ವಾರ ಭವಿಷ್ಯ ದಿನಾಂಕ 09.02.2025 ರಿಂದ 15.02.2025 ರ ವರೆಗೆ
ವಿಶೇಷ ದಿನಗಳು : 11.02.2025……ಕುಂಭ ರಾಶಿಗೆ ಬುಧನ ಪ್ರವೇಶ
12.02.2025…..ಕುಂಭ ಸಂಕ್ರಮಣ ; ಪೂರ್ಣಿಮಾ
ಮೇಷ :ಎಲ್ಲಾ ಮೂಲಗಳಿಂದಲೂ ಉತ್ತಮ ಧನ ಆದಾಯವಾಗಲಿದೆ. ನೀವು ಕೈ ಗೊಳ್ಳುವ ಯೋಜನೆಗಳೆಲ್ಲವೂ ಯಶಸ್ವಿಯಾಗಲಿವೆ. ವಿದ್ಯಾರ್ಥಿಗಳು ಯಶಸ್ವಿಯಾಗುವರು. ಶತ್ರುಗಳು ತಾವಾಗಿಯೇ ಮಿತ್ರರಾಗುವ ಸಮಯ. ದಾಂಪತ್ಯದಲ್ಲಿ ಬಹಳ ಹೊಂದಾಣಿಕೆಯ ಅಗತ್ಯವಿದೆ. ಶುಕ್ರ ರಾಹು ಗುರುವಿನ ಮನೆಯಲ್ಲಿದ್ದು ಬರುವ ಆದಾಯವೆಲ್ಲವೂ ಸಂಗಾತಿಯ ಸಹಾಯದಿಂದ ಇರುತ್ತದೆ. ಅದರಲ್ಲಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಬುಧನ ಕುಂಭ ರಾಶಿ ಪ್ರವೇಶ ನಿಮಗೆ ಹಲವಾರು ಅನುಕೂಲತೆಯನ್ನು ತರಲಿದೆ. ಮುಂದೆ ಬರುವ ಸಾಡೇ ಸಾತ್ ಶನಿಯ ತೊಂದರೆಗಳನ್ನು ಒಳ್ಳೆಯ ರೀತಿಯಲ್ಲಿ ಎದುರಿಸಲು ವಿಷ್ಣು ಸಹಸ್ರನಾಮ ಪಾರಾಯಣವನ್ನು ಈಗದಿಂದಲೇ ಆರಂಭಿಸಿರಿ.
ವೃಷಭ : ನಿಮ್ಮ ವ್ಯವಹಾರ, ಉದ್ಯೋಗದಲ್ಲಿ ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿರಿ. ವಿವಾಹದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ಧಿ ಸಿಗಲಿದೆ. ಕೆಲವೊಂದು ಪ್ರತಿಕೂಲ ಪರಿಸ್ಥಿತಿಗಳು ಜೀವನದಲ್ಲಿ ಉತ್ತಮ ಪಾಠವನ್ನು ಕಲಿಸಲಿವೆ, ಉದ್ಯೋಗದಲ್ಲಿ ಒತ್ತಡ ನಿರ್ಮಾಣವಾಗಲಿದೆ. ಕುಟುಂಬದಲ್ಲಿ ನಡೆಯುವ ಶುಭ ಸಮಾರಂಭಗಳು ಮನಸ್ಸಿಗೆ ನೆಮ್ಮದಿಯನ್ನು ತರಲಿದೆ, ಮನೆಯಂಗಳದಲ್ಲಿ ಹೊಸ ಕಾರೊಂದು ನಿಲ್ಲಲಿದೆ. ಹಣ ಬರುವ ಮೊದಲೇ ಅದಕ್ಕೆ ಖರ್ಚಿನ ದಾರಿಯೊಂದು ಕಾಯುತ್ತಿರುತ್ತದೆ. ಉದ್ಯೋಗದಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಬಯಸುವಿರಿ. ಆರ್ಥಿಕ ಮಟ್ಟದಲ್ಲಿ ಬಹಳ ಸುಧಾರಣೆಯನ್ನು ಕಾಣುವಿರಿ .
ಮಿಥುನ : ಜನ್ಮ ರಾಶಿಯಲ್ಲಿ ಇರುವ ಕುಜನ ಕಾರಣದಿಂದ , ಗುರು ವ್ಯಯದಲ್ಲಿ ಇರುವ ಕಾರಣದಿಂದಾಗಿ ನಿಮ್ಮಲ್ಲಿ ಮನಸ್ಸಿಗೆ ,ದೇಹಕ್ಕೆ ನೋವು ಇರುತ್ತದೆ.ಆಗ ತಾಳ್ಮೆ ಅತೀ ಅಗತ್ಯವಾಗಿ ಬೇಕಾಗುತ್ತದೆ. ನೀವು ಮಾಡಬೇಕಾಗಿರುವ ಅನೇಕ ಕೆಲಸಗಳು ಸ್ಥಗಿತ ಗೊಳ್ಳಲಿವೆ. ಮಾಡ ಬೇಕಾಗಿರುವ ಪ್ರಯಾಣ ಸ್ಥಗಿತ ಗೊಳ್ಳಲಿದೆ. ಬೇಜವಾಬ್ದಾರಿಯಿಂದ ವರ್ತಿಸಿದರೆ ಧನ ನಷ್ಟವನ್ನು ಎದುರಿಸಬೇಕಾಗುತ್ತದೆ . ನಿಮ್ಮನ್ನು ಬಹಳ ಸಮಯದಿಂದ ಕಾಡುತ್ತಿರುವ ಅನಾರೋಗ್ಯಕ್ಕೆ ಮಾನಸಿಕ ಒತ್ತಡವೇ ಕಾರಣವಾಗಿರುತ್ತದೆ. ಜೀವನದಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಆಪ್ತರ ಸಲಹೆಗಳಿಗೂ ಮಹತ್ವವನ್ನು ಕೊಡುವುದು ಒಳ್ಳೆಯದು .
ಕರ್ಕಾಟಕ : ಅಷ್ಟಮದಲ್ಲಿ ಶನಿಯ ಜೊತೆಗೆ ಬುಧನು ಸೇರಿಕೊಳ್ಳುತ್ತಿದ್ದಾನೆ. ಕುಟುಂಬದ ಜವಾಬ್ದಾರಿಯನ್ನು ಅರಿತುಕೊಂಡು ಸರಿಯಾಗಿ ನಿರ್ವಹಿಸಿರಿ.ಕುಟುಂಬದ ಖರ್ಚು ವೆಚ್ಚಗಳು ಅಧಿಕಗೊಳ್ಳಲಿವೆ. ನೆಮ್ಮದಿಯ ಕೊರತೆ ನಿಮ್ಮನ್ನು ಕಾಡಲಿದೆ.ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ನಿಮ್ಮ ವಯಕ್ತಿಕ ಅಭಿವೃದ್ಧಿಯ ಕಡೆಗೆ ನಿಮ್ಮ ಗಮನ ಅಗತ್ಯವಿದೆ. ಶನಿ ಮತ್ತು ಬುಧ ಮಿತ್ರರಾಗಿ ನಿಮಗೆ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ತೋರಿಸಲಿದ್ದಾರೆ. ಕುಟುಂಬದ ಹಿರಿಯರೊಬ್ಬರ ಮಾನಸಿಕ ವ್ಯಥೆ ಇರುತ್ತದೆ .ಇತರರ ನೋವಿಗೆ ಸ್ಪಂದಿಸುವ ಸ್ವಭಾವವನ್ನು ಬೆಳಿಸಿಕೊಳ್ಳಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗ ಇರುತ್ತದೆ. ಸಿಕ್ಕಿದ ಉದ್ಯೋಗಕ್ಕೆ ಸೇರುವ ಮನಸ್ಸು ನಿಮ್ಮದಾಗಲಿ.
ಸಿಂಹ : ಶನಿ ಅಷ್ಟಮಕ್ಕೆ ಇನ್ನೂ ಕೆಲವೇ ದಿನದಲ್ಲಿ ಬರುವುದರಿಂದ ವಿಷ್ಣು ಸಹಸ್ರನಾಮ ಪಾರಾಯಣ ಆರಂಭಿಸಿರಿ. ಶನಿ ಗುರುವಿನ ಮನೆಯಾದ ಮೀನ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಅನೇಕ ದಿನಗಳಿಂದ ಬಯಸಿದ ಉದ್ದೇಶವೊಂದು ಈಡೇರಲಿದೆ. ಗುರಿ ಸಾಧಿಸುವ ನಿಮ್ಮ ಪ್ರಯತ್ನಕ್ಕೆ ಕೆಲವರಿಂದ ಅಡ್ಡಿ ಎದುರಾಗಬಹುದು. ವಿಚಲಿತರಾಗಬೇಡಿರಿ. ನಿಮ್ಮ ನಿಷ್ಠುರವಾದ ,ಹಠ ಸ್ವಭಾವ ನಿಮ್ಮ ಹಿಡಿತದಲ್ಲಿ ಇರಲಿ. ಅನಾವಶ್ಯಕ ಖರ್ಚುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಿರಿ. ವ್ಯವಹಾರಗಳಲ್ಲಿ ಲಾಭಗಳಿಸುವಿರಿ. ಖರ್ಚು ಮಾಡುವಾಗ ಹಿಡಿತವಿರಲಿ. ಸಹೋದರನ ಆರೋಗ್ಯ ಸಮಸ್ಯೆ ನಿಮ್ಮನ್ನು ಚಿಂತೆಗೀಡು ಮಾಡಲಿದೆ.
ಕನ್ಯಾ : ಕುಂಭ ರಾಶಿಗೆ ಬುಧನ ಪ್ರವೇಶ ನಿಮಗೆ ಹಲವು ರೀತಿಯಲ್ಲಿ ಅನುಕೂಲವನ್ನು ಮಾಡಲಿದೆ. ಹಣದ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಮಕ್ಕಳಿಂದ ಸಂತೋಷವನ್ನು ಹೊಂದುವಿರಿ. ಬೇರೆಯವರಿಂದ ಮಾಡಲಾಗದ ಅನೇಕ ಕೆಲಸಗಳು ನಿಮ್ಮಿಂದ ಸಾಧನೆ ಆಗಲಿದೆ. ಭೂಮಿಯ ವ್ಯವಹಾರ ನಿಮ್ಮಿಂದ ಉತ್ತಮ ರೀತಿಯಲ್ಲಿ ನಡೆಯಲಿದೆ. ಅತಿಯಾದ ನಂಬಿಕೆ ಒಳ್ಳೆಯದಲ್ಲ.ಹೊಸ ವ್ಯವಹಾರಗಳಿಗೆ ಯೋಚಿಸಿ ಕೈಹಾಕಿರಿ. ಕೇತು ಜನ್ಮ ರಾಶಿಯಲ್ಲಿ ಇದ್ದು ಸಪ್ತಮದಲ್ಲಿ ರಾಹು ಇದ್ದಾನೆ ಇನ್ನು ಕೆಲವೇ ದಿನಗಳಲ್ಲಿ ಶನಿಯ ಪ್ರವೇಶ ಆಗಲಿದೆ .ನಿಮ್ಮ ಸಂಗಾತಿಯ ಮೇಲೆ ವಿಶ್ವಾಸ ಇರಲಿ. ಅನಾವಶ್ಯಕ ಕಿರಿಕಿರಿ ಮಾಡಬೇಡಿರಿ. ಉದ್ಯೋಗ ಕ್ಷೇತ್ರದಲ್ಲಿ ಮನ್ನಣೆ, ಗೌರವ, ಜವಾಬ್ದಾರಿ ಹೆಚ್ಚಳಿದೆ.
ತುಲಾ : ಸಮಯ ಉತ್ತಮವಿಲ್ಲ. ಗುರು ಬಲವಿಲ್ಲ. ಪಂಚಮದ ಶನಿ ಬುಧನಿಗೆ ,ಅಷ್ಟಮದ ಗುರುವಿಗೆ, ವಿಷ್ಣು ಸಹಸ್ರನಾಮವೊಂದೇ ಬಲವಯ್ಯಾ !ದೇಹಾಲಸ್ಯ ನಿಮ್ಮನ್ನು ಕಾಡಲಿದೆ. ಸಹೋದರ /ಸಹೋದರಿ ವರ್ಗದವರ ಜೊತೆಗೆ ಹೊಂದಾಣಿಕೆಯೊಂದಿಗೆ ಮುನ್ನೆಡಿಯಿರಿ. ಕಲಹದಿಂದ ದೂರವಿರುವುದು ಒಳ್ಳೆಯದು. ಮನೆಯಲ್ಲಿ ಪತ್ನಿ ಮಕ್ಕಳ ಪಕ್ಷ ಒಂದಾದರೆ, ನಿಮ್ಮ ಒಬ್ಬರ ಪಕ್ಷ ಬೇರೆಯದೇ ಆಗಲಿದೆ. ಪತ್ನಿಯ ಆರೋಗ್ಯದ ಕಡೆಗೆ ನಿಮ್ಮ ಗಮನ ಅಗತ್ಯವಿದೆ. ಪ್ರೇಮಿಗಳಿಗೆ ವಿವಾಹವಾಗಲು ಮೇ 14 ರ ನಂತರ ಉತ್ತಮ ದಿನಗಳು ಬರಲಿವೆ .ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ವೃಶ್ಚಿಕ : ಅಷ್ಟಮದಲ್ಲಿ 6 ನೇ ಮನೆಯ ಕುಜನಿದ್ದಾನೆ. ಗುರು ಸಪ್ತಮದಲ್ಲಿ ಇದ್ದರೂ ಅದು ತನ್ನ ವೈರಿಯಾದ ಶುಕ್ರನ ಮನೆ. ಮಕ್ಕಳೊಂದಿಗೆ ಬೇಸರ ಮಾಡಿಕೊಳ್ಳುವ ಕಾಲವಿದು. ದಿನಾಂಕ 12 ರಂದು ಕುಂಭ ಸಂಕ್ರಮಣ .ರವಿ ಕುಂಭ ರಾಶಿಗೆ ಶನಿಯ ಜೊತೆಗೆ ಸೇರುವುದು. ರಾಜಕೀಯದಲ್ಲಿ ಇರುವವರಿಗೆ ಎಚ್ಚರಿಕೆಯ ಕರೆಗಂಟೆ “ರಾಜ್ಯದಲ್ಲಿ ರಾಷ್ಟ್ರದಲ್ಲಿ ಕೂಡ ಒಂದು ತಿಂಗಳು ಗಲಾಟೆಯ ಕಾಲ ಎನ್ನಬಹುದೇನೋ ! ಆರೋಗ್ಯದ ಕಡೆಗೆ ಗಮನ ವಿರಲಿ. ಅಮ್ಮನ ಅನಾರೋಗ್ಯವನ್ನು ನೋಡುವ ಸಮಯ. ನಿಮ್ಮ ಕಾಲು ಗಂಟು ನೋವು ಅಥವಾ ಬೀಳುವ ,ತಾಗಿಸಿಕೊಳ್ಳುವ ಕಾಲವಾಗಿದೆ. ಆದಿತ್ಯ ಹೃದಯ ಮಂತ್ರ, ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ.
ಧನು : ರವಿ ,ಬುಧ ಶನಿಯ ಮನೆಗೆ ಹೋಗಿ ಶನಿಯೊಂದಿಗೆ ಇರುತ್ತಾರೆ. ಅನೇಕ ರೀತಿಯಲ್ಲಿ ಧನ ಲಾಭ ಉಂಟಾಗಲಿದೆ. ಮಿಶ್ರ ಫಲಗಳು ದೊರಕುವ ಸಮಯ. ನೋವು-ನಿರಾಳ ,ಸುಖ-ದು:ಖ ಹೊಸಬರ ಭೇಟಿಯಿಂದ ಭವಿಷ್ಯದಲ್ಲಿ ಅನುಕೂಲ. ಹೊಸ ವಸ್ತುಗಳ ಖರೀದಿ. ವೇಳೆ ಮೋಸ ಸಂಭವ. ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ,ವೈದ್ಯರನ್ನು ಭೇಟಿ ಮಾಡಿರಿ. ಹೆಚ್ಚುತ್ತಿರುವ ಖರ್ಚುಗಳಿಂದ ಆಯವ್ಯಯವನ್ನು ಮತ್ತೊಮ್ಮೆ ಪರಿಶೀಲಿಸಬೇಕಾದೀತು. ಕೆಲವೊಂದು ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶವಿದೆ. ಸಾಲದ ಹಣ ಕೈ ಸೇರಿದರೂ ಆಕಸ್ಮಿಕ ಧನ ನಷ್ಟ. ಜಗಳಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು. ಕೆಲವು ವಿಷಯಗಳಲ್ಲಿ ತತ್ ಕ್ಷಣದ ನಿರ್ಧಾರ ತಾಳಲು ಮನಸ್ಸನ್ನು ಸಿದ್ಧ ಪಡಿಸಿ.
ಮಕರ : ದ್ವಿತೀಯಾದಲ್ಲಿ ಶನಿ ಜೊತೆಗೆ ರವಿಯ ಮತ್ತು ಬುಧನ ಸೇರ್ಪಡೆ ಆಗುತ್ತಿದೆ. ಸಾಡೇ ಸಾತ್ ಶನಿಯ ಪ್ರಭಾವ ರವಿಯ ಕಾರಣದಿಂದ ಉಲ್ಭಣವಾಗಲಿದೆ. ಜೊತೆಗೆ ಬುಧನೂ ಇರುತ್ತಾನೆ. ಖರ್ಚು-ವೆಚ್ಚ ಸಮಾನಾಂತರವಾಗಿ ನಡೆಯಲಿದೆ. ಆದಿತ್ಯ ಹೃದಯ ಮಂತ್ರ ಪಾರಾಯಣ ಅತೀ ಅಗತ್ಯವಿದೆ. ವಿನಾಕಾರಣ ಖರ್ಚುಗಳು ಪ್ರತಿಸ್ಪರ್ಧಿಗಳು –ಶತೃಗಳಿಂದ ಕಿರಿಕಿರಿ. ಕುಟುಂಬದಲ್ಲಿ ಹಿರಿಯರ ಅನಾರೋಗ್ಯ- ಆಸ್ಪತ್ರೆ ದರ್ಶನ, ಮಧ್ಯಸ್ಥಿಕೆಯಿಂದ ಸರಕಾರಿ ಕೆಲಸಗಳಲ್ಲಿ ಜಯ. ಆಸ್ತಿ ವಿವಾದಗಳು ನಿಮ್ಮ ಪರವಾಗಲಿದೆ. ಮಾತನಾಡುವಾಗ ಸಿಟ್ಟು ಬರಬಾರದು. ಅನ್ಯರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ.
ಕುಂಭ : ಜನ್ಮ ರಾಶಿಯಲ್ಲಿ ರವಿ ಶನಿ ಬುಧ ಇರುವುದರಿಂದ ವೃತ್ತಿ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಒದಗಿ ಬರಲಿದೆ. ಯಾರನ್ನೂ ಮನ ನೋಯಿಸದೆ ಶಾಂತ ರೀತಿಯಲ್ಲಿ ಶಾಂತ ರೀತಿಯಲ್ಲಿ ವರ್ತಿಸಿರಿ. ಕಾಲಮಿತಿಯಲ್ಲಿ ಕೆಲ್ಕಸವನ್ನು ಪೂರೈಸಬೇಕಾದ ಒತ್ತಡದಲ್ಲಿ ಇರುತ್ತೀರಿ. ವದಂತಿ ಹರಡುವ ಜನರಿಂದ ದೂರವಿರಿ. ವಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸಲು ಆಢ್ಯತೆ ಕೊಡುವುದು ಒಳ್ಳೆಯದು. ಸಂಗಾತಿಯೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಿರಿ. ಆರೋಗ್ಯ ಸಮಸ್ಯೆ ಕಾಡಬಹುದು. ಸಾಮಾಜಿಕವಾಗಿ ಪ್ರಾಮುಖ್ಯತೆ –ಅಧಿಕಾರ ಗಳಿಸುವಿರಿ. ಪ್ರಮುಖ ವಿಷಯಗಳನ್ನು ಮುಂದೂಡಬೇಡಿರಿ. ಮದ್ಯಪಾನ ಮಾಡುವವರಾಗಿದ್ದರೆ ನಿಲ್ಲಿಸುವ ಅಗತ್ಯವಿದೆ.
ಮೀನ : ವ್ಯಯದಲ್ಲಿ ರವಿ,ಬುಧ ,ಶನಿ ವ್ಯಯದಲ್ಲಿ ಇದ್ದಾರೆ .ಮನೆಯ ಬದಲಾವಣೆ ,ಸಂಗಾತಿಯ ಆರೋಗ್ಯ ಚಿಂತನೆ ಮಾಡಬೇಕಾದ ಅಗತ್ಯವಿದೆ. ಪತಿ-ಪತ್ನಿಯ ನಡುವೆ ವೈಮನಸ್ಸು ಮೂಡುವ ಸಾಧ್ಯತೆ.. ಮನೆ ಬಿಟ್ಟು ಹೋಗುವ ಸಾಧ್ಯತೆ ಇದೆ ಕೆಲವರಿಗೆ ಆಸ್ತಿ ವಿವಾದಗಳು ತಲೆದೋರಲಿವೆ. ಕೆಲಸದ ಒತ್ತಡ ಹೆಚ್ಚಾಗಲಿದೆ. ಕುಟುಂಬಕ್ಕಾಗಿ ಸಮಯ ಕೊಡಲು ಅಶಕ್ತನಾಗಿರುವುದು ಬೇಸರ ತರಲಿದೆ. ಅನಿರೀಕ್ಷಿತ ವಿದ್ಯಮಾನಗಳು ಸಂಭವಿಸಿದರೂ ಅದು ನಿಮಗೆ ಪೂರಕವಾಗಿ ಇರುತ್ತದೆ .ನಿಮ್ಮ ಗುರಿಯತ್ತ ದಿಟ್ಟತನದಿಂದ ಸಾಗಿ ಧನಾಭಿವೃದ್ಧಿಯಾಗುತ್ತದೆ. ಬಹುದಿನಗಳಿಂದ ಕಾಡಿದ ಸಮಸ್ಯೆಯೊಂದು ಪರಿಹಾರವಾಗಿ ಜಯ ಸಿಗುತ್ತದೆ. ಧಾರ್ಮಿಕ ವಿಷಯದಲ್ಲಿ ಆಸಕ್ತಿ ಕಡಿಮೆ ಇರುತ್ತದೆ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆ ಮಾಡಿ ತಿಳಿಸಲಾಗುವುದು.





































