ವಾರ ಭವಿಷ್ಯ ದಿನಾಂಕ 10.08.2025 ರಿಂದ 16.08.2025 ರ ವರೆಗೆ
ವಿಶೇಷ ದಿನಗಳು : 11.08.2025 ….ಶ್ರೀ ರಾಘವೇಂದ್ರ ಪುಣ್ಯ ತಿಥಿ:
16.08.2025….ಶ್ರೀ ಕೃಷ್ಣ ಜನ್ಮಾಷ್ಟಮೀ
….ಸಿಂಹ ಸಂಕ್ರಮಣ ,ಶ್ರೀ ಕೃಷ್ಣ ಲೀಲೋತ್ಸವ
ಮೇಷ : ಭಾವನಾತ್ಮಕ ಸಂಘರ್ಷಗಳು ದೂರವಾಗಲಿದೆ. ರೋಗ ಸ್ಥಾನದಲ್ಲಿ ಕುಜನಿದ್ದಾನೆ.ವ್ಯರ್ಥ ಖರ್ಚುಗಳನ್ನು ತಿಳಿಸುವ ಶನಿ ವ್ಯಯ ಭಾವದಲ್ಲಿ ಇದ್ದಾನೆ. ಭಾಧಕ ಕ್ಷೇತ್ರದಲ್ಲಿ ರಾಹು ಮತ್ತು ಚಂದ್ರ ಇದ್ದಾನೆ. ಆರೋಗ್ಯದ ಕಡೆಗೆ ,ಮಾನಸಿಕ ಒತ್ತಡದ ಕಡೆಗೆ ಎಚ್ಚರದಿಂದ ಇರಬೇಕಾಗುತ್ತದೆ. ಉದ್ಯೋಗದಲ್ಲಿ ಬಹಳ ತಾಳ್ಮೆಯಿಂದ ಇರಬೇಕಾದ ಸಮಯವಾಗಿದೆ. ಕೆಲವೊಂದು ವಿಷಯದಲ್ಲಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಬೇಕಾದ ಸಮಯವಾಗಿದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬರಬೇಕಾಗಿದೆ.
ವೃಷಭ : ದ್ವಿತೀಯಾದಲ್ಲಿ ಗುರು ಮತ್ತು ಶುಕ್ರ ,ಲಾಭ ಕ್ಷೇತ್ರದಲ್ಲಿ ಶನಿ ಇರುವುದರಿಂದ ಗೌರವ,ಸನ್ಮಾನಗಳು ,ಹೇರಳವಾದ ಧನ ಸಂಪತ್ತು ತಾನಾಗಿಯೇ ಬರಲಿದೆ. ಮನಸ್ಸಿನ ನೋವುಗಳು ನಿಧಾನವಾಗಿ ದೂರವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಮಾನ ಒಲಿದು ಬರಲಿದೆ. ಕೆಲಸದ ಒತ್ತಡ ಇರಲಿದೆ. ಎಲ್ಲಾ ಸೌಲಭ್ಯಗಳು ಇದ್ದಾಗಲೂ ಭಯವೊಂದು ಕಾಡಲಿದೆ. ಮಕ್ಕಳು ಮತ್ತು ಸಂಗಾತಿಯ ಬಗ್ಗೆ ಸಮಾಧಾನ ಇರುವುದಿಲ್ಲ.
ಮಿಥುನ : ಸಾಮಾಜಿಕವಾಗಿ ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ ಸಮಯ. ನೀವು ಶಿಕ್ಷಕ ,ವಕೀಲರಾಗಿದ್ದಲ್ಲಿ ಒಳ್ಳೆಯ ಪ್ರಸಿದ್ಧಿಯನ್ನು ಹೊಂದುವಿರಿ. ವಾಕ್ ಚಾತುರ್ಯತೆಯಿಂದ ಎಲ್ಲರನ್ನು ಗೆಲ್ಲುವಿರಿ. ಬಿಪಿ ಷುಗರ್ ಇರುವವರು ಎಚ್ಚರದಿಂದ ಇರಬೇಕು. ಅನಿರೀಕ್ಷಿತವಾದ ಸಮಸ್ಯೆಗಳು ಕೆಲವೊಮ್ಮೆ ಬಂದು ಹೋಗುತ್ತವೆ. ಕೈಲಾದಷ್ಟೂ ಇತರರಿಗೆ ಸಹಾಯ ಮಾಡುತ್ತಾ ಬನ್ನಿರಿ. ಆತ್ಮ ಸಾಕ್ಷಿಗೆ ವಿರುದ್ಧವಾಗಿ ಹೋಗಬೇಡಿರಿ. ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ.
ಕರ್ಕಾಟಕ : ಅಷ್ಟಮದಲ್ಲಿ ಚಂದ್ರ ಮತ್ತು ರಾಹು ,ವ್ಯಯದಲ್ಲಿ ಗುರು ಮತ್ತು ಶುಕ್ರ ಇರುವುದರಿಂದ ಮನೆ ಅಥವಾ ಕೌಟುಂಬಿಕವಾಗಿ ಜವಾಬ್ದಾರಿ ,ಒತ್ತಡ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.ಕೆಲವು ವಿಷಯಗಳಲ್ಲಿ ನಿಮ್ಮದೇ ನಿಲುವಿಗೆ ಅಂಟಿಕೊಳ್ಳುವ ಜಿಗುಟುತನ ಬಿಡುವುದು ಒಳ್ಳೆಯದು. ದೈವಾನುಗ್ರಹ ಇಲ್ಲದಿರುವ ಈ ಸಮಯದಲ್ಲಿ ವಿಷ್ಣು ಸಹಸ್ರನಾಮದ 108 ಶ್ಲೋಕಗಳನ್ನು ಪ್ರತಿನಿತ್ಯ ಹೇಳಿಕೊಂಡು ಬರುವುದು ಒಳ್ಳೆಯದು
ಸಿಂಹ : ಉತ್ತಮ ದೈವಾನುಗ್ರಹ ಹೊಂದಿರುವ ಸಮಯವಾಗಿದೆ. ಕುಟುಂಬದ ಸದಸ್ಯರ ಜೊತೆ ವಾಗ್ವಾದ ಮಾಡುವಂತೆ ಅಷ್ಟಮದ ಶನಿ ಮಾಡಲಿದ್ದಾನೆ. ನರ ಎಲುಬಿನ ನೋವು ಬರುವ ಸಾಧ್ಯತೆ ಇದೆ. ನೀವು ಸಾಧಿಸಬೇಕಾದ ಗುರಿ ಬಹಳ ಹತ್ತಿರದಲ್ಲಿಯೇ ಇದೆ. ಹಣದ ಬಿಕ್ಕಟ್ಟು ಬಗೆಹರಿಯಲಿದೆ. ಸ್ವಯಂಕೃತ ಅಪರಾಧ ಮನಸ್ಸನ್ನು ತಿನ್ನಲಿದೆ. ಹಿರಿಯರಿಗೆ ಗೌರವ ಕೊಡುವುದು ಅತೀ ಪುಣ್ಯದ ಕೆಲಸವಾಗಿದೆ. ಅತಿಯಾದ ಪ್ರಯಾಣಗಳನ್ನು ಮಾಡುವುದು ಬೇಡ .
ಕನ್ಯಾ : ಉದ್ಯೋಗದಲ್ಲಿ ಇರುವವರಿಗೆ ವರ್ಗಾವಣೆಯಾಗುವ ಸಮಯವಾಗಿದೆ. ಆಸ್ತಿ ಸಮಸ್ಯೆಗಳು ಸೌಹಾರ್ಧಯುತವಾಗಿ ಬಗೆ ಹರಿಯಲಿದೆ. ನಮಗೆ ತಿಳಿಯದಿರುವ ವಿಷಯವನ್ನು ಕಲಿತುಕೊಳ್ಳಲು ಪ್ರಯತ್ನ ಮಾಡಬೇಕು. ಧೈರ್ಯದಿಂದ ಸವಾಲುಗಳನ್ನು ಎದುರಿಸಿರಿ. ಶನಿ ಸಪ್ತಮದಲ್ಲಿ ಜನ್ಮ ರಾಶಿಯಲ್ಲಿ ಕುಜನಿರುವಾಗ ಹಠ ಸ್ವಭಾವ ನಮ್ಮಲ್ಲಿ ಇರುತ್ತದೆ. ಸಂಸಾರದಲ್ಲಿ ಕೆಲವೊಮ್ಮೆ ತಗ್ಗಿಬಗ್ಗಿ ನಡೆಯ ಬೇಕಾಗುತ್ತದೆ. ಆರ್ಥಿಕ ಸಹಾಯಕ್ಕಾಗಿ ಬೇರೆಯವರು ನಿಮ್ಮಲ್ಲಿ ಕೇಳುವ ಸಾಧ್ಯತೆ ಇದೆ.
ತುಲಾ : ಉತ್ತಮ ದೈವಾನುಗ್ರಹ ಇರುವ ಸಮಯವಾಗಿದೆ. ಹೊಸ ಅವಕಾಶಗಳ ಬಾಗಿಲು ತೆರೆದು ಕೊಳ್ಳುತ್ತದೆ. ಎಲ್ಲರ ಜೊತೆ ನಗುನಗುತ್ತಾ ಇರುವುದನ್ನು ರೂಢಿಸಿಕೊಳ್ಳಿರಿ. ಪತಿ ಪತ್ನಿ ಹೊಂದಾಣಿಕೆಯ ಕೊರತೆಯನ್ನು ಕುಜ ತಿಳಿಸುತ್ತಿದ್ದಾನೆ. ಎಲ್ಲ ಕೆಲಸಗಳನ್ನು ಪೂರ್ಣವಾದ ಮನಸ್ಸಿನಿಂದ ಪೂರೈಸುವಲ್ಲಿ ಗಮನಕೊಡಿರಿ. ಜಟಿಲವಾದ ಸಮಸ್ಯೆಗಳು ಸರಳವಾಗಿ ಪರಿಹಾರವಾಗಲಿದೆ. ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ. ಧಾರ್ಮಿಕ ಕ್ಷೇತ್ರದಲ್ಲಿಯೂ ಮನ್ನಣೆ ಗಳಿಸುವಿರಿ. ಆಹಾರ ಹಿತ ಮಿತ ವಾಗಿರಲಿ.
ವೃಶ್ಚಿಕ : ಸುಖ ಸ್ಥಾನದಲ್ಲಿ ಇರುವ ರಾಹು ಮತ್ತು ಚಂದ್ರ ,ಪಂಚಮದಲ್ಲಿ ಶನಿ ಮತ್ತು ಮುಖ್ಯವಾಗಿ ಗುರು ಶುಕ್ರ ಅಷ್ಟಮದಲ್ಲಿ ಇರುವುದು ,ಹಲವಾರು ಗೊಂದಲ ಗಳಿಗೆ ಕಾರಣವಾಗಿದೆ. ಪ್ರತ್ಯುಪಕಾರ ನಿರೀಕ್ಷೆ ಮಾಡದೆ ಉಪಕಾರ ಮಾಡಿದರೆ ಯಶಸ್ಸು ಪ್ರಾಪ್ತಿಯಾಗುತ್ತದೆ.ಆಪ್ತರ ಜೊತೆಗೆ ಸೇರಿ ಹೊಸ ಉದ್ಯಮ ಆರಂಭಿಸುವ ಮೊದಲು ಕುಲ ದೇವರನ್ನು ಪ್ರಾರ್ಥಿಸಿಕೊಳ್ಳಿರಿ. ಮಕ್ಕಳ ವಿದ್ಯಾಭ್ಯಾಸದ ಹಿಂದೆ ನಿಮ್ಮ ಪ್ರಯತ್ನ ಇರಲಿ. ಕೊಟ್ಟಿರುವ ಹಣ ತಡವಾಗಿ ಕೈ ಸೇರಲಿದೆ.ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬರಬೇಕು .
ಧನು : ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಸಲುವಾಗಿ ಸಾಲ ಮಾಡುವ ಪರಿಸ್ಥಿತಿ ಬರಲಿದೆ. ಶಿಕ್ಷಣದ ದಾರಿ ಸುಗಮವಾಗಲಿದೆ.ಸಣ್ಣ ಪುಟ್ಟ ವ್ಯಾಪಾರಿಗಳು ಉತ್ತಮ ಲಾಭವನ್ನು ಹೊಂದಲಿದ್ದಾರೆ. ಖರ್ಚು ಹೆಚ್ಚು ಮಾಡುವುದು ಬೇಡ. ಮನಸ್ಸಿನಲ್ಲಿ ಹೆಚ್ಚು ಒತ್ತಡ ಇರುವಾಗ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ.ಹೂಡಿಕೆ ವಿಷಯಗಳನ್ನು ಮಾಡುವಾಗ ಸರಿಯಾದ ಲೆಕ್ಕಾಚಾರವಿರಲಿ. ಆರೋಗ್ಯವನ್ನು ನಿರ್ಲಕ್ಷಿಸಬೇಡಿರಿ.
ಮಕರ : ನಿಮ್ಮ ಸಾಮಾಜಿಕ ಪ್ರಯತ್ನಗಳಿಗೆ ಬಲ ಸಿಗಲಿದೆ. ಅನಗತ್ಯ ವಿವಾದಗಳಿಗೆ ಎಡೆ ಮಾಡಿಕೊಡಬೇಡಿರಿ. ಹೊಗಳುವವರೆಲ್ಲರೂ ಹಿತೈಷಿಗಳಲ್ಲ. ಸಂಬಂಧಗಳನ್ನು ಆತ್ಮೀಯವಾಗಿ ಉಳಿಸಿಕೊಂಡರೆ ದೂರದವರು ಹತ್ತಿರವಾಗುತ್ತಾರೆ.ವ್ಯವಹಾರದಲ್ಲಿ ಹಣದ ವಿಚಾರದಲ್ಲಿ ಯಶಸ್ಸು ಗಳಿಸುವಿರಿ. ಕೌಟುಂಬಿಕ ಬಿಕ್ಕಟ್ಟುಗಳು ಪರಿಹಾರವಾಗಲಿದೆ. ಅಷ್ಟಮದಲ್ಲಿ ಕೇತು ಇರುವುದನ್ನು ಗಮನಿಸಿರಿ. ಪತಿ ಪತ್ನಿ ಯರ ನಡುವೆ ವಿರಸ ಇರುತ್ತದೆ.
ಕುಂಭ : ಜನ್ಮ ರಾಶಿಯಲ್ಲಿ ರಾಹು ಚಂದ್ರ ಇದ್ದಾರೆ ದ್ವಿತೀಯಾದಲ್ಲಿ ಶನಿ ಇದ್ದಾನೆ.ಅಷ್ಟಮದಲ್ಲಿ ಕುಜ ಇದ್ದಾನೆ. ನಿಮ್ಮ ಮೂಲ ಜಾತಕದ ವಿಮರ್ಶೆ ಅಗತ್ಯವಿರುತ್ತದೆ. ನಿಮ್ಮ ನಿಜವಾದ ತಾಳ್ಮೆಯ ಪರೀಕ್ಷೆ ಈ ಕಾಲದಲ್ಲಿ ನಡೆಯಲಿದೆ. ನಿಮ್ಮ ಸಾಮರ್ಥ್ಯದ ಅನಾವರಣವಾಗುವ ಸಂದರ್ಭ ಒದಗಿ ಬರಲಿದೆ. ಕೆಲವೊಂದು ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕು. ಮಾತಿನ ಮೇಲೆ ನಿಯಂತ್ರಣವಿರಲಿ. ಬಿಪಿ,ಷುಗರ್ ಇರುವವರು ಎಚ್ಚರವಹಿಸಬೇಕು.ಮೂಲವ್ಯಾಧಿ ಇರುವವರು ವೈದ್ಯರನ್ನು ಭೇಟಿಯಾಗಬೇಕು.
ಮೀನ : ಜನ್ಮ ರಾಶಿಯಲ್ಲಿ ಶನಿ ,ಸಪ್ತಮದಲ್ಲಿ ಕುಜ ,ವ್ಯಯದಲ್ಲಿ ಚಂದ್ರ ,ರಾಹು ಇರುವುದರಿಂದ ಪತಿ ಪತ್ನಿ ಮಕ್ಕಳ ನಡುವೆ ಸಾಮರಸ್ಯದ ಕೊರತೆ ಇರುತ್ತದೆ. ಅದರ ಪ್ರತಿಫಲವೇ ಮಾನಸಿಕ ಒತ್ತಡ. ಅನೇಕ ಮೂಲಗಳಿಂದ ಆದಾಯ ಪಡೆಯುವಿರಿ ,ವ್ಯವಹಾರ ಕ್ಷೇತ್ರದಲ್ಲಿ ಕಾರ್ಯ ಪೂರ್ಣ ಗೊಳಿಸಲು ಹೆಚ್ಚಿನ ಗಮನ ಹರಿಸಬೇಕು. ಕಾರ್ಯ ನಿಮಿತ್ತವಾಗಿ ಪ್ರವಾಸಗಳು ಇರುತ್ತವೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕಿದೆ. ಆತ್ಮ ವಿಶ್ವಾಸ ಮತ್ತು ತಾಳ್ಮೆಯಿಂದ ಅನೇಕ ಸಮಸ್ಯೆಗಳು ದೂರವಾಗಲಿದೆ.

ನಿಮ್ಮ ಪೂರ್ಣ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆ ಮಾಡಿ ತಿಳಿಸಲಾಗುವುದು.






































