ವಾರ ಭವಿಷ್ಯ ದಿನಾಂಕ 10.11.2024 ರಿಂದ ದಿನಾಂಕ 16.11.2024 ರವರೆಗೆ
ವಿಶೇಷ ದಿನಗಳು : 13. 11. 2024……ಪ್ರದೋಷ ,ಉತ್ಥಾನ ದ್ವಾದಶೀ,ತುಲಸೀ ಪೂಜಾ
14.11.2024……ವೈಕುಂಠ ಚತುರ್ದಶೀ
15.11.2024…..ಪೂರ್ಣಿಮಾ
16.11.2024……ವೃಶ್ಚಿಕ ಸಂಕ್ರಮಣ
ಮೇಷ : ಗುರುವಿನ ಅನುಗ್ರಹದಿಂದ ಉತ್ತಮ ಫಲಗಳನ್ನು ಅನುಭವಿಸುವಿರಿ. ನಿಮ್ಮ ಯೋಜನೆಗಳೆಲ್ಲ ಸರಿಯಾದ ದಿಕ್ಕಿನಲ್ಲಿ ಸಾಗಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಶುಭ ಸಮಾರಂಭಗಳ ಸೂಚನೆ ಸಿಗಲಿದೆ. ಕುಜನ ಕಾರಣದಿಂದ ಆರ್ಥಿಕ ಸ್ಟಿತಿಯಲ್ಲಿ ಸ್ವಲ್ಪ ಕಿರಿ ಕಿರಿ ಕಂಡುಬರಲಿದೆ. ನರಸಿಂಹ ದೇವರ ಮಂತ್ರ ಪಾರಾಯಣದಿಂದ ಸುಧಾರಣೆ ಬರಲಿದೆ.ಕುಟುಂಭ ವರ್ಗದವರಲ್ಲಿ ವಾದ ವಿವಾದಗಳಿಂದ ದೂರವಿರಿ. ಸಣ್ಣ ಪುಟ್ಟ ಗಾಯಗಳಾಗುವ ಸಾಧ್ಯತೆ ಇರುವುದರಿಂದ ಎಚ್ಚರವಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯವಾಗಿದೆ. ಶನಿ ನಿಮಗೆ ಅಪಾರವಾದ ಸಂಪತ್ತನ್ನು ಮಾರ್ಚ್ 2025 ರ ವರೆಗೆ ಒದಗಿಸಲಿದ್ದಾನೆ. ನಂತರ ಸಾಡೇ ಸಾತ್ ಶನಿಯ ಪ್ರಭಾವ ಆರಂಭವಾಗಲಿದೆ .ಅದಕ್ಕಾಗಿ ಈಗದಿಂದಲೇ ವಿಷ್ಣು ಸಹಸ್ರನಾಮ ಪಾರಾಯಣ ಆರಂಭ ಮಾಡಿರಿ.
ವೃಷಭ :ನಿಮ್ಮ ರಾಶ್ಯಾಧಿಪತಿ ಶುಕ್ರ ಅಷ್ಟಮದಲ್ಲಿ ಧನು ರಾಶಿಯಲ್ಲಿ ಇದ್ದಾನೆ. ರಾಹು ,ಕುಜ ,ರವಿ, ಇವರೆಲ್ಲರೂ ನಿಮಗೆ ಸಹಾಯ ಮಾಡುವವರಾಗಿ ಸ್ನೇಹಿತರ ಮೇಲೆ ನಿಮ್ಮ ಪ್ರಭಾವ ,ಅಧಿಕಾರಿವರ್ಗದವರಿಂದ , ಸರಕಾರದ ಕಡೆಯಿಂದ ಪ್ರಶಂಸೆ ನಿಮಗೆ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಹೆಚ್ಚಿನ ಆದಾಯಕ್ಕಾಗಿ ಕಾರ್ಯ ಕ್ಷೇತ್ರ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಕೆಲಸದ ಒತ್ತಡದ ನಡುವೆಯೂ ಕುಟುಂಬದ ಕಡೆಗೆ ಗಮನ ಹರಿಸುವಿರಿ. ನಿಮ್ಮ ಆರೋಗ್ಯದ ಕಡೆಗೆ ಬಿಪಿ ಷುಗರ್ ಬಗ್ಗೆ ಗಮನವಿರಲಿ. ಬೆಲೆಬಾಳುವ ವಸ್ತುಗಳ ಖರೀಧಿ ಮಾಡುವಿರಿ. ಗುರು ದತ್ತಾತ್ರೇಯ ಸ್ವಾಮಿಗಳ ಚರಿತ್ರೆ ಓದಿರಿ. ತಾಳ್ಮೆಯಿಂದ ಮುನ್ನೆಡೆಯಿಡುವುದು ಅವಶ್ಯಕವಾಗಿದೆ.
ಮಿಥುನ : ದೈವಾನುಗ್ರಹದ ಕೊರತೆ ಇರುವುದರಿಂದ 2025, ಮೇ 14 ರ ವರೆಗೆ ಜೀವನದಲ್ಲಿ ಮಾನಸಿಕ ಹೊಂದಾಣಿಕೆಯಿಂದ ಮುನ್ನೆಡೆಯ ಬೇಕಾಗಿದೆ. ತುಂಬಾ ದಿನಗಳ ಅಭಿಲಾಷೆಯೊಂದು ಈಡೇರಲಿದೆ. ನಿಮ್ಮ ಸೋಮಾರಿತನದಿಂದಲೇ ಸ್ವಲ್ಪ ನಷ್ಟವಾಗಲಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಮಯವಾಗಿದೆ. ನಿಮ್ಮವರಿಂದಲೇ ಮೋಸಹೋಗುವ ಸಮಯ ,ಪ್ರಸಂಗ ಎದುರಾಗಬಹುದು.ರಹಸ್ಯ ಒಪ್ಪಂದಗಳಿಗೆ ಸಹಿ ಮಾಡುವಾಗ ಎಚ್ಚರವಿರಲಿ. ತಾಯಿಯವರ ಆರೋಗ್ಯದಲ್ಲಿ ಎಚ್ಚರವಿರಲಿ.ಯಾರಿಗೂ ಸಾಲ ರೂಪದಲ್ಲಿ ಹಣ ನೀಡಬೇಡಿರಿ. ನಿಮ್ಮ ಕುಲದೇವರ ಆರಾಧನೆಯಿಂದ ಸಮಸ್ಯೆಗಳೆಲ್ಲಾ ದೂರವಾಗಿ ಮನಸ್ಸಿಗೆ ನೆಮ್ಮದಿ ಬರಲಿದೆ. ವಿಷ್ಣು ಸಹಸ್ರನಾಮ ಪಾರಾಯಣದಿಂದ ಉತ್ತಮ ಫಲವನ್ನು ಹೊಂದುವಿರಿ.
ಕರ್ಕಾಟಕ : ಶನಿಯ ಅಷ್ಟಮ ಸ್ಥಾನದ ಪ್ರಭಾವದಿಂದ ಆರೋಗ್ಯದಲ್ಲಿ ಕಿರಿಕಿರಿ ಉಂಟಾಗಲಿದೆ. ಸಹೋದರ ಮಾವನ ಕಡೆಯಿಂದ ಬೇಸರವಾಗಲಿದೆ. ಕೆಲವೊಂದು ವಿಷಯಗಳು ಜೀವನದಲ್ಲಿ ನಿಮಗೆ ಪಾಠ ಕಲಿಸಲಿದೆ. ನೀವು ಜೀವನದಲ್ಲಿ ಇಟ್ಟುಕೊಂಡಿರುವ ಗುರಿಯನ್ನು ತಲುಪಲು ಪ್ರಯತ್ನಿಸುವುದರಿಂದ, ಆರ್ಥಿಕ ಪರಿಸ್ಥಿತಿಯ ಕಡೆಗೆ ಗಮನ ಕೊಡುವುದರಿಂದ ಜೀವನದಲ್ಲಿ ಯಶಸ್ಸನ್ನುಕಾಣುವಿರಿ. ಸಿಟ್ಟು ,ಉದ್ವೇಗ ಬರಲೇ ಬಾರದು. ನಿಮ್ಮ ಮನಸ್ಸು ಆಧ್ಯಾತ್ಮದ ಕಡೆಗೆ ವಾಲುವುದು ಪ್ರಸ್ತುತ ಸಮಯದಲ್ಲಿ ಉತ್ತಮವಾಗಿದೆ. ಗಣ್ಯ ವ್ಯಕ್ತಿಗಳ ಭೇಟಿಯಿಂದ ಹಲವು ಅನುಕೂಲತೆಯನ್ನು ಹೊಂದುವಿರಿ. ಕೆಲವೊಂದು ವ್ಯಾಜ್ಯಗಳು ಬರುವ ಸಾಧ್ಯತೆ ಇರುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಿದೆ.
ಸಿಂಹ : ಶನಿ ನವೆಂಬರ್ 15 ರಂದು ಸಮಗತಿಯನ್ನುಹೊಂದಿವನು.. ಸಂಸಾರದಲ್ಲಿ ಹೊಂದಾಣಿಕೆಯಿಂದ ಮುಂದುವರಿಯಿರಿ.ಮಾಡುವ ಖರ್ಚಿನಲ್ಲಿ ಅಧಿಕವಾಗಲಿದೆ.ನಿಮ್ಮ ಯೋಚನೆಗಳು ಗುರಿ ಮುಟ್ಟುವಲ್ಲಿ ಹಲವಾರು ಅಡೆತಡೆಗಳು ಬರಲಿವೆ. ಮನೆಯಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಆರೋಗ್ಯದ ಕಡೆಗೆ ಗಮನವಿರಲಿ. ಬರಬೇಕಿರುವ ಹಣ ನಿಮ್ಮ ಕೈ ಸೇರಲಿದೆ. ಮಹಾಗಣಪತಿಯನ್ನು ಪ್ರಾರ್ಥಿಸುತ್ತಾ ಬನ್ನಿರಿ. ಯಾರಿಗೂ ಸಾಲನೀಡುವುದು ,ಹಣ ತೊಡಗಿಸುವುದು ಬೇಡ. ಮತ್ತೊಬ್ಬರ ಸಹಾಯದಿಂದ ನಿಮ್ಮ ಯೋಜಿತ ಯೋಜನೆಯೊಂದರ ಅನುಷ್ಠಾನವಾಗಲಿದೆ. ಸಂತಾನದ ನಿರೀಕ್ಷೆಯಲ್ಲಿಇರುವವರಿಗೆ ಆಸೆ ಈಡೇರುವ ಸಮಯವಾಗಿದೆ.
ಕನ್ಯಾ : ಗುರುವಿನ ಪೂರ್ಣ ಅನುಗ್ರಹ ಇರುವ ಸಮಯವಾಗಿರುವುದರಿಂದ ನಿಮ್ಮ ಕೀರ್ತಿ –ಪ್ರತಿಷ್ಟೆಗಳು ಹೆಚ್ಚಾಗಲಿವೆ. ವ್ಯವಹಾರ-ಉದ್ಯೋಗದ ,ಕೆಲಸಗಳ ಒತ್ತಡದಿಂದ ನಿಮ್ಮ ವಯಕ್ತಿಕ ಬದುಕಿಗೆ ಸಮಯ ಕೊಡುವುದು ಕಷ್ಟವಾಗಲಿದೆ. ಯಾಕೆಂದರೆ ಸಪ್ತಮದಲ್ಲಿ ರಾಹು ಇದ್ದಾನೆ. ಭೂಮಿ ಖರೀದಿಸುವಿರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ಮನೆ ನಿರ್ಮಾಣ ,ವಾಹನ ಖರೀಧಿ, ಮಾಡುವ ಸಮಯ .ಆದಾಯದಲ್ಲಿ ಹೆಚ್ಚಳವಾಗುವ ಸಮಯವಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ಪುರಸ್ಕಾರ ದೊರಕಲಿದೆ. ಅಧಿಕಾರ ಮರಳಿ ಪಡೆಯುವ ಸಮಯವಾಗಿದೆ .ಶುಭ ಸಮಾರಂಭಗಳಿಗೆ ತಕ್ಕ ಸಮಯವಾಗಿದೆ. ಕಂಕಣ ಬಲ ಕೂಡಿ ಬಂದಿದೆ.
ತುಲಾ : ಜನ್ಮ ರಾಶಿಯಲ್ಲಿ ನೀಚ ರವಿ ಇದ್ದಾನೆ. ಅಷ್ಟಮದಲ್ಲಿ ಗುರು ಇದ್ದಾನೆ. ಬಂಧುಗಳ ಕಟು ಮಾತಿಗೆ ಗುರಿಯಾಗಬೇಕಾದೀತು. ಮಾನಸಿಕ ಹಿಂಸೆ ಉದಾರ ಶೂಲೆ, ತಲೆ ನೋವು,ಬರುವ ಸಾಧ್ಯತೆ ಇದ್ದು ವಾಹನ ಚಲಾಯಿಸುವವರು ಎಚ್ಚರವಹಿಸುವುದು ಅತೀ ಅಗತ್ಯವಾಗಿದೆ. ವ್ಯವಹಾರದಲ್ಲಿ ನಷ್ಟ ಬರುವ ಸಾಧ್ಯತೆ ಇರುವುದರಿಂದ ದೊಡ್ಡ ಮಟ್ಟದ ಹಣ ಹೂಡುವಿಕೆ ಮಾಡುವಾಗ ಎಚ್ಚರವಿರಲಿ. ಉದ್ಯೋಗಸ್ಥರಿಗೆ ಸಹ ಉದ್ಯೋಗಿಗಳ ಜೊತೆಗೆ ಕಲಹ ಬರುವ ಸಾಧ್ಯತೆ ಇದ್ದು ನೀವಂದುಕೊಂಡಂತೆ ನಿಮ್ಮ ಗುರಿಯನ್ನು ತಲುಪಲು ಕಷ್ಟವಾಗಬಹುದು. ಕನಕ ಪುಷ್ಯ ರಾಗ ಧರಿಸಿರಿ. ಶ್ರೀ ಸತ್ಯನಾರಾಯಣ ದೇವರ ನಾಮಾವಳಿಗಳನ್ನು ನಿತ್ಯವೂ ಪಾರಾಯಣ ಮಾಡಿರಿ .
ವೃಶ್ಚಿಕ : ನವೆಂಬರ್ 15 ರಂದು ಶನಿ ಸಮಸ್ತಿತಿಗೆ ಮರಳುವನು. ನೀಚ ಕುಜ ಭಾಧಕ ಸ್ಥಾನದಲ್ಲಿ ಇದ್ದಾನೆ . ರವಿ ವ್ಯಯದಲ್ಲಿ ಇದ್ದಾನೆ .ಆದರೂ ಗುರು ಸಪ್ತಮದಲ್ಲಿ ಇರುವುದರಿಂದ ಶುಕ್ರ ಜನ್ಮ ರಾಶಿಯಲ್ಲಿ ಇರುವುದರಿಂದ ಹಲವಾರು ಬೇಸರಗಳ ನಡುವೆ ಸಂತೋಷವೂ ಸಿಗಲಿದೆ. ಮನಸ್ಸು ಹಿಡಿತದಲ್ಲಿಇರಲಿ. ಅನ್ಯರೊಂದಿಗೆ ಮಾತಾಡುವಾಗ ಎಚ್ಚರವಿರಲಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಉದ್ಯೋಗದಲ್ಲಿ ಭಡ್ತಿ ಸಿಗಲಿದೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ತೀರ್ಪು ನಿಮ್ಮ ಪರವಾಗಿರುತ್ತದೆ. ಚತುರ್ಥದ ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಮಾರ್ಚ್ 2025,ರ ವರೆಗೆ ಶನಿಯ ಸಮಸ್ಯೆ ಇರುತ್ತದೆ. ಪಾಲುಗಾರಿಕೆ ವ್ಯವಹಾರ ಬೇಡ.
ಧನು : ಜನ್ಮ ರಾಶಿಯಲ್ಲಿ ಶುಕ್ರನಿದ್ದಾನೆ. ಕುಜ ನೀಚನಾಗಿ ಅಷ್ಟಮದಲ್ಲಿಇದ್ದಾನೆ.ಗುರು 6 ನೆಯ ಮನೆಯಲ್ಲಿ ಇದ್ದಾನೆ. ದೈವಾನುಗ್ರಹದ ಕೊರತೆ ನಾಲ್ಕನೆಯ ಮನೆಯಲ್ಲಿ ರಾಹು ಇದ್ದಾನೆ. ಈ ಸಮಯದಲ್ಲಿ ಆದಾಯ ಮತ್ತು ಖರ್ಚು ಸಮಾನವಾಗಿರುತ್ತದೆ. ಆರೋಗ್ಯದ ಕಡೆಗೆ ಎಚ್ಚರವಾಗಿರಬೇಕು.ನಾಗ ದೇವರ ಪ್ರಾರ್ಥನೆ,ಸಪ್ತಶತೀ ಪಾರಾಯಣ ಮಾಡುವ/ಮಾಡಿಸುವ ಅಗತ್ಯವಿದೆ. ವಾದ ವಿವಾದ ಇರುವ ಕಡೆಗೆ ನಿಮ್ಮ ಪ್ರವೇಶ ಬೇಡ. ವ್ಯಾಪಾರ ವಿಸ್ತರಣೆ ಸಧ್ಯಕ್ಕೆ ಬೇಡ. ನೌಕರರು ಮೇಲಧಿಕಾರಿಗಳ ಜೊತೆಗೆ ಹೊಂದಾಣಿಕೆಯಿಂದ ಹೋಗಬೇಕಿದೆ . ಇಡೀ ಸಂಸಾರದ ನೆಮ್ಮದಿ ನಿಮ್ಮ ವರ್ತನೆಯಲ್ಲಿದೆ.
ಮಕರ : ದೈವಾನುಗ್ರಹ ಉತ್ತಮವಿರುತ್ತದೆ. ದಾಂಪತ್ಯ ಜೀವನದ ಸಂತೋಷ ನಿಮ್ಮ ಕೈಯಲ್ಲಿದೆ. ಸಾಡೇ ಸಾತ್ ಶನಿಯ ಪ್ರಭಾವದಿಂದ ನಿಮ್ಮ ಮಾತು ಸಿಟ್ಟಿನಿಂದಲೇ ಇರುತ್ತದೆ. ಮನಸ್ಸಿನಲ್ಲಿ ಹಣದ ಹೊಂದಾಣಿಕೆಯ ಕಿರಿಕಿರಿ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಬಹಳ ಒಳ್ಳೆಯ ಸಮಯ .ನೀಚ ರವಿಯ ದೋಷ ನಿವೃತ್ತಿಗೆ ಆದಿತ್ಯ ಹೃದಯ ಪಾರಾಯಣ ಮಾಡುವುದು ಅಗತ್ಯವಿದೆ. ರಕ್ತೇಶ್ವರಿ ಅಮ್ಮನವರ ಪ್ರಾರ್ಥನೆ ಅಗತ್ಯವಿದೆ. ಸ್ತ್ರೀ ಸಂಬಂಧವಾದ ಅಪವಾದ ನಿರೀಕ್ಷಿತವಾಗಿದೆ. “ನಾನು” ಎಂಬ ಶಬ್ದದ ಬದಲಿಗೆ “ನಾವು “ ಉಪಯೋಗಿಸಿರಿ. ಭೂ –ವ್ಯಾಜ್ಯಗಳು ಕಂಡು ಬಂದರೂ ನಿಮ್ಮ ಸಮಯ ಪ್ರಜ್ಣೆಯಿಂದ ಪರಿಹಾರವಾಗಲಿದೆ.
ಕುಂಭ : ಜನ್ಮ ರಾಶಿಯಲ್ಲಿ ಶನಿ ಇದ್ದಾನೆ ನಿವೆಂಬರ್ 15 ಕ್ಕೆ ಸಮಸ್ತಿತಿಗೆ ಬರಲಿದ್ದಾನೆ. ದೈವಾನುಗ್ರಹ ಉತ್ತಮವಾದ ಸ್ಟಿತಿಯಲ್ಲಿ ಇರುವುದಿಲ್ಲ. ಕುಜ ನೀಚನಾಗಿ 6ನೆಯ ಮನೆಯಲ್ಲಿ ಇದ್ದಾನೆ. ಆರೋಗ್ಯದ ಕಡೆಗೆ ಬಿಪಿಯ ಕಡೆಗೆ ಗಮನವಿರಲಿ. ಶುಕ್ರ ಲಾಭ ಕ್ಷೇತ್ರದಲ್ಲಿ ಇರುವುದರಿಂದ ನೆಮ್ಮದಿಯ ಸಂತೋಷದ ಬದುಕು ನಿಮಗೆ ಲಭಿಸಲಿದೆ. ನೀವು ಮಾಡುವ ವ್ಯವಹಾರ ,ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ. ಮಾತು ಹಿಡಿತದಲ್ಲಿ ಇರಲಿ ಎಂದು ರಾಹು ತಿಳಿಸುತ್ತಿದ್ದಾನೆ. ಮಾತು ಮಾವಿನ ಹಣ್ಣಿನಂತಿರಲಿ ,ಮರದಿಂದ ಬೀಳುವ ಮೊದಲೇ ಎಚ್ಚರವಹಿಸಿರಿ. ದೇವರು ಒಂದು ಕೈಯಲ್ಲಿ ಕೊಟ್ಟಂತಾಗಿ ಮಾಡಿ ಇನ್ನೊಂದು ಕೈಯಿಂದ ಹಿಂದಕ್ಕೆ ಪಡೆಯುತ್ತಾನೆ ,ಇದು ಶನಿ ಹೇಳುವ ಮಾತಾಗಿದೆ.
ಮೀನ : ಜನ್ಮ ರಾಶಿಯಲ್ಲಿ ರಾಹು ಇದ್ದುಕೊಂಡು ನೀರು ಮತ್ತು ಆಹಾರದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಿರಿ. ನಿಮ್ಮ ಪಾಲುದಾರರ ಜೊತೆಗೆ ಕಾರಣವಿಲ್ಲದೆ ವಾಕ್ಯುದ್ಧ ಬರದಂತೆ ತಾಳ್ಮೆಯಿಂದ ಮುಂದುವರಿಯಿರಿ.ನೀವು ಸಾಡೇ ಸಾತ್ ಶನಿಯ ಪ್ರಭಾವಲಯದಲ್ಲಿ ಇದ್ದೀರಿ. ದಿನಾಂಕ 15 ರ ನಂತರ ಶನಿ ಸಮಸ್ತಿತಿಗೆ ಬರಲಿದ್ದಾನೆ. ನೀವು ಕೆಲವೊಮ್ಮೆ ತೆಗೆದು ಕೊಳ್ಳುವ ತಪ್ಪು ನಿರ್ಧಾರಗಳೇ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಲಿದೆ. ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಮನಸ್ಸನ್ನು ಚಂಚಲಗೊಳಿಸಲಿದ್ದಾರೆ. ಮದ್ಯ ಪಾನ ಮಾಡುವವರು ಅದರಿಂದ ದೂರವಿದ್ದಷ್ಟೂ ಒಳ್ಳೆಯದು. ವಿದೇಶಕ್ಕೆ ಹೋಗುವ ಯೋಗ ಕೂಡಿ ಬಂದಿದೆ
ನಿಮ್ಮ ಪೂರ್ಣಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಾಸ್ತು ಸಲಹೆ/ವಿವಾಹಹೊಂದಾಣಿಕೆ ವಿಮರ್ಶೆ ಮಾಡಲಾಗುವುದು .






































