದರಿಂದ ಯಶಸ್ವಿಯಾಗುವಿರಿ .ಯಾವುದೇ ಕಾರಣಕ್ಕೂ ಸಾಲದ ಸುಳಿಗೆ ಬೀಳಬೇಡಿರಿ
.ನೀವು ಯಾವುದೇ ನ್ಯಾಯಾಲಯದ ಕೇಸಿನಲ್ಲಿ ಇದ್ದರೆ ಯಶಸ್ಸು ನಿಮ್ಮದಾಗಲಿದೆ .ಮನೆ ಕಟ್ಟುವ,ಕೊಳ್ಳುವ ಯೋಗವಿದೆ.
ಕನ್ಯಾ : ನಿಮಗೆ ಈ ವಾರದಲ್ಲಿ ಶುಭ ಫಲ ಕೊಡುವ ಗ್ರಹರ ಸಂಖ್ಯೆ :7 ; ಅದೃಷ್ಟದ ಸಂಖ್ಯೆಗಳು :5 ಮತ್ತು 2 ಅದೃಷ್ಟದ ಬಣ್ಣ :ಹಸಿರು ಮತ್ತು ಕೇಸರಿ ; ಅದೃಷ್ಟದ ದಿಕ್ಕು: ಪೂರ್ವ ಮತ್ತು ದಕ್ಷಿಣ . ಬುಧ ಮತ್ತು ಶುಕ್ರ ವ್ಯಯದಲ್ಲಿ ಇದ್ದಾರೆ .ಉದ್ಯೋಗ, ವ್ಯವಹಾರದಲ್ಲಿಒತ್ತಡ ,ಕಷ್ಟ ಬಂದು ಕೆಲಸದಿಂದ ನಿವೃತ್ತಿ ಹೊಂದುವ ತೀರ್ಮಾನಕ್ಕೂ ಬರುವ ಸಾಧ್ಯತೆ ಇದೆ .ಆದರೆ ಹಾಗೆ ಮಾಡಬೇಡಿರಿ .ಈ ವಾರ ಸಹಿಸಿಕೊಳ್ಳಿರಿ .ಸತ್ಯ ನ್ಯಾಯ ,ಧರ್ಮ ,ನಿಮ್ಮಲ್ಲಿರಲಿ .ಮಾಡುವ ಕೆಲಸದಲ್ಲಿ ನಿಯಮ ನಿಷ್ಠೆ ಇರಲಿ .
ಭಾಗ್ಯದಲ್ಲಿ ಗುರು ಮತ್ತು ಕುಜ ಇರುವುದರಿಂದ ಧರ್ಮ ಕಾರ್ಯಗಳು ನಡೆದು ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳು ಯಶಸ್ವಿಯಾಗುವರು.
ತುಲಾ : ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ :7 ಅದೃಷ್ಟ ಸಂಖ್ಯೆ :6 ಮತ್ತು 8 ; ಅದೃಷ್ಟ ಬಣ್ಣ :ಹಳದಿ ಗೋದಿ ಬಣ್ಣ ; ಅದೃಷ್ಟ ಕೊಡುವ ದಿಕ್ಕು :ಉತ್ತರ ಮತ್ತು ಪೂರ್ವ ಈ ವಾರ ನಿಮಗೆ ದೈವಾನುಗ್ರಹವಿರುವುದಿಲ್ಲ .ಅಷ್ಟಮದಲ್ಲಿ ಕುಜ ಮತ್ತು ಗುರು ಇದ್ದಾರೆ .ಆದರೆ ಲಾಭ ಕ್ಷೇತ್ರದಲ್ಲಿ ಶುಕ್ರ ಮತ್ತು ಬುಧ ಇರುವುದರಿಂದ ಶುಭ ಫಲವನ್ನು ಅನುಭವಿಸಲಿದ್ದೀರಿ .ಆರೋಗ್ಯದ ಸಮಸ್ಯೆಯನ್ನು ಗುರು ಕುಜ ಕೊಡಲಿದ್ದಾರೆ .ಮೃತ್ಯುಂಜಯ ಜಪವನ್ನು ಪ್ರತಿನಿತ್ಯ ಮಾಡುತ್ತಾ ಬರಬೇಕು. ಬಡ್ತಿಯೋಗವಿದೆ .ಪ್ರಯತ್ನ ಮುಂದುವರಿಸಿರಿ .ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಅವಕಾಶ ಸಿಗಲಿದೆ.
ವೃಶ್ಚಿಕ : ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ : 8 ನಿಮ್ಮ ಅದೃಷ್ಟ ಸಂಖ್ಯೆ 9 ಮತ್ತು 2 ; ಅದೃಷ್ಟ ತರುವ ದಿಕ್ಕು : ಪಶ್ಚಿಮ ಮತ್ತು ದಕ್ಷಿಣ ; ಅದೃಷ್ಟ ಬಣ್ಣ ಕೆಂಪು ಮತ್ತು ನೀಲಿ ; ರುಚಕ ಯೋಗದಲ್ಲಿ ಇದ್ದೀರಿ .ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ .ಮಾಡುತ್ತಿರುವ ಉದ್ಯೋಗದಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಿದೆ .ಸಂಗಾತಿಯೊಂದಿಗೆ ಹೊಂದಾಣಿಕೆಯ ,ನೆಮ್ಮದಿಯ ಜೀವನ ನಿಮ್ಮದಾಗಲಿದೆ .ನೀವು ಯಾವುದೇ ಕೆಲಸಕ್ಕೆ ,ವ್ಯವಹಾರಕ್ಕೆ ಕೈ ಹಾಕಿದರೂ ಯಶಸ್ಸು ನಿಮ್ಮದಾಗಲಿದೆ . ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ .ವಕ್ರಿ ಶನಿಯ ದೋಷ ವಿರುತ್ತದೆ .ಪರಿಹಾರ ಮಾಡಿಕೊಳ್ಳಿರಿ ವಿದ್ಯಾರ್ಥಿಗಳು ಎಚ್ಚರವಾಗಿರಬೇಕು .ಮನೆ ,ವಾಹನ ,ಜಾಗ ಖರೀಧಿಗೆ ಸಕಾಲವಾಗಿದೆ.
ಧನು : ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ :8 ;ನಿಮ್ಮ ಅದೃಷ್ಟದ ಸಂಖ್ಯೆ :3 ಮತ್ತು 1 ಅದೃಷ್ಟದ ಬಣ್ಣ ಹಳದಿ ಮತ್ತು ಬೂದು ;ಅದೃಷ್ಟದ ದಿಕ್ಕು :ದಕ್ಷಿಣ ಮತ್ತು ಪೂರ್ವ ; ಗುರು ಮತ್ತು ಕುಜ 6 ನೇ ಮನೆಯಲ್ಲಿ ಇರುವುದರಿಂದ ಮತ್ತು 6 ನೇ ಶುಕ್ರ 9ರಲ್ಲಿ ಬುಧನೊಂದಿಗೆ ಇರುವುದರಿಂದ ಶುಕ್ರ ಲಾಭಾಧಿಪತಿಯೂ ಹೌದು ]ಖರ್ಚು ಮತ್ತು ಆದಾಯ ಸಮನಾಗಿರುತ್ತದೆ . ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ .ಉದ್ಯೋಗ ಬದಲಾವಣೆ ಮಾಡಿಕೊಳ್ಳುವ
ಸಾಧ್ಯತೆ ಇದೆ .ಹಿತ ಶತ್ರುಗಳ ಭಾಧೆ ಇರುತ್ತದೆ .ಯಾರದೇ ಮಾತಿಗೆ ಹೆಚ್ಚು ಮಾನ್ಯತೆ ಕೊಡದೆ ಧನಾತ್ಮಕವಾಗಿ ಚಿಂತನೆ ಮಾಡಿರಿ .ರವಿ ಅಷ್ಟಮದಲ್ಲಿ ಇರುವುದರಿಂದ ಹಿರಿಯರ ಆರೋಗ್ಯದ ಬಗ್ಗೆ ನಿಮ್ಮ ಗಮನವಿರಲಿ.
ಮಕರ : ನಿಮಗೆ ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ :8 ; ನಿಮ್ಮ ಅದೃಷ್ಟ ಸಂಖ್ಯೆ :4 ಮತ್ತು 7; ನಿಮ್ಮ ಅದೃಷ್ಟ ಬಣ್ಣ :ನೀಲಿ ಮತ್ತು ಕಪ್ಪು ;ನಿಮ್ಮ ಅದೃಷ್ಟ ದಿಕ್ಕು : ಪೂರ್ವ ಮತ್ತು ದಕ್ಷಿಣ ;ಶನಿ ದ್ವಿತೀಯಾದಲ್ಲಿ ಇದ್ದು ಹಣ ಕಾಸಿನ ಬಗ್ಗೆ ಎಚ್ಚರವಹಿಸಿರಿ .6ನೇ ಮನೆಯ ಬುಧ 8ರಲ್ಲಿ ಇತರ ಆರೋಗ್ಯದ ಸಮಸ್ಯೆಗಳೂ ಇರಲಿವೆ. ಉದ್ಯೋಗಕ್ಕೆ ಸಮಸ್ಯೆ ಇರುವುದಿಲ್ಲ .ಸಮಾಜದಲ್ಲಿ ಗೌರವ ಸ್ಥಾನ ಮಾನ ಸಿಗಲಿದೆ ,ಮಾಡುತ್ತಿರುವ ಕೆಲಸದಲ್ಲಿ ಒತ್ತಡ ಬರಲಿದೆ .ಕೆಲಸದಲ್ಲಿ ನಿಷ್ಠೆ ಇರದಿದ್ದರೆ ,ಉದ್ಯೋಗ
ವಂಚಿತರಾಗುವ ಸಾಧ್ಯತೆ ಇರುತ್ತದೆ . ಬಿಪಿ ಷುಗರ್ ಇರುವವರು ತಪಾಸಣೆ ಮಾಡುತ್ತಾ ಇರಬೇಕು .ಬೆನ್ನು ನೋವು ಬರುವ ಸಾಧ್ಯತೆ ಇರುತ್ತದೆ .ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಕುಂಭ :ನಿಮಗೆ ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ :6 ; ನಿಮ್ಮ ಅದೃಷ್ಟ ಸಂಖ್ಯೆ 8 ಮತ್ತು 7 ; ನಿಮ್ಮ ಅದೃಷ್ಟ ಬಣ್ಣ: ಕಪ್ಪು ಮತ್ತು ಹಸಿರು ; ನಿಮ್ಮ ಅದೃಷ್ಟ ದಿಕ್ಕು :ಉತ್ತರ ಮತ್ತು ಪೂರ್ವ ;ಶನಿ ನಿಮ್ಮ ರಾಶಿಯಲ್ಲಿ ;ಶನಿಯ ಮೇಲೆ ಬುಧ ಶುಕ್ರರ ದೃಷ್ಟಿ ;ಗುರುವಿನ ದೃಷ್ಟಿಯೂ ಇರುತ್ತದೆ .ಆಸ್ತಿ ,ಮನೆ ವಾಹನ ಖರೀಧಿ ಮಾಡಲು ಸಕಾಲವಾಗಿದೆ .ಅದೃಷ್ಟ ನಿಮ್ಮ ಜೊತೆಗಿದೆ ನೀವು ಮಾರಾಟ ಮಾಡುವ
ವಸ್ತುಗಳಿಗೂ ಒಳ್ಳೆಯ ಬೆಲೆ ಸಿಗಲಿದೆ .ಖರ್ಚು ಕೂಡಾ ಇರಲಿದೆ .ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳುವಿರಿ .ಯಾವ ಕೆಲಸ ಕೊಟ್ಟರೂ ಮಾಡುವ ಯೋಗ್ಯತೆ ನಿಮ್ಮಲ್ಲಿರುತ್ತದೆ .ಸಂಗಾತಿಯೊಂದಿಗೆಹೊಂದಾಣಿಕೆಯ ಜೀವನ ನಡೆಸುವಿರಿ.
ಮೀನ : ನಿಮಗೆ ಈ ವಾರದಲ್ಲಿ ಶುಭ ಫಲ ಕೊಡಲಿರುವ ಗ್ರಹರ ಸಂಖ್ಯೆ : 8 ನಿಮ್ಮ ಅದೃಷ್ಟ ಸಂಖ್ಯೆ 3 ಮತ್ತು 9 ; ನಿಮಗೆ ಅದೃಷ್ಟ ತರುವ ದಿಕ್ಕು ಪಶ್ಚಿಮ ಮತ್ತು ಉತ್ತರ ;ನಿಮ್ಮ ಅದೃಷ್ಟದ ಬಣ್ಣ ಹಳದಿ ಮತ್ತು ಬಿಳಿ ;ನಿಮ್ಮ ರಾಶ್ಯಾಧಿಪತಿ ಗುರು ,ಕುಜನೊಂದಿಗೆ ತೃತೀಯಾದಲ್ಲಿ ಇದ್ದಾನೆ .ಶನಿ ವ್ಯಯದಲ್ಲಿಇದ್ದಾನೆ ;ನರ ಎಲುಬು ಸಂಬಂಧ ಪಟ್ಟ ನೋವು ಬರುವ ಸಾಧ್ಯತೆ .ಗುರುವಿನ ಅನುಗ್ರಹವಿರುವುದಿಲ್ಲ .ಮಾಟ ಮಂತ್ರ ಇತ್ಯಾದಿ ಪ್ರಯೋಗ ಆಗಿದೆಯೇ ಎಂಬಸಂಶಯ ಕಾಡಳು ಆರಂಭವಾಗುತ್ತದೆ .ಮಾನಸಿಕ ದುರ್ಬಲತೆ ಇದ್ದಾಗ ಮಾತ್ರಾ ಇದು ಸಾಧ್ಯ ಬುಧ ಭಾಧಕಾಧಿಪತಿಯೊಂದಿಗೆ, ಅಷ್ಟಮಾಧಿಪತಿ ಶುಕ್ರ ಇರುವುದು .ಶತ್ರುಗಳ ಅಪಪ್ರಚಾರ ಮುಂದುವರಿಯುತ್ತಿರುತ್ತದೆ .ಆರೋಗ್ಯದ
ಕಡೆಗೆ ಗಮನವಿರಲಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು .ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು






















