ವಾರ ಭವಿಷ್ಯ ದಿನಾಂಕ 09.03.2025 ರಿಂದ ದಿನಾಂಕ 15.03.2025 ರ ವರೆಗೆ
ವಿಶೇಷ ದಿನಗಳು : 14.03.2025…ಮೀನ ಸಂಕ್ರಮಣ :ಪೂರ್ಣಿಮಾ
ಮೇಷ : ವ್ಯಯದಲ್ಲಿ ಬುಧ ಶುಕ್ರ ರಾಹು ಇದ್ದಾರೆ. ನಮ್ಮ ಭವಿಷ್ಯ ನಮ್ಮ ಸತ್ಯರ್ಮ ಆಚರಣೆಯಲ್ಲಿದೆ. ಒಳ್ಳೆಯ ಚಿಂತನೆಯಲ್ಲಿದೆ. ಶುಕ್ರನ ರಾಹುವಿನ ಸೂಚನೆಯಂತೆ ಸಂಗಾತಿಯೊಂದಿಗೆ ವೈಮನಸ್ಸು ಬರುವ ಸೂಚನೆ. ದೇವಿಯ ಆರಾಧನೆಯಿಂದ ಈ ದೋಷವನ್ನು ಪರಿವರ್ತನೆ ಮಾಡಿಕೊಳ್ಳಬಹುದು. ಧೈರ್ಯ ಮಾಡಿ ಹೊಸ ಉದ್ಯಮವನ್ನು ಪ್ರಾರಂಭಿಸಬಹುದು. ಮಾರ್ಚ್ 29 ರ ಒಳಗೆ ಬಡ್ತಿ ವರ್ಗಾವಣೆ ಆಗುವ ಸೂಚನೆ ನಿಮ್ಮ ಉದ್ಯೋಗದಲ್ಲಿ ಇದೆ. ಮೂಗಿನ ತುದಿಯಲ್ಲಿ ಇರುವ ಉಗ್ರ ಕೋಪವನ್ನು ತೆಗೆಯಿರಿ. “ಉಗ್ರಮ್ ವೀರಮ್ ಮಹಾ ವಿಷ್ಣುಮ್ | ಜ್ವಲಂತಮ್ ಸರ್ವತೋ ಮುಖಂ |ನೃಸಿಂಹಮ್ ಭೀಷಣಮ್ ಭದ್ರಮ್ | ಮೃತ್ಯು ಮೃತ್ಯುಂ ನಮಾಮ್ಯಹಮ್ || ಈ ಮಂತ್ರವನ್ನು 108 ಬಾರಿ ಹೇಳಿರಿ ಗುರುವಿನ ಅನುಗ್ರಹ ಪ್ರಸ್ತುತ ನಿಮಗಿದೆ.
ವೃಷಭ : ನೀವು ಪ್ರಸ್ತುತ ಮಾಡುತ್ತಿರುವ ಉದ್ಯೋಗದಲ್ಲಿ ಆಸ್ತಿರತೆಯ ಛಾಯೆ ಮೂಡುತ್ತಾ ಬರುತ್ತಿದೆ. ನಿಮ್ಮ ದೇಹ ವಿಶ್ರಾಂತಿಯನ್ನು ಕೇಳುತ್ತಿದೆ. ನಿಮ್ಮ ಕುಟುಂಬದವರೇ ಕೆಲವೊಮ್ಮೆ ವಿರೋಧಿಸುವರು.ತಾಳ್ಮೆ ಸಹನೆ ಬುದ್ಧಿವಂತಿಕೆ ಇವುಗಳು ಇದೀಗ ಸಹಾಯಕ್ಕೆ ಬರಲಿವೆ. ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಕೈಕೊಡುವ ಸೂಚನೆ ಕಂಡುಬರುತ್ತಿದೆ. ಶುಕ್ರ,ರಾಹು,ಬುಧ ಲಾಭ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು,ಹಣದ ಹರಿವಿನಲ್ಲಿ ಹೆಚ್ಚಳವಾಗಲಿದೆ. ಉತ್ತರಾಯಣದ ಪುಣ್ಯಕಾಲ ನಿಮಗೂ ಒಳ್ಳೆಯ ಕಾಲವಾಗಿದೆ. ಅಪರಿಚಿತ ವ್ಯಕ್ತಿಗಳಲ್ಲಿ ಯಾವುದೇ ವ್ಯವಹಾರ ಒಳ್ಳೆಯದಲ್ಲ. ನಿಮ್ಮ ಸಂಗಾತಿಯ ಕಡೆಯಿಂದ ಅನೇಕ ರೀತಿಯ ಲಾಭಗಳು ಬರಲಿವೆ. ಅದು ನಿಮ್ಮನ್ನು ಅವಲಭಿಸಿ ಕೊಂಡು ಇರುತ್ತದೆ.
ಮಿಥುನ : ನಿಮ್ಮ ಜನ್ಮ ರಾಶಿಯಲ್ಲಿ ಕುಜ ಸುಖ ಸ್ಥಾನದಲ್ಲಿ ಕೇತು, ವ್ಯಯದಲ್ಲಿ ಗುರು ಇರುವುದನ್ನು ಗಮನಿಸುತ್ತಾ ‘ಆಧಿ ವ್ಯಾಧಿ ಮಹಾ ವ್ಯಾಧಿ ಸಕಲ ರೋಗ ನಿವಾರಯ [ಪ್ರಣತ ಕ್ಷೇಶ ನಾಶಾಯ ಶ್ರೀ ಧನ್ವಂತರಯೇ ನಮ: | 108 ಬಾರಿ ನಿತ್ಯವೂ ಹೇಳುತ್ತಾ ಬನ್ನಿರಿ. ನವಗ್ರಹರು ನಮಗೆ ಮಾರ್ಗದರ್ಶಕರು ಅವರ ಸೂಚನೆಯಂತೆ ನಾವು ನಡೆಯಬೇಕು. ನಿಮ್ಮ ಆತ್ಮಸ್ಥೆರ್ಯ ಹೆಚ್ಚಾಗಲಿದೆ. ನಿಮ್ಮ ಉದ್ಯೋಗದಲ್ಲಿ ಭಡ್ತಿ ಸಿಗಲಿದೆ. ನಿಮ್ಮ ಹಿತ ಶತ್ರುಗಳ ಬಗ್ಗೆ ಒಂದು ದೃಷ್ಟಿ ಇರಲಿ. ಕರ್ಮ ಕ್ಷೇತ್ರದಲ್ಲಿ 4 ಗ್ರಹರು ಒಂದಾಗುತ್ತಿದ್ದಾರೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಸಿಕ್ಕಿದ ಉದ್ಯೋಗಕ್ಕೆ ಸೇರುವಂತೆ ಸೂಚಿಸಲಾಗುತ್ತಿದೆ.
ಕರ್ಕಾಟಕ : ” ಮೃತ್ಯುಂಜಯಾಯ ರುದ್ರಾಯ ನೀಲ ಕಂಠಾಯ ಶಂಭವೆ . ಅಮೃತೇಶಾಯ ಶರ್ವಾಯ ಮಹಾ ದೇವಾಯ ತೇ ನಮ: ॥ ಅಷ್ಟಮದಲ್ಲಿರುವ ರವಿ ಮತ್ತು ಶನಿಗೆ ಪರಿಹಾರವಾಗಿ ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಹೇಳುತ್ತಾ ಬರಬೇಕು . ಸತಿ ಪತಿಯರ ನಡುವೆ ಭಿನ್ನಾಭಿಪ್ರಾಯ ಬರದಂತೆ ಎಚ್ಚರ ವಹಿಸಿರಿ .ಮಕ್ಕಳ ಕಡೆಗೆ ನಿಮ್ಮ ಗಮನವಿರಲಿ. ದೈವ,ದೇವರ ಪೂಜೆ ಭಕ್ತಿಯ ಬಗ್ಗೆ ಅಸಡ್ಡ ಬೇಡ. ಸಕಾರಾತ್ಮಕ ಚಿಂತನೆಯಿಂದ ಜೀವನದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಪ್ರೀತಿ ಪ್ರೇಮದಲ್ಲಿ ಯುವ ಪೀಳಿಗೆ ತಮ್ಮ ಉತ್ತಮ ಭವಿಷ್ಯತ್ತನ್ನು ಹಾಳುಮಾಡಿಕೊಳ್ಳದಿರಿ ಹಿರಿಯರ ವಿಷಯದಲ್ಲಿ ಅನೇಕ ಖರ್ಚು ವೆಚ್ಚಗಳು ಬರುವ ಸೂಚನೆ ಇರುತ್ತದೆ. ವಾಹನ ಸಂಚಾರದಲ್ಲಿ ಎಚ್ಚರವಿರಲಿ.
ಸಿಂಹ : ಶನಿ ನಿಮಗೆ 29 03.2025 ರಂದು ಎಂಟನೆಯ ಮನೆಗೆ ಪ್ರವೇಶ ಮಾಡುತ್ತಿದ್ದಾನೆ.ಅದರ ಪ್ರಭಾವ ಈಗಾಗಲೇ ಆರಂಭವಾಗಿರುತ್ತದೆ.ದಶರಥ ಕೃತ ಶನೈಶ್ವರ ಸ್ತೋತ್ರವನ್ನು ಪ್ರತಿನಿತ್ಯ ಓದಬೇಕು. ಆರೋಗ್ಯ, ಹಣಕಾಸಿನ ವಿಷಯ ಹಿತ ಶತ್ರುಗಳ ಬಗ್ಗೆ ಅತ್ತೆ ಸೊಸೆಯ ಬಗ್ಗೆ ಕಲಹ ಬರದಂತೆ ಎಚ್ಚರ ವಹಿಸಬೇಕು ಕಾಲಿನ ಭಾಗದ ಬಗ್ಗೆ ಎಚ್ಚರವಿರಬೇಕು. ವಿವಾಹ ಅಪೇಕ್ಷಿತರು ಮೇ 14 ರ ನಂತರ ಮುಂದುವರಿಯ ಬಹುದು. ಸಂಗಾತಿಯೊಂದಿಗೆ ವಿರಸ ಬರುವ ಸಾಧ್ಯತೆ ಇರುತ್ತದೆ. ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಎಚ್ಚರವಿರಬೇಕು. ಯಾವುದೇ ಒಂದು ಕ್ಷಣದ ತಪ್ಪು ನಿರ್ಧಾರ ತೆಗೆದು ಕೊಳ್ಳಲು ಹೋಗಬೇಡಿರಿ. ಕೋರ್ಟ್ ಕಚೇರಿಗೆ ಅಲೆದಾಡಬೇಕಾದ ಸಾಧ್ಯತೆ ಇರುತ್ತದೆ.
ಕನ್ಯಾ : ನಿಮ್ಮ ರಾಶಿಯಿಂದ ಸಪ್ತಮದಲ್ಲಿ ನಾಲ್ಕು ಗ್ರಹರು ಒಟ್ಟಾಗುತ್ತಿದ್ದಾರೆ. “ಸಂಸಾರ ” ಈ ಶಬ್ದದಲ್ಲಿ ಸೊನ್ನೆ ತೆಗೆದರೆ ಸಸಾರವಾಗುತ್ತದೆ. ಸಂಸಾರದಲ್ಲಿ ನೆಮ್ಮದಿಯ ಕೊರತೆ ಬರದಂತೆ ಎಚ್ಚರವಹಿಸಬೇಕಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಅಲ್ಪ ಸುಖಕ್ಕಾಗಿ ಸ್ವಾಭಿಮಾನವನ್ನು ಮಾರಿಕೊಳ್ಳಬೇಡಿರಿ. ವಿವಾಹ ಅಪೇಕ್ಷಿತರಿಗೆ ಅವಕಾಶಗಳು ಬರಲಿವೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಗುರುವಿನ ಅನುಗ್ರಹ ಪ್ರಸ್ತುತ ಇರುವುದರಿಂದ ನೀವು ಮಾಡುವ ಯಾವುದೇ ವ್ಯವಹಾರಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಗುರು ಇರುವುದು ಶುಕ್ರನ ಮನೆಯಲ್ಲಿ, ಶುಕ್ರ ಇರುವುದು ಸಪ್ತಮದಲ್ಲಿ.ಸುಖ ನೆಮ್ಮದಿ, ಸಂತೋಷ ಎಲ್ಲವೂ ನೀವಾಡುವ ಮಾತಿನಲ್ಲಿದೆ
ತುಲಾ : ನಿಮಗೆ ಗುರು ಅಷ್ಟಮದಲ್ಲಿ ಇರುವುದರಿಂದ ಶಿವ ಸಹಸ್ರನಾಮ ಪ್ರತಿನಿತ್ಯ axd ನ ಅಗತ್ಯವಿದೆ.6 ನೇ ಮನೆಯಲ್ಲಿ 4 ಗ್ರಹರು ಜೊತೆಯಾಗುವ ಕಾಲ ಕಲಾ Tarch 2025 7:12 p ಮಂದಿಯೂ ಇರುತ್ತಾರೆ. ಸಂಗಾತಿಯ ಮಧ್ಯೆ ಅಹಂಕಾರ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಯೋಗ ಕೂಡಿಬಂದಿದೆ ಹಾಗೆಯೇ ನಿಮ್ಮಲ್ಲಿ
ಬಿಟ್ಟು ಅನ್ನೋನ್ಯತೆಯನ್ನು ಬೆಳೆಸಿಕೊಳ್ಳಿರಿ. ಗಣಪತಿಯ ಅಥರ್ವಶೀರ್ಷ ಪಾರಾಯಣ ಅಗತ್ಯವಿದೆ. ಸಹೋದರ ವರ್ಗದವರ ಜೊತೆಗೆ ಪ್ರೀತಿ ವಿಶ್ವಾಸ ಇರುವಂತೆ ನೋಡಿಕೊಳ್ಳಿರಿ. ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯದ ಬಗ್ಗೆ ಎಚ್ಚರವಾಗಿರಬೇಕು.ಉನ್ನತ ಶಿಕ್ಷಣಕ್ಕೆ ಅವಕಾಶವಿದೆ. ನಿಮ್ಮ ಹೊಸ ಮನೆ ಕಟ್ಟುವ ಕನಸು ಕೈಗೂಡುವ ಕಾಲ ಸನ್ನಿಹಿತವಾಗುತ್ತಿದೆ.
ವೃಶ್ಚಿಕ : ನಿಮಗೆ ನಿಮ್ಮ ರಾಶಿಯಿಂದ 4, 5 ಮನೆಯಲ್ಲಿ ಇರುವ ಶನಿ ರವಿ ಶುಕ್ರ ರಾಹು, ಬುಧ,8 ರಲ್ಲಿ ಇರುವ ಕುಜ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯನ್ನು ಕೊಡುವವರು ಆಗಿರುವುದರಿಂದ ವ್ಯರ್ಥ ಅಪವಾದವನ್ನು ಕೇಳುತ್ತಾ ತಮ್ಮ ಎಲ್ಲಾ ಆಯುಧಗಳನ್ನು ಕೆಳಗಿಟ್ಟು ಅಸಹಾಯಕ ಹಂತಕ್ಕೆ ಬರಬೇಕಾದ ಪರಿಸ್ಥಿತಿ ನಿಮ್ಮದಾಗಿದೆ. ಸುದರ್ಶನ ಮಾಲಾ ಮಂತ್ರ,ಸುದರ್ಶನ ಜ್ವಾಲಾ ಮಂತ್ರ ನಿತ್ಯವೂ ಹೇಳಬೇಕು. ಮನ್ಯು ಸೂಕ್ತ ಮಂತ್ರದ ಜೊತೆಗೆ ತರ್ಪಣ ,ನಮಸ್ಕಾರ ಹೇಳಬೇಕು. ಅಭಿಮನ್ಯು, ಚಕ್ರವ್ಯೂಹದಲ್ಲಿ ನಿಂತಾಗ ಎಲ್ಲರೂ ಗಹ ಗಹಿಸಿ ನಗುವ ಪರಿಸ್ಥಿತಿ ಇದ್ದಾಗ ಈ ಮಂತ್ರಗಳೇ ಸರಿಯಾದ ಪರಿಹಾರವಾಗಿದೆ. ಶತ್ರು ನಿಗ್ರಹ ಕೆಲಸ ಆಗಬೇಕಿದೆ. ಆಧ್ಯಾತ್ಮದ ಕಡೆಗೆ ಅವಶ್ಯವಾಗಿ ಮನಸ್ಸು ಕೊಡಿರಿ.
ಧನು : ನೀವು ದಶರಥ ಕೃತ ಶನಿ ಸ್ತೋತ್ರವನ್ನು ನಿತ್ಯವೂ ಓದಲೇ ಬೇಕಾಗಿದೆ. ಮೀನರಾಶಿಯಲ್ಲಿ ಶುಕ್ರ,ರಾಹು,ಬುಧ, ಪ್ರಸ್ತುತ ಇದ್ದು 14 ರಂದು ರವಿ ಸೇರಿಕೊಳ್ಳುತ್ತಾನೆ. 29 ರಂದು ಶನಿಯೂ ಸೇರಿ 6 ಗ್ರಹರ ವಿಶೇಷ ಯೋಗ ಆರಂಭವಾಗಲಿದೆ. ನವಗ್ರಹ ಜಪ ಮಾಡಿರಿ .ರಾಜಕೀಯ ವ್ಯಕ್ತಿಗಳು, ವಕೀಲರು ವ್ಯಾಪಾರಿಗಳು ವಿಷ್ಣು ಸಹಸ್ರನಾಮ ಜಪವನ್ನು ಮಾಡಿರಿ.ಒಂದು ತಿಂಗಳ ಕಾಲ ಮಧು -ಮಾಂಸ ಸೇವನೆಯನ್ನು ಬಿಟ್ಟು ಕಾಯಾ ವಾಚಾ ಮನಸಾ ಕುಲ ದೇವರ ಆರಾಧನೆ ಮಾಡಿಕೊಂಡು ಬನ್ನಿರಿ. 28 ರಂದು 5 ಗ್ರಹರಿದ್ದರೆ 29 ರಂದು 6 ಗ್ರಹರಿರುತ್ತಾರೆ. ತಾಳ್ಮೆ ಕಳೆದುಕೊಳ್ಳದಿರುವುದು ಅತೀ ಅವಶ್ಯವಾಗಿದೆ. ನಿಮ್ಮ ಮತ್ತು ನಿಮ್ಮ ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ.
ಮಕರ : ಸಾಡೇ ಸಾತ್ ಶನಿಯ ಕಾಟದಿಂದ ಬಿಡುಗಡೆ ಹೊಂದುತ್ತಿರುವ ಸಂತೋಷದ ಸಮಯ 6 ಗ್ರಹರು ಮೀನ ರಾಶಿಯಲ್ಲಿ ಜೊತೆಯಾಗಿ ನಿಮಗೊಂದು ಉನ್ನತ ಪದವಿಯನ್ನು ಕರುಣಿಸಲಿದ್ದಾರೆ. ಭೂಮಿಯನ್ನು ಕೊಳ್ಳುವ ಕಾಲವೂ ಹೌದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕಲಹವಿದ್ದರೂ ಪರಿಹಾರ ಆಗುವ ಕಾಲ. ಗುರುವಿನ ಪೂರ್ಣ ಅನುಗ್ರಹ ಪ್ರಸ್ತುತ ನಿಮಗಿದೆ. ಶುಭ ಸಮಾರಂಭಗಳು ನಡೆಯಲಿದ್ದು ಬಂಧು ಬಾಂಧವರು ಒಟ್ಟು ಸೇರುವ ಕಾಲವಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು ಸಾಲದಿಂದ ಬಿಡುಗಡೆಯಾಗಲಿದ್ದೀರಿ. ಅನೇಕ ಉತ್ತಮ ಸೌಲಭ್ಯಗಳು ನಿಮ್ಮೆದುರು ಬರಲಿದ್ದು ಉಪಯೋಗಿಸಿಕೊಳ್ಳುವ ಬುದ್ಧಿವಂತಿಕೆ ನಿಮ್ಮದಾಗಬೇಕಿದೆ. ನಿಮ್ಮ ಮಾತು ಮೃಧುವಾಗಿರಲಿ. ಶತ್ರುಗಳನ್ನೂ ಮಿತ್ರರನ್ನಾಗಿಸಿ ಕೊಳ್ಳುವ ಬುದ್ಧಿವಂತಿಕೆ ಬೆಳೆಸಿಕೊಳ್ಳಿರಿ.
ಕುಂಭ : ಮೀನ ರಾಶಿಯಲ್ಲಿ ಒಮ್ಮೆಲೇ ಸಂಚಾರ ಮಾಡಲಿರುವ 5 ಮತ್ತು 6 ಗ್ರಹರು ಜನ್ಮ ರಾಶಿಯಲ್ಲಿ ಇರುವ ರವಿ ಶನಿ ಆರ್ಥಿಕ ಪರಿಸ್ಥಿತಿಯನ್ನು, ನಿಮ್ಮ ಮಾತಿನ ಶೈಲಿಯನ್ನು,ಹಣ ಕಾಸಿನ ಸ್ಥಿತಿ ಗತಿಯನ್ನು ಬದಲಾವಣೆ ಮಾಡಲಿವೆ. ಹೊಸ ಯೋಜನೆಗಳನ್ನು ಕೈಗೊಳ್ಳುವ ಮೊದಲು ಎರಡೆರಡು ಬಾರಿ ಯೋಚಿಸಿ. ರಾಜಕೀಯ ಪ್ರಸ್ತುತ ನಿಮಗೆ ಹಿಡಿಸುವುದಿಲ್ಲ. ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ಯೋಚಿಸಿ. ದೈಹಿಕ ದೌರ್ಬಲ್ಯ, ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು. ವಿದ್ಯಾರ್ಥಿಗಳು ಅಭ್ಯಾಸ ಮಾಡುವ ವಿಷಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಪ್ರತಿಯೊಬ್ಬರು ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ನೀವು ಗಮನಿಸಿಕೊಳ್ಳಬಹುದು.
ಮೀನ : ಜನ್ಮ ರಾಶಿಯಲ್ಲಿ ಒಮ್ಮೆಲೇ 6 ಗ್ರಹರ ಸಂಯೋಗ ಹೊಸ ಸಂಚಲನವನ್ನು ಮೂಡಿಸುವ ಕಾಲವಾಗಿದೆ. ನವಗ್ರಹರ ಜಪವನ್ನು ಆರಂಭಿಸಿರಿ. ಒಂದು ಕಡೆ ಲಾಭದ ಸುರಿಮಳೆಯಾದರೆ ಇನ್ನೊಂದು ಕಡೆ ವ್ಯಯವಾಗುವುದನ್ನು ನೀವು ಕಾಣ ಬಹುದು. ಪ್ರಯಾಣ ಮಾಡುವಾಗ ಎಚ್ಚರವಿರಲಿ. ಕೌಟುಂಬಿಕ ಕಲಹ,ಮಾಡ ಬೇಕಾದ ಕೆಲಸದಲ್ಲಿ ಉದಾಸೀನತೆ ಕುಜ ತನ್ನ ಮನೆಯನ್ನು ಬದಲಾಯಿಸಿದಾಗ ಕೆಲವೊಂದು ಬದಲಾವಣೆಗಳನ್ನು ನೀವು ಕಾಣಬಹುದು. ಮಾಡುತ್ತಿರುವ ಕೆಲವೊಂದು ಕೆಲಸಗಳು ಸ್ಥಗಿತ ಗೊಳ್ಳುವ ಸಾಧ್ಯತೆ ಇದೆ. ಜೀವನದಲ್ಲಿ ಏರುಪೇರು ಬರುವ ಸಾಧ್ಯತೆ.ಮಾನಸಿಕ ವೈರಾಗ್ಯ ಬರುವ ಸಾಧ್ಯತೆ. ಯೋಗ ಪ್ರಾಣಾಯಾಮ ಧ್ಯಾನ ಮಾಡುವಂತೆ ಸೂಚಿಸಲಾಗುತ್ತಿದೆ. ಬಿಪಿ ಬರುವ ಸಾಧ್ಯತೆ ಇರುತ್ತದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.





































